ಯೆಹೆಜ್ಕೇಲನು 35 : 1 (KNV)
ಇದಲ್ಲದೆ ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ,
ಯೆಹೆಜ್ಕೇಲನು 35 : 2 (KNV)
ಮನುಷ್ಯಪುತ್ರನೇ, ನೀನು ಸೇಯಾರ್‌ ಪರ್ವತಕ್ಕೆ ಅಭಿಮುಖವಾಗಿ ಅದಕ್ಕೆ ವಿರೋಧವಾಗಿ ಪ್ರವಾದಿಸು;
ಯೆಹೆಜ್ಕೇಲನು 35 : 3 (KNV)
ಅದಕ್ಕೆ ಹೇಳು--ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ಸೇಯಾರ್‌ ಪರ್ವತವೇ, ನಾನು ನಿನಗೆ ವಿರುದ್ಧವಾಗಿ ದ್ದೇನೆ. ನಾನು ನನ್ನ ಕೈಯನ್ನು ನಿನಗೆ ವಿರುದ್ಧವಾಗಿ ಚಾಚುತ್ತೇನೆ. ನಾನು ನಿನ್ನನ್ನು ಸಂಪೂರ್ಣವಾಗಿ ನಾಶಮಾಡುತ್ತೇನೆ.
ಯೆಹೆಜ್ಕೇಲನು 35 : 4 (KNV)
ನಾನು ನಿನ್ನ ಪಟ್ಟಣಗಳನ್ನು ನಾಶಮಾಡಲು ನೀನು ಹಾಳಾಗುವಿ; ಆಗ ನಾನೇ ಕರ್ತನೆಂದು ನೀನು ತಿಳಿದುಕೊಳ್ಳುವಿ.
ಯೆಹೆಜ್ಕೇಲನು 35 : 5 (KNV)
ನೀನು ಇಸ್ರಾಯೇಲ್ಯರ ಮೇಲೆ ದೀರ್ಘ ದ್ವೇಷವಿಟ್ಟು ಅವರ ಅಪರಾಧದ ಕೊನೆಯ ಕಾಲದಲ್ಲಿ ಅಪತ್ತು ಸಂಭವಿಸಿ ದಾಗ ಅವರನ್ನು ಕತ್ತಿಯ ಬಾಯಿಗೆ ಗುರಿಮಾಡಿದಿ.
ಯೆಹೆಜ್ಕೇಲನು 35 : 6 (KNV)
ಆದದರಿಂದ ದೇವರಾದ ಕರ್ತನು ಹೇಳುತ್ತಾನೆ-- ನನ್ನ ಜೀವದಾಣೆ, ನಾನು ನಿನ್ನನ್ನು ರಕ್ತಮಯವಾಗಿ ಮಾಡುವೆನು; ರಕ್ತದ ಕೋಡಿಯು ನಿನ್ನನ್ನು ಬೆನ್ನಟ್ಟು ವದು; ನೀನು ರಕ್ತಸುರಿಸುವದಕ್ಕೆ ಹೇಸದೆ ಹೋದ ಕಾರಣ ರಕ್ತಪ್ರವಾಹವೇ ನಿನ್ನ ಬೆನ್ನು ಹತ್ತುವದು.
ಯೆಹೆಜ್ಕೇಲನು 35 : 7 (KNV)
ಹೀಗೆ ನಾನು ಸೇಯಾರ್‌ ಪರ್ವತವನ್ನು ಸಂಪೂರ್ಣ ಹಾಳು ಮಾಡುವೆನು; ಅದರೊಳಗೆ ಹಾದು ಹೋಗು ವವನನ್ನೂ ಹಿಂತಿರುಗುವವನನ್ನೂ ಕಡಿದುಹಾಕುವೆನು.
ಯೆಹೆಜ್ಕೇಲನು 35 : 8 (KNV)
ಅದರ ಪರ್ವತಗಳನ್ನು ನಿನ್ನವರ ಹೆಣಗಳಿಂದ ತುಂಬಿ ಸುವರು. ನಿನ್ನ ಕತ್ತಿಯಿಂದ ಹತವಾದವರು ನಿನ್ನ ಹಳ್ಳ ಕೊಳ್ಳಗಳಲ್ಲಿಯೂ ಬೀಳುವರು.
ಯೆಹೆಜ್ಕೇಲನು 35 : 9 (KNV)
ನಾನು ನಿನ್ನನ್ನು ನಿತ್ಯ ನಾಶಕ್ಕೆ ಗುರಿಮಾಡುವೆನು; ನಿನ್ನ ನಗರಗಳು ಹಿಂತಿರುಗುವದಿಲ್ಲ ನಾನೇ ಕರ್ತನೆಂದು ನೀನು ತಿಳಿದುಕೊಳ್ಳುವಿ.
ಯೆಹೆಜ್ಕೇಲನು 35 : 10 (KNV)
ಕರ್ತನು ಅವುಗಳಲ್ಲಿರುವದರಿಂದ ಈ ಎರಡು ಜನಾಂಗಗಳೂ ಈ ಎರಡು ರಾಜ್ಯಗಳೂ ನನ್ನವಾಗು ವವು. ನೀನು ಹೇಳಿದ್ದರಿಂದ ನಾವು ಅವುಗಳನ್ನು ವಶಮಾಡಿಕೊಳ್ಳುತ್ತೇವೆ.
ಯೆಹೆಜ್ಕೇಲನು 35 : 11 (KNV)
ಆದದರಿಂದ ದೇವರಾದ ಕರ್ತನು ಹೇಳುತ್ತಾನೆ--ನನ್ನ ಜೀವದಾಣೆ, ನಾನು ನಿನ್ನ ಕೋಪದ ಪ್ರಕಾರವೂ ನೀನು ದ್ವೇಷದಿಂದ ಅವರಿಗೆ ವಿರುದ್ಧವಾಗಿ ನಡೆಸಿದ ಹೊಟ್ಟೇಕಿಚ್ಚಿನ ಪ್ರಕಾರವೂ ನಿನಗೆ ನ್ಯಾಯತೀರಿಸಿದ ಮೇಲೆ ನಾನು ಅವರ ಮಧ್ಯದಲ್ಲಿ ನನ್ನನ್ನು ತಿಳಿಯಪಡಿಸುತ್ತೇನೆ.
ಯೆಹೆಜ್ಕೇಲನು 35 : 12 (KNV)
ಆಗ ನಾನೇ ಕರ್ತನೆಂದು ನೀನು ತಿಳಿಯುವಿ ಮತ್ತು ಇಸ್ರಾಯೇಲಿನ ಪರ್ವತಗಳ ವಿಷಯವಾಗಿ--ಅವು ಹಾಳಾಗಿವೆ ನಮಗೆ ಆಹಾರವಾಗಿ ಕೊಡಲ್ಪಟ್ಟಿವೆ ಎಂದು ಹೇಳಿ ಮಾತ ನಾಡಿದ ನಿನ್ನ ಎಲ್ಲಾ ದೂಷಣೆಗಳನ್ನು ಕೇಳಿರುವೆನೆಂದು ತಿಳಿಯುವಿ.
ಯೆಹೆಜ್ಕೇಲನು 35 : 13 (KNV)
ಹೀಗೆ ನಿಮ್ಮ ಬಾಯಿಂದ ನೀವು ನನಗೆ ವಿರೋಧವಾಗಿ ಕೊಚ್ಚಿದ್ದನ್ನೂ ನನಗೆ ವಿರೋಧವಾಗಿ ನಿಮ್ಮ ಮಾತುಗಳಿಂದ ಹೆಚ್ಚಿಸಿದ್ದನ್ನೂ ನಾನು ಕೇಳಿದ್ದೇನೆ.
ಯೆಹೆಜ್ಕೇಲನು 35 : 14 (KNV)
ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಯಾವಾಗ ಸಂಪೂರ್ಣ ಭೂಮಿಯು ಸಂತೋಷಪಡು ತ್ತದೋ ಆಗ ನಾನು ನಿನ್ನನ್ನು ಹಾಳುಮಾಡುವೆನು.ಹೇಗೆ ನೀನು ಇಸ್ರಾಯೇಲ್ಯರ ಸ್ವಾತಂತ್ರ್ಯದ ನಾಶನಕ್ಕೆ ಸಂತೋಷಪಟ್ಟೆಯೋ ಹಾಗೆಯೇ ನಿನ್ನ ನಾಶನಕ್ಕೆ ಸಂತೋಷಪಡುವ ಹಾಗೆ ಮಾಡುವೆನು. ಓ ಸೇಯಾರ್‌ ಪರ್ವತವೇ ಮತ್ತು ಸಮಸ್ತ ಎದೋಮೇಸಂಪೂರ್ಣವಾಗಿ ಹಾಳಾಗುವಿ; ಆಗ ನಾನೇ ಕರ್ತ ನೆಂದು ನಿಮಗೆ ತಿಳಿಯುವದು.
ಯೆಹೆಜ್ಕೇಲನು 35 : 15 (KNV)
ಹೇಗೆ ನೀನು ಇಸ್ರಾಯೇಲ್ಯರ ಸ್ವಾತಂತ್ರ್ಯದ ನಾಶನಕ್ಕೆ ಸಂತೋಷಪಟ್ಟೆಯೋ ಹಾಗೆಯೇ ನಿನ್ನ ನಾಶನಕ್ಕೆ ಸಂತೋಷಪಡುವ ಹಾಗೆ ಮಾಡುವೆನು. ಓ ಸೇಯಾರ್‌ ಪರ್ವತವೇ ಮತ್ತು ಸಮಸ್ತ ಎದೋಮೇಸಂಪೂರ್ಣವಾಗಿ ಹಾಳಾಗುವಿ; ಆಗ ನಾನೇ ಕರ್ತ ನೆಂದು ನಿಮಗೆ ತಿಳಿಯುವದು.

1 2 3 4 5 6 7 8 9 10 11 12 13 14 15

BG:

Opacity:

Color:


Size:


Font: