ಅರಣ್ಯಕಾಂಡ 15 : 1 (KNV)
ಕರ್ತನು ಮೋಶೆಗೆ--
ಅರಣ್ಯಕಾಂಡ 15 : 2 (KNV)
ಇಸ್ರಾಯೇಲ್ಮಕ್ಕಳ ಸಂಗಡ ಮಾತನಾಡಿ ಅವರಿಗೆನಾನು ನಿಮಗೆ ಕೊಡುವ ನಿಮ್ಮ ನಿವಾಸಗಳ ದೇಶಕ್ಕೆ ಬಂದಾಗ
ಅರಣ್ಯಕಾಂಡ 15 : 3 (KNV)
ಪಶುಗಳಿಂದಲಾದರೂ ಕುರಿಗಳಿಂದಲಾ ದರೂ ಕರ್ತನಿಗೆ ಸುವಾಸನೆಯನ್ನುಂಟುಮಾಡುವ ದಹನಬಲಿಯಾಗಲಿ ಪ್ರಮಾಣವನ್ನು ಈಡೇರಿಸುವ ಬಲಿಯಾಗಲಿ ಉಚಿತವಾದ ಅರ್ಪಣೆಯಾಗಲಿ ನಿಮ್ಮ ಪವಿತ್ರ ಹಬ್ಬಗಳಲ್ಲಾಗಲಿ ಕರ್ತನಿಗೆ ಬೆಂಕಿಯಿಂದ ಅರ್ಪಿಸಲಿ ಅಂದನು.
ಅರಣ್ಯಕಾಂಡ 15 : 4 (KNV)
ತರುವಾಯ ಕರ್ತನಿಗೆ ತನ್ನ ಅರ್ಪಣೆಯನ್ನು ತರುವವನು ತರಬೇಕಾದದ್ದೇನಂದರೆಆಹಾರದ ಅರ್ಪಣೆಗಾಗಿ ಹಿಟ್ಟಿನ ನಾಲ್ಕನೆಯ ಪಾಲಷ್ಟು ಎಣ್ಣೇ ಬೆರೆಸಿದ ಹಿಟ್ಟಿನ ದಶಮ ಭಾಗವನ್ನು
ಅರಣ್ಯಕಾಂಡ 15 : 5 (KNV)
ಪಾನದ ಅರ್ಪಣೆಗಾಗಿ ದಹನಬಲಿಯ ಸಂಗಡವೂ ಇಲ್ಲವೆ ಬಲಿಯ ಸಂಗಡವೂ ಒಂದು ಕುರಿಗೋಸ್ಕರ ಹಿನ್ನಿನ ನಾಲ್ಕನೇ ಭಾಗದ ದ್ರಾಕ್ಷಾರಸವನ್ನು ಅರ್ಪಿಸಬೇಕು.
ಅರಣ್ಯಕಾಂಡ 15 : 6 (KNV)
ಇಲ್ಲವೆ ಟಗರಿಗೋಸ್ಕರ ಆಹಾರದ ಅರ್ಪಣೆಯಾಗಿ ಹಿನ್ನಿನ ಮೂರನೇ ಪಾಲು ಎಣ್ಣೇ ಬೆರೆಸಿದ ಹಿಟ್ಟಿನ ಎರಡು ದಶಮಾಂಶಗಳನ್ನು ನೀನು ಸಿದ್ಧಮಾಡಬೇಕು.
ಅರಣ್ಯಕಾಂಡ 15 : 7 (KNV)
ಪಾನದ ಅರ್ಪಣೆಯನ್ನು ಕರ್ತನಿಗೆ ಸುವಾಸನೆಗಾಗಿ ಹಿನ್ನಿನ ಮೂರನೇ ಪಾಲು ದ್ರಾಕ್ಷಾರಸವನ್ನು ಅರ್ಪಿಸ ಬೇಕು.
ಅರಣ್ಯಕಾಂಡ 15 : 8 (KNV)
ನೀನು ಕರ್ತನಿಗೆ ದಹನಬಲಿಗಾಗಿ ಇಲ್ಲವೆ ಪ್ರಮಾಣವನ್ನು ಈಡೇರಿಸುವ ಬಲಿಗಾಗಿ ಇಲ್ಲವೆ ಸಮಾ ಧಾನದ ಅರ್ಪಣೆಗಳಿಗಾಗಿ ಕರ್ತನಿಗೆ ಹೋರಿಯನ್ನು ನೀನು ಸಿದ್ಧಮಾಡುವಾಗ
ಅರಣ್ಯಕಾಂಡ 15 : 9 (KNV)
ಅವನು ಆಹಾರದ ಅರ್ಪಣೆಗಾಗಿ ಅರ್ಧ ಹಿನ್ನಿನ ಎಣ್ಣೇ ಬೆರೆಸಿದ ಮೂರು ದಶಮಾಂಶದ ಹಿಟ್ಟನ್ನು ಒಂದು ಹೋರಿಯೊಂದಿಗೆ ತರಬೇಕು.
ಅರಣ್ಯಕಾಂಡ 15 : 10 (KNV)
ಪಾನದ ಅರ್ಪಣೆಗಾಗಿ ಅರ್ಧ ಹಿನ್ನಿನ ದ್ರಾಕ್ಷಾರಸವನ್ನು ಬೆಂಕಿಯಿಂದ ಮಾಡಿದ ಅರ್ಪಣೆ ಗಾಗಿ ಕರ್ತನಿಗೆ ಸುವಾಸನೆಯಾದ ದಹನಬಲಿಗಾಗಿ ತರಬೇಕು.
ಅರಣ್ಯಕಾಂಡ 15 : 11 (KNV)
ಹೀಗೆ ಅದು ಒಂದು ಹೋರಿಗೂ ಇಲ್ಲವೆ ಒಂದು ಟಗರಿಗೂ ಒಂದು ಕುರಿಮರಿಗೂ ಒಂದು ಮೇಕೆಗೂ ಮಾಡತಕ್ಕದ್ದು.
ಅರಣ್ಯಕಾಂಡ 15 : 12 (KNV)
ನೀವು ಸಿದ್ಧಪಡಿಸಿದ ಬಲಿಗಳ ಲೆಕ್ಕದ ಪ್ರಕಾರ ನೀವು ಒಂದೊಂದನ್ನು ಅದರ ಲೆಕ್ಕದ ಪ್ರಕಾರ ಮಾಡಬೇಕು.
ಅರಣ್ಯಕಾಂಡ 15 : 13 (KNV)
ಕರ್ತನಿಗೆ ಸುವಾಸನೆ ಬೆಂಕಿಯ ಅರ್ಪ ಣೆಯ ವಿಷಯ ದೇಶದಲ್ಲಿ ಹುಟ್ಟಿದವರೆಲ್ಲರೂ ಇವುಗ ಳನ್ನು ಹಾಗೆಯೇ ಅರ್ಪಿಸಬೇಕು.
ಅರಣ್ಯಕಾಂಡ 15 : 14 (KNV)
ನಿಮ್ಮ ಸಂಗಡ ಪ್ರಯಾಣಮಾಡುವ ಪರದೇಶಿಯಾಗಲಿ ಇಲ್ಲವೆ ನಿಮ್ಮ ಮುಂದಿನ ಸಂತತಿಯವರ ಸಂಗಡ ಇರುವವನಾಗಲಿ ಕರ್ತನಿಗೆ ಸುವಾಸನೆಯನ್ನುಂಟುಮಾಡುವ ಬೆಂಕಿಯ ಅರ್ಪಣೆಯನ್ನು ಅರ್ಪಿಸುವಾಗ ನೀವು ಹೇಗೆ ಮಾಡು ತ್ತೀರೋ ಹಾಗೆಯೇ ಅವನು ಮಾಡಲಿ.
ಅರಣ್ಯಕಾಂಡ 15 : 15 (KNV)
ಸಭೆಗೂ ನಿಮಗೂ ನಿಮ್ಮ ಕೂಡ ಪ್ರಯಾಣಮಾಡುವ ಪರಕೀಯ ನಿಗೂ ಒಂದೇ ಕಟ್ಟಳೆ; ಇದು ನಿಮ್ಮ ಸಂತಾನಗಳಿಗೆ ನಿತ್ಯವಾದ ಕಟ್ಟಳೆ; ಕರ್ತನ ಎದುರಿನಲ್ಲಿ ನೀವು ಇರುವ ಪ್ರಕಾರ ಪರಕೀಯನೂ ಇರಬೇಕು.
ಅರಣ್ಯಕಾಂಡ 15 : 16 (KNV)
ನಿಮಗೂ ನಿಮ್ಮ ಕೂಡ ಪ್ರಯಾಣಮಾಡುವ ಪರಕೀಯನಿಗೂ ಒಂದೇ ಪ್ರಮಾಣವೂ ಒಂದೇ ನ್ಯಾಯವೂ ಇರಬೇಕು ಎಂದು ಹೇಳಿದನು.
ಅರಣ್ಯಕಾಂಡ 15 : 17 (KNV)
ಕರ್ತನು ಮೋಶೆಗೆ ಹೇಳಿದ್ದೇನಂದರೆ--
ಅರಣ್ಯಕಾಂಡ 15 : 18 (KNV)
ಇಸ್ರಾಯೇಲ್ ಮಕ್ಕಳ ಸಂಗಡ ಮಾತನಾಡಿ ಅವ ರಿಗೆ--ನಾನು ನಿಮ್ಮನ್ನು ತರುವ ದೇಶಕ್ಕೆ ಬಂದು
ಅರಣ್ಯಕಾಂಡ 15 : 19 (KNV)
ಆ ದೇಶದ ರೊಟ್ಟಿಯನ್ನು ತಿನ್ನುವಾಗ ನೀವು ಕರ್ತನಿಗೆ ಎತ್ತುವ ಅರ್ಪಣೆಯನ್ನು ಅರ್ಪಿಸಬೇಕು.
ಅರಣ್ಯಕಾಂಡ 15 : 20 (KNV)
ನಿಮ್ಮ ಪ್ರಥಮ ಹಿಟ್ಟಿನ ರೊಟ್ಟಿಯನ್ನೂ ಎತ್ತುವ ಅರ್ಪಣೆ ಯನ್ನೂ ಅರ್ಪಿಸಬೇಕು. ನಿಮ್ಮ ಕಣದಿಂದ ಎತ್ತುವ ಅರ್ಪಣೆಯಂತೆ ಅದನ್ನು ಎತ್ತಬೇಕು.
ಅರಣ್ಯಕಾಂಡ 15 : 21 (KNV)
ನಿಮ್ಮ ಸಂತತಿಗಳ ವರೆಗೂ ನಿಮ್ಮ ಹಿಟ್ಟಿನ ಪ್ರಥಮವಾದದ್ದನ್ನು ಕರ್ತನಿಗೆ ಎತ್ತುವ ಅರ್ಪಣೆಯಾಗಿ ಅರ್ಪಿಸಬೇಕು.
ಅರಣ್ಯಕಾಂಡ 15 : 22 (KNV)
ನೀವು ತಪ್ಪಿ ಕರ್ತನು ಮೋಶೆಗೆ ಹೇಳಿದ ಈ ಸಕಲ ಆಜ್ಞೆಗಳ ಪ್ರಕಾರ ಮಾಡದಿದ್ದರೆ
ಅರಣ್ಯಕಾಂಡ 15 : 23 (KNV)
ಆತನು ನಿಮಗೆ ಆಜ್ಞೆಗಳನ್ನು ಕೊಟ್ಟ ದಿವಸ ಮೊದಲುಗೊಂಡು ನಿಮ್ಮ ಸಂತತಿಗಳವರೆಗೂ ಕರ್ತನು ಮೋಶೆಯ ಕೈಯಿಂದ ನಿಮಗೆ ಆಜ್ಞಾಪಿಸಿದ ಪ್ರಕಾರ ನೀವು ಮಾಡದೆ ಹೋದರೆ
ಅರಣ್ಯಕಾಂಡ 15 : 24 (KNV)
ಅದು ಸಭೆಗೆ ತಿಳಿಯದೆ ತಪ್ಪು ಆಗಿರುವ ಪಕ್ಷದಲ್ಲಿ ಸಭೆಯು ಕರ್ತನಿಗೆ ಸುವಾಸನೆಯಾದ ದಹನ ಬಲಿಗಾಗಿ ಒಂದು ಎಳೇ ಹೋರಿಯನ್ನೂ ಕ್ರಮದ ಪ್ರಕಾರ ಅದರ ಆಹಾರದ ಅರ್ಪಣೆಯನ್ನೂ ಪಾನದ ಅರ್ಪಣೆಯನ್ನೂ ಪಾಪ ಬಲಿಯಾಗಿ ಮೇಕೆಗಳಿಂದ ಒಂದು ಹೋತವನ್ನೂ ಅರ್ಪಿಸಬೇಕು.
ಅರಣ್ಯಕಾಂಡ 15 : 25 (KNV)
ಯಾಜಕನು ಇಸ್ರಾಯೇಲ್ ಮಕ್ಕಳ ಸಮಸ್ತ ಸಭೆಗೋಸ್ಕರ ಅವರಿಗೆ ಕ್ಷಮೆಯಾಗುವ ಹಾಗೆ ಪ್ರಾಯಶ್ಚಿತ್ತಮಾಡಬೇಕು; ಅದು ತಿಳಿಯದೆ ಮಾಡಲಾಗಿತ್ತು. ಆದಾಗ್ಯೂ ಅವರು ಕರ್ತ ನಿಗೆ ದಹನ ಬಲಿಯಾಗಿ ತಮ್ಮ ಅರ್ಪಣೆಯನ್ನೂ ತಮ್ಮ ತಪ್ಪಿಗೋಸ್ಕರ ಪಾಪ ಬಲಿಯನ್ನೂ ಕರ್ತನ ಮುಂದೆ ತರಬೇಕು.
ಅರಣ್ಯಕಾಂಡ 15 : 26 (KNV)
ಆಗ ಇಸ್ರಾಯೇಲ್ ಮಕ್ಕಳ ಸಮಸ್ತ ಸಭೆಗೂ ಅವರೊಳಗೆ ಪರಕೀಯನಾಗಿ ಪ್ರವಾಸಿ ಯಾಗಿರುವವನಿಗೂ ಅದು ಪರಿಹಾರವಾಗುವದು. ಯಾಕಂದರೆ ಎಲ್ಲರೂ ತಿಳುವಳಿಕೆ ಇಲ್ಲದವರಾಗಿದ್ದರು.
ಅರಣ್ಯಕಾಂಡ 15 : 27 (KNV)
ಆದರೆ ಯಾವನಾದರೂ ತಿಳಿಯದೆ ಪಾಪ ಮಾಡಿದರೆ ಪಾಪದ ಬಲಿಗಾಗಿ ಒಂದು ವರುಷದ ಮೇಕೆಯನ್ನು ತರಬೇಕು.
ಅರಣ್ಯಕಾಂಡ 15 : 28 (KNV)
ತಿಳಿಯದೆ ಪಾಪಮಾಡಿ ದಂಥ ಆ ಪಾಪಮಾಡಿದವನಿಗೋಸ್ಕರ ಯಾಜಕನು ಕರ್ತನ ಮುಂದೆ ಪ್ರಾಯಶ್ಚಿತ್ತಮಾಡಬೇಕು. ಅದು ಪರಿಹಾರವಾಗುವ ಹಾಗೆ ಅದಕ್ಕೋಸ್ಕರ ಪ್ರಾಯಶ್ಚಿತ್ತ ಮಾಡಬೇಕು.
ಅರಣ್ಯಕಾಂಡ 15 : 29 (KNV)
ಇಸ್ರಾಯೇಲ್ ಮಕ್ಕಳಲ್ಲಿ ಹುಟ್ಟಿದವ ರಿಗೂ ಅವರಲ್ಲಿ ಪ್ರವಾಸಿಯಾಗಿರುವ ಪರಕೀಯನಿಗೂ ನಿಮ್ಮೆಲ್ಲರಿಗೂ ತಿಳಿಯದೆ ಪಾಪಮಾಡಿದವನಿಗೂ ಒಂದೇ ಆಜ್ಞೆ ಇರಬೇಕು.
ಅರಣ್ಯಕಾಂಡ 15 : 30 (KNV)
ಆದರೆ ಯಾವನಾದರೂ ಅಂದರೆ ದೇಶದಲ್ಲಿ ಹುಟ್ಟಿದವನಾಗಲಿ ಪರಕೀಯನಾಗಲಿ ಹಟದಿಂದ ಪಾಪಮಾಡಿದರೆ ಅವನು ಕರ್ತನನ್ನು ನಿಂದಿಸುತ್ತಾನೆ. ಆ ಮನುಷ್ಯನು ತನ್ನ ಜನರ ಮಧ್ಯದಿಂದ ತೆಗೆದುಹಾಕ ಲ್ಪಡಬೇಕು.
ಅರಣ್ಯಕಾಂಡ 15 : 31 (KNV)
ಅವನು ಕರ್ತನ ವಾಕ್ಯವನ್ನು ಅವಮಾನ ಮಾಡಿ ಆತನ ಆಜ್ಞೆಗಳನ್ನು ವಿಾರಿದ್ದರಿಂದ ಆ ಮನು ಷ್ಯನು ನಿಶ್ಚಯವಾಗಿ ತೆಗೆದುಹಾಕಲ್ಪಡಬೇಕು. ಅವನ ಅಕ್ರಮವು ಅವನ ಮೇಲಿರುವದು ಎಂದು ಹೇಳಿದನು.
ಅರಣ್ಯಕಾಂಡ 15 : 32 (KNV)
ಇಸ್ರಾಯೇಲ್ ಮಕ್ಕಳು ಅರಣ್ಯದಲ್ಲಿದ್ದಾಗ ಸಬ್ಬತ್ ದಿನದಲ್ಲಿ ಕಟ್ಟಿಗೆಗಳನ್ನು ಕೂಡಿಸುವ ಮನುಷ್ಯನನ್ನು ಕಂಡರು.
ಅರಣ್ಯಕಾಂಡ 15 : 33 (KNV)
ಆಗ ಕಟ್ಟಿಗೆಗಳನ್ನು ಕೂಡಿಸುವದರಲ್ಲಿ ಅವನನ್ನು ಕಂಡುಕೊಂಡವರು ಅವನನ್ನು ಮೋಶೆ ಆರೋನರ ಬಳಿಗೂ ಸಮಸ್ತಸಭೆಗೂ ತಂದು
ಅರಣ್ಯಕಾಂಡ 15 : 34 (KNV)
ಅವ ನಿಗೆ ಏನು ಮಾಡಬೇಕೆಂದು ಸ್ಪಷ್ಟವಾಗಿ ತಿಳಿಯದ ಕಾರಣ ಅವನನ್ನು ಕಾವಲಲ್ಲಿ ಹಾಕಿದರು.
ಅರಣ್ಯಕಾಂಡ 15 : 35 (KNV)
ಆಗ ಕರ್ತನು ಮೋಶೆಗೆ--ಆ ಮನುಷ್ಯನು ಖಂಡಿತವಾ ಗಿಯೂ ಸಾಯಲೇಬೇಕು; ಸಭೆಯೆಲ್ಲಾ ಪಾಳೆಯದ ಹೊರಗೆ ಅವನನ್ನು ಕಲ್ಲೆಸೆಯಬೇಕು ಎಂದು ಹೇಳಿದನು.
ಅರಣ್ಯಕಾಂಡ 15 : 36 (KNV)
ಆಗ ಸಭೆಯೆಲ್ಲಾ ಅವನನ್ನು ಪಾಳೆಯದ ಹೊರಗೆ ತಕ್ಕೊಂಡು ಹೋಗಿ ಕರ್ತನು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಅವನು ಸಾಯುವ ಹಾಗೆ ಅವನಿಗೆ ಕಲ್ಲೆಸೆದರು.
ಅರಣ್ಯಕಾಂಡ 15 : 37 (KNV)
ಕರ್ತನು ಮೋಶೆಗೆ--ಹೇಳಿದ್ದೇನಂದರೆ
ಅರಣ್ಯಕಾಂಡ 15 : 38 (KNV)
ನೀನು ಇಸ್ರಾಯೇಲ್ ಮಕ್ಕಳಿಗೆ ಮಾತನಾಡಿ ಅವರಿಗೆ ಹೇಳ ಬೇಕಾದದ್ದೇನಂದರೆ--ಅವರು ತಮ್ಮ ತಲತಲಾಂತರ ಗಳಲ್ಲಿ ತಮ್ಮ ವಸ್ತ್ರಗಳ ಸೆರಗುಗಳ ಮೇಲೆ ಗೊಂಡೆ ಗಳನ್ನು ಕಟ್ಟಿಕೊಳ್ಳಬೇಕು; ಸೆರಗಿನ ಗೊಂಡೆಗಳ ಮೇಲೆ ನೀಲಿದಾರವನ್ನು ಸೇರಿಸಬೇಕು.
ಅರಣ್ಯಕಾಂಡ 15 : 39 (KNV)
ಅದನ್ನು ನೀವು ಗೊಂಡೆಯಾಗಿ ಇಟ್ಟುಕೊಂಡು ಅದನ್ನು ನೋಡುವಾಗ ಕರ್ತನ ಸಕಲ ಆಜ್ಞೆಗಳನ್ನು ನೆನಸಿ ಅವುಗಳ ಪ್ರಕಾರ ಮಾಡಿ ನಿಮ್ಮ ಹೃದಯವನ್ನೂ ಕಣ್ಣುಗಳನ್ನೂ ಅವು ಗಳಿಗನುಸಾರವಾಗಿ ಜಾರತ್ವಮಾಡುವಂತೆ ಹಿಂಬಾ ಲಿಸದೆ
ಅರಣ್ಯಕಾಂಡ 15 : 40 (KNV)
ನನ್ನ ಆಜ್ಞೆಗಳನ್ನೆಲ್ಲಾ ನೆನಸಿ ಅವುಗಳ ಪ್ರಕಾರ ಮಾಡಿ ನಿಮ್ಮ ದೇವರಿಗೆ ಪರಿಶುದ್ಧರಾಗಿರುವಿರಿ.
ಅರಣ್ಯಕಾಂಡ 15 : 41 (KNV)
ನಾನು ನಿಮ್ಮ ದೇವರಾಗಿರುವ ಹಾಗೆ ನಿಮ್ಮನ್ನು ಐಗುಪ್ತ ದೇಶ ದೊಳಗಿಂದ ಹೊರಗೆ ತಂದ ನಿಮ್ಮ ಕರ್ತನಾಗಿರುವ ದೇವರು ನಾನೇ. ನಿಮ್ಮ ದೇವರಾಗಿರುವ ಕರ್ತನು ನಾನೇ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41