ಯಾಜಕಕಾಂಡ 14 : 1 (KNV)
ತರುವಾಯ ಕರ್ತನು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನಂದರೆ--
ಯಾಜಕಕಾಂಡ 14 : 2 (KNV)
ಕುಷ್ಠ ರೋಗಿಯು ತನ್ನ ಶುದ್ಧತೆಯ ದಿನದಲ್ಲಿ ಮಾಡತಕ್ಕ ನಿಯಮವು ಇದೇ: ಅವನು ಯಾಜಕನ ಬಳಿಗೆ ತರಲ್ಪಡಬೇಕು.
ಯಾಜಕಕಾಂಡ 14 : 3 (KNV)
ಯಾಜಕನು ಪಾಳೆಯದ ಆಚೆಗೆ ಹೊರಟು ಹೋಗಬೇಕು; ಇಗೋ, ಕುಷ್ಠ ವ್ಯಾಧಿಯು ಕುಷ್ಠರೋಗಿಯನ್ನು ಬಿಟ್ಟು ಅವನು ಸ್ವಸ್ಥನಾದನೆಂದು ಯಾಜಕನು ನೋಡಿದರೆ
ಯಾಜಕಕಾಂಡ 14 : 4 (KNV)
ಆಗ ಶುದ್ಧಮಾಡಿಸಿ ಕೊಳ್ಳುವವನಿಗೊಸ್ಕರ ಜೀವವುಳ್ಳ ಶುದ್ಧವಾದ ಎರಡು ಪಕ್ಷಿಗಳನ್ನೂ ದೇವದಾರು ಕಟ್ಟಿಗೆಯನ್ನೂ ರಕ್ತವರ್ಣ ವುಳ್ಳ ದಾರವನ್ನೂ ಮತ್ತು ಹಿಸ್ಸೋಪನ್ನೂ ತೆಗೆದುಕೊಳ್ಳು ವಂತೆ ಯಾಜಕನು ಆಜ್ಞಾಪಿಸಬೇಕು.
ಯಾಜಕಕಾಂಡ 14 : 5 (KNV)
ಆ ಪಕ್ಷಿಗಳಲ್ಲಿ ಒಂದನ್ನು ಹರಿಯುವ ನೀರಿನ ಮೇಲೆ ಮಣ್ಣಿನ ಪಾತ್ರೆ ಯಲ್ಲಿ ಕೊಲ್ಲಬೇಕೆಂದು ಯಾಜಕನು ಆಜ್ಞಾಪಿಸಬೇಕು.
ಯಾಜಕಕಾಂಡ 14 : 6 (KNV)
ಇದಲ್ಲದೆ ಜೀವವುಳ್ಳ ಪಕ್ಷಿಯನ್ನೂ ದೇವದಾರು ಕಟ್ಟಿಗೆಯನ್ನೂ ರಕ್ತವರ್ಣ ದಾರವನ್ನೂ ಹಿಸ್ಸೋಪನ್ನೂ ತೆಗೆದುಕೊಂಡು ಹರಿಯುವ ನೀರಿನ ಬಳಿಯಲ್ಲಿ ಕೊಲ್ಲಲ್ಪಟ್ಟ ಆ ಪಕ್ಷಿಯ ರಕ್ತದಲ್ಲಿ ಅದ್ದಿ
ಯಾಜಕಕಾಂಡ 14 : 7 (KNV)
ಕುಷ್ಠದಿಂದ ಶುದ್ಧಪಡಿಸಿಕೊಳ್ಳುವವನ ಮೇಲೆ ಏಳು ಸಾರಿ ಚಿಮುಕಿಸಿ ಅವನನ್ನು ಶುದ್ಧನೆಂದು ನುಡಿದು ಆ ಜೀವವುಳ್ಳ ಪಕ್ಷಿಯನ್ನು ಬಯಲಾದ ಹೊಲದಲ್ಲಿ ಬಿಟ್ಟು ಬಿಡ ಬೇಕು.
ಯಾಜಕಕಾಂಡ 14 : 8 (KNV)
ಶುದ್ಧವಾಗುವದಕ್ಕಿರುವವನು ತನ್ನ ಬಟ್ಟೆಗಳನ್ನು ತೊಳೆದುಕೊಂಡವನಾಗಿ ಎಲ್ಲಾ ಕೂದಲನ್ನು ಕ್ಷೌರ ಮಾಡಿಕೊಂಡು ಶುದ್ಧನಾಗುವಂತೆ ತನ್ನನ್ನು ನೀರಿನಲ್ಲಿ ತೊಳೆದುಕೊಳ್ಳಬೇಕು; ತರುವಾಯ ಅವನು ಪಾಳೆಯ ದೊಳಗೆ ಬಂದು ತನ್ನ ಡೇರೆಯೊಳಗೆ ಏಳು ದಿನಗಳ ವರೆಗೆ ಕಾಯಬೇಕು.
ಯಾಜಕಕಾಂಡ 14 : 9 (KNV)
ಆದರೆ ಏಳೆನೆಯ ದಿನದಲ್ಲಿ ಅವನು ತನ್ನ ತಲೆಯ ಎಲ್ಲಾ ಕೂದಲನ್ನೂ ಗಡ್ಡವನ್ನೂ ಕಣ್ಣು ಹುಬ್ಬುಗಳನ್ನೂ ಮಾತ್ರವಲ್ಲದೆ ತನ್ನ ಎಲ್ಲಾ ಕೂದಲನ್ನೂ ಕ್ಷೌರಮಾಡಿಸಿಕೊಳ್ಳಬೇಕು; ಅವನು ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು; ಇದಲ್ಲದೆ ತನ್ನ ದೇಹವನ್ನು ಸಹ ನೀರಿನಲ್ಲಿ ತೊಳೆಯಬೇಕು. ಆಗ ಅವನು ಶುದ್ಧನಾಗಿರುವನು.
ಯಾಜಕಕಾಂಡ 14 : 10 (KNV)
ಎಂಟನೆಯ ದಿವಸದಲ್ಲಿ ಅವನು ದೋಷವಿಲ್ಲದ ಎರಡು ಕುರಿಮರಿ ಗಳನ್ನು ಒಂದು ವರುಷದ ದೋಷವಿಲ್ಲದ ಹೆಣ್ಣು ಕುರಿಯನ್ನು ಆಹಾರ ಸಮರ್ಪಣೆಗಾಗಿ ಹತ್ತರಲ್ಲಿ ಮೂರರಷ್ಟು ಎಣ್ಣೆ ಬೆರೆಸಿದ ನಯವಾದ ಹಿಟ್ಟನ್ನೂ ಒಂದು ಸೇರಿನಷ್ಟು ಎಣ್ಣೆಯನ್ನೂ ತೆಗೆದುಕೊಳ್ಳಬೇಕು.
ಯಾಜಕಕಾಂಡ 14 : 11 (KNV)
ಅವನನ್ನು ಶುದ್ಧಪಡಿಸುವ ಯಾಜಕನು ಶುದ್ಧ ಪಡಿಸಿಕೊಳ್ಳುವವನನ್ನೂ ಆ ವಸ್ತುಗಳನ್ನೂ ಸಭೆಯ ಗುಡಾರದ ಬಾಗಿಲಿನ ಬಳಿಯಲ್ಲಿ ಕರ್ತನ ಮುಂದೆ ನಿಲ್ಲಿಸಬೇಕು.
ಯಾಜಕಕಾಂಡ 14 : 12 (KNV)
ಆಗ ಯಾಜಕನು ಒಂದು ಗಂಡು ಕುರಿಮರಿಯನ್ನೂ ಒಂದು ಸೇರಿನಷ್ಟು ಎಣ್ಣೆಯನ್ನೂ ತೆಗೆದುಕೊಂಡು ಅಪರಾಧ ಬಲಿಗಾಗಿ ಸಮರ್ಪಿಸಿ ಅವುಗಳನ್ನು ಆಡಿಸುವ ಸಮರ್ಪಣೆಗಾಗಿ ಕರ್ತನ ಎದುರಿನಲ್ಲಿ ಆಡಿಸಬೇಕು.
ಯಾಜಕಕಾಂಡ 14 : 13 (KNV)
ಇದಲ್ಲದೆ ಅವನು ಆ ಕುರಿಮರಿಯನ್ನು ಪರಿಶುದ್ಧ ಸ್ಥಳದಲ್ಲಿ ಪಾಪಬಲಿಯನ್ನೂ ದಹನಬಲಿಯನ್ನೂ ವಧಿಸುವ ಸ್ಥಳದಲ್ಲಿ ವಧಿಸಬೇಕು; ಯಾಕಂದರೆ ಪಾಪಬಲಿಯಂತೆಯೇ ಅಪರಾಧ ಬಲಿಯೂ ಯಾಜಕನದಾಗಿದೆ, ಅದು ಅತಿ ಪರಿಶುದ್ಧವಾದದ್ದು.
ಯಾಜಕಕಾಂಡ 14 : 14 (KNV)
ಯಾಜಕನು ಅಪರಾಧ ಬಲಿ ಯಲ್ಲಿ ಸ್ವಲ್ಪ ರಕ್ತವನ್ನು ತೆಗೆದುಕೊಳ್ಳಬೇಕು ಅದನ್ನು ಶುದ್ಧಪಡಿಸಿಕೊಳ್ಳುವವನ ಬಲಗಿವಿಯ ತುದಿಗೂ ಬಲಗೈಯ ಹೆಬ್ಬೆರಳಿಗೂ ಬಲಗಾಲಿನ ಹೆಬ್ಬೆರಳಿಗೆ ಹಚ್ಚಬೇಕು.
ಯಾಜಕಕಾಂಡ 14 : 15 (KNV)
ಯಾಜಕನು ಸೇರೆಣ್ಣೆಯಲ್ಲಿ ಸ್ವಲ್ಪ ತೆಗೆದುಕೊಂಡು ತನ್ನ ಸ್ವಂತ ಎಡ ಅಂಗೈಯಲ್ಲಿ ಹೊಯ್ಯಬೇಕು.
ಯಾಜಕಕಾಂಡ 14 : 16 (KNV)
ಯಾಜಕನು ತನ್ನ ಎಡಗೈಯಲ್ಲಿರುವ ಎಣ್ಣೆಯಲ್ಲಿ ತನ್ನ ಬಲಗೈ ಬೆರಳನ್ನು ಅದ್ದಿ ಬೆರಳಿನಿಂದ ಎಣ್ಣೆಯನ್ನು ಏಳುಸಾರಿ ಕರ್ತನ ಎದುರಿನಲ್ಲಿ ಚಿಮುಕಿಸ ಬೇಕು.
ಯಾಜಕಕಾಂಡ 14 : 17 (KNV)
ತನ್ನ ಕೈಯಲ್ಲಿ ಮಿಕ್ಕಿದ ಎಣ್ಣೆಯನ್ನು ಯಾಜಕನು ಶುದ್ಧಪಡಿಸಿಕೊಳ್ಳವವನ ಬಲಗಿವಿಯ ತುದಿಗೂ ಮತ್ತು ಬಲಗೈಯ ಹೆಬ್ಬೆರಳಿಗೆ ಬಲಗಾಲಿನ ಹೆಬ್ಬೆರಳಿಗೆ ಹಚ್ಚ ಬೇಕು.
ಯಾಜಕಕಾಂಡ 14 : 18 (KNV)
ಯಾಜಕನ ಕೈಯಲ್ಲಿ ಮಿಕ್ಕಿದ್ದ ಆ ಎಣ್ಣೆಯನ್ನು ಶುದ್ಧಪಡಿಸಿಕೊಳ್ಳುವವನ ತಲೆಯ ಮೇಲೆ ಹೊಯ್ಯ ಬೇಕು. ಯಾಜಕನು ಅವನಿಗಾಗಿ ಕರ್ತನ ಎದುರಿನಲ್ಲಿ ಪ್ರಾಯಶ್ಚಿತ್ತಮಾಡಬೇಕು.
ಯಾಜಕಕಾಂಡ 14 : 19 (KNV)
ಇದಲ್ಲದೆ ಯಾಜಕನು ಪಾಪದ ಬಲಿಯನ್ನು ಸಮರ್ಪಿಸಿ ಶುದ್ಧಪಡಿಸಿಕೊಳ್ಳುವ ವನಿಗೋಸ್ಕರ ಅವನ ಅಶುದ್ಧತೆಗಾಗಿ ಪ್ರಾಯಶ್ಚಿತ್ತ ಮಾಡಬೇಕು; ತರುವಾಯ ಅವನು ದಹನಬಲಿಯನ್ನು ವಧಿಸಬೇಕು.
ಯಾಜಕಕಾಂಡ 14 : 20 (KNV)
ಯಾಜಕನು ದಹನಬಲಿಯನ್ನೂ ಆಹಾರ ಸಮರ್ಪಣೆಯನ್ನೂ ಯಜ್ಞವೇದಿಯ ಮೇಲೆ ಸಮರ್ಪಿಸಬೇಕು. ಇದಲ್ಲದೆ ಯಾಜಕನು ಅವನಿಗೋ ಸ್ಕರ ಪ್ರಾಯಶ್ಚಿತ್ತವನ್ನು ಮಾಡಬೇಕು. ಆಗ ಅವನು ಶುದ್ಧನಾಗಿರುವನು.
ಯಾಜಕಕಾಂಡ 14 : 21 (KNV)
ಅವನು ಬಡವನಾಗಿದ್ದರೆ ಅಷ್ಟೊಂದು ತರುವದಕ್ಕೆ ಆಗದಿದ್ದರೆ ತನ್ನ ಪ್ರಾಯಶ್ಚಿತ್ತ ಅಪರಾಧದ ಬಲಿಗಾಗಿ ಆಡಿಸುವದಕ್ಕೆ ಒಂದು ಕುರಿ ಮರಿಯನ್ನೂ ಎಣ್ಣೆಬೆರೆಸಿದ ಹತ್ತರಲ್ಲೊಂದು ಭಾಗ ನಯವಾದ ಹಿಟ್ಟನ್ನೂ ಒಂದು ಸೇರಿನಷ್ಟು ಎಣ್ಣೆಯನ್ನೂ
ಯಾಜಕಕಾಂಡ 14 : 22 (KNV)
ಅವನಿಂದಾಗುವಷ್ಟು ಎರಡು ಬೆಳವಗಳನ್ನು ಎರಡು ಪಾರಿವಾಳದ ಮರಿಗಳನ್ನು ತಕ್ಕೊಳ್ಳಬೇಕು; ಅವುಗಳಲ್ಲಿ ಒಂದು ಪಾಪಬಲಿಗಾಗಿಯೂ ಇನ್ನೊಂದು ದಹನ ಬಲಿಗಾಗಿಯೂ ಇರುವದು.
ಯಾಜಕಕಾಂಡ 14 : 23 (KNV)
ಅವನು ತನ್ನ ಅಶುದ್ಧತೆ ಗಾಗಿ ಎಂಟನೆಯ ದಿನದಲ್ಲಿ ಇವುಗಳನ್ನು ಸಭೆಯ ಗುಡಾರದ ಬಾಗಿಲ ಬಳಿಗೆ ಯಾಜಕನ ಹತ್ತಿರಕ್ಕೆ ಕರ್ತನ ಎದುರಿನಲ್ಲಿ ತರಬೇಕು.
ಯಾಜಕಕಾಂಡ 14 : 24 (KNV)
ಯಾಜಕನು ಅಪರಾಧದ ಬಲಿಯ ಆ ಕುರಿಮರಿಯನ್ನೂ ಸೇರಿನಷ್ಟು ಎಣ್ಣೆಯನ್ನೂ ತೆಗೆದುಕೊಳ್ಳಬೇಕು. ಯಾಜಕನು ಕರ್ತನ ಸನ್ನಿಧಿಯಲ್ಲಿ ಆಡಿಸುವ ಸಮರ್ಪಣೆಗಾಗಿ ಅವುಗಳನ್ನು ಆಡಿಸಬೇಕು.
ಯಾಜಕಕಾಂಡ 14 : 25 (KNV)
ಅವನು ಅಪರಾಧದ ಬಲಿಗಾಗಿ ಕುರಿಮರಿಯನ್ನು ವಧಿಸಬೇಕು. ಅಪರಾಧದ ಬಲಿಯ ಸ್ವಲ್ಪ ರಕ್ತವನ್ನು ಯಾಜಕನು ತೆಗೆದುಕೊಂಡು ಶುದ್ಧಪಡಿಸಿಕೊಳ್ಳುವವನ ಬಲಗಿವಿಯ ತುದಿಗೂ ಮೇಲೆಯೂ ಅವನ ಬಲಗೈಯ ಹೆಬ್ಬೆರಳಿಗೆ ಹಚ್ಚಬೇಕು.
ಯಾಜಕಕಾಂಡ 14 : 26 (KNV)
ಮತ್ತು ಯಾಜಕನು ತನ್ನ ಎಡ ಅಂಗೈಯಲ್ಲಿ ಎಣ್ಣೆಯನ್ನು ಹೊಯಿದುಕೊಂಡು
ಯಾಜಕಕಾಂಡ 14 : 27 (KNV)
ತನ್ನ ಬಲಗೈ ಬೆರಳಿನಿಂದ ತನ್ನ ಎಡಗೈಯಲ್ಲಿರುವ ಸ್ವಲ್ಪ ಎಣ್ಣೆಯನ್ನು ಏಳುಸಾರಿ ಕರ್ತನ ಎದುರಿನಲ್ಲಿ ಚಿಮುಕಿಸಬೇಕು.
ಯಾಜಕಕಾಂಡ 14 : 28 (KNV)
ಮತ್ತು ಯಾಜಕನು ತನ್ನ ಕೈಯಲ್ಲಿದ್ದ ಎಣ್ಣೆಯನ್ನು ಶುದ್ಧಪಡಿಸಿಕೊಳ್ಳುವವನ ಬಲಗಿವಿಯ ತುದಿಗೂ ಬಲಗೈಯ ಹೆಬ್ಬೆರಳಿಗೂ ಬಲಗಾಲಿನ ಹೆಬ್ಬೆರ ಳಿಗೂ ಅಪರಾಧಬಲಿಯ ರಕ್ತವನ್ನು ಹಚ್ಚಿದ ಸ್ಥಳದ ಮೇಲೆಯೂ ಹಚ್ಚಬೇಕು.
ಯಾಜಕಕಾಂಡ 14 : 29 (KNV)
ಯಾಜಕನ ಕೈಯಲ್ಲಿ ಮಿಕ್ಕಿದ್ದ ಎಣ್ಣೆಯನ್ನು ಶುದ್ಧಪಡಿಸಿಕೊಳ್ಳುವವನ ತಲೆಯ ಮೇಲೆ ಹೊಯ್ದು ಕರ್ತನ ಎದುರಿನಲ್ಲಿ ಅವನಿಗಾಗಿ ಪ್ರಾಯಶ್ಚಿತ್ತಮಾಡಬೇಕು.
ಯಾಜಕಕಾಂಡ 14 : 30 (KNV)
ಅವನು ತನ್ನ ಸ್ಥಿತಿಗೆ ತಕ್ಕಂತೆ ಒಂದು ಬೆಳವವನ್ನಾಗಲಿ ಪಾರಿವಾಳದ ಮರಿಯ ನ್ನಾಗಲಿ ಸಮರ್ಪಿಸಬೇಕು.
ಯಾಜಕಕಾಂಡ 14 : 31 (KNV)
ಅದರಂತೆಯೇ ಅವನು ತನ್ನಿಂದಾಗುವಷ್ಟು ಮೇರೆಗೆ ಒಂದನ್ನು ಪಾಪಬಲಿಗಾಗಿ ಇನ್ನೊಂದನ್ನು ದಹನಬಲಿಗಾಗಿ ಆಹಾರ ಸಮರ್ಪಣೆ ಯೊಂದಿಗೆ ಸಮರ್ಪಿಸಬೇಕು; ಶುದ್ಧಪಡಿಸಿಕೊಳ್ಳುವವ ನಿಗೋಸ್ಕರ ಯಾಜಕನು ಕರ್ತನ ಎದುರಿನಲ್ಲಿ ಪ್ರಾಯ ಶ್ಚಿತ್ತವನ್ನುಮಾಡಬೇಕು.
ಯಾಜಕಕಾಂಡ 14 : 32 (KNV)
ಕುಷ್ಠರೋಗವುಳ್ಳವನಿಗಾಗಿ ಶುದ್ಧತೆಮಾಡಿಸಿಕೊಳ್ಳುವದರಲ್ಲಿ ಕೈಯಿಂದ ಆಗದಿರುವ ವನಿಗೆ ತನ್ನ ಶುದ್ಧತೆಗಾಗಿ ಇರುವ ನಿಯಮವು ಇದೇ.
ಯಾಜಕಕಾಂಡ 14 : 33 (KNV)
ಕರ್ತನು ಮೋಶೆ ಮತ್ತು ಆರೋನರೊಂದಿಗೆ ಮಾತನಾಡಿ ಹೇಳಿದ್ದೇನಂದರೆ--
ಯಾಜಕಕಾಂಡ 14 : 34 (KNV)
ನಾನು ನಿಮಗೆ ಸ್ವಾಸ್ತ್ಯವಾಗಿ ಕೊಡುವದಕ್ಕಿರುವ ಕಾನಾನ್ ದೇಶದೊ ಳಗೆ ನೀವು ಬಂದಾಗ ನಿಮಗೆ ಸ್ವಾಸ್ತ್ಯವಾಗಿ ಕೊಡುವ ಮನೆಯಲ್ಲಿ ಕುಷ್ಠವನ್ನು ಬರಮಾಡಿದಾಗ
ಯಾಜಕಕಾಂಡ 14 : 35 (KNV)
ಆ ಮನೆ ಯವನು ಯಾಜಕನ ಬಳಿಗೆ ಬಂದು--ನನ್ನ ಮನೆಯಲ್ಲಿ ವ್ಯಾಧಿಯಿರುವ ಹಾಗೆ ನನಗೆ ಕಾಣುತ್ತದೆ ಎಂದು ಹೇಳಬೇಕು.
ಯಾಜಕಕಾಂಡ 14 : 36 (KNV)
ಆಗ ಯಾಜಕನು ಆ ಮನೆಯಲ್ಲಿ ವ್ಯಾಧಿಯನ್ನು ನೋಡುವದಕ್ಕೆ ಹೋಗುವ ಮೊದಲು ಆ ಮನೆಯೊಳಗೆ ಇರುವವುಗಳು ಅಶುದ್ಧಮಾಡಲ್ಪಡ ದಂತೆ ಆ ಮನೆಯು ಬರಿದು ಮಾಡಲ್ಪಡಬೇಕೆಂದು ಆಜ್ಞಾಪಿಸಬೇಕು; ತರುವಾಯ ಯಾಜಕನು ಮನೆಯನ್ನು ನೋಡುವದಕ್ಕೆ ಒಳಗೆ ಹೋಗಬೇಕು.
ಯಾಜಕಕಾಂಡ 14 : 37 (KNV)
ಅವನು ಆ ವ್ಯಾಧಿಯನ್ನು ನೋಡಿದಾಗ ಇಗೋ, ಆ ವ್ಯಾಧಿಯು ಮನೆಯ ಗೋಡೆಗಳಲ್ಲಿಯಾದರೂ ತಗ್ಗಾದ ಸಾಲು ಗಳಲ್ಲಿ ಹಸುರಾಗಿಯಾದರೂ ಕೆಂಪಾಗಿ ಗೋಡೆಯ ಮಟ್ಟಕ್ಕಿಂತ ತಗ್ಗಿನಲ್ಲಿ ತೋರಿಬಂದರೆ
ಯಾಜಕಕಾಂಡ 14 : 38 (KNV)
ಯಾಜಕನು ಆ ಮನೆಯ ಹೊರಗೆ ಮನೆಯಬಾಗಿಲ ಬಳಿಗೆ ಹೋಗಿ ಅದನ್ನು ಏಳು ದಿವಸಗಳ ವರೆಗೆ ಮುಚ್ಚಿಡಬೇಕು.
ಯಾಜಕಕಾಂಡ 14 : 39 (KNV)
ಏಳನೆಯ ದಿನದಲ್ಲಿ ಯಾಜಕನು ತಿರಿಗಿಬಂದು ನೋಡಿದಾಗ ಇಗೋ, ಆ ವ್ಯಾಧಿಯು ಮನೆಯ ಗೋಡೆಗಳಲ್ಲಿ ಹರಡಿಕೊಂಡಿದ್ದರೆ
ಯಾಜಕಕಾಂಡ 14 : 40 (KNV)
ವ್ಯಾಧಿಯುಳ್ಳ ಕಲ್ಲುಗಳನ್ನು ಅವರು ತೆಗೆದು ಪಟ್ಟಣದ ಆಚೆಗೆ ಅಶುದ್ಧ ಸ್ಥಳದಲ್ಲಿ ಬಿಸಾಡಬೇಕೆಂದೂ
ಯಾಜಕಕಾಂಡ 14 : 41 (KNV)
ಆ ಮನೆಯ ಒಳ ಭಾಗದಲ್ಲಿ ಸುತ್ತಲೂ ಕೆರೆದು, ಕೆರೆದ ಧೂಳನ್ನು ಪಟ್ಟಣದ ಹೊರಗೆ ಅಶುದ್ಧ ಸ್ಥಳದಲ್ಲಿ ಸುರಿಯ ಬೇಕೆಂದೂ
ಯಾಜಕಕಾಂಡ 14 : 42 (KNV)
ಅವರು ಆ ಕಲ್ಲುಗಳಿಗೆ ಬದಲಾಗಿ ಬೇರೆ ಕಲ್ಲುಗಳನ್ನು ತೆಗೆದುಕೊಳ್ಳಬೇಕೆಂದೂ ಯಾಜಕನು ಆಜ್ಞಾಪಿಸಬೇಕು; ಅವನು ಬೇರೆ ಗಾರೆಯಿಂದ ಆ ಮನೆಗೆ ಗಿಲಾವು ಮಾಡಬೇಕು.
ಯಾಜಕಕಾಂಡ 14 : 43 (KNV)
ಅವನು ಆ ಮನೆಯ ಕಲ್ಲುಗಳನ್ನು ತೆಗೆಸಿ ಅದನ್ನು ಕೆರೆದು ಗಿಲಾವು ಮಾಡಿಸಿದ ಮೇಲೆ ಆ ವ್ಯಾಧಿಯು ತಿರಿಗಿ ಕಾಣಬಂದರೆ
ಯಾಜಕಕಾಂಡ 14 : 44 (KNV)
ಯಾಜಕನು ಬಂದು ನೋಡ ಬೇಕು. ಆಗ ಇಗೋ, ವ್ಯಾಧಿಯು ಮನೆಯಲ್ಲಿ ಹರಡಿ ಕೊಂಡಿದ್ದರೆ ಆ ಮನೆಯಲ್ಲಿ ಅದೊಂದು ಪೀಡಿ ಸುವ ಕುಷ್ಠವಾಗಿರುವದು; ಅದು ಅಶುದ್ಧವಾದದ್ದು.
ಯಾಜಕಕಾಂಡ 14 : 45 (KNV)
ಅವನು ಆ ಮನೆಯನ್ನು ಕೆಡವಿಹಾಕಿ ಅದರ ಕಲ್ಲು ಗಳನ್ನೂ ಮರಗಳನ್ನೂ ಆ ಮನೆಯ ಎಲ್ಲಾ ಧೂಳನ್ನೂ ತೆಗೆದು ಅವುಗಳನ್ನು ಪಟ್ಟಣದ ಹೊರಗೆ ಅಶುದ್ಧವಾದ ಸ್ಥಳಕ್ಕೆ ತೆಗೆದುಕೊಂಡು ಹೋಗಬೇಕು.
ಯಾಜಕಕಾಂಡ 14 : 46 (KNV)
ಇದಲ್ಲದೆ ಆ ಮನೆಯು ಮುಚ್ಚಲ್ಪಟ್ಟ ಕಾಲದಲ್ಲೆಲ್ಲಾ ಅದರೊಳಗೆ ಹೋಗುವವನು ಸಾಯಂಕಾಲದ ವರೆಗೆ ಅಶುದ್ಧ ನಾಗಿರುವನು.
ಯಾಜಕಕಾಂಡ 14 : 47 (KNV)
ಆ ಮನೆಯೊಳಗೆ ಮಲಗಿಕೊಳ್ಳುವ ವನೂ ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು, ಅಲ್ಲದೆ ಆ ಮನೆಯೊಳಗೆ ತಿನ್ನುವವನೂ ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು.
ಯಾಜಕಕಾಂಡ 14 : 48 (KNV)
ಆದರೆ ಯಾಜಕನು ಒಳಗೆ ಬಂದು ಅದನ್ನು ನೋಡಿದಾಗ ಇಗೋ, ಗಿಲಾವು ಮಾಡಿದ ನಂತರ ಆ ಮನೆಯಲ್ಲಿ ಆ ವ್ಯಾಧಿಯು ಹರಡಿಕೊಂಡಿರದಿದ್ದರೆ ಆ ಮನೆಯು ಶುದ್ಧವೆಂದು ಯಾಜಕನು ನಿರ್ಣಯಿಸ ಬೇಕು. ಆ ವ್ಯಾಧಿಯು ಸ್ವಸ್ಥವಾಯಿತು.
ಯಾಜಕಕಾಂಡ 14 : 49 (KNV)
ಆ ಮನೆ ಯನ್ನು ಶುದ್ಧಪಡಿಸುವದಕ್ಕೊಸ್ಕರ ಎರಡು ಪಕ್ಷಿಗಳನ್ನೂ ದೇವದಾರು ಕಟ್ಟಿಗೆಯನ್ನೂ ರಕ್ತವರ್ಣವುಳ್ಳ ದಾರವನ್ನೂ ಹಿಸ್ಸೋಪನ್ನೂ ತೆಗೆದುಕೊಳ್ಳಬೇಕು.
ಯಾಜಕಕಾಂಡ 14 : 50 (KNV)
ಆ ಪಕ್ಷಿಗಳಲ್ಲಿ ಒಂದನ್ನು ಹರಿಯುವ ನೀರಿನ ಮೇಲೆ ಒಂದು ಮಣ್ಣಿನ ಪಾತ್ರೆಯಲ್ಲಿ ವಧಿಸಬೇಕು.
ಯಾಜಕಕಾಂಡ 14 : 51 (KNV)
ತರುವಾಯ ದೇವದಾರು ಕಟ್ಟಿಗೆಯನ್ನೂ ಹಿಸ್ಸೋಪನ್ನೂ ರಕ್ತವರ್ಣವುಳ್ಳ ದಾರ ವನ್ನೂ ಸಜೀವವುಳ್ಳ ಪಕ್ಷಿಯನ್ನೂ ತೆಗೆದುಕೊಂಡು ಅವುಗಳನ್ನು ವಧಿಸಲ್ಪಟ್ಟ ಪಕ್ಷಿಯ ರಕ್ತದಲ್ಲಿ ಮತ್ತು ಹರಿಯುವ ನೀರಿನಲ್ಲಿ ಅದ್ದಿ ಏಳುಸಾರಿ ಆ ಮನೆಗೆ ಚಿಮುಕಿಸಬೇಕು.
ಯಾಜಕಕಾಂಡ 14 : 52 (KNV)
ಅವನು ಪಕ್ಷಿಯ ರಕ್ತದಿಂದಲೂ ಹರಿಯುವ ನೀರಿನಿಂದಲೂ ಸಜೀವವುಳ್ಳ ಪಕ್ಷಿ ಯಿಂದಲೂ ದೇವದಾರು ಕಟ್ಟಿಗೆಯಿಂದಲೂ ಹಿಸ್ಸೋಪಿ ನಿಂದಲೂ ರಕ್ತವರ್ಣವುಳ್ಳ ದಾರದಿಂದಲೂ ಆ ಮನೆ ಯನ್ನು ಶುದ್ಧೀಕರಿಸಬೇಕು.
ಯಾಜಕಕಾಂಡ 14 : 53 (KNV)
ಆದರೆ ಸಜೀವವುಳ್ಳ ಆ ಪಕ್ಷಿಯನ್ನು ಪಟ್ಟಣದ ಆಚೆಗೆ ಬಯಲಾದ ಹೊಲ ಗಳಲ್ಲಿ ಹೋಗಬಿಡಬೇಕು; ಆ ಮನೆಗೋಸ್ಕರ ಪಾಪದ ಪ್ರಾಯಶ್ಚಿತ್ತವನ್ನು ಮಾಡಬೇಕು; ಆಗ ಅದು ಶುದ್ಧ ವಾಗಿರುವದು.
ಯಾಜಕಕಾಂಡ 14 : 54 (KNV)
ಎಲ್ಲಾ ವಿಧವಾದ ಕುಷ್ಠವ್ಯಾಧಿಗೂ ಇಸಬಿಗೂ
ಯಾಜಕಕಾಂಡ 14 : 55 (KNV)
ಬಟ್ಟೆಯ ಮತ್ತು ಮನೆಯ ಕುಷ್ಠಕ್ಕೂ
ಯಾಜಕಕಾಂಡ 14 : 56 (KNV)
ಬಾವು ಚರ್ಮವ್ಯಾಧಿಗೂ ಹೊಳೆಯುವ ಕಲೆಗೂ ನಿಯಮವು ಇದೇ.
ಯಾಜಕಕಾಂಡ 14 : 57 (KNV)
ಅದು ಯಾವಾಗ ಅಶುದ್ಧವಾಗಿರುತ್ತದೋಯಾವಾಗ ಶುದ್ಧವಾಗಿರುತ್ತದೋ ಎಂದು ಅದನ್ನು ಬೋಧಿಸುವ ಹಾಗೆ ಕುಷ್ಠರೋಗದ ವಿಷಯದಲ್ಲಿರುವ ನಿಯಮವು ಇದೇ.
❮
❯