ಯಾಜಕಕಾಂಡ 26 : 1 (KNV)
ನೀವು ನಿಮಗಾಗಿ ವಿಗ್ರಹಗಳನ್ನಾಗಲಿ ಕೆತ್ತಿದ ಪ್ರತಿಮೆಯನ್ನಾಗಲಿ ಮಾಡಿಕೊಳ್ಳಬೇಡಿರಿ; ನಿಲ್ಲಿಸುವ ಪ್ರತಿಮೆಯನ್ನಾಗಲಿ ಮಾಡಿಕೊಳ್ಳಬೇಡಿರಿ. ಕಲ್ಲಿನ ವಿಗ್ರಹಗಳನ್ನಾಗಲಿ ನಿಮ್ಮ ದೇಶದಲ್ಲಿಟ್ಟು ಕೊಂಡು ಅವುಗಳಿಗೆ ಅಡ್ಡ ಬೀಳಬೇಡಿರಿ. ನಿಮ್ಮ ದೇವರಾಗಿರುವ ಕರ್ತನು ನಾನೇ.
ಯಾಜಕಕಾಂಡ 26 : 2 (KNV)
ನನ್ನ ಸಬ್ಬತ್ತುಗಳನ್ನು ನೀವು ಆಚರಿಸಬೇಕು; ನನ್ನ ಪರಿಶುದ್ಧ ಸ್ಥಳಕ್ಕೆ ಭಯಪಡ ಬೇಕು. ನಾನೇ ಕರ್ತನು.
ಯಾಜಕಕಾಂಡ 26 : 3 (KNV)
ನೀವು ನನ್ನ ನಿಯಮಗಳ ಪ್ರಕಾರ ನಡೆದುಕೊಂಡು ನನ್ನ ಆಜ್ಞೆಗಳನ್ನು ಕೈಕೊಂಡು ಅವುಗಳಂತೆ ಮಾಡಿದರೆ
ಯಾಜಕಕಾಂಡ 26 : 4 (KNV)
ನಿಮಗೆ ಮಳೆಯನ್ನು ತಕ್ಕಕಾಲದಲ್ಲಿ ಸುರಿಸುವೆನು. ಆಗ ಭೂಮಿಯು ಅದರ ಬೆಳೆಯನ್ನು ಕೊಡುವದು. ಹೊಲದ ಮರಗಳು ಅವುಗಳ ಫಲವನ್ನು ಕೊಡುವವು.
ಯಾಜಕಕಾಂಡ 26 : 5 (KNV)
ಕಣ ತುಳಿಸುವ ಕೆಲಸವು ದ್ರಾಕ್ಷೇ ಬೆಳೆಯ ವರೆಗೂ ದ್ರಾಕ್ಷೇ ಬೆಳೆಯನ್ನು ಕೂಡಿಸುವ ಕೆಲಸವು ಬಿತ್ತನೆಯ ಕಾಲದ ವರೆಗೂ ನಡೆಯುವವು. ನೀವು ನಿಮ್ಮ ರೊಟ್ಟಿ ಯನ್ನು ತಿಂದು ತೃಪ್ತಿಹೊಂದಿ ಸುರಕ್ಷಿತವಾಗಿ ನಿಮ್ಮ ದೇಶದಲ್ಲಿ ವಾಸಮಾಡುವಿರಿ.
ಯಾಜಕಕಾಂಡ 26 : 6 (KNV)
ನಾನು ದೇಶದಲ್ಲಿ ಸಮಾಧಾನವನ್ನು ಕೊಡುವೆನು. ಯಾರ ಭಯವೂ ಇಲ್ಲದೆ ನೀವು ಮಲಗಿಕೊಳ್ಳುವಿರಿ; ದೇಶದಲ್ಲಿ ದುಷ್ಟ ಮೃಗಗಳು ಇಲ್ಲದಂತೆ ಮಾಡುವೆನು. ಇಲ್ಲವೆ ಕತ್ತಿ ನಿಮ್ಮ ದೇಶದಲ್ಲಿ ಹಾದುಹೋಗುವದಿಲ್ಲ.
ಯಾಜಕಕಾಂಡ 26 : 7 (KNV)
ನೀವು ನಿಮ್ಮ ಶತ್ರುಗಳನ್ನು ಹಿಂದಟ್ಟುವಾಗ ಅವರು ಕತ್ತಿಯಿಂದ ನಿಮ್ಮ ಮುಂದೆ ಬೀಳುವರು.
ಯಾಜಕಕಾಂಡ 26 : 8 (KNV)
ನಿಮ್ಮಲ್ಲಿ ಐದು ಮಂದಿ ನೂರು ಮಂದಿಯನ್ನು ಹಿಂದಟ್ಟುವರು. ನಿಮ್ಮಲ್ಲಿ ನೂರು ಮಂದಿ ಹತ್ತು ಸಾವಿರ ಮಂದಿಯನ್ನು ಅಟ್ಟಿಬಿಡುವರು. ನಿಮ್ಮ ಶತ್ರುಗಳು ನಿಮ್ಮ ಮುಂದೆ ಕತ್ತಿಯಿಂದ ಬೀಳುವರು.
ಯಾಜಕಕಾಂಡ 26 : 9 (KNV)
ನಾನು ನಿಮ್ಮನ್ನು ಲಕ್ಷಿಸಿ ಅಭಿವೃದ್ಧಿಮಾಡಿ ಹೆಚ್ಚಿಸಿ ನಿಮ್ಮ ಸಂಗಡ ನನ್ನ ಒಡಂಬಡಿಕೆಯನ್ನು ಸ್ಥಾಪಿಸುವೆನು.
ಯಾಜಕಕಾಂಡ 26 : 10 (KNV)
ನೀವು ಹಳೇ ಧಾನ್ಯವನ್ನು ತಿಂದು ಹೊಸದು ಬಂದಾಗ ಹಳೇದನ್ನು ಹೊರಗೆ ತರುವಿರಿ.
ಯಾಜಕಕಾಂಡ 26 : 11 (KNV)
ಇದಲ್ಲದೆ ನಾನು ನನ್ನ ಗುಡಾರವನ್ನು ನಿಮ್ಮ ಮಧ್ಯದಲ್ಲಿ ಮಾಡಿಕೊಳ್ಳು ವೆನು. ನನ್ನ ಪ್ರಾಣವು ನಿಮ್ಮನ್ನು ಅಸಹ್ಯಿಸದೆ ಇರುವದು.
ಯಾಜಕಕಾಂಡ 26 : 12 (KNV)
ನಾನು ನಿಮ್ಮ ಮಧ್ಯದಲ್ಲಿ ನಡೆದು ನಿಮ್ಮ ದೇವ ರಾಗಿರುವೆನು; ನೀವು ನನ್ನ ಜನರಾಗಿರುವಿರಿ.
ಯಾಜಕಕಾಂಡ 26 : 13 (KNV)
ಐಗುಪ್ತ ದೇಶದವರಿಗೆ ನೀವು ದಾಸರಾಗಿರದ ಹಾಗೆ ಅವರ ದೇಶದೊಳಗಿಂದ ನಿಮ್ಮನ್ನು ಹೊರಗೆ ಬರಮಾಡಿ ನಿಮ್ಮ ನೊಗದ ಕಟ್ಟುಗಳನ್ನು ಮುರಿದು ನಿಮ್ಮನ್ನು ನೆಟ್ಟಗೆ ನಡೆಯಮಾಡಿದ ನಿಮ್ಮ ದೇವರಾದ ಕರ್ತನು ನಾನೇ.
ಯಾಜಕಕಾಂಡ 26 : 14 (KNV)
ನೀವು ನನ್ನ ಮಾತನ್ನು ಕೇಳದೆ ಈ ಎಲ್ಲಾ ಆಜ್ಞೆಗಳ ಪ್ರಕಾರ ನಡೆಯದೆ ಹೋದರೆ
ಯಾಜಕಕಾಂಡ 26 : 15 (KNV)
ನನ್ನ ನಿಯಮಗಳನ್ನು ನೀವು ಅಸಡ್ಡೆಮಾಡಿದರೆ ಇಲ್ಲವೆ ನನ್ನ ನಿರ್ಣಯಗಳಲ್ಲಿ ನಿಮ್ಮ ಪ್ರಾಣವು ಅಸಹ್ಯಪಟ್ಟರೆ ನೀವು ನನ್ನ ಒಡಂಬಡಿ ಕೆಯನ್ನು ವಿಾರಿ ನನ್ನ ಎಲ್ಲಾ ಆಜ್ಞೆಗಳ ಪ್ರಕಾರ ಮಾಡದೆ ಹೋದರೆ
ಯಾಜಕಕಾಂಡ 26 : 16 (KNV)
ನಾನು ಸಹ ಇದನ್ನು ನಿಮಗೆ ಮಾಡು ವೆನು; ನಿಮ್ಮ ಮೇಲೆ ಭೀತಿಯನ್ನೂ ಕಣ್ಣುಗಳನ್ನು ಕ್ಷೀಣಿಸು ವಂತೆಯೂ ಹೃದಯವು ಕುಗ್ಗಿ ದುಃಖಕ್ಕೊಳಗಾಗು ವಂತೆಯೂ ಮಾಡುವ ಕ್ಷಯರೋಗವನ್ನು ಚಳಿಜ್ವರ ವನ್ನೂ ಬರಮಾಡುವೆನು. ನೀವು ವ್ಯರ್ಥವಾಗಿ ನಿಮ್ಮ ಬೀಜವನ್ನು ಬಿತ್ತುವಿರಿ; ನಿಮ್ಮ ಶತ್ರುಗಳು ಅದನ್ನು ತಿಂದುಬಿಡುವರು.
ಯಾಜಕಕಾಂಡ 26 : 17 (KNV)
ನಾನು ನಿಮಗೆ ವಿಮುಖನಾಗಿರು ವೆನು. ನಿಮ್ಮ ಶತ್ರುಗಳ ಮುಂದೆ ನೀವು ಕೊಲ್ಲಲ್ಪಡುವಿರಿ. ನಿಮ್ಮ ವೈರಿಗಳು ನಿಮ್ಮ ಮೇಲೆ ದೊರೆತನ ಮಾಡುವರು. ಓಡಿಸುವವನು ಯಾರೂ ಇಲ್ಲದಿರುವಾಗ ಓಡಿ ಹೋಗುವಿರಿ.
ಯಾಜಕಕಾಂಡ 26 : 18 (KNV)
ಇಷ್ಟಾದರು ನನ್ನ ಮಾತನ್ನು ಕೇಳದೆಹೋದರೆ ನಾನು ನಿಮ್ಮ ಪಾಪಗಳ ನಿಮಿತ್ತ ಏಳರಷ್ಟು ಹೆಚ್ಚಾಗಿ ನಿಮ್ಮನ್ನು ಶಿಕ್ಷಿಸುವೆನು.
ಯಾಜಕಕಾಂಡ 26 : 19 (KNV)
ನಿಮ್ಮ ಬಲದ ಗರ್ವವನ್ನು ಮುರಿದು ಹಾಕಿ ನಿಮ್ಮ ಆಕಾಶವನ್ನು ಕಬ್ಬಿಣದ ಹಾಗೆಯೂ ನಿಮ್ಮ ಭೂಮಿಯನ್ನು ಹಿತ್ತಾಳೆಯಂತೆಯೂ ಮಾಡುವೆನು.
ಯಾಜಕಕಾಂಡ 26 : 20 (KNV)
ಆಗ ನಿಮ್ಮ ಶಕ್ತಿಯು ವ್ಯರ್ಥವಾಗಿ ಮುಗಿದು ಹೋಗುವದು. ನಿಮ್ಮ ಭೂಮಿಯು ತನ್ನ ಬೆಳೆಯನ್ನೂ ಮರಗಳ ಫಲಗಳನ್ನೂ ಕೊಡದೆ ಇರುವದು.
ಯಾಜಕಕಾಂಡ 26 : 21 (KNV)
ನನ್ನ ಮಾತನ್ನು ಕೇಳಲೊಲ್ಲದೆ ನನಗೆ ವಿರೋಧ ವಾಗಿ ನಡೆದರೆ ನಾನು ನಿಮ್ಮ ಪಾಪಗಳಿಗೆ ತಕ್ಕಂತೆ ನಿಮ್ಮನ್ನು ಏಳರಷ್ಟು ಹೆಚ್ಚಾಗಿ ನಿಮ್ಮ ಮೇಲೆ ವ್ಯಾಧಿಗಳನ್ನು ಬರಮಾಡುವೆನು.
ಯಾಜಕಕಾಂಡ 26 : 22 (KNV)
ನಿಮ್ಮ ಮೇಲೆ ಕಾಡುಮೃಗಗಳು ಬರುವಂತೆ ಮಾಡುವೆನು. ಅವು ನಿಮ್ಮನ್ನು ಮಕ್ಕಳಿಲ್ಲದ ವರನ್ನಾಗಿ ಮಾಡಿ ನಿಮ್ಮ ದನಗಳನ್ನು ತಿಂದುಬಿಡುವವು ಮತ್ತು ನಿಮ್ಮನ್ನು ಸ್ವಲ್ಪ ಮಂದಿಯಾಗಿ ಮಾಡುವವು; ನಿಮ್ಮ ಮಾರ್ಗಗಳು ಹಾಳಾಗಿಹೋಗುವವು.
ಯಾಜಕಕಾಂಡ 26 : 23 (KNV)
ನನ್ನಿಂದಾಗುವ ಇವುಗಳಿಂದ ನೀವು ಶಿಕ್ಷಿತರಾಗದೆ ನನಗೆ ವಿರೋಧವಾಗಿ ನಡೆದರೆ
ಯಾಜಕಕಾಂಡ 26 : 24 (KNV)
ನಾನು ಸಹ ನಿಮಗೆ ವಿರೋಧವಾಗಿ ನಡೆದು ಇನ್ನೂ ಹೆಚ್ಚಾಗಿ ನಿಮ್ಮ ಪಾಪಗಳ ನಿಮಿತ್ತ ಏಳರಷ್ಟು ನಿಮ್ಮನ್ನು ಶಿಕ್ಷಿಸುವೆನು.
ಯಾಜಕಕಾಂಡ 26 : 25 (KNV)
ಒಡಂಬಡಿ ಕೆಯ ನಿಮಿತ್ತ ಮುಯ್ಯಿಗೆ ಮುಯ್ಯಿ ತೀರಿಸುವ ಕತ್ತಿಯನ್ನು ನಾನು ನಿಮ್ಮ ಮೇಲೆ ಬರಮಾಡುವೆನು. ನೀವು ನಿಮ್ಮ ಪಟ್ಟಣಗಳಲ್ಲಿ ಕೂಡಿಬಂದಾಗ ವ್ಯಾಧಿಯನ್ನು ನಿಮ್ಮೊಳಗೆ ಬರಮಾಡುವೆನು. ನೀವು ಶತ್ರುವಿನ ಕೈಗೆ ಒಪ್ಪಿಸಲ್ಪಡು ವಿರಿ.
ಯಾಜಕಕಾಂಡ 26 : 26 (KNV)
ನಾನು ನಿಮ್ಮ ಅನ್ನಾಧಾರವನ್ನು ಮುರಿದುಹಾಕಿ ದಾಗ ಹತ್ತು ಸ್ತ್ರೀಯರು ನಿಮ್ಮ ರೊಟ್ಟಿಯನ್ನು ಒಂದೇ ಒಲೆಯಲ್ಲಿ ಸುಟ್ಟು ತೂಕದ ಪ್ರಕಾರ ನಿಮಗೆ ರೊಟ್ಟಿಯನ್ನು ಕೊಡುವರು. ನೀವು ಅದನ್ನು ತಿನ್ನುವಿರಿ; ನಿಮಗೆ ತೃಪ್ತಿಯಾಗುವದಿಲ್ಲ.
ಯಾಜಕಕಾಂಡ 26 : 27 (KNV)
ಇದೆಲ್ಲಾ ಆದಾಗ್ಯೂ ನೀವು ನನ್ನ ಮಾತನ್ನು ಕೇಳದೆ ನನಗೆ ವಿರೋಧವಾಗಿ ನಡೆದರೆ
ಯಾಜಕಕಾಂಡ 26 : 28 (KNV)
ನಾನು ಕೋಪದಿಂದ ನಿಮಗೆ ವಿರೋಧವಾಗಿ ನಡೆದು ನಿಮ್ಮ ಪಾಪಗಳ ನಿಮಿತ್ತ ನಾನೇ ನಿಮ್ಮನ್ನು ಏಳರಷ್ಟಾಗಿ ಶಿಕ್ಷಿಸುವೆನು.
ಯಾಜಕಕಾಂಡ 26 : 29 (KNV)
ನೀವು ನಿಮ್ಮ ಕುಮಾರ ಕುಮಾರ್ತೆಯರ ಮಾಂಸವನ್ನು ತಿನ್ನುವಿರಿ.
ಯಾಜಕಕಾಂಡ 26 : 30 (KNV)
ಇದಲ್ಲದೆ ನಾನು ನಿಮ್ಮ ಉನ್ನತ ಸ್ಥಳಗಳನ್ನು ಹಾಳುಮಾಡಿ ನಿಮ್ಮ ಪ್ರತಿಮೆಗಳನ್ನು ಕಡಿದುಹಾಕಿ ವಿಗ್ರಹಗಳ ಮೇಲೆ ನಿಮ್ಮ ಹೆಣಗಳನ್ನು ಹಾಕುವೆನು; ನನ್ನ ಪ್ರಾಣವು ನಿಮ್ಮನ್ನು ಹೇಸಿಕೊಳ್ಳು ವದು.
ಯಾಜಕಕಾಂಡ 26 : 31 (KNV)
ನಿಮ್ಮ ಪಟ್ಟಣಗಳನ್ನು ಕೆಡವಿಹಾಕಿ, ನಿಮ್ಮ ಪರಿಶುದ್ಧ ಸ್ಥಳಗಳನ್ನು ಹಾಳುಮಾಡಿ, ನಿಮ್ಮ ಸುವಾಸನೆ ಗಳನ್ನು ಮೂಸಿ ನೋಡದೆ ಇರುವೆನು.
ಯಾಜಕಕಾಂಡ 26 : 32 (KNV)
ನಾನು ದೇಶವನ್ನು ಹಾಳುಮಾಡುವೆನು; ಅದರಲ್ಲಿ ವಾಸ ವಾಗುವ ನಿಮ್ಮ ಶತ್ರುಗಳು ಅದಕ್ಕೆ ಆಶ್ಚರ್ಯಪಡುವರು.
ಯಾಜಕಕಾಂಡ 26 : 33 (KNV)
ನಿಮ್ಮನ್ನು ಜನಾಂಗಗಳಲ್ಲಿ ಚದರಿಸಿ ನಿಮ್ಮ ಹಿಂದೆ ಕತ್ತಿಯನ್ನು ಬೀಸುವೆನು; ನಿಮ್ಮ ಭೂಮಿ ಹಾಳಾಗಿ ರುವದು; ನಿಮ್ಮ ಪಟ್ಟಣಗಳು ನಾಶವಾಗಿರುವವು.
ಯಾಜಕಕಾಂಡ 26 : 34 (KNV)
ನೀವು ನಿಮ್ಮ ಶತ್ರುಗಳ ದೇಶದಲ್ಲಿ ಇರುವ ವರೆಗೂ ಭೂಮಿ ಹಾಳಾಗಿರುವ ಎಲ್ಲಾ ದಿನಗಳಲ್ಲಿಯೂ ತನ್ನ ಸಬ್ಬತ್ತುಗಳನ್ನು ಅನುಭವಿಸುವದು; ಆಗ ಭೂಮಿ ವಿಶ್ರಮಿಸಿಕೊಂಡು ತನ್ನ ಸಬ್ಬತ್ತುಗಳನ್ನು ಅನುಭವಿ ಸುವದು.
ಯಾಜಕಕಾಂಡ 26 : 35 (KNV)
ನೀವು ಅದರಲ್ಲಿ ವಾಸವಾಗಿದ್ದಾಗ ನಿಮ್ಮ ಸಬ್ಬತ್ತುಗಳಲ್ಲಿ ಅದಕ್ಕೆ ವಿಶ್ರಾಂತಿ ದೊರೆಯದ ಕಾರಣ ಅದು ಹಾಳುಬಿದ್ದಿರುವ ಕಾಲವೆಲ್ಲಾ ಅನುಭವಿಸುವದು.
ಯಾಜಕಕಾಂಡ 26 : 36 (KNV)
ನಿಮ್ಮಲ್ಲಿ ಯಾರಾರು ಉಳಿದು ಶತ್ರುಗಳ ದೇಶದ ಲ್ಲಿರುವರೋ ಅವರ ಹೃದಯಗಳಲ್ಲಿ ಅಧೈರ್ಯವನ್ನು ಹುಟ್ಟಿಸುವೆನು; ಬಡಿದಾಡುವ ಎಲೆಯ ಶಬ್ದವು ಅವರನ್ನು ಓಡಿಸುವದು, ಕತ್ತಿಗೆ ಓಡಿಹೋದ ಹಾಗೆ ಓಡಿಹೋಗು ವರು; ಓಡಿಸುವವನಿಲ್ಲದೆ ಬೀಳುವರು.
ಯಾಜಕಕಾಂಡ 26 : 37 (KNV)
ಓಡಿಸುವವ ನಿಲ್ಲದೆ ಒಬ್ಬರ ಮೇಲೊಬ್ಬರು ಕತ್ತಿಯ ಭಯದಿಂದಾದ ಹಾಗೆ ಬೀಳುವರು; ನಿಮ್ಮ ಶತ್ರುಗಳಿಗೆದುರಾಗಿ ನಿಂತುಕೊಳ್ಳುವದು ನಿಮ್ಮಿಂದಾಗದು.
ಯಾಜಕಕಾಂಡ 26 : 38 (KNV)
ಜನಾಂಗಗ ಳೊಳಗೆ ನಾಶವಾಗುವಿರಿ; ನಿಮ್ಮ ಶತ್ರುಗಳ ದೇಶವು ನಿಮ್ಮನ್ನು ತಿಂದುಬಿಡುವದು.
ಯಾಜಕಕಾಂಡ 26 : 39 (KNV)
ನಿಮ್ಮಲ್ಲಿ ಉಳಿದವರು ತಮ್ಮ ಅಕ್ರಮದಿಂದ ನಿಮ್ಮ ಶತ್ರುಗಳ ದೇಶದಲ್ಲಿ ಕ್ಷೀಣವಾಗುವರು; ತಮ್ಮ ಪಿತೃಗಳ ಅಕ್ರಮಗಳಿಂದ ಅವರ ಸಂಗಡ ಕ್ಷೀಣವಾಗುವರು.
ಯಾಜಕಕಾಂಡ 26 : 40 (KNV)
ಆಗ ಅವರು ನನಗೆ ಮಾಡಿದ ತಮ್ಮ ಅಕ್ರಮವನ್ನೂ ತಮ್ಮ ಪಿತೃಗಳಅಕ್ರಮವನ್ನೂ ತಾವು ನನಗೆ ವಿರೋಧವಾಗಿ ನಡೆದು ಕೊಂಡದ್ದರಿಂದ
ಯಾಜಕಕಾಂಡ 26 : 41 (KNV)
ನಾನೂ ಅವರಿಗೆ ವಿರೋಧವಾಗಿ ನಡೆದುಕೊಂಡು ತಮ್ಮ ಶತ್ರುಗಳ ದೇಶಕ್ಕೆ ಬರಮಾಡಿದ್ದನ್ನು ಅರಿಕೆಮಾಡಿ ಪರಿಛೇದನೆ ಇಲ್ಲದ ಅವರ ಹೃದಯವು ತಗ್ಗಿಸಲ್ಪಟ್ಟು ತಮ್ಮ ಅಕ್ರಮದಿಂದ ಉಂಟಾದ ಶಿಕ್ಷೆಗೆ ಅವರು ಒಪ್ಪಿಕೊಳ್ಳುವದಾದರೆ
ಯಾಜಕಕಾಂಡ 26 : 42 (KNV)
ನಾನು ಯಾಕೋಬ್‌ ಇಸಾಕ್‌ ಅಬ್ರಹಾಮ್‌ ಇವ ರಿಗೆ ಮಾಡಿದ ನನ್ನ ಒಡಂಬಡಿಕೆಯನ್ನೂ ಅವರ ದೇಶವನ್ನೂ ಜ್ಞಾಪಕಮಾಡಿಕೊಳ್ಳುವೆನು.
ಯಾಜಕಕಾಂಡ 26 : 43 (KNV)
ಅವರು ದೇಶದೊಳಗಿಂದ ಹೊರಡಿಸಲ್ಪಟ್ಟು ಅವರಿಲ್ಲದೆ ಹಾಳಾದ ವೇಳೆಯಲ್ಲಿ ಅದು ತನ್ನ ಸಬ್ಬತ್ತು ಗಳನ್ನು ಅನುಭವಿಸುವದು; ಅವರು ತಮ್ಮ ಅಕ್ರಮ ದಿಂದಾದ ಶಿಕ್ಷೆಗೆ ಒಪ್ಪಿಕೊಳ್ಳುವರು; ಅವರು ನನ್ನ ನ್ಯಾಯಗಳನ್ನು ಹೇಸಿ, ತಮ್ಮ ಹೃದಯಗಳಲ್ಲಿ ನನ್ನ ನಿಯಮಗಳನ್ನು ಅಸಹ್ಯಿಸಿದ್ದರಿಂದಲೇ.
ಯಾಜಕಕಾಂಡ 26 : 44 (KNV)
ಆದಾಗ್ಯೂ ಅವರು ತಮ್ಮ ಶತ್ರುಗಳ ದೇಶದಲ್ಲಿರುವಾಗ ಅವರನ್ನು ತಳ್ಳಿಬಿಡದೆಯೂ ಅಸಹ್ಯಿಸದೆಯೂ ಸಂಪೂರ್ಣವಾಗಿ ನಾಶಮಾಡದೆಯೂ ಅವರ ಸಂಗಡ ಇರುವ ನನ್ನ ಒಡಂಬಡಿಕೆಯನ್ನು ಮುರಿಯದೆಯೂ ಇರುವೆನು; ಅವರ ದೇವರಾಗಿರುವ ಕರ್ತನು ನಾನೇ.
ಯಾಜಕಕಾಂಡ 26 : 45 (KNV)
ನಾನು ಅವರಿಗೆ ದೇವರಾಗಿರುವದರಿಂದ ಜನಾಂಗಗಳ ಮುಂದೆ ಐಗುಪ್ತದೇಶದಿಂದ ಹೊರಗೆ ಬರಮಾಡಿದ ಅವರ ಪಿತೃಗಳ ಒಡಂಬಡಿಕೆಯನ್ನು ಅವರಿಗೊಸ್ಕರ ಜ್ಞಾಪಕ ಮಾಡಿಕೊಳ್ಳುವೆನು; ನಾನೇ ಕರ್ತನು.ಕರ್ತನು ಸೀನಾಯಿ ಬೆಟ್ಟದಲ್ಲಿ ಮೋಶೆಯ ಮೂಲಕ ತನಗೂ ಇಸ್ರಾಯೇಲ್‌ ಮಕ್ಕಳಿಗೂ ಮಧ್ಯದಲ್ಲಿ ಕೊಟ್ಟ ನಿಯಮ ಗಳೂ ನ್ಯಾಯಗಳೂ ನ್ಯಾಯಪ್ರಮಾಣಗಳೂ ಇವೇ.
ಯಾಜಕಕಾಂಡ 26 : 46 (KNV)
ಕರ್ತನು ಸೀನಾಯಿ ಬೆಟ್ಟದಲ್ಲಿ ಮೋಶೆಯ ಮೂಲಕ ತನಗೂ ಇಸ್ರಾಯೇಲ್‌ ಮಕ್ಕಳಿಗೂ ಮಧ್ಯದಲ್ಲಿ ಕೊಟ್ಟ ನಿಯಮ ಗಳೂ ನ್ಯಾಯಗಳೂ ನ್ಯಾಯಪ್ರಮಾಣಗಳೂ ಇವೇ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46

BG:

Opacity:

Color:


Size:


Font: