ಯಾಜಕಕಾಂಡ 17 : 1 (KNV)
ತರುವಾಯ ಕರ್ತನು ಮೋಶೆಯೊಂದಿಗೆ ಮಾತನಾಡಿ--
ಯಾಜಕಕಾಂಡ 17 : 2 (KNV)
ಆರೋನನಿಗೂ ಅವನ ಕುಮಾರರಿಗೂ ಇಸ್ರಾಯೇಲ್‌ ಮಕ್ಕಳಿಗೂ ಮಾತನಾಡಿ ಅವರಿಗೆ ಹೀಗೆ ಹೇಳು--ಕರ್ತನು ನಿಮಗೆ ಆಜ್ಞಾಪಿಸಿ ಹೇಳುವದೇನಂದರೆ,
ಯಾಜಕಕಾಂಡ 17 : 3 (KNV)
ಇಸ್ರಾಯೇಲಿನ ಮನೆತನದಲ್ಲಿ ಯಾವನಾದರೂ ಒಂದು ಎತ್ತನ್ನಾಗಲಿ ಕುರಿಮರಿಯ ನ್ನಾಗಲಿ ಆಡನ್ನಾಗಲಿ ಪಾಳೆಯದೊಳಗಾಗಲಿ ಹೊರ ಗಾಗಲಿ ವಧಿಸಿ
ಯಾಜಕಕಾಂಡ 17 : 4 (KNV)
ಕರ್ತನಿಗೆ ಸಮರ್ಪಿಸುವ ಬಲಿಯಾಗಿ ಕರ್ತನ ಸನ್ನಿಧಿಯಲ್ಲಿರುವ ಸಭೆಯ ಗುಡಾರದ ಬಾಗಿಲ ಬಳಿಗೆ ತಾರದಿದ್ದರೆ ಆ ಮನುಷ್ಯನ ಮೇಲೆ ರಕ್ತಾ ಪರಾಧವು ಹೊರಿಸಲ್ಪಡಬೇಕು; ಅವನು ರಕ್ತ ಸುರಿಸಿ ರುವನು; ಆ ಮನುಷ್ಯನು ತನ್ನ ಜನರ ಮಧ್ಯದೊ ಳಗಿಂದ ತೆಗೆದುಹಾಕಲ್ಪಡಬೇಕು.
ಯಾಜಕಕಾಂಡ 17 : 5 (KNV)
ಇಸ್ರಾಯೇಲ್‌ ಮಕ್ಕಳು ತಾವು ಬಯಲಿನಲ್ಲಿ ಸಮರ್ಪಿಸುವ ಬಲಿಗಳನ್ನು ಕರ್ತನಿಗೆ ಸಭೆಯ ಗುಡಾರದ ಬಾಗಿಲಿನ ಬಳಿಯಲ್ಲಿ ಯಾಜಕನ ಬಳಿಗೆ ತಂದು ಕರ್ತನಿಗೆ ಸಮಾಧಾನದ ಬಲಿಯಾಗಿ ಸಮರ್ಪಿಸಬೇಕು.
ಯಾಜಕಕಾಂಡ 17 : 6 (KNV)
ಯಾಜಕನು ಸಭೆಯ ಗುಡಾರದ ಬಾಗಿಲ ಬಳಿಯಲ್ಲಿ ಕರ್ತನ ಯಜ್ಞವೇದಿಯ ಮೇಲೆ ರಕ್ತವನ್ನು ಚಿಮುಕಿಸಬೇಕು. ಕೊಬ್ಬನ್ನು ಕರ್ತನಿಗೆ ಸುಗಂಧವಾಸನೆಯಾಗಿ ಸುಡಬೇಕು.
ಯಾಜಕಕಾಂಡ 17 : 7 (KNV)
ಅವರು ಜಾರತ್ವ ಮಾಡುವಂತೆ ಯಾರ ಹಿಂದೆ ಹೋದರೋ ಆ ದೆವ್ವ ಗಳಿಗೆ ಇನ್ನೆಂದಿಗೂ ಅವರು ತಮ್ಮ ಯಜ್ಞಗಳನ್ನು ಸಮರ್ಪಿಸಬಾರದು. ಇದು ಅವರಿಗೆ ಅವರ ತಲ ತಲಾಂತರಗಳ ವರೆಗೆ ಶಾಶ್ವತವಾದ ನಿಯಮವಾಗಿ ರುವದು.
ಯಾಜಕಕಾಂಡ 17 : 8 (KNV)
ಇದಲ್ಲದೆ ನೀನು ಅವರಿಗೆ ಹೇಳಬೇಕಾದದ್ದೇ ನಂದರೆ--ಇಸ್ರಾಯೇಲಿನ ಮನೆತನದವರಲ್ಲಿ ಯಾವ ಮನುಷ್ಯನಾದರೂ ನಿಮ್ಮೊಳಗೆ ಪ್ರವಾಸಿಯರಾಗಿದ್ದ ಪರಕೀಯರು ದಹನಬಲಿಯನ್ನಾಗಲಿ ಯಜ್ಞಸಮ ರ್ಪಣೆಯನ್ನಾಗಲಿ ಅರ್ಪಿಸಿದರೆ
ಯಾಜಕಕಾಂಡ 17 : 9 (KNV)
ಅದನ್ನು ಕರ್ತನಿಗೆ ಸಮರ್ಪಿಸುವಂತೆ ಸಭೆಯ ಗುಡಾರದ ಬಾಗಿಲ ಬಳಿಗೆ ತಾರದಿದ್ದರೆ ಆ ಮನುಷ್ಯನು ತನ್ನ ಜನಗಳ ಮಧ್ಯ ದೊಳಗಿಂದ ತೆಗೆದುಹಾಕಲ್ಪಡಬೇಕು.
ಯಾಜಕಕಾಂಡ 17 : 10 (KNV)
ಇದಲ್ಲದೆ ಇಸ್ರಾಯೇಲ್‌ ಮನೆತನದಲ್ಲಿ ಯಾವನಾದರೂ ನಿಮ್ಮ ಮಧ್ಯದೊಳಗೆ ಪ್ರವಾಸಿಯಾಗಿರುವ ಪರಕೀಯನಾ ದರೂ ಯಾವದೇ ತರದ ರಕ್ತವನ್ನು ತಿಂದರೆ ಅವನನ್ನು ಅವನ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು.
ಯಾಜಕಕಾಂಡ 17 : 11 (KNV)
ಯಾಕಂದರೆ ಪ್ರತಿ ದೇಹಿಗೂ ರಕ್ತವೇ ಪ್ರಾಣಾಧಾರ. ಅಂಥ ರಕ್ತವನ್ನು ನೀವು ಯಜ್ಞವೇದಿಗೆ ಎರಚಿ ನಿಮ ಗೋಸ್ಕರ ದೋಷಪರಿಹಾರ ಮಾಡಿಕೊಳ್ಳಬೇಕೆಂದು ನಿಮಗೆ ಅನುಗ್ರಹ ಮಾಡಿದ್ದೇನೆ. ರಕ್ತವು ಪ್ರಾಣಾಧಾರ ವಾಗಿರುವ ಕಾರಣ ಅದರಿಂದ ದೋಷಪರಿಹಾರ ವಾಗುತ್ತದಷ್ಟೆ.
ಯಾಜಕಕಾಂಡ 17 : 12 (KNV)
ಆದಕಾರಣ ನಿಮ್ಮಲ್ಲಿ ಯಾವನಾ ದರೂ ರಕ್ತವನ್ನು ತಿನ್ನಬಾರದೆಂದು ಇಲ್ಲವೆ ನಿಮ್ಮೊಳಗೆ ಪ್ರವಾಸಿಯಾಗಿರುವ ಪರಕೀಯನು ರಕ್ತವನ್ನು ತಿನ್ನಬಾರ ದೆಂದು ನಾನು ಇಸ್ರಾಯೇಲ್‌ ಮಕ್ಕಳಿಗೆ ಹೇಳಿದೆನು.
ಯಾಜಕಕಾಂಡ 17 : 13 (KNV)
ಇದಲ್ಲದೆ ಇಸ್ರಾಯೇಲ್‌ ಮಕ್ಕಳಲ್ಲಿ ಯಾವ ಮನುಷ್ಯನಾದರೂ ನಿಮ್ಮೊಳಗೆ ಪ್ರವಾಸಿಯಾಗಿರುವ ಪರಕೀಯನಾದರೂ ತಿನ್ನುವದಕ್ಕಾಗಿ ಬೇಟೆಯಾಡಿ ಯಾವದೇ ಪಶುವನ್ನಾಗಲಿ ಇಲ್ಲವೆ ಪಕ್ಷಿಯನ್ನಾಗಲಿ ಹಿಡಿದರೆ ಅದರ ರಕ್ತವನ್ನೆಲ್ಲಾ ಸುರಿದು ಅದನ್ನು ಮಣ್ಣಿ ನಿಂದ ಮುಚ್ಚಬೇಕು.
ಯಾಜಕಕಾಂಡ 17 : 14 (KNV)
ಯಾಕಂದರೆ ರಕ್ತವೇ ಎಲ್ಲಾ ಶರೀರಗಳ ಜೀವವಾಗಿದೆ; ಅದಕ್ಕಿರುವ ರಕ್ತವು ಅದರ ಜೀವಕ್ಕಾಗಿಯೇ ಇದೆ; ಆದದರಿಂದ ನಾನು ಇಸ್ರಾ ಯೇಲ್‌ ಮಕ್ಕಳಿಗೆ--ನೀವು ಯಾವ ಬಗೆಯ ಶರೀರದ ರಕ್ತವನ್ನೂ ತಿನ್ನಬಾರದೆಂದು ಹೇಳಿದ್ದೇನೆ. ಎಲ್ಲಾ ಶರೀರಗಳ ಜೀವವು ರಕ್ತದಲ್ಲಿಯೇ ಇದೆ; ಇದನ್ನು ತಿನ್ನುವ ಯಾವನಾದರೂ ತೆಗೆದುಹಾಕಲ್ಪಡಬೇಕು.
ಯಾಜಕಕಾಂಡ 17 : 15 (KNV)
ನಿಮ್ಮ ದೇಶದವನಾಗಲಿ ಪರಕೀಯನಾಗಲಿ ತನ್ನ ಷ್ಟಕ್ಕೆ ತಾನೇ ಸತ್ತುಹೋದದ್ದನ್ನು ಇಲ್ಲವೆ ಮೃಗಗಳಿಂದ ಹರಿಯಲ್ಪಟ್ಟಿರುವದನ್ನು ತಿನ್ನುವ ಪ್ರತಿಯೊಬ್ಬನು ತನ್ನ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡ ಬೇಕು. ಸಾಯಂಕಾಲದ ವರೆಗೆ ಅವನು ಅಶುದ್ಧನಾಗಿರ ಬೇಕು, ತರುವಾಯ ಅವನು ಶುದ್ಧನಾಗಿರುವನು.ಆದರೆ ಅವನು ಅವುಗಳನ್ನು ಒಗೆದುಕೊಳ್ಳದೆ ಇದ್ದರೆ ಇಲ್ಲವೆ ತಾನು ಸ್ನಾನಮಾಡದಿದ್ದರೆ ತನ್ನ ಅಪರಾಧವನ್ನು ತಾನೇ ಹೊತ್ತುಕೊಳ್ಳಬೇಕು.
ಯಾಜಕಕಾಂಡ 17 : 16 (KNV)
ಆದರೆ ಅವನು ಅವುಗಳನ್ನು ಒಗೆದುಕೊಳ್ಳದೆ ಇದ್ದರೆ ಇಲ್ಲವೆ ತಾನು ಸ್ನಾನಮಾಡದಿದ್ದರೆ ತನ್ನ ಅಪರಾಧವನ್ನು ತಾನೇ ಹೊತ್ತುಕೊಳ್ಳಬೇಕು.

1 2 3 4 5 6 7 8 9 10 11 12 13 14 15 16

BG:

Opacity:

Color:


Size:


Font: