ಯೆರೆಮಿಯ 46 : 1 (KNV)
ಜನಾಂಗಗಳಿಗೆ ವಿರೋಧವಾಗಿಯೂ ಐಗುಪ್ತಕ್ಕೆ ವಿರೋಧವಾಗಿಯೂ ಯೂಫ್ರೇ ಟೀಸ್ ನದಿಯ ಬಳಿಯಲ್ಲಿ ಕರ್ಕೆವಿಾಷಿನಲ್ಲಿ ಇದ್ದಂಥ
ಯೆರೆಮಿಯ 46 : 2 (KNV)
ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಯೆಹೂ ದದ ಅರಸನಾದ ಯೋಷೀಯನ ಮಗನಾದ ಯೆಹೋ ಯಾಕೀಮನ ನಾಲ್ಕನೇ ವರುಷದಲ್ಲಿ ಹೊಡೆದಂಥ ಐಗುಪ್ತದ ಅರಸನಾದ ಫರೋಹನೆಕೋವಿನ ದಂಡಿಗೆ ವಿರೋಧವಾಗಿ ಪ್ರವಾದಿಯಾದ ಯೆರೆವಿಾಯನಿಗೆ ಉಂಟಾದ ಕರ್ತನ ವಾಕ್ಯವು.
ಯೆರೆಮಿಯ 46 : 3 (KNV)
ಗುರಾಣಿಯನ್ನೂ ಖೇಡ್ಯವನ್ನೂ ಸಿದ್ಧಮಾಡಿರಿ; ಯುದ್ಧಕ್ಕೆ ಸವಿಾಪಿಸಿರಿ;
ಯೆರೆಮಿಯ 46 : 4 (KNV)
ಕುದುರೆಗಳನ್ನು ಕಟ್ಟಿರಿ; ರಾಹುತರೇ, ಎದ್ದು ಶಿರಸ್ತ್ರಾಣಗಳನ್ನಿಟ್ಟು ನಿಂತುಕೊಳ್ಳಿರಿ, ಈಟಿಗಳನ್ನು ಮೆರುಗು ಮಾಡಿರಿ, ಕವಚಗಳನ್ನು ತೊಟ್ಟು ಕೊಳ್ಳಿರಿ;
ಯೆರೆಮಿಯ 46 : 5 (KNV)
ಅವರು ದಿಗಿಲುಪಟ್ಟು ಹಿಂತಿರುಗಿದ್ದನ್ನು ನಾನು ಕಂಡದ್ದೇನು? ಅವರ ಪರಾಕ್ರಮಶಾಲಿಗಳು ಬಡಿಯಲ್ಪಟ್ಟಿದ್ದಾರೆ; ಹಿಂದೆ ನೋಡದೆ ಓಡಿಹೋಗು ತ್ತಾರೆ; ಸುತ್ತಲು ಅಂಜಿಕೆ ಇದೆ ಎಂದು ಕರ್ತನು ಅನ್ನುತ್ತಾನೆ.
ಯೆರೆಮಿಯ 46 : 6 (KNV)
ವೇಗಶಾಲಿಗಳು ಓಡಿಹೋಗದಿರಲಿ; ಪರಾಕ್ರಮಶಾಲಿಗಳು ತಪ್ಪಿಸಿಕೊಳ್ಳದಿರಲಿ; ಉತ್ತರದಲ್ಲಿ ಯೂಫ್ರೇಟೀಸ್ ನದಿಯ ತೀರದಲ್ಲಿ ಅವರು ಎಡವಿ ಬೀಳುವರು.
ಯೆರೆಮಿಯ 46 : 7 (KNV)
ಹೊಳೆಗಳ ಹಾಗೆ ಕದಲುವ ನೀರುಗಳಂತಿದ್ದು ಪ್ರಳಯದ ಹಾಗೆ ಬರುವವನು ಯಾರು?
ಯೆರೆಮಿಯ 46 : 8 (KNV)
ಐಗುಪ್ತವು ಪ್ರಳಯದ ಹಾಗೆ ಏರುತ್ತದೆ; ಅದರ ನೀರುಗಳು ಹೊಳೆಗಳ ಹಾಗೆ ಕದಲುತ್ತವೆ; ನಾನು ಏರುತ್ತೇನೆ, ಭೂಮಿಯನ್ನು ಮುಚ್ಚುತ್ತೇನೆ, ಪಟ್ಟಣವನ್ನೂ ಅದರ ನಿವಾಸಿಗಳನ್ನೂ ನಾಶಮಾಡುತ್ತೇನೆ ಎಂದು ಆತನು ಹೇಳುತ್ತಾನೆ.
ಯೆರೆಮಿಯ 46 : 9 (KNV)
ಕುದುರೆಗಳೇ, ಬನ್ನಿರಿ; ರಥಗಳೇ, ಓಡಾಡಿರಿ; ಪರಾಕ್ರಮಶಾಲಿಗಳು ಹೊರಗೆ ಬರಲಿ; ಗುರಾಣಿಯನ್ನು ಹಿಡಿಯುವ ಕೂಷ್ಯರೂ ಫೊಟ್ಯರು ಬಿಲ್ಲನ್ನು ಹಿಡಿದು ಬೊಗ್ಗಿಸುವ ಲೂದ್ಯರೂ ಹೊರಗೆ ಬರಲಿ.
ಯೆರೆಮಿಯ 46 : 10 (KNV)
ಇದು ಸೈನ್ಯಗಳ ಕರ್ತನಾದ ದೇವರ ದಿನವೇ; ಆತನು ತನ್ನ ಶತ್ರುಗಳಿಗೆ ಮುಯ್ಯಿಗೆ ಮುಯ್ಯಿ ತೀರಿಸುವ ದಿನವು ಕತ್ತಿಯು ಸಂಹರಿಸಿ ಅವರ ರಕ್ತದಿಂದ ತೃಪ್ತಿಯಾಗಿ ಮತ್ತವಾಗುವದು; ಉತ್ತರ ದೇಶದಲ್ಲಿ ಯೂಫ್ರೇಟೀಸ್ ನದಿಯ ಬಳಿಯಲ್ಲಿ ಸೈನ್ಯಗಳ ಕರ್ತನಾದ ದೇವರಿಗೆ ಬಲಿ ಆಗುತ್ತದೆ.
ಯೆರೆಮಿಯ 46 : 11 (KNV)
ಐಗುಪ್ತದ ಮಗಳಾದ ಕನ್ಯಾಸ್ತ್ರೀಯೇ, ಗಿಲ್ಯಾದಿಗೆ ಹೋಗಿ ತೈಲವನ್ನು ತಕ್ಕೋ! ನೀನು ಬಹಳ ಮದ್ದು ತಕ್ಕೊಳ್ಳುವದು ವ್ಯರ್ಥವಾಗಿದೆ; ನಿನಗೆ ಗುಣವಾಗು ವದಿಲ್ಲ.
ಯೆರೆಮಿಯ 46 : 12 (KNV)
ಜನಾಂಗಗಳು ನಿನ್ನ ಮಾನಭಂಗವನ್ನು ಕುರಿತು ಕೇಳಿಯವೆ, ನಿನ್ನ ಕೂಗು ದೇಶವನ್ನು ತುಂಬಿಸಿ ಯದೆ; ಪರಾಕ್ರಮಶಾಲಿಯು ಪರಾಕ್ರಮಶಾಲಿಯ ಮೇಲೆ ವಿರೋಧವಾಗಿ ಎಡವಿದ್ದಾರೆ; ಏಕವಾಗಿ ಬಿದ್ದುಹೋಗಿದ್ದಾರೆ.
ಯೆರೆಮಿಯ 46 : 13 (KNV)
ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಬಂದು ಐಗುಪ್ತದೇಶವನ್ನು ಹೇಗೆ ಹೊಡೆಯುವನೆಂಬದರ ವಿಷಯ ಕರ್ತನು ಪ್ರವಾದಿಯಾದ ಯೆರೆವಿಾಯನಿಗೆ ಹೇಳಿದ ವಾಕ್ಯವು.
ಯೆರೆಮಿಯ 46 : 14 (KNV)
ಐಗುಪ್ತದಲ್ಲಿ ತಿಳಿಸಿರಿ, ಮಿಗ್ದೋಲಿನಲ್ಲಿ ಪ್ರಕಟಿ ಸಿರಿ. ನೋಫ್ನಲ್ಲಿಯೂ ತಹಪನೇಸ್ನಲ್ಲಿಯೂ ಪ್ರಕ ಟಿಸಿ, ಸ್ಥಿರವಾಗಿ ನಿಂತುಕೋ; ಸಿದ್ದಮಾಡಿಕೋ; ಕತ್ತಿಯು ನಿನ್ನ ಸುತ್ತಲೂ ಸಂಹರಿಸುವದೆಂದು ಹೇಳಿರಿ.
ಯೆರೆಮಿಯ 46 : 15 (KNV)
ನಿನ್ನ ಬಲಿಷ್ಠರು ಯಾಕೆ ಬಡಕೊಂಡು ಹೋಗಿದ್ದಾರೆ? ಕರ್ತನು ಅವರನ್ನು ಓಡಿಸಿದ್ದದರಿಂದ ಅವರು ನಿಲ್ಲಲಿಲ್ಲ.
ಯೆರೆಮಿಯ 46 : 16 (KNV)
ಅನೇಕರನ್ನು ಎಡವುವಂತೆ ಮಾಡಿದನು. ಹೌದು, ಒಬ್ಬರ ಮೇಲೊ ಬ್ಬರು ಬಿದ್ದರು; ಅವರು--ಏಳು ಉಪದ್ರಪಡಿಸುವ ಕತ್ತಿಯನ್ನು ಬಿಟ್ಟು, ಸ್ವಂತ ಜನರ ಬಳಿಗೂ ನಾವು ಹುಟ್ಟಿದ ದೇಶದ ಬಳಿಗೂ ತಿರುಗಿ ಹೋಗೋಣ ಎಂದು ಹೇಳಿದರು.
ಯೆರೆಮಿಯ 46 : 17 (KNV)
ಐಗುಪ್ತದ ಅರಸ ನಾದ ಫರೋಹನು ನಾಶವಾದನು; ಸಮಯವನ್ನು ತಪ್ಪಿಸಿದ್ದಾನೆಂದು ಅಲ್ಲಿ ಕೂಗುತ್ತಾರೆ.
ಯೆರೆಮಿಯ 46 : 18 (KNV)
ಸೈನ್ಯಗಳ ಕರ್ತ ನೆಂದು ಹೆಸರುಳ್ಳ ಅರಸನು ಅನ್ನುವದೇನಂದರೆ--ನನ್ನ ಜೀವದಾಣೆ, ಬೆಟ್ಟಗಳಲ್ಲಿ ತಾಬೋರಿನಂತೆಯೂ ಸಮುದ್ರದ ಬಳಿಯಲ್ಲಿ ಕರ್ಮೆಲಿನಂತೆಯೂ ನಿಶ್ಚಯ ವಾಗಿ ಬರುವನು.
ಯೆರೆಮಿಯ 46 : 19 (KNV)
ಓ ಐಗುಪ್ತದ ಯುವತಿಯಾದ ನಿವಾಸಿಯೇ, ಸೆರೆಯ ಸಾಮಾನುಗಳನ್ನು ಸಜ್ಜು ಗೊಳಿಸಿಕೋ; ನೋಫ್ಹಾಳಾಗುವದು; ನಿವಾಸಿ ಗಳಿಲ್ಲದ ಬೀಡಾಗುವದು.
ಯೆರೆಮಿಯ 46 : 20 (KNV)
ಐಗುಪ್ತವು ಬಹಳ ಚೆಲುವಾದ ಕಡಸಾಗಿದೆ; ಆದರೆ ಉತ್ತರದಿಂದ ನಾಶ ನವು ಬಂದೇ ಬರುತ್ತದೆ.
ಯೆರೆಮಿಯ 46 : 21 (KNV)
ಅದರೊಳಗಿರುವ ಅದರ ಸಂಬಳದವರು ಕೊಬ್ಬಿದ ಹೋರಿಗಳ ಹಾಗಿದ್ದಾರೆ; ಅವರು ಸಹ ಹಿಂದಕ್ಕೆ ತಿರುಗಿಕೊಂಡು ಏಕವಾಗಿ ಓಡಿಹೋಗುತ್ತಾರೆ; ಅವರು ನಿಲ್ಲಲಿಲ್ಲ; ಅವರ ಆಪತ್ತಿನ ದಿವಸವೂ ಅವರ ವಿಚಾರಣೆಯ ಕಾಲವೂ ಅವರ ಮೇಲೆ ಬಂತು.
ಯೆರೆಮಿಯ 46 : 22 (KNV)
ಅದರ ಶಬ್ದವು ಸರ್ಪದಂತೆ ಹೊರಡುವದು; ಅವರು ದಂಡಿನ ಸಂಗಡ ಸಂಚರಿಸಿ ಕಟ್ಟಿಗೆ ಕಡಿಯುವವರ ಹಾಗೆ ಕೊಡಲಿಗಳ ಸಂಗಡ ಅದಕ್ಕೆ ವಿರೋಧವಾಗಿ ಬರುವರು.
ಯೆರೆಮಿಯ 46 : 23 (KNV)
ಆದರೆ ಅಡವಿ ಯನ್ನು ಅದು ಶೋಧಿಸ ಕೂಡದ್ದಾಗಿದ್ದರೂ ಕಡಿದು ಹಾಕುವರೆಂದು ಕರ್ತನು ಅನ್ನುತ್ತಾನೆ; ಅವರು ಮಿಡಿತೆ ಗಳಿಗಿಂತ ಹೆಚ್ಚಾಗಿ ಲೆಕ್ಕವಿಲ್ಲದೆ ಇದ್ದಾರೆ.
ಯೆರೆಮಿಯ 46 : 24 (KNV)
ಐಗುಪ್ತದ ಮಗಳು ನಾಚಿಕೆಪಡುವಳು, ಉತ್ತರದ ಜನರ ಕೈಯಲ್ಲಿ ಒಪ್ಪಿಸಲ್ಪಡುವಳು.
ಯೆರೆಮಿಯ 46 : 25 (KNV)
ಇಸ್ರಾಯೇಲಿನ ದೇವರಾದ ಸೈನ್ಯ ಗಳ ಕರ್ತನು ಹೇಳುವದೇನಂದರೆ--ಇಗೋ, ನಾನು ನೋಡುವ ಸಮೂಹವನ್ನೂ ಫರೋಹನನ್ನೂ ಐಗುಪ್ತ ವನ್ನೂ ಅದರ ದೇವರುಗಳನ್ನೂ ಅದರ ಅರಸರನ್ನೂ ಅಂತೂ ಫರೋಹನನ್ನೂ ಅವನಲ್ಲಿ ನಂಬಿಕೆಯಿಡುವ ಎಲ್ಲರನ್ನೂ ದಂಡಿಸುತ್ತೇನೆ;
ಯೆರೆಮಿಯ 46 : 26 (KNV)
ಅವರ ಪ್ರಾಣವನ್ನು ಹುಡುಕುವವರ ಕೈಯಲ್ಲಿಯೂ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಕೈಯಲ್ಲಿಯೂ ಅವನ ಸೇವಕರ ಕೈಯಲ್ಲಿಯೂ ಅವರನ್ನು ನಾನು ಒಪ್ಪಿಸುತ್ತೇನೆ. ಅದರ ತರುವಾಯ ಅದು ಪೂರ್ವದ ಕಾಲಗಳಂತೆ ನಿವಾಸ ವಾಗುವದೆಂದು ಕರ್ತನು ಅನ್ನುತ್ತಾನೆ.
ಯೆರೆಮಿಯ 46 : 27 (KNV)
ಆದರೆ ನೀನು, ಓ ನನ್ನ ಸೇವಕನಾದ ಯಾಕೋಬನೇ, ನೀನು ಭಯ ಪಡಬೇಡ; ಇಸ್ರಾಯೇಲೇ, ದಿಗ್ಭ್ರಮೆಗೊಳ್ಳಬೇಡ; ಇಗೋ, ನಾನು ನಿನ್ನನ್ನು ದೂರದಿಂದಲೂ ನಿನ್ನ ಸಂತಾನವನ್ನು ಅವರು ಸೆರೆಯಾಗಿ ಹೋದ ದೇಶ ದಿಂದಲೂ ರಕ್ಷಿಸುವೆನು; ಯಾಕೋಬನು ತಿರುಗಿ ಬಂದು ವಿಶ್ರಾಂತಿಯಾಗಿಯೂ ಸುಖವಾಗಿಯೂ ಇರುವನು; ಅವನನ್ನು ಭಯಪಡಿಸುವದಕ್ಕೆ ಯಾರೂ ಇರುವದಿಲ್ಲ.
ಯೆರೆಮಿಯ 46 : 28 (KNV)
ನನ್ನ ಸೇವಕನಾದ ಯಾಕೋಬನೇ, ನೀನು ಭಯಪಡ ಬೇಡವೆಂದು ಕರ್ತನು ಅನ್ನುತ್ತಾನೆ; ನಾನೇ ನಿನ್ನ ಸಂಗಡ ಇದ್ದೇನೆ; ನಾನು ನಿನ್ನನ್ನು ಎಲ್ಲಿಗೆ ಓಡಿಸಿ ದೆನೋ ಆ ಜನಾಂಗಗಳನ್ನೆಲ್ಲಾ ಸಂಪೂರ್ಣವಾಗಿ ನಾಶಮಾಡು ತ್ತೇನೆ; ಆದರೆ ನಿನ್ನನ್ನು ನಾಶಮಾಡುವದಿಲ್ಲ; ನ್ಯಾಯದಿಂದಲೇ ನಿನ್ನನ್ನು ಶಿಕ್ಷಿಸುತ್ತೇನೆ; ಆದಾಗ್ಯೂ ನಿನ್ನನ್ನು ಶಿಕ್ಷಿಸದೇ ಬಿಡುವದಿಲ್ಲ.
❮
❯