ಯೆರೆಮಿಯ 14 : 1 (KNV)
ಆಗ ಕರ್ತನು ನನಗೆ ಹೇಳಿದ್ದೇನಂದರೆ --ಮೋಶೆಯೂ ಸಮುವೇಲನೂ ನನ್ನ ಮುಂದೆ ನಿಂತರೂ ನನ್ನ ಮನಸ್ಸು ಈ ಜನರ ಮೇಲೆ ಇರುವದಿಲ್ಲ. ಅವರನ್ನು ನನ್ನ ಸನ್ನಿಧಿಯಿಂದ ಕಳುಹಿಸಿ ಬಿಡು; ಅವರು ಹೋಗಲಿ.
ಯೆರೆಮಿಯ 14 : 2 (KNV)
ಅವರು ನಿನಗೆ--ನಾವು ಎಲ್ಲಿ ಹೋಗಬೇಕು ಎಂದು ಹೇಳಿದರೆ, ನೀನು ಅವ ರಿಗೆ--ಕರ್ತನು ಹೀಗೆ ಹೇಳುತ್ತಾನೆ--ಮರಣಕ್ಕೆ ಇರುವವರು ಮರಣಕ್ಕೆ; ಕತ್ತಿಗೆ ಇರುವವರು ಕತ್ತಿಗೆ; ಕ್ಷಾಮಕ್ಕೆ ಇರುವವರು ಕ್ಷಾಮಕ್ಕೆ, ಸೆರೆಗೆ ಇರು ವವರು ಸೆರೆಗೆ ಎಂದು ಹೇಳಬೇಕು.
ಯೆರೆಮಿಯ 14 : 3 (KNV)
ಕರ್ತನು--ನಾನು ಅವರಿಗೆ ವಿರೋಧವಾಗಿ ನಾಲ್ಕು ತರವಾದವುಗಳನ್ನು ಅಂದರೆ ಕೊಲ್ಲುವದಕ್ಕೆ ಕತ್ತಿಯನ್ನೂ ಹರಿಯುವದಕ್ಕೆ ನಾಯಿಗಳನ್ನೂ ತಿನ್ನುವದಕ್ಕೂ ನಾಶ ಮಾಡುವದಕ್ಕೂ ಆಕಾಶದ ಪಕ್ಷಿಗಳನ್ನೂ ಭೂಮಿಯ ಮೃಗಗಳನ್ನೂ ನೇಮಿಸುತ್ತೇನೆ.
ಯೆರೆಮಿಯ 14 : 4 (KNV)
ಅವರನ್ನು ಹಿಜ್ಕೀಯನ ಮಗನಾದ ಯೆಹೂದದ ಅರಸನಾದ ಮನಸ್ಸೆಯ ನಿಮಿತ್ತವೂ ಇವನು ಯೆರೂಸಲೇಮಿನಲ್ಲಿ ಮಾಡಿದ್ದರ ನಿಮಿತ್ತವೂ ಭೂಮಿಯ ಎಲ್ಲಾ ರಾಜ್ಯಗಳಿಗೆ ಚದರಿಹೋಗುವಂತೆ ಮಾಡುವೆನು.
ಯೆರೆಮಿಯ 14 : 5 (KNV)
ಓ ಯೆರೂಸಲೇಮೇ, ನಿನ್ನ ಮೇಲೆ ಯಾರೂ ಕನಿಕರಪಡುವರು? ನಿನಗೋಸ್ಕರ ಯಾರು ದುಃಖಿಸುವರು? ನಿನ್ನ ಕ್ಷೇಮವನ್ನು ಕುರಿತು ಕೇಳುವದಕ್ಕೆ ಯಾರು ಸವಿಾಪ ಬರುವರು?
ಯೆರೆಮಿಯ 14 : 6 (KNV)
ನೀನು ನನ್ನನ್ನು ಬಿಟ್ಟು ಬಿಟ್ಟಿದ್ದೀ ಎಂದು ಕರ್ತನು ಅನ್ನುತ್ತಾನೆ; ನೀನು ಹಿಂಜರಿ ದಿದ್ದೀ, ಆದದರಿಂದ ನನ್ನ ಕೈಯನ್ನು ನಿನಗೆ ವಿರೋಧ ವಾಗಿ ಚಾಚಿ ನಿನ್ನನ್ನು ನಾಶಮಾಡುವೆನು. ಪಶ್ಚಾತ್ತಾಪ ಪಡುವದರಲ್ಲಿ ದಣಿದಿದ್ದೇನೆ.
ಯೆರೆಮಿಯ 14 : 7 (KNV)
ಅವರನ್ನು ಮೊರದಿಂದ ದೇಶದ ಬಾಗಿಲುಗಳಲ್ಲಿ ತೂರುವೆನು; ನನ್ನ ಜನರನ್ನು ಮಕ್ಕಳಿಲ್ಲದವರಾಗ ಮಾಡಿ ನಾಶಮಾಡುವೆನು. ಅವರು ತಮ್ಮ ಮಾರ್ಗಗಳನ್ನು ಬಿಟ್ಟು ಹಿಂತಿರುಗದೆ ಇದ್ದದರಿಂದ
ಯೆರೆಮಿಯ 14 : 8 (KNV)
ಅವರ ವಿಧವೆಗಳು ಸಮುದ್ರದ ಮರಳಿಗಿಂತ ನನಗೆ ಹೆಚ್ಚಾದರು. ನಾನು ಅವರ ಬಳಿಗೆ ಪ್ರಾಯದವರ ತಾಯಿಯ ಮೇಲೆ ಮಧ್ಯಾಹ್ನದಲ್ಲಿ ನಾಶನ ಮಾಡು ವವನನ್ನು ತರಿಸಿದ್ದೇನೆ; ಪಕ್ಕನೆ ಅವನು ಅವಳ ಮೇಲೆ ಬೀಳುವಂತೆ ಮಾಡುವೆನು, ಹೆದರಿಕೆಯನ್ನು ಪಟ್ಟಣದ ಮೇಲೆ ಬೀಳಮಾಡಿದ್ದೇನೆ.
ಯೆರೆಮಿಯ 14 : 9 (KNV)
ಏಳು ಮಂದಿಯನ್ನು ಹೆತ್ತವಳು ಕುಂದುತ್ತಾಳೆ; ತನ್ನ ಪ್ರಾಣವನ್ನು ಬಿಡುತ್ತಾಳೆ; ಹಗಲಿರುವಾಗಲೇ ಅವಳ ಸೂರ್ಯನು ಅಸ್ತಮಿಸುತ್ತಾನೆ; ಅವಳು ನಾಚಿಕೆಪಡುತ್ತಾಳೆ; ಅವಮಾನ ಗೊಳ್ಳುತ್ತಾಳೆ; ಇದಲ್ಲದೆ ಅವರ ಶೇಷವನ್ನು ಅದರ ಶತ್ರುಗಳ ಮುಂದೆ ಕತ್ತಿಗೆ ಒಪ್ಪಿಸುವೆನು ಎಂದು ಕರ್ತನು ಅನ್ನುತ್ತಾನೆ.
ಯೆರೆಮಿಯ 14 : 10 (KNV)
ನನ್ನ ತಾಯಿಯೇ, ನನಗೆ ಅಯ್ಯೋ, ನೀನು ನನ್ನನ್ನು ಭೂಮಿಯ ಮೇಲೆಲ್ಲಾ ವ್ಯಾಜ್ಯಗಾರನಾಗಿಯೂ ತರ್ಕದವನಾಗಿಯೂ ಹೆತ್ತಿದ್ದೀಯಲ್ಲಾ? ನಾನು ಬಡ್ಡಿಗೆ ಸಾಲ ಕೊಡಲಿಲ್ಲ ಇಲ್ಲವೆ ಮನುಷ್ಯರು ಬಡ್ಡಿಗಾಗಿ ನನಗೆ ಸಾಲ ಕೊಡಲಿಲ್ಲ. ಆದಾಗ್ಯೂ ಅವರೆಲ್ಲರು ನನ್ನನ್ನು ಶಪಿಸುತ್ತಾರೆ.
ಯೆರೆಮಿಯ 14 : 11 (KNV)
ಕರ್ತನು ಹೇಳುವದೇನಂದರೆ --ನಿಶ್ಚಯವಾಗಿ ನಿನ್ನ ಶೇಷಕ್ಕೆ ಅದು ಒಳ್ಳೆಯ ದಾಗಿರುವದು; ಕೇಡಿನ ಕಾಲದಲ್ಲಿಯೂ ಇಕ್ಕಟ್ಟಿನ ಕಾಲದಲ್ಲಿಯೂ ನಿಶ್ಚಯವಾಗಿ ನಿನ್ನ ಶತ್ರುವನ್ನು ನಿನ ಗೋಸ್ಕರ ಬೇಡಿಕೊಳ್ಳುವಂತೆ ಮಾಡಲಿಲ್ಲವೇ?
ಯೆರೆಮಿಯ 14 : 12 (KNV)
ಕಬ್ಬಿ ಣವು ಉತ್ತರದ ಕಬ್ಬಿಣವನ್ನೂ ಉಕ್ಕನ್ನೂ ಮುರಿಯ ಬಲ್ಲದೇ?
ಯೆರೆಮಿಯ 14 : 13 (KNV)
ನಿನ್ನ ಆಸ್ತಿಯನ್ನೂ ಬೊಕ್ಕಸಗಳನ್ನೂ ಎಲ್ಲಾ ಪ್ರಾಂತ್ಯಗಳಲ್ಲಿ ನಿನ್ನ ಎಲ್ಲಾ ಪಾಪಗಳ ನಿಮಿತ್ತ ಕ್ರಯವಿಲ್ಲದೆ ಕೊಳ್ಳೆಯಾಗಿ ಕೊಟ್ಟುಬಿಡುವೆನು.
ಯೆರೆಮಿಯ 14 : 14 (KNV)
ನಿನ್ನನ್ನು ನಿನಗೆ ತಿಳಿಯದ ದೇಶದಲ್ಲಿ ನಿನ್ನ ಶತ್ರುಗ ಳೊಂದಿಗೆ ಹಾದುಹೋಗುವಂತೆ ಮಾಡುವೆನು. ಯಾಕಂದರೆ ನನ್ನ ಕೋಪದಲ್ಲಿ ಬೆಂಕಿ ಹತ್ತಿದೆ, ಅದು ನಿಮ್ಮ ಮೇಲೆ ಉರಿಯುವದು.
ಯೆರೆಮಿಯ 14 : 15 (KNV)
ಓ ಕರ್ತನೇ, ನೀನೇ ಬಲ್ಲೆ, ನನ್ನನ್ನು ಜ್ಞಾಪಕ ಮಾಡಿ ವಿಚಾರಿಸಿ ನನ್ನನ್ನು ಹಿಂಸಿಸುವವರಿಗೆ ನನಗೋ ಸ್ಕರ ಮುಯ್ಯಿಗೆ ಮುಯ್ಯಿ ತೀರಿಸು; ನಿನ್ನ ದೀರ್ಘ ಶಾಂತಿಯಲ್ಲಿ ನನ್ನನ್ನು ತೆಗೆದುಬಿಡಬೇಡ; ನಿನ್ನ ನಿಮಿತ್ತ ನಾನು ಗದರಿಸಲ್ಪಡುವೆನೆಂದು ತಿಳಿದುಕೋ.
ಯೆರೆಮಿಯ 14 : 16 (KNV)
ನಿನ್ನ ವಾಕ್ಯಗಳು ಸಿಕ್ಕಿದವು, ಅವುಗಳನ್ನು ತಿಂದೆನು. ನಿನ್ನ ವಾಕ್ಯವು ನನ್ನ ಹೃದಯಕ್ಕೆ ಉಲ್ಲಾಸವೂ ಸಂತೋಷವೂ ಆಗಿತ್ತು; ಓ ಸೈನ್ಯಗಳ ದೇವರಾದ ಕರ್ತನೇ, ನಿನ್ನ ಹೆಸರಿನಿಂದ ಕರೆಯಲ್ಪಟ್ಟಿದ್ದೇನೆ.
ಯೆರೆಮಿಯ 14 : 17 (KNV)
ನಾನು ಹಾಸ್ಯಗಾರರ ಕೂಟದಲ್ಲಿ ಕೂತುಕೊಂಡು ಉತ್ಸಾಹಪಡಲಿಲ್ಲ, ನಿನ್ನ ಕೈ ನಿಮಿತ್ತ ಒಂಟಿಯಾಗಿ ಕೂತುಕೊಂಡಿದ್ದೇನೆ; ನನ್ನನ್ನು ಉಗ್ರತೆಯಿಂದ ತುಂಬಿಸಿದ್ದೀ.
ಯೆರೆಮಿಯ 14 : 18 (KNV)
ಏಕೆ ನನ್ನ ನೋವು ನಿತ್ಯವಾಗಿಯೂ ನನ್ನ ಗಾಯವು ವಾಸಿಯಾಗಲೊ ಲ್ಲದೆಯೂ ಸ್ವಸ್ಥವಾಗದೆಯೂ ಇದೆ? ನೀನು ನನಗೆ ಒಟ್ಟಾರೆ ನೀರು ಬತ್ತುವ ಕಳ್ಳ ತೊರೆಯಂತೆಯೂ ಸ್ಥಿರ ವಿಲ್ಲದ ನೀರಿನಂತೆಯೂ ಇರಬೇಕೋ.
ಯೆರೆಮಿಯ 14 : 19 (KNV)
ಆದದರಿಂದ ಕರ್ತನು -- ನೀನು ಹಿಂತಿರುಗಿ ಕೊಂಡರೆ ನಾನು ನಿನ್ನನ್ನು ತಿರುಗಿ ತರುವೆನು; ಆಗ ನೀನು ನನ್ನ ಮುಂದೆ ನಿಲ್ಲುವಿ; ನೀನು ಅಮೂಲ್ಯವಾದ ದ್ದನ್ನು ನೀಚವಾದದರೊಳಗಿಂದ ಹೊರಗೆ ತಂದರೆ ನನ್ನ ಬಾಯಿಯ ಹಾಗಿರುವಿ; ಅವರು ನಿನ್ನ ಕಡೆಗೆ ತಿರುಗಲಿ, ಆದರೆ ನೀನು ಅವರ ಕಡೆಗೆ ಹಿಂತಿರುಗಬೇಡ.
ಯೆರೆಮಿಯ 14 : 20 (KNV)
ಇದಲ್ಲದೆ ನಾನು ನಿನ್ನನ್ನು ಈ ಜನಕ್ಕೆ ಬಲವಾದ ತಾಮ್ರದ ಗೋಡೆಯಾಗಮಾಡುತ್ತೇನೆ; ನಿನಗೆ ವಿರೋಧವಾಗಿ ಯುದ್ಧಮಾಡುವರು, ಆದರೆ ನಿನ್ನನ್ನು ಜಯಿಸಲಾರರು; ನಾನೇ ನಿನ್ನನ್ನು ರಕ್ಷಿಸುವದಕ್ಕೂ ತಪ್ಪಿಸು ವದಕ್ಕೂ ನಿನ್ನ ಸಂಗಡ ಇದ್ದೇನೆ ಎಂದು ಕರ್ತನು ಅನ್ನುತ್ತಾನೆ.ಕೆಟ್ಟವರ ಕೈಯೊಳಗಿಂದ ನಿನ್ನನ್ನು ತಪ್ಪಿಸುತ್ತೇನೆ, ಭಯಂಕರವಾದ ಕೈಯೊಳಗಿಂದ ನಿನ್ನನ್ನು ವಿಮೋಚಿಸುತ್ತೇನೆ.
ಯೆರೆಮಿಯ 14 : 21 (KNV)
ಕೆಟ್ಟವರ ಕೈಯೊಳಗಿಂದ ನಿನ್ನನ್ನು ತಪ್ಪಿಸುತ್ತೇನೆ, ಭಯಂಕರವಾದ ಕೈಯೊಳಗಿಂದ ನಿನ್ನನ್ನು ವಿಮೋಚಿಸುತ್ತೇನೆ.

1 2 3 4 5 6 7 8 9 10 11 12 13 14 15 16 17 18 19 20 21

BG:

Opacity:

Color:


Size:


Font: