ಯೆಹೆಜ್ಕೇಲನು 41 : 1 (KNV)
ಆಮೇಲೆ, ಅವನು ನನ್ನನು ದೇವಾಲಯಕ್ಕೆ ಕರೆತಂದು ಕಂಬಗಳನ್ನೂ ಒಂದು ಕಡೆಯಲ್ಲಿ ಆರು ಮೊಳ ಅಗಲವೆಂದೂ ಮತ್ತೊಂದು ಕಡೆ ಆರು ಮೊಳ ಅಗಲವೆಂದೂ ಅಳೆದನು. ಇದೇ ಆ ಗುಡಾರದ ಅಡ್ಡಗಲವಾಗಿತ್ತು.
ಯೆಹೆಜ್ಕೇಲನು 41 : 2 (KNV)
ಬಾಗಲಿನ ಅಗಲವು ಹತ್ತು ಮೊಳ ಬಾಗಲಿನ ಪಾರ್ಶ್ವಗಳು ಒಂದು ಕಡೆಯಲ್ಲಿ ಐದು ಮೊಳ, ಇನ್ನೊಂದು ಕಡೆಯಲ್ಲಿ ಐದು ಮೊಳವೆಂದು ಅವನು ಅದರ ಉದ್ದವನ್ನು ನಲವತ್ತು ಮೊಳವೆಂದೂ ಅಗಲವನ್ನು ಇಪ್ಪತ್ತು ಮೊಳವೆಂದೂ ಅಳೆದನು.
ಯೆಹೆಜ್ಕೇಲನು 41 : 3 (KNV)
ಆಮೇಲೆ ಅವನು ಒಳಗೆ ಹೋಗಿ ಬಾಗಿಲಿನ ಕಂಬವನ್ನು ಎರಡು ಮೊಳವೆಂದೂ ಬಾಗಿಲನ್ನು ಆರು ಮೊಳವೆಂದೂ ಬಾಗಿಲಿನ ಅಗಲ ಏಳು ಮೊಳವೆಂದೂ ಅಳೆದನು.
ಯೆಹೆಜ್ಕೇಲನು 41 : 4 (KNV)
ಹೀಗೆ ಅವನು ಅದರ ಉದ್ದ ಇಪ್ಪತ್ತು ಮೊಳವೆಂದೂ ಅಗಲ ಇಪ್ಪತ್ತು ಮೊಳವೆಂದೂ ದೇವಾ ಲಯದ ಮುಂದೆ ಅಳೆದನು; ಇದೇ ಮಹಾಪರಿಶುದ್ಧ ಸ್ಥಳ ಎಂದು ಅವನು ನನಗೆ ಹೇಳಿದನು.
ಯೆಹೆಜ್ಕೇಲನು 41 : 5 (KNV)
ಅನಂತರ ಅವನು ಆಲಯದ ಗೋಡೆಯನ್ನು ಆರು ಮೊಳವೆಂದೂ ಮನೆಯ ಸುತ್ತಲೂ ಎಲ್ಲಾ ಕಡೆಗಳಲ್ಲೂ ಇದ್ದ ಪಾರ್ಶ್ವದ ಕೊಠಡಿಗಳ ಅಗಲ ನಾಲ್ಕು ಮೊಳವೆಂದೂ ಅಳೆದನು.
ಯೆಹೆಜ್ಕೇಲನು 41 : 6 (KNV)
ಆ ಪಾರ್ಶ್ವದ ಕೊಠಡಿಗಳು ನೂರು ಇದ್ದವು. ಒಂದರ ಮೇಲೆ ಒಂದರಂತೆ ಮೂವತ್ತು ಅಂತಸ್ತು ಇದ್ದವು; ಅವರು ಹಿಡಿಯಲ್ಪಡುವ ಹಾಗೆ ಪಾರ್ಶ್ವದ ಕೊಠಡಿಗಳಿಗಾಗಿ ಇರುವ ಆಲಯವನ್ನು ಹೊಂದಿದ ಗೋಡೆಯಲ್ಲಿ ಸುತ್ತ ಲಾಗಿ ಸೇರಿಸಲ್ಪಟ್ಟಿದ್ದವು. ಆದರೆ ಮನೆಯ ಗೋಡೆಯಲ್ಲಿ ಹಿಡಿಸಲ್ಪಡಲಿಲ್ಲ.
ಯೆಹೆಜ್ಕೇಲನು 41 : 7 (KNV)
ಸುತ್ತಣ ಅಂತಸ್ತುಗಳು ಮೇಲೆ ಮೇಲೆ ಹೋದ ಹಾಗೆ ಆಯಾ ಕೊಠಡಿಗಳ ಅಗಲವು ಹೆಚ್ಚುತ್ತಾ ಬಂದಿತು; ಅವು ಮನೆಯನ್ನು ಸುತ್ತಿಕೊಂಡು ಮೇಲೆ ಮೇಲೆ ಹೋದಹಾಗೆಲ್ಲಾ ಅದನ್ನು ಬಿಗಿಯಾಗಿ ಹಿಡಿದು ಕೊಂಡಂತೆ ಇದ್ದವು; ಹೀಗೆ ಮೇಲಿನ ಅಂತಸ್ತುಗಳು ಮನೆಯ ಕಡೆಗೆ ಅಗಲವಾಗುತ್ತಾ ಬಂದವು; ಕೆಳ ಗಿನ ಅಂತಸ್ತಿನಿಂದ ಮಧ್ಯದ ಅಂತಸ್ತಿನ ಮಾರ್ಗವಾಗಿ ಮೇಲಿನ ಅಂತಸ್ತಿಗೆ ಹತ್ತುತ್ತಿದ್ದವು.
ಯೆಹೆಜ್ಕೇಲನು 41 : 8 (KNV)
ಆಲಯದ ಸುತ್ತ ಮುತ್ತಲೂ ಒಂದು ಜಗುಲಿಯನ್ನು ನಾನು ನೋಡಿ ದೆನು. ಅದು ಪಾರ್ಶ್ವದ ಕೊಠಡಿಗಳಿಗೆ ತಳಹದಿಯಾಗಿ ನೆಲಮಟ್ಟದಿಂದ ಸುಮಾರು ಆರು ಮಹಾ ಮೊಳಗಳಷ್ಠು ಎತ್ತರವಾಗಿತ್ತು.
ಯೆಹೆಜ್ಕೇಲನು 41 : 9 (KNV)
ಹೊರಗಡೆಯಲ್ಲಿ ಪಾರ್ಶ್ವದ ಕೊಠಡಿ ಗಳಿಗಾದ ಗೋಡೆಯ ದಪ್ಪವು ಐದು ಮೊಳ ಮತ್ತು ಉಳಿದದ್ದು ಒಳಗಿನ ಪಾರ್ಶ್ವಕೊಠಡಿಗಳ ಸ್ಥಳವಾಗಿತ್ತು.
ಯೆಹೆಜ್ಕೇಲನು 41 : 10 (KNV)
ಕೊಠಡಿಗಳ ನಡುವೆ ಆಲಯದ ಸುತ್ತಲೂ ಪ್ರತಿ ಯೊಂದು ಕಡೆಗೂ ಇಪ್ಪತ್ತು ಮೊಳ ಅಗಲವಿತ್ತು;
ಯೆಹೆಜ್ಕೇಲನು 41 : 11 (KNV)
ಪಾರ್ಶ್ವದ ಕೊಠಡಿಗಳ ಬಾಗಿಲುಗಳು ಬಿಡಲ್ಪಟ್ಟ ಸ್ಥಳದ ಕಡೆಗೆ ಇದ್ದವು, ಉತ್ತರದ ಕಡೆಗೆ ಒಂದು ಬಾಗಿಲೂ ದಕ್ಷಿಣದ ಕಡೆಗೆ ಮತ್ತೊಂದು ಬಾಗಿಲೂ ಇತ್ತು; ಬಿಡಲ್ಪಟ್ಟ ಸ್ಥಳದ ಅಗಲವು ಸುತ್ತಲೂ ಐದು ಮೊಳವಾಗಿತ್ತು.
ಯೆಹೆಜ್ಕೇಲನು 41 : 12 (KNV)
ಈಗ ಪ್ರತ್ಯೇಕಿಸಿದ ಸ್ಥಳಕ್ಕೆ ಎದುರಾಗಿ ಪಶ್ಚಿಮದ ಕಡೆಗಿದ್ದ ಕಟ್ಟಡವು ಎಪ್ಪತ್ತು ಮೊಳ ಅಗಲವಾಗಿತ್ತು; ಕಟ್ಟಡದ ಗೋಡೆಯು ಸುತ್ತಲೂ ಐದು ಮೊಳ ದಪ್ಪವಾಗಿತ್ತು; ಅದರ ಉದ್ದವು ತ್ತೊಂಭತ್ತು ಮೊಳ ವಾಗಿತ್ತು.
ಯೆಹೆಜ್ಕೇಲನು 41 : 13 (KNV)
ಹೀಗೆ ಅವನು ಆಲಯವನ್ನು ನೂರು ಮೊಳ ಉದ್ದವೆಂದೂ; ಪ್ರತ್ಯೇಕಿಸಿದ ಸ್ಥಳವನ್ನೂ ಕಟ್ಟಡವನ್ನೂ ಗೋಡೆಗಳ ಸಹಿತವಾಗಿ ನೂರುಮೊಳ ಉದ್ದವೆಂದೂ ಅಳೆದನು;
ಯೆಹೆಜ್ಕೇಲನು 41 : 14 (KNV)
ಇದಲ್ಲದೆ ಆಲಯದ ಮುಂಭಾಗವು ಪೂರ್ವದ ಕಡೆಗೆ ಇದ್ದ ಪ್ರತ್ಯೇಕ ಸ್ಥಳಗಳು ನೂರು ಮೊಳ ಅಗಲವಾಗಿದ್ದವು.
ಯೆಹೆಜ್ಕೇಲನು 41 : 15 (KNV)
ಪ್ರತ್ಯೇಕ ಸ್ಥಳಕ್ಕೆ ಎದುರಾಗಿಯೂ ಹಿಂದೆಯೂ ಇದ್ದಂತ ಕಟ್ಟಡ ವನ್ನು ಅಂದರೆ ಕೈಪಡಸಾಲೆಗಳನ್ನೂ ಆ ಕಡೆ ಈ ಕಡೆ ನೂರು ಮೊಳವೆಂದೂ ಅಳೆದನು; ಇದರೊಳಗೆ ಒಳಗಿನ ದೇವಾಲಯವೂ ಅಂಗಳದ ದ್ವಾರಂಗಣ ಶಾಲೆಗಳೂ ಇದ್ದವು;
ಯೆಹೆಜ್ಕೇಲನು 41 : 16 (KNV)
ಬಾಗಲುಗಳ ಕಂಬಗಳನ್ನೂ ಇಕ್ಕಟ್ಟಾದ ಕಿಟಕಿ ಗಳನ್ನೂ ಅದರ ಸುತ್ತಲೂ ಇದ್ದಂತಹ ಮೂರು ಅಂತಸ್ತು ಗಳಲ್ಲಿ ಬಾಗಲಿಗೆ ಎದುರಾಗಿ ಸುತ್ತಲೂ ಮರದಿಂದ ಹೊದಿಸಲ್ಪಟ್ಟಿದ್ದವು. ಪಡಸಾಲೆಗಳನ್ನೂ ನೆಲವು ಮೊದಲ್ಗೊಂಡು ಮುಚ್ಚಲ್ಪಟ್ಟಂತ ಕಿಟಕಿಗಳ ವರೆಗೂ;
ಯೆಹೆಜ್ಕೇಲನು 41 : 17 (KNV)
ಬಾಗಿಲಿನ ಮೇಲಕ್ಕೂ ಒಳಗಿನ ಆಲಯದ ವರೆಗೂ ಹೊರಗೂ ಸುತ್ತಲೂ ಇದ್ದ ಗೋಡೆ, ಒಳಗೂ ಹೊರಗೂ ಎಲ್ಲವನ್ನೂ ಅಳೆದನು.
ಯೆಹೆಜ್ಕೇಲನು 41 : 18 (KNV)
ಅದು ಕೆರೂಬಿ ಗಳಿಂದಲೂ ಖರ್ಜೂರದ ಮರಗಳಿಂದಲೂ ಮಾಡ ಲ್ಪಟ್ಟಿತ್ತು. ಕೆರೂಬಿ ಮತ್ತು ಕೆರೂಬಿಗಳ ಮಧ್ಯೆ ಖರ್ಜೂರದ ಮರವಿತ್ತು ಪ್ರತಿಯೊಂದು ಕೆರೂಬಿಗೂ ಎರಡೆರಡು ಮುಖ.
ಯೆಹೆಜ್ಕೇಲನು 41 : 19 (KNV)
ಹೀಗೆ ಈ ಕಡೆ ಖರ್ಜೂರದ ಮರದ ಎದುರಿಗೆ ಪ್ರಾಯದ ಸಿಂಹದ ಮುಖವೂ ಇತ್ತು; ಹೀಗೆ ಆಲಯದ ತುಂಬಾ ಸುತ್ತಮುತ್ತಲೂ ಮಾಡಲ್ಪಟ್ಟಿತ್ತು.
ಯೆಹೆಜ್ಕೇಲನು 41 : 20 (KNV)
ನೆಲವು ಮೊದಲುಗೊಂಡು ಬಾಗ ಲಿನ ಮೇಲಿನ ವರೆಗೂ ದೇವಾಲಯದ ಗೋಡೆ ಯಲ್ಲಿಯೂ ಕೆರೂಬಿಗಳೂ ಮತ್ತು ಖರ್ಜೂರದ ಮರಗಳೂ ಮಾಡಲ್ಪಟ್ಟಿದ್ದವು.
ಯೆಹೆಜ್ಕೇಲನು 41 : 21 (KNV)
ದೇವಾಲಯದ ಕಂಬ ಗಳು ಚಚ್ಚೌಕವಾಗಿದ್ದವು, ಪರಿಶುದ್ಧ ಸ್ಥಳವೂ ಸಹ ಹಾಗೆಯೇ ಇತ್ತು; ಒಂದು ಆಕಾರವು ಮತ್ತೊಂದು ಆಕಾರವನ್ನು ಹೋಲುತ್ತಿತ್ತು.
ಯೆಹೆಜ್ಕೇಲನು 41 : 22 (KNV)
ಮರದ ಯಜ್ಞ ವೇದಿಯು ಮೂರುಮೊಳ ಎತ್ತರವಾಗಿತ್ತು; ಉದ್ದವು ಎರಡು ಮೊಳವಾಗಿತ್ತು; ಅದರ ಮೂಲೆಗಳೂ ಉದ್ದವೂ ಪಾರ್ಶ್ವವೂ ಮರದಿಂದಲೇ ಮಾಡಲ್ಪಟ್ಟಿತ್ತು; ಅವನು ನನಗೆ ಹೇಳಿದ್ದೇನಂದರೆ--ಕರ್ತನ ಮುಂದೆ ಇರುವ ಮೇಜು ಇದೇ ಎಂದು ಹೇಳಿದನು.
ಯೆಹೆಜ್ಕೇಲನು 41 : 23 (KNV)
ದೇವಾ ಲಯಕ್ಕೂ ಪರಿಶುದ್ಧ ಸ್ಥಳಕ್ಕೂ ಎರಡು ಬಾಗಲುಗಳಿ ದ್ದವು.
ಯೆಹೆಜ್ಕೇಲನು 41 : 24 (KNV)
ಆ ಎರಡು ಬಾಗಲುಗಳಿಗೆ ಎರಡು ಕದಗಳಿ ದ್ದವು, ಆ ಸುತ್ತಿಕೊಳ್ಳುವ ಕದಗಳು ಒಂದು ಬಾಗಲಿಗೆ ಎರಡು ಇನ್ನೊಂದು ಬಾಗಲಿಗೆ ಎರಡು ಇದ್ದವು.
ಯೆಹೆಜ್ಕೇಲನು 41 : 25 (KNV)
ಆಲಯದ ಬಾಗಲುಗಳ ಮೇಲೆ ಕೆರೂಬಿಗಳೂ ಖರ್ಜೂರದ ಮರಗಳೂ ಗೋಡೆಗಳ ಮೇಲೆ ಮಾಡ ಲ್ಪಟ್ಟ ಹಾಗೆಯೇ ಮಾಡಲ್ಪಟ್ಟಿದ್ದವು; ದ್ವಾರಂಗಣದ ಮುಂದೆ ಹೊರಗಡೆಯಲ್ಲಿ ದಪ್ಪವಾದ ಹಲಗೆಗಳಿದ್ದವು.ಇದಲ್ಲದೆ, ಈ ಕಡೆಯೂ ಆ ಕಡೆಯೂ ದ್ವಾರಾಂಗ ಣದ ಪಕ್ಕಕ್ಕೂ ಆಲಯದ ಪಾರ್ಶ್ವ ಕೊಠಡಿಗಳಿಗೂ ಇಕ್ಕಟ್ಟಾದ ಕಿಟಕಿಗಳೂ ಇದ್ದವು; ದಪ್ಪವಾದ ಹಲಗೆಗಳೂ ಸಹ ಇದ್ದವು.
ಯೆಹೆಜ್ಕೇಲನು 41 : 26 (KNV)
ಇದಲ್ಲದೆ, ಈ ಕಡೆಯೂ ಆ ಕಡೆಯೂ ದ್ವಾರಾಂಗ ಣದ ಪಕ್ಕಕ್ಕೂ ಆಲಯದ ಪಾರ್ಶ್ವ ಕೊಠಡಿಗಳಿಗೂ ಇಕ್ಕಟ್ಟಾದ ಕಿಟಕಿಗಳೂ ಇದ್ದವು; ದಪ್ಪವಾದ ಹಲಗೆಗಳೂ ಸಹ ಇದ್ದವು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26

BG:

Opacity:

Color:


Size:


Font: