ಲೂಕನು 23 : 1 (KNV)
ಆಗ ಜನಸಮೂಹವೆಲ್ಲವೂ ಎದ್ದು ಆತನನ್ನು ಪಿಲಾತನ ಬಳಿಗೆ ತೆಗೆದು ಕೊಂಡು ಹೋದರು.
ಲೂಕನು 23 : 2 (KNV)
ಅವರು ಆತನ ಮೇಲೆ ದೂರು ಹೇಳಲಾರಂಭಿಸಿ--ಈ ಮನುಷ್ಯನು ಜನಾಂಗವನ್ನು ತಪ್ಪು ದಾರಿಗೆ ನಡಿಸುವನಾಗಿ ತಾನೇ ಕ್ರಿಸ್ತನೆಂಬ ಅರಸನಾಗಿದ್ದನೆಂದೂ ಹೇಳಿ ಕೈಸರನಿಗೆ ಕಂದಾಯ ಕೊಡದಂತೆ ಇವನು ಅಡ್ಡಿ ಮಾಡುತ್ತಿರುವದನ್ನು ನಾವು ನೋಡಿದ್ದೇವೆಅಂದರು.
ಲೂಕನು 23 : 3 (KNV)
ಆಗ ಪಿಲಾತನು ಆತನಿಗೆ--ನೀನು ಯೆಹೂದ್ಯರ ಅರಸನೋ ಎಂದು ಕೇಳಿದನು. ಅದಕ್ಕೆ ಆತನು ಪ್ರತ್ಯುತ್ತರವಾಗಿ ಅವನಿಗೆ--ನೀನೇ ಹೇಳುತ್ತೀ ಅಂದನು.
ಲೂಕನು 23 : 4 (KNV)
ತರುವಾಯ ಪಿಲಾತನು ಪ್ರಧಾ ನಯಾಜಕರಿಗೂ ಜನರಿಗೂ--ಈ ಮನುಷ್ಯನಲ್ಲಿ ನಾನು ಯಾವ ತಪ್ಪನ್ನೂ ಕಾಣಲಿಲ್ಲ ಅಂದನು.
ಲೂಕನು 23 : 5 (KNV)
ಅದಕ್ಕೆ ಅವರು ಹೆಚ್ಚು ಉಗ್ರತೆಯಿಂದ--ಈತನು ಗಲಿಲಾಯ ಮೊದಲುಗೊಂಡು ಈ ಸ್ಥಳದ ವರೆಗೂ ಎಲ್ಲಾ ಯೂದಾ ಯದಲ್ಲಿ ಬೋಧಿಸುತ್ತಾ ಜನರನ್ನು ರೇಗಿಸುತ್ತಾನೆ ಎಂದು ಹೇಳಿದರು.
ಲೂಕನು 23 : 6 (KNV)
ಪಿಲಾತನು ಗಲಿಲಾಯದ ವಿಷಯ ವಾಗಿ ಕೇಳಿ--ಆ ಮನುಷ್ಯನು ಗಲಿಲಾಯದವನೋ ಎಂದು ಅವನು ವಿಚಾರಿಸಿ
ಲೂಕನು 23 : 7 (KNV)
ಆತನು ಹೆರೋದನ ಅಧಿಕಾರದ ವಿಭಾಗಕ್ಕೆ ಸಂಬಂಧಪಟ್ಟವನೆಂದು ತಿಳಿದ ಕೂಡಲೆ ಆ ಸಮಯದಲ್ಲಿ ಯೆರೂಸಲೇಮಿನಲ್ಲಿಯೇ ಇದ್ದ ಹೆರೋದನ ಬಳಿಗೆ ಆತನನ್ನು ಕಳುಹಿಸಿದನು.
ಲೂಕನು 23 : 8 (KNV)
ಹೆರೋದನು ಯೇಸುವನ್ನು ನೋಡಿದಾಗ ಅತ್ಯಂತ ಸಂತೋಷಪಟ್ಟನು; ಯಾಕಂದರೆ ಅವನು ಆತನ ವಿಷಯವಾಗಿ ಅನೇಕ ಸಂಗತಿಗಳನ್ನು ಕೇಳಿದ್ದರಿಂದ ಆತನನ್ನು ನೋಡುವಂತೆ ಬಹಳ ಕಾಲದಿಂದ ಆಶೆಪಟ್ಟಿ ದ್ದನು. ಆತನಿಂದಾಗುವ ಅದ್ಭುತ ಕಾರ್ಯವನ್ನು ನೋಡ ಲು ನಿರೀಕ್ಷಿಸುತ್ತಿದ್ದನು.
ಲೂಕನು 23 : 9 (KNV)
ಆಗ ಅವನು ಆತನನ್ನು ಅನೇಕ ಮಾತುಗಳಿಂದ ಪ್ರಶ್ನಿಸಿದಾಗ್ಯೂ ಆತನು ಅವನಿಗೆ ಏನೂ ಉತ್ತರಕೊಡಲಿಲ್ಲ.
ಲೂಕನು 23 : 10 (KNV)
ಆಗ ಪ್ರಧಾನಯಾಜಕರೂ ಶಾಸ್ತ್ರಿಗಳೂ ನಿಂತುಕೊಂಡು ಉಗ್ರತೆಯಿಂದ ಆತನ ಮೇಲೆ ದೂರು ಹೇಳಿದರು.
ಲೂಕನು 23 : 11 (KNV)
ಹೆರೋದನು ತನ್ನ ಯುದ್ಧಭಟರೊಂದಿಗೆ ಆತನನ್ನು ತಿರಸ್ಕರಿಸಿ ಹಾಸ್ಯಮಾಡಿ ಆತನ ಮೇಲೆ ಶೋಭಾಯಮಾನವಾದ ವಸ್ತ್ರವನ್ನು ಹೊದಿಸಿ ಆತನನ್ನು ತಿರಿಗಿ ಪಿಲಾತನ ಬಳಿಗೆ ಕಳುಹಿಸಿ ದನು.
ಲೂಕನು 23 : 12 (KNV)
ಇದಲ್ಲದೆ ಪಿಲಾತನು ಹೆರೋದನು ಅದೇ ದಿನದಲ್ಲಿ ಒಬ್ಬರಿಗೊಬ್ಬರು ಸ್ನೇಹಿತರಾದರು; ಯಾಕಂ ದರೆ ಅವರಲ್ಲಿ ಮೊದಲು ಹಗೆತನವಿತ್ತು.
ಲೂಕನು 23 : 13 (KNV)
ಪಿಲಾತನು ಪ್ರಧಾನಯಾಜಕರನ್ನೂ ಅಧಿಕಾರಿಗಳ ನ್ನೂ ಜನರನ್ನೂ ಒಟ್ಟಾಗಿ ಕರೆಸಿ ಅವರಿಗೆ--
ಲೂಕನು 23 : 14 (KNV)
ಜನರು ತಿರಿಗಿ ಬೀಳುವಂತೆ ಮಾಡುತ್ತಾನೆಂದು ನೀವು ಈ ಮನುಷ್ಯನನ್ನು ನನ್ನ ಬಳಿಗೆ ತಂದಿದ್ದೀರಿ; ಇಗೋ, ನೀವು ಈತನ ಮೇಲೆ ತಂದಿರುವ ದೂರುಗಳನ್ನು ನಾನು ನಿಮ್ಮ ಮುಂದೆಯೇ ವಿಚಾರಿಸಿದಾಗ ಈತನಲ್ಲಿ ನನಗೆ ಯಾವ ತಪ್ಪೂ ಕಾಣಲಿಲ್ಲ.
ಲೂಕನು 23 : 15 (KNV)
ಮಾತ್ರವಲ್ಲದೆ ಹೆರೋದ ನಿಗೆ ಸಹ ಯಾವದೂ ಕಾಣಲಿಲ್ಲ; ಯಾಕಂದರೆ ನಾನು ನಿಮ್ಮನ್ನು ಅವನ ಬಳಿಗೆ ಕಳುಹಿಸಿದೆನು; ಇಗೋ, ಅವನೂ ಆತನಲ್ಲಿ ಮರಣಕ್ಕೆ ಯೋಗ್ಯವಾದದ್ದೇನೂ ಕಾಣಲಿಲ್ಲ.
ಲೂಕನು 23 : 16 (KNV)
ಹೀಗಿರುವದರಿಂದ ನಾನು ಆತನನ್ನು ಹೊಡಿಸಿ ಬಿಟ್ಟುಬಿಡುವೆನು ಅಂದನು.
ಲೂಕನು 23 : 17 (KNV)
ಯಾಕಂದರೆ ಅಧಿಪತಿಯು ಒಬ್ಬನನ್ನು ಹಬ್ಬದಲ್ಲಿ ಅವರಿಗಾಗಿ ಬಿಡಿಸು ವದು ಅವಶ್ಯವಾಗಿತ್ತು).
ಲೂಕನು 23 : 18 (KNV)
ಆಗ ಅವರೆಲ್ಲರೂ ಆ ಕ್ಷಣವೇ--ಈತನನ್ನು ತೆಗೆದುಹಾಕಿ ನಮಗೆ ಬರಬ್ಬ ನನ್ನು ಬಿಟ್ಟುಕೊಡು ಎಂದು ಕೂಗುತ್ತಾ ಹೇಳಿದರು.
ಲೂಕನು 23 : 19 (KNV)
(ಬರಬ್ಬನು ಪಟ್ಟಣದಲ್ಲಿ ನಡೆದ ಒಂದಾನೊಂದು ದಂಗೆಯ ಮತ್ತು ಕೊಲೆಯ ನಿಮಿತ್ತ ಸೆರೆಯಲ್ಲಿ ಹಾಕಲ್ಪ ಟ್ಟವನಾಗಿದ್ದನು).
ಲೂಕನು 23 : 20 (KNV)
ಆದದರಿಂದ ಪಿಲಾತನು ಯೇಸು ವನ್ನು ಬಿಡಿಸಬೇಕೆಂದು ಮನಸ್ಸುಳ್ಳವನಾಗಿ ಮತ್ತೊಮ್ಮೆ ಅವರೊಂದಿಗೆ ಮಾತನಾಡಿದನು.
ಲೂಕನು 23 : 21 (KNV)
ಆದರೆ ಅವರು--ಅವನನ್ನು ಶಿಲುಬೆಗೆ ಹಾಕಿಸು, ಅವನನ್ನು ಶಿಲುಬೆಗೆ ಹಾಕಿಸು ಎಂದು ಕೂಗುತ್ತಾ ಹೇಳಿದರು.
ಲೂಕನು 23 : 22 (KNV)
ಆದರೆ ಅವನು ಮೂರನೆಯ ಸಾರಿ ಅವ ರಿಗೆ--ಯಾಕೆ? ಈತನು ಕೆಟ್ಟದ್ದೇನು ಮಾಡಿದ್ದಾನೆ? ಈತನಲ್ಲಿ ಮರಣಕ್ಕೆ ಕಾರಣವಾದದ್ದೇನೂ ನನಗೆ ಕಾಣ ಲಿಲ್ಲ; ಆದದರಿಂದ ನಾನು ಈತನನ್ನು ಹೊಡಿಸಿ ಬಿಟ್ಟು ಬಿಡುತ್ತೇನೆ ಅಂದನು.
ಲೂಕನು 23 : 23 (KNV)
ಆದರೆ ಆತನು ಶಿಲುಬೆಗೆ ಹಾಕಲ್ಪಡಬೇಕೆಂದು ಅವರು ಮಹಾಧ್ವನಿಯಿಂದ ಒತ್ತಾಯ ಮಾಡಿದರು. ಹೀಗೆ ಅವರ ಕೂಗಾಟವೂ ಪ್ರಧಾನಯಾಜಕರ ಕೂಗಾಟವೂ ಗೆದ್ದಿತು.
ಲೂಕನು 23 : 24 (KNV)
ಆಗ ಪಿಲಾತನು ಅವರು ಕೇಳಿಕೊಂಡಂತೆ ಆಗಲಿ ಎಂದು ನಿರ್ಣಯಿಸಿದನು.
ಲೂಕನು 23 : 25 (KNV)
ಇದಲ್ಲದೆ ಅವರು ಇಷ್ಟಪಟ್ಟವ ನನ್ನು ಅಂದರೆ ದಂಗೆಯ ಮತ್ತು ಕೊಲೆಯ ನಿಮಿತ್ತ ಸೆರೆಮನೆಯೊಳಗೆ ಹಾಕಲ್ಪಟ್ಟವನನ್ನು ಅವರಿಗೆ ಬಿಟ್ಟು ಕೊಟ್ಟು ಯೇಸುವನ್ನು ಅವರ ಇಷ್ಟಕ್ಕೆ ಒಪ್ಪಿಸಿದನು.
ಲೂಕನು 23 : 26 (KNV)
ಅವರು ಆತನನ್ನು ತೆಗೆದುಕೊಂಡು ಹೋಗುತ್ತಿ ರುವಾಗ ಹೊಲದಿಂದ ಬರುತ್ತಿದ್ದ ಕುರೇನ್ಯದವನಾದ ಸೀಮೋನನೆಂಬವನನ್ನು ಹಿಡಿದು ಅವನ ಮೇಲೆ ಶಿಲು ಬೆಯನ್ನು ಇಟ್ಟು ಯೇಸುವಿನ ಹಿಂದೆ ಹೊತ್ತುಕೊಂಡು ಹೋಗುವಂತೆ ಮಾಡಿದರು.
ಲೂಕನು 23 : 27 (KNV)
ಆಗ ಜನರ ದೊಡ್ಡ ಗುಂಪೂ ಸ್ತ್ರೀಯರೂ ಆತನಿ ಗಾಗಿ ಶೋಕಿಸುತ್ತಾ ಗೋಳಾಡುತ್ತಾ ಆತನನ್ನು ಹಿಂಬಾ ಲಿಸಿದರು.
ಲೂಕನು 23 : 28 (KNV)
ಆದರೆ ಯೇಸು ಅವರ ಕಡೆಗೆ ತಿರುಗಿ ಕೊಂಡು--ಯೆರೂಸಲೇಮಿನ ಕುಮಾರ್ತೆಯರೇ, ನನ ಗಾಗಿ ಅಳಬೇಡಿರಿ; ಆದರೆ ನಿಮಗಾಗಿಯೂ ನಿಮ್ಮ ಮಕ್ಕಳಿಗಾಗಿಯೂ ಅಳಿರಿ.
ಲೂಕನು 23 : 29 (KNV)
ಯಾಕಂದರೆ--ಇಗೋ, ಬಂಜೆಯರೂ ಎಂದಿಗೂ ಗರ್ಭಿಣಿಯಾಗದವರೂ ಎಂದಿಗೂ ಮೊಲೆ ಕುಡಿಸದವರೂ ಧನ್ಯರು ಎಂದು ಹೇಳುವ ದಿವಸಗಳು ಬರುತ್ತವೆ.
ಲೂಕನು 23 : 30 (KNV)
ಆಗ ಅವರು ಬೆಟ್ಟಗಳಿಗೆ--ನಮ್ಮ ಮೇಲೆ ಬೀಳಿರಿ; ಗುಡ್ಡಗಳಿಗೆ-- ನಮ್ಮನ್ನು ಮುಚ್ಚಿಕೊಳ್ಳಿರಿ ಎಂದು ಹೇಳಲಾರಂಭಿಸು ವರು.
ಲೂಕನು 23 : 31 (KNV)
ಅವರು ಹಸಿರಾಗಿರುವ ಮರಕ್ಕೆ ಇವುಗಳನ್ನು ಮಾಡಿದರೆ ಒಣಗಿದ ಮರಕ್ಕೆ ಏನು ಮಾಡಿಯಾರು ಅಂದನು.
ಲೂಕನು 23 : 32 (KNV)
ಇದಲ್ಲದೆ ದುಷ್ಕರ್ಮಿಗಳಾದ ಬೇರೆ ಇಬ್ಬರನ್ನು ಆತನೊಂದಿಗೆ ಕೊಲ್ಲುವದಕ್ಕಾಗಿ ತೆಗೆದುಕೊಂಡು ಹೋದರು.
ಲೂಕನು 23 : 33 (KNV)
ಅವರು ಕಲ್ವಾರಿ ಎಂದು ಕರೆಯಲ್ಪಡುವ ಸ್ಥಳಕ್ಕೆ ಬಂದಾಗ ಅಲ್ಲಿ ಆತನನ್ನು ಮತ್ತು ಆ ದುಷ್ಕರ್ಮಿಗಳಲ್ಲಿ ಒಬ್ಬನನ್ನು ಬಲಗಡೆಯಲ್ಲಿ ಮತ್ತೊಬ್ಬನನ್ನು ಎಡಗಡೆ ಯಲ್ಲಿ ಶಿಲುಬೆಗೆ ಹಾಕಿದರು.
ಲೂಕನು 23 : 34 (KNV)
ಆಗ ಯೇಸು--ತಂದೆಯೇ, ಅವರನ್ನು ಕ್ಷಮಿಸು; ಯಾಕಂದರೆ ತಾವು ಏನು ಮಾಡುತ್ತೇವೆಂದು ಅವರು ಅರಿಯರು ಅಂದನು. ಅವರು ಆತನ ಉಡುಪನ್ನು ಪಾಲು ಮಾಡಿ ಚೀಟು ಹಾಕಿದರು.
ಲೂಕನು 23 : 35 (KNV)
ಜನರು ನೋಡುತ್ತಾ ನಿಂತುಕೊಂಡಿ ದ್ದರು. ಆಗ ಅವರೊಂದಿಗೆ ಅಧಿಕಾರಿಗಳು ಸಹ ಆತ ನಿಗೆ ಅಪಹಾಸ್ಯ ಮಾಡಿ--ಈತನು ಬೇರೆಯವರನ್ನು ರಕ್ಷಿಸಿದನು; ಇವನು ದೇವರು ಆರಿಸಿಕೊಂಡ ಕ್ರಿಸ್ತನಾಗಿ ದ್ದರೆ ತನ್ನನ್ನು ತಾನೇ ರಕ್ಷಿಸಿಕೊಳ್ಳಲಿ ಅಂದರು.
ಲೂಕನು 23 : 36 (KNV)
ಸೈನಿ ಕರು ಸಹ ಆತನ ಬಳಿಗೆ ಬಂದು ಆತನಿಗೆ ಹಾಸ್ಯ ಮಾಡಿ ಹುಳಿರಸವನ್ನು ಕೊಟ್ಟು
ಲೂಕನು 23 : 37 (KNV)
ಆತನಿಗೆ--ನೀನು ಯೆಹೂದ್ಯರ ಅರಸನಾಗಿದ್ದರೆ ನಿನ್ನನ್ನು ನೀನೇ ರಕ್ಷಿಸಿಕೋ ಅಂದರು.
ಲೂಕನು 23 : 38 (KNV)
ಇದಲ್ಲದೆ ಆತನ ಮೇಲ್ಗಡೆಯಲ್ಲಿ--ಈತನು ಯೆಹೂದ್ಯರ ಅರಸನು ಎಂಬ ಮೇಲ್ಬರಹವು ಸಹ ಗ್ರೀಕ್ ಲ್ಯಾಟಿನ್ ಮತ್ತು ಇಬ್ರಿಯ ಅಕ್ಷರಗಳಲ್ಲಿ ಬರೆಯಲ್ಪಟ್ಟಿತ್ತು.
ಲೂಕನು 23 : 39 (KNV)
ತೂಗುಹಾಕಲ್ಪಟ್ಟಿದ್ದ ದುಷ್ಕರ್ಮಿಗಳಲ್ಲಿ ಒಬ್ಬನು ಆತನನ್ನು ದೂಷಿಸಿ--ನೀನು ಕ್ರಿಸ್ತನಾಗಿದ್ದರೆ ನಿನ್ನನ್ನು ರಕ್ಷಿಸಿಕೊಂಡು ನಮ್ಮನ್ನೂ ರಕ್ಷಿಸು ಅಂದನು.
ಲೂಕನು 23 : 40 (KNV)
ಆದರೆ ಮತ್ತೊಬ್ಬನು ಪ್ರತ್ಯುತ್ತರವಾಗಿ ಅವನನ್ನು ಗದರಿಸಿ--ನೀನು ಇದೇ ದಂಡನೆಯಲ್ಲಿರುವದನ್ನು ನೋಡಿಯೂ ದೇವರಿಗೆ ಭಯಪಡುವದಿಲ್ಲವೋ?
ಲೂಕನು 23 : 41 (KNV)
ನಾವಂತೂ ನ್ಯಾಯವಾಗಿಯೇ ನಮ್ಮ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಹೊಂದುತ್ತಾ ಇದ್ದೇವೆ; ಈತನಾದರೋ ತಪ್ಪಾದದ್ದೇನೂ ಮಾಡಲಿಲ್ಲ ಅಂದನು.
ಲೂಕನು 23 : 42 (KNV)
ಇದಲ್ಲದೆ ಅವನು ಯೇಸು ವಿಗೆ--ಕರ್ತನೇ, ನೀನು ನಿನ್ನ ರಾಜ್ಯದಲ್ಲಿ ಬರುವಾಗ ನನ್ನನ್ನು ನೆನಪು ಮಾಡಿಕೋ ಅಂದನು.
ಲೂಕನು 23 : 43 (KNV)
ಆಗ ಯೇಸು ಅವನಿಗೆ--ಈ ದಿನವೇ ನೀನು ನನ್ನೊಂದಿಗೆ ಪರದೈಸಿನಲ್ಲಿರುವಿ ಎಂದು ನಾನು ನಿನಗೆ ನಿಜವಾಗಿ ಹೇಳುತ್ತೇನೆ ಅಂದನು.
ಲೂಕನು 23 : 44 (KNV)
ಆಗ ಸುಮಾರು ಆರನೇತಾಸಾಗಿತ್ತು; ಒಂಭತ್ತನೇ ತಾಸಿನವರೆಗೆ ಭೂಮಿಯ ಮೇಲೆಲ್ಲಾ ಕತ್ತಲೆ ಕವಿಯಿತು.
ಲೂಕನು 23 : 45 (KNV)
ಇದಲ್ಲದೆ ಸೂರ್ಯನು ಕತ್ತಲಾದನು; ದೇವಾಲಯದ ತೆರೆಯು ಮಧ್ಯದಲ್ಲಿ ಹರಿಯಿತು.
ಲೂಕನು 23 : 46 (KNV)
ಯೇಸು ಮಹಾಧ್ವನಿಯಿಂದ--ತಂದೆಯೇ, ನಾನು ನನ್ನ ಆತ್ಮವನ್ನು ನಿನ್ನ ಕೈಗಳಲ್ಲಿ ಒಪ್ಪಿಸುತ್ತೇನೆ ಎಂದು ಕೂಗಿ ಹೇಳಿದನು; ಹೀಗೆ ಹೇಳಿದ ಮೇಲೆ ಆತನು ಪ್ರಾಣಬಿಟ್ಟನು.
ಲೂಕನು 23 : 47 (KNV)
ಆಗ ಶತಾಧಿ ಪತಿಯು ನಡೆದದ್ದನ್ನು ನೋಡಿ--ನಿಶ್ಚಯವಾಗಿ ಈತನು ನೀತಿವಂತನಾಗಿದ್ದನು ಎಂದು ಹೇಳಿ ದೇವರನ್ನು ಮಹಿಮೆಪಡಿಸಿದನು.
ಲೂಕನು 23 : 48 (KNV)
ಆ ನೋಟಕ್ಕಾಗಿ ಬಂದಿದ್ದ ಎಲ್ಲಾ ಜನರು ನಡೆದ ಸಂಭವಗಳನ್ನು ನೋಡುತ್ತಾ ತಮ್ಮ ಎದೆಗಳನ್ನು ಬಡುಕೊಂಡು ಹಿಂದಿರುಗಿದರು.
ಲೂಕನು 23 : 49 (KNV)
ಆತನಿಗೆ ಪರಿಚಯವಿದ್ದವರೆಲ್ಲರೂ ಗಲಿಲಾಯ ದಿಂದ ಆತನನ್ನು ಹಿಂಬಾಲಿಸಿದ ಸ್ತ್ರೀಯರೂ ದೂರದಲ್ಲಿ ನಿಂತು ಇವುಗಳನ್ನು ನೋಡುತ್ತಿದ್ದರು.
ಲೂಕನು 23 : 50 (KNV)
ಆಗ ಇಗೋ, ಅಲ್ಲಿ ಯೋಸೇಫನೆಂಬ ಹೆಸರುಳ್ಳ ಒಬ್ಬ ಮನುಷ್ಯನಿದ್ದನು; ಅವನು ಆಲೋಚನಾ ಸಭೆಯವನೂ ಒಳ್ಳೆಯವನೂ ನೀತಿವಂತನೂ ಆಗಿ ದ್ದನು.
ಲೂಕನು 23 : 51 (KNV)
ಇವನು ಯೆಹೂದ್ಯರ ಪಟ್ಟಣವಾದ ಅರಿಮ ಥಾಯದವನೂ ದೇವರ ರಾಜ್ಯಕ್ಕಾಗಿ ಎದುರು ನೋಡು ವವನೂ ಆಗಿದ್ದನು. (ಅವನು ಅವರ ಆಲೋಚನೆಗೂ ಕೃತ್ಯಕ್ಕೂ ಒಪ್ಪಿಕೊಂಡಿರಲಿಲ್ಲ.)
ಲೂಕನು 23 : 52 (KNV)
ಇವನು ಪಿಲಾತನ ಬಳಿಗೆ ಹೋಗಿ ಯೇಸುವಿನ ದೇಹಕ್ಕಾಗಿ ಬೇಡಿ ಕೊಂಡನು.
ಲೂಕನು 23 : 53 (KNV)
ಇವನು ಅದನ್ನು ಕೆಳಗೆ ಇಳಿಸಿ ನಾರು ಬಟ್ಟೆಯಲ್ಲಿ ಸುತ್ತಿ ಬಂಡೆಯಲ್ಲಿ ತೋಡಿದ ಸಮಾಧಿಯಲ್ಲಿ ಇಟ್ಟನು. ಮೊದಲು ಯಾರನ್ನೂ ಅದರಲ್ಲಿ ಇಟ್ಟಿರಲಿಲ್ಲ.
ಲೂಕನು 23 : 54 (KNV)
ಸಬ್ಬತ್ತಿಗೆ ಸವಿಾಪವಾಗಿದ್ದ ಆ ದಿನವು ಸಿದ್ಧತೆಯ ದಿನವಾಗಿತ್ತು.
ಲೂಕನು 23 : 55 (KNV)
ಇದಲ್ಲದೆ ಗಲಿಲಾಯದಿಂದ ಆತ ನೊಂದಿಗೆ ಬಂದಿದ್ದ ಸ್ತ್ರೀಯರು ಸಹ ಹಿಂಬಾಲಿಸಿ ಹೋಗಿ ಸಮಾಧಿಯನ್ನೂ ಆ ಸಮಾಧಿಯಲ್ಲಿ ಆತನ ದೇಹವನ್ನು ಹೇಗೆ ಇಟ್ಟರೆಂಬದನ್ನೂ ನೋಡಿದರು.
ಲೂಕನು 23 : 56 (KNV)
ಅವರು ಹಿಂತಿರುಗಿದವರಾಗಿ ಪರಿಮಳ ದ್ಯವ್ಯವನ್ನು ಸುಗಂಧ ತೈಲವನ್ನೂ ಸಿದ್ಧಪಡಿಸಿಕೊಂಡು ಆಜ್ಞಾನು ಸಾರವಾಗಿ ಸಬ್ಬತ್ತಿನ ದಿನದಲ್ಲಿ ವಿಶ್ರಮಿಸಿಕೊಂಡರು.
❮
❯