ಅರಣ್ಯಕಾಂಡ 35 : 1 (KNV)
ಕರ್ತನು ಯೆರಿಕೋವಿಗೆದುರಾಗಿ ಯೊರ್ದ ನಿನ ಬಳಿಯಲ್ಲಿರುವ ಮೋವಾಬಿನ ಬೈಲುಗಳಲ್ಲಿ ಮೋಶೆಯ ಸಂಗಡ ಮಾತನಾಡಿ--
ಅರಣ್ಯಕಾಂಡ 35 : 2 (KNV)
ಇಸ್ರಾಯೇಲ್ ಮಕ್ಕಳಿಗೆ ಆಜ್ಞಾಪಿಸಬೇಕಾದದ್ದೇ ನಂದರೆ--ಅವರು ತಮ್ಮ ಸ್ವಾಸ್ತ್ಯದ ಭಾಗದಿಂದ ಲೇವಿ ಯರಿಗೆ ವಾಸಮಾಡುವದಕ್ಕೆ ಪಟ್ಟಣಗಳನ್ನು ಕೊಡ ಬೇಕು; ಪಟ್ಟಣಗಳ ಸುತ್ತಮುತ್ತಲಿರುವ ಉಪನಗರ ಗಳನ್ನು ನೀವು ಲೇವಿಯರಿಗೆ ಕೊಡಬೇಕು.
ಅರಣ್ಯಕಾಂಡ 35 : 3 (KNV)
ಪಟ್ಟಣಗಳು ಅವರಿಗೆ ವಾಸಮಾಡುವದಕ್ಕೂ ಅವುಗಳ ಉಪನಗರ ಗಳು ಅವರ ಪಶುಗಳಿಗೋಸ್ಕರವೂ ಸಮಸ್ತ ಸರಕುಗಳಿ ಗೋಸ್ಕರವೂ ಸಮಸ್ತ ಪ್ರಾಣಿಗಳಿಗೋಸ್ಕರವೂ ಇರ ಬೇಕು.
ಅರಣ್ಯಕಾಂಡ 35 : 4 (KNV)
ನೀವು ಲೇವಿಯರಿಗೆ ಕೊಡಬೇಕಾದ ಪಟ್ಟಣ ಗಳ ಉಪನಗರಗಳು ಪಟ್ಟಣದ ಗೋಡೆಯಿಂದ ಸುತ್ತಲೂ ಸಾವಿರ ಮೊಳ ಅಗಲವಾಗಿರಬೇಕು.
ಅರಣ್ಯಕಾಂಡ 35 : 5 (KNV)
ನೀವು ಪಟ್ಟಣದ ಹೊರಗೆ ಪೂರ್ವ ಕಡೆಯಲ್ಲಿ ಎರಡು ಸಾವಿರ ಮೊಳ, ದಕ್ಷಿಣ ಕಡೆಯಲ್ಲಿ ಎರಡು ಸಾವಿರ ಮೊಳ, ಪಶ್ಚಿಮ ಕಡೆಯಲ್ಲಿ ಎರಡು ಸಾವಿರ ಮೊಳ, ಉತ್ತರ ಕಡೆಯಲ್ಲಿ ಎರಡು ಸಾವಿರ ಮೊಳ ಅಳೆಯಬೇಕು; ಮಧ್ಯದಲ್ಲಿ ಪಟ್ಟಣವಿರಬೇಕು; ಹೀಗೆ ಅವರ ಪಟ್ಟಣಗಳ ಉಪನಗರಗಳು ಇರಬೇಕು.
ಅರಣ್ಯಕಾಂಡ 35 : 6 (KNV)
ನೀವು ಲೇವಿಯರಿಗೆ ಕೊಡುವ ಪಟ್ಟಣಗಳೊಳಗೆ ಮನುಷ್ಯಹತ್ಯಮಾಡಿದ ವನು ಓಡುವಹಾಗೆ ಆರು ಆಶ್ರಯದ ಪಟ್ಟಣಗಳನ್ನು ನೇಮಿಸಬೇಕು; ಅವುಗಳ ಹೊರತು ನೀವು ನಾಲ್ವತ್ತೆರಡು ಪಟ್ಟಣಗಳನ್ನು ಕೊಡಬೇಕು.
ಅರಣ್ಯಕಾಂಡ 35 : 7 (KNV)
ನೀವು ಲೇವಿಯರಿಗೆ ಕೊಡಬೇಕಾದ ಸಮಸ್ತ ಪಟ್ಟಣಗಳು ಅವುಗಳ ಉಪ ನಗರಗಳ ಸಂಗಡ ನಾಲ್ವತ್ತೆಂಟು ಪಟ್ಟಣಗಳಾಗಿರಬೇಕು.
ಅರಣ್ಯಕಾಂಡ 35 : 8 (KNV)
ನೀವು ಇಸ್ರಾಯೇಲ್ ಮಕ್ಕಳ ಸ್ವಾಸ್ತ್ಯದಿಂದ ಕೊಡುವ ಪಟ್ಟಣಗಳನ್ನು ಹೆಚ್ಚಾದವರ ಕಡೆಯಿಂದ ಹೆಚ್ಚಾಗಿ ತಕ್ಕೊಳ್ಳಬೇಕು; ಕಡಿಮೆಯಾದವರ ಕಡೆಯಿಂದ ಕಡಿಮೆಯಾಗಿ ತಕ್ಕೊಳ್ಳಬೇಕು; ಒಬ್ಬೊಬ್ಬನು ತಾನು ಹೊಂದುವ ಸ್ವಾಸ್ತ್ಯಕ್ಕನುಸಾರವಾಗಿ ತನ್ನ ಪಟ್ಟಣ ಗಳೊಳಗಿಂದ ಲೇವಿಯರಿಗೆ ಕೊಡಬೇಕು ಎಂದು ಹೇಳಿದನು.
ಅರಣ್ಯಕಾಂಡ 35 : 9 (KNV)
ಕರ್ತನು ಮೋಶೆಯ ಸಂಗಡ ಮಾತನಾಡಿ--
ಅರಣ್ಯಕಾಂಡ 35 : 10 (KNV)
ನೀನು ಇಸ್ರಾಯೇಲ್ ಮಕ್ಕಳ ಸಂಗಡ ಮಾತನಾಡಿ ಅವರಿಗೆ ಹೇಳಬೇಕಾದದ್ದೇನಂದರೆ--ನೀವು ಯೊರ್ದ ನನ್ನು ದಾಟಿ ಕಾನಾನ್ ದೇಶಕ್ಕೆ ಬಂದಾಗ
ಅರಣ್ಯಕಾಂಡ 35 : 11 (KNV)
ಕೈತಪ್ಪಿ ಒಬ್ಬನನ್ನು ಕೊಂದ ಯಾವನಾದರೂ ಅಲ್ಲಿಗೆ ಓಡಿ ಹೋಗುವ ಹಾಗೆ ನಿಮಗೆ ಆಶ್ರಯಕ್ಕಾಗಿ ಪಟ್ಟಣಗಳನ್ನು ನೇಮಿಸಬೇಕು.
ಅರಣ್ಯಕಾಂಡ 35 : 12 (KNV)
ಕೊಂದವನು ಸಭೆಯ ಮುಂದೆ ನ್ಯಾಯತೀರ್ಪಿಗೆ ನಿಲ್ಲುವ ವರೆಗೂ ಸಾಯದ ಹಾಗೆ ಅವು ನಿಮಗೆ ಸೇಡು ತೀರಿಸುವವನ ದೆಸೆಯಿಂದ ಆಶ್ರಯದ ಪಟ್ಟಣಗಳಾಗಿರಬೇಕು.
ಅರಣ್ಯಕಾಂಡ 35 : 13 (KNV)
ನೀವು ಕೊಡುವ ಪಟ್ಟಣಗಳೊಳಗೆ ಆರು ಆಶ್ರಯದ ಪಟ್ಟಣಗಳು ಇರಬೇಕು.
ಅರಣ್ಯಕಾಂಡ 35 : 14 (KNV)
ಯೊರ್ದನಿನ ಈಚೆಯಲ್ಲಿ ಮೂರು ಪಟ್ಟಣಗಳನ್ನೂ ಕಾನಾನ್ ದೇಶದಲ್ಲಿ ಮೂರು ಪಟ್ಟಣ ಗಳನ್ನೂ ಆಶ್ರಯದ ಪಟ್ಟಣಗಳಾಗಿ ಕೊಡಬೇಕು.
ಅರಣ್ಯಕಾಂಡ 35 : 15 (KNV)
ಕೈತಪ್ಪಿ ಪ್ರಾಣಹತ್ಯ ಮಾಡುವವರೆಲ್ಲರು ಅಲ್ಲಿಗೆ ಓಡಿಹೋಗುವದಕ್ಕೆ ಈ ಆರು ಪಟ್ಟಣಗಳು ಇಸ್ರಾಯೇಲ್ ಮಕ್ಕಳಿಗೂ ಪರಕೀಯರಿಗೂ ಅವರಲ್ಲಿ ವಾಸಮಾಡುವವರಿಗೂ ಆಶ್ರಯಕ್ಕಾಗಿ ಇರಬೇಕು.
ಅರಣ್ಯಕಾಂಡ 35 : 16 (KNV)
ಒಬ್ಬನು ಕಬ್ಬಿಣದ ಆಯುಧದಿಂದ ಮತ್ತೊಬ್ಬನನ್ನು ಸಾಯುವ ಹಾಗೆ ಹೊಡೆದರೆ ಅವನು ಕೊಲೆಪಾತಕನು; ಆ ಕೊಲೆಪಾತಕನನ್ನು ನಿಜವಾಗಿಯೂ ಸಾಯಿಸಬೇಕು.
ಅರಣ್ಯಕಾಂಡ 35 : 17 (KNV)
ಒಬ್ಬನು ಮರಣವಾಗುವಂತೆ ಕಲ್ಲನ್ನು ಎಸೆದು ಮತ್ತೊಬ್ಬನನ್ನು ಸಾಯುವಹಾಗೆ ಹೊಡೆದರೆ ಅವನು ಕೊಲೆಪಾತಕನು; ಆ ಕೊಲೆಪಾತಕನನ್ನು ನಿಜವಾಗಿಯೂ ಸಾಯಿಸಬೇಕು.
ಅರಣ್ಯಕಾಂಡ 35 : 18 (KNV)
ಇಲ್ಲವೆ ಮರಣವಾಗುವಂತೆ ಮರದ ಆಯುಧವನ್ನು ಎಸೆದು ಒಬ್ಬನನ್ನು ಸಾಯುವ ಹಾಗೆ ಹೊಡೆದರೆ ಅವನು ಕೊಲೆಪಾತಕನು; ಆ ಕೊಲೆ ಪಾತಕನನ್ನು ನಿಜವಾಗಿಯೂ ಸಾಯಿಸಬೇಕು.
ಅರಣ್ಯಕಾಂಡ 35 : 19 (KNV)
ರಕ್ತ ಸೇಡು ತೀರಿಸಿಕೊಳ್ಳುವವನು ಕೊಲೆಪಾತಕನನ್ನು ತಾನೇ ಕೊಲ್ಲಬೇಕು; ಅವನನ್ನು ಸಂಧಿಸುವಾಗಲೇ ಕೊಲ್ಲ ಬೇಕು.
ಅರಣ್ಯಕಾಂಡ 35 : 20 (KNV)
ಒಬ್ಬನು ಮತ್ತೊಬ್ಬನನ್ನು ಹಗೆಮಾಡಿ ಸಾಯುವ ಹಾಗೆ ಹೊಡೆದರೆ ಇಲ್ಲವೆ ನೂಕುವದ ರಿಂದಲಾದರೂ ಹೊಂಚಿ ನೋಡಿಕೊಂಡು ಅವನ ಮೇಲೆ ಯಾವದನ್ನಾದರೂ ಬಲವಾಗಿ ಎಸೆದರೆ
ಅರಣ್ಯಕಾಂಡ 35 : 21 (KNV)
ಇಲ್ಲವೆ ಶತ್ರುತ್ವಮಾಡಿ ಅವನು ಸಾಯುವ ಹಾಗೆ ತನ್ನ ಕೈಯಿಂದ ಹೊಡೆದರೆ ಅವನು ಕೊಲೆಪಾತಕನೇ; ಹೊಡೆದವನನ್ನು ನಿಜವಾಗಿ ಸಾಯಿಸಬೇಕು; ರಕ್ತ ಸೇಡು ತೀರಿಸುವವನು ಅವನನ್ನು ಸಂಧಿಸುವಾಗಲೇ ಆ ಕೊಲೆ ಪಾತಕನನ್ನು ಕೊಲ್ಲಬೇಕು.
ಅರಣ್ಯಕಾಂಡ 35 : 22 (KNV)
ಆದರೆ ಶತ್ರುತ್ವವಿಲ್ಲದೆ ತಕ್ಷಣವೇ ಅವನನ್ನು ನೂಕುವದರಿಂದಲಾದರೂ ಸಮಯ ನೋಡಿಕೊಳ್ಳದೆ ಯಾವದಾದರೊಂದು ಆಯುಧವನ್ನು ಅವನ ಮೇಲೆ ಎಸೆದರೆ
ಅರಣ್ಯಕಾಂಡ 35 : 23 (KNV)
ಇಲ್ಲವೆ ಶತ್ರುತ್ವವಿಲ್ಲದೆಯೂ ಅವನ ಕೇಡನ್ನು ಹುಡುಕದೆಯೂ ಅವನನ್ನು ನೋಡದೆಯೂ ಮರಣ ವಾಗುವಂತೆ ಯಾವದಾದರೊಂದು ಕಲ್ಲನ್ನು ಅವನು ಸಾಯುವ ಹಾಗೆ ಅವನ ಮೇಲೆ ಬೀಳಮಾಡಿದರೆ
ಅರಣ್ಯಕಾಂಡ 35 : 24 (KNV)
ಸಭೆಯು ಈ ನ್ಯಾಯಗಳ ಪ್ರಕಾರ ಕೊಲ್ಲುವವನಿಗೂ ರಕ್ತ ಸೇಡು ತೀರಿಸುವವನಿಗೂ ನ್ಯಾಯತೀರಿಸಬೇಕು.
ಅರಣ್ಯಕಾಂಡ 35 : 25 (KNV)
ಸಭೆಯು ಕೊಂದವನನ್ನು ರಕ್ತದ ಸೇಡು ತೀರಿಸು ವವನ ಕೈಯಿಂದ ತಪ್ಪಿಸಿ ಅವನು ಓಡಿಹೋದ ಆಶ್ರಯದ ಪಟ್ಟಣಕ್ಕೆ ತಿರಿಗಿ ಸೇರಿಸಬೇಕು; ಪರಿಶುದ್ಧ ಎಣ್ಣೆಯಿಂದ ಅಭಿಷೇಕಿಸಲ್ಪಟ್ಟ ಪ್ರಧಾನಯಾಜಕನು ಸಾಯುವ ವರೆಗೂ ಅವನು ಅಲ್ಲೇ ವಾಸಮಾಡಲಿ.
ಅರಣ್ಯಕಾಂಡ 35 : 26 (KNV)
ಯಾವ ಸಮಯದಲ್ಲಾದರೂ ಕೊಲೆಪಾತಕನು ತಾನು ಓಡಿಹೋದ ಆಶ್ರಯದ ಪಟ್ಟಣದ ಮೇರೆ ಯನ್ನು ವಿಾರಿ ಹೊರಟರೆ
ಅರಣ್ಯಕಾಂಡ 35 : 27 (KNV)
ರಕ್ತದ ಸೇಡು ತೀರಿಸು ವವನು ಅವನನ್ನು ತನ್ನ ಆಶ್ರಯ ಪಟ್ಟಣದ ಮೇರೆಯ ಹೊರಗೆ ಕಂಡುಕೊಂಡು ಕೊಂದರೆ ಅವನಿಗೆ ರಕ್ತಾಪ ರಾಧವಿಲ್ಲ.
ಅರಣ್ಯಕಾಂಡ 35 : 28 (KNV)
ಅವನು ತನ್ನ ಆಶ್ರಯದ ಪಟ್ಟಣದ ಪ್ರಧಾನಯಾಜಕನು ಸಾಯುವ ವರೆಗೂ ವಾಸಮಾಡ ಬೇಕಾಗಿತ್ತು; ಪ್ರಧಾನ ಯಾಜಕನ ಮರಣದ ತರು ವಾಯ ಕೊಲೆಪಾತಕನು ತನ್ನ ಸ್ವಾಸ್ತ್ಯದ ದೇಶಕ್ಕೆ ಹೋಗಬಹುದು.
ಅರಣ್ಯಕಾಂಡ 35 : 29 (KNV)
ಹೀಗೆ ಇವು ನಿಮ್ಮ ಸಮಸ್ತ ನಿವಾಸಗಳಲ್ಲಿ ನಿಮ್ಮ ಸಂತತಿಗಳಿಗೆಲ್ಲಾ ನ್ಯಾಯದ ಕಟ್ಟಳೆಗಳಾಗಿರಬೇಕು.
ಅರಣ್ಯಕಾಂಡ 35 : 30 (KNV)
ಪ್ರಾಣಹತ್ಯ ಮಾಡುವ ಕೊಲೆಪಾತಕನನ್ನು ಸಾಕ್ಷಿಗಳ ಬಾಯಿಯ ಪ್ರಕಾರ ಕೊಲ್ಲಬೇಕು; ಸಾಯುವ ಹಾಗೆ ಯಾವ ಮನುಷ್ಯನಿಗಾದರೂ ವಿರೋಧವಾಗಿ ಒಬ್ಬನು ಸಾಕ್ಷಿ ಹೇಳಬಾರದು.
ಅರಣ್ಯಕಾಂಡ 35 : 31 (KNV)
ಸಾಯತಕ್ಕ ಕೊಲೆ ಪಾತಕನ ಪ್ರಾಣಕ್ಕೋಸ್ಕರ ಈಡನ್ನು ತಕ್ಕೊಳ್ಳಬೇಡಿರಿ; ಯಾಕಂದರೆ ಅವನು ನಿಜವಾಗಿಯೂ ಸಾಯಬೇಕು.
ಅರಣ್ಯಕಾಂಡ 35 : 32 (KNV)
ತನ್ನ ಆಶ್ರಯದ ಪಟ್ಟಣಕ್ಕೆ ಓಡಿಹೋದವನಿ ಗೋಸ್ಕರ ಅವನು ತಿರಿಗಿ ಬಂದು ಯಾಜಕನು ಸಾಯುವ ವರೆಗೂ ಸ್ವದೇಶದಲ್ಲಿ ವಾಸಮಾಡುವ ಹಾಗೆ ಈಡನ್ನು ತಕ್ಕೊಳ್ಳಬೇಡಿರಿ.
ಅರಣ್ಯಕಾಂಡ 35 : 33 (KNV)
ಹೀಗೆ ನೀವು ಇರುವ ದೇಶವನ್ನು ಅಪವಿತ್ರ ಮಾಡಬೇಡಿರಿ; ದೇಶವನ್ನು ಅಪವಿತ್ರಮಾಡು ವಂಥದ್ದು ರಕ್ತವೇ. ಅದರಲ್ಲಿ ಚೆಲ್ಲಲ್ಪಟ್ಟ ರಕ್ತದ ನಿಮಿತ್ತ ಅದನ್ನು ಚೆಲ್ಲಿದವನ ರಕ್ತದಿಂದಲ್ಲದೆ ದೇಶವು ಶುದ್ಧವಾ ಗುವದಿಲ್ಲ.
ಅರಣ್ಯಕಾಂಡ 35 : 34 (KNV)
ಆದದರಿಂದ ನೀವು ವಾಸಮಾಡುವ ದೇಶವನ್ನು ನೀವು ಅಶುದ್ಧಮಾಡಬೇಡಿರಿ; ಯಾಕಂದರೆ ನಾನು ಅದರೊಳಗೆ ವಾಸಿಸುತ್ತೇನೆ; ಕರ್ತನಾಗಿರುವ ನಾನೇ ಇಸ್ರಾಯೇಲ್ ಮಕ್ಕಳ ಮಧ್ಯದಲ್ಲಿ ವಾಸಿಸುತ್ತೇನೆ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34