ಅರಣ್ಯಕಾಂಡ 28 : 1 (KNV)
ಕರ್ತನು ಮೋಶೆಯ ಸಂಗಡ ಮಾತ ನಾಡಿ--
ಅರಣ್ಯಕಾಂಡ 28 : 2 (KNV)
ನೀನು ಇಸ್ರಾಯೇಲ್‌ ಮಕ್ಕಳಿಗೆ ಆಜ್ಞಾಪಿಸಿ ಅವರಿಗೆ--ನನ್ನ ಸುವಾಸನೆಗೋಸ್ಕರ ಬೆಂಕಿ ಯಿಂದ ಮಾಡಿದ ಬಲಿಗಳಿಗೋಸ್ಕರವಾಗಿರುವ ನನ್ನ ರೊಟ್ಟಿಯ ಅರ್ಪಣೆಯನ್ನು ಅದರ ನೇಮಕವಾದ ಸಮಯದಲ್ಲಿ ನನಗೆ ಅರ್ಪಿಸುವದಕ್ಕೆ ನೀವು ನೋಡಿ ಕೊಳ್ಳಿರಿ.
ಅರಣ್ಯಕಾಂಡ 28 : 3 (KNV)
ನೀನು ಅವರಿಗೆ ಹೇಳಬೇಕಾದದ್ದು--ನೀವು ಕರ್ತನಿಗೆ ಅರ್ಪಿಸಬೇಕಾದ ಅರ್ಪಣೆ ಏನಂದರೆನಿತ್ಯ ದಹನಬಲಿಗಾಗಿ ಪ್ರತಿದಿನ ಮಚ್ಚೆಯಿಲ್ಲದ ಒಂದು ವರುಷದ ಎರಡು ಕುರಿಮರಿಗಳು.
ಅರಣ್ಯಕಾಂಡ 28 : 4 (KNV)
ಒಂದು ಕುರಿಮರಿಯನ್ನು ಉದಯದಲ್ಲಿಯೂ ಮತ್ತೊಂದನ್ನು ಸಾಯಂಕಾಲದಲ್ಲಿಯೂ ಅರ್ಪಿಸಬೇಕು.
ಅರಣ್ಯಕಾಂಡ 28 : 5 (KNV)
ಆಹಾರದ ಅರ್ಪಣೆಗಾಗಿ ಹಿನ್ನಿನ ನಾಲ್ಕನೇ ಪಾಲು, ಕುಟ್ಟಿದ ಎಣ್ಣೆ ಕಲಸಿದ ಹಿಟ್ಟಿನ ಏಫದ ಹತ್ತನೇ ಪಾಲು. ಇದು ಸೀನಾಯಿ ಪರ್ವತದಲ್ಲಿ ಕರ್ತನಿಗೆ ಸುವಾಸನೆಯ ದಹನಬಲಿಗಾಗಿ ನೇಮಿಸಿದ ನಿತ್ಯ ದಹನಬಲಿಯು.
ಅರಣ್ಯಕಾಂಡ 28 : 6 (KNV)
ಒಂದು ಕುರಿಮರಿಗೆ ತಕ್ಕ ಪಾನದ ಅರ್ಪಣೆ ಹಿನ್ನಿನ ನಾಲ್ಕನೇ ಪಾಲು ಪರಿಶುದ್ಧ ಸ್ಥಳದಲ್ಲಿ ಅಮಲೇರುವ ದ್ರಾಕ್ಷಾರಸದ ಪಾನದ ಅರ್ಪಣೆಯನ್ನು ಕರ್ತನಿಗೆ ಹೊಯಿಸಬೇಕು.
ಅರಣ್ಯಕಾಂಡ 28 : 7 (KNV)
ಎರಡನೇ ಕುರಿಮರಿಯನ್ನು ಸಾಯಂಕಾಲದಲ್ಲಿ ಅರ್ಪಿಸಬೇಕು;
ಅರಣ್ಯಕಾಂಡ 28 : 8 (KNV)
ಅದರ ಆಹಾ ರದ ಅರ್ಪಣೆಯನ್ನೂ ಪಾನದ ಅರ್ಪಣೆಯನ್ನೂ ಉದಯದಲ್ಲಿ ಮಾಡಿದ ಹಾಗೆ ಕರ್ತನಿಗೆ ಸುವಾಸನೆ ಯಾಗುವಂತೆ ಬೆಂಕಿಯಿಂದ ಮಾಡಿದ ಬಲಿಯನ್ನು ನೀನು ಅರ್ಪಿಸಬೇಕು.
ಅರಣ್ಯಕಾಂಡ 28 : 9 (KNV)
ಆದರೆ ಸಬ್ಬತ್‌ ದಿವಸದಲ್ಲಿ ಆಹಾರದ ಅರ್ಪಣೆ ಗಾಗಿ ಮಚ್ಚೆಯಿಲ್ಲದ ಒಂದು ವರುಷದ ಎರಡು ಕುರಿ ಮರಿಗಳನ್ನೂ ಎರಡು ದಶಾಂಶಗಳಷ್ಟು ಎಣ್ಣೇ ಕಲಸಿದ ಹಿಟ್ಟನ್ನೂ ಅದಕ್ಕೆ ಪಾನದ ಅರ್ಪಣೆಯನ್ನೂ
ಅರಣ್ಯಕಾಂಡ 28 : 10 (KNV)
ನಿತ್ಯ ದಹನಬಲಿಯ ಹೊರತು ಪ್ರತಿ ಸಬ್ಬತ್ತಿಗೆ ತಕ್ಕ ದಹನ ಬಲಿಯೂ ಅದರ ಪಾನದ ಅರ್ಪಣೆಯೂ ಇದೇ.
ಅರಣ್ಯಕಾಂಡ 28 : 11 (KNV)
ನಿಮ್ಮ ತಿಂಗಳುಗಳ ಆರಂಭದಲ್ಲಿ ನೀವು ಕರ್ತನಿಗೆ ದಹನಬಲಿಗಾಗಿ ಎರಡು ಎಳೇ ಹೋರಿಗಳನ್ನೂ ಒಂದು ಟಗರನ್ನೂ ಮಚ್ಚೆಯಿಲ್ಲದ ಒಂದು ವರುಷದ ಏಳು ಕುರಿಮರಿಗಳನ್ನೂ
ಅರಣ್ಯಕಾಂಡ 28 : 12 (KNV)
ಒಂದೊಂದು ಹೋರಿಗೆ ಆಹಾರದ ಅರ್ಪಣೆಗಾಗಿ ಎಣ್ಣೇ ಕಲಸಿದ ಹಿಟ್ಟಿನ ಮೂರು ದಶಾಂಶಗಳು; ಒಂದೊಂದು ಟಗರಿಗೆ ಆಹಾರದ ಅರ್ಪಣೆಯಾಗಿ ಎಣ್ಣೇ ಕಲಸಿದ ಹಿಟ್ಟಿನ ಎರಡು ದಶಾಂಶಗಳು.
ಅರಣ್ಯಕಾಂಡ 28 : 13 (KNV)
ಒಂದೊಂದು ಕುರಿಮರಿಗೆ ಆಹಾರದ ಅರ್ಪಣೆಯಾಗಿ ಎಣ್ಣೇ ಕಲಸಿದ ಹಿಟ್ಟಿನ ಒಂದು ದಶಾಂಶವು, ಕರ್ತನಿಗೆ ಸುವಾಸನೆಯ ದಹನ ಬಲಿಗಾಗಿ ಬೆಂಕಿಯಿಂದ ಮಾಡಿದ ಬಲಿಯು ಇದೇ.
ಅರಣ್ಯಕಾಂಡ 28 : 14 (KNV)
ಇವುಗಳಿಗೆ ತಕ್ಕ ಪಾನದ ಅರ್ಪಣೆಗಳು ಅಂದರೆ ಹೋರಿಗೆ ಅರ್ಧ ಹಿನ್ನಿನ ದ್ರಾಕ್ಷಾರಸವು; ಟಗರಿಗೆ ಹಿನ್ನಿನ ಮೂರನೇ ಪಾಲು ದ್ರಾಕ್ಷಾರಸವು; ಕುರಿಮರಿಗೆ ಕಾಲು ಹಿನ್ನಿನ ದ್ರಾಕ್ಷಾರಸವು ಇರಬೇಕು; ಇದು ವರುಷಕ್ಕಿರುವ ತಿಂಗಳುಗಳಲ್ಲಿ ಒಂದೊಂದಕ್ಕೆ ತಕ್ಕ ದಹನ ಬಲಿಯಾಗಿದೆ.
ಅರಣ್ಯಕಾಂಡ 28 : 15 (KNV)
ಇದಲ್ಲದೆ ನಿತ್ಯ ದಹನ ಬಲಿಯ ಹೊರತು ಕರ್ತನಿಗೆ ಪಾಪ ಬಲಿಗಾಗಿ ಒಂದು ಮೇಕೆಮರಿಯನ್ನೂ ಅದಕ್ಕೆ ತಕ್ಕ ಪಾನದ ಅರ್ಪಣೆ ಯನ್ನೂ ಅರ್ಪಿಸಬೇಕು.
ಅರಣ್ಯಕಾಂಡ 28 : 16 (KNV)
ಆದರೆ ಮೊದಲನೇ ತಿಂಗಳಿನ ಹದಿನಾಲ್ಕನೇ ದಿವಸವು ಕರ್ತನ ಪಸ್ಕವಾಗಿರಬೇಕು.
ಅರಣ್ಯಕಾಂಡ 28 : 17 (KNV)
ಆ ತಿಂಗಳಿನ ಹದಿನೈದನೇ ದಿವಸವು ಹಬ್ಬವಾಗಿದೆ; ಏಳು ದಿವಸಗಳ ವರೆಗೂ ಹುಳಿಯಿಲ್ಲದ ರೊಟ್ಟಿಯನ್ನು ತಿನ್ನಬೇಕು.
ಅರಣ್ಯಕಾಂಡ 28 : 18 (KNV)
ಮೊದಲನೇ ದಿವಸದಲ್ಲಿ ಪರಿಶುದ್ಧ ಸಭೆಯನ್ನು ಕೂಡಿಸಬೇಕು. ಯಾವ ತರವಾದ ಕಷ್ಟಕರವಾದ ಕೆಲಸ ವನ್ನು ನೀವು ಆ ದಿವಸದಲ್ಲಿ ಮಾಡಬಾರದು.
ಅರಣ್ಯಕಾಂಡ 28 : 19 (KNV)
ಆದರೆ ನೀವು ಕರ್ತನಿಗೆ ಬೆಂಕಿಯಿಂದ ಮಾಡಿದ ದಹನ ಬಲಿಯನ್ನು ಅರ್ಪಿಸಬೇಕು. ಯಾವದಂದರೆ--ಎರಡು ಎಳೇ ಹೋರಿಗಳು, ಒಂದು ಟಗರು, ವರುಷದ ಏಳು ಕುರಿಮರಿಗಳು; ನಿಮಗೆ ಇವು ದೋಷವಿಲ್ಲದ ಪೂರ್ಣಾಂಗಗಳಾಗಿರಬೇಕು.
ಅರಣ್ಯಕಾಂಡ 28 : 20 (KNV)
ಅವುಗಳ ಆಹಾರದ ಅರ್ಪಣೆಯನ್ನೂ ಎಣ್ಣೇ ಕಲಸಿದ ಹಿಟ್ಟನ್ನೂ ಹೋರಿಗೆ ಮೂರು ದಶಾಂಶಗಳನ್ನೂ ಟಗರಿಗೆ ಎರಡು ದಶಾಂಶ ಗಳನ್ನೂ ಅರ್ಪಿಸಬೇಕು.
ಅರಣ್ಯಕಾಂಡ 28 : 21 (KNV)
ಏಳು ಕುರಿಮರಿಗಳಲ್ಲಿ ಒಂದೊಂದಕ್ಕೆ ಒಂದು ದಶಾಂಶವನ್ನು ಅರ್ಪಿಸಬೇಕು.
ಅರಣ್ಯಕಾಂಡ 28 : 22 (KNV)
ನಿಮಗೋಸ್ಕರ ಪ್ರಾಯಶ್ಚಿತ್ತಕ್ಕೆ ಪಾಪ ಬಲಿಗಾಗಿ ಒಂದು ಹೋತವನ್ನು ಅರ್ಪಿಸಬೇಕು.
ಅರಣ್ಯಕಾಂಡ 28 : 23 (KNV)
ಇವುಗಳನ್ನು ನಿತ್ಯವಾದ ದಹನಬಲಿಯಾಗಿರುವ ಉದಯದ ದಹನಬಲಿಯ ಹೊರತಾಗಿ ನೀವು ಅರ್ಪಿಸಬೇಕು.
ಅರಣ್ಯಕಾಂಡ 28 : 24 (KNV)
ಈ ಪ್ರಕಾರ ನೀವು ಏಳು ದಿವಸಗಳ ಮಟ್ಟಿಗೂ ದಿನ ದಿನಕ್ಕೆ ಕರ್ತನಿಗೆ ಸುವಾಸೆನೆಗಾಗಿ ದಹನಬಲಿಯ ಆಹಾರವನ್ನು ಅರ್ಪಿಸಬೇಕು; ಅದನ್ನೂ ಅದಕ್ಕೆ ತಕ್ಕ ಪಾನದ ಅರ್ಪಣೆಯನ್ನೂ ನಿತ್ಯವಾದ ದಹನಬಲಿಯ ಹೊರತಾಗಿ ಅರ್ಪಿಸಬೇಕು.
ಅರಣ್ಯಕಾಂಡ 28 : 25 (KNV)
ಏಳನೇ ದಿವಸದಲ್ಲಿ ನಿಮಗೆ ಪರಿಶುದ್ಧವಾದ ಸಭೆಯು ಇರಬೇಕು; ಯಾವ ಕೆಲಸವನ್ನೂ ನೀವು ಮಾಡಬಾರದು.
ಅರಣ್ಯಕಾಂಡ 28 : 26 (KNV)
ಪ್ರಥಮ ಫಲಗಳ ದಿವಸದಲ್ಲಿಯೂ ನೀವು ಕರ್ತ ನಿಗೆ ನಿಮ್ಮ ವಾರಗಳಲ್ಲಿ ಹೊಸ ಆಹಾರದ ಅರ್ಪಣೆ ಯನ್ನು ಅರ್ಪಿಸುವಾಗ ನಿಮಗೆ ಪರಿಶುದ್ಧವಾದ ಸಭೆ ಇರಬೇಕು; ಯಾವ ಕೆಲಸವನ್ನಾದರೂ ಮಾಡಬಾರದು.
ಅರಣ್ಯಕಾಂಡ 28 : 27 (KNV)
ನೀವು ಕರ್ತನಿಗೆ ಸುವಾಸನೆಯುಳ್ಳ ದಹನಬಲಿಗಾಗಿ ಎರಡು ಎಳೇ ಹೋರಿಗಳನ್ನೂ ಒಂದು ಟಗರನ್ನೂ ವರುಷದ ಏಳು ಕುರಿಮರಿಗಳನ್ನೂ
ಅರಣ್ಯಕಾಂಡ 28 : 28 (KNV)
ಅವುಗಳ ಆಹಾರದ ಅರ್ಪಣೆಗಾಗಿ ಎಣ್ಣೇ ಕಲಸಿದ ಹಿಟ್ಟನ್ನೂ ಹೋರಿಗೆ ಮೂರು ದಶಾಂಶಗಳನ್ನೂ ಟಗರಿಗೆ ಎರಡು ದಶಾಂಶಗಳನ್ನೂ
ಅರಣ್ಯಕಾಂಡ 28 : 29 (KNV)
ಏಳು ಕುರಿಮರಿಗಳಲ್ಲಿ ಒಂದೊಂದಕ್ಕೆ ದಶಾಂಶವನ್ನೂ
ಅರಣ್ಯಕಾಂಡ 28 : 30 (KNV)
ನಿಮಗೋಸ್ಕರ ಪ್ರಾಯಶ್ಚಿತ್ತಕ್ಕೆ ಮೇಕೆಮರಿಯನ್ನೂ ಅರ್ಪಿಸಬೇಕು.ನಿತ್ಯವಾದ ದಹನಬಲಿಯನ್ನೂ ಅದರ ಆಹಾರದ ಅರ್ಪಣೆಯನ್ನೂ ಹೊರತಾಗಿ ನೀವು ದೋಷವಿಲ್ಲದ ಇವುಗಳನ್ನೂ ಅವುಗಳಿಗೆ ತಕ್ಕ ಪಾನದ ಅರ್ಪಣೆ ಗಳನ್ನೂ ಅರ್ಪಿಸಬೇಕು.
ಅರಣ್ಯಕಾಂಡ 28 : 31 (KNV)
ನಿತ್ಯವಾದ ದಹನಬಲಿಯನ್ನೂ ಅದರ ಆಹಾರದ ಅರ್ಪಣೆಯನ್ನೂ ಹೊರತಾಗಿ ನೀವು ದೋಷವಿಲ್ಲದ ಇವುಗಳನ್ನೂ ಅವುಗಳಿಗೆ ತಕ್ಕ ಪಾನದ ಅರ್ಪಣೆ ಗಳನ್ನೂ ಅರ್ಪಿಸಬೇಕು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31

BG:

Opacity:

Color:


Size:


Font: