ಯಾಜಕಕಾಂಡ 25 : 1 (KNV)
ತರುವಾಯ ಕರ್ತನು ಸೀನಾಯಿ ಬೆಟ್ಟದಲ್ಲಿ ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇ ನಂದರೆ--
ಯಾಜಕಕಾಂಡ 25 : 2 (KNV)
ಇಸ್ರಾಯೇಲ್ ಮಕ್ಕಳೊಂದಿಗೆ ನೀನು ಮಾತನಾಡಿ ಅವರಿಗೆ ಹೀಗೆ ಹೇಳು--ನಾನು ನಿಮಗೆ ಕೊಡುವ ದೇಶದಲ್ಲಿ ನೀವು ಬಂದಾಗ ದೇಶವು ಕರ್ತನಿ ಗಾಗಿ ಸಬ್ಬತ್ತನ್ನು ಕೈಕೊಳ್ಳಬೇಕು.
ಯಾಜಕಕಾಂಡ 25 : 3 (KNV)
ಆರು ವರುಷ ನೀವು ನಿಮ್ಮ ಹೊಲವನ್ನು ಬಿತ್ತಬೇಕು, ಆರು ವರುಷ ನೀವು ನಿಮ್ಮ ದ್ರಾಕ್ಷೇತೋಟವನ್ನು ಕತ್ತರಿಸಬೇಕು, ಅವು ಗಳಿಂದ ಫಲವನ್ನು ಕೂಡಿಸಬೇಕು.
ಯಾಜಕಕಾಂಡ 25 : 4 (KNV)
ಆದರೆ ಏಳನೆಯ ವರುಷವು ದೇಶಕ್ಕೆ ವಿಶ್ರಾಂತಿಗಾಗಿ ಸಬ್ಬತ್ತಾಗಿರುವದು, ಕರ್ತನಿಗಾಗಿ ಒಂದು ಸಬ್ಬತ್ತಾಗಿರುವದು. ನೀವು ನಿಮ್ಮ ಹೊಲವನ್ನು ಬಿತ್ತಬಾರದು ಇಲ್ಲವೆ ದ್ರಾಕ್ಷೇತೋಟ ವನ್ನು ಕತ್ತರಿಸಬಾರದು.
ಯಾಜಕಕಾಂಡ 25 : 5 (KNV)
ತನ್ನಷ್ಟಕ್ಕೆ ತಾನೇ ಬೆಳೆದಿ ರುವ ಪೈರನ್ನು ನೀವು ಕೊಯ್ಯಬಾರದು ಇಲ್ಲವೆ ಕತ್ತರಿಸದಿರುವ ದ್ರಾಕ್ಷೇ ಬಳ್ಳಿಯ ದ್ರಾಕ್ಷೇ ಹಣ್ಣುಗಳನ್ನು ಕೂಡಿಸಬಾರದು; ಅದು ದೇಶಕ್ಕೆ ವಿಶ್ರಾಂತಿಯ ವರುಷವಾಗಿರುವದು.
ಯಾಜಕಕಾಂಡ 25 : 6 (KNV)
ದೇಶದ ಆ ಸಬ್ಬತ್ತು ನಿಮ್ಮ ಆಹಾರಕ್ಕಾಗಿ ಇರುವದು; ನಿನಗೂ ನಿನ್ನ ದಾಸನಿಗೂ ದಾಸಿಗೂ ಕೂಲಿ ಆಳಿಗೂ ನಿನ್ನೊಂದಿಗೆ ಪ್ರವಾಸಿ ಯಾಗಿರುವ ಪರಕೀಯನಿಗೂ
ಯಾಜಕಕಾಂಡ 25 : 7 (KNV)
ನಿನ್ನ ದನಗಳಿಗೂ ದೇಶದಲ್ಲಿರುವ ಮೃಗಗಳಿಗೂ ಅದರ ಹುಟ್ಟುವಳಿಯೆಲ್ಲಾ ಆಹಾರಕ್ಕಾಗಿ ಇರಬೇಕು.
ಯಾಜಕಕಾಂಡ 25 : 8 (KNV)
ಹೀಗೆ ಏಳು ವರುಷಗಳನ್ನು ಏಳು ಸಾರಿ ಏಳು ಸಬ್ಬತ್ತಿನ ವರುಷಗಳನ್ನು ನಿನಗಾಗಿ ಎಣಿಸಿಕೊಳ್ಳಬೇಕು. ಏಳು ಸಬ್ಬತ್ತಿನ ವರುಷಗಳ ಕಾಲಾವಧಿಯು ನಿನಗೆ ನಾಲ್ವತ್ತೊಂಭತ್ತು ವರುಷಗಳಾಗಿರುವವು.
ಯಾಜಕಕಾಂಡ 25 : 9 (KNV)
ಇದಾದ ಮೇಲೆ ಏಳನೆಯ ತಿಂಗಳಿನ ಹತ್ತನೆಯ ದಿವಸದಲ್ಲಿ ಐವತ್ತನೇ ವಾರ್ಷಿಕೋತ್ಸವಕ್ಕೆ ತುತೂರಿಯನ್ನು ಊದಿಸ ಬೇಕು; ಪ್ರಾಯಶ್ಚಿತ್ತದ ದಿನದಲ್ಲಿ ನಿಮ್ಮ ದೇಶದ ಎಲ್ಲಾ ಕಡೆಗಳಲ್ಲಿ ತುತೂರಿಯನ್ನು ಊದಿಸಬೇಕು.
ಯಾಜಕಕಾಂಡ 25 : 10 (KNV)
ಐವತ್ತ ನೆಯ ವರುಷವನ್ನು ಪರಿಶುದ್ಧಮಾಡಿ ದೇಶದಲ್ಲಿ ಎಲ್ಲಾ ನಿವಾಸಿಗಳಿಗೆ ಬಿಡುಗಡೆಯನ್ನು ಪ್ರಕಟಿಸಬೇಕು. ಅದು ನಿಮಗೆ ಐವತ್ತನೇ ವರುಷದ ವಾರ್ಷಿಕೋತ್ಸವವಾ ಗಿರಬೇಕು; ನಿಮ್ಮಲ್ಲಿ ಪ್ರತಿಯೊಬ್ಬನು ಅವನವನ ಸ್ವಾಸ್ತ್ಯಕ್ಕೂ ಕುಟುಂಬಕ್ಕೂ ಹಿಂದಿರುಗಿ ಹೋಗಬೇಕು.
ಯಾಜಕಕಾಂಡ 25 : 11 (KNV)
ಐವತ್ತನೆಯ ಆ ವರುಷವು ನಿಮಗೆ ಸಂಭ್ರಮವಾಗಿ ರುವದು; ನೀವು ಬಿತ್ತಲೂಬಾರದು ಮತ್ತು ತನ್ನಷ್ಟಕ್ಕೆ ತಾನೇ ಬೆಳೆಯುವದನ್ನು ಕೊಯ್ಯಲೂಬಾರದು ಇಲ್ಲವೆ ಕತ್ತರಿಸದಿದ್ದ ದ್ರಾಕ್ಷೇ ಬಳ್ಳಿಗಳಲ್ಲಿ ದ್ರಾಕ್ಷೇ ಹಣ್ಣುಗಳನ್ನು ಕೂಡಿಸಲೂಬಾರದು.
ಯಾಜಕಕಾಂಡ 25 : 12 (KNV)
ಅದು ಸಂಭ್ರಮವೇ; ಅದು ನಿಮಗೆ ಪರಿಶುದ್ಧವಾಗಿರುವದು; ಹೊಲದೊಳಗಿಂದ ಅದರ ಹುಟ್ಟುವಳಿಯನ್ನು ನೀವು ತಿನ್ನಬೇಕು.
ಯಾಜಕಕಾಂಡ 25 : 13 (KNV)
ಸಂಭ್ರಮದ ಈ ವರುಷದಲ್ಲಿ ಪ್ರತಿಯೊಬ್ಬನು ತನ್ನ ಸ್ವಾಸ್ತ್ಯಕ್ಕೆ ಹಿಂದಿರುಗಬೇಕು.
ಯಾಜಕಕಾಂಡ 25 : 14 (KNV)
ನೆರೆಯವನಿಗೆ ಏನಾದರೂ ಮಾರಾಟಮಾಡಿದ್ದರೆ ಇಲ್ಲವೆ ನೆರೆಯವ ನಿಂದ ಕೊಂಡು ಕೊಂಡಿದ್ದರೆ ಒಬ್ಬರಿಗೊಬ್ಬರು ಉಪದ್ರ ಪಡಿಸಿಕೊಳ್ಳಬಾರದು.
ಯಾಜಕಕಾಂಡ 25 : 15 (KNV)
ಸಂಭ್ರಮದ ತರುವಾಯ ವರುಷಗಳ ಲೆಕ್ಕದ ಪ್ರಕಾರ ನಿನ್ನ ನೆರೆಯವನಿಂದ ಕೊಂಡುಕೊಳ್ಳಬೇಕು. ಫಲದ ವರುಷಗಳ ಪ್ರಕಾರ ಅವನು ನಿನಗೆ ಮಾರಾಟಮಾಡಬೇಕು.
ಯಾಜಕಕಾಂಡ 25 : 16 (KNV)
ವರುಷಗಳು ಹೆಚ್ಚಿದಂತೆಯೇ ಫಲದ ಬೆಲೆಯನ್ನು ಹೆಚ್ಚಿಸಬೇಕು; ವರುಷಗಳು ಕಡಿಮೆಯಿರುವಂತೆಯೇ ಫಲದ ಬೆಲೆ ಯನ್ನು ಕಡಿಮೆಮಾಡಬೇಕು. ಫಲದ ವರುಷಗಳ ಸಂಖ್ಯೆಗನುಸಾರವಾಗಿಯೇ ಅವನು ನಿನಗೆ ಮಾರಾಟ ಮಾಡಬೇಕು.
ಯಾಜಕಕಾಂಡ 25 : 17 (KNV)
ಆದದರಿಂದ ನೀವು ಒಬ್ಬರಿಗೊಬ್ಬರು ಉಪದ್ರಪಡಿಸಿಕೊಳ್ಳಬಾರದು; ದೇವರಿಗೆ ನೀನು ಭಯ ಪಡಬೇಕು. ನಿಮ್ಮ ದೇವರಾಗಿರುವ ಕರ್ತನು ನಾನೇ.
ಯಾಜಕಕಾಂಡ 25 : 18 (KNV)
ಹೀಗೆ ನೀವು ನನ್ನ ನಿಯಮ ನಿರ್ಣಯಗಳನ್ನು ಕೈಕೊಂಡು ಅವುಗಳನ್ನು ಮಾಡಬೇಕು; ಆಗ ನೀವು ದೇಶದಲ್ಲಿ ಸುರಕ್ಷಿತರಾಗಿ ವಾಸಿಸುವಿರಿ.
ಯಾಜಕಕಾಂಡ 25 : 19 (KNV)
ಭೂಮಿಯು ತನ್ನ ಫಲವನ್ನು ಕೊಡುವದು; ನೀವು ತಿಂದು ತೃಪ್ತ ರಾಗುವಿರಿ, ಅದರಲ್ಲಿ ಸುರಕ್ಷಿತವಾಗಿ ವಾಸಿಸುವಿರಿ.
ಯಾಜಕಕಾಂಡ 25 : 20 (KNV)
ನೀವು--ಇಗೋ, ನಾವು ಬಿತ್ತುವದಿಲ್ಲ ಇಲ್ಲವೆ ನಮ್ಮ ಹುಟ್ಟುವಳಿಯಲ್ಲಿ ಕೂಡಿಸಿಕೊಳ್ಳುವದಿಲ್ಲ, ಏಳ ನೆಯ ವರುಷದಲ್ಲಿ ನಾವು ಏನು ತಿನ್ನೋಣ ಎಂದು ಅನ್ನುವಿರಿ.
ಯಾಜಕಕಾಂಡ 25 : 21 (KNV)
ಆಗ ನಾನು ಆರನೆಯ ವರುಷದಲ್ಲಿ ಮೂರು ವರುಷಗಳಿಗೆ ಫಲಫಲಿಸುವಂತೆ ನಿಮ್ಮ ಮೇಲೆ ನನ್ನ ಆಶೀರ್ವಾದವನ್ನು ಆಜ್ಞಾಪಿಸುವೆನು.
ಯಾಜಕಕಾಂಡ 25 : 22 (KNV)
ನೀವು ಎಂಟನೆಯ ವರುಷದಲ್ಲಿ ಬಿತ್ತಿ ಅದರ ಫಲವನ್ನು ಒಂಭತ್ತನೆಯ ವರುಷದ ವರೆಗೆ ತಿನ್ನುವಿರಿ; ಅದರ ಫಲ ಬರುವ ವರೆಗೆ ನೀವು ಸಂಗ್ರಹಿಸಿದ ಹಳೇದನ್ನೇ ತಿನ್ನುವಿರಿ.
ಯಾಜಕಕಾಂಡ 25 : 23 (KNV)
ಇದಲ್ಲದೆ ಭೂಮಿಯನ್ನು ಎಂದಿಗೂ ಮಾರಬಾರದು, ಯಾಕಂದರೆ ಭೂಮಿಯು ನನ್ನದು; ನನ್ನೊಂದಿಗೆ ನೀವು ಪರಕೀಯರೂ ಪ್ರವಾಸಿಗಳೂ ಆಗಿದ್ದೀರಿ.
ಯಾಜಕಕಾಂಡ 25 : 24 (KNV)
ನಿಮ್ಮ ಸ್ವಾಧೀನದಲ್ಲಿರುವ ಎಲ್ಲಾ ಭೂಮಿಗೆ ಬಿಡುಗಡೆಯನ್ನು ಕೊಡಬೇಕು.
ಯಾಜಕಕಾಂಡ 25 : 25 (KNV)
ನಿನ್ನ ಸಹೋದರನು ಬಡತನದ ನಿಮಿತ್ತವಾಗಿ ತನ್ನ ಸ್ವಾಸ್ತ್ಯದಲ್ಲಿ ಸ್ವಲ್ಪವನ್ನು ಮಾರಿದ ಮೇಲೆ ಅವನ ಬಂಧುವಿನಲ್ಲಿ ಯಾರಾದರೂ ಅದನ್ನು ಬಿಡಿಸಿಕೊಳ್ಳು ವದಕ್ಕೆ ಬಂದರೆ ಅವನ ಸಹೋದರನು ಮಾರಿರುವದನ್ನು ಅವನಿಗೆ ಬಿಡುಗಡೆ ಮಾಡಬೇಕು.
ಯಾಜಕಕಾಂಡ 25 : 26 (KNV)
ಅವನಿಗೆ ಅದನ್ನು ಬಿಡಿಸಿಕೊಳ್ಳುವದಕ್ಕೆ ಯಾರಾದರೂ ಇಲ್ಲದೆ ತಾನೇ ಅದನ್ನು ಬಿಡಿಸಿಕೊಳ್ಳುವ ಸ್ಥಿತಿ ಉಂಟಾದರೆ
ಯಾಜಕಕಾಂಡ 25 : 27 (KNV)
ಅವನು ಅದನ್ನು ಮಾರಿದ ವರುಷಗಳನ್ನು ಲೆಕ್ಕಿಸಿ ಅದನ್ನು ಮಾರಿದವನಿಗೆ ಮಿಗಿಲಾದದ್ದನ್ನು ಪೂರ್ತಿಮಾಡಿ ತನ್ನ ಸ್ವಾಸ್ತ್ಯಕ್ಕೆ ಹಿಂದಿರುಗಬಹುದು.
ಯಾಜಕಕಾಂಡ 25 : 28 (KNV)
ತಿರಿಗಿ ಸಲ್ಲಿಸುವದಕ್ಕೆ ಅವನಿಗೆ ಆಗದಿದ್ದರೆ ಅವನು ಮಾರಿದ್ದು ಸಂಭ್ರಮದ ವರುಷದ ವರೆಗೆ ಕೊಂಡುಕೊಂಡವನ ಕೈಯಲ್ಲಿ ಇರಬೇಕು; ಸಂಭ್ರಮದ ವರುಷದಲ್ಲಿ ಅದು ಬಿಡುಗಡೆ ಯಾಗಬೇಕು, ಅವನು ತನ್ನ ಸ್ವಾಸ್ತ್ಯಕ್ಕೆ ಹಿಂದಿರುಗಬೇಕು.
ಯಾಜಕಕಾಂಡ 25 : 29 (KNV)
ಇದಲ್ಲದೆ ಒಬ್ಬನು ಗೋಡೆಯುಳ್ಳ ಪಟ್ಟಣದ ಲ್ಲಿರುವ ನಿವಾಸದ ಮನೆಯನ್ನು ಮಾರಿದರೆ ಅದನ್ನು ಮಾರಿದ ಒಂದು ಪೂರ್ಣ ವರುಷದೊಳಗಾಗಿ ಅದನ್ನು ಬಿಡುಗಡೆ ಮಾಡಬೇಕು; ಒಂದು ಪೂರ್ಣ ವರುಷ
ಯಾಜಕಕಾಂಡ 25 : 30 (KNV)
ಆದರೆ ವರುಷವು ಪೂರ್ಣವಾಗುವದರೊಳಗಾಗಿ ಅದು ಬಿಡುಗಡೆಯಾಗದಿದ್ದರೆ ಗೋಡೆಯ ಪಟ್ಟಣದೊಳಗಿರುವ ಆ ಮನೆಯು ಅದನ್ನು ಕೊಂಡುಕೊಂಡವನಿಗೆ ಅವನ ತಲತಲಾಂತರಕ್ಕೂ ಸ್ಥಿರವಾಗಿಡಲ್ಪಡಬೇಕು; ಸಂಭ್ರಮದ ವರುಷದಲ್ಲಿ ಅದು ಬಿಡುಗಡೆಯಾಗ ಬಾರದು.
ಯಾಜಕಕಾಂಡ 25 : 31 (KNV)
ಆದರೆ ಸುತ್ತಲೂ ಗೋಡೆಗಳಿಲ್ಲದ ಹಳ್ಳಿಗಳಲ್ಲಿಯ ಮನೆಗಳು ದೇಶದ ಭೂಮಿಯೊಂದಿಗೆ ಲೆಕ್ಕಿಸಲ್ಪಡಬೇಕು. ಅವುಗಳಿಗೆ ಬಿಡುಗಡೆ ಇರಬೇಕು; ಸಂಭ್ರಮ ವರುಷದಲ್ಲಿ ಅವು ಬಿಡುಗಡೆಯಾಗಬೇಕು.
ಯಾಜಕಕಾಂಡ 25 : 32 (KNV)
ಇದಲ್ಲದೆ ಲೇವಿಯರ ಪಟ್ಟಣಗಳ ವಿಷಯವಾ ಗಿಯೂ ಅವರ ಸ್ವಾಸ್ತ್ಯವಾಗಿರುವ ಪಟ್ಟಣಗಳಲ್ಲಿನ ಮನೆಗಳ ವಿಷಯವಾಗಿಯೂ ಲೇವಿಯರು ಯಾವ ಸಮಯದಲ್ಲಿಯಾದರೂ ಬಿಡಿಸಿಕೊಳ್ಳಬಹುದು.
ಯಾಜಕಕಾಂಡ 25 : 33 (KNV)
ಲೇವಿಯರಿಂದ ಏನಾದರೂ ಕೊಂಡುಕೊಂಡರೆ ಕೊಂಡುಕೊಂಡ ಮನೆಯೂ ಅವನ ಸ್ವಾಸ್ತ್ಯದ ಪಟ್ಟಣವೂ ಸಂಭ್ರಮದ ವರುಷದಲ್ಲಿ ಬಿಡುಗಡೆಯಾಗ ಬೇಕು; ಲೇವಿಯರ ಪಟ್ಟಣಗಳ ಮನೆಗಳು ಇಸ್ರಾ ಯೇಲ್ ಮಕ್ಕಳ ಮಧ್ಯದಲ್ಲಿ ಅವರಿಗೆ ಸ್ವಾಸ್ತ್ಯವಾಗಿವೆ.
ಯಾಜಕಕಾಂಡ 25 : 34 (KNV)
ಆದರೆ ಅವರ ಪಟ್ಟಣಗಳಿಗೆ ಸೇರಿರುವ ಉಪ ನಗರಗಳ ಹೊಲವನ್ನು ಮಾರಬಾರದು. ಅದು ಅವರಿಗೆ ನಿತ್ಯವಾದ ಸ್ವಾಸ್ತ್ಯವೇ.
ಯಾಜಕಕಾಂಡ 25 : 35 (KNV)
ನಿನ್ನ ಸಹೋದರನು ಬಡವನಾಗಿ ನಿನ್ನ ಬಳಿಯಲ್ಲಿ ಕ್ಷೀಣನಾಗಿ ಬಿದ್ದುಕೊಂಡಿದ್ದರೆ ಅವನು ಪರಕೀಯ ನಾಗಿದ್ದರೂ ಪ್ರವಾಸಿಯಾಗಿದ್ದರೂ ಅವನು ನಿನ್ನ ಬಳಿ ಯಲ್ಲಿ ಬದುಕುವ ಹಾಗೆ ಅವನಿಗೆ ಸಹಾಯಮಾಡ ಬೇಕು.
ಯಾಜಕಕಾಂಡ 25 : 36 (KNV)
ನೀನು ಅವನಿಂದ ಬಡ್ಡಿಯನ್ನಾಗಲಿ ಇಲ್ಲವೆ ಲಾಭವನ್ನಾಗಲಿ ತೆಗೆದುಕೊಳ್ಳಬಾರದು. ಆದರೆ ನಿನ್ನ ಸಹೋದರನು ನಿನ್ನೊಂದಿಗೆ ಬದುಕುವಂತೆ ನಿನ್ನ ದೇವ ರಿಗೆ ಭಯಪಡು.
ಯಾಜಕಕಾಂಡ 25 : 37 (KNV)
ನೀನು ಅವನಿಗೆ ನಿನ್ನ ಹಣವನ್ನು ಬಡ್ಡಿಗೆ ಕೊಡಬಾರದು ಇಲ್ಲವೆ ಲಾಭಕ್ಕಾಗಿ ನಿನ್ನ ಆಹಾರ ವನ್ನು ಸಾಲವಾಗಿ ಕೊಡಬೇಡ.
ಯಾಜಕಕಾಂಡ 25 : 38 (KNV)
ನಿನಗೆ ಕಾನಾನ್ ದೇಶವನ್ನು ಕೊಡುವಂತೆಯೂ ನಿನಗೆ ದೇವರಾಗಿರು ವಂತೆಯೂ ನಿನ್ನನ್ನು ಐಗುಪ್ತದೇಶದೊಳಗಿಂದ ಹೊರಗೆ ಕರತಂದ ನಿನ್ನ ದೇವರಾಗಿರುವ ಕರ್ತನು ನಾನೇ.
ಯಾಜಕಕಾಂಡ 25 : 39 (KNV)
ಇದಲ್ಲದೆ ನಿನ್ನೊಂದಿಗೆ ವಾಸಿಸುವ ನಿನ್ನ ಸಹೋದರನು ಬಡವನಾಗಿದ್ದು ನಿನಗೆ ಮಾರಲ್ಪಟ್ಟಿದ್ದರೆ ಅವನು ದಾಸನಂತೆ ನಿನಗೆ ಸೇವೆಮಾಡಲು ನೀನು ಅವನನ್ನು ಒತ್ತಾಯ ಮಾಡಬಾರದು.
ಯಾಜಕಕಾಂಡ 25 : 40 (KNV)
ಆದರೆ ಕೂಲಿ ಯಾಳಂತೆಯೂ ಪ್ರವಾಸಿಯಂತೆಯೂ ಅವನು ನಿನ್ನ ಬಳಿಯಲ್ಲಿ ಇರಲಿ. ಜೂಬಿಲಿ ಸಂವತ್ಸರದ ವರೆಗೆ ನಿನಗೆ ಸೇವೆಮಾಡಲಿ.
ಯಾಜಕಕಾಂಡ 25 : 41 (KNV)
ತರುವಾಯ ಅವನು ನಿನ್ನ ಬಳಿಯಿಂದ ತಾನು ತನ್ನ ಮಕ್ಕಳೊಂದಿಗೆ ಹೊರಟು ತನ್ನ ಕುಟುಂಬಕ್ಕೂ ತನ್ನ ಪಿತೃಗಳ ಸ್ವಾಸ್ತ್ಯಕ್ಕೂ ಅವನು ಹಿಂದಿರುಗಬೇಕು.
ಯಾಜಕಕಾಂಡ 25 : 42 (KNV)
ಐಗುಪ್ತದೇಶದೊಳಗಿಂದ ನಾನು ಹೊರಗೆ ಕರತಂದ ಅವರು ನನ್ನ ಸೇವಕರಾಗಿದ್ದಾರೆ; ಅವರು ದಾಸರಾಗಿ ಮಾರಲ್ಪಡಬಾರದು.
ಯಾಜಕಕಾಂಡ 25 : 43 (KNV)
ನೀನು ಕಠಿಣವಾಗಿ ಅವನ ಮೇಲೆ ದೊರೆತನ ಮಾಡಬಾರದು; ಆದರೆ ನಿನ್ನ ದೇವರಿಗೆ ಭಯಪಡಬೇಕು.
ಯಾಜಕಕಾಂಡ 25 : 44 (KNV)
ನಿನ್ನ ಸುತ್ತಲೂ ಇರುವ ಅನ್ಯಜನರು ನಿನಗೆ ದಾಸದಾಸಿಯ ರಾಗಿರುವಂತೆ ಅವರಿಂದ ದಾಸದಾಸಿಯರನ್ನು ನೀನು ಕೊಂಡುಕೊಳ್ಳಬೇಕು.
ಯಾಜಕಕಾಂಡ 25 : 45 (KNV)
ಇದಲ್ಲದೆ ನಿನ್ನ ಮಧ್ಯದೊಳ ಗಿರುವ ಪರಕೀಯ ಮತ್ತು ಪ್ರವಾಸಿಗಳ ಮಕ್ಕಳಿಂದ ನಿನ್ನ ಬಳಿಯಲ್ಲಿರುವ ಅವರ ಕುಟುಂಬಗಳಲ್ಲಿ ನಿನ್ನ ದೇಶದೊಳಗೆ ಅವರು ಪಡೆದಿರುವವರಿಂದ ನೀನು ಕೊಂಡುಕೊಳ್ಳಬಹುದು; ಅವರು ನಿನ್ನ ಸ್ವಾಸ್ತ್ಯವಾಗಿ ರುವರು.
ಯಾಜಕಕಾಂಡ 25 : 46 (KNV)
ನಿಮ್ಮ ತರುವಾಯ ಅವರನ್ನು ನಿಮ್ಮ ಮಕ್ಕಳಿಗೆ ಸ್ವಾಸ್ತ್ಯವಾಗಿರುವ ಬಾಧ್ಯತೆಯಾಗಿ ತೆಗೆದು ಕೊಳ್ಳಬೇಕು; ಅವರು ನಿರಂತರಕ್ಕೂ ನಿಮ್ಮ ದಾಸ ರಾಗಿರುವರು. ಆದರೆ ಇಸ್ರಾಯೇಲ್ ಮಕ್ಕಳಾದ ನಿಮ್ಮ ಸಹೋದರರಲ್ಲಿ ಒಬ್ಬರ ಮೇಲೊಬ್ಬರು ಕಠಿಣವಾದ ದೊರೆತನವನ್ನು ಮಾಡಬೇಡಿರಿ.
ಯಾಜಕಕಾಂಡ 25 : 47 (KNV)
ನಿನ್ನ ಬಳಿಯಲ್ಲಿರುವ ಪರಕೀಯ ಇಲ್ಲವೆ ಪ್ರವಾ ಸಿಯ ಸಂಪತ್ತು ಹೆಚ್ಚಾಗಲಾಗಿ ನಿನ್ನ ಸಹೋದರನು ಅವನ ಬಳಿಯಲ್ಲಿ ಬಡವನಾಗಿ ನಿನ್ನ ಬಳಿಯಲ್ಲಿರುವ ಪರಕೀಯನಾಗಲಿ ಪ್ರವಾಸಿಯಾಗಲಿ ಪರಕೀಯನ ಸಂತತಿಯಲ್ಲಿ ಹುಟ್ಟಿದವನಿಗೆ ತನ್ನನ್ನು ಮಾರಿಕೊಂಡರೆ
ಯಾಜಕಕಾಂಡ 25 : 48 (KNV)
ಹೀಗೆ ಅವನು ತನ್ನನ್ನು ಮಾರಿಕೊಂಡ ಮೇಲೆ ಅವನು ತಿರಿಗಿ ವಿಮೋಚಿಸಲ್ಪಡಬಹುದು. ಅವನ ಸಹೋದರರಲ್ಲಿ ಒಬ್ಬನು ಅವನನ್ನು ವಿಮೋಚಿಸ ಬಹುದು.
ಯಾಜಕಕಾಂಡ 25 : 49 (KNV)
ಅವನ ಚಿಕ್ಕಪ್ಪನಾಗಲಿ ಚಿಕ್ಕಪ್ಪನ ಮಗ ನಾಗಲಿ ಇಲ್ಲವೆ ಅವನ ಕುಟುಂಬದಲ್ಲಿ ಸವಿಾಪ ವಾಗಿರುವ ಸಂಬಂಧಿಕರಲ್ಲಿ ಯಾರಾಗಲಿ ಅವನನ್ನು ವಿಮೋಚಿಸಬಹುದು. ಇಲ್ಲವೆ ಅವನು ಶಕ್ತನಾಗಿದ್ದರೆ ತನ್ನನ್ನು ತಾನೇ ವಿಮೋಚಿಸಿಕೊಳ್ಳಬಹುದು.
ಯಾಜಕಕಾಂಡ 25 : 50 (KNV)
ಅವನು ತನ್ನನ್ನು ಕೊಂಡುಕೊಂಡವನಿಗೆ ಮಾರಲ್ಪಟ್ಟ ವರುಷ ಮೊದಲುಗೊಂಡು ಜೂಬಿಲಿ ಸಂವತ್ಸರದ ವರೆಗೆ ಅವನೊಂದಿಗೆ ಲೆಕ್ಕಮಾಡಬೇಕು. ಅವನ ಮಾರಾಟದ ಕ್ರಯವು ವರುಷಗಳ ಲೆಕ್ಕದ ಪ್ರಕಾರ ಕೂಲಿಯಾಳಿನ ಸಮಯಕ್ಕೆ ತಕ್ಕಂತೆ ಅವನೊಂದಿಗೆ ಅದು ಇರುವದು.
ಯಾಜಕಕಾಂಡ 25 : 51 (KNV)
ಇನ್ನು ಬಹಳ ವರುಷವಿದ್ದರೆ ಅವುಗಳ ಪ್ರಕಾರ ತನ್ನ ಕ್ರಯದ ಹಣದಲ್ಲಿ ವಿಮೋಚಿಸಲ್ಪಡಬೇಕು.
ಯಾಜಕಕಾಂಡ 25 : 52 (KNV)
ಜೂಬಿಲಿ ಸಂವತ್ಸರದ ವರೆಗೆ ಕೆಲವು ವರುಷಗಳು ಮಾತ್ರ ಉಳಿದಿದ್ದರೆ ಅವನೊಂದಿಗೆ ಎಣಿಸಬೇಕು. ಅವನ ವರುಷಗಳ ಮೇರೆಗೆ ತನ್ನ ವಿಮೋಚನೆಯ ಕ್ರಯವನ್ನು ತಿರುಗಿ ಅವನು ಅವನಿಗೆ ಸಲ್ಲಿಸಬೇಕು.
ಯಾಜಕಕಾಂಡ 25 : 53 (KNV)
ವರುಷದ ಕೂಲಿಯಾಳಿನಂತೆ ಅವನ ಬಳಿಯಲ್ಲಿ ಇರಬೇಕು. ಆದರೆ ಮತ್ತೊಬ್ಬನು ನಿನ್ನ ದೃಷ್ಟಿಯಲ್ಲಿ ಅವನ ಮೇಲೆ ಕಠಿಣವಾದ ದೊರೆತನ ಮಾಡಬಾರದು.
ಯಾಜಕಕಾಂಡ 25 : 54 (KNV)
ಈ ವರುಷಗಳಲ್ಲಿ ಅವನು ವಿಮೋಚಿಸಲ್ಪಡದಿದ್ದರೆ ಜೂಬಿಲಿ ಸಂವತ್ಸರದಲ್ಲಿ ಅವನೊಂದಿಗೆ ಅವನ ಮಕ್ಕಳು ಬಿಡುಗಡೆಯಾಗಬೇಕು.
ಯಾಜಕಕಾಂಡ 25 : 55 (KNV)
ಯಾಕಂದರೆ ಇಸ್ರಾಯೇಲ್ ಮಕ್ಕಳು ನನ್ನ ದಾಸರು, ಐಗುಪ್ತದೇಶ ದೊಳಗಿಂದ ನಾನು ಹೊರಗೆ ಬರಮಾಡಿದ ಇವರು ನನ್ನ ದಾಸರೇ. ನಿಮ್ಮ ದೇವರಾದ ಕರ್ತನು ನಾನೇ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50 51 52 53 54 55