ಲೂಕನು 14 : 1 (KNV)
ಇದಾದ ಮೇಲೆ ಆತನು ಸಬ್ಬತ್‌ ದಿನದಲ್ಲಿ ಫರಿಸಾಯರ ಮುಖ್ಯಸ್ಥರಲ್ಲಿ ಒಬ್ಬನ ಮನೆಯೊಳಗೆ ಊಟಕ್ಕೆ ಹೋದಾಗ ಅವರು ಆತನನ್ನು ಹೊಂಚಿನೋಡುತ್ತಾ ಇದ್ದರು.
ಲೂಕನು 14 : 2 (KNV)
ಇಗೋ, ಅಲ್ಲಿ ಜಲೊದರವುಳ್ಳ ಒಬ್ಬ ಮನುಷ್ಯನು ಆತನ ಎದು ರಿನಲ್ಲಿ ಇದ್ದನು.
ಲೂಕನು 14 : 3 (KNV)
ಆಗ ಯೇಸು ನ್ಯಾಯಶಾಸ್ತ್ರಿಗಳಿಗೂ ಫರಿಸಾಯರಿಗೂ--ಸಬ್ಬತ್‌ ದಿನದಲ್ಲಿ ಸ್ವಸ್ಥಮಾಡುವದು ನ್ಯಾಯವೋ ಎಂದು ಕೇಳಿದನು.
ಲೂಕನು 14 : 4 (KNV)
ಆದರೆ ಅವರು ಮೌನವಾಗಿದ್ದರು. ಆಗ ಆತನು ಅವನನ್ನು ಕೈಹಿಡಿದು ಸ್ವಸ್ಥಪಡಿಸಿಕಳುಹಿಸಿದನು.
ಲೂಕನು 14 : 5 (KNV)
ಅವರಿಗೆ ಉತ್ತರಕೊಟ್ಟು-- ನಿಮ್ಮಲ್ಲಿ ಒಬ್ಬನ ಕತ್ತೆಯಾಗಲೀ ಎತ್ತಾಗಲೀ ಒಂದು ಕುಣಿಯಲ್ಲಿ ಬಿದ್ದರೆ ಅದನ್ನು ತಕ್ಷಣವೇ ಸಬ್ಬತ್ತಿನಲ್ಲಿ ಮೇಲಕ್ಕೆ ಎಳೆಯುವದಿಲ್ಲವೇ ಅಂದನು.
ಲೂಕನು 14 : 6 (KNV)
ಇವುಗಳ ವಿಷಯವಾಗಿ ಅವರು ತಿರಿಗಿ ಆತನಿಗೆ ಉತ್ತರ ಕೊಡಲಾರದೆ ಇದ್ದರು.
ಲೂಕನು 14 : 7 (KNV)
(ಊಟಕ್ಕೆ) ಕರೆಯಲ್ಪಟ್ಟವರು ತಮಗಾಗಿ ಮುಖ್ಯ ಸ್ಥಳಗಳನ್ನು ಹೇಗೆ ಆರಿಸಿಕೊಂಡರೆಂದು ಆತನು ಗುರು ತಿಸಿ ಸಾಮ್ಯದಿಂದ ಅವರಿಗೆ ಹೇಳಿದ್ದೇನಂದರೆ--
ಲೂಕನು 14 : 8 (KNV)
ಯಾವನಾದರೂ ನಿನ್ನನ್ನು ಮದುವೆಗೆ ಕರೆದರೆ ಉನ್ನತ ಸ್ಥಳದಲ್ಲಿ ಕೂತುಕೊಳ್ಳಬೇಡ; ಯಾಕಂದರೆ ಅವನು ನಿನಗಿಂತಲೂ ಗೌರವವುಳ್ಳ ಮನುಷ್ಯನನ್ನು ಕರೆದಿರ ಬಹುದು;
ಲೂಕನು 14 : 9 (KNV)
ಆಗ ನಿನ್ನನ್ನು ಮತ್ತು ಅವನನ್ನು ಕರೆದವನು ಬಂದು ನಿನಗೆ--ಈ ಮನುಷ್ಯನಿಗೆ ಸ್ಥಳಕೊಡು ಎಂದು ಹೇಳುವಾಗ ನೀನು ನಾಚಿಕೆಯಿಂದ ಕಡೇ ಸ್ಥಳದಲ್ಲಿ ಕೂತುಕೊಳ್ಳಬೇಕಾಗಿರುವದು.
