ಮತ್ತಾಯನು 15 : 1 (KNV)
ತರುವಾಯ ಯೆರೂಸಲೇಮಿನವರಾದ ಶಾಸ್ತ್ರಿಗಳೂ ಫರಿಸಾಯರೂ ಯೇಸುವಿನ ಬಳಿಗೆ ಬಂದು--
ಮತ್ತಾಯನು 15 : 2 (KNV)
ನಿನ್ನ ಶಿಷ್ಯರು ಹಿರಿಯರ ಸಂಪ್ರದಾಯ ವನ್ನು ಯಾಕೆ ಮಾರುತ್ತಾರೆ? ಯಾಕಂದರೆ ಅವರು ರೊಟ್ಟಿ ತಿನ್ನುವಾಗ ತಮ್ಮ ಕೈಗಳನ್ನು ತೊಳಕೊಳ್ಳುವದಿಲ್ಲ ಅಂದರು.
ಮತ್ತಾಯನು 15 : 3 (KNV)
ಅದಕ್ಕೆ ಆತನು ಪ್ರತ್ಯುತ್ತರವಾಗಿ ಅವ ರಿಗೆ--ನೀವು ಸಹ ನಿಮ್ಮ ಸಂಪ್ರದಾಯದ ನಿಮಿತ್ತವಾಗಿ ದೇವರ ಆಜ್ಞೆಯನ್ನು ಯಾಕೆ ಮಾರುತ್ತೀರಿ?
ಮತ್ತಾಯನು 15 : 4 (KNV)
ಯಾಕಂ ದರೆ ದೇವರು ಅಪ್ಪಣೆ ಕೊಟ್ಟು ಹೇಳಿದ್ದೇನಂದರೆ--ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು. ಮತ್ತು--ಯಾವನಾದರೂ ತಂದೆಯನ್ನಾಗಲೀ ತಾಯಿಯನ್ನಾ ಗಲೀ ಶಪಿಸಿದರೆ ಅವನು ಸಾಯಲೇಬೇಕು ಎಂಬದೇ.
ಮತ್ತಾಯನು 15 : 5 (KNV)
ಆದರೆ ನೀವು--ಯಾವನಾದರೂ ತನ್ನ ತಂದೆಗಾಗಲೀ ತಾಯಿಗಾಗಲೀ-- ನನ್ನಿಂದ ನಿನಗೆ ಪ್ರಯೋಜನ ವಾಗತಕ್ಕದ್ದು ಕಾಣಿಕೆಯಾಯಿತು ಎಂದು ಹೇಳುವದಾ ದರೆ
ಮತ್ತಾಯನು 15 : 6 (KNV)
ಅವನು ತನ್ನ ತಂದೆಯನ್ನಾಗಲೀ ತಾಯಿಯನ್ನಾ ಗಲೀ ಸನ್ಮಾನಿಸುವದರಿಂದ ಬಿಡುಗಡೆಯಾಗಿದ್ದಾನೆಂದು ನೀವು ಹೇಳುತ್ತೀರಿ. ಹೀಗೆ ನಿಮ್ಮ ಸಂಪ್ರದಾಯದ ನಿಮಿತ್ತವಾಗಿ ದೇವರ ಆಜ್ಞೆಯನ್ನು ನಿರರ್ಥಕ ಮಾಡಿದ್ದೀರಿ.
ಮತ್ತಾಯನು 15 : 7 (KNV)
ಕಪಟಿಗಳೇ, ನಿಮ್ಮ ವಿಷಯವಾಗಿ ಯೆಶಾಯನು ಸರಿಯಾಗಿ ಪ್ರವಾದಿಸಿದನು;
ಮತ್ತಾಯನು 15 : 8 (KNV)
ಆದೇ ನಂದರೆ-- ಈ ಜನರು ತಮ್ಮ ಬಾಯಿಂದ ನನ್ನನ್ನು ಸಮಾಪಿಸಿ ತುಟಿಗಳಿಂದ ನನ್ನನ್ನು ಸನ್ಮಾನಿಸುತ್ತಾರೆ; ಆದರೆ ಅವರ ಹೃದಯವು ನನ್ನಿಂದ ದೂರವಾಗಿದೆ.
ಮತ್ತಾಯನು 15 : 9 (KNV)
ಅವರು ಮನುಷ್ಯರ ಆಜ್ಞೆಗಳನ್ನು ಬೋಧಿಸಿ ಕಲಿಸುವ ದರಿಂದ ನನ್ನನ್ನು ಆರಾಧಿಸುವದು ವ್ಯರ್ಥ ಎಂಬದೇ.
ಮತ್ತಾಯನು 15 : 10 (KNV)
ಆತನುಜನ ಸಮೂಹಗಳನ್ನು ಕರೆದು ಅವರಿಗೆ--ಕೇಳಿ ತಿಳುಕೊಳ್ಳಿರಿ;
ಮತ್ತಾಯನು 15 : 11 (KNV)
ಬಾಯೊಳಗೆ ಹೋಗುವಂಥದು ಮನುಷ್ಯನನ್ನು ಹೊಲೆಮಾಡುವದಿಲ್ಲ; ಆದರೆ ಬಾಯೊ ಳಗಿಂದ ಹೊರಗೆ ಬರುವಂಥದೇ ಮನುಷ್ಯನನ್ನು ಹೊಲೆಮಾಡುತ್ತದೆ ಎಂದು ಹೇಳಿದನು.
ಮತ್ತಾಯನು 15 : 12 (KNV)
ತರುವಾಯ ಆತನ ಶಿಷ್ಯರು ಬಂದು--ಫರಿಸಾ ಯರು ನಿನ್ನ ಈ ಮಾತನ್ನು ಕೇಳಿದ ಮೇಲೆ ಅಭ್ಯಂತರ ಪಟ್ಟರೆಂದು ನಿನಗೆ ತಿಳಿಯಿತೋ ಎಂದು ಕೇಳಿದರು.
ಮತ್ತಾಯನು 15 : 13 (KNV)
ಅದಕ್ಕೆ ಆತನು ಪ್ರತ್ಯುತ್ತರವಾಗಿ ಅವರಿಗೆ--ಪರ ಲೋಕದ ನನ್ನ ತಂದೆಯು ನೆಡದೆ ಇರುವ ಪ್ರತಿಯೊ ಂದು ಗಿಡವು ಬೇರು ಸಹಿತವಾಗಿ ಕಿತ್ತುಹಾಕಲ್ಪಡುವದು.
ಮತ್ತಾಯನು 15 : 14 (KNV)
ಅವರನ್ನು ಬಿಡಿರಿ; ಅವರು ಕುರುಡರನ್ನು ನಡಿಸುವ ಕುರುಡರು. ಕುರುಡನು ಕುರುಡನನ್ನು ನಡಿಸಿದರೆ ಇಬ್ಬರೂ ಕುಣಿಯೊಳಕ್ಕೆ ಬೀಳುವರು ಎಂದು ಹೇಳಿ ದನು.
ಮತ್ತಾಯನು 15 : 15 (KNV)
ತರುವಾಯ ಪೇತ್ರನು ಪ್ರತ್ಯುತ್ತರವಾಗಿ ಆತ ನಿಗೆ--ಈ ಸಾಮ್ಯವನ್ನು ನಮಗೆ ತಿಳಿಯಪಡಿಸು ಅಂದನು.
ಮತ್ತಾಯನು 15 : 16 (KNV)
ಅದಕ್ಕೆ ಯೇಸು--ನೀವು ಸಹ ಇನ್ನೂ ಗ್ರಹಿಸದೆ ಇದ್ದೀರಾ?
ಮತ್ತಾಯನು 15 : 17 (KNV)
ಬಾಯೊಳಗೆ ಹೋಗಿ ಹೊಟ್ಟೆ ಯಲ್ಲಿ ಸೇರುವದೆಲ್ಲವೂ ಬಹಿರ್ಭೂಮಿಗೆ ಹೋಗುವ ದೆಂದು ನೀವು ಇನ್ನೂ ಗ್ರಹಿಸಲಿಲ್ಲವೋ?
ಮತ್ತಾಯನು 15 : 18 (KNV)
ಆದರೆ ಬಾಯೊಳಗಿಂದ ಹೊರಗೆ ಹೊರಡುವಂಥವುಗಳು ಹೃದಯದೊಳಗಿಂದ ಬಂದು ಮನುಷ್ಯನನ್ನು ಹೊಲೆ ಮಾಡುತ್ತವೆ.
ಮತ್ತಾಯನು 15 : 19 (KNV)
ಯಾಕಂದರೆ ಹೃದಯದೊಳಗಿಂದ ಕೆಟ್ಟ ಆಲೋಚನೆಗಳು, ಕೊಲೆಗಳು, ಹಾದರಗಳು, ಜಾರತ್ವ ಗಳು, ಕಳ್ಳತನಗಳು, ಸುಳ್ಳುಸಾಕ್ಷಿ, ದೇವ ದೂಷಣೆಗಳು ಹೊರಗೆ ಬರುತ್ತವೆ.
ಮತ್ತಾಯನು 15 : 20 (KNV)
ಇಂಥವುಗಳೇ ಮನುಷ್ಯನನ್ನು ಹೊಲೆಮಾಡುತ್ತವೆ; ಆದರೆ ಕೈತೊಳಕೊಳ್ಳದೆ ಊಟ ಮಾಡುವದು ಮನುಷ್ಯನನ್ನು ಹೊಲೆಮಾಡುವದಿಲ್ಲ ಅಂದನು.
ಮತ್ತಾಯನು 15 : 21 (KNV)
ತರುವಾಯ ಯೇಸು ಅಲ್ಲಿಂದ ಹೊರಟು ತೂರ್‌ ಸೀದೋನ್‌ ತೀರಗಳಿಗೆ ಬಂದನು.
ಮತ್ತಾಯನು 15 : 22 (KNV)
ಆಗ ಇಗೋ, ಕಾನಾನ್ಯಳಾದ ಒಬ್ಬ ಸ್ತ್ರೀಯು ಅದೇ ಪ್ರಾಂತ್ಯಗಳಿಂದ ಬಂದು ಆತನಿಗೆ--ಓ ಕರ್ತನೇ, ದಾವೀದನ ಕುಮಾ ರನೇ, ನನ್ನ ಮೇಲೆ ಕರುಣೆಯಿಡು; ನನ್ನ ಮಗಳು ದೆವ್ವದಿಂದ ಬಹಳವಾಗಿ ಸಂಕಟಪಡುತ್ತಿದ್ದಾಳೆ ಎಂದು ಕೂಗಿಕೊಂಡಳು.
ಮತ್ತಾಯನು 15 : 23 (KNV)
ಆದರೆ ಆತನು ಆಕೆಗೆ ಒಂದು ಮಾತೂ ಉತ್ತರ ಕೊಡಲಿಲ್ಲ; ಆಗ ಆತನ ಶಿಷ್ಯರು ಬಂದು--ಆಕೆಯನ್ನು ಕಳುಹಿಸಿಬಿಡು, ಯಾಕಂದರೆ ಆಕೆಯು ನಮ್ಮ ಹಿಂದೆ ಕೂಗಿಕೊಂಡು ಬರುತ್ತಾಳೆ ಎಂದು ಆತನನ್ನು ಬೇಡಿಕೊಂಡರು.
ಮತ್ತಾಯನು 15 : 24 (KNV)
ಆದರೆ ಆತನು ಪ್ರತ್ಯು ತ್ತರವಾಗಿ-- ತಪ್ಪಿಸಿಕೊಂಡ ಕುರಿಗಳಾಗಿರುವ ಇಸ್ರಾ ಯೇಲಿನ ಮನೆತನದವರ ಬಳಿಗೆ ಮಾತ್ರ ನಾನು ಕಳುಹಿಸಲ್ಪಟ್ಟಿದ್ದೇನೆ ಅಂದನು.
ಮತ್ತಾಯನು 15 : 25 (KNV)
ಆಗ ಆಕೆಯು ಬಂದು ಆತನನ್ನು ಆರಾಧಿಸಿ--ಕರ್ತನೇ, ನನಗೆ ಸಹಾಯ ಮಾಡು ಎಂದು ಕೇಳಿಕೊಂಡಳು.
ಮತ್ತಾಯನು 15 : 26 (KNV)
ಆದರೆ ಆತನು ಪ್ರತ್ಯುತ್ತರವಾಗಿ--ಮಕ್ಕಳ ರೊಟ್ಟಿಯನ್ನು ತಕ್ಕೊಂಡು ನಾಯಿಗಳಿಗೆ ಹಾಕುವದು ಸರಿಯಲ್ಲ ಎಂದು ಹೇಳಿ ದನು.
ಮತ್ತಾಯನು 15 : 27 (KNV)
ಆಗ ಆಕೆಯು--ಕರ್ತನೇ, ಅದು ನಿಜವೇ; ಆದರೂ ನಾಯಿಗಳು ತಮ್ಮ ಯಜಮಾನರ ಮೇಜಿನಿಂದ ಬೀಳುವ ರೊಟ್ಟಿ ತುಂಡುಗಳನ್ನು ತಿನ್ನು ತ್ತವಲ್ಲಾ ಅಂದಳು.
ಮತ್ತಾಯನು 15 : 28 (KNV)
ಆಗ ಯೇಸು ಪ್ರತ್ಯುತ್ತರವಾಗಿ ಆಕೆಗೆ--ಓ ಸ್ತ್ರೀಯೇ, ನಿನ್ನ ನಂಬಿಕೆಯು ದೊಡ್ಡದು; ನೀನು ಇಷ್ಟಪಟ್ಟಂತೆಯೇ ನಿನಗಾಗಲಿ ಎಂದು ಹೇಳಿ ದನು. ಮತ್ತು ಆಕೆಯ ಮಗಳು ಅದೇ ಗಳಿಗೆಯಲ್ಲಿ ಸ್ವಸ್ಥಳಾದಳು.
ಮತ್ತಾಯನು 15 : 29 (KNV)
ಇದಾದ ಮೇಲೆ ಯೇಸು ಅಲ್ಲಿಂದ ಹೊರಟು ಗಲಿಲಾಯ ಸಮುದ್ರದ ಸಮಾಪಕ್ಕೆ ಬಂದನು; ಮತು ಆತನು ಬೆಟ್ಟವನ್ನು ಹತ್ತಿ ಅಲ್ಲಿ ಕೂತುಕೊಂಡನು.
ಮತ್ತಾಯನು 15 : 30 (KNV)
ಆಗ ಜನರ ದೊಡ್ಡ ಸಮೂಹಗಳು ಕುಂಟರನ್ನು ಕುರುಡರನ್ನು ಮೂಕರನ್ನು ಊನವಾದವರನ್ನು ಮತ್ತು ಬೇರೆ ಅನೇಕರನ್ನು ತಮ್ಮೊಂದಿಗೆ ಕರಕೊಂಡು ಯೇಸು ವಿನ ಪಾದಗಳ ಬಳಿಗೆ ತಂದರು. ಮತ್ತು ಆತನು ಅವರನ್ನು ಸ್ವಸ್ಥಪಡಿಸಿದನು.
ಮತ್ತಾಯನು 15 : 31 (KNV)
ಮೂಕರು ಮಾತನಾಡು ವದನ್ನೂ ಊನವಾದವರು ಸ್ವಸ್ಥರಾಗಿರುವದನ್ನೂ ಕುಂಟರು ನಡೆದಾಡುವದನ್ನೂ ಕುರುಡರು ನೋಡುವ ದನ್ನೂ ಜನಸಮೂಹದವರು ಕಂಡು ಆಶ್ಚರ್ಯದಿಂದ ಇಸ್ರಾಯೇಲಿನ ದೇವರನ್ನು ಮಹಿಮೆಪಡಿಸಿದರು.
ಮತ್ತಾಯನು 15 : 32 (KNV)
ತರುವಾಯ ಯೇಸು ತನ್ನ ಶಿಷ್ಯರನ್ನು ಕರೆದು-- ನಾನು ಈ ಜನಸಮೂಹವನ್ನು ಕನಿಕರಿಸುತ್ತೇನೆ; ಯಾಕ ಂದರೆ ಈಗ ಬಿಟ್ಟೂಬಿಡದೆ ಮೂರು ದಿನಗಳಿಂದ ಅವರು ನನ್ನೊಂದಿಗಿದ್ದಾರೆ; ಮತ್ತು ಅವರಿಗೆ ತಿನ್ನುವದಕ್ಕೆ ಏನೂ ಇಲ್ಲ; ದಾರಿಯಲ್ಲಿ ಅವರು ಬಳಲಿಹೋದಾರೆಂದು ಅವ ರನ್ನು ಉಪವಾಸವಾಗಿ ಕಳುಹಿಸು
ಮತ್ತಾಯನು 15 : 33 (KNV)
ಅದಕ್ಕೆ ಆತನ ಶಿಷ್ಯರು ಆತನಿಗೆ--ಇಂಥಾ ದೊಡ್ಡ ಸಮೂಹವನ್ನು ತೃಪ್ತಿಪಡಿಸುವಂತೆ ಈ ಅರಣ್ಯದಲ್ಲಿ ನಮಗೆ ಎಲ್ಲಿಂದ ರೊಟ್ಟಿಯು ಸಿಕ್ಕೀತು ಅಂದರು.
ಮತ್ತಾಯನು 15 : 34 (KNV)
ಆಗ ಯೇಸು ಅವರಿಗೆ--ನಿಮ್ಮ ಹತ್ತಿರ ಎಷ್ಟು ರೊಟ್ಟಿಗಳಿವೆ ಎಂದು ಕೇಳಿದನು. ಅವರು--ಏಳು ರೊಟ್ಟಿಗಳು ಮತ್ತು ಕೆಲವು ಚಿಕ್ಕ ಮಾನುಗಳಿವೆ ಅಂದರು.
ಮತ್ತಾಯನು 15 : 35 (KNV)
ಆಗ ಜನಸಮೂಹವು ನೆಲದ ಮೇಲೆ ಕೂತುಕೊಳ್ಳ ಬೇಕೆಂದು ಆತನು ಅಪ್ಪಣೆಕೊಟ್ಟನು.
ಮತ್ತಾಯನು 15 : 36 (KNV)
ಆತನು ಆ ಏಳು ರೊಟ್ಟಿಗಳನ್ನು ಮತ್ತು ಮಾನುಗಳನ್ನು ತಕ್ಕೊಂಡು ಸ್ತೋತ್ರಮಾಡಿ ಅವುಗಳನ್ನು ಮುರಿದು ತನ್ನ ಶಿಷ್ಯರಿಗೆ ಕೊಟ್ಟನು ಮತ್ತು ಶಿಷ್ಯರು ಜನಸಮೂಹಕ್ಕೆ ಕೊಟ್ಟರು.
ಮತ್ತಾಯನು 15 : 37 (KNV)
ಅವರೆಲ್ಲರೂ ಊಟಮಾಡಿ ತೃಪ್ತರಾದರು; ಮತ್ತು ಅವರು ಮಿಕ್ಕ ತುಂಡುಗಳನ್ನು ಕೂಡಿಸಲಾಗಿ ಏಳು ಪುಟ್ಟಿಗಳು ತುಂಬಿದವು.
ಮತ್ತಾಯನು 15 : 38 (KNV)
ಊಟಮಾಡಿದವರು ಸ್ತ್ರೀಯರೂ ಮಕ್ಕಳೂ ಅಲ್ಲದೆ ನಾಲ್ಕು ಸಾವಿರ ಗಂಡಸರು.ತರುವಾಯ ಆತನು ಜನಸಮೂಹವನ್ನು ಕಳುಹಿಸಿಬಿಟ್ಟು ದೋಣಿಯನ್ನು ಹತ್ತಿ ಮಗ್ದಲ ತೀರಕ್ಕೆ ಬಂದನು.
ಮತ್ತಾಯನು 15 : 39 (KNV)
ತರುವಾಯ ಆತನು ಜನಸಮೂಹವನ್ನು ಕಳುಹಿಸಿಬಿಟ್ಟು ದೋಣಿಯನ್ನು ಹತ್ತಿ ಮಗ್ದಲ ತೀರಕ್ಕೆ ಬಂದನು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39

BG:

Opacity:

Color:


Size:


Font: