ಮಾರ್ಕನು 8 : 1 (KNV)
ಆ ದಿವಸಗಳಲ್ಲಿ (ಯೇಸುವನ್ನು ಹಿಂಬಾಲಿಸುತ್ತಿದ್ದ) ದೊಡ್ಡ ಜನಸಮೂಹಕ್ಕೆ ಊಟಕ್ಕೇನೂ ಇರಲಿಲ್ಲ. ಆಗ ಯೇಸು ತನ್ನ ಶಿಷ್ಯರನ್ನು ಹತ್ತಿರಕ್ಕೆ ಕರೆದು ಅವರಿಗೆ--
ಮಾರ್ಕನು 8 : 2 (KNV)
ಜನ ಸಮೂಹವನ್ನು ನಾನು ಕನಿಕರಿಸುತ್ತೇನೆ; ಯಾಕಂದರೆ ಮೂರು ದಿನ ಗಳಿಂದ ಇವರು ನನ್ನೊಂದಿಗಿದ್ದಾರೆ ಮತ್ತು ಅವರಿಗೆ ಊಟಕ್ಕೇನೂ ಇಲ್ಲ.
ಮಾರ್ಕನು 8 : 3 (KNV)
ನಾನು ಅವರನ್ನು ಉಪವಾಸ ವಾಗಿ ಅವರ ಮನೆಗಳಿಗೆ ಕಳುಹಿಸಿದರೆ ದಾರಿಯಲ್ಲಿ ಬಳಲಿ ಹೋಗುವರು; ಯಾಕಂದರೆ ಅವರಲ್ಲಿ ಕೆಲ ವರು ದೂರದಿಂದ ಬಂದಿದ್ದಾರೆ ಅಂದನು.
ಮಾರ್ಕನು 8 : 4 (KNV)
ಅದಕ್ಕೆ ಆತನ ಶಿಷ್ಯರು ಪ್ರತ್ಯುತ್ತರವಾಗಿ ಆತನಿಗೆ-- ಒಬ್ಬನು ಈ ಅಡವಿಯಲ್ಲಿ ರೊಟ್ಟಿಯಿಂದ ಈ ಜನರನ್ನು ಎಲ್ಲಿಂದ ತೃಪ್ತಿಪಡಿಸಾನು ಅಂದರು.
ಮಾರ್ಕನು 8 : 5 (KNV)
ಆತನು ಅವರಿಗೆ--ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ ಎಂದು ಕೇಳಿದ್ದಕ್ಕೆ ಅವರು --ಏಳು ರೊಟ್ಟಿಗಳು ಇವೆ ಅಂದರು.
ಮಾರ್ಕನು 8 : 6 (KNV)
ಆಗ ಜನರು ನೆಲದ ಮೇಲೆ ಕೂತುಕೊಳ್ಳುವಂತೆ ಆತನು ಅಪ್ಪಣೆ ಕೊಟ್ಟು ಆ ಏಳು ರೊಟ್ಟಿಗಳನ್ನು ತಕ್ಕೊಂಡು ಸ್ತೋತ್ರ ಮಾಡಿ ಮುರಿದು ಜನರಿಗೆ ಹಂಚುವದಕ್ಕಾಗಿ ತನ್ನ ಶಿಷ್ಯರಿಗೆ ಕೊಟ್ಟನು; ಅವರು ಜನರಿಗೆ ಹಂಚಿದರು.
ಮಾರ್ಕನು 8 : 7 (KNV)
ಇದಲ್ಲದೆ ಅವರಲ್ಲಿ ಕೆಲವು ಸಣ್ಣ ವಿಾನುಗಳಿದ್ದವು; ಆತನು ಅವುಗಳನ್ನೂ ಆಶೀರ್ವದಿಸಿ ಅವರಿಗೆ ಹಂಚು ವಂತೆ ಆಜ್ಞಾಪಿಸಿದನು.
ಮಾರ್ಕನು 8 : 8 (KNV)
ಅವರೆಲ್ಲರೂ ತಿಂದು ತೃಪ್ತರಾ ದರು; ಮುರಿದ ಮಿಕ್ಕತುಂಡುಗಳನ್ನು ಅವರು ಏಳು ಪುಟ್ಟಿ ತುಂಬಿದರು.
ಮಾರ್ಕನು 8 : 9 (KNV)
ಊಟಮಾಡಿದವರು ಸುಮಾರು ನಾಲ್ಕು ಸಾವಿರ ಮಂದಿ; ಆತನು ಅವರನ್ನು ಕಳುಹಿಸಿ ಬಿಟ್ಟನು.
ಮಾರ್ಕನು 8 : 10 (KNV)
ಕೂಡಲೆ ಆತನು ತನ್ನ ಶಿಷ್ಯರೊಂದಿಗೆ ಒಂದು ದೋಣಿಯನ್ನು ಹತ್ತಿದಲ್ಮನೂಥ ಭಾಗಗಳಿಗೆ ಬಂದನು.
ಮಾರ್ಕನು 8 : 11 (KNV)
ಆಗ ಫರಿಸಾಯರು ಬಂದು ಆತನನ್ನು ಶೋಧಿಸು ವದಕ್ಕಾಗಿ ಆಕಾಶದಲ್ಲಿ ತಮಗೆ ಒಂದು ಸೂಚಕ ಕಾರ್ಯವನ್ನು ಮಾಡಬೇಕೆಂದು ಕೇಳಿ ಆತನೊಂದಿಗೆ ತರ್ಕಿಸುವದಕ್ಕೆ ಆರಂಭಿಸಿದರು.
ಮಾರ್ಕನು 8 : 12 (KNV)
ಆತನು ತನ್ನ ಆತ್ಮದಲ್ಲಿ ದೀರ್ಘವಾಗಿ ನಿಟ್ಟುಸಿರುಬಿಟ್ಟು--ಈ ಸಂತ ತಿಯು ಸೂಚಕಕಾರ್ಯವನ್ನು ಹುಡುಕುವದು ಯಾಕೆ? ಈ ಸಂತತಿಗೆ ಯಾವ ಸೂಚಕಕಾರ್ಯವೂ ಕೊಡಲ್ಪಡು ವದಿಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ ಅಂದನು.
ಮಾರ್ಕನು 8 : 13 (KNV)
ಆತನು ಅವರನ್ನು ಬಿಟ್ಟು ತಿರಿಗಿ ದೋಣಿಯನ್ನು ಹತ್ತಿ ಆಚೇದಡಕ್ಕೆ ಹೊರಟು ಹೋದನು.
ಮಾರ್ಕನು 8 : 14 (KNV)
ಆಗ ಶಿಷ್ಯರು ರೊಟ್ಟಿಯನ್ನು ತಕ್ಕೊಳ್ಳುವದಕ್ಕೆ ಮರೆತಿದ್ದರು; ಇದಲ್ಲದೆ ದೋಣಿಯಲ್ಲಿ ಅವರಿಗೆ ಒಂದು ರೊಟ್ಟಿಗಿಂತ ಹೆಚ್ಚೇನೂ ಇರಲಿಲ್ಲ.
ಮಾರ್ಕನು 8 : 15 (KNV)
ಆತನು ಅವರಿಗೆ--ಫರಿಸಾಯರ ಹುಳಿಯ ವಿಷಯ ದಲ್ಲಿಯೂ ಹೆರೋದನ ಹುಳಿಯ ವಿಷಯದಲ್ಲಿಯೂ ನೀವು ಎಚ್ಚರಿಕೆಯಿಂದ ಇರ್ರಿ ಎಂದು ಖಂಡಿತವಾಗಿ ಹೇಳಿದನು.
ಮಾರ್ಕನು 8 : 16 (KNV)
ಆಗ ಅವರು ತಮ್ಮೊಳಗೆ--ನಮಗೆ ರೊಟ್ಟಿ ಇಲ್ಲದಿರುವದರಿಂದಲೇ ಹೀಗೆ ಹೇಳುತ್ತಾನೆಂದು ಅವರು ತರ್ಕಿಸಿಕೊಂಡರು.
ಮಾರ್ಕನು 8 : 17 (KNV)
ಯೇಸು ಅದನ್ನು ತಿಳಿದುಕೊಂಡು ಅವರಿಗೆ ಹೇಳಿದ್ದೇನಂದರೆನಿಮ್ಮಲ್ಲಿ ರೊಟ್ಟಿ ಇಲ್ಲವೆಂದು ಯಾಕೆ ತರ್ಕಿಸಿಕೊಳ್ಳುತ್ತೀರಿ? ನೀವು ಇನ್ನೂ ಗ್ರಹಿಸದೆಯೂ ತಿಳಿದುಕೊಳ್ಳದೆಯೂ ಇದ್ದೀರೋ? ನೀವು ನಿಮ್ಮ ಹೃದಯವನ್ನು ಇನ್ನೂ ಕಠಿಣಮಾಡಿಕೊಂಡಿದ್ದಿರೋ?
ಮಾರ್ಕನು 8 : 18 (KNV)
ಕಣ್ಣುಗಳಿದ್ದೂ ನೀವು ನೋಡುವದಿಲ್ಲವೋ? ಕಿವಿಗಳಿದ್ದೂ ನೀವು ಕೆಳುವ ದಿಲ್ಲವೋ? ಮತ್ತು ನೀವು ಜ್ಞಾಪಕಮಾಡಿಕೊಳ್ಳುವದಿ ಲ್ಲವೋ?
ಮಾರ್ಕನು 8 : 19 (KNV)
ನಾನು ಆ ಐದು ರೊಟ್ಟಿಗಳನ್ನು ಐದು ಸಾವಿರ ಜನರ ಮಧ್ಯದಲ್ಲಿ ಮುರಿದಾಗ ಎಷ್ಟು ಪುಟ್ಟಿಗಳ ತುಂಬ ರೊಟ್ಟಿಯ ತುಂಡುಗಳನ್ನು ಎತ್ತಿದಿರಿ ಎಂದು ಕೇಳಲು ಅವರು ಆತನಿಗೆ--ಹನ್ನೆರಡು ಅಂದರು.
ಮಾರ್ಕನು 8 : 20 (KNV)
ಮತ್ತು ಆ ಏಳು ರೊಟ್ಟಿಗಳನ್ನು ನಾಲ್ಕು ಸಾವಿರ ಜನರ ಮಧ್ಯದಲ್ಲಿ ಮುರಿದಾಗ ಎಷ್ಟು ಪುಟ್ಟಿಗಳ ತುಂಬ ತುಂಡುಗಳನ್ನು ಎತ್ತಿದಿರಿ ಎಂದು ಕೇಳಲು ಅವರು--ಏಳು ಅಂದರು.
ಮಾರ್ಕನು 8 : 21 (KNV)
ಯೇಸು ಅವರಿಗೆ--ಹಾಗಾದರೆ ನೀವು ಗ್ರಹಿಸದೆ ಇರುವದು ಹೇಗೆ ಎಂದು ಹೇಳಿದನು.
ಮಾರ್ಕನು 8 : 22 (KNV)
ತರುವಾಯ ಆತನು ಬೇತ್ಸಾಯಿದಕ್ಕೆ ಬಂದಾಗ ಅವರು ಒಬ್ಬ ಕುರುಡನನ್ನು ಆತನ ಬಳಿಗೆ ತಂದು ಅವನನ್ನು ಮುಟ್ಟಬೇಕೆಂದು ಆತನನ್ನು ಬೇಡಿಕೊಂಡರು.
ಮಾರ್ಕನು 8 : 23 (KNV)
ಆತನು ಆ ಕುರುಡನ ಕೈಹಿಡಿದು ಊರಿನ ಹೊರಗೆ ಕರಕೊಂಡು ಹೋಗಿ ಅವನ ಕಣ್ಣುಗಳ ಮೇಲೆ ಉಗುಳಿ ತನ್ನ ಕೈಗಳನ್ನು ಅವನ ಮೇಲೆ ಇಟ್ಟು ಏನಾದರೂ ಕಾಣುತ್ತದೋ ಎಂದು ಅವನನ್ನು ಕೇಳಿದನು.
ಮಾರ್ಕನು 8 : 24 (KNV)
ಅವನು ಮೇಲಕ್ಕೆ ನೋಡಿ--ಮನುಷ್ಯರು ಮರಗಳ ಹಾಗೆ ನಡೆದಾಡುವದನ್ನು ನೋಡುತ್ತೇನೆ ಅಂದನು.
ಮಾರ್ಕನು 8 : 25 (KNV)
ತರುವಾಯ ಆತನು ತಿರಿಗಿ ಅವನ ಕಣ್ಣುಗಳ ಮೇಲೆ ತನ್ನ ಕೈಗಳನ್ನಿಟ್ಟು ಅವನು ಮೇಲಕ್ಕೆ ನೋಡುವಂತೆ ಮಾಡಿದನು; ಆಗ ಅವನು ಗುಣಹೊಂದಿದವನಾಗಿ ಪ್ರತಿ ಮನುಷ್ಯನನ್ನು ಸ್ಪಷ್ಟವಾಗಿ ನೋಡಿದನು.
ಮಾರ್ಕನು 8 : 26 (KNV)
ತರುವಾಯ ಆತನು ಅವನಿಗೆ--ನೀನು ಊರೊಳಕ್ಕೆ ಹೋಗಬೇಡ ಇಲ್ಲವೆ ಊರಲ್ಲಿ ಯಾರಿಗೂ ಹೇಳಬೇಡ ಎಂದು ಹೇಳಿ ಅವನನ್ನು ಅವನ ಮನೆಗೆ ಕಳುಹಿಸಿ ಬಿಟ್ಟನು.
ಮಾರ್ಕನು 8 : 27 (KNV)
ತರುವಾಯ ಯೇಸುವೂ ಆತನ ಶಿಷ್ಯರೂ ಕೈಸ ರೈಯ ಫಿಲಿಪ್ಪಿ ಊರುಗಳಿಗೆ ಹೋದರು. ಆತನು ದಾರಿ ಯಲ್ಲಿ ತನ್ನ ಶಿಷ್ಯರಿಗೆ--ನಾನು ಯಾರೆಂದು ಜನರು ಅನ್ನುತ್ತಾರೆ ಎಂದು ಕೇಳಿದನು.
ಮಾರ್ಕನು 8 : 28 (KNV)
ಅವರು ಪ್ರತ್ಯುತ್ತರ ವಾಗಿ--ಬಾಪ್ತಿಸ್ಮ ಮಾಡಿಸುವ ಯೋಹಾನನು; ಮತ್ತೆ ಕೆಲವರು--ಎಲೀಯನು; ಇನ್ನು ಕೆಲವರು--ಪ್ರವಾದಿ ಗಳಲ್ಲಿ ಒಬ್ಬನು ಅನ್ನುತ್ತಾರೆ ಎಂದು ಹೇಳಿದರು.
ಮಾರ್ಕನು 8 : 29 (KNV)
ಅದಕ್ಕೆ ಆತನು ಅವರಿಗೆ -- ಆದರೆ ನಾನು ಯಾರೆಂದು ನೀವು ಅನ್ನುತ್ತೀರಿ ಎಂದು ಕೇಳಲು ಪೇತ್ರನು ಪ್ರತ್ಯುತ್ತರವಾಗಿ ಆತನಿಗೆ--ನೀನು ಕ್ರಿಸ್ತನೇ ಅಂದನು.
ಮಾರ್ಕನು 8 : 30 (KNV)
ತನ್ನ ವಿಷಯ ವಾಗಿ ಅವರು ಯಾರಿಗೂ ಹೇಳಬಾರದೆಂದು ಆತನು ಅವರಿಗೆ ಖಂಡಿತವಾಗಿ ಹೇಳಿದನು.
ಮಾರ್ಕನು 8 : 31 (KNV)
ಮನುಷ್ಯ ಕುಮಾರನು ಅನೇಕ ಶ್ರಮೆಗಳನ್ನು ಅನುಭವಿಸಿ ಹಿರಿಯ ರಿಂದಲೂ ಪ್ರಧಾನ ಯಾಜಕರಿಂದಲೂ ಶಾಸ್ತ್ರಿಗಳಿಂ ದಲೂ ತಿರಸ್ಕರಿಸಲ್ಪಟ್ಟವನಾಗಿ ಕೊಲ್ಲಲ್ಪಟ್ಟು ಮೂರು ದಿವಸಗಳಾದ ಮೇಲೆ ಏಳುವದು ಅವಶ್ಯವೆಂದು ಅವ ರಿಗೆ ಬೋಧಿಸಲಾರಂಭಿಸಿದನು.
ಮಾರ್ಕನು 8 : 32 (KNV)
ಆತನು ಆ ಮಾತನ್ನು ಸ್ಪಷ್ಟವಾಗಿ ಹೇಳಿದ್ದರಿಂದ ಪೇತ್ರನು ಆತನ ಕೈ ಹಿಡಿದು ಆತನನ್ನು ಗದರಿಸಲಾರಂಭಿಸಿದನು.
ಮಾರ್ಕನು 8 : 33 (KNV)
ಆದರೆ ಆತನು ತಿರುಗಿಕೊಂಡು ತನ್ನ ಶಿಷ್ಯರ ಕಡೆಗೆ ನೋಡಿ ಪೇತ್ರನನ್ನು ಗದರಿಸಿ--ಸೈತಾನನೇ ನನ್ನ ಹಿಂದೆ ಹೋಗು; ಯಾಕಂದರೆ ನೀನು ಯೋಚಿಸುವಂಥದ್ದು ದೇವರವುಗಳಲ್ಲ, ಆದರೆ ಮನುಷ್ಯರವುಗಳೇ ಎಂದು ಹೇಳಿದನು.
ಮಾರ್ಕನು 8 : 34 (KNV)
ಆತನು ಜನರನ್ನು ತನ್ನ ಶಿಷ್ಯರ ಕೂಡ ತನ್ನ ಬಳಿಗೆ ಕರೆದು ಅವರಿಗೆ--ಯಾವನಾದರೂ ನನ್ನ ಹಿಂದೆ ಬರುವದಾದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನನ್ನು ಹಿಂಬಾಲಿ ಸಲಿ.
ಮಾರ್ಕನು 8 : 35 (KNV)
ಯಾಕಂದರೆ ತನ್ನ ಪ್ರಾಣವನ್ನು ಉಳಿಸಿಕೊಳ್ಳ ಬೇಕೆಂದಿರುವ ಯಾವನಾದರೂ ಅದನ್ನು ಕಳಕೊಳ್ಳು ವನು; ಆದರೆ ನನ್ನ ನಿಮಿತ್ತವಾಗಿಯೂ ಸುವಾರ್ತೆಯ ನಿಮಿತ್ತವಾಗಿಯೂ ಯಾವನು ತನ್ನ ಪ್ರಾಣವನ್ನು ಕಳ ಕೊಳ್ಳುವನೋ ಅವನು ಅದನ್ನು ಉಳಿಸಿಕೊಳ್ಳುವನು.
ಮಾರ್ಕನು 8 : 36 (KNV)
ಒಬ್ಬ ಮನುಷ್ಯನು ಲೋಕವನ್ನೆಲ್ಲಾ ಸಂಪಾದಿಸಿ ಕೊಂಡರೂ ತನ್ನ ಸ್ವಂತ ಆತ್ಮವನ್ನು ನಷ್ಟಪಡಿಸಿಕೊಂಡರೆ ಅವನಿಗೆ ಲಾಭವೇನು?
ಮಾರ್ಕನು 8 : 37 (KNV)
ಇಲ್ಲವೆ ಒಬ್ಬನು ತನ್ನ ಆತ್ಮಕ್ಕೆ ಬದಲಾಗಿ ಏನು ಕೊಡುವನು?
ಮಾರ್ಕನು 8 : 38 (KNV)
ಆದದರಿಂದ ಯಾವನಾದರೂ ವ್ಯಭಿಚಾರಿಣಿಯಾದ ಈ ಪಾಪಿಷ್ಠ ಸಂತತಿಯಲ್ಲಿ ನನ್ನ ಮತ್ತು ನನ್ನ ಮಾತುಗಳ ವಿಷಯ ವಾಗಿ ನಾಚಿಕೊಳ್ಳುವನೋ ಅವನ ವಿಷಯದಲ್ಲಿ ಮನುಷ್ಯಕುಮಾರನು ಸಹ ತನ್ನ ತಂದೆಯ ಮಹಿಮೆ ಯಲ್ಲಿ ಪರಿಶುದ್ಧ ದೂತರೊಡನೆ ಬರುವಾಗ ನಾಚಿ ಕೊಳ್ಳುವನು ಎಂದು ಹೇಳಿದನು.
❮
❯