ಮತ್ತಾಯನು 12 : 1 (KNV)
ಆ ಸಮಯದಲ್ಲಿ ಯೇಸು ಸಬ್ಬತ್ ದಿನದಲ್ಲಿ ಪೈರಿನ ಹೊಲವನು ಹಾದುಹೋಗುತ್ತಿದ್ದಾಗ ಆತನ ಶಿಷ್ಯರು ಹಸಿದಿ ದ್ದರಿಂದ ತೆನೆಗಳನ್ನು ಕಿತ್ತು ತಿನ್ನಲಾರಂಭಿಸಿದರು.
ಮತ್ತಾಯನು 12 : 2 (KNV)
ಆದರೆ ಫರಿಸಾಯರು ಅದನ್ನು ನೋಡಿ ಆತನಿಗೆ--ಇಗೋ, ನಿನ್ನ ಶಿಷ್ಯರು ಸಬ್ಬತ್ದಿನದಲ್ಲಿ ಮಾಡ ಬಾರದ್ದನ್ನು ಮಾಡುತ್ತಾರೆ ಅಂದರು.
ಮತ್ತಾಯನು 12 : 3 (KNV)
ಅದಕ್ಕೆ ಆತನು ಅವರಿಗೆ--ದಾವೀದನು ತಾನೂ ತನ್ನ ಸಂಗಡ ಇದ್ದವರೂ ಹಸಿದಾಗ ಏನು ಮಾಡಿದನೆಂದು ನೀವು ಓದಲಿಲ್ಲವೋ?
ಮತ್ತಾಯನು 12 : 4 (KNV)
ಅವನು ದೇವರ ಮನೆ ಯೊಳಗೆ ಪ್ರವೇಶಿಸಿ ಯಾಜಕರೇ ಹೊರತು ತಾನಾಗಲೀ ತನ್ನ ಕೂಡ ಇದ್ದವರಾಗಲೀ ತಿನ್ನಬಾರದಾಗಿದ್ದ ಸಮ್ಮುಖ ರೊಟ್ಟಿಯನ್ನು ಹೇಗೆ ತಿಂದನು?
ಮತ್ತಾಯನು 12 : 5 (KNV)
ಇದಲ್ಲದೆ ಸಬ್ಬತ್ ದಿನಗಳಲ್ಲಿ ಯಾಜಕರು ದೇವಾಲಯದಲ್ಲಿ ಸಬ್ಬತ್ತನ್ನು ಅಪವಿತ್ರಪಡಿಸಿದರೂ ನಿರಪರಾಧಿಗಳಾಗಿದ್ದಾ ರೆಂದು ನೀವು ನ್ಯಾಯಪ್ರಮಾಣದಲ್ಲಿ ಓದಲಿಲ್ಲವೇ?
ಮತ್ತಾಯನು 12 : 6 (KNV)
ಆದರೆ ನಾನು ನಿಮಗೆ ಹೇಳುವದೇನಂದರೆ-- ದೇವಾಲಯಕ್ಕಿಂತಲೂ ದೊಡ್ಡವನು ಈ ಸ್ಥಳದಲ್ಲಿ ಇದ್ದಾನೆ.
ಮತ್ತಾಯನು 12 : 7 (KNV)
ಆದರೆ--ನನಗೆ ಯಜ್ಞವಲ್ಲ, ಕರುಣೆಯೇ ಬೇಕು ಎಂಬದರ ಅರ್ಥವನ್ನು ನೀವು ತಿಳಿದಿದ್ದರೆ ನಿರಪರಾಧಿಗಳನ್ನು ಅಪರಾಧಿಗಳೆಂದು ತೀರ್ಪುಮಾಡು ತ್ತಿದ್ದಿಲ್ಲ.
ಮತ್ತಾಯನು 12 : 8 (KNV)
ಯಾಕಂದರೆ ಮನುಷ್ಯ ಕುಮಾರನು ಸಬ್ಬತ್ ದಿನಕ್ಕೂ ಒಡೆಯನಾಗಿದ್ದಾನೆ ಎಂದು ಹೇಳಿದನು.
ಮತ್ತಾಯನು 12 : 9 (KNV)
ತರುವಾಯ ಆತನು ಅಲ್ಲಿಂದ ಹೊರಟು ಅವರ ಸಭಾಮಂದಿರದೊಳಕ್ಕೆ ಹೋದನು.
ಮತ್ತಾಯನು 12 : 10 (KNV)
ಇಗೋ, ಅಲ್ಲಿ ಕೈ ಬತ್ತಿದ್ದ ಒಬ್ಬ ಮನುಷ್ಯನಿದ್ದನು. ಆಗ ಅವರು ಆತನ ಮೇಲೆ ತಪ್ಪು ಹೊರಿಸಬೇಕೆಂದು ಆತನಿಗೆ-- ಸಬ್ಬತ್ ದಿನಗಳಲ್ಲಿ ಸ್ವಸ್ಥ ಮಾಡುವದು ನ್ಯಾಯವೋ ಎಂದು ಕೇಳಿದರು.
ಮತ್ತಾಯನು 12 : 11 (KNV)
ಅದಕ್ಕಾತನು ಅವರಿಗೆ-- ನಿಮ್ಮಲ್ಲಿ ಯಾವನಿಗಾದರೂ ಒಂದು ಕುರಿಯಿರಲಾಗಿ ಅದು ಸಬ್ಬತ್ ದಿನದಲ್ಲಿ ಕುಣಿಯೊಳಗೆ ಬಿದ್ದರೆ ಅವನು ಅದನ್ನು ಹಿಡಿದು ಮೇಲಕ್ಕೆ ಎತ್ತದೆ ಇರುವನೇ?
ಮತ್ತಾಯನು 12 : 12 (KNV)
ಹಾಗಾದರೆ ಕುರಿಗಿಂತಲೂ ಒಬ್ಬ ಮನುಷ್ಯನು ಎಷ್ಟೋ ಶ್ರೇಷ್ಠನಾಗಿದ್ದಾನಲ್ಲವೇ? ಆದದರಿಂದ ಸಬ್ಬತ್ ದಿನಗಳಲ್ಲಿ ಒಳ್ಳೆಯದನ್ನು ಮಾಡುವದು ನ್ಯಾಯವಾಗಿದೆ ಎಂದು ಹೇಳಿದನು.
ಮತ್ತಾಯನು 12 : 13 (KNV)
ಆಗ ಆತನು ಆ ಮನುಷ್ಯನಿಗೆ--ನಿನ್ನ ಕೈಯನ್ನು ಮುಂದೆ ಚಾಚು ಅಂದನು. ಅವನು ಚಾಚಿದಾಗ ಅದು ಗುಣವಾಗಿ ಮತ್ತೊಂದರ ಹಾಗಾಯಿತು.
ಮತ್ತಾಯನು 12 : 14 (KNV)
ತರುವಾಯ ಫರಿಸಾ ಯರು ಆತನನ್ನು ಹೇಗೆ ಕೊಲ್ಲಬೇಕೆಂದು ಆತನಿಗೆ ವಿರೋಧವಾಗಿ ಆಲೋಚಿಸಲು ಹೊರಗೆ ಹೋದರು.
ಮತ್ತಾಯನು 12 : 15 (KNV)
ಆದರೆ ಯೇಸು ಅದನ್ನು ತಿಳಿದು ಅಲ್ಲಿಂದ ಹೊರಟು ಹೋದನು; ಮತ್ತು ದೊಡ್ಡ ಸಮೂಹಗಳು ಆತನನ್ನು ಹಿಂಬಾಲಿಸಿದರು. ಆಗ ಆತನು ಅವರೆಲ್ಲರನ್ನು ವಾಸಿ ಮಾಡಿದನು.
ಮತ್ತಾಯನು 12 : 16 (KNV)
ಯೇಸು ತನ್ನನ್ನು ಯಾರಿಗೂ ಪ್ರಕಟಿಸ ಬಾರದೆಂದು ಅವರಿಗೆ ಆಜ್ಞಾಪಿಸಿದನು;
ಮತ್ತಾಯನು 12 : 17 (KNV)
ಹೀಗೆ ಪ್ರವಾದಿಯಾದ ಯೆಶಾಯನಿಂದ ಹೇಳಲ್ಪಟ್ಟಿದ್ದು ನೆರವೇರಿತು; ಅದೇನಂದರೆ--
ಮತ್ತಾಯನು 12 : 18 (KNV)
ಇಗೋ, ನಾನು ಆರಿಸಿಕೊಂಡ ನನ್ನ ಸೇವಕನು; ನನ್ನ ಪ್ರಾಣವು ಬಹಳವಾಗಿ ಮೆಚ್ಚಿಕೊಂಡಿರುವ ನನ್ನ ಪ್ರಿಯನು; ನಾನು ಆತನ ಮೇಲೆ ನನ್ನ ಆತ್ಮನನ್ನು ಇರಿಸುವೆನು ಮತ್ತು ಆತನು ಅನ್ಯಜನಗಳಿಗೆ ನ್ಯಾಯವನ್ನು ತೋರಿ ಸುವನು.
ಮತ್ತಾಯನು 12 : 19 (KNV)
ಆತನು ಜಗಳವಾಡುವದಿಲ್ಲ, ಕೂಗಾಡು ವದೂ ಇಲ್ಲ; ಇಲ್ಲವೆ ಯಾವ ಮನುಷ್ಯನು ಬೀದಿಗಳಲ್ಲಿ ಆತನ ಸ್ವರವನ್ನು ಕೇಳಿಸಿಕೊಳ್ಳುವದೂ ಇಲ್ಲ.
ಮತ್ತಾಯನು 12 : 20 (KNV)
ಆತನು ನ್ಯಾಯವನ್ನು ವಿಜಯಕ್ಕಾಗಿ ಕಳುಹಿಸುವವರೆಗೆ ಜಜ್ಜಿದ ದಂಟನ್ನು ಮುರಿಯುವದಿಲ್ಲ ಮತ್ತು ಹೊಗೆಯಾಡುವ ಬತ್ತಿಯನ್ನು ನಂದಿಸುವದಿಲ್ಲ.
ಮತ್ತಾಯನು 12 : 21 (KNV)
ಮತ್ತು ಆತನ ಹೆಸರಿನಲ್ಲಿ ಅನ್ಯಜನರು ನಂಬಿಕೆಯಿಡುವರು ಎಂಬದೇ.
ಮತ್ತಾಯನು 12 : 22 (KNV)
ಆಗ ಜನರು ದೆವ್ವ ಹಿಡಿದಿದ್ದವನೂ ಕುರುಡನೂ ಮೂಕನೂ ಆಗಿದ್ದವನನ್ನು ಆತನ ಬಳಿಗೆ ತಂದರು; ಮತ್ತು ಆತನು ಅವನನ್ನು ಸ್ವಸ್ಥಮಾಡಿದ್ದರಿಂದ ಕುರುಡನೂ ಮೂಕನೂ ಆಗಿದ್ದವನು ಮಾತನಾಡಿದನು ಮತ್ತು ನೋಡಿದನು.
ಮತ್ತಾಯನು 12 : 23 (KNV)
ಆಗ ಜನರೆಲ್ಲರು ವಿಸ್ಮಯ ಗೊಂಡವರಾಗಿ--ಈತನು ದಾವೀದನ ಕುಮಾರ ನಲ್ಲವೇ ಅಂದರು.
ಮತ್ತಾಯನು 12 : 24 (KNV)
ಆದರೆ ಫರಿಸಾಯರು ಇದನ್ನು ಕೇಳಿದಾಗ--ಇವನು ದೆವ್ವಗಳ ಅಧಿಪತಿಯಾಗಿರುವ ಬೆಲ್ಜೆಬೂಲನಿಂದಲೇ ಹೊರತು ದೆವ್ವಗಳನ್ನು ಬಿಡಿಸು ವದಿಲ್ಲ ಅಂದರು.
ಮತ್ತಾಯನು 12 : 25 (KNV)
ಆಗ ಯೇಸು ಅವರ ಆಲೋಚನೆ ಗಳನ್ನು ತಿಳಿದು ಅವರಿಗೆ--ತನ್ನಲ್ಲಿ ವಿರೋಧವುಂಟಾಗಿ ವಿಭಾಗಿಸಲ್ಪಟ್ಟ ಪ್ರತಿಯೊಂದು ರಾಜ್ಯವು ಹಾಳಾಗುತ್ತದೆ; ಮತ್ತು ತನ್ನಲ್ಲಿ ವಿರೋಧವುಂಟಾಗಿ ವಿಭಾಗಿಸಲ್ಪಟ್ಟ ಪ್ರತಿಯೊಂದು ಪಟ್ಟಣವಾಗಲೀ ಮನೆಯಾಗಲೀ ನಿಲ್ಲುವದಿಲ್ಲ.
ಮತ್ತಾಯನು 12 : 26 (KNV)
ಇದಲ್ಲದೆ ಸೈತಾನನು ಸೈತಾನನನ್ನು ಹೊರಗೆ ಹಾಕಿದರೆ ಅವನು ತನಗೆ ವಿರೋಧವಾಗಿ ತಾನೇ ವಿಭಾಗಿಸಲ್ಪಟ್ಟಿದ್ದಾನೆ; ಹಾಗಾದರೆ ಅವನ ರಾಜ್ಯವು ಹೇಗೆ ನಿಂತೀತು?
ಮತ್ತಾಯನು 12 : 27 (KNV)
ಮತ್ತು ಬೆಲ್ಜೆಬೂಲನಿಂದ ನಾನು ದೆವ್ವಗಳನ್ನು ಬಿಡಿಸಿದರೆ ನಿಮ್ಮ ಮಕ್ಕಳು ಯಾರಿಂದ ಅವುಗಳನ್ನು ಬಿಡಿಸುತ್ತಾರೆ? ಆದದರಿಂದ ಅವರೇ ನಿಮಗೆ ನ್ಯಾಯತೀರಿಸುವರು.
ಮತ್ತಾಯನು 12 : 28 (KNV)
ಆದರೆ ನಾನು ದೇವರ ಆತ್ಮನಿಂದ ದೆವ್ವಗಳನ್ನು ಬಿಡಿಸಿದರೆ ದೇವರ ರಾಜ್ಯವು ನಿಮ್ಮ ಬಳಿಗೆ ಬಂದಿದೆಯಲ್ಲಾ.
ಮತ್ತಾಯನು 12 : 29 (KNV)
ಇಲ್ಲವೆ ಯಾವನಾದರೂ ಮೊದಲು ಬಲವುಳ್ಳ ಮನುಷ್ಯನನ್ನು ಕಟ್ಟಿಹಾಕದ ಹೊರತು ಅವನ ಮನೆ ಯನ್ನು ಪ್ರವೇಶಿಸಿ ಅವನ ಸೊತ್ತನ್ನು ಸುಲುಕೊಳ್ಳು ವದಕ್ಕಾದೀತೇ? ಕಟ್ಟಿದ ಮೇಲೆ ಅವನ ಮನೆಯನ್ನು ಸುಲುಕೊಳ್ಳುವದಕ್ಕಾಗುವದು.
ಮತ್ತಾಯನು 12 : 30 (KNV)
ನನ್ನ ಸಂಗಡ ಇರದ ವನು ನನಗೆ ವಿರೋಧವಾಗಿದ್ದಾನೆ; ಮತ್ತು ನನ್ನ ಸಂಗಡ ಕೂಡಿಸದವನು ಚದರಿಸುವವನಾಗಿದ್ದಾನೆ ಎಂದು ಹೇಳಿದನು.
ಮತ್ತಾಯನು 12 : 31 (KNV)
ಆದಕಾರಣ ನಾನು ನಿಮಗೆ ಹೇಳುವದೇ ನಂದರೆ-- ಎಲ್ಲಾ ತರದ ಪಾಪವೂ ದೂಷಣೆಯೂ ಮನುಷ್ಯರಿಗೆ ಕ್ಷಮಿಸಲ್ಪಡುವದು; ಆದರೆ ಪರಿಶು ದ್ಧಾತ್ಮನಿಗೆ ವಿರೋಧವಾದ ದೂಷಣೆಯು ಮನುಷ್ಯರಿಗೆ ಕ್ಷಮಿಸಲ್ಪಡುವದಿಲ್ಲ.
ಮತ್ತಾಯನು 12 : 32 (KNV)
ಮನುಷ್ಯ ಕುಮಾರನಿಗೆ ವಿರೋಧವಾಗಿ ಯಾವನಾದರೂ ಮಾತನಾಡಿದರೆ ಅದು ಅವನಿಗೆ ಕ್ಷಮಿಸಲ್ಪಡುವದು; ಆದರೆ ಪರಿಶುದ್ಧಾ ತ್ಮನಿಗೆ ವಿರೋಧವಾಗಿ ಯಾವನಾದರೂ ಮಾತನಾ ಡಿದರೆ ಈ ಲೋಕದಲ್ಲಿಯಾಗಲೀ ಇಲ್ಲವೆ ಬರುವ ಲೋಕದಲ್ಲಿಯಾಗಲೀ ಅದು ಅವನಿಗೆ ಕ್ಷಮಿಸಲ್ಪಡು ವದಿಲ್ಲ.
ಮತ್ತಾಯನು 12 : 33 (KNV)
ಮರವು ಒಳ್ಳೆಯದಾಗಿದ್ದರೆ ಅದರ ಫಲವೂ ಒಳ್ಳೆಯದೆಂದು ಎಣಿಸಿರಿ; ಇಲ್ಲವೇ ಮರವು ಕೆಟ್ಟದ್ದಾಗಿದ್ದರೆ ಅದರ ಫಲವೂ ಕೆಟ್ಟದ್ದೆಂದೆಣಿಸಿರಿ; ಯಾಕಂದರೆ ಮರವು ತನ್ನ ಫಲದಿಂದಲೇ ತಿಳಿಯಲ್ಪ ಡುವದು.
ಮತ್ತಾಯನು 12 : 34 (KNV)
ಓ ಸರ್ಪಸಂತತಿಯವರೇ, ಕೆಟ್ಟವರಾಗಿ ರುವ ನೀವು ಒಳ್ಳೆಯವುಗಳನ್ನು ಹೇಗೆ ಮಾತನಾಡೀರಿ? ಯಾಕಂದರೆ ಹೃದಯದಲ್ಲಿ ಸಮೃದ್ಧಿಯಾಗಿರುವದನ್ನೇ ಬಾಯಿ ಮಾತನಾಡುತ್ತದೆ.
ಮತ್ತಾಯನು 12 : 35 (KNV)
ಒಳ್ಳೇಮನುಷ್ಯನು ಹೃದಯದ ಒಳ್ಳೇಬೊಕ್ಕಸದಿಂದ ಒಳ್ಳೆಯವುಗಳನ್ನು ಹೊರಗೆ ತರುತ್ತಾನೆ; ಮತ್ತು ಕೆಟ್ಟಮನುಷ್ಯನು ಕೆಟ್ಟಬೊಕ್ಕಸದಿಂದ ಕೆಟ್ಟವುಗಳನ್ನು ಹೊರಗೆ ತರುತ್ತಾನೆ.
ಮತ್ತಾಯನು 12 : 36 (KNV)
ಆದರೆ ನಾನು ನಿಮಗೆ ಹೇಳುವದೇನಂದರೆ-- ಮನುಷ್ಯರು ಆಡುವ ಪ್ರತಿಯೊಂದು ವ್ಯರ್ಥವಾದ ಮಾತಿಗಾಗಿ ನ್ಯಾಯವಿಚಾರಣೆಯ ದಿನದಲ್ಲಿ ಅವರು ಲೆಕ್ಕಕೊಡಬೇಕು.
ಮತ್ತಾಯನು 12 : 37 (KNV)
ನೀನು ನಿನ್ನ ಮಾತುಗಳಿಂದಲೇ ನೀತಿವಂತನಾಗುವಿ ಮತ್ತು ನಿನ್ನ ಮಾತುಗಳಿಂದಲೇ ನೀನು ಅಪರಾಧಿಯಾಗುವಿ ಎಂದು ಹೇಳಿದನು.
ಮತ್ತಾಯನು 12 : 38 (KNV)
ಆಗ ಶಾಸ್ತ್ರಿಗಳಲ್ಲಿ ಮತ್ತು ಫರಿಸಾಯರಲ್ಲಿ ಕೆಲ ವರು--ಗುರುವೇ, ನಿನ್ನಿಂದ ಒಂದು ಸೂಚಕಕಾರ್ಯ ವನ್ನು ನೋಡಬೇಕೆಂದಿದ್ದೇವೆ ಎಂದು ಕೇಳಿದ್ದಕ್ಕೆ
ಮತ್ತಾಯನು 12 : 39 (KNV)
ಆತನು ಪ್ರತ್ಯುತ್ತರವಾಗಿ ಅವರಿಗೆ--ವ್ಯಭಿಚಾರಿಣಿ ಯಾದ ಕೆಟ್ಟ ಸಂತತಿಯು ಸೂಚಕಕಾರ್ಯವನ್ನು ಹುಡು ಕುತ್ತದೆ; ಪ್ರವಾದಿಯಾದ ಯೋನನಲ್ಲಿ ಆದ ಸೂಚಕ ಕಾರ್ಯವೇ ಹೊರತು ಅದಕ್ಕೆ ಇನ್ಯಾವ ಸೂಚಕಕಾರ್ಯ ವೂ ಕೊಡಲ್ಪಡುವದಿಲ್ಲ.
ಮತ್ತಾಯನು 12 : 40 (KNV)
ಯಾಕಂದರೆ ಯೋನನು ಮೂರು ಹಗಲು ಮತ್ತು ಮೂರು ರಾತ್ರಿ ಮಾನಿನ ಹೊಟ್ಟೆಯಲ್ಲಿ ಇದ್ದ ಹಾಗೆಯೇ ಮನುಷ್ಯಕುಮಾರನು ಮೂರು ಹಗಲು ಮತ್ತು ಮೂರು ರಾತ್ರಿ ಭೂಗರ್ಭ ದಲ್ಲಿರುವನು.
ಮತ್ತಾಯನು 12 : 41 (KNV)
ನ್ಯಾಯವಿಚಾರಣೆಯಲ್ಲಿ ನಿನೆವೆಯ ಜನರು ಈ ಸಂತತಿಯೊಂದಿಗೆ ಎದ್ದು ಅವರನ್ನು ಖಂಡಿಸು ವರು; ಯಾಕಂದರೆ ಯೋನನು ಸಾರಿದಾಗ ಅವರು ಮಾನಸಾಂತರಪಟ್ಟರು; ಮತ್ತು ಇಗೋ, ಇಲ್ಲಿ ಯೋನ ನಿಗಿಂತಲೂ ದೊಡ್ಡವನಿದ್ದಾನೆ.
ಮತ್ತಾಯನು 12 : 42 (KNV)
ನ್ಯಾಯವಿಚಾರಣೆ ಯಲ್ಲಿ ದಕ್ಷಿಣದ ರಾಣಿಯು ಈ ಸಂತತಿಯವರೊಂದಿಗೆ ಎದ್ದು ಇವರನ್ನು ಖಂಡಿಸುವಳು; ಯಾಕಂದರೆ ಆಕೆಯು ಸೊಲೊಮೋನನ ಜ್ಞಾನವನ್ನು ಕೇಳುವದಕ್ಕಾಗಿ ಭೂಮಿ ಯ ಕಟ್ಟಕಡೆಯಿಂದ ಬಂದಳು; ಇಗೋ, ಇಲ್ಲಿ ಸೊಲೊ ಮೋನನಿಗಿಂತಲೂ ದೊಡ್ಡವನಿದ್ದಾನೆ.
ಮತ್ತಾಯನು 12 : 43 (KNV)
ಅಶುದ್ಧಾತ್ಮವು ಒಬ್ಬ ಮನುಷ್ಯನಿಂದ ಹೊರಗೆ ಹೋದ ಮೇಲೆ ನೀರಿಲ್ಲದ ಸ್ಥಳಗಳಲ್ಲಿ ವಿಶ್ರಾಂತಿಗಾಗಿ ತಿರುಗಾಡಿದರೂ ಅದನ್ನು ಕಂಡುಕೊಳ್ಳಲಿಲ್ಲ.
ಮತ್ತಾಯನು 12 : 44 (KNV)
ಆಗ ಅದು--ನಾನು ಹೊರಟುಬಂದ ನನ್ನ ಮನೆಗೆ ಹಿಂತಿರುಗುವೆನು ಎಂದು ಅಂದುಕೊಂಡು ಬಂದು ಅದು ಬರಿದಾಗಿಯೂ ಗುಡಿಸಿ ಅಲಂಕರಿಸಲ್ಪಟ್ಟದ್ದಾ ಗಿಯೂ ಇರುವದನ್ನು ಕಂಡಿತು.
ಮತ್ತಾಯನು 12 : 45 (KNV)
ತರುವಾಯ ಅದು ಹೋಗಿ ತನಗಿಂತ ಕೆಟ್ಟವುಗಳಾಗಿರುವ ಬೇರೆ ಏಳು ಆತ್ಮಗಳನ್ನು ಕರಕೊಂಡು ಅವು ಅದರೊಳಗೆ ಪ್ರವೇಶಿಸಿ ವಾಸಮಾಡುತ್ತವೆ; ಹೀಗೆ ಆ ಮನುಷ್ಯನ ಕಡೇ ಸ್ಥಿತಿಯು ಮೊದಲಿಗಿಂತಲೂ ಕೆಟ್ಟದ್ದಾಗಿರುವದು. ಅದರಂತೆಯೇ ಈ ಕೆಟ್ಟ ಸಂತತಿಗೂ ಆಗುವದು ಎಂದು ಹೇಳಿದನು.
ಮತ್ತಾಯನು 12 : 46 (KNV)
ಆತನು ಇನ್ನೂ ಜನರ ಸಂಗಡ ಮಾತನಾಡು ತ್ತಿದ್ದಾಗ ಇಗೋ, ಆತನ ತಾಯಿಯೂ ಆತನ ಸಹೋದರರೂ ಆತನೊಂದಿಗೆ ಮಾತನಾಡಬೇಕೆಂದು ಅಪೇಕ್ಷಿಸಿ ಹೊರಗೆ ನಿಂತಿದ್ದರು.
ಮತ್ತಾಯನು 12 : 47 (KNV)
ಆಗ ಒಬ್ಬನು ಆತನಿಗೆ--ಇಗೋ, ನಿನ್ನ ತಾಯಿಯೂ ನಿನ್ನ ಸಹೋ ದರರೂ ನಿನ್ನೊಂದಿಗೆ ಮಾತನಾಡಲು ಅಪೇಕ್ಷಿಸಿ ಹೊರಗೆ ನಿಂತಿದ್ದಾರೆ ಅಂದನು.
ಮತ್ತಾಯನು 12 : 48 (KNV)
ಅದಕ್ಕೆ ಆತನು ತನಗೆ ಹೇಳಿದವನಿಗೆ ಪ್ರತ್ಯುತ್ತರವಾಗಿ--ನನ್ನ ತಾಯಿ ಯಾರು? ಮತ್ತು ನನ್ನ ಸಹೋದರರು ಯಾರು? ಎಂದು ಹೇಳಿ ಶಿಷ್ಯರ ಕಡೆಗೆ ತನ್ನ ಕೈಚಾಚಿ--
ಮತ್ತಾಯನು 12 : 49 (KNV)
ಇಗೋ, ನನ್ನ ತಾಯಿಯು ಮತ್ತು ನನ್ನ ಸಹೋದರರು!
ಮತ್ತಾಯನು 12 : 50 (KNV)
ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತದಂತೆ ಮಾಡುವವನೇ ನನ್ನ ಸಹೋದರನೂ ಸಹೋದರಿ ಯೂ ತಾಯಿಯೂ ಆಗಿದ್ದಾರೆ ಅಂದನು.
❮
❯