ಅರಣ್ಯಕಾಂಡ 5 : 1 (KNV)
ಇದಲ್ಲದೆ ಕರ್ತನು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನಂದರೆ--
ಅರಣ್ಯಕಾಂಡ 5 : 2 (KNV)
ಕುಷ್ಠವಿ ರುವವರೆಲ್ಲರನ್ನೂ ಮೇಹವುಳ್ಳವರೆಲ್ಲರನ್ನೂ ಹೆಣದಿಂದ ಅಶುದ್ಧವಾದವರೆಲ್ಲರನ್ನೂ ಪಾಳೆಯದೊಳಗಿಂದ ಕಳು ಹಿಸಬೇಕೆಂದು ಇಸ್ರಾಯೇಲ್ ಮಕ್ಕಳಿಗೆ ಆಜ್ಞಾಪಿಸು.
ಅರಣ್ಯಕಾಂಡ 5 : 3 (KNV)
ಗಂಡಸನ್ನಾಗಲಿ ಹೆಂಗಸನ್ನಾಗಲಿ ನೀವು ಹೊರಗೆ ಕಳುಹಿಸಬೇಕು. ನಾನು ಅವರ ಮಧ್ಯದಲ್ಲಿ ವಾಸ ಮಾಡುವ ಪಾಳೆಯವನ್ನು ಅವರು ಅಶುದ್ಧ ಮಾಡದ ಹಾಗೆ ನೀವು ಅವರನ್ನು ಹೊರಗೆ ಕಳುಹಿಸಬೇಕು ಎಂಬದೇ.
ಅರಣ್ಯಕಾಂಡ 5 : 4 (KNV)
ಆಗ ಇಸ್ರಾಯೇಲ್ ಮಕ್ಕಳು ಹಾಗೆ ಮಾಡಿ ಅವರನ್ನು ಪಾಳೆಯದ ಹೊರಗೆ ಕಳುಹಿಸಿದರು. ಕರ್ತನು ಮೋಶೆಗೆ ಹೇಳಿದ ಹಾಗೆ ಇಸ್ರಾಯೇಲ್ ಮಕ್ಕಳು ಮಾಡಿದರು.
ಅರಣ್ಯಕಾಂಡ 5 : 5 (KNV)
ಕರ್ತನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನಂದರೆ--
ಅರಣ್ಯಕಾಂಡ 5 : 6 (KNV)
ಇಸ್ರಾಯೇಲ್ ಮಕ್ಕಳ ಸಂಗಡ ಮಾತನಾಡಬೇಕಾದದ್ದೇನಂದರೆ--ಪುರುಷನಾದರೂ ಸ್ರ್ತೀಯಾದರೂ ಮನುಷ್ಯರು ಮಾಡುವ ಯಾವ ದೊಂದು ಪಾಪಮಾಡಿ ಕರ್ತನಿಗೆ ವಿರೋಧವಾಗಿ ಆಜ್ಞೆವಿಾರಿದರೆ ಆ ಮನುಷ್ಯನು ಅಪರಾಧಿಯಾಗಿದ್ದಾನೆ;
ಅರಣ್ಯಕಾಂಡ 5 : 7 (KNV)
ಆಗ ಅವರು ಮಾಡಿದ ಪಾಪವನ್ನು ಅರಿಕೆಮಾಡಿ ಅವರ ಅಪರಾಧದ ಬದಲು ಕೊಟ್ಟು ಅದರ ಸಂಗಡ ಐದನೇ ಪಾಲನ್ನು ಕೂಡಿಸಿ ಯಾರಿಗೆ ಅಪರಾಧ ಮಾಡಿ ದರೋ ಅವರಿಗೆ ಕೊಡಬೇಕು.
ಅರಣ್ಯಕಾಂಡ 5 : 8 (KNV)
ಆದರೆ ಅಪರಾಧಕ್ಕೆ ಬದಲು ಕೊಡುವದಕ್ಕೆ ಆ ಮನುಷ್ಯನಿಗೆ ಸಂಬಂಧಿಕನು ಇಲ್ಲದಿದ್ದರೆ ಸಲ್ಲಿಸಿದ ಆ ಅಪರಾಧವು ಅವನ ನಿಮಿತ್ತ ಪಾಪ ಮುಚ್ಚುವ ಟಗರಿನ ಹೊರತಾಗಿ ಅದು ಕರ್ತನದೂ ಯಾಜಕನದೂ ಆಗಿರಬೇಕು.
ಅರಣ್ಯಕಾಂಡ 5 : 9 (KNV)
ಇದಲ್ಲದೆ ಇಸ್ರಾಯೇಲ್ ಮಕ್ಕಳು ತರುವ ಸಕಲ ಪರಿಶುದ್ಧವಾದ ಬಲಿಗಳೆಲ್ಲಾ ಯಾಜಕನಿಗೇ ಸಲ್ಲಬೇಕು.
ಅರಣ್ಯಕಾಂಡ 5 : 10 (KNV)
ಪ್ರತಿ ಮನುಷ್ಯನ ಪರಿಶುದ್ಧವಾದವುಗಳು ಅವನಿಗೇ ಸಲ್ಲಬೇಕು. ಯಾವನಾದರೂ ಏನಾದರೂ ಯಾಜಕನಿಗೆ ಕೊಟ್ಟದ್ದು ಅವನಿಗೇ ಆಗಬೇಕು ಎಂದು ಹೇಳಿದನು.
ಅರಣ್ಯಕಾಂಡ 5 : 11 (KNV)
ಕರ್ತನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನಂದರೆ--
ಅರಣ್ಯಕಾಂಡ 5 : 12 (KNV)
ಯಾವನ ಹೆಂಡತಿಯಾದರೂ ದಾರಿತಪ್ಪಿ ಅವನಿಗೆ ವಿರೋಧವಾದ ಕೃತ್ಯವನ್ನು ಮಾಡಿ ದರೆ
ಅರಣ್ಯಕಾಂಡ 5 : 13 (KNV)
ಇಲ್ಲವೆ ಒಬ್ಬನು ಅವಳ ಸಂಗಡ ಮಲಗಿ ಸಂಗಮ ಮಾಡಿದ್ದು ಅವಳ ಗಂಡನ ಕಣ್ಣುಗಳಿಗೆ ಮರೆಯಾಗಿದ್ದರೆ, ಅವಳು ಅಶುದ್ಧಳೆಂಬದು ಗುಪ್ತವಾಗಿ ದ್ದರೆ, ಅವಳಿಗೆ ವಿರೋಧವಾಗಿ ಸಾಕ್ಷಿ ಇಲ್ಲದೆ ಅವಳು ಹಿಡಿಯಲ್ಪಡದಿದ್ದರೆ,
ಅರಣ್ಯಕಾಂಡ 5 : 14 (KNV)
ಗಂಡನ ಮೇಲೆ ರೋಷದ ಆತ್ಮ ಬಂದು ಅವನು ಅಶುದ್ಧಳಾದ ತನ್ನ ಹೆಂಡತಿಯ ಮೇಲೆ ರೋಷಗೊಂಡರೆ ಇಲ್ಲವೆ ರೋಷದ ಆತ್ಮವು ಅವನ ಮೇಲೆ ಬಂದು ಅಶುದ್ಧಳಾಗದೆ ಇರುವ ತನ್ನ ಹೆಂಡತಿಯ ಮೇಲೆ ರೋಷಗೊಂಡರೆ,
ಅರಣ್ಯಕಾಂಡ 5 : 15 (KNV)
ಆ ಮನು ಷ್ಯನು ತನ್ನ ಹೆಂಡತಿಯನ್ನು ಯಾಜಕನ ಬಳಿಗೆ ತಂದು ಅವಳಿಗೋಸ್ಕರ ಕಾಣಿಕೆಯಾಗಿ ಏಫದ ಹತ್ತನೇ ಪಾಲನ್ನು ಜವೆಗೋಧಿಯ ಹಿಟ್ಟನ್ನು ತರಬೇಕು. ಅದರ ಮೇಲೆ ಎಣ್ಣೆಯನ್ನಾದರೂ ಸಾಂಬ್ರಾಣಿಯನ್ನಾದರೂ ಹಾಕ ಬಾರದು; ಅದು ರೋಷದ ಕಾಣಿಕೆಯೂ ಅಪರಾಧ ವನ್ನು ಜ್ಞಾಪಕಕ್ಕೆ ತರುವ ಕಾಣಿಕೆಯೂ ಆಗಿದೆ.
ಅರಣ್ಯಕಾಂಡ 5 : 16 (KNV)
ಯಾಜಕನು ಅವಳನ್ನು ಸವಿಾಪಕ್ಕೆ ಕರೆದು ಕರ್ತನ ಸಮ್ಮುಖದಲ್ಲಿ ನಿಲ್ಲಿಸಬೇಕು.
ಅರಣ್ಯಕಾಂಡ 5 : 17 (KNV)
ಆಗ ಯಾಜಕನು ಪವಿತ್ರ ವಾದ ನೀರನ್ನು ಮಣ್ಣಿನ ಗಡಿಗೆಗಳಲ್ಲಿ ತೆಗೆದು ಕೊಳ್ಳಬೇಕು; ಗುಡಾರದ ನೆಲದಲ್ಲಿರುವ ಧೂಳನ್ನು ಯಾಜಕನು ತಕ್ಕೊಂಡು ಆ ನೀರಿನೊಳಗೆ ಹಾಕಬೇಕು.
ಅರಣ್ಯಕಾಂಡ 5 : 18 (KNV)
ಯಾಜಕನು ಆ ಸ್ತ್ರೀಯನ್ನು ಕರ್ತನ ಸಮ್ಮುಖದಲ್ಲಿ ನಿಲ್ಲಿಸಿ ಆಕೆಯ ತಲೆಯ ಮೇಲಿರುವ ಮುಸುಕನ್ನು ತೆಗೆದು ಅವಳ ಕೈಗಳಲ್ಲಿ ರೋಷದ ಕಾಣಿಕೆಯಾಗಿರುವ ಜ್ಞಾಪಕದ ಕಾಣಿಕೆಯನ್ನು ಇಡಬೇಕು. ಆದರೆ ಯಾಜಕನ ಕೈಯಲ್ಲಿ ಶಪಿಸುವಂತ ಕಹಿಯಾದ ನೀರು ಇರಬೇಕು.
ಅರಣ್ಯಕಾಂಡ 5 : 19 (KNV)
ಆಗ ಯಾಜಕನು ಅವಳನ್ನು ಪ್ರಮಾಣಮಾಡಿಸಿ ಹೇಳಬೇಕಾದದ್ದು: ಒಬ್ಬ ಮನುಷ್ಯನು ನಿನ್ನ ಸಂಗಡ ಮಲಗದೆ ನೀನು ಅಪವಿತ್ರಳಾಗಿ ನಿನ್ನ ಗಂಡನನ್ನು ಬಿಟ್ಟು ಜಾರತ್ವಮಾಡದೆ ಇದ್ದರೆ ಶಪಿಸುವ ಈ ಕಹಿಯಾದ ನೀರಿಗೆ ನಿರಪರಾಧಿಯಾಗು.
ಅರಣ್ಯಕಾಂಡ 5 : 20 (KNV)
ಆದರೆ ನೀನು ನಿನ್ನ ಗಂಡನನ್ನು ಬಿಟ್ಟು ಜಾರತ್ವಮಾಡಿ ಅಶುದ್ಧಳಾಗಿದ್ದರೆ ನಿನ್ನ ಗಂಡನನ್ನು ಬಿಟ್ಟು ಮತ್ತೊಬ್ಬನು ನಿನ್ನ ಸಂಗಡ ಮಲಗಿದ್ದರೆ
ಅರಣ್ಯಕಾಂಡ 5 : 21 (KNV)
ಯಾಜಕನು ಶಾಪದ ಪ್ರಮಾಣ ದಿಂದ ಆ ಸ್ತ್ರೀಗೆ ಹೇಳಬೇಕಾದದ್ದೇನಂದರೆ--ಕರ್ತನು ನಿನ್ನ ತೊಡೆಯನ್ನು ಕ್ಷೀಣವಾಗುವಂತೆಯೂ ನಿನ್ನ ಹೊಟ್ಟೆಯನ್ನು ಉಬ್ಬುವಂತೆಯೂ ಮಾಡುವದರಿಂದ ಕರ್ತನು ನಿನ್ನನ್ನು ನಿನ್ನ ಜನರೊಳಗೆ ಶಾಪವನ್ನಾಗಿಯೂ ದೂಷಣೆಯನ್ನಾಗಿಯೂ ಇಡಲಿ.
ಅರಣ್ಯಕಾಂಡ 5 : 22 (KNV)
ಶಪಿಸುವಂಥ ಈ ನೀರು ಹೊಟ್ಟೆಯನ್ನು ಉಬ್ಬಿಸುವದಕ್ಕೂ ತೊಡೆಯನ್ನು ಕ್ಷೀಣಿಸುವದಕ್ಕೂ ನಿನ್ನ ಕರುಳುಗಳ ಒಳಗೆ ಹೋಗು ವದು; ಈ ಪ್ರಕಾರ ಯಾಜಕನು ಆ ಸ್ತ್ರೀಯನ್ನು ಶಾಪದ ಪ್ರಮಾಣದಿಂದ ಪ್ರಮಾಣ ಮಾಡಿಸಬೇಕು. ಅದಕ್ಕೆ ಆ ಸ್ತ್ರೀಯು--ಹಾಗೆಯೇ ಆಗಲಿ ಅನ್ನಬೇಕು.
ಅರಣ್ಯಕಾಂಡ 5 : 23 (KNV)
ಯಾಜ ಕನು ಈ ಶಾಪವನ್ನು ಪುಸ್ತಕದಲ್ಲಿ ಬರೆದು, ಕಹಿಯಾದ ನೀರಿನಿಂದ ಅಳಿಸಿ,
ಅರಣ್ಯಕಾಂಡ 5 : 24 (KNV)
ಆ ಸ್ತ್ರೀಗೆ ಶಪಿಸುವಂತ ಕಹಿಯಾದ ನೀರನ್ನು ಕುಡಿಸಬೇಕು. ಆಗ ಶಪಿಸುವ ನೀರು ಅವಳಲ್ಲಿ ಸೇರಿ ಕಹಿಯಾಗುವದು.
ಅರಣ್ಯಕಾಂಡ 5 : 25 (KNV)
ಯಾಜಕನು ಆ ಸ್ತ್ರೀಯ ಕೈಯಿಂದ ರೋಷದ ಕಾಣಿಕೆಯನ್ನು ತಕ್ಕೊಂಡು ಆ ಕಾಣಿಕೆಯನ್ನು ಕರ್ತನ ಸಮ್ಮುಖದಲ್ಲಿ ಅಲ್ಲಾಡಿಸಿ ಬಲಿ ಪೀಠದ ಸವಿಾಪಕ್ಕೆ ತರಬೇಕು.
ಅರಣ್ಯಕಾಂಡ 5 : 26 (KNV)
ಆಗ ಯಾಜಕನು ಕಾಣಿಕೆಯಿಂದ ಜ್ಞಾಪಕಭಾಗವಾಗಿ ಒಂದು ಹಿಡಿ ತಕ್ಕೊಂಡು ಯಜ್ಞವೇದಿಯ ಮೇಲೆ ಸುಟ್ಟು ಸ್ತ್ರೀಗೆ ಆ ನೀರನ್ನು ಕುಡಿಸಬೇಕು.
ಅರಣ್ಯಕಾಂಡ 5 : 27 (KNV)
ಆಕೆಗೆ ಆ ನೀರನ್ನು ಕುಡಿಸಿದ ಮೇಲೆ ಆಕೆಯು ಅಶುದ್ಧಳಾಗಿ ತನ್ನ ಗಂಡನಿಗೆ ಅಪರಾಧ ಮಾಡಿದ್ದಾಗಿದ್ದರೆ ಶಪಿಸುವ ನೀರು ಆಕೆ ಯೊಳಗೆ ಸೇರಿ ಕಹಿಯಾಗುವದು; ಅವಳ ಹೊಟ್ಟೆ ಉಬ್ಬಿ ತೊಡೆ ಕ್ಷೀಣವಾಗುವದು. ಆಗ ಆ ಸ್ತ್ರೀ ತನ್ನ ಜನರ ಮಧ್ಯದಲ್ಲಿ ಶಾಪವಾಗಿರುವಳು.
ಅರಣ್ಯಕಾಂಡ 5 : 28 (KNV)
ಆದರೆ ಆ ಸ್ತ್ರೀ ಅಶುದ್ಧಳಲ್ಲದೆ ಶುದ್ಧಳಾಗಿದ್ದರೆ ಅವಳು ನಿರಪರಾಧಿ ಯಾಗಿದ್ದು ಸಂತಾನವನ್ನು ಪಡೆಯುವಳು.
ಅರಣ್ಯಕಾಂಡ 5 : 29 (KNV)
ರೋಷಕ್ಕೆ ನಿಯಮವು ಇದೇ. ಒಬ್ಬ ಹೆಂಡತಿ ತನ್ನ ಗಂಡನನ್ನು ಬಿಟ್ಟು ಜಾರತ್ವಮಾಡಿ ಅಶುದ್ಧಳಾಗಿದ್ದರೆ
ಅರಣ್ಯಕಾಂಡ 5 : 30 (KNV)
ಅಥವಾ ಪುರುಷನ ಮೇಲೆ ರೋಷದ ಆತ್ಮ ಬಂದು ಅವನು ತನ್ನ ಹೆಂಡತಿಯ ಮೇಲೆ ರೋಷಗೊಂಡಿದ್ದರೆ ಅವನು ತನ್ನ ಹೆಂಡತಿಯನ್ನು ಕರ್ತನ ಸಮ್ಮುಖದಲ್ಲಿ ನಿಲ್ಲಿಸಲಿ; ಯಾಜಕನು ಅವಳಿಗೆ ಈ ಸಮಸ್ತ ಆಜ್ಞೆ ಪ್ರಕಾರ ಮಾಡುವನು.
ಅರಣ್ಯಕಾಂಡ 5 : 31 (KNV)
ಆಗ ಗಂಡನು ನಿರಪರಾಧಿ ಯಾಗಿರುವನು. ಆದರೆ ಹೆಂಡತಿಯು ತನ್ನ ಅಕ್ರಮವನ್ನು ಹೊತ್ತುಕೊಳ್ಳುವಳು ಎಂಬದೇ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31