ಅರಣ್ಯಕಾಂಡ 1 : 1 (KNV)
ಅವರು ಐಗುಪ್ತದೇಶದಿಂದ ಹೊರಟ ಎರಡನೆಯ ವರುಷದ ಎರಡನೆಯ ತಿಂಗಳಿನ ಮೊದಲನೆಯ ದಿವಸದಲ್ಲಿ ಕರ್ತನು ಸೀನಾಯಿ ಅರಣ್ಯದಲ್ಲಿ ಸಭೆಯ ಗುಡಾರದೊಳಗೆ ಮೋಶೆಯ ಸಂಗಡ ಮಾತನಾಡಿ--
ಅರಣ್ಯಕಾಂಡ 1 : 2 (KNV)
ಇಸ್ರಾಯೇಲ್‌ ಮಕ್ಕಳ ಸಮಸ್ತ ಸಭೆಯ ಲೆಕ್ಕವನ್ನು ಅವರ ಕುಟುಂಬಗಳ ಪ್ರಕಾರವಾಗಿಯೂ ಅವರ ತಂದೆಗಳ ಮನೆಗಳ ಪ್ರಕಾರ ವಾಗಿಯೂ ಗಂಡಸರೆಲ್ಲರ ಹೆಸರುಗಳ ಎಣಿಕೆಯೊಂದಿಗೆ ತಲೆ ತಲೆಗೂ ನೀವು ತಕ್ಕೊಳ್ಳಿರಿ.
ಅರಣ್ಯಕಾಂಡ 1 : 3 (KNV)
ಇಸ್ರಾಯೇಲಿನಲ್ಲಿ ಯುದ್ಧಕ್ಕೆ ಹೊರಡುವವರೆಲ್ಲರನ್ನು ಅಂದರೆ ಇಪ್ಪತ್ತು ವರುಷದವರನ್ನೂ ಅದಕ್ಕೆ ಹೆಚ್ಚಾದ ಪ್ರಾಯವುಳ್ಳವ ರನ್ನೂ ಅವರ ಸೈನ್ಯಗಳ ಪ್ರಕಾರ ನೀನೂ ಆರೋನನೂ ಲೆಕ್ಕಮಾಡಿರಿ.
ಅರಣ್ಯಕಾಂಡ 1 : 4 (KNV)
ತನ್ನ ತಂದೆಯ ಮನೆಗೆ ಮುಖ್ಯಸ್ಥನಾದ ಪ್ರತಿಯೊಬ್ಬನು ಒಂದೊಂದು ಗೋತ್ರಕ್ಕೋಸ್ಕರ ನಿಮ್ಮ ಸಂಗಡ ಇರಲಿ.
ಅರಣ್ಯಕಾಂಡ 1 : 5 (KNV)
ನಿಮ್ಮ ಸಂಗಡ ನಿಲ್ಲಬೇಕಾದ ಮನುಷ್ಯರ ಹೆಸರುಗಳು ಇವೇ: ರೂಬೇನ್‌ ಗೋತ್ರ ದಿಂದ ಶೆದೇಯೂರನ ಮಗನಾದ ಎಲೀಚೂರ್‌,
ಅರಣ್ಯಕಾಂಡ 1 : 6 (KNV)
ಸಿಮೆಯೋನ್‌ ಗೋತ್ರದಿಂದ ಚೂರೀಷದ್ದೈಯನ ಮಗನಾದ ಶೆಲುವಿಾಯೇಲ್‌,
ಅರಣ್ಯಕಾಂಡ 1 : 7 (KNV)
ಯೆಹೂದ ಗೋತ್ರ ದಿಂದ ಅವ್ಮೆಾನಾದಾಬನ ಮಗನಾದ ನಹಶೋನ್‌,
ಅರಣ್ಯಕಾಂಡ 1 : 8 (KNV)
ಇಸ್ಸಾಕಾರ್‌ ಗೋತ್ರದಿಂದ ಚೂವಾರನ ಮಗನಾದ ನೆತನೇಲ್‌,
ಅರಣ್ಯಕಾಂಡ 1 : 9 (KNV)
ಜೆಬುಲೂನ್‌ ಗೋತ್ರದಿಂದ ಹೇಲೋ ನನ ಮಗನಾದ ಎಲೀಯಾಬ್‌,
ಅರಣ್ಯಕಾಂಡ 1 : 10 (KNV)
ಯೋಸೇಫನ ಮಕ್ಕಳ ಗೋತ್ರದಲ್ಲಿ ಎಫ್ರಾಯಾಮ್‌ನಿಂದ ಅವ್ಮೆಾ ಹೂದನ ಮಗನಾದ ಎಲೀಷಾಮಾ, ಮನಸ್ಸೆ ಗೋತ್ರ ದಿಂದ ಪೆದಾಚೂರನ ಮಗನಾದ ಗವ್ಲೆಾಯೇಲ್‌,
ಅರಣ್ಯಕಾಂಡ 1 : 11 (KNV)
ಬೆನ್ಯಾವಿಾನ್‌ ಗೋತ್ರದಿಂದ ಗಿದ್ಯೋನಿಯ ಮಗ ನಾದ ಅಬೀದಾನ್‌,
ಅರಣ್ಯಕಾಂಡ 1 : 12 (KNV)
ದಾನ್‌ ಗೋತ್ರದಿಂದ ಅವ್ಮೆಾಷದ್ದೈಯ ಮಗನಾದ ಅಹೀಗೆಜೆರ್‌,
ಅರಣ್ಯಕಾಂಡ 1 : 13 (KNV)
ಆಶೇರ್‌ ಗೋತ್ರದಿಂದ ಒಕ್ರಾನನ ಮಗನಾದ ಪಗೀಯೆಲ್‌,
ಅರಣ್ಯಕಾಂಡ 1 : 14 (KNV)
ಗಾದ್‌ ಗೋತ್ರದಿಂದ ರೆಗೂವೇಲನ ಮಗನಾದ ಎಲ್ಯಾಸಾಫ್‌.
ಅರಣ್ಯಕಾಂಡ 1 : 15 (KNV)
ನಫ್ತಾಲಿ ಗೋತ್ರದಿಂದ ಏನಾನನ ಮಗನಾದ ಅಹೀರನು,
ಅರಣ್ಯಕಾಂಡ 1 : 16 (KNV)
ಸಭೆಯವರಲ್ಲಿ ಪ್ರಸಿದ್ಧವಾದವರೂ ತಮ್ಮ ತಂದೆಗಳ ಗೋತ್ರಗಳ ಪ್ರಭುಗಳೂ ಇಸ್ರಾಯೇಲಿನಲ್ಲಿ ಸಹಸ್ರಗಳ ಮುಖ್ಯ ಸ್ಥರೂ ಇವರೇ.
ಅರಣ್ಯಕಾಂಡ 1 : 17 (KNV)
ಹೆಸರುಗಳು ಹೇಳಲ್ಪಟ್ಟ ಈ ಮನುಷ್ಯರನ್ನು ಮೋಶೆ ಆರೋನರು ತಕ್ಕೊಂಡರು.
ಅರಣ್ಯಕಾಂಡ 1 : 18 (KNV)
ಸಮಸ್ತ ಸಭೆಯನ್ನು ಎರಡನೇ ತಿಂಗಳಿನ ಮೊದಲನೇ ದಿವಸದಲ್ಲಿ ಕೂಡಿಸಿದರು; ಅವರು ತಮ್ಮ ಗೋತ್ರಗಳಿಗನುಸಾರ ವಾಗಿ ತಂದೆಗಳ ಮನೆಯ ಪ್ರಕಾರ ಹೆಸರುಗಳ ಲೆಕ್ಕವಿರುವ ಇಪ್ಪತ್ತು ವರುಷ ಮೊದಲುಗೊಂಡು ಹೆಚ್ಚಾದ ಪ್ರಾಯವುಳ್ಳವರು ತಲೆ ತಲೆಯಾಗಿ ಜನ್ಮಪತ್ರಿಕೆ ಬರೆಸಿಕೊಂಡರು.
ಅರಣ್ಯಕಾಂಡ 1 : 19 (KNV)
ಕರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆಯೇ ಅವನು ಸೀನಾಯಿ ಅರಣ್ಯದಲ್ಲಿ ಅವರನ್ನು ಲೆಕ್ಕಮಾಡಿದನು.
ಅರಣ್ಯಕಾಂಡ 1 : 20 (KNV)
ಇಸ್ರಾಯೇಲಿನ ಹಿರೀಮಗನಾದ ರೂಬೇನನ ಮಕ್ಕಳು, ಅವರ ಸಂತತಿಗಳ ಪ್ರಕಾರವಾಗಿಯೂ ಕುಟುಂಬಗಳ ಪ್ರಕಾರವಾಗಿಯೂ ತಂದೆಗಳ ಮನೆಯ ಪ್ರಕಾರವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕ ದಿಂದ ಇಪ್ಪತ್ತು ವರುಷ ಮೊದಲುಗೊಂಡು ಹೆಚ್ಚಾದ ಪ್ರಾಯವುಳ್ಳವರು ಯುದ್ಧಕ್ಕೆ ಹೋಗಲು ಶಕ್ತರಾದ ಗಂಡಸರೆಲ್ಲರು
ಅರಣ್ಯಕಾಂಡ 1 : 21 (KNV)
ತಲೆ ತಲೆಯಾಗಿ ರೂಬೇನನ ಗೋತ್ರದಲ್ಲಿ ಎಣಿಸಲ್ಪಟ್ಟವರು ನಲವತ್ತಾರು ಸಾವಿರದ ಐದು ನೂರು.
ಅರಣ್ಯಕಾಂಡ 1 : 22 (KNV)
ಸಿಮೆಯೋನನ ಮಕ್ಕಳು, ಅವರ ಗೋತ್ರಗಳ ಪ್ರಕಾರವಾಗಿಯೂ ತಂದೆಗಳ ಮನೆಯ ಪ್ರಕಾರ ವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕದಿಂದ ಇಪ್ಪತ್ತು ವರುಷ ಮೊದಲುಗೊಂಡು ಮೇಲ್ಪಟ್ಟ ಪ್ರಾಯವುಳ್ಳವರು ಯುದ್ಧಕ್ಕೆ ಹೊರಡಲು ಶಕ್ತರಾದ ಗಂಡಸರೆಲ್ಲರು
ಅರಣ್ಯಕಾಂಡ 1 : 23 (KNV)
ಸಿಮೆಯೋನನ ಗೋತ್ರದಲ್ಲಿ ಎಣಿಸಲ್ಪಟ್ಟವರು ಐವತ್ತೊಂಭತ್ತು ಸಾವಿರದ ಮುನ್ನೂರು.
ಅರಣ್ಯಕಾಂಡ 1 : 24 (KNV)
ಗಾದನ ಮಕ್ಕಳು, ಅವರ ಗೋತ್ರಗಳ ಪ್ರಕಾರ ವಾಗಿಯೂ ತಂದೆಗಳ ಮನೆಯ ಪ್ರಕಾರವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕದಿಂದ ಇಪ್ಪತ್ತು ವರುಷ ಮೊದಲುಗೊಂಡು ಮೇಲ್ಪಟ್ಟ ಪ್ರಾಯವುಳ್ಳವರು ಯುದ್ಧಕ್ಕೆ ಹೊರಡಲು ಶಕ್ತರಾದವರೆಲ್ಲರು
ಅರಣ್ಯಕಾಂಡ 1 : 25 (KNV)
ಗಾದನ ಗೋತ್ರದಲ್ಲಿ ಎಣಿಸಲ್ಪಟ್ಟವರು ನಲವತ್ತೈದು ಸಾವಿರದ ಆರುನೂರ ಐವತ್ತು.
ಅರಣ್ಯಕಾಂಡ 1 : 26 (KNV)
ಯೂದನ ಮಕ್ಕಳು, ಅವರ ಗೋತ್ರಗಳ ಪ್ರಕಾರ ವಾಗಿಯೂ ತಂದೆಗಳ ಮನೆಯ ಪ್ರಕಾರವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕದಿಂದ ಇಪ್ಪತ್ತು ವರುಷ ಮೊದಲುಗೊಂಡು ಮೇಲ್ಪಟ್ಟ ಪ್ರಾಯವುಳ್ಳವರು ಯುದ್ಧಕ್ಕೆ ಹೊರಡಲು ಶಕ್ತರಾದವರೆಲ್ಲರು
ಅರಣ್ಯಕಾಂಡ 1 : 27 (KNV)
ಯೆಹೂ ದನ ಗೋತ್ರದಲ್ಲಿ ಎಣಿಸಲ್ಪಟ್ಟವರು ಎಪ್ಪತ್ತನಾಲ್ಕು ಸಾವಿರದ ಆರುನೂರು.
ಅರಣ್ಯಕಾಂಡ 1 : 28 (KNV)
ಇಸ್ಸಾಕಾರನ ಮಕ್ಕಳು, ಅವರ ಗೋತ್ರಗಳ ಪ್ರಕಾರವಾಗಿಯೂ ತಂದೆಗಳ ಮನೆಯ ಪ್ರಕಾರ ವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕದಿಂದ ಇಪ್ಪತ್ತು ವರುಷ ಮೊದಲುಗೊಂಡು ಮೇಲ್ಪಟ್ಟ ಪ್ರಾಯ ವುಳ್ಳವರು ಯುದ್ಧಕ್ಕೆ ಹೊರಡಲು ಶಕ್ತರಾದವರೆಲ್ಲರು
ಅರಣ್ಯಕಾಂಡ 1 : 29 (KNV)
ಇಸ್ಸಾಕಾರನ ಗೋತ್ರದಲ್ಲಿ ಎಣಿಸಲ್ಪಟ್ಟವರು ಐವತ್ತ ನಾಲ್ಕು ಸಾವಿರದ ನಾಲ್ಕುನೂರು.
ಅರಣ್ಯಕಾಂಡ 1 : 30 (KNV)
ಜೆಬುಲೂನನ ಮಕ್ಕಳು, ಅವರ ಗೋತ್ರಗಳ ಪ್ರಕಾರವಾಗಿಯೂ ತಂದೆಗಳ ಮನೆಯ ಪ್ರಕಾರ ವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕದಿಂದ ಇಪ್ಪತ್ತು ವರುಷ ಮೊದಲುಗೊಂಡು ಮೇಲ್ಪಟ್ಟ ಪ್ರಾಯ ವುಳ್ಳವರು ಯುದ್ದಕ್ಕೆ ಹೊರಡಲು ಶಕ್ತರಾದವರೆಲ್ಲರು
ಅರಣ್ಯಕಾಂಡ 1 : 31 (KNV)
ಜೆಬುಲೂನ್‌ ಗೋತ್ರದಲ್ಲಿ ಎಣಿಸಲ್ಪಟ್ಟವರು ಐವತ್ತೇಳು ಸಾವಿರದ ನಾಲ್ಕುನೂರು.
ಅರಣ್ಯಕಾಂಡ 1 : 32 (KNV)
ಯೋಸೇಫನ ಮಕ್ಕಳಾದ ಎಫ್ರಾಯಾಮ್‌ ಮಕ್ಕಳು, ಅವರ ಗೋತ್ರಗಳ ಪ್ರಕಾರವಾಗಿಯೂ ತಂದೆಗಳ ಮನೆಯ ಪ್ರಕಾರವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕದಿಂದ ಇಪ್ಪತ್ತು ವರುಷ ಮೊದಲು ಗೊಂಡು ಮೇಲ್ಪಟ್ಟ ಪ್ರಾಯವುಳ್ಳವರು ಯುದ್ಧಕ್ಕೆ ಹೊರಡಲು ಶಕ್ತರಾದವರೆಲ್ಲರು
ಅರಣ್ಯಕಾಂಡ 1 : 33 (KNV)
ಎಫ್ರಾಯಾಮ್‌ನ ಗೋತ್ರದಲ್ಲಿ ಎಣಿಸಲ್ಪಟ್ಟವರು ನಲವತ್ತು ಸಾವಿರದ ಐದುನೂರು.
ಅರಣ್ಯಕಾಂಡ 1 : 34 (KNV)
ಮನಸ್ಸೆಯ ಮಕ್ಕಳು, ಅವರ ಗೋತ್ರಗಳ ಪ್ರಕಾರ ವಾಗಿಯೂ ತಂದೆಗಳ ಮನೆಯ ಪ್ರಕಾರವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕದಿಂದ ಇಪ್ಪತ್ತು ವರುಷ ಮೊದಲುಗೊಂಡು ಮೇಲ್ಪಟ್ಟ ಪ್ರಾಯವುಳ್ಳವರು ಯುದ್ಧಕ್ಕೆ ಹೊರಡಲು ಶಕ್ಕರಾದವರೆಲ್ಲರೂ
ಅರಣ್ಯಕಾಂಡ 1 : 35 (KNV)
ಮನ ಸ್ಸೆಯ ಗೋತ್ರದಲ್ಲಿ ಎಣಿಸಲ್ಪಟ್ಟವರು ಮೂವತ್ತೆರಡು ಸಾವಿರದ ಇನ್ನೂರು.
ಅರಣ್ಯಕಾಂಡ 1 : 36 (KNV)
ಬೆನ್ಯಾವಿಾನ್‌ ಮಕ್ಕಳು, ಅವರ ಗೋತ್ರಗಳ ಪ್ರಕಾರವಾಗಿಯೂ ತಂದೆಗಳ ಮನೆಯ ಪ್ರಕಾರ ವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕದಿಂದ ಇಪ್ಪತ್ತು ವರುಷ ಮೊದಲುಗೊಂಡು ಮೇಲ್ಪಟ್ಟ ಪ್ರಾಯ ವುಳ್ಳವರು ಯುದ್ಧಕ್ಕೆ ಹೊರಡಲು ಶಕ್ತರಾದವರೆಲ್ಲರು
ಅರಣ್ಯಕಾಂಡ 1 : 37 (KNV)
ಬೆನ್ಯಾವಿಾನ್‌ ಗೋತ್ರದಲ್ಲಿ ಎಣಿಸಲ್ಪಟ್ಟವರು ಮೂವತ್ತೈದು ಸಾವಿರದ ನಾಲ್ಕುನೂರು.
ಅರಣ್ಯಕಾಂಡ 1 : 38 (KNV)
ದಾನನ ಮಕ್ಕಳು, ಅವರ ಗೋತ್ರಗಳ ಪ್ರಕಾರ ವಾಗಿಯೂ ತಂದೆಗಳ ಮನೆಯ ಪ್ರಕಾರವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕದಿಂದ ಇಪ್ಪತ್ತು ವರುಷ ಮೊದಲುಗೊಂಡು ಮೇಲ್ಪಟ್ಟ ಪ್ರಾಯವುಳ್ಳವರು ಯುದ್ಧಕ್ಕೆ ಹೊರಡಲು ಶಕ್ತರಾದವರೆಲ್ಲರು
ಅರಣ್ಯಕಾಂಡ 1 : 39 (KNV)
ದಾನನ ಗೋತ್ರದಲ್ಲಿ ಎಣಿಸಲ್ಪ ಟ್ಟವರು ಅರವತ್ತೆರಡು ಸಾವಿರದ ಏಳುನೂರು.
ಅರಣ್ಯಕಾಂಡ 1 : 40 (KNV)
ಆಶೇರನ ಮಕ್ಕಳು, ಅವರ ಗೋತ್ರಗಳ ಪ್ರಕಾರ ವಾಗಿಯೂ ತಂದೆಗಳ ಮನೆಯ ಪ್ರಕಾರವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕದಿಂದ ಇಪ್ಪತ್ತು ವರುಷ ಮೊದಲುಗೊಂಡು ಮೇಲ್ಪಟ್ಟ ಪ್ರಾಯವುಳ್ಳವರು ಯುದ್ಧಕ್ಕೆ ಹೊರಡಲು ಶಕ್ತರಾದವರೆಲ್ಲರು
ಅರಣ್ಯಕಾಂಡ 1 : 41 (KNV)
ಆಶೇರನ ಗೋತ್ರದಲ್ಲಿ ಎಣಿಸಲ್ಪಟ್ಟವರು ನಲವತ್ತೊಂದು ಸಾವಿರದ ಐದುನೂರು.
ಅರಣ್ಯಕಾಂಡ 1 : 42 (KNV)
ನಫ್ತಾಲಿನ ಮಕ್ಕಳು, ಅವರ ಗೋತ್ರಗಳ ಪ್ರಕಾರ ವಾಗಿಯೂ ತಂದೆಗಳ ಮನೆಯ ಪ್ರಕಾರವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕದಿಂದ ಇಪ್ಪತ್ತು ವರುಷ ಮೊದಲುಗೊಂಡು ಮೇಲ್ಪಟ್ಟ ಪ್ರಾಯವುಳ್ಳವರು ಯುದ್ಧಕ್ಕೆ ಹೊರಡಲು ಶಕ್ತರಾದವರೆಲ್ಲರು
ಅರಣ್ಯಕಾಂಡ 1 : 43 (KNV)
ನಫ್ತಾಲಿನ ಗೋತ್ರದಲ್ಲಿ ಎಣಿಸಲ್ಪಟ್ಟವರು ಐವತ್ತಮೂರು ಸಾವಿರದ ನಾಲ್ಕುನೂರು.
ಅರಣ್ಯಕಾಂಡ 1 : 44 (KNV)
ಮೋಶೆ ಆರೋನರೂ ಇಸ್ರಾಯೇಲಿನ ಮುಖ್ಯಸ್ಥರೂ ಎಣಿಸಿದವರು ಇವರೇ. ಇವರು ತಮ್ಮ ತಮ್ಮ ತಂದೆಗಳ ಮನೆಗಳಿಗೆ ಒಬ್ಬೊಬ್ಬನಂತೆ ಹನ್ನೆರಡು ಮಂದಿಯಾಗಿದ್ದರು.
ಅರಣ್ಯಕಾಂಡ 1 : 45 (KNV)
ಹೀಗೆ ಇಸ್ರಾಯೇಲ್‌ ಮಕ್ಕಳಲ್ಲಿ ಎಣಿಸಲ್ಪಟ್ಟವ ರೆಲ್ಲರು ಅವರ ತಂದೆಗಳ ಮನೆಗಳ ಪ್ರಕಾರ ಇಪ್ಪತ್ತು ವರುಷದವರೂ ಅದಕ್ಕಿಂತ ಹೆಚ್ಚಾದ ಪ್ರಾಯವುಳ್ಳ ವರೂ ಇಸ್ರಾಯೇಲಿನಲ್ಲಿ ಯುದ್ಧಕ್ಕೆ ಹೊರಡಲು ಶಕ್ತರಾದವರೂ
ಅರಣ್ಯಕಾಂಡ 1 : 46 (KNV)
ಆರು ಲಕ್ಷದ ಮೂರು ಸಾವಿರದ ಐದುನೂರ ಐವತ್ತು ಮಂದಿಯಾಗಿದ್ದರು.
ಅರಣ್ಯಕಾಂಡ 1 : 47 (KNV)
ಆದರೆ ಲೇವಿಯರು ತಮ್ಮ ತಂದೆಗಳ ಗೋತ್ರದ ಪ್ರಕಾರ ಅವರೊಳಗೆ ಎಣಿಸಲ್ಪಡಲಿಲ್ಲ.
ಅರಣ್ಯಕಾಂಡ 1 : 48 (KNV)
ಇದಲ್ಲದೆ ಕರ್ತನು ಮಾತನಾಡಿ ಮೋಶೆಗೆ ಹೇಳಿದ್ದೇನಂದರೆ--
ಅರಣ್ಯಕಾಂಡ 1 : 49 (KNV)
ಲೇವಿ ಗೋತ್ರವನ್ನು ಮಾತ್ರ ಎಣಿಸದೆ ಇಸ್ರಾ ಯೇಲ್‌ ಮಕ್ಕಳೊಳಗೆ ಅವರ ಲೆಕ್ಕವನ್ನು ತಕ್ಕೊಳ್ಳಬೇಡ.
ಅರಣ್ಯಕಾಂಡ 1 : 50 (KNV)
ಆದರೆ ನೀನು ಲೇವಿಯರನ್ನು ಸಾಕ್ಷಿಯ ಗುಡಾರ ಕ್ಕೋಸ್ಕರವೂ ಅದರ ಎಲ್ಲಾ ವಸ್ತುಗಳಿಗೋಸ್ಕರವೂ ಅದಕ್ಕೆ ಬೇಕಾದ ಎಲ್ಲವುಗಳಿಗೋಸ್ಕರವೂ ನೇಮಿಸು. ಅವರು ಗುಡಾರವನ್ನೂ ಅದರ ಎಲ್ಲಾ ವಸ್ತುಗಳನ್ನೂ ಹೊತ್ತುಕೊಳ್ಳುವರು, ಇದರ ಸೇವೆಮಾಡಿ ಗುಡಾರದ ಸುತ್ತಮುತ್ತಲೂ ಇಳಿದುಕೊಳ್ಳಬೇಕು.
ಅರಣ್ಯಕಾಂಡ 1 : 51 (KNV)
ಗುಡಾರವು ಹೊರಡುವಾಗ ಲೇವಿಯರು ಅದನ್ನು ಬಿಚ್ಚಲಿ; ಗುಡಾರವು ಇಳಿಯುವಾಗ ಲೇವಿಯರು ಅದನ್ನು ನಿಲ್ಲಿಸಲಿ; ಪರಕೀಯನು ಸವಿಾಪಿಸಿದರೆ ಅವನು ಸಾಯಬೇಕು.
ಅರಣ್ಯಕಾಂಡ 1 : 52 (KNV)
ಇಸ್ರಾಯೇಲ್‌ ಮಕ್ಕಳು ತಮ್ಮ ತಮ್ಮ ಸೈನ್ಯಗಳ ಪ್ರಕಾರ ಒಬ್ಬೊಬ್ಬನು ತನ್ನ ದಂಡಿನ ಬಳಿಯಲ್ಲಿ ತನ್ನ ಧ್ವಜದ ಬಳಿಯಲ್ಲಿ ಇಳಿದುಕೊಳ್ಳಬೇಕು.
ಅರಣ್ಯಕಾಂಡ 1 : 53 (KNV)
ಆದರೆ ಲೇವಿಯರು ಸಾಕ್ಷಿಯ ಗುಡಾರದ ಸುತ್ತಲೂ ಇಳಿದು ಕೊಳ್ಳಬೇಕು; ಹೀಗೆ ಇಸ್ರಾಯೇಲ್‌ ಮಕ್ಕಳ ಸಭೆಯ ಮೇಲೆ ಕೋಪಬಾರದಿರುವದು; ಲೇವಿಯರು ಸಾಕ್ಷಿಯ ಗುಡಾರವನ್ನು ಕಾಯುವವರಾಗಿರಬೇಕು.ಇಸ್ರಾಯೇಲ್‌ ಮಕ್ಕಳು ಹಾಗೆಯೇ ಮಾಡಿದರು. ಕರ್ತನು ಮೋಶೆಗೆ ಆಜ್ಞಾಪಿಸಿದ ಎಲ್ಲವುಗಳ ಪ್ರಕಾರವೇ ಅವರು ಮಾಡಿದರು.
ಅರಣ್ಯಕಾಂಡ 1 : 54 (KNV)
ಇಸ್ರಾಯೇಲ್‌ ಮಕ್ಕಳು ಹಾಗೆಯೇ ಮಾಡಿದರು. ಕರ್ತನು ಮೋಶೆಗೆ ಆಜ್ಞಾಪಿಸಿದ ಎಲ್ಲವುಗಳ ಪ್ರಕಾರವೇ ಅವರು ಮಾಡಿದರು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50 51 52 53 54

BG:

Opacity:

Color:


Size:


Font: