ಅರಣ್ಯಕಾಂಡ 9 : 1 (KNV)
ಅವರು ಐಗುಪ್ತ ದೇಶದಿಂದ ಹೊರಟ ಎರಡನೇ ವರುಷದ ಮೊದಲನೆಯ ತಿಂಗಳಿನಲ್ಲಿ ಕರ್ತನು ಸೀನಾಯಿ ಅರಣ್ಯದಲ್ಲಿ ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನಂದರೆ
ಅರಣ್ಯಕಾಂಡ 9 : 2 (KNV)
ಇಸ್ರಾಯೇಲ್ ಮಕ್ಕಳು ಪಸ್ಕವನ್ನು ನೇಮಿಸಿದ ಸಮಯ ದಲ್ಲಿ ಆಚರಿಸಬೇಕು.
ಅರಣ್ಯಕಾಂಡ 9 : 3 (KNV)
ಈ ತಿಂಗಳಿನ ಹದಿನಾಲ್ಕನೇ ದಿವಸದ ಸಾಯಂಕಾಲದಲ್ಲಿ ಅದನ್ನು ಅದರ ಸಮಯ ದಲ್ಲಿ ಆಚರಿಸಬೇಕು. ಅದರ ಆಜ್ಞಾವಿಧಿಗಳ ಪ್ರಕಾರ ವಾಗಿಯೂ ಎಲ್ಲಾ ನಿಯಮಗಳ ಪ್ರಕಾರವಾಗಿಯೂ ಅದನ್ನು ಆಚರಿಸಬೇಕು.
ಅರಣ್ಯಕಾಂಡ 9 : 4 (KNV)
ಆಗ ಮೋಶೆಯು ಪಸ್ಕವನ್ನು ಆಚರಿಸುವದಕ್ಕೆ ಇಸ್ರಾಯೇಲ್ ಮಕ್ಕಳ ಸಂಗಡ ಮಾತ ನಾಡಿದನು.
ಅರಣ್ಯಕಾಂಡ 9 : 5 (KNV)
ಹೀಗೆ ಅವರು ಮೊದಲನೇ ತಿಂಗಳಿನ ಹದಿನಾಲ್ಕನೆಯ ದಿವಸದ ಸಾಯಂಕಾಲ ಸೀನಾಯಿ ಅರಣ್ಯದಲ್ಲಿ ಪಸ್ಕವನ್ನು ಆಚರಿಸಿದರು. ಕರ್ತನು ಮೋಶೆಗೆ ಆಜ್ಞಾಪಿಸಿದ್ದೆಲ್ಲಾದರ ಪ್ರಕಾರ ಇಸ್ರಾಯೇಲ್ ಮಕ್ಕಳು ಮಾಡಿದರು.
ಅರಣ್ಯಕಾಂಡ 9 : 6 (KNV)
ಆಗ ಶವದ ದೆಸೆಯಿಂದ ಅಶುದ್ಧರಾಗಿ ಪಸ್ಕವನ್ನು ಆ ದಿವಸದಲ್ಲಿ ಆಚರಿಸಲಿಕ್ಕಾಗದ ಕೆಲವು ಮನುಷ್ಯ ರಿದ್ದರು; ಅವರು ಆ ದಿವಸದಲ್ಲಿ ಮೋಶೆ ಆರೋನರ ಮುಂದೆ ಬಂದರು.
ಅರಣ್ಯಕಾಂಡ 9 : 7 (KNV)
ಆ ಮನುಷ್ಯರು ಅವನ ಸಂಗಡ ಮಾತನಾಡಿ--ನಾವು ಸತ್ತ ಮನುಷ್ಯನ ದೇಹವನ್ನು ಮುಟ್ಟಿದ್ದರಿಂದ ಅಶುದ್ಧರಾದೆವು; ಆದದರಿಂದ ನಾವು ಇಸ್ರಾಯೇಲ್ ಮಕ್ಕಳ ಮಧ್ಯದಲ್ಲಿ ಕರ್ತನ ಅರ್ಪಣೆ ಯನ್ನು ಅದರ ಸಮಯದಲ್ಲಿ ಅರ್ಪಿಸದ ಹಾಗೆ ನಮಗೆ ಯಾಕೆ ಅಡ್ಡಿಯಾಗಬೇಕು ಅಂದರು.
ಅರಣ್ಯಕಾಂಡ 9 : 8 (KNV)
ಮೋಶೆ ಅವ ರಿಗೆ--ಸುಮ್ಮನೆ ನಿಲ್ಲಿರಿ, ಕರ್ತನು ನಿಮ್ಮ ವಿಷಯದಲ್ಲಿ ಏನು ಆಜ್ಞಾಪಿಸುವನೋ ನಾನು ವಿಚಾರಿಸುತ್ತೇನೆ ಅಂದನು.
ಅರಣ್ಯಕಾಂಡ 9 : 9 (KNV)
ಕರ್ತನು ಮೋಶೆ ಸಂಗಡ ಮಾತನಾಡಿ ಅವನಿಗೆ
ಅರಣ್ಯಕಾಂಡ 9 : 10 (KNV)
ಇಸ್ರಾಯೇಲ್ ಮಕ್ಕಳಿಗೆ--ನಿಮ್ಮಲ್ಲಿಯೂ ನಿಮ್ಮ ಸಂತತಿಯಲ್ಲಿಯೂ ಯಾವನಾದರೂ ಹೆಣದಿಂದ ಅಶುದ್ಧನಾಗಿದ್ದರೂ ಇಲ್ಲವೆ ದೂರ ಪ್ರಯಾಣದಲ್ಲಿ ದ್ದರೂ ಕರ್ತನಿಗೆ ಪಸ್ಕವನ್ನು ಆಚರಿಸಬೇಕು.
ಅರಣ್ಯಕಾಂಡ 9 : 11 (KNV)
ಅವರು ಎರಡನೇ ತಿಂಗಳಿನ ಹದಿನೈದನೇ ದಿವಸದ ಸಾಯಂಕಾಲದಲ್ಲಿ ಆಚರಿಸಲಿ, ಅದನ್ನು ಹುಳಿಯಿಲ್ಲದ ರೊಟ್ಟಿಗಳ ಸಂಗಡಲೂ ಕಹಿಯಾದವುಗಳ ಸಂಗಡಲೂ ಊಟ ಮಾಡಬೇಕು.
ಅರಣ್ಯಕಾಂಡ 9 : 12 (KNV)
ಅವರು ಅದರಿಂದ ಮರು ದಿವಸಕ್ಕೆ ಏನೂ ಉಳಿಸಬಾರದು; ಅದರಲ್ಲಿ ಒಂದು ಎಲುಬನ್ನಾದರೂ ಮುರಿಯಬಾರದು; ಪಸ್ಕದ ಸಮಸ್ತ ಕಟ್ಟಳೆ ಪ್ರಕಾರವಾಗಿ ಅದನ್ನು ಆಚರಿಸಬೇಕು.
ಅರಣ್ಯಕಾಂಡ 9 : 13 (KNV)
ಆದರೆ ಶುದ್ಧನಾದ ಮನುಷ್ಯನೂ ಪ್ರಯಾಣಮಾಡದವನೂ ಪಸ್ಕವನ್ನು ಆಚರಿಸುವದಕ್ಕೆ ತಪ್ಪಿದರೆ ಅವನನ್ನು ಅವನ ಜನರೊಳಗಿಂದ ತೆಗೆದುಹಾಕಬೇಕು; ಅವನು ಕರ್ತನ ಅರ್ಪಣೆಯನ್ನು ಅದರ ಸಮಯದಲ್ಲಿ ತಾರದಿದ್ದ ಕಾರಣ ಆ ಮನುಷ್ಯನು ತನ್ನ ಪಾಪವನ್ನು ಹೊತ್ತುಕೊಳ್ಳಬೇಕು.
ಅರಣ್ಯಕಾಂಡ 9 : 14 (KNV)
ಪರದೇಶಿಯಾದವನು ನಿಮ್ಮ ಸಂಗಡ ವಾಸಮಾಡಿ ಕರ್ತನಿಗೆ ಹಬ್ಬವನ್ನು ಆಚರಿಸಿದರೆ ಪಸ್ಕದ ಆಜ್ಞಾವಿಧಿಯ ಪ್ರಕಾರವಾಗಿಯೂ ನ್ಯಾಯದ ಪ್ರಕಾರವಾಗಿಯೂ ಮಾಡಬೇಕು; ನಿಮಗೂ ಪರದೇಶಸ್ತನಿಗೂ ಒಂದೇ ಕಟ್ಟಳೆ ಇರಬೇಕು ಎಂದು ಹೇಳಿದನು.
ಅರಣ್ಯಕಾಂಡ 9 : 15 (KNV)
ಗುಡಾರವನ್ನು ಎತ್ತಿದ ದಿವಸದಲ್ಲಿ ಮೇಘವು ನಿವಾಸದ ಕಡೆಗೆ ಅಂದರೆ, ಸಾಕ್ಷೀ ಗುಡಾರವನ್ನು ಮುಚ್ಚಿತು. ಸಾಯಂಕಾಲದಿಂದ ಉದಯದ ವರೆಗೆ ಅದು ಬೆಂಕಿಯಂತೆ ಗುಡಾರದ ಮೇಲೆ ಇತ್ತು.
ಅರಣ್ಯಕಾಂಡ 9 : 16 (KNV)
ಈ ಪ್ರಕಾರ ಯಾವಾಗಲೂ ಅದು ಇತ್ತು; ಮೇಘವು ರಾತ್ರಿಯಲ್ಲಿ ಬೆಂಕಿಯಂತೆ ಅದನ್ನು ಮುಚ್ಚುತ್ತಿತ್ತು.
ಅರಣ್ಯಕಾಂಡ 9 : 17 (KNV)
ಆ ಮೇಘವು ಗುಡಾರದ ಮೇಲಿನಿಂದ ತೆಗಯಲ್ಪಟ್ಟಾಗ ಇಸ್ರಾಯೇಲ್ ಮಕ್ಕಳು ಪ್ರಯಾಣ ಮಾಡುತ್ತಿದ್ದರು; ಮೇಘವು ನೆಲೆಸಿದ ಸ್ಥಳದಲ್ಲಿ ಇಸ್ರಾಯೇಲ್ ಮಕ್ಕಳು ತಮ್ಮ ಗುಡಾರಗಳನ್ನು ಹಾಕಿದರು.
ಅರಣ್ಯಕಾಂಡ 9 : 18 (KNV)
ಕರ್ತನ ಆಜ್ಞೆಯ ಪ್ರಕಾರ ಇಸ್ರಾಯೇಲ್ ಮಕ್ಕಳು ಪ್ರಯಾಣ ಮಾಡಿ ದರು. ಕರ್ತನ ಆಜ್ಞೆಯ ಪ್ರಕಾರ ಗುಡಾರಗಳನ್ನು ಹಾಕಿದರು. ಮೇಘವು ಗುಡಾರದ ಮೇಲೆ ನೆಲೆಸಿರುವ ಕಾಲವೆಲ್ಲಾ ಅವರು ತಮ್ಮ ಗುಡಾರಗಳಲ್ಲಿ ವಾಸಿಸಿದರು.
ಅರಣ್ಯಕಾಂಡ 9 : 19 (KNV)
ಮೇಘವು ಗುಡಾರದ ಮೇಲೆ ಅನೇಕ ದಿವಸಗಳು ತಡಮಾಡಿದಾಗ ಇಸ್ರಾಯೇಲ್ ಮಕ್ಕಳು ಪ್ರಯಾಣ ಮಾಡದೆ ಕರ್ತನ ಅಪ್ಪಣೆಯನ್ನು ಕೈಕೊಳ್ಳುತ್ತಿದ್ದರು.
ಅರಣ್ಯಕಾಂಡ 9 : 20 (KNV)
ಇದಲ್ಲದೆ ಮೇಘವು ಗುಡಾರದ ಮೇಲೆ ಸ್ವಲ್ಪ ದಿವಸಗಳು ಇರುವಾಗ ಅವರು ಕರ್ತನ ಆಜ್ಞೆಯ ಪ್ರಕಾರ ಇಳುಕೊಂಡು ಕರ್ತನ ಆಜ್ಞೆಯ ಪ್ರಕಾರ ಪ್ರಯಾಣ ಮಾಡುತ್ತಿದ್ದರು.
ಅರಣ್ಯಕಾಂಡ 9 : 21 (KNV)
ಮೇಘವು ಸಾಯಂಕಾಲ ದಿಂದ ಉದಯದ ವರೆಗೆ ಇದ್ದು ಬೆಳಿಗ್ಗೆ ಮೇಲಕ್ಕೆ ತೆಗೆಯಲ್ಪಟ್ಟರೆ ಆಗ ಅವರು ಪ್ರಯಾಣ ಮಾಡುತ್ತಿದ್ದರು; ಇಲ್ಲವೆ ಹಗಲು ರಾತ್ರಿ ಇದ್ದು ಮೇಘವು ಮೇಲಕ್ಕೆ ಎತ್ತಲ್ಪಟ್ಟರೆ ಅವರು ಪ್ರಯಾಣ ಮಾಡುತ್ತಿದ್ದರು.
ಅರಣ್ಯಕಾಂಡ 9 : 22 (KNV)
ಇಲ್ಲವೆ ಆ ಮೇಘವು ಎರಡು ದಿವಸಗಳಾದರೂ ಒಂದು ತಿಂಗಳಾದರೂ ಒಂದು ವರ್ಷವಾದರೂ ಗುಡಾರದ ಮೇಲೆ ನೆಲೆಸಿ ತಡಮಾಡಿದರೆ ಇಸ್ರಾ ಯೇಲ್ ಮಕ್ಕಳು ಪ್ರಯಾಣಮಾಡದೆ ಇಳುಕೊಂಡಿ ದ್ದರು. ಅದು ಮೇಲಕ್ಕೆತ್ತಲ್ಪಟ್ಟಾಗಲೇ ಅವರು ಪ್ರಯಾಣ ಮಾಡುತ್ತಿದ್ದರು.
ಅರಣ್ಯಕಾಂಡ 9 : 23 (KNV)
ಕರ್ತನ ಆಜ್ಞೆಯ ಪ್ರಕಾರ ಅವರು ಇಳುಕೊಳ್ಳುತ್ತಾ ಕರ್ತನ ಆಜ್ಞೆಯ ಪ್ರಕಾರ ಪ್ರಯಾಣ ಮಾಡುತ್ತಾ ಇದ್ದರು. ಮೋಶೆಗೆ ಕರ್ತನು ಆಜ್ಞಾಪಿಸಿ ದಂತೆ ಕರ್ತನ ಅಪ್ಪಣೆಯನ್ನು ಕಾಪಾಡುತ್ತಿದ್ದರು.

1 2 3 4 5 6 7 8 9 10 11 12 13 14 15 16 17 18 19 20 21 22 23