ಮತ್ತಾಯನು 26 : 1 (KNV)
ಯೇಸು ಈ ಮಾತುಗಳನ್ನೆಲ್ಲಾ ಹೇಳಿ ಮುಗಿಸಿದ ನಂತರ ತನ್ನ ಶಿಷ್ಯರಿಗೆ--
ಮತ್ತಾಯನು 26 : 2 (KNV)
ಎರಡು ದಿವಸಗಳಾದ ಮೇಲೆ ಪಸ್ಕ ಹಬ್ಬ ಇರುವ ದೆಂದು ನೀವು ಬಲ್ಲಿರಿ. ಆಗ ಮನುಷ್ಯಕುಮಾರನು ಶಿಲುಬೆಗೆ ಹಾಕಲ್ಪಡುವದಕ್ಕಾಗಿ ಹಿಡಿದುಕೊಡಲ್ಪಡು ವನು ಅಂದನು.
ಮತ್ತಾಯನು 26 : 3 (KNV)
ಆಗ ಪ್ರಧಾನ ಯಾಜಕರೂ ಶಾಸ್ತ್ರಿಗಳೂ ಜನರ ಹಿರಿಯರೂ ಒಟ್ಟಾಗಿ ಸೇರಿ ಕಾಯಫನೆಂಬ ಮಹಾಯಾಜಕನ ಭವನಕ್ಕೆ ಬಂದು
ಮತ್ತಾಯನು 26 : 4 (KNV)
ತಾವು ಕುಯುಕ್ತಿಯಿಂದ ಯೇಸುವನ್ನು ಹಿಡಿದು ಕೊಲ್ಲಬೇಕೆಂದು ಆಲೋಚನೆ ಮಾಡಿಕೊಂಡರು.
ಮತ್ತಾಯನು 26 : 5 (KNV)
ಆದರೆ ಅವರು ಜನರಲ್ಲಿ ಗದ್ದಲವಾದೀತು ಹಬ್ಬದಲ್ಲಿ ಬೇಡ ಅಂದರು.
ಮತ್ತಾಯನು 26 : 6 (KNV)
ಯೇಸು ಬೇಥಾನ್ಯದಲ್ಲಿ ಕುಷ್ಠರೋಗಿಯಾದ ಸೀಮೋನನ ಮನೆಯಲ್ಲಿದ್ದನು.
ಮತ್ತಾಯನು 26 : 7 (KNV)
ಆತನು ಅಲ್ಲಿ ಊಟಕ್ಕೆ ಕೂತಿದ್ದಾಗ ಒಬ್ಬ ಸ್ತ್ರೀಯು ಅತಿಶ್ರೇಷ್ಠವಾದ ತೈಲದ ಭರಣಿಯೊಂದಿಗೆ ಆತನ ಬಳಿಗೆ ಬಂದು ಅದನ್ನು ಆತನ ತಲೆಯ ಮೇಲೆ ಹೊಯಿದಳು.
ಮತ್ತಾಯನು 26 : 8 (KNV)
ಆದರೆ ಆತನ ಶಿಷ್ಯರು ಇದನ್ನು ನೋಡಿ ಕೋಪ ಗೊಂಡು--ಈ ನಷ್ಟವು ಯಾವ ಉದ್ದೇಶಕ್ಕೆ?
ಮತ್ತಾಯನು 26 : 9 (KNV)
ಯಾಕಂದರೆ ಈ ತೈಲವನ್ನು ಹೆಚ್ಚಿನ ಹಣಕ್ಕೆ ಮಾರಿ ಬಡವರಿಗೆ ಕೊಡಬಹುದಾಗಿತ್ತಲ್ಲಾ ಅಂದರು.
ಮತ್ತಾಯನು 26 : 10 (KNV)
ಆದರೆ ಯೇಸು ಅದನ್ನು ತಿಳಿದವನಾಗಿ ಅವರಿಗೆ --ನೀವು ಯಾಕೆ ಈ ಸ್ತ್ರೀಯನ್ನು ತೊಂದರೆಪಡಿಸುತ್ತೀರಿ? ಯಾಕಂದರೆ ಈಕೆಯು ನನಗಾಗಿ ಒಳ್ಳೇಕಾರ್ಯವನ್ನು ಮಾಡಿದ್ದಾಳೆ;
ಮತ್ತಾಯನು 26 : 11 (KNV)
ಬಡವರು ಯಾವಾಗಲೂ ನಿಮ್ಮ ಸಂಗಡ ಇರುತ್ತಾರೆ; ಆದರೆ ನಾನು ಯಾವಾಗಲೂ ನಿಮ್ಮ ಸಂಗಡ ಇರುವದಿಲ್ಲ.
ಮತ್ತಾಯನು 26 : 12 (KNV)
ಇದಲ್ಲದೆ ಈಕೆಯು ಈ ತೈಲವನ್ನು ನನ್ನ ದೇಹದ ಮೇಲೆ ಹೊಯಿದದ್ದ ರಿಂದ ನನ್ನ ಹೂಣುವಿಕೆಗಾಗಿ ಇದನ್ನು ಮಾಡಿದ್ದಾಳೆ ಅಂದನು.
ಮತ್ತಾಯನು 26 : 13 (KNV)
ನಾನು ನಿಮಗೆ ನಿಜವಾಗಿ ಹೇಳುವದೇ ನಂದರೆ--ಲೋಕದಲ್ಲೆಲ್ಲಾ ಎಲ್ಲೆಲ್ಲಿ ಈ ಸುವಾರ್ತೆಯು ಸಾರಲ್ಪಡುವದೋ ಅಲ್ಲೆಲ್ಲಾ ಈ ಸ್ತ್ರೀಯು ಮಾಡಿದ್ದು ಸಹ ಈಕೆಯ ಜ್ಞಾಪಕಾರ್ಥವಾಗಿ ಹೇಳಲ್ಪಡುವದು ಅಂದನು.
ಮತ್ತಾಯನು 26 : 14 (KNV)
ಆಗ ಹನ್ನೆರಡು ಮಂದಿಯಲ್ಲಿ ಒಬ್ಬನಾದ ಯೂದ ಇಸ್ಕರಿಯೋತ್‌ ಎಂಬವನು ಪ್ರಧಾನ ಯಾಜಕರ ಬಳಿಗೆ ಹೋಗಿ--
ಮತ್ತಾಯನು 26 : 15 (KNV)
ನಾನು ಆತನನ್ನು ನಿಮಗೆ ಒಪ್ಪಿಸಿಕೊಟ್ಟರೆ ನೀವು ನನಗೆ ಏನು ಕೊಡುತ್ತೀರಿ ಅಂದನು. ಆಗ ಅವರು ಅವನೊಂದಿಗೆ ಮೂವತ್ತು ಬೆಳ್ಳಿಯ ನಾಣ್ಯಗಳಿಗೆ ಒಪ್ಪಂದ ಮಾಡಿಕೊಂಡರು.
ಮತ್ತಾಯನು 26 : 16 (KNV)
ಅಂದಿನಿಂದ ಅವನು ಆತನನ್ನು ಹಿಡಿದುಕೊಡು ವದಕ್ಕೆ ಸಂದರ್ಭವನ್ನು ಹುಡುಕುತ್ತಿದ್ದನು.
ಮತ್ತಾಯನು 26 : 17 (KNV)
ಹುಳಿಯಿಲ್ಲದ ರೊಟ್ಟಿಯ ಹಬ್ಬದ ಮೊದಲನೆಯ ದಿನದಲ್ಲಿ ಶಿಷ್ಯರು ಯೇಸುವಿನ ಬಳಿಗೆ ಬಂದು--ಪಸ್ಕದ ಊಟಮಾಡುವದಕ್ಕೆ ನಾವು ನಿನಗಾಗಿ ಎಲ್ಲಿ ಸಿದ್ಧಮಾಡಬೇಕೆಂದು ನೀನು ಕೋರುತ್ತೀ ಎಂದು ಆತನನ್ನು ಕೇಳಿದರು.
ಮತ್ತಾಯನು 26 : 18 (KNV)
ಅದಕ್ಕೆ ಆತನು--ನೀವು ಪಟ್ಟಣದೊಳಕ್ಕೆ ಇಂಥವನ ಬಳಿಗೆ ಹೋಗಿ-- ನನ್ನ ಸಮಯವು ಸವಿಾಪವಾಗಿದೆ; ನನ್ನ ಶಿಷ್ಯರ ಜೊತೆಗೆ ನಿನ್ನ ಮನೆಯಲ್ಲಿ ಪಸ್ಕವನ್ನು ಆಚರಿಸುತ್ತೇನೆಂದು ಬೋಧಕನು ಹೇಳುತ್ತಾನೆ ಎಂಬದಾಗಿ ಅವನಿಗೆ ಹೇಳಿರಿ ಅಂದನು.
ಮತ್ತಾಯನು 26 : 19 (KNV)
ಯೇಸು ಅವರಿಗೆ ಆಜ್ಞಾಪಿಸಿದಂತೆ ಶಿಷ್ಯರು ಪಸ್ಕವನ್ನು ಸಿದ್ಧಪಡಿಸಿದರು.
ಮತ್ತಾಯನು 26 : 20 (KNV)
ಸಾಯಂಕಾಲ ವಾದಾಗ ಆತನು ಹನ್ನೆರಡು ಮಂದಿ ಶಿಷ್ಯರೊಂದಿಗೆ ಊಟಕ್ಕೆ ಕೂತುಕೊಂಡನು;
ಮತ್ತಾಯನು 26 : 21 (KNV)
ಅವರು ಊಟಮಾಡು ತ್ತಿದ್ದಾಗ ಆತನು--ನಾನು ನಿಮಗೆ ನಿಜವಾಗಿ ಹೇಳು ತ್ತೇನೆ, ನಿಮ್ಮಲ್ಲಿ ಒಬ್ಬನು ನನ್ನನ್ನು ಹಿಡುಕೊಡುವನು ಅಂದನು.
ಮತ್ತಾಯನು 26 : 22 (KNV)
ಆಗ ಅವರು ಬಹಳ ದುಃಖಪಟ್ಟು--ಕರ್ತನೇ, ಅವನು ನಾನೋ ಎಂದು ಅವರಲ್ಲಿ ಪ್ರತಿಯೊಬ್ಬನು ಆತನನ್ನು ಕೇಳಲಾರಂಭಿಸಿದರು.
ಮತ್ತಾಯನು 26 : 23 (KNV)
ಅದಕ್ಕೆ ಆತನು ಪ್ರತ್ಯುತ್ತರವಾಗಿ--ನನ್ನ ಸಂಗಡ ಪಾತ್ರೆಯಲ್ಲಿ ಕೈ ಅದ್ದಿದವನೇ ನನ್ನನ್ನು ಹಿಡುಕೊಡುವನು.
ಮತ್ತಾಯನು 26 : 24 (KNV)
ಮನುಷ್ಯಕುಮಾರನು ತನ್ನ ವಿಷಯದಲ್ಲಿ ಬರೆದಿರುವ ಪ್ರಕಾರ ಹೋಗುತ್ತಾನೆ; ಆದರೆ ಮನುಷ್ಯಕುಮಾರನು ಯಾವನಿಂದ ಹಿಡಿದು ಕೊಡಲ್ಪಡುತ್ತಾನೋ ಆ ಮನುಷ್ಯನಿಗೆ ಅಯ್ಯೋ! ಆ ಮನುಷ್ಯನು ಹುಟ್ಟದೆ ಹೋಗಿದ್ದರೆ ಅವನಿಗೆ ಒಳ್ಳೇದಾಗುತ್ತಿತ್ತು ಅಂದನು.
ಮತ್ತಾಯನು 26 : 25 (KNV)
ಆಗ ಅವನನ್ನು ಹಿಡಿದುಕೊಡಬೇಕೆಂದಿದ್ದ ಯೂದನು--ಬೋಧಕನೇ, ಅವನು ನಾನೋ? ಅಂದದ್ದಕ್ಕೆ ಆತನು--ನೀನೇ ಹೇಳಿದ್ದೀ ಅಂದನು.
ಮತ್ತಾಯನು 26 : 26 (KNV)
ಅವರು ಊಟಮಾಡುತ್ತಿರುವಾಗ ಯೇಸು ರೊಟ್ಟಿ ಯನ್ನು ತೆಗೆದುಕೊಂಡು ಅದನ್ನು ಆಶೀರ್ವದಿಸಿ ಮುರಿದು ತನ್ನ ಶಿಷ್ಯರಿಗೆ ಕೊಟ್ಟು--ತಕ್ಕೊಳ್ಳಿರಿ, ತಿನ್ನಿರಿ; ಇದು ನನ್ನ ದೇಹ ಅಂದನು.
ಮತ್ತಾಯನು 26 : 27 (KNV)
ಮತ್ತು ಪಾತ್ರೆಯನ್ನು ತೆಗೆದುಕೊಂಡು ಸ್ತೋತ್ರ ಮಾಡಿ ಅವರಿಗೆ ಕೊಟ್ಟು --ನೀವೆಲ್ಲರೂ ಇದರಲ್ಲಿರುವದನ್ನು ಕುಡಿಯಿರಿ;
ಮತ್ತಾಯನು 26 : 28 (KNV)
ಯಾಕಂದರೆ ಇದು ಬಹು ಜನರ ಪಾಪಗಳ ಪರಿಹಾರಕ್ಕೋಸ್ಕರ ಸುರಿಸಲ್ಪಡುವ ಹೊಸಒಡಂಬಡಿಕೆ ಯ ನನ್ನ ರಕ್ತವಾಗಿದೆ ಅಂದನು.
ಮತ್ತಾಯನು 26 : 29 (KNV)
ಮತ್ತು ನಾನು ನಿಮಗೆ ಹೇಳುವದೇನಂದರೆ--ಇಂದಿನಿಂದ ನನ್ನ ತಂದೆಯ ರಾಜ್ಯದಲ್ಲಿ ನಿಮ್ಮೊಂದಿಗೆ ಹೊಸದಾಗಿ ಕುಡಿಯುವ ಆ ದಿನದವರೆಗೆ ನಾನು ಈ ದ್ರಾಕ್ಷಾರಸ ವನ್ನು ಕುಡಿಯುವದೇ ಇಲ್ಲ ಎಂದು ಹೇಳಿದನು.
ಮತ್ತಾಯನು 26 : 30 (KNV)
ತರುವಾಯ ಅವರು ಕೀರ್ತನೆ ಹಾಡಿ ಎಣ್ಣೇ ಮರಗಳ ಗುಡ್ಡಕ್ಕೆ ಹೋದರು.
ಮತ್ತಾಯನು 26 : 31 (KNV)
ಆಮೇಲೆ ಯೇಸು ಅವರಿಗೆ--ನೀವೆಲ್ಲರೂ ಈ ರಾತ್ರಿ ನನ್ನ ವಿಷಯದಲ್ಲಿ ಅಭ್ಯಂತರಪಡುವಿರಿ; ಯಾಕಂದರೆ-- ನಾನು ಕುರುಬನನ್ನು ಹೊಡೆಯುವೆನು; ಮಂದೆ ಯ ಕುರಿಗಳು ಚದರಿಹೋಗುವವು ಎಂದು ಬರೆದದೆ;
ಮತ್ತಾಯನು 26 : 32 (KNV)
ಆದರೆ ನಾನು ಎದ್ದ ಮೇಲೆ ನಿಮಗಿಂತ ಮುಂಚಿತ ವಾಗಿ ಗಲಿಲಾಯಕ್ಕೆ ಹೋಗುವೆನು ಅಂದನು.
ಮತ್ತಾಯನು 26 : 33 (KNV)
ಪೇತ್ರನು ಪ್ರತ್ಯುತ್ತರವಾಗಿ ಆತನಿಗೆ-- ಎಲ್ಲರೂ ನಿನ್ನ ವಿಷಯದಲ್ಲಿ ಅಭ್ಯಂತರಪಟ್ಟರೂ ನಾನು ಎಂದಿಗೂ ಅಭ್ಯಂತರಪಡುವದಿಲ್ಲ ಅಂದನು.
ಮತ್ತಾಯನು 26 : 34 (KNV)
ಯೇಸು ಅವ ನಿಗೆ--ಈ ರಾತ್ರಿಯಲ್ಲಿ ಹುಂಜ ಕೂಗುವದಕ್ಕಿಂತ ಮುಂಚೆ ಮೂರು ಸಾರಿ ನನ್ನನ್ನು ಅಲ್ಲಗಳೆಯುವಿ ಎಂದು ನಾನು ನಿನಗೆ ನಿಜವಾಗಿ ಹೇಳುತ್ತೇನೆ ಅಂದನು.
ಮತ್ತಾಯನು 26 : 35 (KNV)
ಅದಕ್ಕೆ ಪೇತ್ರನು ಆತನಿಗೆ-- ನಿನ್ನೊಂದಿಗೆ ಸಾಯಬೇಕಾಗಿದ್ದರೂ ನಾನು ನಿನ್ನನ್ನು ಅಲ್ಲಗಳೆಯುವ ದೇ ಇಲ್ಲ ಅಂದನು. ಅದೇ ಪ್ರಕಾರ ಶಿಷ್ಯರೆಲ್ಲರೂ ಹೇಳಿದರು.
ಮತ್ತಾಯನು 26 : 36 (KNV)
ತರುವಾಯ ಯೇಸು ಶಿಷ್ಯರ ಸಂಗಡ ಗೆತ್ಸೇಮನೆ ಎಂಬ ಸ್ಥಳಕ್ಕೆ ಬಂದು ಅವರಿಗೆ--ನಾನು ಆಚೇ ಕಡೆಗೆ ಹೋಗಿ ಪ್ರಾರ್ಥಿಸುವಾಗ ನೀವು ಇಲ್ಲೇ ಕೂತುಕೊಳ್ಳಿರಿ ಅಂದನು.
ಮತ್ತಾಯನು 26 : 37 (KNV)
ಆತನು ತನ್ನ ಜೊತೆಯಲ್ಲಿ ಪೇತ್ರನನ್ನೂ ಜೆಬೆದಾಯನ ಇಬ್ಬರು ಕುಮಾರರನ್ನೂ ಕರೆದುಕೊಂಡು ಹೋಗಿ ದುಃಖಿಸುವದಕ್ಕೂ ಬಹು ವ್ಯಥೆಪಡುವದಕ್ಕೂ ಆರಂಭಿಸಿದನು.
ಮತ್ತಾಯನು 26 : 38 (KNV)
ಆತನು ಅವರಿಗೆ--ನನ್ನ ಪ್ರಾಣವು ಮರಣಹೊಂದುವಷ್ಟು ಅತಿ ದುಃಖಕ್ಕೆ ಒಳಗಾಗಿದೆ; ನೀವು ಇಲ್ಲೇ ಇದ್ದು ನನ್ನೊಡನೆ ಎಚ್ಚರವಾಗಿರ್ರಿ ಅಂದನು.
ಮತ್ತಾಯನು 26 : 39 (KNV)
ಆಮೇಲೆ ಆತನು ಸ್ವಲ್ಪದೂರ ಹೋಗಿ ಅಡ್ಡಬಿದ್ದು ಪ್ರಾರ್ಥಿ ಸುತ್ತಾ--ಓ ನನ್ನ ತಂದೆಯೇ, ಸಾಧ್ಯವಾದರೆ ಈ ಪಾತ್ರೆಯು ನನ್ನನ್ನು ಬಿಟ್ಟು ಹೋಗಲಿ; ಆದಾಗ್ಯೂ ನನ್ನ ಚಿತ್ತದಂತಲ್ಲ; ನಿನ್ನ ಚಿತ್ತದಂತೆಯೇ ಆಗಲಿ ಅಂದನು.
ಮತ್ತಾಯನು 26 : 40 (KNV)
ಆತನು ತನ್ನ ಶಿಷ್ಯರ ಬಳಿಗೆ ಬಂದಾಗ ಅವರು ನಿದ್ರೆ ಮಾಡುವದನ್ನು ಕಂಡು ಪೇತ್ರನಿಗೆ--ಏನು ನೀವು ಒಂದು ಗಳಿಗೆಯಾದರೂ ನನ್ನೊಡನೆ ಎಚ್ಚರವಾಗಿರಲಾರಿರಾ?
ಮತ್ತಾಯನು 26 : 41 (KNV)
ನೀವು ಶೋಧನೆಗೆ ಒಳಗಾ ಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸಿರಿ; ಆತ್ಮವು ಸಿದ್ಧವಾಗಿದೆ ನಿಜವೇ; ಆದರೆ ಶರೀರವು ಬಲಹೀನ ವಾಗಿದೆ ಅಂದನು.
ಮತ್ತಾಯನು 26 : 42 (KNV)
ತಿರಿಗಿ ಆತನು ಎರಡನೆಯ ಸಾರಿ ಹೋಗಿ ಪ್ರಾರ್ಥಿಸುತ್ತಾ--ಓ ನನ್ನ ತಂದೆಯೇ, ನಾನು ಈ ಪಾತ್ರೆಯಲ್ಲಿ ಕುಡಿಯದ ಹೊರತು ಇದು ನನ್ನನ್ನು ಬಿಟ್ಟು ಹೋಗಕೂಡದಾಗಿದ್ದರೆ ನಿನ್ನ ಚಿತ್ತವೇ ಆಗಲಿ ಅಂದನು.
ಮತ್ತಾಯನು 26 : 43 (KNV)
ಆತನು ಬಂದು ಅವರು ತಿರಿಗಿ ನಿದ್ದೆ ಮಾಡುವದನ್ನು ಕಂಡನು; ಯಾಕಂದರೆ ಅವರ ಕಣ್ಣುಗಳು ಭಾರವಾಗಿದ್ದವು.
ಮತ್ತಾಯನು 26 : 44 (KNV)
ಆತನು ಅವರನ್ನು ಬಿಟ್ಟು ತಿರಿಗಿ ಹೊರಟು ಹೋಗಿ ಮೂರನೆಯ ಸಾರಿ ಅದೇ ಮಾತುಗಳನ್ನು ಹೇಳಿ ಪ್ರಾರ್ಥಿಸಿದನು
ಮತ್ತಾಯನು 26 : 45 (KNV)
ತರುವಾಯ ಆತನು ತನ್ನ ಶಿಷ್ಯರ ಬಳಿಗೆ ಬಂದು ಅವರಿಗೆ--ಈಗ ನಿದ್ದೆ ಮಾಡಿ ವಿಶ್ರಾಂತಿತಕ್ಕೊಳ್ಳಿರಿ; ಇಗೋ, ಮನುಷ್ಯಕುಮಾರನು ಪಾಪಿಷ್ಠರ ಕೈಗಳಿಗೆ ಹಿಡಿದು ಕೊಡಲ್ಪಡುವ ಸಮಯವು ಸವಿಾಪಿಸಿದೆ;
ಮತ್ತಾಯನು 26 : 46 (KNV)
ಏಳಿರಿ, ನಾವು ಹೋಗೋಣ; ಇಗೋ, ನನ್ನನ್ನು ಹಿಡುಕೊಡು ವವನು ಸವಿಾಪವಾಗಿದ್ದಾನೆ ಅಂದನು.
ಮತ್ತಾಯನು 26 : 47 (KNV)
ಆತನು ಇನ್ನೂ ಮಾತನಾಡುತ್ತಿರುವಾಗ ಇಗೋ, ಪ್ರಧಾನಯಾಜಕರ ಮತ್ತು ಜನರ ಹಿರಿಯರ ಕಡೆಯಿಂದ ಕತ್ತಿ ದೊಣ್ಣೆಗಳೊಡನೆ ಬಂದ ದೊಡ್ಡ ಜನ ಸಮೂಹದೊಂದಿಗೆ ಹನ್ನೆರಡು ಮಂದಿಯಲ್ಲಿ ಒಬ್ಬನಾದ ಯೂದನೂ ಬಂದನು.
ಮತ್ತಾಯನು 26 : 48 (KNV)
ಆತನನ್ನು ಹಿಡು ಕೊಡುವದಕ್ಕಿದ್ದವನು ಅವರಿಗೆ--ನಾನು ಯಾವಾತನಿಗೆ ಮುದ್ದಿಡುತ್ತೇನೋ ಅವನೇ ಆತನು. ಆತನನ್ನು ಗಟ್ಟಿ ಯಾಗಿ ಹಿಡಿಯಿರಿ ಎಂದು ಗುರುತನ್ನು ಹೇಳಿದ್ದನು.
ಮತ್ತಾಯನು 26 : 49 (KNV)
ಕೂಡಲೆ ಅವನು ಯೇಸುವಿನ ಬಳಿಗೆ ಬಂದು ಬೋಧಕನೇ, ವಂದನೆ ಎಂದು ಹೇಳಿ ಆತನಿಗೆ ಮುದ್ದಿಟ್ಟನು.
ಮತ್ತಾಯನು 26 : 50 (KNV)
ಅದಕ್ಕೆ ಯೇಸು ಅವನಿಗೆ--ಸ್ನೇಹಿತನೇ, ನೀನು ಯಾಕೆ ಬಂದಿರುತ್ತೀ ಎಂದು ಕೇಳಿದನು; ಆಗ ಅವರು ಬಂದು ಯೇಸುವಿನ ಮೇಲೆ ಕೈಹಾಕಿ ಆತನನ್ನು ಹಿಡಿದರು.
ಮತ್ತಾಯನು 26 : 51 (KNV)
ಇಗೋ, ಯೇಸುವಿನ ಸಂಗಡ ಇದ್ದವರಲ್ಲಿ ಒಬ್ಬನು ಕೈಚಾಚಿ ತನ್ನ ಕತ್ತಿಯನ್ನು ಹಿರಿದು ಮಹಾ ಯಾಜಕನ ಆಳನ್ನು ಹೊಡೆದು ಅವನ ಕಿವಿಯನ್ನು ಕಡಿದುಹಾಕಿದನು.
ಮತ್ತಾಯನು 26 : 52 (KNV)
ಆಗ ಯೇಸು ಅವನಿಗೆ--ನಿನ್ನ ಕತ್ತಿಯನ್ನು ತಿರಿಗಿ ಅದರ ಒರೆಯಲ್ಲಿ ಸೇರಿಸು; ಯಾಕಂದರೆ ಕತ್ತಿಯನ್ನು ಹಿಡಿದವರೆಲ್ಲರು ಕತ್ತಿಯಿಂದ ನಾಶವಾಗುವರು.
ಮತ್ತಾಯನು 26 : 53 (KNV)
ನಾನು ಈಗ ನನ್ನ ತಂದೆಗೆ ಪ್ರಾರ್ಥಿಸಲಾರನೆಂದೂ ಆತನು ಈಗಲೇ ಹನ್ನೆರಡು ಗಣಗಳಿಗಿಂತ ಹೆಚ್ಚಾದ ದೂತರನ್ನು ನನಗೆ ಕೊಡ ಲಾರನೆಂದೂ ನೀನು ನೆನಸುತ್ತಿಯೋ?
ಮತ್ತಾಯನು 26 : 54 (KNV)
ಹಾಗಾದರೆ ಇವುಗಳು ಹೀಗೆ ಆಗಬೇಕೆಂಬ ಬರಹಗಳು ನೆರವೇರು ವದು ಹೇಗೆ ಅಂದನು.
ಮತ್ತಾಯನು 26 : 55 (KNV)
ಅದೇ ಗಳಿಗೆಯಲ್ಲಿ ಯೇಸು ಜನಸಮೂಹಗಳಿಗೆ--ಒಬ್ಬ ಕಳ್ಳನಿಗೆ ವಿರೋಧವಾಗಿ ಬರುವಂತೆ ಕತ್ತಿಗಳೊಂದಿಗೂ ದೊಣ್ಣೆಗಳೊಂದಿಗೂ ನನ್ನನ್ನು ಹಿಡಿಯುವದಕ್ಕಾಗಿ ಬಂದಿರಾ? ನಾನು ದಿನಾ ಲು ನಿಮ್ಮ ಸಂಗಡ ದೇವಾಲಯದಲ್ಲಿ ಕೂತುಕೊಂಡು ಬೋಧಿಸುತ್ತಿದ್ದಾಗ ನೀವು ನನ್ನನ್ನು ಹಿಡಿಯಲಿಲ್ಲ;
ಮತ್ತಾಯನು 26 : 56 (KNV)
ಆದರೆ ಪ್ರವಾದಿಗಳ ಬರಹಗಳು ನೆರವೇರುವಂತೆ ಇದೆಲ್ಲಾ ಆಯಿತು ಎಂದು ಹೇಳಿದನು. ಆಗ ಶಿಷ್ಯರೆಲ್ಲರೂ ಆತನನ್ನು ಬಿಟ್ಟು ಓಡಿಹೋದರು.
ಮತ್ತಾಯನು 26 : 57 (KNV)
ಮತ್ತು ಯೇಸುವನ್ನು ಹಿಡಿದಿದ್ದವರು ಆತನನ್ನು ಮಹಾಯಾಜಕನಾದ ಕಾಯಫನ ಬಳಿಗೆ ತಕ್ಕೊಂಡು ಹೋದರು; ಅಲ್ಲಿ ಶಾಸ್ತ್ರಿಗಳೂ ಹಿರಿಯರೂ ಕೂಡಿಬಂದಿದ್ದರು.
ಮತ್ತಾಯನು 26 : 58 (KNV)
ಆದರೆ ಪೇತ್ರನು ಮಹಾ ಯಾಜಕನ ಭವನದವರೆಗೆ ದೂರದಿಂದ ಆತನನ್ನು ಹಿಂಬಾಲಿಸಿ ಒಳಗೆ ಹೋಗಿ ಅಂತ್ಯವೇನಾಗುವದೆಂದು ನೋಡಲು ಸೇವಕರೊಂದಿಗೆ ಕೂತುಕೊಂಡನು.
ಮತ್ತಾಯನು 26 : 59 (KNV)
ಆಗ ಪ್ರಧಾನಯಾಜಕರೂ ಹಿರಿಯರೂ ಆಲೋ ಚನಾ ಸಭೆಯವರೆಲ್ಲರೂ ಯೇಸುವಿಗೆ ವಿರೋಧವಾಗಿ ಆತನನ್ನು ಕೊಲ್ಲಿಸುವಂತೆ ಸುಳ್ಳು ಸಾಕ್ಷಿಗಾಗಿ ಹುಡುಕಿ ದರು.
ಮತ್ತಾಯನು 26 : 60 (KNV)
ಆದರೆ ಯಾರೂ ಸಿಕ್ಕಲಿಲ್ಲ; ಹೌದು, ಬಹುಮಂದಿ ಸುಳ್ಳು ಸಾಕ್ಷಿಗಳು ಬಂದರೂ ಅವರಿಗೆ ಏನೂ ದೊರೆಯಲಿಲ್ಲ; ಕಡೆಯಲ್ಲಿ ಇಬ್ಬರು ಸುಳ್ಳು ಸಾಕ್ಷಿಗಳು ಬಂದು--
ಮತ್ತಾಯನು 26 : 61 (KNV)
ನಾನು ದೇವಾಲಯ ವನ್ನು ಕೆಡವಿ ಮೂರು ದಿವಸಗಳಲ್ಲಿ ಕಟ್ಟಬಲ್ಲೆನೆಂದು ಇವನು ಹೇಳಿದನು ಅಂದರು.
ಮತ್ತಾಯನು 26 : 62 (KNV)
ಮಹಾಯಾಜಕರು ಎದ್ದು ಆತನಿಗೆ--ನೀನು ಏನೂ ಉತ್ತರ ಕೊಡುವದಿ ಲ್ಲವೋ? ಇವರು ನಿನಗೆ ವಿರೋಧವಾಗಿ ಸಾಕ್ಷಿ ಹೇಳುವದು ಏನು ಅಂದನು.
ಮತ್ತಾಯನು 26 : 63 (KNV)
ಆದರೆ ಯೇಸು ಸುಮ್ಮನಿದ್ದನು. ಆಗ ಮಹಾಯಾಜಕನು ಪ್ರತ್ಯುತ್ತರವಾಗಿ ಆತನಿಗೆ--ನೀನು ದೇವಕುಮಾರನಾದ ಕ್ರಿಸ್ತನಾದರೆ ಅದನ್ನು ನಮಗೆ ಹೇಳಬೇಕೆಂದು ಜೀವಸ್ವರೂಪನಾದ ದೇವರ ಆಣೆಯನ್ನು ನಿನಗೆ ಇಡುತ್ತೇನೆ ಅಂದನು.
ಮತ್ತಾಯನು 26 : 64 (KNV)
ಅದಕ್ಕೆ ಯೇಸು ಅವನಿಗೆ--ನೀನೇ ಹೇಳಿದ್ದೀ; ಆದರೂ--ಇನ್ನು ಮೇಲೆ ಮನುಷ್ಯಕುಮಾರನು ಸರ್ವ ಶಕ್ತನ ಬಲಪಾರ್ಶ್ವದಲ್ಲಿ ಕೂತಿರುವದನ್ನೂ ಆಕಾಶದ ಮೇಘಗಳ ಮೇಲೆ ಬರುವದನ್ನೂ ನೀವು ನೋಡುವಿರಿ ಎಂದು ನಾನು ನಿಮಗೆ ಹೇಳುತ್ತೇನೆ ಅಂದನು.
ಮತ್ತಾಯನು 26 : 65 (KNV)
ಆಗ ಮಹಾ ಯಾಜಕನು ತನ್ನ ಬಟ್ಟೆಗಳನ್ನು ಹರಕೊಂಡು--ಇವನು ದೇವದೂಷಣೆ ಮಾಡಿದ್ದಾನೆ; ನಮಗೆ ಇನ್ನು ಹೆಚ್ಚಿನ ಸಾಕ್ಷಿಗಳು ಯಾಕೆ ಬೇಕು? ಇಗೋ, ಈಗಲೇ ಇವನ ದೇವದೂಷಣೆಯನ್ನು ನೀವು ಕೇಳಿದ್ದೀರಲ್ಲಾ 66ನಿಮಗೆ ಹೇಗೆ ತೋರುತ್ತದೆ ಎಂದು ಕೇಳಿದ್ದಕ್ಕೆ ಅವರು ಪ್ರತ್ಯುತ್ತರವಾಗಿ--ಇವ
ಮತ್ತಾಯನು 26 : 66 (KNV)
ನಿಮಗೆ ಹೇಗೆ ತೋರುತ್ತದೆ ಎಂದು ಕೇಳಿದ್ದಕ್ಕೆ ಅವರು ಪ್ರತ್ಯುತ್ತರವಾಗಿ--ಇವನು ಮರಣಕ್ಕೆ ಪಾತ್ರನು ಅಂದರು.
ಮತ್ತಾಯನು 26 : 67 (KNV)
ಆಮೇಲೆ ಅವರು ಆತನ ಮುಖದ ಮೇಲೆ ಉಗುಳಿ ಆತನನ್ನು ಗುದ್ದಿದರು; ಬೇರೆ ಕೆಲವರು ಆತನನ್ನು ಹೊಡೆದರು.
ಮತ್ತಾಯನು 26 : 68 (KNV)
ಕ್ರಿಸ್ತನೇ, ನಿನ್ನನ್ನು ಹೊಡೆದವರು ಯಾರು? ನಮಗೆ ಪ್ರವಾದನೆ ಹೇಳು ಅಂದರು.
ಮತ್ತಾಯನು 26 : 69 (KNV)
ಆಗ ಪೇತ್ರನು ಭವನದ ಹೊರಗೆ ಕೂತಿರಲು ಒಬ್ಬ ಹುಡುಗಿಯು ಅವನ ಬಳಿಗೆ ಬಂದು-- ನೀನೂ ಗಲಿಲಾಯದ ಯೇಸುವಿನೊಂದಿಗೆ ಇದ್ದವನು ಅಂದಳು.
ಮತ್ತಾಯನು 26 : 70 (KNV)
ಆದರೆ ಅವನು ಎಲ್ಲರ ಮುಂದೆ-- ನೀನು ಏನು ಹೇಳುತ್ತಿಯೋ ನಾನು ಅರಿಯೆನು ಎಂದು ಅಲ್ಲಗಳೆದನು.
ಮತ್ತಾಯನು 26 : 71 (KNV)
ಅವನು ದ್ವಾರಾಂಗಳ ದೊಳಗೆ ಹೋದಾಗ ಮತ್ತೊಬ್ಬ ಹುಡುಗಿಯು ಅವನನ್ನು ನೋಡಿ ಅಲ್ಲಿದ್ದವರಿಗೆ--ಇವನು ಸಹ ನಜರೇತಿನ ಯೇಸುವಿನೊಂದಿಗೆ ಇದ್ದವನು ಅಂದಳು.
ಮತ್ತಾಯನು 26 : 72 (KNV)
ಆಗ ಅವನು ಪ್ರಮಾಣಮಾಡಿ--ನಾನು ಆ ಮನುಷ್ಯನನ್ನು ಅರಿಯೆನು ಎಂದು ತಿರಿಗಿ ಅಲ್ಲಗಳೆ ದನು.
ಮತ್ತಾಯನು 26 : 73 (KNV)
ಮತ್ತೆ ಸ್ವಲ್ಪ ಸಮಯವಾದ ಮೇಲೆ ಅಲ್ಲಿ ನಿಂತಿದ್ದವರು ಪೇತ್ರನಿಗೆ--ನಿಶ್ಚಯವಾಗಿ ನೀನು ಸಹ ಅವರಲ್ಲಿ ಒಬ್ಬನು; ಯಾಕಂದರೆ ನಿನ್ನ ಭಾಷೆಯು ನಿನ್ನನ್ನು ತೋರಿಸಿಕೊಡುತ್ತದೆ ಅಂದರು.
ಮತ್ತಾಯನು 26 : 74 (KNV)
ಅದಕ್ಕೆ ಅವನು--ಆ ಮನುಷ್ಯನನ್ನು ನಾನು ಅರಿಯೆನು ಎಂದು ಶಪಿಸಿಕೊಳ್ಳುವದಕ್ಕೂ ಆಣೆಯಿಟ್ಟುಕೊಳ್ಳುವದಕ್ಕೂ ಪ್ರಾರಂಭಿಸಿದನು. ಕೂಡಲೆ ಹುಂಜವು ಕೂಗಿತು.ಆಗ ಪೇತ್ರನು--ಹುಂಜವು ಕೂಗುವದಕ್ಕಿಂತ ಮುಂಚಿತವಾಗಿ ನೀನು ಮೂರು ಸಾರಿ ನನ್ನನ್ನು ಅಲ್ಲಗಳೆ ಯುವಿ ಎಂದು ಯೇಸು ತನಗೆ ಹೇಳಿದ ಮಾತನ್ನು ಜ್ಞಾಪಕಮಾಡಿಕೊಂಡು ಹೊರಗೆ ಹೋಗಿ ಬಹು ವ್ಯಥೆಪಟ್ಟು ಅತ್ತನು.
ಮತ್ತಾಯನು 26 : 75 (KNV)
ಆಗ ಪೇತ್ರನು--ಹುಂಜವು ಕೂಗುವದಕ್ಕಿಂತ ಮುಂಚಿತವಾಗಿ ನೀನು ಮೂರು ಸಾರಿ ನನ್ನನ್ನು ಅಲ್ಲಗಳೆ ಯುವಿ ಎಂದು ಯೇಸು ತನಗೆ ಹೇಳಿದ ಮಾತನ್ನು ಜ್ಞಾಪಕಮಾಡಿಕೊಂಡು ಹೊರಗೆ ಹೋಗಿ ಬಹು ವ್ಯಥೆಪಟ್ಟು ಅತ್ತನು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50 51 52 53 54 55 56 57 58 59 60 61 62 63 64 65 66 67 68 69 70 71 72 73 74 75

BG:

Opacity:

Color:


Size:


Font: