ಯಾಜಕಕಾಂಡ 6 : 1 (KNV)
ಕರ್ತನು ಮೋಶೆಯೊಡನೆ ಮಾತನಾಡಿ
ಯಾಜಕಕಾಂಡ 6 : 2 (KNV)
ಯಾವನಾದರೂ ಪಾಪಮಾಡಿ ಕರ್ತನಿಗೆ ವಿರುದ್ಧವಾಗಿ ಅತಿಕ್ರಮಿಸಿದರೆ ಮತ್ತು ಅವನ ನೆರೆಯ ವನು ಅವನ ವಶದಲ್ಲಿ ಇಟ್ಟುಕೊಳ್ಳಲು ಕೊಟ್ಟದ್ದರ ಲ್ಲಾಗಲಿ ಇಲ್ಲವೆ ಪಾಲುಗಾರಿಕೆಯಲ್ಲಾಗಲಿ ಬಲಾತ್ಕಾರ ವಾಗಿ ತೆಗೆದುಕೊಂಡಂಥ ವಸ್ತುವಿಗಾಗಲಿ ಸುಳ್ಳು ಹೇಳಿದರೆ ಅವನ ನೆರೆಯವನನ್ನು ಮೋಸಮಾಡಿದರೆ
ಯಾಜಕಕಾಂಡ 6 : 3 (KNV)
ಕಳೆದುಹೋಗಿದ್ದು ಸಿಕ್ಕಿ ಅದರ ವಿಷಯದಲ್ಲಿ ಸುಳ್ಳಾ ಡಿದರೆ ಮತ್ತು ಸುಳ್ಳಾಗಿ ಪ್ರಮಾಣಮಾಡಿದರೆ ಇವೆಲ್ಲವುಗಳಲ್ಲಿ ಯಾವದನ್ನಾದರೂ ಒಬ್ಬ ಮನುಷ್ಯನು ಮಾಡಿದ್ದರೆ ಅವುಗಳಲ್ಲಿ ಪಾಪಮಾಡುವನು.
ಯಾಜಕಕಾಂಡ 6 : 4 (KNV)
ಅವನು ಪಾಪಮಾಡಿ ಅಪರಾಧಿಯಾಗಿರುವದರಿಂದ ಅವನು ಬಲಾತ್ಕಾರವಾಗಿ ಪಡೆದುಕೊಂಡದ್ದನ್ನೂ ಮೋಸದಿಂದ ಪಡೆದ ವಸ್ತುವನ್ನೂ ಅವನ ವಶಕ್ಕೆ ಇಟ್ಟುಕೊಳ್ಳಲು ಕೊಟ್ಟದ್ದನ್ನೂ ಕಳೆದುಹೋಗಿ ಸಿಕ್ಕಿದ ವಸ್ತುವನ್ನೂ ಹಿಂದಕ್ಕೆ ಕೊಡುವಂತಾಗಬೇಕು.
ಯಾಜಕಕಾಂಡ 6 : 5 (KNV)
ಅಥವಾ ಅವನು ಸುಳ್ಳಾಗಿ ಪ್ರಮಾಣಮಾಡಿ ಪಡೆದವುಗಳೆಲ್ಲವುಗಳನ್ನೂ ಅಲ್ಲದೆ ಅವನು ಅದರ ಅಸಲಿಗೆ ಐದನೇ ಪಾಲನ್ನೂ ಕೂಡಿಸಿ ಹಿಂದಕ್ಕೆ ಕೊಡಬೇಕು. ಅತಿಕ್ರಮ ಬಲಿ ಅರ್ಪಿಸುವ ದಿನದಲ್ಲಿ ಅದರ ಯಜಮಾನನು ಯಾವ ನಾಗಿರುವನೋ ಅವನಿಗೆ ಕೊಡಬೇಕು.
ಯಾಜಕಕಾಂಡ 6 : 6 (KNV)
ಅವನು ತನ್ನ ಅತಿಕ್ರಮ ಬಲಿಯನ್ನು ಕರ್ತನ ಸನ್ನಿಧಿಗೆ ನಿನ್ನ ಅಂದಾಜಿನ ಮೇರೆಗೆ ಮಂದೆಯಿಂದ ದೋಷ ವಿಲ್ಲದ ಒಂದು ಟಗರನ್ನು ಅತಿಕ್ರಮ ಬಲಿಗಾಗಿ ಯಾಜಕನ ಬಳಿಗೆ ತರಬೇಕು.
ಯಾಜಕಕಾಂಡ 6 : 7 (KNV)
ಯಾಜಕನು ಅವನಿಗಾಗಿ ಕರ್ತನ ಮುಂದೆ ಪ್ರಾಯಶ್ಚಿತ್ತಮಾಡಬೇಕು. ಅತಿ ಕ್ರಮವಾಗಿ ಅವನು ಏನನ್ನಾದರೂ ಮಾಡಿದ್ದರೆ ಅದು ಅವನಿಗೆ ಕ್ಷಮಿಸಲ್ಪಡುವದು ಅಂದನು.
ಯಾಜಕಕಾಂಡ 6 : 8 (KNV)
ಕರ್ತನು ಮೋಶೆಯೊಂದಿಗೆ ಮಾತನಾಡಿ--
ಯಾಜಕಕಾಂಡ 6 : 9 (KNV)
ಆರೋನನಿಗೂ ಅವನ ಕುಮಾರರಿಗೂ ಆಜ್ಞಾಪಿಸಿ ಹೇಳಬೇಕಾದದ್ದೇನಂದರೆ--ಇದು ದಹನಬಲಿಯ ನಿಯಮವಾಗಿದೆ, ಇದು ದಹನಬಲಿ; ಇಡೀ ರಾತ್ರಿ ಅಂದರೆ ಬೆಳಗಿನ ವರೆಗೆ ಅದು ಯಜ್ಞವೇದಿಯ ಮೇಲೆ ಸುಡುತ್ತಿರುವದು. ಯಜ್ಞವೇದಿಯ ಬೆಂಕಿಯು ಅದರೊ ಳಗೆ ಸುಡುತ್ತಾ ಇರುವದು.
ಯಾಜಕಕಾಂಡ 6 : 10 (KNV)
ಯಾಜಕನು ತನ್ನ ನಾರು ಮಡಿಯ ಉಡುಪನ್ನೂ ತನ್ನ ಶರೀರದ ಮೇಲೆ ನಾರು ಮಡಿಯ ಇಜಾರುಗಳನ್ನೂ ಹಾಕಿಕೊಂಡು ಯಜ್ಞ ವೇದಿಯ ಮೇಲೆ ದಹನಬಲಿಯೊಂದಿಗೆ ಬೆಂಕಿಯಲ್ಲಿ ಸುಟ್ಟು ಬೂದಿಯನ್ನು ತೆಗೆದುಕೊಂಡು ಅದನ್ನು ಯಜ್ಞ ವೇದಿಯ ಬಳಿಯಲ್ಲಿ ಹಾಕಬೇಕು.
ಯಾಜಕಕಾಂಡ 6 : 11 (KNV)
ಅವನು ತನ್ನ ಉಡುಪುಗಳನ್ನು ತೆಗೆದುಹಾಕಿ ಬೇರೆ ಉಡುಪುಗಳನ್ನು ಧರಿಸಿಕೊಂಡು ಆ ಬೂದಿಯನ್ನು ಪಾಳೆಯದ ಆಚೆಗೆ ಶುದ್ಧವಾದ ಸ್ಥಳಕ್ಕೆ ತೆಗೆದುಕೊಂಡು ಹೋಗಬೇಕು.
ಯಾಜಕಕಾಂಡ 6 : 12 (KNV)
ಯಜ್ಞವೇದಿಯ ಮೇಲಿನ ಬೆಂಕಿಯು ಅದರೊಳಗೆ ಸುಡುತ್ತಿರಬೇಕು; ಅದು ಉರಿಯುತ್ತಲೇ ಇರಬೇಕು. ಪ್ರತಿ ಮುಂಜಾನೆ ಯಾಜಕನು ಅದರ ಮೇಲೆ ಕಟ್ಟಿಗೆ ಯನ್ನು ಸುಡಬೇಕು ಮತ್ತು ದಹನಬಲಿಯನ್ನು ಅದರ ಮೇಲೆ ಕ್ರಮವಾಗಿ ಇಡಬೇಕು; ಇದಲ್ಲದೆ ಅವನು ಅದರ ಮೇಲೆ ಸಮಾಧಾನ ಯಜ್ಞಗಳ ಕೊಬ್ಬನ್ನು ಸುಡಬೇಕು.
ಯಾಜಕಕಾಂಡ 6 : 13 (KNV)
ಯಜ್ಞವೇದಿಯ ಮೇಲೆ ಬೆಂಕಿಯು ಯಾವಾಗಲೂ ಉರಿಯುತ್ತಿರಬೇಕು. ಅದು ಎಂದಿಗೂ ಆರಿಹೋಗಬಾರದು.
ಯಾಜಕಕಾಂಡ 6 : 14 (KNV)
ಆಹಾರ ಸಮರ್ಪಣೆಯ ನಿಯಮವು ಇದೇ; ಆರೋನನ ಕುಮಾರರು ಯಜ್ಞವೇದಿಯ ಮುಂದೆ ಕರ್ತನ ಸನ್ನಿಧಿಯಲ್ಲಿ ಅದನ್ನು ಸಮರ್ಪಿಸಬೇಕು.
ಯಾಜಕಕಾಂಡ 6 : 15 (KNV)
ಅವನು ಆಹಾರ ಸಮರ್ಪಣೆಯ ಹಿಟ್ಟಿನಲ್ಲಿ ಒಂದು ಹಿಡಿ ಹಿಟ್ಟನ್ನೂ ಆಹಾರ ಸಮರ್ಪಣೆಯ ಮೇಲಿರುವ ಅದರ ಎಣ್ಣೆಯನ್ನೂ ಎಲ್ಲಾ ಸಾಂಬ್ರಾಣಿಯನ್ನೂ ತೆಗೆದು ಕೊಂಡು ಜ್ಞಾಪಕಾರ್ಥವಾಗಿ ಕರ್ತನಿಗೆ ಯಜ್ಞವೇದಿಯ ಮೇಲೆ ಸುವಾಸನೆಗಾಗಿ ಅದನ್ನು ಸುಡಬೇಕು.
ಯಾಜಕಕಾಂಡ 6 : 16 (KNV)
ಅದ ರಲ್ಲಿ ಉಳಿದದ್ದನ್ನು ಆರೋನನೂ ಅವನ ಕುಮಾರರೂ ತಿನ್ನಬೇಕು; ಅದನ್ನು ಪರಿಶುದ್ಧ ಸ್ಥಳದಲ್ಲಿ ಹುಳಿಯಿಲ್ಲದ ರೊಟ್ಟಿಯೊಂದಿಗೆ ತಿನ್ನಬೇಕು; ಅದನ್ನು ಅವರು ಸಭೆಯ ಗುಡಾರದ ಅಂಗಳದಲ್ಲಿ ತಿನ್ನಬೇಕು.
ಯಾಜಕಕಾಂಡ 6 : 17 (KNV)
ಅದನ್ನು ಹುಳಿಯೊಂದಿಗೆ ಬೇಯಿಸಬಾರದು. ನಾನು ಅದನ್ನು ಅವರಿಗೆ ಬೆಂಕಿಯಿಂದ ಮಾಡಿದ ನನ್ನ ಸಮರ್ಪಣೆ ಗಳಲ್ಲಿ ಅವರ ಪಾಲನ್ನು ಅವರಿಗೆ ಕೊಟ್ಟಿದ್ದೇನೆ. ಅದು ಅತಿಕ್ರಮದ ಬಲಿಯ ಹಾಗೆಯೂ ಪಾಪದ ಬಲಿಯ ಹಾಗೆಯೂ ಅತಿ ಪರಿಶುದ್ಧವಾದದ್ದು.
ಯಾಜಕಕಾಂಡ 6 : 18 (KNV)
ಆರೋನನ ಮಕ್ಕಳಲ್ಲಿ ಎಲ್ಲಾ ಗಂಡು ಮಕ್ಕಳು ಅದನ್ನು ತಿನ್ನಬೇಕು, ಕರ್ತನಿಗೆ ಬೆಂಕಿಯಿಂದ ಮಾಡಿದ ಸಮರ್ಪಣೆಗಳ ವಿಷಯದಲ್ಲಿ ನಿಮ್ಮ ಸಂತತಿಗಳಿಗೆ ಇದು ಒಂದು ಶಾಶ್ವತ ಕಟ್ಟಳೆಯಾಗಿರುವದು; ಅವುಗಳನ್ನು ಮುಟ್ಟುವ ಪ್ರತಿ ಯೊಬ್ಬನು ಪರಿಶುದ್ಧನಾಗಿರಬೇಕು ಅಂದನು.
ಯಾಜಕಕಾಂಡ 6 : 19 (KNV)
ಕರ್ತನು ಮೋಶೆಯೊಡನೆ ಮಾತನಾಡಿ--
ಯಾಜಕಕಾಂಡ 6 : 20 (KNV)
ಆರೋನನೂ ಅವನ ಕುಮಾರರೂ ಅಭಿಷಿಕ್ತರಾದ ದಿನದಲ್ಲಿ ಕರ್ತನಿಗೆ ಸಮರ್ಪಿಸಬೇಕಾದ ಬಲಿಯು ಇದೇ; ಒಂದು ಎಫದ ಹತ್ತನೆಯ ಭಾಗ ನಯವಾದ ಹಿಟ್ಟಿನಲ್ಲಿ ನಿರಂತರವಾಗಿರುವ ಆಹಾರ ಬಲಿಗಾಗಿ ಮುಂಜಾನೆ ಅದರಲ್ಲಿ ಅರ್ಧ ಭಾಗವನ್ನೂ ರಾತ್ರಿ ಅದರಲ್ಲಿ ಅರ್ಧ ಭಾಗವನ್ನೂ ಅರ್ಪಿಸಬೇಕು.
ಯಾಜಕಕಾಂಡ 6 : 21 (KNV)
ಅದನ್ನು ಒಂದು ಬೋಗುಣಿಯಲ್ಲಿ ಎಣ್ಣೆಯೊಂದಿಗೆ ಮಾಡಬೇಕು; ಅದು ಬೇಯಿಸಲ್ಪಟ್ಟಾಗ ನೀನು ಅದನ್ನು ಒಳಗೆ ತರಬೇಕು; ಬೇಯಿಸಲ್ಪಟ್ಟ ಆಹಾರ ಬಲಿಯ ತುಂಡುಗಳನ್ನು ನೀನು ಕರ್ತನಿಗೆ ಸುವಾಸನೆಗಾಗಿ ಸಮರ್ಪಿಸಬೇಕು.
ಯಾಜಕಕಾಂಡ 6 : 22 (KNV)
ಅವನ ಕುಮಾರರಲ್ಲಿ ಅವನಿಗೆ ಬದಲಾಗಿ ಅಭಿಷಿಕ್ತನಾದ ಯಾಜಕನು ಅದನ್ನು ಸಮರ್ಪಿಸಬೇಕು; ಇದು ಕರ್ತನಿಗಾಗಿ ನಿರಂತರವಾದ ಒಂದು ಕಟ್ಟಳೆಯಾಗಿದೆ; ಅದು ಸಂಪೂರ್ಣವಾಗಿ ಸುಡಲ್ಪಡಬೇಕು.
ಯಾಜಕಕಾಂಡ 6 : 23 (KNV)
ಯಾಜಕನಿಗಾಗಿರುವ ಪ್ರತಿ ಯೊಂದು ಆಹಾರ ಬಲಿ ಸಂಪೂರ್ಣವಾಗಿ ಸುಡಲ್ಪಡ ಬೇಕು; ಅದನ್ನು ತಿನ್ನಬಾರದು ಅಂದನು.
ಯಾಜಕಕಾಂಡ 6 : 24 (KNV)
ಕರ್ತನು ಮೋಶೆಯೊಂದಿಗೆ ಮಾತನಾಡಿ--
ಯಾಜಕಕಾಂಡ 6 : 25 (KNV)
ಆರೋನನಿಗೂ ಅವನ ಕುಮಾರರಿಗೂ ಹೇಳಬೇಕಾ ದದ್ದೇನಂದರೆ, ಪಾಪದ ಬಲಿಯ ನಿಯಮವು ಇದೇ. ದಹನಬಲಿಯು ವಧಿಸಲ್ಪಡುವ ಸ್ಥಳದಲ್ಲಿ ಪಾಪದ ಬಲಿಯೂ ಕರ್ತನ ಸನ್ನಿಧಿಯಲ್ಲಿ ವಧಿಸಲ್ಪಡ ಬೇಕು; ಅದು ಅತಿ ಪರಿಶುದ್ಧವಾದದ್ದು.
ಯಾಜಕಕಾಂಡ 6 : 26 (KNV)
ಪಾಪಕ್ಕಾಗಿ ಸಮರ್ಪಣೆ ಮಾಡುವ ಯಾಜಕನು ಅದನ್ನು ತಿನ್ನಬೇಕು; ಅದನ್ನು ಸಭೆಯ ಗುಡಾರ ಅಂಗಳದ ಪರಿಶುದ್ಧ ಸ್ಥಳದಲ್ಲಿ ತಿನ್ನಬೇಕು.
ಯಾಜಕಕಾಂಡ 6 : 27 (KNV)
ಯಾವನಾದರೂ ಅದರ ಮಾಂಸವನ್ನು ಮುಟ್ಟಿದರೆ ಅದು ಪರಿಶುದ್ಧವಾಗುವದು; ಯಾವದಾ ದರೂ ಉಡುಪಿನ ಮೇಲೆ ಅದರ ರಕ್ತವು ಚಿಮುಕಿಸ ಲ್ಪಟ್ಟಾಗ ನೀನು ಅದನ್ನು ಚಿಮುಕಿಸದ ಪರಿಶುದ್ಧ ಸ್ಥಳದಲ್ಲಿಯೇ ತೊಳೆಯಬೇಕು.
ಯಾಜಕಕಾಂಡ 6 : 28 (KNV)
ಆದರೆ ಅದನ್ನು ಬೇಯಿಸಿದ ಮಣ್ಣಿನ ಪಾತ್ರೆಯು ಒಡೆಯಲ್ಪಡಬೇಕು; ಅದನ್ನು ಒಂದು ಹಿತ್ತಾಳೆಯ ಪಾತ್ರೆಯಲ್ಲಿ ಬೇಯಿಸಿ ದ್ದಾದರೆ ಅದನ್ನು ಬೆಳಗಿ ನೀರಿನಿಂದ ತೊಳೆಯಬೇಕು.
ಯಾಜಕಕಾಂಡ 6 : 29 (KNV)
ಯಾಜಕರಲ್ಲಿ ಇರುವ ಗಂಡಸರೆಲ್ಲಾ ಅದನ್ನು ತಿನ್ನಬೇಕು; ಅದು ಅತಿ ಪರಿಶುದ್ಧವಾದದ್ದು.
ಯಾಜಕಕಾಂಡ 6 : 30 (KNV)
ಯಾವ ಪಾಪದ ಬಲಿಯ ರಕ್ತವು ಸಭೆಯ ಡೇರೆಯೊಳಗೆ ಸಮಾಧಾನಕ್ಕಾಗಿ ತರಲ್ಪಟ್ಟಿತೋ ಆ ಪಾಪದ ಬಲಿಯನ್ನು ಪರಿಶುದ್ಧ ಸ್ಥಳದಲ್ಲಿ ತಿನ್ನಬಾರದು; ಅದನ್ನು ಬೆಂಕಿಯಿಂದ ಸುಡಬೇಕು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30