ಲೂಕನು 14 : 10 (KNV)
ಆದರೆ ನೀನು ಕರೆಯಲ್ಪಟ್ಟಾಗ ಹೋಗಿ ಕಡೇ ಸ್ಥಳದಲ್ಲಿ ಕೂತುಕೋ; ಆಗ ನಿನ್ನನ್ನು ಕರೆದಾತನು ಬಂದು ನಿನಗೆ--ಸ್ನೇಹಿತನೇ, ಮೇಲಕ್ಕೆ ಹೋಗು ಎಂದು ಹೇಳುವಾಗ ನಿನ್ನ ಜೊತೆ ಯಲ್ಲಿ ಊಟಕ್ಕೆ ಕೂತವರ ಮುಂದೆ ನಿನಗೆ ಗೌರವ ವಿರುವದು.
ಲೂಕನು 14 : 11 (KNV)
ಯಾವನು ತನ್ನನ್ನು ತಾನೇ ಹೆಚ್ಚಿಸಿಕೊಳ್ಳು ತ್ತಾನೋ ಅವನು ತಗ್ಗಿಸಲ್ಪಡುವನು ಮತ್ತು ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು ಅಂದನು.
ಲೂಕನು 14 : 12 (KNV)
ಆತನು ತನ್ನನ್ನು ಕರೆದವನಿಗೆ ಸಹ ಹೇಳಿದ್ದೇ ನಂದರೆ--ನೀನು ಮಧ್ಯಾಹ್ನದ ಊಟಕ್ಕೆ ಇಲ್ಲವೆ ಸಾಯಂಕಾಲದ ಊಟಕ್ಕೆ ಸಿದ್ಧಪಡಿಸಿದಾಗ ನಿನ್ನ ಸ್ನೇಹಿತರನ್ನಾಗಲೀ ನಿನ್ನ ಸಹೋದರರನ್ನಾಗಲೀ ನಿನ್ನ ಬಂಧುಗಳನ್ನಾಗಲೀ ಇಲ್ಲವೆ ಐಶ್ವರ್ಯವಂತರಾದ ನೆರೆಯವರನ್ನಾಗಲೀ ಕರೆಯಬೇಡ; ಯಾಕಂದರೆ ಅ
ಲೂಕನು 14 : 13 (KNV)
ಆದರೆ ನೀನು ಔತಣ ಮಾಡಿಸಿದಾಗ ಬಡವರನ್ನೂ ಊನವಾದವರನ್ನೂ ಕುಂಟರನ್ನೂ ಕುರುಡರನ್ನೂ ಕರೆ;
ಲೂಕನು 14 : 14 (KNV)
ಆಗ ಅವರು ನಿನಗೆ ಪ್ರತ್ಯುಪಕಾರ ಮಾಡುವದಕ್ಕೆ ಆಗದಿರುವ ದರಿಂದ ನೀನು ಧನ್ಯನಾಗುವಿ. ಯಾಕಂದರೆ ನೀತಿವಂತರ ಪುನರುತ್ಥಾನದಲ್ಲಿ ನಿನಗೆ ಪ್ರತ್ಯುಪಕಾರವಾಗುವದು.
ಲೂಕನು 14 : 15 (KNV)
ಆಗ ಆತನ ಸಂಗಡ ಊಟಕ್ಕೆ ಕೂತವರಲ್ಲಿ ಒಬ್ಬನು ಈ ಸಂಗತಿಗಳನ್ನು ಕೇಳಿ ಆತನಿಗೆ--ದೇವರ ರಾಜ್ಯದಲ್ಲಿ ಊಟಮಾಡುವವನು ಧನ್ಯನು ಎಂದು ಹೇಳಿದನು.
ಲೂಕನು 14 : 16 (KNV)
ಆಗ ಆತನು ಅವನಿಗೆ--ಒಬ್ಬಾನೊಬ್ಬ ಮನುಷ್ಯನು ಒಂದು ದೊಡ್ಡ ಔತಣಮಾಡಿಸಿ ಅನೇಕರನ್ನು ಕರೆದನು.
ಲೂಕನು 14 : 17 (KNV)
ಔತಣದ ಸಮಯವಾದಾಗ ಕರೆಯಲ್ಪಟ್ಟವರಿಗೆ ಅವನು--ಎಲ್ಲವೂ ಸಿದ್ಧವಾಗಿದೆ, ಬನ್ನಿರಿ ಎಂದು ಹೇಳುವದಕ್ಕಾಗಿ ತನ್ನ ಸೇವಕನನ್ನು ಕಳುಹಿಸಿದನು.
ಲೂಕನು 14 : 18 (KNV)
ಆದರೆ ಅವರೆಲ್ಲರೂ ಒಂದೇ ಮನ ಸ್ಸಿನಿಂದ ನೆವ ಹೇಳಲಾರಂಭಿಸಿ ಮೊದಲನೆಯವನು ಅವನಿಗೆ--ನಾನು ಒಂದು ತುಂಡು ಭೂಮಿಯನ್ನು ಕೊಂಡುಕೊಂಡಿದ್ದೇನೆ, ಹೋಗಿ ಅದನ್ನು ನೋಡುವದು ಅವಶ್ಯವಾಗಿದೆ; ನನ್ನನ್ನು ಕ್ಷಮಿಸಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ ಅಂದನು.
ಲೂಕನು 14 : 19 (KNV)
ಬೇರೊಬ್ಬನು-- ನಾನು ಐದು ಜೊತೆ ಎತ್ತುಗಳನ್ನು ಕೊಂಡುಕೊಂಡಿ ದ್ದೇನೆ, ಅವುಗಳನ್ನು ಪರೀಕ್ಷಿಸುವದಕ್ಕಾಗಿ ಹೋಗುತ್ತೇನೆ; ನನ್ನನ್ನು ಕ್ಷಮಿಸಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ ಅಂದನು.
ಲೂಕನು 14 : 20 (KNV)
ಇನ್ನೊಬ್ಬನು--ನಾನು ಒಬ್ಬಳನ್ನು ಮದುವೆ ಮಾಡಿಕೊಂಡಿದ್ದೇನೆ, ಅದಕೋಸ್ಕರ ನಾನು ಬರ ಲಾರೆನು ಅಂದನು.
ಲೂಕನು 14 : 21 (KNV)
ಹೀಗೆ ಆ ಸೇವಕನು ಬಂದು ತನ್ನ ಯಜಮಾನನಿಗೆ ಈ ವಿಷಯಗಳನ್ನು ತಿಳಿಸಿದನು. ಆಗ ಆ ಮನೇಯಜಮಾನನು ಕೋಪಗೊಂಡು ತನ್ನ ಸೇವಕನಿಗೆ--ನೀನು ಬೇಗನೆ ಪಟ್ಟಣದ ಬೀದಿಗಳಿಗೂ ಸಂದುಗಳಿಗೂ ಹೋಗಿ ಬಡವರನ್ನೂ ಊನವಾದ ವರನ್ನೂ ಕುಂಟರನ್ನೂ ಕುರುಡರನ್ನೂ ಇಲ್ಲಿ ಒಳಗೆ ಕರಕೆ
ಲೂಕನು 14 : 22 (KNV)
ಆಗ ಆ ಸೇವಕನು--ಒಡೆಯನೇ, ನೀನು ಅಪ್ಪಣೆಕೊಟ್ಟಂತೆ ಮಾಡಿದ್ದಾ ಯಿತು; ಇನ್ನೂ ಸ್ಥಳವದೆ ಅಂದನು.
ಲೂಕನು 14 : 23 (KNV)
ಆಗ ಯಜ ಮಾನನು ಸೇವಕನಿಗೆ--ನೀನು ಬೀದಿಗಳಿಗೂ ಬೇಲಿಗಳ ಬಳಿಗೂ ಹೊರಟುಹೋಗಿ ನನ್ನ ಮನೆ ತುಂಬಿಕೊಳ್ಳುವಂತೆ ಒಳಗೆ ಬರಲು ಅವರನ್ನು ಬಲ ವಂತಮಾಡು;
ಲೂಕನು 14 : 24 (KNV)
ಕರೆಯಲ್ಪಟ್ಟ ಆ ಜನರಲ್ಲಿ ಒಬ್ಬ ನಾದರೂ ನನ್ನ ಔತಣವನ್ನು ರುಚಿನೋಡಬಾರದು ಎಂದು ನಾನು ನಿಮಗೆ ಹೇಳುತ್ತೇನೆ ಅಂದನು.
ಲೂಕನು 14 : 25 (KNV)
ಇದಲ್ಲದೆ ದೊಡ್ಡ ಸಮೂಹಗಳು ಆತನ ಸಂಗಡ ಹೋಗುತ್ತಿರಲು ಆತನು ತಿರುಗಿಕೊಂಡು ಅವರಿಗೆ--
ಲೂಕನು 14 : 26 (KNV)
ಯಾವನಾದರೂ ನನ್ನ ಬಳಿಗೆ ಬಂದು ತನ್ನ ತಂದೆ ಯನ್ನಾಗಲೀ ತಾಯಿಯನ್ನಾಗಲೀ ಹೆಂಡತಿಯನ್ನಾಗಲೀ ಮಕ್ಕಳನ್ನಾಗಲೀ ಸಹೋದರರನ್ನಾಗಲೀ ಸಹೋದರಿ ಯರನ್ನಾಗಲೀ ಹೌದು, ತನ್ನ ಸ್ವಂತ ಪ್ರಾಣವನ್ನು ಸಹ ಹಗೆಮಾಡದಿದ್ದರೆ ಅವನು ನನ್ನ ಶಿಷ್ಯನಾಗಿರ ಲಾರನು.
ಲೂಕನು 14 : 27 (KNV)
ಯಾವನಾದರೂ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನ ಹಿಂದೆಬಾರದಿದ್ದರೆ ಅವನು ನನ್ನ ಶಿಷ್ಯನಾಗಿರಲಾರನು.
ಲೂಕನು 14 : 28 (KNV)
ನಿಮ್ಮಲ್ಲಿ ಯಾವನಾದರೂ ಗೋಪುರವನ್ನು ಕಟ್ಟುವದಕ್ಕೆ ಉದ್ದೇಶವುಳ್ಳವನಾದರೆ ಅವನು ಮೊದಲು ಕೂತುಕೊಂಡು ಅದನ್ನು ಪೂರೈಸು ವದಕ್ಕೆ ಬೇಕಾದ ಖರ್ಚು ತನ್ನಲ್ಲಿ ಉಂಟೋ ಎಂದು ಲೆಕ್ಕ ಮಾಡುವದಿಲ್ಲವೋ?
ಲೂಕನು 14 : 29 (KNV)
ಒಂದು ವೇಳೆ ಹಾಗೆ ಲೆಕ್ಕ ಮಾಡದೆ ಅವನು ಅದಕ್ಕೆ ಅಸ್ತಿವಾರ ಹಾಕಿದ ಮೇಲೆ ಅದನ್ನು ಪೂರೈಸದಿದ್ದರೆ ನೋಡುವವರೆಲ್ಲರೂ ಅವನಿಗೆ ಹಾಸ್ಯ ಮಾಡುವದಕ್ಕೆ ಆರಂಭಿಸಿ--
ಲೂಕನು 14 : 30 (KNV)
ಈ ಮನುಷ್ಯನು ಕಟ್ಟುವದಕ್ಕೆ ಆರಂಭಿಸಿ ಪೂರ್ತಿಮಾಡ ಲಾರದೆ ಹೋದನು ಎಂದು ಅನ್ನುವರು.
ಲೂಕನು 14 : 31 (KNV)
ಇಲ್ಲವೆ ಯಾವ ಅರಸನಾದರೂ ಬೇರೆ ಅರಸನಿಗೆ ವಿರೋಧ ವಾಗಿ ಯುದ್ಧಮಾಡುವದಕ್ಕೆ ಹೋಗುವಾಗ ಮೊದಲು ಕೂತುಕೊಂಡು ತನಗೆ ವಿರೋಧವಾಗಿ ಇಪ್ಪತ್ತು ಸಾವಿರ (ಸೈನ್ಯ)ದೊಂದಿಗೆ ಬರುವ ಆ ಅರಸನನ್ನು ತನ್ನ ಹತು ಸಾವಿರ (ಸೈನ್ಯ)ದೊಂದಿಗೆ ಎದುರಿಸಲು ಸಮರ್ಥನೋ ಎಂದು ವಿಚಾರಿಸುವದಿಲ್ಲವೋ?
ಲೂಕನು 14 : 32 (KNV)
ಇಲ್ಲವೆ ಅವನು ಇನ್ನು ದೂರದಲ್ಲಿರುವಾಗಲೇ ತನ್ನ ರಾಯಭಾರಿಗಳನ್ನು ಕಳುಹಿಸಿ ಸಮಾಧಾನದ ಶರತ್ತುಗಳಿಗಾಗಿ ಕೋರುವ ದಿಲ್ಲವೋ?
ಲೂಕನು 14 : 33 (KNV)
ಅದರಂತೆಯೇ ನಿಮ್ಮಲ್ಲಿ ಯಾವನಾ ದರೂ ತನಗಿರುವವುಗಳನ್ನೆಲ್ಲಾ ಬಿಟ್ಟುಬಿಡದಿದ್ದರೆ ಅವನು ನನ್ನ ಶಿಷ್ಯನಾಗಿರಲಾರನು.
ಲೂಕನು 14 : 34 (KNV)
ಉಪ್ಪು ಒಳ್ಳೇದು; ಆದರೆ ಉಪ್ಪು ತನ್ನ ರುಚಿ ಯನ್ನು ಕಳೆದುಕೊಂಡರೆ ಅದಕ್ಕೆ ಇನ್ನಾತರಿಂದ ರುಚಿ ಬಂದೀತು?ಅದು ಭೂಮಿಗಾದರೂ ತಿಪ್ಪೆ ಗಾದರೂ ಪ್ರಯೋಜನವಿಲ್ಲ; ಅದನ್ನು ಜನರು ಹೊರಗೆ ಹಾಕುತ್ತಾರೆ. ಕೇಳುವದಕ್ಕೆ ಕಿವಿಗಳುಳ್ಳವನು ಕೇಳಲಿ ಅಂದನು.
ಲೂಕನು 14 : 35 (KNV)
ಅದು ಭೂಮಿಗಾದರೂ ತಿಪ್ಪೆ ಗಾದರೂ ಪ್ರಯೋಜನವಿಲ್ಲ; ಅದನ್ನು ಜನರು ಹೊರಗೆ ಹಾಕುತ್ತಾರೆ. ಕೇಳುವದಕ್ಕೆ ಕಿವಿಗಳುಳ್ಳವನು ಕೇಳಲಿ ಅಂದನು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35

BG:

Opacity:

Color:


Size:


Font: