ಲೂಕನು 20 : 1 (KNV)
ಇದಾದ ಮೇಲೆ ಆ ದಿವಸಗಳಲ್ಲಿ ಒಂದು ದಿನ ಆತನು ದೇವಾಲಯದಲ್ಲಿ ಜನರಿಗೆ ಬೋಧಿಸುತ್ತಾ ಸುವಾರ್ತೆಯನ್ನು ಸಾರುತ್ತಿದ್ದಾಗ ಪ್ರಧಾನ ಯಾಜಕರು ಶಾಸ್ತ್ರಿಗಳು ಹಿರಿಯರ ಕೂಡ ಆತನ ಬಳಿಗೆ ಬಂದು
ಲೂಕನು 20 : 2 (KNV)
ಆತನೊಂದಿಗೆ ಮಾತನಾ ಡುತ್ತಾ--ನೀನು ಇವುಗಳನ್ನು ಯಾವ ಅಧಿಕಾರದಿಂದ ಮಾಡುತ್ತೀ? ಇಲ್ಲವೆ ನಿನಗೆ ಈ ಅಧಿಕಾರವನ್ನು ಕೊಟ್ಟವನು ಯಾರು? ನಮಗೆ ಹೇಳು ಅಂದರು.
ಲೂಕನು 20 : 3 (KNV)
ಅದಕ್ಕೆ ಆತನು ಪ್ರತ್ಯುತ್ತರವಾಗಿ ಅವರಿಗೆ--ನಾನು ಸಹ ನಿಮ್ಮನ್ನು ಒಂದು ವಿಷಯ ಕೇಳುತ್ತೇನೆ, ನನಗೆ ಉತ್ತರಕೊಡಿರಿ
ಲೂಕನು 20 : 4 (KNV)
ಯೋಹಾನನ ಬಾಪ್ತಿಸ್ಮವು ಪರಲೋಕ ದಿಂದಲೋ ಇಲ್ಲವೆ ಮನುಷ್ಯರಿಂದಲೋ ಎಂದು ಕೇಳಿದನು.
ಲೂಕನು 20 : 5 (KNV)
ಆಗ ಅವರು ತಮ್ಮೊಳಗೆ--ಪರಲೋಕ ದಿಂದ ಎಂದು ನಾವು ಹೇಳಿದರೆ ಆತನು--ನೀವು ಯಾಕೆ ಅವನನ್ನು ನಂಬಲಿಲ್ಲ ಎಂದು ಹೇಳುವನು.
ಲೂಕನು 20 : 6 (KNV)
ಆದರೆ--ಮನುಷ್ಯ ರಿಂದ ಎಂದು ನಾವು ಹೇಳಿದರೆ ಎಲ್ಲಾ ಜನರು ನಮಗೆ ಕಲ್ಲೆಸೆಯುವರು. ಯಾಕಂದರೆ ಯೋಹಾನನು ಪ್ರವಾದಿಯೆಂದು ಅವರು ಒಪ್ಪಿದ್ದಾರೆ ಎಂದು ಅಂದುಕೊಂಡು
ಲೂಕನು 20 : 7 (KNV)
ಅವರು--ಅದು ಎಲ್ಲಿಂ ದಲೋ ನಾವು ಅರಿಯೆವು ಎಂದು ಉತ್ತರಕೊಟ್ಟರು.
ಲೂಕನು 20 : 8 (KNV)
ಆಗ ಯೇಸು ಅವರಿಗೆ--ಇವುಗಳನ್ನು ನಾನು ಯಾವ ಅಧಿಕಾರದಿಂದ ಮಾಡುತ್ತೇನೆಂದು ನಾನೂ ನಿಮಗೆ ಹೇಳುವದಿಲ್ಲ ಅಂದನು.
ಲೂಕನು 20 : 9 (KNV)
ಇದಲ್ಲದೆ ಆತನು ಜನರಿಗೆ ಈ ಸಾಮ್ಯವನ್ನು ಹೇಳುವದಕ್ಕೆ ಪ್ರಾರಂಭಿಸಿ--ಒಬ್ಬಾನೊಬ್ಬ ಮನುಷ್ಯನು ದ್ರಾಕ್ಷೇತೋಟವನ್ನು ನೆಟ್ಟು ಅದನ್ನು ಒಕ್ಕಲಿಗರಿಗೆ ವಾರಕ್ಕೆ ಕೊಟ್ಟು ಬಹುಕಾಲದ ವರೆಗೆ ಒಂದು ದೂರ ದೇಶಕ್ಕೆ ಹೊರಟುಹೋದನು.
ಲೂಕನು 20 : 10 (KNV)
ಫಲ ಕಾಲದಲ್ಲಿ ಅವನು ತನಗೆ ಬರಬೇಕಾಗಿದ್ದ ದ್ರಾಕ್ಷೇ ತೊಟದ ಫಲವನ್ನು ಕೊಡುವಂತೆ ಅವನು ತನ್ನ ಆಳನ್ನು ಅವರ ಬಳಿಗೆ ಕಳುಹಿಸಿಕೊಟ್ಟನು. ಆದರೆ ಆ ಒಕ್ಕಲಿಗರು ಅವನನ್ನು ಹೊಡೆದು ಬರಿದಾಗಿ ಕಳುಹಿಸಿಬಿಟ್ಟರು.
ಲೂಕನು 20 : 11 (KNV)
ಅವನು ಇನ್ನೊಬ್ಬ ಆಳನ್ನು ತಿರಿಗಿ ಕಳುಹಿಸಿದನು. ಅವರು ಅವನನ್ನು ಸಹ ಹೊಡೆದು ಅವಮಾನಪಡಿಸಿ ಬರಿದಾಗಿ ಕಳುಹಿಸಿಬಿಟ್ಟರು.
ಲೂಕನು 20 : 12 (KNV)
ಅವನು ತಿರಿಗಿ ಮೂರನೆಯವನನ್ನು ಕಳುಹಿಸಿದನು; ಆಗ ಅವರು ಅವನನ್ನು ಸಹ ಗಾಯಪಡಿಸಿ ಹೊರಗೆ ಹಾಕಿದರು.
ಲೂಕನು 20 : 13 (KNV)
ಆಗ ದ್ರಾಕ್ಷೇತೋಟದ ಯಜಮಾನನು--ನಾನೇನು ಮಾಡಲಿ? ನಾನು ನನ್ನ ಪ್ರಿಯ ಮಗನನ್ನೇ ಕಳುಹಿ ಸುವೆನು. ಅವರು ಇವನನ್ನು ನೋಡಿಯಾದರೂ ಇವ ನನ್ನು ಗೌರವಿಸಿಯಾರು ಎಂದು ಅಂದುಕೊಂಡನು.
ಲೂಕನು 20 : 14 (KNV)
ಆದರೆ ಒಕ್ಕಲಿಗರು ಅವನನ್ನು ನೋಡಿದಾಗ ತಮ್ಮತಮ್ಮೊಳಗೆ--ಇವನೇ ಬಾಧ್ಯಸ್ಥನು; ಬನ್ನಿರಿ, ಇವ ನನ್ನು ಕೊಂದುಹಾಕೋಣ ಬಾಧ್ಯತೆಯು ನಮ್ಮದಾಗು ತ್ತದೆ ಎಂದು ಆಲೋಚನೆ ಮಾಡಿಕೊಂಡರು.
ಲೂಕನು 20 : 15 (KNV)
ಅವರು ಅವನನ್ನು ದ್ರಾಕ್ಷೇ ತೋಟದ ಹೊರಗೆಹಾಕಿ ಕೊಂದರು. ಹೀಗಿರಲು ದ್ರಾಕ್ಷೇತೋಟದ ಯಜ ಮಾನನು ಅವರಿಗೆ ಏನು ಮಾಡುವನು?
ಲೂಕನು 20 : 16 (KNV)
ಅವನು ಬಂದು ಈ ಒಕ್ಕಲಿಗರನ್ನು ಸಂಹರಿಸಿ ದ್ರಾಕ್ಷೇತೋಟ ವನ್ನು ಬೇರೆಯವರಿಗೆ ಕೊಡುವನು ಅಂದನು. ಅವರು ಇದನ್ನು ಕೇಳಿ--ಹಾಗೆ ಎಂದಿಗೂ ಆಗಬಾರದು ಅಂದರು.
ಲೂಕನು 20 : 17 (KNV)
ಆಗ ಆತನು ಅವರನ್ನು ನೋಡಿ--ಹಾಗಾದರೆ ಮನೇ ಕಟ್ಟುವವರು ತಿರಸ್ಕರಿಸಿದ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು ಎಂದು ಬರೆದಿರು ವದು ಏನು?
ಲೂಕನು 20 : 18 (KNV)
ಯಾವನಾದರೂ ಆ ಕಲ್ಲಿನ ಮೇಲೆ ಬಿದ್ದರೆ ತುಂಡುತುಂಡಾಗುವನು. ಆದರೆ ಇದು ಯಾರ ಮೇಲೆ ಬೀಳುವದೋ ಅವನನ್ನು ಅದು ಅರೆದು ಪುಡಿಪುಡಿ ಮಾಡುವದು ಅಂದನು.
ಲೂಕನು 20 : 19 (KNV)
ಅದೇ ಗಳಿಗೆಯಲ್ಲಿ ಪ್ರಧಾನಯಾಜಕರೂ ಶಾಸ್ತ್ರಿಗಳೂ ಆತನ ಮೇಲೆ ಕೈ ಹಾಕುವದಕ್ಕೆ ಹವಣಿ ಸಿದರು; ಯಾಕಂದರೆ ಅತನು ತಮಗೆ ವಿರೋಧ ವಾಗಿಯೇ ಈ ಸಾಮ್ಯವನ್ನು ಹೇಳಿದ್ದನೆಂದು ಅವರು ತಿಳಿದುಕೊಂಡಿದ್ದರು; ಆದರೆ ಅವರು ಜನರಿಗೆ ಭಯಪಟ್ಟರು.
ಲೂಕನು 20 : 20 (KNV)
ಅವರು ಆತನನ್ನು ಹೊಂಚಿ ನೋಡಿದವರಾಗಿ ಮಾತಿನಲ್ಲಿ ಆತನನ್ನು ಸಿಕ್ಕಿಸುವಂತೆಯೂ ಅಧಿಪತಿಯ ಬಲಕ್ಕೆ ಮತ್ತು ಅಧಿಕಾರಕ್ಕೆ ಒಪ್ಪಿಸುವಂತೆಯೂ ತಾವು ನೀತಿವಂತರೆಂದು ನಟಿಸುವ ಗೂಢಾಚಾರರನ್ನು ಕಳುಹಿಸಿದರು.
ಲೂಕನು 20 : 21 (KNV)
ಆಗ ಅವರು ಆತನಿಗೆ--ಗುರುವೇ, ನೀನು ಮುಖದಾಕ್ಷಿಣ್ಯವಿಲ್ಲದೆ ಸರಿಯಾಗಿ ಮಾತನಾಡಿ ಬೋಧಿ ಸುತ್ತೀ; ದೇವರ ಮಾರ್ಗವನ್ನು ಸತ್ಯವಾಗಿ ಬೋಧಿಸು ವವನಾಗಿದ್ದೀಯೆಂದು ನಾವು ಬಲ್ಲೆವು.
ಲೂಕನು 20 : 22 (KNV)
ಆದರೆ ಕೈಸರನಿಗೆ ಕಪ್ಪವನ್ನು ಸಲ್ಲಿಸುವದು ನ್ಯಾಯವೋ ಅಥವಾ ಅಲ್ಲವೋ ಎಂದು ಕೇಳಿದರು.
ಲೂಕನು 20 : 23 (KNV)
ಆದರೆ ಆತನು ಅವರ ಕುಯುಕ್ತಿಯನ್ನು ತಿಳಿದು ಅವರಿಗೆ--ನನ್ನನ್ನು ಯಾಕೆ ಶೋಧಿಸುತ್ತೀರಿ?
ಲೂಕನು 20 : 24 (KNV)
ನನಗೆ ಒಂದು ನಾಣ್ಯವನ್ನು ತೋರಿಸಿರಿ. ಇದಕ್ಕೆ ಯಾವನ ರೂಪವೂ ಮೇಲ್ಬರಹವೂ ಇದೆ ಎಂದು ಅವರನ್ನು ಕೇಳಲು ಅವರು ಪ್ರತ್ಯುತ್ತರವಾಗಿ--ಕೈಸರನದು ಅಂದರು.
ಲೂಕನು 20 : 25 (KNV)
ಆತನು ಅವರಿಗೆ--ಹಾಗಾದರೆ ಕೈಸರನಿಗೆ ಸಂಬಂಧಪಟ್ಟವುಗಳನ್ನು ಕೈಸರನಿಗೂ ದೇವರಿಗೆ ಸಂಬಂಧಪಟ್ಟವುಗಳನ್ನು ದೇವರಿಗೂ ಸಲ್ಲಿಸಿರಿ ಅಂದನು.
ಲೂಕನು 20 : 26 (KNV)
ಆಗ ಅವರು ಜನರ ಮುಂದೆ ಆತನನ್ನು ಮಾತುಗಳಲ್ಲಿ ಸಿಕ್ಕಿಸಲಾರದೆ ಆತನ ಉತ್ತರಗಳಿಗಾಗಿ ಆಶ್ಚರ್ಯಪಟ್ಟು ಸುಮ್ಮನಿದ್ದರು.
ಲೂಕನು 20 : 27 (KNV)
ಇದಲ್ಲದೆ ಪುನರುತ್ಥಾನವನ್ನು ಅಲ್ಲಗಳೆಯುವ ಸದ್ದುಕಾಯರಲ್ಲಿ ಕೆಲವರು ಆತನ ಬಳಿಗೆ ಬಂದು ಆತನಿಗೆ--
ಲೂಕನು 20 : 28 (KNV)
ಬೋಧಕನೇ, ಹೆಂಡತಿ ಇದ್ದ ಒಬ್ಬ ಮನುಷ್ಯನು ಮಕ್ಕಳಿಲ್ಲದೆ ಸತ್ತರೆ ಅವನ ಸಹೋದರನು ಅವನ ಹೆಂಡತಿಯನ್ನು ಮದುವೆಯಾಗಿ ತನ್ನ ಸಹೋ ದರನಿಗಾಗಿ ಸಂತಾನವನ್ನು ಪಡೆಯಬೇಕೆಂದು ಮೋಶೆಯು ನಮಗೆ ಬರೆದುಕೊಟ್ಟನು.
ಲೂಕನು 20 : 29 (KNV)
ಹೀಗೆ ಏಳು ಮಂದಿ ಸಹೋದರರು ಇರಲಾಗಿ ಮೊದಲನೆಯವನು ಮದುವೆಯಾಗಿ ಮಕ್ಕಳಿಲ್ಲದೆ ಸತ್ತನು.
ಲೂಕನು 20 : 30 (KNV)
ಎರಡನೆಯ ವನು ಆಕೆಯನ್ನು ಮದುವೆಯಾಗಿ ಮಕ್ಕಳಿಲ್ಲದೆ ಸತ್ತನು.
ಲೂಕನು 20 : 31 (KNV)
ಮೂರನೆಯವನು ಆಕೆಯನ್ನು ಮದುವೆಯಾದನು; ಅದೇ ರೀತಿಯಲ್ಲಿ ಏಳು ಜನರು ಸಹ ಮದುವೆಯಾಗಿ ಮಕ್ಕಳಿಲ್ಲದೆ ಸತ್ತರು.
ಲೂಕನು 20 : 32 (KNV)
ಕಡೇ ದಾಗಿ ಆ ಹೆಂಗಸು ಸಹ ಸತ್ತಳು.
ಲೂಕನು 20 : 33 (KNV)
ಹಾಗಾದರೆ ಪುನರುತ್ಥಾನದಲ್ಲಿ ಆಕೆಯು ಅವರೊಳಗೆ ಯಾರ ಹೆಂಡತಿಯಾಗಿರುವಳು? ಯಾಕಂದರೆ ಏಳು ಮಂದಿಯೂ ಅವಳನ್ನು ಹೆಂಡತಿ ಯನ್ನಾಗಿ ಮಾಡಿಕೊಂಡಿದ್ದರು ಅಂದರು.
ಲೂಕನು 20 : 34 (KNV)
ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವರಿಗೆ--ಈ ಲೋಕದ ಮಕ್ಕಳು ಮದುವೆಮಾಡಿಕೊಳ್ಳುತ್ತಾರೆ ಮತ್ತು ಮದುವೆ ಮಾಡಿಕೊಡುತ್ತಾರೆ.
ಲೂಕನು 20 : 35 (KNV)
ಆದರೆ ಆ ಲೋಕವನ್ನೂ ಸತ್ತವರೊಳಗಿಂದ ಪುನರುತ್ಥಾನವನ್ನೂ ಹೊಂದುವದಕ್ಕೆ ಯೋಗ್ಯರೆಂದು ಎಣಿಸಲ್ಪಡುವವರು ಮದುವೆ ಮಾಡಿ ಕೊಳ್ಳುವದೂ ಇಲ್ಲ ಇಲ್ಲವೆ ಮದುವೆ ಮಾಡಿಕೊಡು ವದೂ ಇಲ್ಲ.
ಲೂಕನು 20 : 36 (KNV)
ಇದಲ್ಲದೆ ಅವರು ಇನ್ನೆಂದಿಗೂ ಸಾಯುವದಿಲ್ಲ; ಯಾಕಂದರೆ ಅವರು ದೂತರಿಗೆ ಸರಿಸಮಾನರೂ ಪುನರುತ್ಥಾನದ ಮಕ್ಕಳೂ ಆಗಿರುವದ ರಿಂದ ಅವರು ದೇವರ ಮಕ್ಕಳಾಗಿದ್ದಾರೆ.
ಲೂಕನು 20 : 37 (KNV)
ಮೋಶೆಯು ಸಹ ಪೊದೆಯ ಹತ್ತಿರ ಕರ್ತನು ಅಬ್ರಹಾಮನ ದೇವರೂ ಇಸಾಕನ ದೇವರೂ ಯಾಕೋಬನ ದೇವರೂ ಎಂದು ಕರೆದಾಗ ಸತ್ತವರು ಎಬ್ಬಿಸಲ್ಪಡು ತ್ತಾರೆಂಬದನ್ನು ವ್ಯಕ್ತಪಡಿಸಿದನು.
ಲೂಕನು 20 : 38 (KNV)
ಯಾಕಂದರೆ ಆತನು ಜೀವಿಸುವವರಿಗೇ ದೇವರಾಗಿದ್ದಾನೆ, ಸತ್ತವರಿ ಗಲ್ಲ; ಯಾಕಂದರೆ ಎಲ್ಲರೂ ಆತನಿಗಾಗಿ ಜೀವಿಸುತ್ತಾರೆ ಅಂದನು.
ಲೂಕನು 20 : 39 (KNV)
ಆಗ ಶಾಸ್ತ್ರಿಗಳಲ್ಲಿ ಕೆಲವರು ಪ್ರತ್ಯುತ್ತರ ವಾಗಿ--ಬೋಧಕನೇ, ನೀನು ಸರಿಯಾಗಿ ಹೇಳಿದ್ದೀ ಅಂದರು.
ಲೂಕನು 20 : 40 (KNV)
ಅವರು ಆತನಿಗೆ ಯಾವ ಪ್ರಶ್ನೆಯನ್ನೂ ಕೇಳುವದಕ್ಕೆ ಧೈರ್ಯಗೊಳ್ಳಲಿಲ್ಲ.
ಲೂಕನು 20 : 41 (KNV)
ಆತನು ಅವ ರಿಗೆ--ಕ್ರಿಸ್ತನು ದಾವೀದನ ಮಗನೆಂದು ಅವರು ಹೇಳುವದು ಹೇಗೆ?
ಲೂಕನು 20 : 42 (KNV)
ದಾವೀದನು ತಾನೇ ಕೀರ್ತನೆ ಗಳ ಪುಸ್ತಕದಲ್ಲಿ--ಕರ್ತನು ನನ್ನ ಕರ್ತನಿಗೆ--
ಲೂಕನು 20 : 43 (KNV)
ನಾನು ನಿನ್ನ ವೈರಿಗಳನ್ನು ನಿನ್ನ ಪಾದಗಳ ಪೀಠವಾಗಿ ಮಾಡುವ ವರೆಗೂ ನನ್ನ ಬಲಪಾರ್ಶ್ವದಲ್ಲಿ ನೀನು ಕೂತುಕೊಂಡಿರು ಎಂದು ಹೇಳಿದನು.
ಲೂಕನು 20 : 44 (KNV)
ಆದಕಾರಣ ದಾವೀದನು ಆತನನ್ನು ಕರ್ತನು ಎಂದು ಕರೆಯುವಾಗ ಆತನು ಅವನಿಗೆ ಮಗನಾಗುವದು ಹೇಗೆ ಎಂದು ಕೇಳಿದನು.
ಲೂಕನು 20 : 45 (KNV)
ಅಮೇಲೆ ಜನರೆಲ್ಲರೂ ಕೇಳುತ್ತಿದ್ದಾಗ ಆತನು ತನ್ನ ಶಿಷ್ಯರಿಗೆ--
ಲೂಕನು 20 : 46 (KNV)
ನಿಲುವಂಗಿಗಳನ್ನು ತೊಟ್ಟುಕೊಂಡು ತಿರುಗಾಡುವದಕ್ಕೆ ಬಯಸುವವರೂ ಸಂತೆಗಳಲ್ಲಿ ವಂದನೆಗಳನ್ನೂ ಸಭಾಮಂದಿರಗಳಲ್ಲಿ ಅತ್ಯುನ್ನತ ಸ್ಥಾನ ಗಳನ್ನೂ ಔತಣಗಳಲ್ಲಿ ಮುಖ್ಯಸ್ಥಾನಗಳನ್ನೂ ಪ್ರೀತಿಸುವ ವರಾದ ಶಾಸ್ತ್ರಿಗಳ ವಿಷಯದಲ್ಲಿ ಎಚ್ಚರಿಕೆಯಾಗಿರ್ರಿ;
ಲೂಕನು 20 : 47 (KNV)
ಇವರು ವಿಧವೆಯರ ಮನೆಗಳನ್ನು ನುಂಗಿ ತೋರಿಕೆ ಗಾಗಿ ಉದ್ದವಾದ ಪ್ರಾರ್ಥನೆಗಳನ್ನು ಮಾಡುತ್ತಾರೆ; ಇವರೇ ಹೆಚ್ಚಾದ ದಂಡನೆಯನ್ನು ಹೊಂದುವರು ಅಂದನು.
❮
❯