ದಾನಿಯೇಲನು 6 : 1 (KNV)
ದಾರ್ಯಾವೆಷನು ತನ್ನ ರಾಜ್ಯಭಾರವನ್ನು ನಿರ್ವಹಿಸುವದಕ್ಕೋಸ್ಕರ ನೂರಿಪ್ಪತ್ತು ಮಂದಿ ಪ್ರಧಾನರನ್ನು ಆಯಾ ರಾಜ್ಯದ ಆಯಾ ಭಾಗ ಗಳ ಮೇಲೆ ಅಧಿಕಾರಿಗಳನ್ನು ಇರಿಸಿದನು.
ದಾನಿಯೇಲನು 6 : 2 (KNV)
ಇವರ ಮೇಲೆ ಮೂವರು ದೇಶಾಧಿಪತಿಗಳನ್ನು ನೇಮಿಸುವದು ದಾರ್ಯಾವೆಷನಿಗೆ ಹಿತವೆಂದು ತೋಚಿತು. ಇದರಿಂದ ರಾಜನಿಗೆ ಯಾವ ತೊಂದರೆಯೂ ಇಲ್ಲದೆ ಲೆಕ್ಕಗಳು ಸರಿಯಾಗಿ ಒಪ್ಪಿಸಲ್ಪಡುತ್ತಿದ್ದವು. ಇವರಲ್ಲಿ ದಾನಿಯೇ ಲನು ಮೊದಲನೆಯವನಾಗಿದ್ದನು.
ದಾನಿಯೇಲನು 6 : 3 (KNV)
ಆಗ ಈ ದಾನಿ ಯೇಲನಲ್ಲಿ ಉತ್ತಮ ಆತ್ಮವು ಇರುವದರಿಂದ ಅವನು ಪ್ರಧಾನರಿಗಿಂತಲೂ ದೇಶಾಧಿಪತಿಗಿಂತಲೂ ಶ್ರೇಷ್ಠನಾ ಗಿದ್ದನು. ಅರಸನು ಅವನನ್ನು ಸಮಸ್ತ ರಾಜ್ಯದ ಮೇಲೆ ಅಧಿಕಾರಿಯನ್ನಾಗಿ ನೇಮಿಸಲು ಮನಸ್ಸುಳ್ಳವನಾಗಿದ್ದನು.
ದಾನಿಯೇಲನು 6 : 4 (KNV)
ಹೀಗಿರಲು ಪ್ರಧಾನಿಗಳೂ ದೇಶಾಧಿಪತಿಗಳೂ ರಾಜ್ಯ ಭಾರದ ವಿಷಯವಾಗಿ ದಾನಿಯೇಲನ ವಿರೋಧವಾಗಿ ತಪ್ಪುಹೊರಿಸುವದಕ್ಕೆ ಸಂದರ್ಭ ಹುಡುಕುತ್ತಿದ್ದರು. ಆದರೆ ಅವನು ನಂಬಿಗಸ್ತನಾಗಿದ್ದು ಅವನಲ್ಲಿ ತಪ್ಪು ದೋಷವು ಇಲ್ಲದಿದ್ದದ್ದರಿಂದ ಅವರಿಗೆ ಯಾವ ತಪ್ಪೂ ಸಿಗಲಾರದೆ ಹೋಯಿತು.
ದಾನಿಯೇಲನು 6 : 5 (KNV)
ಆಗ ಆ ಮನುಷ್ಯರು --ಈ ದಾನಿಯೇಲನಿಗೆ ವಿರೋಧವಾಗಿ ಅವನ ದೇವರ ನ್ಯಾಯಪ್ರಮಾಣದಲ್ಲಿ ತಪ್ಪು ಸಿಗುವದೇ ಹೊರತು ನಮಗೆ ಇನ್ನೆಲ್ಲೂ ಸಿಗುವದಿಲ್ಲ ಎಂದು ಅಂದು ಕೊಂಡರು.
ದಾನಿಯೇಲನು 6 : 6 (KNV)
ಆಗ ಪ್ರಧಾನರೂ ದೇಶಾಧಿಪತಿಯೂ ಅರಸನ ಬಳಿ ಕೂಡಿಬಂದು ಹೀಗೆಂದರು--ಅರಸನಾದ ದಾರ್ಯಾವೆಷನೇ, ನಿರಂತರವಾಗಿ ಬಾಳು.
ದಾನಿಯೇಲನು 6 : 7 (KNV)
ರಾಜ್ಯದ ಎಲ್ಲಾ ದೇಶಾಧಿಪತಿಗಳೂ ರಾಜ್ಯಪಾಲರೂ ನಾಯ ಕರೂ ಪ್ರಧಾನರೂ ಆಲೋಚನೆಗಾರರೂ ಒಟ್ಟುಗೂಡಿ ಆಲೋಚಿಸಿದ್ದೇನಂದರೆ--ಓ ಅರಸನೇ, ಯಾರಾದರೂ ಮೂವತ್ತು ದಿವಸಗಳವರೆಗೂ ನಿನ್ನನ್ನು ಬಿಟ್ಟು ಬೇರೆ ಯಾವ ದೇವರಿಗಾಗಲಿ ಮನುಷ್ಯರಿಗಾಗಲಿ ವಿಜ್ಞಾ ಪನೆ ಮಾಡಿದ್ದಾದರೆ ಅಂತವರು ಸಿಂಹದ ಗವಿಯಲ್ಲಿ ಹಾಕಲ್ಪಡುವರೆಂಬ ರಾಜಾಜ್ಞೆಯನ್ನು ವಿಧಿಸಿ, ಸ್ಥಿರ ಕಟ್ಟಳೆ ಯನ್ನು ಕೊಡತಕ್ಕದ್ದು.
ದಾನಿಯೇಲನು 6 : 8 (KNV)
ಓ ರಾಜನೇ, ಈಗ ನೀನು ಈ ನಿಬಂಧನೆಯನ್ನು ವಿಧಿಸಿ ಇದು ಬದಲಾಗದಂತೆ ಮೇದ್ಯಯರ ಮತ್ತು ಪಾರಸೀಯರ ನ್ಯಾಯಪ್ರಮಾಣದ ಪ್ರಕಾರ ಇದು ಬೇರೆಯಾಗದಂತೆ ನಿರ್ಣಯವನ್ನು ರೂಪಿಸಿ ಬರಹಕ್ಕೆ ರುಜುಹಾಕು ಅಂದರು.
ದಾನಿಯೇಲನು 6 : 9 (KNV)
ಆದಕಾರಣ ದಾರ್ಯಾವೆಷನು ಆ ಬರಹಕ್ಕೂ ನಿರ್ಣಯಕ್ಕೂ ರುಜು ಹಾಕಿದನು.
ದಾನಿಯೇಲನು 6 : 10 (KNV)
ಯಾವಾಗ ಬರಹಕ್ಕೆ ರುಜುಹಾಕಿದ್ದಾ ಯಿತ್ತೆಂದು ದಾನಿಯೇಲನಿಗೆ ತಿಳಿಯಿತೋ ಆಗ ಅವನು ತನ್ನ ಮನೆಗೆ ಹೋದನು; ಅವನ ಕೋಣೆಯಲ್ಲಿ ಕಿಟಕಿಗಳು ಯೆರೂಸಲೇಮಿಗೆ ಎದುರಾಗಿ ತೆರೆಯಲ್ಪಟ್ಟಿದ್ದ ರಿಂದ ಅವನು ಮೊದಲು ಮಾಡುತ್ತಿದ್ದ ಪ್ರಕಾರವೇ ದಿನಕ್ಕೆ ಮೂರು ಸಾರಿ ಮೊಣಕಾಲೂರಿ ತನ್ನ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆಯನ್ನೂ ಸ್ತೋತ್ರವನ್ನೂ ಸಲ್ಲಿಸಿ ದನು.
ದಾನಿಯೇಲನು 6 : 11 (KNV)
ಆ ಮೇಲೆ ಆ ಮನುಷ್ಯರೆಲ್ಲಾ ಕೂಡಿ ಬಂದು ದಾನಿಯೇಲನು ತನ್ನ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆಯನ್ನೂ ವಿಜ್ಞಾಪನೆಯನ್ನೂ ಮಾಡುತ್ತಿರುವ ದನ್ನು ಕಂಡರು.
ದಾನಿಯೇಲನು 6 : 12 (KNV)
ಅನಂತರ ಅವರು ಹತ್ತಿರ ಬಂದು ಅರಸನ ಮುಂದೆ ರಾಜಾಜ್ಞೆಯ ವಿಷಯವಾಗಿ ಮಾತನಾಡಿ--ಓ ಅರಸನೇ, ಯಾರಾದರೂ ಮೂವತ್ತು ದಿವಸಗಳ ವರೆಗೂ ನಿನ್ನನ್ನು ಬಿಟ್ಟು ಬೇರೆ ಯಾವ ದೇವರಿಗಾಗಲಿ ಮನುಷ್ಯರಿಗಾಗಲಿ ವಿಜ್ಞಾಪನೆ ಮಾಡು ವರೋ ಅವರು ಸಿಂಹದ ಗವಿಯಲ್ಲಿ ಹಾಕಲ್ಪಡುವ ರೆಂಬ ನಿರ್ಣಯಕ್ಕೆ ನೀನು ರುಜುಹಾಕಲಿಲ್ಲವೇ ಅಂದರು. ಅದಕ್ಕೆ ಅರಸನು ಪ್ರತ್ಯುತ್ತರವಾಗಿ--ಮೇದ್ಯ ಯರ ಪಾರಸೀಯರ ಬದಲಾಗದಂತ ನ್ಯಾಯ ಪ್ರಮಾಣದ ಪ್ರಕಾರ ಅದು ಸತ್ಯವೇ ಅಂದನು.
ದಾನಿಯೇಲನು 6 : 13 (KNV)
ಆಗ ಅವರು ಪ್ರತ್ಯುತ್ತರವಾಗಿ ಅರಸನ ಮುಂದೆ--ಯೆಹೂದದ ಸೆರೆಯ ಮಕ್ಕಳಲ್ಲಿ ಒಬ್ಬನಾದ ಆ ದಾನಿಯೇಲನು ಅರಸನಾದ ನಿನ್ನನ್ನಾದರೂ ನೀನು ರುಜುಹಾಕಿದ ನಿರ್ಣಯವನ್ನಾದರೂ ಲಕ್ಷಿಸದೆ ದಿನಕ್ಕೆ ಮೂರು ಸಾರಿ ತನ್ನ ಪ್ರಾರ್ಥನೆಯನ್ನು ಮಾಡುತ್ತಾನೆ ಅಂದರು.
ದಾನಿಯೇಲನು 6 : 14 (KNV)
ಅರಸನು ಯಾವಾಗ ಈ ಮಾತುಗಳನ್ನು ಕೇಳಿದನೋ ಆಗ ತನ್ನಲ್ಲಿಯೇ ಬಹಳವಾಗಿ ಬೇಸರ ಗೊಂಡನು ಮತ್ತು ಅವನನ್ನು ಅದರಿಂದ ತಪ್ಪಿಸ ಬೇಕೆಂದು ತನ್ನ ಹೃದಯದಲ್ಲಿ ತಿಳಿದು ಸೂರ್ಯಾಸ್ತ ಮಾನದ ವರೆಗೂ ಪ್ರಯತ್ನಪಟ್ಟನು.
ದಾನಿಯೇಲನು 6 : 15 (KNV)
ಆಗ ಆ ಮನುಷ್ಯರು ಅರಸನ ಬಳಿಗೆ ಕೂಡಿ ಬಂದು ಅರಸ ನಿಗೆ--ಓ ಅರಸನೇ, ನೀನು ಜಾರಿಗೆ ತಂದಿರುವ ಯಾವ ನಿರ್ಣಯವಾದರೂ ಆಜ್ಞೆಯಾದರೂ ಬದಲಾಯಿಸ ಬಾರದೆಂದು ಮೇದ್ಯಯರ ಮತ್ತು ಪಾರಸೀಯರ ನ್ಯಾಯ ಪ್ರಮಾಣದಲ್ಲಿದೆ ಎಂದು ನಿನಗೆ ತಿಳಿದರಲಿ ಅಂದನು.
ದಾನಿಯೇಲನು 6 : 16 (KNV)
ಆಗ ರಾಜನು ಆಜ್ಞಾಪಿಸಲು ಅವರು ದಾನಿಯೇಲ ನನ್ನು ತಂದು ಸಿಂಹದ ಗವಿಯಲ್ಲಿ ಹಾಕಿದರು. ಅರಸನು ದಾನಿಯೇಲನಿಗೆ--ನೀನು ಯಾವಾಗಲೂ ಪ್ರಾರ್ಥಿ ಸುವ ನಿನ್ನ ದೇವರು ನಿನ್ನನ್ನು ಬಿಡಿಸುವನು ಎಂದು ಹೇಳಿದನು.
ದಾನಿಯೇಲನು 6 : 17 (KNV)
ಬಂಡೆ ತರಿಸಲ್ಪಟ್ಟು ಗುಹೆಯ ಬಾಯಿಯು ಮುಚ್ಚಲ್ಪಟ್ಟಿತು. ಇದಲ್ಲದೆ ದಾನಿಯೇಲನ ವಿಷಯದಲ್ಲಿ ತನ್ನ ಆಲೋಚನೆಯು ಬದಲಾಗದ ಹಾಗೆ ಅರಸನು ತನ್ನ ಮುದ್ರೆಯನ್ನು ಮತ್ತು ತನ್ನ ಪ್ರಭುಗಳ ಮುದ್ರೆಯನ್ನೂ ಅದಕ್ಕೆ ಹಾಕಿದನು.
ದಾನಿಯೇಲನು 6 : 18 (KNV)
ಆ ಮೇಲೆ ಅರಸನು ತನ್ನ ಅರಮನೆಗೆ ಹಿಂತಿರುಗಿ ಉಪವಾಸ ದಿಂದಲೇ ರಾತ್ರಿಯನ್ನು ಕಳೆದನು. ಗಾನ, ವಾದ್ಯಗಳು ಅವನ ಮುಂದೆ ತರಲ್ಪಡಲಿಲ್ಲ; ನಿದ್ರೆಯು ಅವನನ್ನು ಬಿಟ್ಟು ಹೋಯಿತು.
ದಾನಿಯೇಲನು 6 : 19 (KNV)
ಮುಂಜಾನೆಗೆ ಮೊದಲೇ ಅರಸನು ಎದ್ದು ತ್ವರೆಯಾಗಿ ಸಿಂಹಗಳ ಗವಿಯ ಬಳಿಗೆ ಹೋದನು.
ದಾನಿಯೇಲನು 6 : 20 (KNV)
ಗವಿಯ ಹತ್ತಿರ ಬಂದಾಗ ದುಃಖದ ಧ್ವನಿಯಲ್ಲಿ ದಾನಿಯೇಲನ ಕಡೆಗೆ ಕೂಗಿದನು; ಅರಸನು ಮಾತನಾಡಿ ದಾನಿಯೇಲನಿಗೆ--ಜೀವವುಳ್ಳ ದೇವರ ಸೇವಕನಾದ ಓ ದಾನಿಯೇಲನೇ, ನೀನು ಯಾವಾ ಗಲೂ ಸೇವಿಸುವ ಆ ನಿನ್ನ ದೇವರು ನಿನ್ನನ್ನು ಸಿಂಹಗಳಿಂದ ಬಿಡಿಸಲು ಸಮರ್ಥನಾಗಿದ್ದಾನೆಯೇ? ಎಂದು ಕೇಳಿದನು.
ದಾನಿಯೇಲನು 6 : 21 (KNV)
ಆಗ ದಾನಿಯೇಲನು ಅರಸನಿಗೆ--ಓ ಅರಸನೇ, ನೀನು ನಿರಂತರವಾಗಿ ಬಾಳು.
ದಾನಿಯೇಲನು 6 : 22 (KNV)
ನನ್ನ ದೇವರು ತನ್ನ ದೂತನನ್ನು ಕಳುಹಿಸಿ ನನಗೆ ಕೇಡು ಮಾಡದ ಹಾಗೆ ಸಿಂಹಗಳ ಬಾಯಿಗಳನ್ನು ಮುಚ್ಚಿ ಹಾಕಿದ್ದಾನೆ; ಆತನ ಮುಂದೆ ನಾನು ಯಥಾರ್ಥನೆಂದು ತಿಳಿದುಬಂದಿದ್ದೇನೆ. ಓ ಅರಸನೇ, ನಿನ್ನ ಮುಂದೆಯೂ ಸಹ ನಾನು ಯಾರಿಗೂ ಕೇಡುಮಾಡಲಿಲ್ಲ ಎಂದು ಹೇಳಿದನು.
ದಾನಿಯೇಲನು 6 : 23 (KNV)
ಆಗ ಅರಸನು ಅವನ ವಿಷಯದಲ್ಲಿ ಬಹಳ ಸಂತೋಷಪಟ್ಟು ದಾನಿಯೇಲನನ್ನು ಗವಿಯೊಳ ಗಿಂದ ಮೇಲಕ್ಕೆತ್ತಬೇಕೆಂದು ಆಜ್ಞೆ ಮಾಡಿದನು; ಹೀಗೆ ದಾನಿಯೇಲನನ್ನು ಗವಿಯೊಳಗಿಂದ ಮೇಲಕೆತ್ತಿದರು ಮತ್ತು ಅವನು ತನ್ನ ದೇವರಲ್ಲಿ ನಂಬಿಕೆಯಿಟ್ಟದ್ದರಿಂದ ಯಾವ ತರಹ ಹಾನಿಯೂ ಅವನಲ್ಲಿ ಕಾಣಲಿಲ್ಲ.
ದಾನಿಯೇಲನು 6 : 24 (KNV)
ಆಗ ಅರಸನು ಆಜ್ಞಾಪಿಸಲಾಗಿ ದಾನಿಯೇಲನ ಮೇಲೆ ತಪ್ಪುಹೊರಿಸಿದ ಮನುಷ್ಯರನ್ನು ತಂದು ಅವ ರನ್ನೂ ಅವರ ಹೆಂಡತಿ ಮಕ್ಕಳನ್ನೂ ಸಿಂಹಗಳ ಗವಿಯಲ್ಲಿ ಹಾಕಿದರು. ಅವರು ಗವಿಯ ತಳವನ್ನು ಮುಟ್ಟುವದಕ್ಕೆ ಮೊದಲೇ ಸಿಂಹಗಳು ಹಾರಿಬಂದು ಅವರ ಎಲುಬುಗ ಳನ್ನೆಲ್ಲಾ ತುಂಡು ತುಂಡಾಗಿ ಮುರಿದು ಹಾಕಿದವು.
ದಾನಿಯೇಲನು 6 : 25 (KNV)
ಆಗ ಅರಸನಾದ ದಾರ್ಯಾವೆಷನು ಭೂಲೋ ಕದ ಎಲ್ಲಾ ಕಡೆಯಲ್ಲೂ ವಾಸವಾಗಿರುವ ಸಕಲ ಪ್ರಜೆ, ಜನಾಂಗ ಭಾಷೆಗಳವರಿಗೆ ಬರೆದದ್ದೇನಂದರೆ--ನಿಮಗೆ ಸಮಾಧಾನವು ಹೆಚ್ಚಾಗಲಿ.
ದಾನಿಯೇಲನು 6 : 26 (KNV)
ನಾನು ಮಾಡುವ ತೀರ್ಮಾನವೇನಂದರೆ, ನನ್ನ ರಾಜ್ಯದ ಪ್ರತಿಯೊಬ್ಬ ಮನುಷ್ಯರು ದಾನಿಯೇಲನ ದೇವರಿಗೆ ಭಯಭಕ್ತಿ ಯಿಂದ ನಡೆದುಕೊಳ್ಳಬೇಕು. ಯಾಕಂದರೆ ಜೀವವುಳ್ಳ ದೇವರಾಗಿದ್ದು ಎಂದೆಂದಿಗೂ ಸ್ಥಿರವಾದವನು ಆತನೇ. ಆತನ ರಾಜ್ಯವು ನಾಶವಾಗದೆ ಆತನ ಆಳಿಕೆಯು ಶಾಶ್ವತವಾಗಿ ಕೊನೆಯವರೆಗೂ ನಿಲ್ಲುವದು.
ದಾನಿಯೇಲನು 6 : 27 (KNV)
ಆತನೇ ಉದ್ಧರಿಸುವವನೂ ರಕ್ಷಿಸುವವನೂ ಆಗಿದ್ದು ಪರ ಲೋಕದಲ್ಲಿಯೂ ಭೂಲೋಕದಲ್ಲಿಯೂ ಅದ್ಭುತ ಮಹತ್ವಗಳನ್ನು ನಡೆಸುತ್ತಾನೆ; ದಾನಿಯೇಲನನ್ನು ಸಿಂಹ ಗಳ ಸಾಮರ್ಥ್ಯದಿಂದ ಬಿಡಿಸಿದಾತನು ಆತನೇ.
ದಾನಿಯೇಲನು 6 : 28 (KNV)
ಹೀಗೆ ಈ ದಾನಿಯೇಲನು ದಾರ್ಯಾವೆಷನ ಆಳಿಕೆಯಲ್ಲಿಯೂ ಪಾರಸೀಯನಾದ ಕೋರೇಷನ ಆಳಿಕೆಯಲ್ಲಿಯೂ ಅಭಿವೃದ್ಧಿಯಾಗಿ ಬಾಳಿದನು.
❮
❯