ಯೆಹೆಜ್ಕೇಲನು 5 : 1 (KNV)
ಅವರಿಗೆ ರೊಟ್ಟಿ ಮತ್ತು ನೀರಿನ ಕೊರತೆಯಿಂದ ಆಶ್ಚರ್ಯಪಟ್ಟು ಒಬ್ಬರ ಸಂಗಡ ಒಬ್ಬರು ತಮ್ಮ ಅಕ್ರಮಗಳಿಗಾಗಿ ಕ್ಷಯಿಸಿ ಹೋಗುವರು.
ಯೆಹೆಜ್ಕೇಲನು 5 : 2 (KNV)
ಅದರ ಮೂರನೆಯ ಪಾಲನ್ನು ನಗರದ ಮಧ್ಯದಲ್ಲಿ ಮುತ್ತಿಗೆಯ ದಿವಸಗಳು ಮುಗಿದ ಮೇಲೆ ಬೆಂಕಿಯಿಂದ ಸುಡಬೇಕು, ಮೂರನೆಯ ಪಾಲನ್ನು ತೆಗೆದುಕೊಂಡು ಖಡ್ಗದಿಂದ ಸುತ್ತಲೂ ಕಡಿಯಬೇಕು; ಉಳಿದ ಮೂರನೆಯ ಪಾಲನ್ನು ಗಾಳಿಗೆ ಚೆಲ್ಲಬೇಕು ಮತ್ತು ನಾನು ಅವುಗಳ ಹಿಂದೆ ಕತ್ತಿಯನ್ನು ಬೀಸುವೆನು
ಯೆಹೆಜ್ಕೇಲನು 5 : 3 (KNV)
ನೀನು ಅವುಗಳೊಳಗಿಂದ ಕೆಲವನ್ನು ಲೆಕ್ಕದಲ್ಲಿ ತೆಗೆದು ನಿನ್ನ ಸೆರಗುಗಳಲ್ಲಿ ಕಟ್ಟು ಅಂದನು.
ಯೆಹೆಜ್ಕೇಲನು 5 : 4 (KNV)
ತಿರುಗಿ ಅವುಗಳೊಳಗಿಂದ ತೆಗೆದು ಬೆಂಕಿಯ ಮಧ್ಯದಲ್ಲಿ ಹಾಕಿ ಅವುಗಳನ್ನು ಬೆಂಕಿಯಿಂದ ಸುಡು; ಇದರಿಂದ ಆ ಬೆಂಕಿಯು ಸಮಸ್ತ ಇಸ್ರಾಯೇಲಿನ ಮನೆತನದವರೆಗೂ ಹೋಗುವದು.
ಯೆಹೆಜ್ಕೇಲನು 5 : 5 (KNV)
ದೇವರಾದ ಕರ್ತನು ಹೇಳುವದೇನಂದರೆ--ಇದೇ ಯೆರೂಸಲೇಮು; ನಾನು ಅದನ್ನು ಅದರ ಸುತ್ತಲೂ ಇರುವ ಜನಾಂಗಗಳ ದೇಶಗಳ ಮಧ್ಯೆ ಇಟ್ಟಿದ್ದೇನೆ.
ಯೆಹೆಜ್ಕೇಲನು 5 : 6 (KNV)
ಆಕೆಯು (ಅದು) ಜನಾಂಗಗಳಿಗಿಂತ ಹೆಚ್ಚಾಗಿ ನನ್ನ ನ್ಯಾಯಗಳನ್ನೂ ಅದರ ಸುತ್ತಲಿರುವ ದೇಶಗಳಿಗಿಂತ ಹೆಚ್ಚಾಗಿ ನನ್ನ ನಿಯಮಗಳನ್ನೂ ದುಷ್ಟತ್ವಕ್ಕೆ ತಿರುಗಿಸಿ ಬಿಟ್ಟಳು. ಅವರು ನನ್ನ ನ್ಯಾಯಗಳನ್ನು ನಿಯಮಗಳನ್ನು ಅನುಸರಿಸದೆ ನಿರಾಕರಿಸಿದ್ದಾರೆ.
ಯೆಹೆಜ್ಕೇಲನು 5 : 7 (KNV)
ಆದದರಿಂದ ದೇವ ರಾದ ಕರ್ತನು ಹೀಗೆ ಹೇಳುತ್ತಾನೆ--ನೀವು, ನಿಮ್ಮ ಸುತ್ತಲಿರುವ ಜನಾಂಗಗಳಿಗಿಂತ ಅಧಿಕವಾದದ್ದರಿಂದ ನನ್ನ ನಿಯಮಗಳಲ್ಲಿ ನಡೆಯದೇ ಹೋದದ್ದರಿಂದಲೂ ನನ್ನ ನ್ಯಾಯಗಳನ್ನು ಪಾಲಿಸದೆ ಇದ್ದದರಿಂದಲೂ ನಿಮ ಸುತ್ತಲಿರುವ ಜನಾಂಗಗಳ ನ್ಯಾಯಗಳ ಪ್ರಕಾರ ಮಾಡಿದ್ದರಿಂದಲೂ
ಯೆಹೆಜ್ಕೇಲನು 5 : 8 (KNV)
ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು, ನಾನೇ, ನಿನಗೆ ವಿರೋಧವಾಗಿದ್ದೇನೆ; ಜನಾಂಗಗಳ ಕಣ್ಣುಗಳ ಮುಂದೆ ನಿನ್ನ ಮಧ್ಯದಲ್ಲಿ ನ್ಯಾಯತೀರ್ಪನ್ನು ಮಾಡುತ್ತೇನೆ.
ಯೆಹೆಜ್ಕೇಲನು 5 : 9 (KNV)
ನಾನು ಮಾಡದೇ ಇದ್ದದ್ದನ್ನೂ ಇನ್ನು ಮೇಲೆ ಮಾಡದೇ ಇರುವಂಥದ್ದನ್ನೂ ನಿನ್ನ ಅಸಹ್ಯಗಳ ನಿಮಿತ್ತ ವಾಗಿ ನಿನ್ನಲ್ಲಿ ಮಾಡುತ್ತೇನೆ.
ಯೆಹೆಜ್ಕೇಲನು 5 : 10 (KNV)
ಆದದರಿಂದ ನಿನ್ನ ಮಧ್ಯದಲ್ಲಿ ತಂದೆಗಳೇ ಮಕ್ಕಳನ್ನು ತಿನ್ನುವರು; ಮಕ್ಕಳು ಅವರ ತಂದೆಗಳನ್ನು ತಿನ್ನುವರು; ಹೀಗೆ ನಿನ್ನಲ್ಲಿ ನ್ಯಾಯ ತೀರ್ಪನ್ನು ನಡಿಸುವೆನು. ನಿನ್ನಲ್ಲಿ ಉಳಿದವರನ್ನೆಲ್ಲಾ ಗಾಳಿ ಬೀಸುವ ಎಲ್ಲಾ ದಿಕ್ಕಿಗೂ ಚದರಿಸುವೆನು.
ಯೆಹೆಜ್ಕೇಲನು 5 : 11 (KNV)
ಆದಕಾರಣ ನನ್ನ ಜೀವದಾಣೆ, ದೇವರಾದ ಕರ್ತನು --ನಿಶ್ಚಯವಾಗಿ ನೀನು ನನ್ನ ಪರಿಶುದ್ಧ ಸ್ಥಳವನ್ನು ನಿನ್ನ ಎಲ್ಲಾ ಹೇಸಿಗೆಗಳಿಂದಲೂ ಅಸಹ್ಯಗಳಿಂದಲೂ ಅಪವಿತ್ರಪಡಿಸಿದ ಕಾರಣ ನಾನೂ ಸಹ ನಿನ್ನನ್ನು ಕುಂದಿಸುವೆನು ಮತ್ತು ನನ್ನ ಕಣ್ಣು ಕನಿಕರಿಸುವದಿಲ್ಲ, ಇಲ್ಲವೆ ಕಟಾಕ್ಷವನ್ನು ತೋರಿಸುವದಿಲ್ಲ.
ಯೆಹೆಜ್ಕೇಲನು 5 : 12 (KNV)
ನಿನ್ನಲ್ಲಿಯ ಮೂರನೆಯ ಒಂದು ಪಾಲು ವ್ಯಾಧಿಗಳಿಂದ ಸಾಯು ವರು, ಕ್ಷಾಮದಿಂದ ನಿನ್ನಲ್ಲಿ ಅವರು ನಾಶವಾಗುವರು; ಮೂರನೆಯ ಒಂದು ಪಾಲು ನಿನ್ನ ಸುತ್ತಲೂ ಕತ್ತಿಯಿಂದ ಬೀಳುವರು; ಮೂರನೆಯ ಒಂದು ಪಾಲನ್ನು ಎಲ್ಲಾ ದಿಕ್ಕುಗಳಿಗೆ (ಗಾಳಿಗೆ ತೂರಿ) ಚದರಿಸಿ ಅವರ ಮೇಲೆ ಕತ್ತಿಯನ್ನು ಬೀಸುವೆನು.
ಯೆಹೆಜ್ಕೇಲನು 5 : 13 (KNV)
ಈ ಪ್ರಕಾರ ನನ್ನ ಕೋಪವನ್ನು ತೀರಿಸಿಕೊಳ್ಳುವೆನು. ನನ್ನ ಉರಿಯನ್ನು ಅವರ ಮೇಲೆ ಶಾಂತಪಡಿಸಿ, ಸಮಾಧಾನ ಹೊಂದು ವೆನು; ಹೀಗೆ ನಾನು ನನ್ನ ಉರಿಯನ್ನು ಅವರ ಮೇಲೆ ತೀರಿಸಿದ ತರುವಾಯ ಕರ್ತನಾದ ನಾನು ನನ್ನ ಉದ್ದೇಶ ಪೂರ್ವಕವಾಗಿ ಮಾಡಿದ್ದೇನೆಂದು ಅವರಿಗೆ ಗೊತ್ತಾಗು ವದು.
ಯೆಹೆಜ್ಕೇಲನು 5 : 14 (KNV)
ಇದಲ್ಲದೆ ನಾನು ಹಾದು ಹೋಗುವವರೆ ಲ್ಲರ ಕಣ್ಣುಗಳ ಮುಂದೆ ನಿನ್ನ ಸುತ್ತಲಿರುವ ಎಲ್ಲಾ ಜನಾಂಗಗಳ ನಿಂದೆಗೆ ಗುರಿಮಾಡಿ ನೀನು ಹಾಳಾಗುವ ಹಾಗೆ ಮಾಡುತ್ತೇನೆ.
ಯೆಹೆಜ್ಕೇಲನು 5 : 15 (KNV)
ಹೀಗೆ ನಾನು ಕೋಪ ದಿಂದಲೂ ಉಗ್ರತ್ವದಿಂದಲೂ ಉಗ್ರತ್ವದ ಗದರಿಕೆಗ ಳಿಂದಲೂ ನಿನ್ನಲ್ಲಿ ನ್ಯಾಯತೀರ್ಪುಗಳನ್ನು ನಡಿಸು ವಾಗ ನಿನ್ನ ಸುತ್ತಲಿರುವ ಜನಾಂಗಗಳಿಗೆ ನಿಂದೆಯೂ ದೂಷಣೆಯೂ ಶಿಕ್ಷೆಯೂ ವಿಸ್ಮಯವೂ ಆಗುವದು, ಕರ್ತನಾದ ನಾನೇ ಇದನ್ನು ಹೇಳಿದ್ದೇನೆ.
ಯೆಹೆಜ್ಕೇಲನು 5 : 16 (KNV)
ನಾನು ನಾಶಕ್ಕಾಗಿ ಇರುವ ಬರಗಾಲದ ಕೆಟ್ಟ ಬಾಣಗಳನ್ನು ಅವರ ಮೇಲೆ ಕಳುಹಿಸುವಾಗ ನಿಮ್ಮನ್ನು ನಾ ಮಾಡುವದಕ್ಕಾಗಿಯೇ ಅವುಗಳನ್ನು ಕಳುಹಿಸುವೆನು; ನಿಮ್ಮ ಮೇಲೆ ಬರಗಾಲವನ್ನು ಹೆಚ್ಚಿಸಿ ನಿಮ್ಮ ಜೀವನಾಧಾರವಾದ ರೊಟ್ಟಿಯನ್ನು ಮುರಿದು ಹಾಕು ತ್ತೇನೆ.ಹೀಗೆ ನಾನು ಬರಗಾಲವನ್ನೂ ಮತ್ತು ಕೆಟ್ಟ ಮೃಗಗಳನ್ನೂ ನಿಮ್ಮ ಮೇಲೆ ಕಳುಹಿಸುತ್ತೇನೆ. ಅವು ನಿಮ್ಮನ್ನು ದಿಕ್ಕಿಲ್ಲದವರನ್ನಾಗಿ ಮಾಡುವವು. ವ್ಯಾಧಿಯೂ ರಕ್ತವೂ ನಿಮ್ಮಲ್ಲಿ ಹಾದು ಹೋಗುವದು; ನಿಮ್ಮ ಮೇಲೆ ಕತ್ತಿಯನ್ನು ಬೀಸುತ್ತೇನೆ. ಕರ್ತನಾದ ನಾನೇ ಇದನ್ನು ಮಾತನಾಡಿದ್ದೇನೆ.
ಯೆಹೆಜ್ಕೇಲನು 5 : 17 (KNV)
ಹೀಗೆ ನಾನು ಬರಗಾಲವನ್ನೂ ಮತ್ತು ಕೆಟ್ಟ ಮೃಗಗಳನ್ನೂ ನಿಮ್ಮ ಮೇಲೆ ಕಳುಹಿಸುತ್ತೇನೆ. ಅವು ನಿಮ್ಮನ್ನು ದಿಕ್ಕಿಲ್ಲದವರನ್ನಾಗಿ ಮಾಡುವವು. ವ್ಯಾಧಿಯೂ ರಕ್ತವೂ ನಿಮ್ಮಲ್ಲಿ ಹಾದು ಹೋಗುವದು; ನಿಮ್ಮ ಮೇಲೆ ಕತ್ತಿಯನ್ನು ಬೀಸುತ್ತೇನೆ. ಕರ್ತನಾದ ನಾನೇ ಇದನ್ನು ಮಾತನಾಡಿದ್ದೇನೆ.

1 2 3 4 5 6 7 8 9 10 11 12 13 14 15 16 17

BG:

Opacity:

Color:


Size:


Font: