ಯೆರೆಮಿಯ 7 : 1 (KNV)
ಕರ್ತನು ಹೇಳುವದೇನಂದರೆ--ಆ ಕಾಲದಲ್ಲಿ ಯೆಹೂದದ ಅರಸರು ಅವರ ಪ್ರಧಾನರು ಯಾಜಕರು ಪ್ರವಾದಿಗಳು ಯೆರೂಸಲೇಮಿನ ನಿವಾಸಿಗಳು ಇವರೆಲ್ಲರ ಎಲುಬುಗಳನ್ನು ಅವರ ಸಮಾಧಿಗಳೊಳಗಿಂದ ಹೊರಗೆ ಅವರು ತರುವರು.
ಯೆರೆಮಿಯ 7 : 2 (KNV)
ಅವರು ಪ್ರೀತಿಸಿ ಸೇವಿಸಿ ಹಿಂಬಾಲಿಸಿ ಹುಡುಕಿ ಆರಾಧಿಸಿದ ಸೂರ್ಯ ಚಂದ್ರ ಸಮಸ್ತ ಆಕಾಶ ಸೈನ್ಯದ ಮುಂದೆ ಅವುಗಳನ್ನು ಚೆಲ್ಲುವರು; ಅವು ಕೂಡಿಸಲ್ಪಡವು, ಹೂಣಿಡಲ್ಪಡವು, ಅವು ಭೂಮಿಯ ಮೇಲೆ ಗೊಬ್ಬರವಾಗುವವು.
ಯೆರೆಮಿಯ 7 : 3 (KNV)
ನಾನು ಉಳಿದವರನ್ನು ಓಡಿಸಿದ ಎಲ್ಲಾ ಸ್ಥಳಗಳಲ್ಲಿ ಜೀವಕ್ಕಿಂತ ಮರಣವನ್ನೇ ಆಯ್ದುಕೊಳ್ಳುವರೆಂದು ಸೈನ್ಯಗಳ ಕರ್ತನು ಅನ್ನುತ್ತಾನೆ.
ಯೆರೆಮಿಯ 7 : 4 (KNV)
ಇದಲ್ಲದೆ ನೀನು ಅವರಿಗೆ ಹೇಳಬೇಕಾದದ್ದೇ ನಂದರೆ ಕರ್ತನು ಹೀಗೆ ಹೇಳುತ್ತಾನೆ--ಅವರು ಬಿದ್ದು ಮತ್ತೆ ಏಳರೋ? ಹಿಂಜರಿದವನು ಮತ್ತೆ ಬರುವದಿ ಲ್ಲವೋ?
ಯೆರೆಮಿಯ 7 : 5 (KNV)
ಹಾಗಾದರೆ ಈ ಯೆರೂಸಲೇಮಿನ ಜನರು ನಿತ್ಯವಾದ ಹಿಂಜರಿಯುವಿಕೆಯಿಂದ ಯಾಕೆ ಹಿಂತಿರು ಗಿದ್ದಾರೆ? ಮೋಸವನ್ನು ಬಿಗಿಯಾಗಿ ಹಿಡಿಯುತ್ತಾರೆ, ಹಿಂದಿರುಗುವದಕ್ಕೆ ನಿರಾಕರಿಸುತ್ತಾರೆ.
ಯೆರೆಮಿಯ 7 : 6 (KNV)
ನಾನು ಕಿವಿ ಗೊಟ್ಟು ಕೇಳಿದೆನು, ಆದರೆ ಅವರು ಯಥಾರ್ಥವಾಗಿ ಮಾತನಾಡಲಿಲ್ಲ. ಯಾವನಾದರೂ--ನಾನು ಎಂಥಾ ಕೆಲಸ ಮಾಡಿದ್ದೇನೆ ಎಂದು ಅಂದುಕೊಂಡು ತನ್ನ ಕೆಟ್ಟತನದ ನಿಮಿತ್ತ ಪಶ್ಚಾತ್ತಾಪ ಪಡಲಿಲ್ಲ; ಕುದುರೆ ಯುದ್ಧಕ್ಕೆ ರಭಸವಾಗಿ ಓಡುವ ಪ್ರಕಾರ ಪ್ರತಿಯೊ ಬ್ಬನೂ ತನ್ನ ದಾರಿಗೆ ತಿರುಗಿದ್ದಾನೆ.
ಯೆರೆಮಿಯ 7 : 7 (KNV)
ಹೌದು, ಆಕಾಶ ದಲ್ಲಿ ಬಕಪಕ್ಷಿಯು ತನ್ನ ನಿಯಮಿತ ಕಾಲಗಳನ್ನು ತಿಳಿ ಯುತ್ತದೆ; ಪಾರಿವಾಳವೂ ಬಾನಕ್ಕಿಯೂ ಕೊಕ್ಕರೆಯೂ ತಾವು ಬರತಕ್ಕ ಸಮಯವನ್ನು ಗಮನಿಸುತ್ತವೆ. ಆದರೆ ನನ್ನ ಜನರು ಕರ್ತನ ನ್ಯಾಯ ತೀರ್ಪನ್ನು ಅರಿಯರು.
ಯೆರೆಮಿಯ 7 : 8 (KNV)
ಹೀಗಿರಲು--ನಾವು ಜ್ಞಾನಿಗಳು, ಕರ್ತನ ನ್ಯಾಯ ಪ್ರಮಾಣವು ನಮ್ಮ ಸಂಗಡ ಇದೆ ಎಂದು ನೀವು ಹೇಳುವದು ಹೇಗೆ? ಇಗೋ, ನಿಶ್ಚಯವಾಗಿ ಆತನು ಅದನ್ನು ವ್ಯರ್ಥವಾಗಿ ಮಾಡಿದ್ದಾನೆ. ಶಾಸ್ತ್ರಿಗಳ ಲೇಖ ನಿಯು ವ್ಯರ್ಥವಾಗಿದೆ.
ಯೆರೆಮಿಯ 7 : 9 (KNV)
ಜ್ಞಾನಿಗಳು ನಾಚಿಕೊಂಡಿ ದ್ದಾರೆ, ದಿಗಿಲುಪಟ್ಟು ಸಿಕ್ಕಿಕೊಂಡಿದ್ದಾರೆ; ಇಗೋ, ಕರ್ತನ ವಾಕ್ಯವನ್ನು ನಿರಾಕರಿಸಿದ್ದಾರೆ. ಹಾಗಾದರೆ ಅವರಲ್ಲಿ ಎಂಥಾ ಜ್ಞಾನವಿದೆ?
ಯೆರೆಮಿಯ 7 : 10 (KNV)
ಆದದರಿಂದ ಅವರ ಹೆಂಡತಿಯರನ್ನು ಬೇರೊಬ್ಬರಿಗೂ ಅವರ ಹೊಲಗಳನ್ನು ಸ್ವಾಧೀನಮಾಡಿಕೊಳ್ಳುವವರಿಗೂ ನಾನು ಕೊಡುವೆನು; ಚಿಕ್ಕವನು ಮೊದಲುಗೊಂಡು ದೊಡ್ಡವನ ತನಕ ಅವರೆಲ್ಲರು ಲೋಭಕ್ಕೆ ಒಪ್ಪಿಸಿಕೊಟ್ಟಿದ್ದಾರೆ. ಪ್ರವಾದಿ ಮೊದಲುಗೊಂಡು ಯಾಜಕನ ವರೆಗೂ ಪ್ರತಿ ಯೊಬ್ಬನು ಮೋಸದಿಂದ ವರ್ತಿಸುತ್ತಾನೆ.
ಯೆರೆಮಿಯ 7 : 11 (KNV)
ಅವರು ನನ್ನ ಜನರ ಮಗಳ ಗಾಯವನ್ನು ಸ್ವಲ್ಪವಾಗಿ ಸ್ವಸ್ಥಮಾಡಿ ಸಮಾಧಾನವಿಲ್ಲದಿರುವಾಗ--ಸಮಾಧಾನ, ಸಮಾ ಧಾನ ಎಂದನ್ನುತ್ತಾರೆ. ಅಸಹ್ಯವಾದದ್ದನ್ನು ಮಾಡಿದ ಮೇಲೆ ಅವರು ನಾಚಿಕೆಪಟ್ಟರೋ?
ಯೆರೆಮಿಯ 7 : 12 (KNV)
ಇಲ್ಲ, ಸ್ವಲ್ಪ ವಾದರೂ ನಾಚಿಕೆಪಡಲಿಲ್ಲ; ಇಲ್ಲವೆ ಅವರು ಲಜ್ಜೆ ಯನ್ನು ಅರಿಯರು. ಆದದರಿಂದ ಬೀಳುವವರೊಳಗೆ ಅವರು ಬೀಳುವರು; ಅವರು ವಿಚಾರಿಸಲ್ಪಡುವ ಕಾಲದಲ್ಲಿ ಕೆಳಗೆ ಹಾಕಲ್ಪಡು ವರು ಎಂದು ಕರ್ತನು ಹೇಳುತ್ತಾನೆ.
ಯೆರೆಮಿಯ 7 : 13 (KNV)
ನಾನು ಅವರನ್ನು ನಿಜವಾಗಿಯೂ ಸಂಹರಿಸುವೆನೆಂದು ಕರ್ತನು ಅನ್ನುತ್ತಾನೆ; ದ್ರಾಕ್ಷೇ ಗಿಡದಲ್ಲಿ ಹಣ್ಣುಗಳು ಇರುವದಿಲ್ಲ; ಇಲ್ಲವೆ ಅಂಜೂರ ಮರದಲ್ಲಿ ಹಣ್ಣುಗಳು ಇರುವದಿಲ್ಲ; ಎಲೆಯು ಬಾಡು ವದು; ನಾನು ಅವರಿಗೆ ಕೊಟ್ಟವುಗಳು ಅವರನ್ನು ಬಿಟ್ಟುಹೋಗುವವು.
ಯೆರೆಮಿಯ 7 : 14 (KNV)
ನಾವು ಯಾಕೆ ಸುಮ್ಮನೆ ಕೂತುಕೊಳ್ಳುವದು? ನೀವು ಕೂಡಿಕೊಳ್ಳಿರಿ, ನಾವು ಕೋಟೆಯುಳ್ಳ ಪಟ್ಟಣಗಳಲ್ಲಿ ಪ್ರವೇಶಿಸೋಣ, ಅಲ್ಲಿ ಮೌನವಾಗಿರೋಣ. ನಾವು ನಮ್ಮ ಕರ್ತನಿಗೆ ವಿರೋಧ ವಾಗಿ ಪಾಪಮಾಡಿದ ಕಾರಣ ನಮ್ಮ ದೇವರಾದ ಕರ್ತನು ನಮ್ಮನ್ನು ಮೌನವಾಗಿ ಮಾಡಿ ನಮಗೆ ವಿಷದ ನೀರನ್ನು ಕುಡಿಯಕೊಟ್ಟಿದ್ದಾನೆ.
ಯೆರೆಮಿಯ 7 : 15 (KNV)
ಸಮಾ ಧಾನಕ್ಕೆ ಕಾದುಕೊಂಡೆವು, ಒಳ್ಳೇದೇನೂ ಬರಲಿಲ್ಲ; ಆರೋಗ್ಯದ ಸಮಯಕ್ಕೆ ಕಾದಿದ್ದೆವು; ಇಗೋ, ಕಳ ವಳವನ್ನು ನೋಡುತ್ತೇವೆ.
ಯೆರೆಮಿಯ 7 : 16 (KNV)
ಅವನ ಕುದುರೆಗಳ ಶ್ವಾಸವು ದಾನಿನಿಂದ ಕೇಳಿಸಿತು, ಅವನ ಬಲವಾದವು ಗಳ ಕೆನೆತದ ಶಬ್ದದಿಂದ ದೇಶವೆಲ್ಲಾ ನಡುಗುತ್ತದೆ; ಯಾಕಂದರೆ ಅವರು ಬಂದರು; ದೇಶವನ್ನೂ ಅದರ ಲ್ಲಿರುವದೆಲ್ಲವನ್ನೂ ಪಟ್ಟಣವನ್ನೂ ಅದರ ನಿವಾಸಿ ಗಳನ್ನೂ ನುಂಗಿಬಿಟ್ಟಿದ್ದಾರೆ.
ಯೆರೆಮಿಯ 7 : 17 (KNV)
ಇಗೋ, ನಾನು ನಿಮ್ಮಲ್ಲಿ ಸರ್ಪಗಳನ್ನು ಮಂತ್ರಿಸಕೂಡದ ನಾಗರಗಳನ್ನ್ನು ಕಳು ಹಿಸುತ್ತೇನೆ; ಅವು ನಿಮ್ಮನ್ನು ಕಚ್ಚುವವೆಂದು ಕರ್ತನು ಅನ್ನುತ್ತಾನೆ.
ಯೆರೆಮಿಯ 7 : 18 (KNV)
ದುಃಖದ ನಿಮಿತ್ತ ನನ್ನನ್ನು ಆದರಿಸಿಕೊಳ್ಳಲು ನಾನು ಮನಸ್ಸು ಮಾಡಿದಾಗ ನನ್ನ ಹೃದಯವು ನನ್ನಲ್ಲಿ ಕುಂದಿಹೋಗಿದೆ. ದೂರ ದೇಶದಿಂದ ನನ್ನ ಜನರ ಮಗಳು ಕೂಗುವ ಶಬ್ದವನ್ನು ನೋಡಿರಿ.
ಯೆರೆಮಿಯ 7 : 19 (KNV)
ಏನಂ ದರೆ--ಕರ್ತನು ಚೀಯೋನಿನಲ್ಲಿ ಇಲ್ಲವೋ? ಅವಳ ಅರಸನು ಅವಳಲ್ಲಿ ಇಲ್ಲವೋ ಎಂಬದು. ಅವರು ತಮ್ಮ ವಿಗ್ರಹಗಳಿಂದಲೂ ವಿಚಿತ್ರವಾದ ವ್ಯರ್ಥತ್ವ ಗಳಿಂದಲೂ ನನಗೆ ಕೋಪವನ್ನೆಬ್ಬಿಸಿದ್ದು ಯಾಕೆ?
ಯೆರೆಮಿಯ 7 : 20 (KNV)
ಸುಗ್ಗಿ ಹೋಯಿತು, ಬೇಸಿಗೆಕಾಲ ತೀರಿತು; ಆದರೆ ನಾವು ರಕ್ಷಿಸಲ್ಪಡಲಿಲ್ಲ.
ಯೆರೆಮಿಯ 7 : 21 (KNV)
ನನ್ನ ಜನರ ಮಗಳ ಗಾಯ ದಿಂದ ನನಗೆ ಗಾಯವಾಯಿತು; ಕಪ್ಪಾದೆನು; ವಿಸ್ಮಯವು ನನ್ನನ್ನು ಹಿಡಿಯಿತು.ಗಿಲ್ಯಾದಿನಲ್ಲಿ ಮುಲಾಮು ಇಲ್ಲವೋ? ಅಲ್ಲಿ ವೈದ್ಯನಿಲ್ಲವೋ? ಹಾಗಾದರೆ ನನ್ನ ಜನರ ಮಗಳಿಗೆ ಯಾಕೆ ಸ್ವಸ್ಥವಾಗಲಿಲ್ಲ?
ಯೆರೆಮಿಯ 7 : 22 (KNV)
ಗಿಲ್ಯಾದಿನಲ್ಲಿ ಮುಲಾಮು ಇಲ್ಲವೋ? ಅಲ್ಲಿ ವೈದ್ಯನಿಲ್ಲವೋ? ಹಾಗಾದರೆ ನನ್ನ ಜನರ ಮಗಳಿಗೆ ಯಾಕೆ ಸ್ವಸ್ಥವಾಗಲಿಲ್ಲ?

1 2 3 4 5 6 7 8 9 10 11 12 13 14 15 16 17 18 19 20 21 22

BG:

Opacity:

Color:


Size:


Font: