ಅರಣ್ಯಕಾಂಡ 11 : 1 (KNV)
ಜನರು ಗುಣುಗುಟ್ಟಿದಾಗ ಅದು ಕರ್ತನಿಗೆ ಮೆಚ್ಚಿಗೆಯಾಗಲಿಲ್ಲ. ಕರ್ತನು ಅದನ್ನು ಕೇಳಿ ಕೋಪಿಸಿಗೊಂಡನು. ಕರ್ತನ ಬೆಂಕಿಯು ಅವರಲ್ಲಿ ಹತ್ತಿ ಪಾಳೆಯದ ಕಟ್ಟಕಡೆಯ ಭಾಗದಲ್ಲಿ ದಹಿಸಿತು.
ಅರಣ್ಯಕಾಂಡ 11 : 2 (KNV)
ಆಗ ಜನರು ಮೋಶೆಗೆ ಕೂಗಿಕೊಂಡದ್ದರಿಂದ ಮೋಶೆಯು ಕರ್ತನಿಗೆ ಪ್ರಾರ್ಥನೆ ಮಾಡಿದನು. ಆಗ ಬೆಂಕಿಯು ಆರಿಹೋಯಿತು.
ಅರಣ್ಯಕಾಂಡ 11 : 3 (KNV)
ಕರ್ತನ ಬೆಂಕಿಯು ಅವರಲ್ಲಿ ದಹಿಸಿದ್ದರಿಂದ ಆ ಸ್ಥಳಕ್ಕೆ ತಬೇರ ಎಂದು ಹೆಸರಿಟ್ಟರು.
ಅರಣ್ಯಕಾಂಡ 11 : 4 (KNV)
ಆಗ ಅವರೊಳಗಿದ್ದ ಮಿಶ್ರವಾದ ಗುಂಪಿನ ಜನರು ದುರಾಶೆಪಟ್ಟರು. ಇಸ್ರಾಯೇಲ್‌ ಮಕ್ಕಳು ಸಹ ತಿರಿಗಿ ಅತ್ತು--ನಮಗೆ ತಿನ್ನುವದಕ್ಕೆ ಮಾಂಸವನ್ನು ಕೊಡು ವವರು ಯಾರು?
ಅರಣ್ಯಕಾಂಡ 11 : 5 (KNV)
ನಾವು ಐಗುಪ್ತದೇಶದಲ್ಲಿ ಉಚಿತ ವಾಗಿ ತಿಂದ ವಿಾನು ಸವತೆಕಾಯಿ ಕರ್ಬೂಜ ಕಾಡುಳ್ಳಿ ನೀರುಳ್ಳಿ ಬೆಳ್ಳುಳ್ಳಿ ಇವುಗಳನ್ನು ಜ್ಞಾಪಿಸಿಕೊಳ್ಳುತ್ತೇವೆ.
ಅರಣ್ಯಕಾಂಡ 11 : 6 (KNV)
ಆದರೆ ಈಗ ನಮ್ಮ ಪ್ರಾಣವು ಬತ್ತಿಹೋಯಿತು; ಈ ಮನ್ನವಲ್ಲದೆ ಮತ್ತೆ ಬೇರೆ ಯಾವದೂ ನಮ್ಮ ಕಣ್ಣುಗಳ ಮುಂದೆ ಇರುವದಿಲ್ಲ ಅಂದರು.
ಅರಣ್ಯಕಾಂಡ 11 : 7 (KNV)
ಆ ಮನ್ನವು ಕೊತ್ತುಂಬರಿ ಬೀಜದ ಹಾಗೆ ಇತ್ತು. ಅದರ ಬಣ್ಣವು ಬದೋಲಖ ಬಣ್ಣದ ಹಾಗಿತ್ತು.
ಅರಣ್ಯಕಾಂಡ 11 : 8 (KNV)
ಜನರು ಹೊರಗೆಹೋಗಿ ಅದನ್ನು ಕೂಡಿಸಿ ಬೀಸುವ ಕಲ್ಲುಗಳಲ್ಲಿ ಬೀಸಿ ಇಲ್ಲವೆ ಒರಳಿನಲ್ಲಿ ಕುಟ್ಟಿ ತವೆಗಳಲ್ಲಿ ಸುಟ್ಟು ಅದರಿಂದ ರೊಟ್ಟಿಗಳನ್ನು ಮಾಡುತ್ತಿದ್ದರು. ಅದು ಶುದ್ಧ ಎಣ್ಣೇ ರೊಟ್ಟಿಯ ರುಚಿಯ ಹಾಗೆ ಇತ್ತು.
ಅರಣ್ಯಕಾಂಡ 11 : 9 (KNV)
ರಾತ್ರಿಯಲ್ಲಿ ಮಂಜು ಪಾಳೆಯದ ಮೇಲೆ ಬೀಳುತ್ತಿ ದ್ದಾಗ ಮನ್ನವು ಅದರ ಮೇಲೆ ಬೀಳುತ್ತಿತ್ತು.
ಅರಣ್ಯಕಾಂಡ 11 : 10 (KNV)
ಆಗ ಜನರು ತಮ್ಮ ಕುಟುಂಬಗಳ ಪ್ರಕಾರವಾಗಿ ಪ್ರತಿಯೊಬ್ಬನು ತನ್ನ ಗುಡಾರದ ಬಾಗಲಿನಲ್ಲಿ ಅಳುವ ದನ್ನು ಮೋಶೆ ಕೇಳಿದನು; ಆದಕಾರಣ ಕರ್ತನ ಕೋಪವು ಬಹಳವಾಗಿ ಉರಿಯಿತು; ಮೋಶೆಗೂ ಅದು ಮೆಚ್ಚಿಗೆಯಾಗಲಿಲ್ಲ.
ಅರಣ್ಯಕಾಂಡ 11 : 11 (KNV)
ಆದದರಿಂದ ಮೋಶೆಯು ಕರ್ತನಿಗೆ ಹೇಳಿದ್ದೇ ನಂದರೆ--ಈ ಸಮಸ್ತ ಜನರ ಭಾರವನ್ನು ನನ್ನ ಮೇಲೆ ಹಾಕುವದಕ್ಕೆ ನೀನು ನಿನ್ನ ಸೇವಕನಿಗೆ ಯಾಕೆ ಉಪದ್ರ ಮಾಡಿದ್ದೀ? ನಿನ್ನ ದೃಷ್ಟಿಯಲ್ಲಿ ನನಗೆ ಯಾಕೆ ದಯೆ ದೊರಕಲಿಲ್ಲ?
ಅರಣ್ಯಕಾಂಡ 11 : 12 (KNV)
ತನ್ನ ಮೊಲೆಯ ಕೂಸನ್ನು ಎತ್ತುವಂತೆ ನೀನು ಈ ಜನರನ್ನು ಎದೆಯಲ್ಲಿ ಹೊತ್ತು ಕೊಂಡು ಅವರ ತಂದೆಗಳಿಗೆ ಪ್ರಮಾಣಮಾಡಿದ ದೇಶಕ್ಕೆ ತಕ್ಕೊಂಡು ಹೋಗು ಎಂದು ನೀನು ನನಗೆ ಹೇಳುತ್ತೀ. ಹೀಗೆ ನಾನು ಮಾಡುವದಕ್ಕೆ ಈ ಸಮಸ್ತ ಜನರನ್ನು ಗರ್ಭಧರಿಸಿಕೊಂಡೆನೋ? ನಾನೇ ಅವರನ್ನು ಹೆತ್ತೆನೋ?
ಅರಣ್ಯಕಾಂಡ 11 : 13 (KNV)
ಈ ಸಮಸ್ತ ಜನರಿಗೆ ಕೊಡಲು ಮಾಂಸವು ನನಗೆ ಎಲ್ಲಿಂದ ದೊರಕುವದು? ಯಾಕಂದರೆ--ತಿನ್ನುವ ಹಾಗೆ ನಮಗೆ ಮಾಂಸವನ್ನು ಕೊಡು ಎಂದು ನನ್ನ ಬಳಿಯಲ್ಲಿ ಅಳುತ್ತಾರೆ.
ಅರಣ್ಯಕಾಂಡ 11 : 14 (KNV)
ಒಬ್ಬಂಟಿ ಗನಾಗಿ ಈ ಸಮಸ್ತ ಜನರನ್ನು ಹೊತ್ತುಕೊಳ್ಳುವದಕ್ಕೆ ನಾನು ಶಕ್ತನಲ್ಲ, ಅದು ನನಗೆ ಅತಿ ದೊಡ್ಡ ಭಾರ ವಾಗಿದೆ.
ಅರಣ್ಯಕಾಂಡ 11 : 15 (KNV)
ನೀನು ಈ ಪ್ರಕಾರ ನನಗೆ ಮಾಡುವದಾ ಗಿದ್ದು ನಾನು ನಿನ್ನ ದೃಷ್ಟಿಯಲ್ಲಿ ದಯೆ ಹೊಂದಿದವ ನಾದರೆ ನನ್ನ ಕೇಡನ್ನು ನೋಡದಂತೆ ನನ್ನನ್ನು ಕೊಂದುಬಿಡು ಎಂದು ನಿನ್ನನ್ನು ಬೇಡಿಕೊಳ್ಳುತ್ತೇನೆ ಅಂದನು.
ಅರಣ್ಯಕಾಂಡ 11 : 16 (KNV)
ಕರ್ತನು ಮೋಶೆಗೆ ಹೇಳಿದ್ದೇನಂದರೆ--ಜನರ ಹಿರಿಯರೆಂದೂ ಅವರ ಮೇಲಿನ ಉದ್ಯೋಗಸ್ಥರೆಂದೂ ನೀನು ತಿಳಿದುಕೊಂಡಂಥ ಇಸ್ರಾಯೇಲ್ಯರ ಹಿರಿಯರೊ ಳಗೆ ಎಪ್ಪತ್ತು ಮಂದಿಯನ್ನು ನನ್ನ ಬಳಿಗೆ ಕೂಡಿಸಿ ಸಭೆಯ ಗುಡಾರದ ಕಡೆಗೆ ಕರಕೊಂಡು ಬಾ. ಅವರು ಅಲ್ಲಿ ನಿನ್ನ ಸಂಗಡ ನಿಂತಿರಲಿ.
ಅರಣ್ಯಕಾಂಡ 11 : 17 (KNV)
ನಾನು ಇಳಿದು ಬಂದು ನಿನ್ನ ಸಂಗಡ ಮಾತನಾಡಿ ನಿನ್ನ ಮೇಲಿರುವ ಆತ್ಮದಲ್ಲಿ ಪಾಲನ್ನು ತೆಗೆದು ಅವರ ಮೇಲೆ ಇಡುವೆನು; ಆಗ ನೀನು ಜನರ ಭಾರವನ್ನು ಒಬ್ಬನೇ ಹೊತ್ತುಕೊಳ್ಳದ ಹಾಗೆ ಅವರು ನಿನ್ನ ಸಂಗಡ ಅದನ್ನು ಹೊರುವರು.
ಅರಣ್ಯಕಾಂಡ 11 : 18 (KNV)
ಜನರಿಗೆ ನೀನು ಹೇಳಬೇಕಾದದ್ದೇನಂದರೆ--ನಾಳೆಗೆ ನಿಮ್ಮನ್ನು ಶುದ್ಧಮಾಡಿಕೊಳ್ಳಿರಿ. ಆಗ ಮಾಂಸವನ್ನು ತಿನ್ನುವಿರಿ; ಯಾಕಂದರೆ--ನಮಗೆ ಯಾವನು ಮಾಂಸವನ್ನು ತಿನ್ನುವದಕ್ಕೆ ಕೊಡುವನು? ಐಗುಪ್ತ ದೇಶದಲ್ಲಿ ನಮಗೆ ಒಳ್ಳೇದು ಇತ್ತೆಂದು ಕರ್ತನು ಕೇಳುವಂತೆ ಅಳುತ್ತಾ ಹೇಳಿದ್ದೀರಿ. ಆದಕಾರಣ ತಿನ್ನು ವದಕ್ಕೆ ಕರ್ತನು ನಿಮಗೆ ಮಾಂಸವನ್ನು ಕೊಡುವನು ನೀವು ತಿನ್ನುವಿರಿ.
ಅರಣ್ಯಕಾಂಡ 11 : 19 (KNV)
ನೀವು ತಿನ್ನುವದು ಒಂದು ದಿನವಲ್ಲ, ಎರಡು ದಿನವೂ ಅಲ್ಲ, ಐದು ದಿನವೂ ಅಲ್ಲ, ಹತ್ತು ದಿನವೂ ಅಲ್ಲ, ಇಪ್ಪತ್ತು ದಿನವೂ ಅಲ್ಲ.
ಅರಣ್ಯಕಾಂಡ 11 : 20 (KNV)
ಅದು ನಿಮ್ಮ ಮೂಗಿನಿಂದ ಬಂದು ನಿಮಗೆ ಅಸಹ್ಯವಾಗುವ ತನಕ ಪೂರ್ತಿ ಒಂದು ತಿಂಗಳ ವರೆಗೆ ಮಾಂಸವನ್ನು ತಿನ್ನುವಿರಿ. ನಿಮ್ಮ ಮಧ್ಯದಲ್ಲಿರುವ ಕರ್ತನನ್ನು ನೀವು ಅಲಕ್ಷ್ಯಮಾಡಿ ಆತನ ಎದುರಿನಲ್ಲಿ ಅತ್ತು--ನಾವು ಯಾಕೆ ಐಗುಪ್ತದಿಂದ ಬಂದೆವು ಎಂದು ಹೇಳುತ್ತೀರಲ್ಲಾ ಅಂದನು.
ಅರಣ್ಯಕಾಂಡ 11 : 21 (KNV)
ಅದಕ್ಕೆ ಮೋಶೆಯು ಹೇಳಿದ್ದೇನಂದರೆ--ನನ್ನ ಸಂಗಡ ಇರುವ ಜನರು ಆರು ಲಕ್ಷ ಕಾಲಾಳುಗಳು. ಪೂರ್ತಿ ಒಂದು ತಿಂಗಳು ತಿನ್ನುವ ಹಾಗೆ ಅವರಿಗೆ ನಾನು ಮಾಂಸವನ್ನು ಕೊಡುವೆನೆಂದು ನೀನು ಹೇಳಿದ್ದೀ.
ಅರಣ್ಯಕಾಂಡ 11 : 22 (KNV)
ಅವರಿಗೆ ಸಾಕಾಗುವ ಹಾಗೆ ಕುರಿ ದನಗಳನ್ನು ಅವರಿಗೋಸ್ಕರ ಕೊಯ್ಯಬೇಕೋ? ಅವರಿಗೆ ಸಾಕಾಗುವ ಹಾಗೆ ಸಮುದ್ರದ ವಿಾನುಗಳನ್ನೆಲ್ಲಾ ಕೂಡಿಸಿ ತರಬೇಕೋ ಅಂದನು.
ಅರಣ್ಯಕಾಂಡ 11 : 23 (KNV)
ಆಗ ಕರ್ತನು ಮೋಶೆಗೆ ಹೇಳಿದ್ದೇನಂದರೆ--ಕರ್ತನ ಕೈ ಮೋಟು ಗೈಯೋ? ನನ್ನ ಮಾತು ನೆರವೇರುತ್ತದೋ ಇಲ್ಲವೋ ನೀನು ನೋಡುವಿ ಅಂದನು.
ಅರಣ್ಯಕಾಂಡ 11 : 24 (KNV)
ಆಗ ಮೋಶೆ ಹೊರಟು ಕರ್ತನ ಮಾತುಗಳನ್ನು ಜನರಿಗೆ ಹೇಳಿ ಜನರ ಹಿರಿಯರಲ್ಲಿ ಎಪ್ಪತ್ತು ಮಂದಿಯನ್ನು ಕೂಡಿಸಿ ಗುಡಾರದ ಸುತ್ತಲೂ ನಿಲ್ಲಿಸಿದನು.
ಅರಣ್ಯಕಾಂಡ 11 : 25 (KNV)
ಕರ್ತನು ಮೇಘದೊಳಗೆ ಇಳಿದು ಬಂದು ಅವನ ಸಂಗಡ ಮಾತನಾಡಿ ಅವನ ಮೇಲಿರುವ ಆತ್ಮದಲ್ಲಿ ಪಾಲನ್ನು ತೆಗೆದು ಹಿರಿಯರಾದ ಎಪ್ಪತ್ತು ಮಂದಿಯ ಮೇಲೆ ಇಟ್ಟನು. ಆತ್ಮವು ಅವರ ಮೇಲೆ ನೆಲೆಯಾಗಿ ದ್ದಾಗ ಅವರು ಪ್ರವಾದಿಸಿದರು. ಅದನ್ನು ನಿಲ್ಲಿಸಲಿಲ್ಲ.
ಅರಣ್ಯಕಾಂಡ 11 : 26 (KNV)
ಆದರೆ ಇಬ್ಬರು ಮನುಷ್ಯರು ಪಾಳೆಯದಲ್ಲಿ ಉಳಿದರು. ಅವರಲ್ಲಿ ಒಬ್ಬನ ಹೆಸರು ಎಲ್ದಾದ್‌, ಮತ್ತೊಬ್ಬನ ಹೆಸರು ಮೇದಾದ್‌; ಇವರ ಮೇಲೆ ಆತ್ಮವು ನೆಲೆಯಾಯಿತು. ಇವರು ಬರೆಯಲ್ಪಟ್ಟವರಾಗಿ ಗುಡಾರಕ್ಕೆ ಹೊರಟು ಹೋಗದೆ ಪಾಳೆಯದಲ್ಲಿ ಪ್ರವಾದಿಸುತ್ತಿದ್ದರು.
ಅರಣ್ಯಕಾಂಡ 11 : 27 (KNV)
ಆಗ ಒಬ್ಬ ಯೌವನಸ್ಥನು ಓಡಿಬಂದು ಮೋಶೆಗೆ ತಿಳಿಸಿ ಹೇಳಿದ್ದೇನಂದರೆಎಲ್ದಾದನೂ ಮೇದಾದನೂ ಪಾಳೆಯದಲ್ಲಿ ಪ್ರವಾದಿ ಸುತ್ತಾರೆ ಅಂದನು.
ಅರಣ್ಯಕಾಂಡ 11 : 28 (KNV)
ಅದಕ್ಕೆ ತನ್ನ ಯೌವನಸ್ಥರಲ್ಲಿ ಒಬ್ಬನೂ ಮೋಶೆಯ ಸೇವಕನೂ ಆಗಿದ್ದ ನೂನನ ಮಗನಾದ ಯೆಹೋಶುವನು ಹೇಳಿದ್ದೇನಂದರೆ--ನನ್ನ ಒಡೆಯನಾದ ಮೋಶೆಯೇ, ಅವರನ್ನು ತಡೆ ಅಂದನು.
ಅರಣ್ಯಕಾಂಡ 11 : 29 (KNV)
ಮೋಶೆಯು ಅವನಿಗೆ ಹೇಳಿದ್ದೇ ನಂದರೆ--ನನ್ನ ನಿಮಿತ್ತವಾಗಿ ನೀನು ಹೊಟ್ಟೇಕಿಚ್ಚು ಪಡುತ್ತೀಯೋ? ಕರ್ತನ ಜನರೆಲ್ಲಾ ಪ್ರವಾದಿಗಳಾ ಗಿದ್ದು ಕರ್ತನು ತನ್ನ ಆತ್ಮವನ್ನು ಅವರ ಮೇಲೆ ಇಟ್ಟರೆ ಎಷ್ಟೋ ಒಳ್ಳೇದು ಅಂದನು!
ಅರಣ್ಯಕಾಂಡ 11 : 30 (KNV)
ಆಗ ಮೋಶೆಯೂ ಇಸ್ರಾಯೇಲ್‌ ಹಿರಿಯರೂ ಪಾಳೆಯದೊಳಗೆ ಬಂದು ಸೇರಿದರು.
ಅರಣ್ಯಕಾಂಡ 11 : 31 (KNV)
ಕರ್ತನ ಕಡೆಯಿಂದ ಗಾಳಿಯು ಹೊರಟು ಸಮುದ್ರದ ಕಡೆಯಿಂದ ಲಾವಕ್ಕಿಗಳನ್ನು ತಂದು ಪಾಳೆಯದ ಸುತ್ತಲೂ ಈ ಕಡೆ ಒಂದು ದಿನ ದೂರದ ಪ್ರಯಾಣದಷ್ಟು ಆ ಕಡೆ ಒಂದು ದಿನ ದೂರದ ಪ್ರಯಾಣದಷ್ಟು ಪಾಳೆಯದ ಬಳಿಯಲ್ಲಿ ಭೂಮಿಯ ಮೇಲೆ ಎರಡು ಮೊಳ ಎತ್ತರದಲ್ಲಿ ಅವುಗಳನ್ನು ಬೀಳುವಂತೆ ಮಾಡಿತು.
ಅರಣ್ಯಕಾಂಡ 11 : 32 (KNV)
ಜನರು ಎದ್ದು ಆ ದಿನವೆಲ್ಲಾ ರಾತ್ರಿಯೆಲ್ಲಾ ಮರುದಿವಸವೆಲ್ಲಾ ಲಾವಕ್ಕಿಗಳನ್ನು ಕೂಡಿಸಿದರು. ಕಡಿಮೆ ಕೂಡಿಸಿದವನು ಹತ್ತು ಹೋಮೆ ರಗಳನ್ನು ಕೂಡಿಸಿದನು; ಅವರು ಪಾಳೆಯದ ಸುತ್ತಲೂ ಅವುಗಳನ್ನು ಹರಡಿಕೊಂಡರು.
ಅರಣ್ಯಕಾಂಡ 11 : 33 (KNV)
ಆದರೆ ಮಾಂಸವು ಇನ್ನೂ ಅವರ ಹಲ್ಲುಗಳ ನಡುವೆ ಇದ್ದಾಗ ಅದನ್ನು ಅಗಿಯುವದಕ್ಕಿಂತ ಮುಂಚೆ ಕರ್ತನ ಕೋಪವು ಜನರಮೇಲೆ ಉರಿದದ್ದರಿಂದ ಆತನು ಜನರನ್ನು ಮಹಾ ದೊಡ್ಡ ವ್ಯಾಧಿಯಿಂದ ಹೊಡೆದನು.
ಅರಣ್ಯಕಾಂಡ 11 : 34 (KNV)
ಆಶೆಪಟ್ಟ ವರನ್ನು ಅಲ್ಲಿ ಹೂಣಿಟ್ಟದ್ದರಿಂದ ಆ ಸ್ಥಳಕ್ಕೆ ಕಿಬ್ರೋತ್‌ ಹತಾವಾ ಎಂದು ಹೆಸರಾಯಿತು.ತರುವಾಯ ಜನರು ಕಿಬ್ರೋತ್‌ ಹತಾವದಿಂದ ಹಚೇರೋತಿಗೆ ಪ್ರಯಾಣಮಾಡಿ ಅಲ್ಲಿ ಇಳು ಕೊಂಡರು.
ಅರಣ್ಯಕಾಂಡ 11 : 35 (KNV)
ತರುವಾಯ ಜನರು ಕಿಬ್ರೋತ್‌ ಹತಾವದಿಂದ ಹಚೇರೋತಿಗೆ ಪ್ರಯಾಣಮಾಡಿ ಅಲ್ಲಿ ಇಳು ಕೊಂಡರು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35

BG:

Opacity:

Color:


Size:


Font: