ಮಾರ್ಕನು 15 : 1 (KNV)
ಬೆಳಗಾದ ಕೂಡಲೆ ಪ್ರಧಾನ ಯಾಜಕರು ಹಿರಿಯರ ಶಾಸ್ತ್ರಿಗಳ ಮತ್ತು ಸಭೆಯವ ರೆಲ್ಲರೊಂದಿಗೆ ಆಲೋಚನೆ ಮಾಡಿಕೊಂಡು ಯೇಸು ವನ್ನು ಕಟ್ಟಿತೆಗೆದುಕೊಂಡು ಹೋಗಿ ಪಿಲಾತನಿಗೆ ಒಪ್ಪಿಸಿ ದರು.
ಮಾರ್ಕನು 15 : 2 (KNV)
ಆಗ ಪಿಲಾತನು ಆತನಿಗೆ--ನೀನು ಯೆಹೂದ್ಯರ ಅರಸನೋ ಎಂದು ಕೇಳಲು ಆತನು ಪ್ರತ್ಯುತ್ತರ ವಾಗಿ--ನೀನೇ ಅದನ್ನು ಹೇಳಿದ್ದೀ ಅಂದನು.
ಮಾರ್ಕನು 15 : 3 (KNV)
ಇದ ಲ್ಲದೆ ಪ್ರಧಾನಯಾಜಕರು ಆತನ ಮೇಲೆ ಅನೇಕ ದೂರುಗಳನ್ನು ಹೇಳಿದರು; ಆದರೆ ಆತನು ಏನೂ ಉತ್ತರ ಕೊಡಲಿಲ್ಲ.
ಮಾರ್ಕನು 15 : 4 (KNV)
ಆಗ ಪಿಲಾತನು ತಿರಿಗಿ ಆತ ನಿಗೆ--ನೀನು ಏನೂ ಉತ್ತರಕೊಡುವದಿಲ್ಲವೋ? ಇವರು ನಿನಗೆ ವಿರೋಧವಾಗಿ ಎಷ್ಟು ದೂರುಗಳನ್ನು ಹೇಳುತ್ತಾರೆ ನೋಡು ಎಂದು ಕೇಳಿದನು.
ಮಾರ್ಕನು 15 : 5 (KNV)
ಆದರೂ ಯೇಸು ಉತ್ತರಕೊಡದೆ ಇರಲಾಗಿ ಪಿಲಾತನು ಆಶ್ಚರ್ಯಪಟ್ಟನು.
ಮಾರ್ಕನು 15 : 6 (KNV)
ಆ ಹಬ್ಬದಲ್ಲಿ ಜನರು ಬೇಡಿ ಕೊಂಡ ಒಬ್ಬ ಸೆರೆಯವನನ್ನು ಅವರಿಗೆ ಬಿಟ್ಟುಕೊಡುವ ಪದ್ಧತಿಯಿತ್ತು.
ಮಾರ್ಕನು 15 : 7 (KNV)
ಆಗ ದಂಗೆ ಮಾಡಿದವರೊಂದಿಗೆ ಬಂಧಿಸಲ್ಪಟ್ಟು ಆ ದಂಗೆಯಲ್ಲಿ ಕೊಲೆ ಮಾಡಿದ ಬರಬ್ಬ ನೆಂಬ ಹೆಸರುಳ್ಳವನೊಬ್ಬನು ಅಲ್ಲಿ ಇದ್ದನು.
ಮಾರ್ಕನು 15 : 8 (KNV)
ಆಗ ಜನಸಮೂಹವು ಗಟ್ಟಿಯಾಗಿ ಕೂಗುತ್ತಾ ಅವನು ತಮಗೆ ಯಾವಾಗಲೂ ಮಾಡಿದ ಪ್ರಕಾರ ಮಾಡ ಬೇಕೆಂದು ಬೇಡಿಕೊಳ್ಳಲಾರಂಭಿ ಸಿದರು.
ಮಾರ್ಕನು 15 : 9 (KNV)
ಆದರೆ ಪಿಲಾತನು ಪ್ರತ್ಯುತ್ತರವಾಗಿ ಅವರಿಗೆ--ಯೆಹೂದ್ಯರ ಅರಸನನ್ನು ನಿಮಗಾಗಿ ನಾನು ಬಿಡಿಸಬೇಕೋ ಎಂದು ಕೇಳಿದನು.
ಮಾರ್ಕನು 15 : 10 (KNV)
ಯಾಕಂದರೆ ಪ್ರಧಾನಯಾಜಕರು ಹೊಟ್ಟೇಕಿಚ್ಚಿನಿಂದ ಆತನನ್ನು ಒಪ್ಪಿಸಿಕೊಟ್ಟಿದ್ದರೆಂದು ಅವನಿಗೆ ತಿಳಿದಿತ್ತು.
ಮಾರ್ಕನು 15 : 11 (KNV)
ಆದರೆ ಪ್ರಧಾನಯಾಜಕರು ತಮಗೆ ಬರಬ್ಬನನ್ನೇ ಬಿಟ್ಟುಕೊಡ ಬೇಕೆಂದು ಜನರನ್ನು ಪ್ರೇರೇಪಿಸಿದರು.
ಮಾರ್ಕನು 15 : 12 (KNV)
ಆಗ ಪಿಲಾತನು ಪ್ರತ್ಯುತ್ತರವಾಗಿ ಅವರಿಗೆ--ಹಾಗಾದರೆ ನೀವು ಯೆಹೂದ್ಯರ ಅರಸ ನೆಂದು ಕರೆಯುವ ಈತನಿಗೆ ನಾನೇನು ಮಾಡಬೇಕ ನ್ನುತ್ತೀರಿ ಎಂದು ತಿರಿಗಿ ಕೇಳಿದ್ದಕ್ಕೆ--
ಮಾರ್ಕನು 15 : 13 (KNV)
ಆತನನ್ನು ಶಿಲುಬೆಗೆ ಹಾಕಿಸು ಎಂದು ತಿರಿಗಿ ಅವರು ಕೂಗಿ ಕೊಂಡರು.
ಮಾರ್ಕನು 15 : 14 (KNV)
ಆಗ ಪಿಲಾತನು ಅವರಿಗೆ--ಯಾಕೆ? ಆತನು ಕೆಟ್ಟದ್ದೇನು ಮಾಡಿದನು ಎಂದು ಹೇಳಲು ಅವರು--ಆತನನ್ನು ಶಿಲುಬೆಗೆ ಹಾಕಿಸು ಎಂದು ಮತ್ತಷ್ಟು ಹೆಚ್ಚಾಗಿ ಕೂಗಿಕೊಂಡರು.
ಮಾರ್ಕನು 15 : 15 (KNV)
ಹೀಗೆ ಪಿಲಾತನು ಜನರನ್ನು ತೃಪ್ತಿಪಡಿಸಲು ಮನಸ್ಸುಳ್ಳವನಾಗಿ ಬರಬ್ಬನನ್ನು ಅವರಿಗೆ ಬಿಟ್ಟುಕೊಟ್ಟು ಯೇಸುವನ್ನು ಕೊರಡೆಯಿಂದ ಹೊಡಿಸಿ ಶಿಲುಬೆಗೆ ಹಾಕುವದಕ್ಕೆ ಒಪ್ಪಿಸಿದನು.
ಮಾರ್ಕನು 15 : 16 (KNV)
ತರುವಾಯ ಸೈನಿಕರು ಆತನನ್ನು ಪ್ರೇತೋ ರಿಯಂ ಎಂಬ ಮಂದಿರದೊಳಕ್ಕೆ ತೆಗೆದುಕೊಂಡು ಬಂದು ಸೈನಿಕರನ್ನೆಲ್ಲಾ ಒಟ್ಟಾಗಿ ಕರೆದರು.
ಮಾರ್ಕನು 15 : 17 (KNV)
ಅವರು ಆತನಿಗೆ ಊದಾ ಬಣ್ಣದ ವಸ್ತ್ರವನ್ನು ಹೊದಿಸಿ ಮುಳ್ಳಿನ ಕಿರೀಟವನ್ನು ಹೆಣೆದು ಆತನ ತಲೆಯ ಮೇಲೆ ಇಟು
ಮಾರ್ಕನು 15 : 18 (KNV)
ಆತನನ್ನು ವಂದಿಸುವದಕ್ಕೆ ಆರಂಭಿಸಿ--ಯೆಹೂ ದ್ಯರ ಅರಸನೇ, ನಿನಗೆ ವಂದನೆ ಅಂದರು.
ಮಾರ್ಕನು 15 : 19 (KNV)
ಅವರು ಬೆತ್ತದಿಂದ ಆತನ ತಲೆಯ ಮೇಲೆ ಹೊಡೆದು ಆತನ ಮೇಲೆ ಉಗುಳಿ ತಮ್ಮ ಮೊಣಕಾಲೂರಿ ಆತನಿಗೆ ನಮಸ್ಕರಿಸಿದರು.
ಮಾರ್ಕನು 15 : 20 (KNV)
ಹೀಗೆ ಅವರು ಆತನನ್ನು ಪರಿ ಹಾಸ್ಯಮಾಡಿದ ಮೇಲೆ ಊದಾ ಬಣ್ಣದ ಬಟ್ಟೆಯನ್ನು ಆತನಿಂದ ತೆಗೆದುಹಾಕಿ ಆತನ ಸ್ವಂತ ಬಟ್ಟೆಗಳನ್ನು ಆತನ ಮೇಲೆ ಹೊದಿಸಿ ಶಿಲುಬೆಗೆ ಹಾಕುವದಕ್ಕಾಗಿ ತಕ್ಕೊಂಡುಹೋದರು.
ಮಾರ್ಕನು 15 : 21 (KNV)
ಅಲೆಕ್ಸಾಂದ್ರ ಮತ್ತು ರೂಫ ಎಂಬವರ ತಂದೆಯಾದ ಕುರೇನ್ಯದ ಸೀಮೋನ ಎಂಬವನು ಗ್ರಾಮದಿಂದ ಬಂದು ಹಾದುಹೋಗುತ್ತಿರುವಾಗ ಆತನ ಶಿಲುಬೆಯನ್ನು ಹೊರುವಂತೆ ಅವರು ಅವನನ್ನು ಬಲವಂತ ಮಾಡಿದರು.
ಮಾರ್ಕನು 15 : 22 (KNV)
ಕಪಾಲ ಸ್ಥಳ ಎಂದರ್ಥವುಳ್ಳ ಗೊಲ್ಗೊಥಾ ಎಂಬ ಸ್ಥಳಕ್ಕೆ ಅವರು ಆತನನ್ನು ತೆಗೆದು ಕೊಂಡು ಬಂದರು.
ಮಾರ್ಕನು 15 : 23 (KNV)
ಅವರು ಆತನಿಗೆ ರಕ್ತಬೋಳ ಬೆರಸಿದ ದ್ರಾಕ್ಷಾರಸವನ್ನು ಕುಡಿಯಲುಕೊಟ್ಟರು. ಆದರೆ ಆತನು ಅದನ್ನು ತೆಗೆದುಕೊಳ್ಳಲಿಲ್ಲ.
ಮಾರ್ಕನು 15 : 24 (KNV)
ಅವರು ಆತನನ್ನು ಶಿಲುಬೆಗೆ ಹಾಕಿದ ಮೇಲೆ ಆತನ ಬಟ್ಟೆಗಳಿ ಗಾಗಿ ಚೀಟು ಹಾಕಿ ಪ್ರತಿಯೊಬ್ಬನು ಏನು ತಕ್ಕೊಳ್ಳ ಬೇಕೆಂದು ಅವುಗಳನ್ನು ಪಾಲುಮಾಡಿಕೊಂಡರು.
ಮಾರ್ಕನು 15 : 25 (KNV)
ಆತನನ್ನು ಶಿಲುಬೆಗೆ ಹಾಕಿದಾಗ ಮೂರನೆಯ ತಾಸಾಗಿತ್ತು.
ಮಾರ್ಕನು 15 : 26 (KNV)
ಯೆಹೂದ್ಯರ ಅರಸನು--ಎಂದು ಆತನ ಮೇಲೆ ಹೊರಿಸಿದ ಅಪರಾಧದ ಮೇಲ್ಬರಹವು ಬರೆಯಲ್ಪಟ್ಟಿತ್ತು.
ಮಾರ್ಕನು 15 : 27 (KNV)
ಇಬ್ಬರು ಕಳ್ಳರನ್ನು, ಒಬ್ಬನನ್ನು ಆತನ ಬಲಗಡೆಗೂ ಮತ್ತೊಬ್ಬನನ್ನು ಆತನ ಎಡ ಗಡೆಗೂ ಆತನೊಂದಿಗೆ ಅವರು ಶಿಲುಬೆಗೆ ಹಾಕಿ ದರು.
ಮಾರ್ಕನು 15 : 28 (KNV)
ಆಗ--ಆತನು ಅಪರಾಧಿಗಳೊಂದಿಗೆ ಎಣಿಸಲ್ಪಟ್ಟನು ಎಂಬ ಬರಹವು ನೆರವೇರಿತು.
ಮಾರ್ಕನು 15 : 29 (KNV)
ಇದ ಲ್ಲದೆ ಹಾದುಹೋಗುತ್ತಿದ್ದವರು ತಮ್ಮ ತಲೆಗಳನ್ನು ಅಲ್ಲಾಡಿಸಿ-ಹಾ! ದೇವಾಲಯವನ್ನು ಕೆಡವಿ ಮೂರು ದಿನಗಳಲ್ಲಿ ಕಟ್ಟುವವನೇ,
ಮಾರ್ಕನು 15 : 30 (KNV)
ನಿನ್ನನ್ನು ರಕ್ಷಿಸಿಕೊಂಡು ಶಿಲುಬೆಯಿಂದ ಕೆಳಗಿಳಿದುಬಾ ಎಂದು ಹೇಳಿ ಆತನನು ದೂಷಿಸಿದರು.
ಮಾರ್ಕನು 15 : 31 (KNV)
ಅದೇ ಪ್ರಕಾರ ಪ್ರಧಾನ ಯಾಜಕರು ಸಹ ಶಾಸ್ತ್ರಿಗಳೊಂದಿಗೆ ಆತನನ್ನು ಹಾಸ್ಯಮಾಡಿ--ಇವನು ಇತರರನ್ನು ರಕ್ಷಿಸಿದನು; ತನ್ನನ್ನು ತಾನೇ ರಕ್ಷಿಸಿಕೊಳ್ಳಲಾರನು.
ಮಾರ್ಕನು 15 : 32 (KNV)
ಇಸ್ರಾಯೇ ಲ್ಯರ ಅರಸನಾದ ಕ್ರಿಸ್ತನು ಈಗ ಶಿಲುಬೆಯಿಂದ ಇಳಿದು ಬರಲಿ; ಆಗ ನಾವು ನೋಡಿ ನಂಬುವೆವು ಎಂದು ತಮ್ಮಲ್ಲಿ ಅಂದುಕೊಂಡರು; ಆತನೊಂದಿಗೆ ಶಿಲುಬೆಗೆ ಹಾಕಲ್ಪಟ್ಟವರೂ ಆತನನ್ನು ದೂಷಿಸಿದರು.
ಮಾರ್ಕನು 15 : 33 (KNV)
ಆರನೇ ತಾಸಿನಿಂದ ಒಂಭತ್ತನೇ ತಾಸಿನವರೆಗೆ ದೇಶದ ಮೇಲೆಲ್ಲಾ ಕತ್ತಲೆ ಇತ್ತು.
ಮಾರ್ಕನು 15 : 34 (KNV)
ಒಂಭತ್ತ ನೆಯ ತಾಸಿನಲ್ಲಿ ಯೇಸು--ಎಲೋಹಿ, ಎಲೋಹಿ, ಲಮಾ ಸಬಕ್ತಾನೀ? ಅಂದರೆ ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈಬಿಟ್ಟಿದ್ದೀ ಎಂದು ಮಹಾಧ್ವನಿಯಿಂದ ಕೂಗಿದನು.
ಮಾರ್ಕನು 15 : 35 (KNV)
ಹತ್ತಿರದಲ್ಲಿ ನಿಂತಿದ್ದ ಕೆಲವರು ಅದನ್ನು ಕೇಳಿ--ಇಗೋ, ಈತನು ಎಲೀಯ ನನ್ನು ಕರೆಯುತ್ತಾನೆ ಅಂದರು.
ಮಾರ್ಕನು 15 : 36 (KNV)
ಆಗ ಒಬ್ಬನು ಓಡಿ ಹೋಗಿ ಸ್ಪಂಜನ್ನು ಹುಳಿರಸದಿಂದ ತುಂಬಿಸಿ ಒಂದು ಕೋಲಿಗೆ ಸಿಕ್ಕಿಸಿ ಆತನಿಗೆ ಕುಡಿಯುವದಕ್ಕೆ ಕೊಟ್ಟು-- ಬಿಡಿರಿ, ಎಲೀಯನ ಇವನನ್ನು ಕೆಳಗೆ ಇಳಿಸುವದಕ್ಕೆ ಬರುವನೋ ನೋಡೋಣ ಅಂದನು.
ಮಾರ್ಕನು 15 : 37 (KNV)
ಆದರೆ ಯೇಸು ಮಹಾಧ್ವನಿಯಿಂದ ಕೂಗಿ ಪ್ರಾಣಬಿಟ್ಟನು.
ಮಾರ್ಕನು 15 : 38 (KNV)
ಆಗ ದೇವಾಲಯದ ತೆರೆಯು ಮೇಲಿನಿಂದ ಕೆಳಗಿನವರೆಗೂ ಹರಿದು ಎರಡು ಭಾಗವಾಯಿತು.
ಮಾರ್ಕನು 15 : 39 (KNV)
ಆತನು ಹೀಗೆ ಕೂಗಿ ಪ್ರಾಣ ಬಿಟ್ಟದ್ದನ್ನು ಆತನ ಎದುರಿಗೆ ನಿಂತಿದ್ದ ಶತಾಧಿಪತಿಯು ನೋಡಿ-- ನಿಜವಾಗಿಯೂ ಈ ಮನುಷ್ಯನು ದೇವಕುಮಾರನಾಗಿ ದ್ದನು ಅಂದನು.
ಮಾರ್ಕನು 15 : 40 (KNV)
ಅಲ್ಲಿ ಸ್ತ್ರೀಯರು ಸಹ ದೂರದಿಂದ ನೋಡುತ್ತಿದ್ದರು. ಅವರಲ್ಲಿ ಮಗ್ದಲದ ಮರಿಯಳು, ಚಿಕ್ಕ ಯಾಕೋಬನ ಮತ್ತು ಯೋಸೆಯ ತಾಯಿಯಾದ ಮರಿಯಳು, ಸಲೋಮೆಯು ಇದ್ದರು.
ಮಾರ್ಕನು 15 : 41 (KNV)
(ಇದಲ್ಲದೆ ಆತನು ಗಲಿಲಾಯದಲ್ಲಿದ್ದಾಗ ಈ ಸ್ತ್ರೀಯರು ಸಹ ಆತನನ್ನು ಹಿಂಬಾಲಿಸಿ ಆತನಿಗೆ ಉಪಚರಿಸಿ ದವರು;) ಮತ್ತು ಆತನೊಂದಿಗೆ ಯೆರೂಸಲೇಮಿಗೆ ಬಂದಿದ್ದ ಇನ್ನೂ ಬೇರೆ ಅನೇಕ ಸ್ತ್ರೀಯರು ಇದ್ದರು.
ಮಾರ್ಕನು 15 : 42 (KNV)
ಆಗ ಸಂಜೆಯಾಗಿತ್ತು; ಅದು ಸಬ್ಬತ್ತಿನ ಮುಂಚಿನ ಸಿದ್ಧತೆಯ ದಿವಸವಾಗಿತ್ತು.
ಮಾರ್ಕನು 15 : 43 (KNV)
ಆ ಸಮಯದಲ್ಲಿ ಗೌರವವುಳ್ಳವನೂ ಆಲೋಚನಾ ಸಭೆಯವನೂ ದೇವರ ರಾಜ್ಯಕ್ಕಾಗಿ ಕಾಯುತ್ತಿದ್ದವನೂ ಆದ ಅರಿ ಮಥಾಯದ ಯೋಸೇಫನು ಧೈರ್ಯದಿಂದ ಪಿಲಾತನ ಬಳಿಗೆ ಹೋಗಿ ಯೇಸುವಿನ ದೇಹಕ್ಕಾಗಿ ಬೇಡಿ ಕೊಂಡನು.
ಮಾರ್ಕನು 15 : 44 (KNV)
ಆದರೆ ಆತನು ಆಗಲೇ ಸತ್ತನೋ ಎಂದು ಪಿಲಾತನು ಆಶ್ಚರ್ಯಪಟ್ಟು ಶತಾಧಿಪತಿಯನ್ನು ತನ್ನ ಬಳಿಗೆ ಕರೆದು--ಆತನು ಸತ್ತು ಎಷ್ಟು ಸಮಯ ವಾಯಿತು ಎಂದು ಅವನನ್ನು ಕೇಳಿದನು.
ಮಾರ್ಕನು 15 : 45 (KNV)
ಅವನು ಶತಾಧಿಪತಿಯಿಂದ ಅದನ್ನು ತಿಳಿದುಕೊಂಡ ಮೇಲೆ ಆ ದೇಹವನ್ನು ಯೊಸೇಫನಿಗೆ ಕೊಟ್ಟನು.
ಮಾರ್ಕನು 15 : 46 (KNV)
ಆಗ ಅವನು ಶುಭ್ರವಾದ ನಾರು ಮಡಿಯನ್ನು ಕೊಂಡು ಕೊಂಡು ಆತನನ್ನು (ಶಿಲುಬೆಯಿಂದ) ಇಳಿಸಿ ಆ ನಾರುಮಡಿಯಲ್ಲಿ ಆತನನ್ನು ಸುತ್ತಿ ಬಂಡೆಯಲ್ಲಿ ತೋಡಿಸಿದ್ದ ಸಮಾಧಿಯಲ್ಲಿಟ್ಟು ಸಮಾಧಿಯ ಬಾಗಲಿಗೆ ಒಂದು ಕಲ್ಲನ್ನು ಉರುಳಿಸಿದನು.ಮಗ್ದಲದ ಮರಿಯಳೂ ಯೋಸೆಯ ತಾಯಿಯಾದ ಮರಿಯಳೂ ಆತನನ್ನು ಇಟ್ಟಿದ್ದ ಸ್ಥಳವನ್ನು ನೋಡಿದರು.
ಮಾರ್ಕನು 15 : 47 (KNV)
ಮಗ್ದಲದ ಮರಿಯಳೂ ಯೋಸೆಯ ತಾಯಿಯಾದ ಮರಿಯಳೂ ಆತನನ್ನು ಇಟ್ಟಿದ್ದ ಸ್ಥಳವನ್ನು ನೋಡಿದರು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47

BG:

Opacity:

Color:


Size:


Font: