ಲೂಕನು 13 : 1 (KNV)
ಇದಲ್ಲದೆ ಪಿಲಾತನು ಗಲಿಲಾಯದವರ ರಕ್ತವನ್ನು ಅವರ ಬಲಿಗಳೊಂದಿಗೆ ಬೆರಸಿದ ವಿಷಯವನ್ನು ಆತನಿಗೆ ತಿಳಿಸಿದ ಕೆಲವರು ಆ ಸಮಯ ದಲ್ಲಿ ಅಲ್ಲಿದ್ದರು.
ಲೂಕನು 13 : 2 (KNV)
ಆಗ ಯೇಸು ಅವರಿಗೆ--ಈ ಗಲಿ ಲಾಯದವರು ಇಂಥವುಗಳನ್ನು ಅನುಭವಿಸಿದ ಕಾರಣ ಅವರು ಎಲ್ಲಾ ಗಲಿಲಾಯದವರಿಗಿಂತ ಪಾಪಿಷ್ಠರೆಂದು ನೀವು ಭಾವಿಸುತ್ತೀರೋ?
ಲೂಕನು 13 : 3 (KNV)
ಆದರೆ--ಹಾಗಲ್ಲವೆಂದು ನಾನು ನಿಮಗೆ ಹೇಳುತ್ತೇನೆ; ನೀವು ಮಾನಸಾಂತರ ಪಡದೆಹೋದರೆ ನೀವೆಲ್ಲರೂ ಅವರಂತೆಯೇ ನಾಶವಾ ಗುವಿರಿ.
ಲೂಕನು 13 : 4 (KNV)
ಇಲ್ಲವೆ ಸಿಲೊವಾಮಿನಲ್ಲಿ ಗೋಪುರವು ಬಿದ್ದು ಸತ್ತ ಆ ಹದಿನೆಂಟು ಜನರು ಯೆರೂಸಲೇಮಿನಲ್ಲಿ ವಾಸವಾಗಿರುವ ಎಲ್ಲಾ ಮನುಷ್ಯರಿಗಿಂತಲೂ ಪಾಪಿಷ್ಠ ರೆಂದು ಯೋಚಿಸುತ್ತೀರೋ?
ಲೂಕನು 13 : 5 (KNV)
ಆದರೆ--ಹಾಗಲ್ಲ ವೆಂದು ನಾನು ನಿಮಗೆ ಹೇಳುತ್ತೇನೆ; ನೀವು ಮಾನ ಸಾಂತರಪಡದೆ ಹೋದರೆ ನೀವೆಲ್ಲರೂ ಅವರಂತೆಯೇ ನಾಶವಾಗುವಿರಿ ಅಂದನು.
ಲೂಕನು 13 : 6 (KNV)
ಆತನು ಈ ಸಾಮ್ಯವನ್ನು ಕೂಡ ಹೇಳಿದನು: ಒಬ್ಬಾನೊಬ್ಬ ಮನುಷ್ಯನಿಗೆ ತನ್ನ ದ್ರಾಕ್ಷೇತೋಟದಲ್ಲಿ ನೆಡಲ್ಪಟ್ಟಿದ್ದ ಒಂದು ಅಂಜೂರದ ಮರವಿತ್ತು; ಅವನು ಬಂದು ಅದರಲ್ಲಿ ಫಲವನ್ನು ಹುಡುಕಿದಾಗ ಒಂದೂ ಸಿಕ್ಕಲಿಲ್ಲ.
ಲೂಕನು 13 : 7 (KNV)
ಆಗ ಅವನು ತನ್ನ ದ್ರಾಕ್ಷೇತೋಟ ಮಾಡು ವವನಿಗೆ--ಇಗೋ, ಈ ಮೂರು ವರುಷಗಳಿಂದ ನಾನು ಈ ಅಂಜೂರದ ಮರದಲ್ಲಿ ಫಲ ಹುಡುಕಿದರೂ ಒಂದನ್ನೂ ಕಂಡುಕೊಳ್ಳಲಿಲ್ಲ; ಇದನ್ನು ಕಡಿದುಹಾಕು; ಭೂಮಿಗೆ ಇದು ಯಾಕೆ ಭಾರವಾಗಿರಬೇಕು ಎಂದು ಹೇಳಿದನು.
ಲೂಕನು 13 : 8 (KNV)
ಆದರೆ ಅವನು ಪ್ರತ್ಯುತ್ತರವಾಗಿ ಅವ ನಿಗೆ--ಒಡೆಯನೇ, ನಾನು ಅದರ ಸುತ್ತಲೂ ಅಗೆದು ಗೊಬ್ಬರ ಹಾಕುವ ವರೆಗೆ ಈ ವರುಷವೂ ಇದನ್ನು ಬಿಡು;
ಲೂಕನು 13 : 9 (KNV)
ಇದು ಫಲ ಫಲಿಸಿದರೆ ಸರಿ; ಇಲ್ಲವಾದರೆ ನೀನು ಇದನ್ನು ಕಡಿದುಹಾಕಬಹುದು ಅಂದನು.
ಲೂಕನು 13 : 10 (KNV)
ಆತನು ಸಬ್ಬತ್ತಿನಲ್ಲಿ ಸಭಾಮಂದಿರದಲ್ಲಿ ಬೋಧಿ ಸುತ್ತಾ ಇದ್ದನು.
ಲೂಕನು 13 : 11 (KNV)
ಆಗ ಇಗೋ, ಹದಿನೆಂಟು ವರುಷ ಗಳಿಂದಲೂ ದುರಾತ್ಮನಿಂದ ರೋಗ ಪೀಡಿತಳಾಗಿ ನಡುಬೊಗ್ಗಿ ಹೋಗಿದ್ದ ಒಬ್ಬ ಸ್ತ್ರೀಯು ಅಲ್ಲಿ ಇದ್ದಳು; ಅವಳು ಯಾವ ರೀತಿಯಲ್ಲಿಯೂ ತನ್ನಷ್ಟಕ್ಕೆ ತಾನೇ ನೆಟ್ಟಗೆ ನಿಲ್ಲಲಾರದೆ ಇದ್ದಳು.
ಲೂಕನು 13 : 12 (KNV)
ಯೇಸು ಆಕೆಯನ್ನು ನೋಡಿ ಹತ್ತಿರಕ್ಕೆ ಕರೆದು ಆಕೆಗೆ--ಸ್ತ್ರೀಯೇ, ನೀನು ಈ ನಿನ್ನ ರೋಗದಿಂದ ಬಿಡುಗಡೆಯಾಗಿದ್ದೀ ಎಂದು ಹೇಳಿ
ಲೂಕನು 13 : 13 (KNV)
ಆತನು ಆಕೆಯ ಮೇಲೆ ತನ್ನ ಕೈಗಳನ್ನು ಇಟ್ಟನು; ಕೂಡಲೆ ಆಕೆಯು ನೆಟ್ಟಗಾಗಿ ದೇವರನ್ನು ಮಹಿಮೆಪಡಿಸಿದಳು.
ಲೂಕನು 13 : 14 (KNV)
ಯೇಸು ಸಬ್ಬತ್ ದಿನದಲ್ಲಿ ಸ್ವಸ್ಥಪಡಿಸಿದ ಕಾರಣ ಸಭಾಮಂದಿರದ ಅಧಿಕಾರಿಯು ಕೋಪದಿಂದ ಜನರಿಗೆ--ಆರು ದಿವಸಗಳಲ್ಲಿ ಮನು ಷ್ಯರು ಕೆಲಸ ಮಾಡತಕ್ಕದ್ದು. ಆದದರಿಂದ ಅವುಗಳಲ್ಲಿ ಅವರು ಬಂದು ಸ್ವಸ್ಥತೆ ಹೊಂದಲಿ; ಸಬ್ಬತ್ ದಿನದಲ್ಲಿ ಬೇಡ ಅಂದನು.
ಲೂಕನು 13 : 15 (KNV)
ಅದಕ್ಕೆ ಕರ್ತನು ಪ್ರತ್ಯುತ್ತರವಾಗಿ ಅವನಿಗೆ--ಕಪಟಿಯೇ, ನಿಮ್ಮಲ್ಲಿ ಪ್ರತಿಯೊಬ್ಬನು ಸಬ್ಬತ್ತಿನಲ್ಲಿ ತನ್ನ ಎತ್ತನ್ನಾಗಲಿ ಇಲ್ಲವೆ ಕತ್ತೆಯನ್ನಾಗಲಿ ಕೊಟ್ಟಿಗೆಯಿಂದ ಬಿಡಿಸಿ ನೀರು ಕುಡಿಸುವದಕ್ಕಾಗಿ ಹೋಗುವನಲ್ಲವೇ?
ಲೂಕನು 13 : 16 (KNV)
ಹಾಗಾದರೆ ಇಗೋ, ಅಬ್ರ ಹಾಮನ ಮಗಳಾದ ಈ ಸ್ತ್ರೀಯನ್ನು ಹದಿನೆಂಟು ವರುಷಗಳಿಂದ ಸೈತಾನನು ಕಟ್ಟಿಹಾಕಿದ ಈ ಬಂಧನ ದಿಂದ ಸಬ್ಬತ್ ದಿನದಲ್ಲಿ ಬಿಡಿಸಬಾರದೋ ಅಂದನು.
ಲೂಕನು 13 : 17 (KNV)
ಆತನು ಇವುಗಳನ್ನು ಹೇಳುತ್ತಿರುವಾಗ ಆತನ ವಿರೋಧಿಗಳೆಲ್ಲರೂ ನಾಚಿಕೆಪಟ್ಟರು; ಆದರೆ ಜನರೆಲ್ಲಾ ಆತನಿಂದ ನಡೆದ ಎಲ್ಲಾ ಮಹತ್ತಾದ ಕಾರ್ಯಗಳಿಗಾಗಿ ಸಂತೋಷಪಟ್ಟರು.
ಲೂಕನು 13 : 18 (KNV)
ಇದಲ್ಲದೆ ಆತನು--ದೇವರ ರಾಜ್ಯವು ಯಾವ ದಕ್ಕೆ ಹೋಲಿಕೆಯಾಗಿದೆ? ನಾನು ಯಾವದಕ್ಕೆ ಅದನ್ನು ಹೋಲಿಸಲಿ?
ಲೂಕನು 13 : 19 (KNV)
ಅದು ಒಬ್ಬ ಮನುಷ್ಯನು ಸಾಸಿವೆಕಾಳನ್ನು ತೆಗೆದುಕೊಂಡು ಹೋಗಿ ತನ್ನ ತೋಟ ದಲ್ಲಿ ಹಾಕಿದ್ದಕ್ಕೆ ಹೋಲಿಕೆಯಾಗಿದೆ; ಅದು ಬೆಳೆದು ಒಂದು ದೊಡ್ಡ ಮರವಾಯಿತು; ಆಕಾಶದ ಪಕ್ಷಿಗಳು ಅದರ ಕೊಂಬೆಗಳಲ್ಲಿ ವಾಸಮಾಡಿದವು ಅಂದನು.
ಲೂಕನು 13 : 20 (KNV)
ಆತನು ತಿರಿಗಿ--ದೇವರ ರಾಜ್ಯವನ್ನು ಯಾವದಕ್ಕೆ ಹೋಲಿಸಲಿ?
ಲೂಕನು 13 : 21 (KNV)
ಒಬ್ಬ ಸ್ತ್ರೀಯು ಹುಳಿಯನ್ನು ತಕ್ಕೊಂಡು ಮೂರು ಸೇರು ಹಿಟ್ಟೆಲ್ಲವೂ ಹುಳಿಯಾಗುವ ತನಕ ಅದರಲ್ಲಿ ಅಡಗಿಸಿಟ್ಟ ಹುಳಿಗೆ ಅದು ಹೋಲಿಕೆ ಯಾಗಿದೆ ಅಂದನು.
ಲೂಕನು 13 : 22 (KNV)
ಆತನು ಪಟ್ಟಣಗಳನ್ನೂ ಹಳ್ಳಿಗಳನ್ನೂ ಹಾದು, ಬೋಧಿಸುತ್ತಾ ಯೆರೂಸಲೇಮಿನ ಕಡೆಗೆ ಪ್ರಯಾಣ ಮಾಡಿದನು.
ಲೂಕನು 13 : 23 (KNV)
ಆಗ ಒಬ್ಬನು ಆತನಿಗೆ--ಕರ್ತನೇ, ರಕ್ಷಣೆ ಹೊಂದುವವರು ಸ್ವಲ್ಪ ಜನರೋ ಎಂದು ಕೇಳಲು ಆತನು ಅವರಿಗೆ--
ಲೂಕನು 13 : 24 (KNV)
ಇಕ್ಕಟ್ಟಾದ ಬಾಗಲಿನಿಂದ ಒಳಗೆ ಪ್ರವೇಶಿಸುವದಕ್ಕೆ ಪ್ರಯಾಸಪಡಿರಿ; ಯಾಕಂ ದರೆ ಅನೇಕರು ಒಳಗೆ ಪ್ರವೇಶಿಸುವದಕ್ಕೆ ಪ್ರಯತ್ನಿಸಿ ದರೂ ಆಗುವದಿಲ್ಲ ಎಂದು ನಾನು ನಿಮಗೆ ಹೇಳು ತ್ತೇನೆ.
ಲೂಕನು 13 : 25 (KNV)
ಮನೇಯಜಮಾನನು ಒಂದು ಸಾರಿ ಎದ್ದು ಬಾಗಲನ್ನು ಮುಚ್ಚಿಕೊಂಡರೆ ನೀವು ಹೊರಗೆ ನಿಂತು ಕೊಂಡು ಬಾಗಲನ್ನು ತಟ್ಟುತ್ತಾ--ಕರ್ತನೇ, ಕರ್ತನೇ, ನಮಗಾಗಿ ತೆರೆ ಎಂದು ಹೇಳುವದಕ್ಕೆ ಆರಂಭಿಸಿದಾಗ ಆತನು ನಿಮಗೆ ಪ್ರತ್ಯುತ್ತರವಾಗಿ--ನೀವು ಎಲ್ಲಿಯ ವರೋ ನಾನರಿಯೆ ಎಂದು ಹೇಳುವನು.
ಲೂಕನು 13 : 26 (KNV)
ಆಗ ನೀವು--ನಿನ್ನ ಸನ್ನಿಧಿಯಲ್ಲಿ ನಾವು ತಿಂದು ಕುಡಿದೆವು; ಮತ್ತು ನೀನು ನಮ್ಮ ಬೀದಿಗಳಲ್ಲಿ ಬೋಧಿಸಿದಿ ಎಂದು ಹೇಳಲಾರಂಭಿಸುವಿರಿ.
ಲೂಕನು 13 : 27 (KNV)
ಆದರೆ ಆತನು--ನೀವು ಎಲ್ಲಿ ಯವರೋ ನಾನರಿಯೆ; ಅಕ್ರಮ ಮಾಡುವವರಾದ ನೀವೆಲ್ಲರೂ ನನ್ನಿಂದ ಹೊರಟುಹೋಗಿರಿ ಎಂದು ಹೇಳುವನೆಂದು ನಾನು ನಿಮಗೆ ಹೇಳುತ್ತೇನೆ.
ಲೂಕನು 13 : 28 (KNV)
ಆದರೆ ನೀವು ಅಬ್ರಹಾಮ ಇಸಾಕ ಯಾಕೋಬ ಮತ್ತು ಎಲ್ಲಾ ಪ್ರವಾದಿಗಳು ದೇವರರಾಜ್ಯದಲ್ಲಿ ಇರುವದನ್ನೂ ನೀವು ಮಾತ್ರ ಹೊರಗೆ ದೊಬ್ಬಲ್ಪಟ್ಟಿರುವದನ್ನೂ ನೋಡು ವಾಗ ಅಲ್ಲಿ ನಿಮಗೆ ಗೋಳಾಟವೂ ಹಲ್ಲುಕಡಿ ಯೋಣವೂ ಇರುವವು.
ಲೂಕನು 13 : 29 (KNV)
ಇದಲ್ಲದೆ ಪೂರ್ವ ಪಶ್ಚಿಮ ಉತ್ತರ ದಕ್ಷಿಣಗಳಿಂದ ಅವರು ಬಂದು ದೇವರ ರಾಜ್ಯದಲ್ಲಿ ಕೂತುಕೊಳ್ಳುವರು.
ಲೂಕನು 13 : 30 (KNV)
ಆಗ ಇಗೋ, ಕೊನೆಯವರು ಮೊದಲನೆಯವರಾಗುವರು; ಮೊದ ಲನೆಯವರು ಕೊನೆಯವರಾಗುವರು ಎಂದು ಹೇಳಿದನು.
ಲೂಕನು 13 : 31 (KNV)
ಅದೇ ದಿನದಲ್ಲಿ ಫರಿಸಾಯರಲ್ಲಿ ಕೆಲವರು ಆತನ ಬಳಿಗೆ ಬಂದು--ನೀನು ಇಲ್ಲಿಂದ ಹೊರಟುಹೋಗು; ಯಾಕಂದರೆ ಹೆರೋದನು ನಿನ್ನನ್ನು ಕೊಲ್ಲುವನು ಎಂದು ಆತನಿಗೆ ಹೇಳಿದರು.
ಲೂಕನು 13 : 32 (KNV)
ಅದಕ್ಕೆ ಆತನು ಅವರಿಗೆ--ಇಗೋ, ನಾನು ಈ ದಿವಸ ಮತ್ತು ನಾಳೆ ದೆವ್ವಗಳನ್ನು ಬಿಡಿಸಿ ಸ್ವಸ್ಥಮಾಡುತ್ತೇನೆ; ಮೂರನೆಯ ದಿನದಲ್ಲಿ ನಾನು ಸಿದ್ಧಿಗೆ ಬರುತ್ತೇನೆ ಎಂದು ನೀವು ಹೋಗಿ ಆ ನರಿಗೆ ಹೇಳಿರಿ.
ಲೂಕನು 13 : 33 (KNV)
ಆದಾಗ್ಯೂ ಈ ದಿವಸ ನಾಳೆ ಮತ್ತು ನಾಡದ್ದು ನಾನು ಸಂಚರಿಸಲೇಬೇಕು; ಯಾಕಂದರೆ ಒಬ್ಬ ಪ್ರವಾದಿಯು ಯೆರೂಸಲೇಮಿನ ಹೊರಗೆ ಕೊಲ್ಲಲ್ಪಡಲಾರನು.
ಲೂಕನು 13 : 34 (KNV)
ಓ ಯೆರೂಸಲೇಮೇ,ಯೆರೂಸಲೇಮೇ, ಪ್ರವಾದಿಗಳನ್ನು ಕೊಲ್ಲುವವಳೇ, ನಿನ್ನ ಬಳಿಗೆ ಕಳುಹಿಸಲ್ಪಟ್ಟವರಿಗೆ ಕಲ್ಲೆಸೆಯುವವಳೇ, ಕೋಳಿಯು ತನ್ನ ಮರಿಗಳನ್ನು ತನ್ನ ರೆಕ್ಕೆಗಳ ಕೆಳಗೆ ಕೂಡಿಸುವಂತೆ ನಾನು ನಿನ್ನ ಮಕ್ಕಳನ್ನು ಎಷ್ಟೋ ಸಾರಿ ಕೂಡಿಸಬೇಕೆಂದಿದ್ದೆನು; ಆದರೆ ನಿನಗೆ ಅದು ಮನಸ್ಸಿ
ಲೂಕನು 13 : 35 (KNV)
ಇಗೋ, ನಿಮ್ಮ ಮನೆಯು ಹಾಳಾಗಿ ನಿಮಗೆ ಬಿಡಲ್ಪಟ್ಟಿದೆ; ಕರ್ತನ ಹೆಸರಿನಲ್ಲಿ ಬರುವಾತನು ಧನ್ಯನು ಎಂದು ನೀವು ಹೇಳುವ ಸಮಯವು ಬರುವ ತನಕ ನೀವು ನನ್ನನ್ನು ನೋಡುವದೇ ಇಲ್ಲ ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ ಅಂದನು.
❮
❯