ಅರಣ್ಯಕಾಂಡ 2 : 1 (KNV)
ಕರ್ತನು ಮಾತನಾಡಿ ಮೋಶೆಗೂ ಆರೋನನಿಗೂ ಹೇಳಿದ್ದೇನಂದರೆ--
ಅರಣ್ಯಕಾಂಡ 2 : 2 (KNV)
ಇಸ್ರಾಯೇಲ್‌ ಮಕ್ಕಳು ಒಬ್ಬೊಬ್ಬರಾಗಿ ತಂದೆ ಮನೆಯ ಗುರುತುಗಳ ಪ್ರಕಾರ ತಮ್ಮ ತಮ್ಮ ಧ್ವಜಗಳ ಬಳಿಯಲ್ಲಿ ಇಳುಕೊಳ್ಳಬೇಕು; ಅವರು ಸಭೆಯ ಗುಡಾರದ ಎದುರಿನಲ್ಲಿ ಸುತ್ತಮುತ್ತಲೂ ಇಳುಕೊಳ್ಳಬೇಕು.
ಅರಣ್ಯಕಾಂಡ 2 : 3 (KNV)
ಪೂರ್ವ ದಿಕ್ಕಿನಲ್ಲಿ ಸೂರ್ಯೋದಯದ ಕಡೆಗೆ ಇಳುಕೊಳ್ಳುವವರು ಅವರವರ ಸೈನ್ಯಗಳ ಪ್ರಕಾರ ಯೆಹೂದನ ದಂಡಿನ ಧ್ವಜವು; ಯೆಹೂದನ ಮಕ್ಕಳಿಗೆ ಅವ್ಮೆಾನಾದಾಬನ ಮಗನಾದ ನಹಶೋನನು ಸೈನ್ಯಾಧಿಪತಿ.
ಅರಣ್ಯಕಾಂಡ 2 : 4 (KNV)
ಅವನ ಸೈನ್ಯವೂ ಎಣಿಸಲ್ಪಟ್ಟವರೂ ಎಪ್ಪತ್ತನಾಲ್ಕು ಸಾವಿರದ ಆರುನೂರು.
ಅರಣ್ಯಕಾಂಡ 2 : 5 (KNV)
ಅವನ ಬಳಿ ಯಲ್ಲಿ ಇಳುಕೊಳ್ಳುವವರು ಇಸ್ಸಾಕಾರನ ಗೋತ್ರವು; ಇಸ್ಸಾಕಾರನ ಮಕ್ಕಳಿಗೆ ಚೂವಾರನ ಮಗನಾದ ನೆತನೇಲನು ಸೈನ್ಯಾಧಿಪತಿ.
ಅರಣ್ಯಕಾಂಡ 2 : 6 (KNV)
ಅವನ ಸೈನ್ಯವೂ ಎಣಿಸಲ್ಪ ಟ್ಟವರೂ ಐವತ್ತು ನಾಲ್ಕುಸಾವಿರದ ನಾಲ್ಕುನೂರು.
ಅರಣ್ಯಕಾಂಡ 2 : 7 (KNV)
ಜೆಬುಲೂನನ ಮಕ್ಕಳಿಗೆ ಹೇಲೋನನ ಮಗನಾದ ಎಲೀಯಾಬನು ಸೈನ್ಯಾಧಿಪತಿ.
ಅರಣ್ಯಕಾಂಡ 2 : 8 (KNV)
ಅವನ ಸೈನ್ಯವೂ ಎಣಿಸಲ್ಪಟ್ಟವರೂ ಐವತ್ತೇಳುಸಾವಿರದ ನಾಲ್ಕುನೂರು.
ಅರಣ್ಯಕಾಂಡ 2 : 9 (KNV)
ಯೆಹೂದನ ಪಾಳೆಯದಲ್ಲಿ ಎಣಿಸಲ್ಪಟ್ಟವರೆಲ್ಲರೂ ಅವರ ಸೈನ್ಯಗಳ ಪ್ರಕಾರ ಲಕ್ಷದ ಎಂಭತ್ತಾರು ಸಾವಿರದ ನಾಲ್ಕುನೂರು. ಅವರು ಮೊದಲು ಹೊರಡತಕ್ಕವರು.
ಅರಣ್ಯಕಾಂಡ 2 : 10 (KNV)
ರೂಬೇನನ ಪಾಳೆಯದ ಧ್ವಜವು ಅವರವರ ಸೈನ್ಯಗಳ ಪ್ರಕಾರ ತೆಂಕಣದಲ್ಲಿರುವದು; ರೂಬೇನನ ಮಕ್ಕಳಿಗೆ ಶೆದೇಯೂರನ ಮಗನಾದ ಎಲೀಚೂರನು ಸೈನ್ಯಾಧಿಪತಿ;
ಅರಣ್ಯಕಾಂಡ 2 : 11 (KNV)
ಅವನ ಸೈನ್ಯವೂ ಎಣಿಸಲ್ಪಟ್ಟವರೂ ನಲವತ್ತಾರು ಸಾವಿರದ ಐದುನೂರು.
ಅರಣ್ಯಕಾಂಡ 2 : 12 (KNV)
ಅವನ ಬಳಿ ಯಲ್ಲಿ ಇಳುಕೊಳ್ಳುವವರು ಸಿಮೆಯೋನನ ಗೋತ್ರ ದವರು; ಸಿಮೆಯೋನನ ಮಕ್ಕಳಿಗೆ ಚೂರೀಷದ್ದೈಯನ ಮಗನಾದ ಶೆಲುವಿಾಯೇಲನು ಸೈನ್ಯಾಧಿಪತಿ;
ಅರಣ್ಯಕಾಂಡ 2 : 13 (KNV)
ಅವನ ಸೈನ್ಯವೂ ಎಣಿಸಲ್ಪಟ್ಟವರೂ ಐವತ್ತೊಂಭತ್ತು ಸಾವಿರದ ಮುನ್ನೂರು.
ಅರಣ್ಯಕಾಂಡ 2 : 14 (KNV)
ತರುವಾಯ ಗಾದನ ಗೋತ್ರವು: ಗಾದನ ಮಕ್ಕಳಿಗೆ ರೆಗೂವೇಲನ ಮಗ ನಾದ ಎಲ್ಯಾಸಾಫನು ಸೈನ್ಯಾಧಿಪತಿ;
ಅರಣ್ಯಕಾಂಡ 2 : 15 (KNV)
ಅವನ ಸೈನ್ಯವೂ ಎಣಿಸಲ್ಪಟ್ಟವರೂ ನಲವತ್ತೈದು ಸಾವಿರದ ಆರುನೂರ ಐವತ್ತು.
ಅರಣ್ಯಕಾಂಡ 2 : 16 (KNV)
ರೂಬೇನನ ಪಾಳೆಯದಲ್ಲಿ ಎಣಿಸಲ್ಪಟ್ಟವರೆಲ್ಲರೂ ಅವರವರ ಸೈನ್ಯಗಳ ಪ್ರಕಾರ ಲಕ್ಷದ ಐವತ್ತೊಂದು ಸಾವಿರದ ನಾನೂರಐವತ್ತು; ಅವರು ಎರಡನೆಯದಾಗಿ ಹೊರಡತಕ್ಕದ್ದು.
ಅರಣ್ಯಕಾಂಡ 2 : 17 (KNV)
ತರುವಾಯ ಸಭೆಯ ಗುಡಾರವೂ ಲೇವಿಯರ ಪಾಳೆಯವೂ ಪಾಳೆಯಗಳ ಮಧ್ಯದಲ್ಲಿ ಹೊರಡಬೇಕು. ಅವರು ಇಳುಕೊಳ್ಳುವ ಪ್ರಕಾರವೇ ತಮ್ಮ ತಮ್ಮ ಕಡೆ ಯಲ್ಲಿಯೂ ತಮ್ಮ ತಮ್ಮ ಧ್ವಜಗಳ ಪ್ರಕಾರವಾಗಿಯೂ ಹೊರಡಬೇಕು.
ಅರಣ್ಯಕಾಂಡ 2 : 18 (KNV)
ಎಫ್ರಾಯಾಮಿನವರ ಪಾಳೆಯದ ಧ್ವಜವು ಅವರ ಸೈನ್ಯಗಳ ಪ್ರಕಾರ ಪಶ್ಚಿಮದಲ್ಲಿರುವದು; ಎಫ್ರಾ ಯಾಮನ ಮಕ್ಕಳಿಗೆ ಅವ್ಮೆಾಹೂದನ ಮಗನಾದ ಎಲೀಷಾಮಾನು ಸೈನ್ಯಾಧಿಪತಿ.
ಅರಣ್ಯಕಾಂಡ 2 : 19 (KNV)
ಅವನ ಸೈನ್ಯವೂ ಎಣಿಸಲ್ಪಟ್ಟವರೂ ನಲವತ್ತು ಸಾವಿರದ ಐದು ನೂರು.
ಅರಣ್ಯಕಾಂಡ 2 : 20 (KNV)
ಅವನ ಬಳಿಯಲ್ಲಿ ಮನಸ್ಸೆ ಗೋತ್ರವು; ಮನಸ್ಸೆ ಮಕ್ಕಳಿಗೆ ಪೆದಾಚೂರನ ಮಗನಾದ ಗವ್ಲೆಾಯೇಲನು ಸೈನ್ಯಾಧಿಪತಿ.
ಅರಣ್ಯಕಾಂಡ 2 : 21 (KNV)
ಅವನ ಸೈನ್ಯವೂ ಎಣಿಸಲ್ಪಟ್ಟವರೂ ಮೂವತ್ತೆರಡು ಸಾವಿರದ ಇನ್ನೂರು.
ಅರಣ್ಯಕಾಂಡ 2 : 22 (KNV)
ತರುವಾಯ ಬೆನ್ಯಾವಿಾನನ ಗೋತ್ರವು; ಬೆನ್ಯಾವಿಾನನ ಮಕ್ಕಳಿಗೆ ಗಿದ್ಯೋನಿಯ ಮಗನಾದ ಅಬೀದಾನನು ಸೈನ್ಯಾಧಿಪತಿ.
ಅರಣ್ಯಕಾಂಡ 2 : 23 (KNV)
ಅವನ ಸೈನ್ಯವೂ ಎಣಿಸಲ್ಪಟ್ಟವರೂ ಮುವತ್ತೈದು ಸಾವಿರದ ನಾಲ್ಕುನೂರು.
ಅರಣ್ಯಕಾಂಡ 2 : 24 (KNV)
ಎಫ್ರಾಯಾಮನ ಪಾಳೆ ಯದಲ್ಲಿ ಎಣಿಸಲ್ಪಟ್ಟವರೆಲ್ಲರೂ ಅವರ ಸೈನ್ಯಗಳ ಪ್ರಕಾರವಾಗಿ ಲಕ್ಷದ ಎಂಟುಸಾವಿರದ ನೂರು. ಇವರು ಮೂರನೆಯವರಾಗಿ ಹೊರಡತಕ್ಕವರು.
ಅರಣ್ಯಕಾಂಡ 2 : 25 (KNV)
ದಾನನ ದಂಡಿನ ಧ್ವಜವು ಅವರವರ ಸೈನ್ಯಗಳ ಪ್ರಕಾರವಾಗಿ ಉತ್ತರದಲ್ಲಿರುವದು. ದಾನನ ಮಕ್ಕಳಿಗೆ ಅವ್ಮೆಾಷದ್ದೈಯನ ಮಗನಾದ ಅಹೀಗೆಜರನು ಸೈನ್ಯಾಧಿಪತಿ.
ಅರಣ್ಯಕಾಂಡ 2 : 26 (KNV)
ಅವನ ಸೈನ್ಯವೂ ಎಣಿಸಲ್ಪಟ್ಟವರೂ ಅರವತ್ತೆರಡು ಸಾವಿರದ ಏಳು ನೂರು.
ಅರಣ್ಯಕಾಂಡ 2 : 27 (KNV)
ಅವನ ಬಳಿಯಲ್ಲಿ ಇಳುಕೊಳ್ಳುವವರು ಆಶೇರನ ಗೋತ್ರ ದವರು; ಆಶೇರನ ಮಕ್ಕಳಿಗೆ ಒಕ್ರಾನನ ಮಗನಾದ ಪಗೀಯೇಲನು ಸೈನ್ಯಾಧಿಪತಿ;
ಅರಣ್ಯಕಾಂಡ 2 : 28 (KNV)
ಅವನ ಸೈನ್ಯವೂ ಎಣಿಸಲ್ಪಟ್ಟವರೂ ನಲವತ್ತೊಂದು ಸಾವಿರದ ಐದು ನೂರು.
ಅರಣ್ಯಕಾಂಡ 2 : 29 (KNV)
ತರುವಾಯ ನಫ್ತಾಲಿ ಗೋತ್ರದವರು; ನಫ್ತಾಲಿ ಮಕ್ಕಳಿಗೆ ಏನಾನನ ಮಗನಾದ ಅಹೀರನು ಸೈನ್ಯಾಧಿಪತಿ.
ಅರಣ್ಯಕಾಂಡ 2 : 30 (KNV)
ಅವನ ಸೈನ್ಯವೂ ಎಣಿಸಲ್ಪಟ್ಟವರೂ ಐವತ್ತಮೂರು ಸಾವಿರದ ನಾಲ್ಕುನೂರು.
ಅರಣ್ಯಕಾಂಡ 2 : 31 (KNV)
ದಾನನ ಪಾಳೆಯದಲ್ಲಿ ಎಣಿಸಲ್ಪಟ್ಟವರೆಲ್ಲರೂ ಲಕ್ಷದ ಐವತ್ತೇಳು ಸಾವಿರದ ಆರುನೂರು. ಅವರು ತಮ್ಮ ಧ್ವಜಗಳ ಪ್ರಕಾರ ಕಡೆಯವರಾಗಿ ಹೊರಡತಕ್ಕದ್ದು.
ಅರಣ್ಯಕಾಂಡ 2 : 32 (KNV)
ಇಸ್ರಾಯೇಲ್‌ ಮಕ್ಕಳಲ್ಲಿ ತಮ್ಮ ತಂದೆಗಳ ಮನೆಯ ಪ್ರಕಾರವಾಗಿ ಎಣಿಸಲ್ಪಟ್ಟವರು ಇವರೇ; ಪಾಳೆಯದೊಳಗೆ ಅವರವರ ಸೈನ್ಯಗಳ ಪ್ರಕಾರ ಎಣಿಸ ಲ್ಪಟ್ಟವರೆಲ್ಲರೂ ಆರುಲಕ್ಷ ಮೂರುಸಾವಿರದ ಐದು ನೂರಐವತ್ತು ಎಂಬದೇ.
ಅರಣ್ಯಕಾಂಡ 2 : 33 (KNV)
ಕರ್ತನು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಲೇವಿಯರು ಇಸ್ರಾಯೇಲ್‌ ಮಕ್ಕಳೊಳಗೆ ಎಣಿಸಲ್ಪಡಲಿಲ್ಲ.ಕರ್ತನು ಮೋಶೆಗೆ ಆಜ್ಞಾಪಿಸಿದ್ದೆಲ್ಲಾದರ ಪ್ರಕಾರ ಇಸ್ರಾಯೇಲ್‌ ಮಕ್ಕಳು ಮಾಡಿ ತಮ್ಮ ಧ್ವಜಗಳ ಪ್ರಕಾರವೂ ತಮ್ಮ ತಮ್ಮ ವಂಶಗಳ ಪ್ರಕಾರವೂ ತಮ್ಮ ತಂದೆಗಳ ಮನೆಯ ಪ್ರಕಾರವೂ ಇಳುಕೊಳ್ಳುತ್ತಾ ಮುಂದುವರಿಯುತ್ತಿದ್ದರು.
ಅರಣ್ಯಕಾಂಡ 2 : 34 (KNV)
ಕರ್ತನು ಮೋಶೆಗೆ ಆಜ್ಞಾಪಿಸಿದ್ದೆಲ್ಲಾದರ ಪ್ರಕಾರ ಇಸ್ರಾಯೇಲ್‌ ಮಕ್ಕಳು ಮಾಡಿ ತಮ್ಮ ಧ್ವಜಗಳ ಪ್ರಕಾರವೂ ತಮ್ಮ ತಮ್ಮ ವಂಶಗಳ ಪ್ರಕಾರವೂ ತಮ್ಮ ತಂದೆಗಳ ಮನೆಯ ಪ್ರಕಾರವೂ ಇಳುಕೊಳ್ಳುತ್ತಾ ಮುಂದುವರಿಯುತ್ತಿದ್ದರು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34

BG:

Opacity:

Color:


Size:


Font: