ಯೆಶಾಯ 57 : 1 (KNV)
ನೀತಿವಂತನು ನಾಶವಾಗುವನು, ಅದನ್ನು ಯಾವ ಮನುಷ್ಯನು ಮನಸ್ಸಿಗೆ ತಾರನು. ಕರುಣೆಯುಳ್ಳ ಮನುಷ್ಯರು ತೆಗೆದುಹಾಕಲ್ಪಡುವರು, ನೀತಿವಂತನು ಮುಂದೆ ಬರುವ ಕೇಡಿನಿಂದ ಪಾರಾಗು ತ್ತಾನೆಂಬದನ್ನು ಯಾರೂ ಯೋಚಿಸರು.
ಯೆಶಾಯ 57 : 2 (KNV)
ಅವನು ಸಮಾಧಾನಕ್ಕೆ ಪ್ರವೇಶಿಸುತ್ತಾನೆ. ಅವರಲ್ಲಿ ನೆಟ್ಟಗೆ ನಡೆಯುವ ಪ್ರತಿಯೊಬ್ಬನು ತನ್ನ ಹಾಸಿಗೆಯಲ್ಲಿ ವಿಶ್ರಮಿಸಿಕೊಳ್ಳುತ್ತಾನೆ.
ಯೆಶಾಯ 57 : 3 (KNV)
ಆದರೆ ನೀವು ಮಾಟಗಾರತಿಯ ಮಕ್ಕಳೇ, ಸೂಳೆಯ ಮತ್ತು ಜಾರನ ಸಂತಾನದವರೇ, ಇಲ್ಲಿಗೆ ಬನ್ನಿರಿ.
ಯೆಶಾಯ 57 : 4 (KNV)
ಯಾರ ವಿಷಯದಲ್ಲಿ ಕುಚೋದ್ಯ ಮಾಡುತ್ತೀರಿ? ಯಾರ ವಿಷಯವಾಗಿ ನೀವು ಬಾಯಿ ಅಗಲ ಮಾಡಿ ನಾಲಿಗೆಯನ್ನು ಚಾಚುತ್ತೀರಿ?
ಯೆಶಾಯ 57 : 5 (KNV)
ಹಸಿರಾದ ಏಲಾ ಮರಗಳ ಕೆಳಗೆ ವಿಗ್ರಹಗಳಿಂದ ಮದವೇರಿಸಿ ಕೊಂಡು ಹಳ್ಳಗಳಲ್ಲಿ ಬಂಡೆಗಳ ಬಿರುಕುಗಳಲ್ಲಿ ಮಕ್ಕಳನ್ನು ಕೊಂದುಹಾಕುವ ನೀವು ದ್ರೋಹದ ಮಕ್ಕಳೂ ಸುಳ್ಳಿನ ಸಂತತಿಯೂ ಅಲ್ಲವೋ?
ಯೆಶಾಯ 57 : 6 (KNV)
ಹಳ್ಳದ ನುಣುಪಾದ ಕಲ್ಲುಗಳು ನಿನ್ನ ಪಾಲು, ಅವುಗಳೇ ಹೌದು, ಅವೇ ನಿನ್ನ ಪಾಲು, ಅವುಗಳಿಗೆ ನೀನು ಪಾನದ್ರವ್ಯವನ್ನು ಮತ್ತು ಆಹಾರದರ್ಪಣೆಯನ್ನು ಅರ್ಪಿಸಿದ್ದೀ, ಇವುಗಳಿಂದ ನಾನು ಆದರಣೆ ಹೊಂದ ಬೇಕೋ?
ಯೆಶಾಯ 57 : 7 (KNV)
ಮಹೋನ್ನತ ಪರ್ವತದಲ್ಲಿ ನೀನು ಹಾಸಿಗೆಯನ್ನು ಹಾಕಿಕೊಂಡಿದ್ದೀ. ಬಲಿ ಅರ್ಪಿಸುವ ದಕ್ಕೂ ಅಲ್ಲಿಗೆ ಏರಿದ್ದೀ.
ಯೆಶಾಯ 57 : 8 (KNV)
ಕದಗಳ ಮತ್ತು ನಿಲುವಿನ ಹಿಂಭಾಗದಲ್ಲಿ ನಿನ್ನ ಜ್ಞಾಪಕ ಚಿಹ್ನೆಯನ್ನು ಇಟ್ಟಿದ್ದೀ. ನನ್ನನ್ನು ಬಿಟ್ಟು ಬೇರೊಬ್ಬನಿಗೆ ನಿನ್ನನ್ನು ತೋರ್ಪಡಿಸಿ ಕೊಂಡಿದ್ದೀ; ಏರಿಹೋಗಿ ನಿನ್ನ ಮಂಚವನ್ನು ಅಗಲ ಮಾಡಿಕೊಂಡು ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದೀ; ಅವರ ಮಂಚವನ್ನು ಕಂಡಲ್ಲಿ ಅದನ್ನು ಪ್ರೀತಿಮಾಡಿದ್ದೀ.
ಯೆಶಾಯ 57 : 9 (KNV)
ಬಹು ಸುಗಂಧ ದ್ರವ್ಯಗಳನ್ನು ಕೂಡಿಸಿ, ತೈಲದೊಂದಿಗೆ ರಾಜನ ಬಳಿಗೆ ಹೋಗಿದ್ದೀ, ದೂರಕ್ಕೆ ನಿನ್ನ ಸೇವಕರನ್ನು ಕಳುಹಿಸಿದ್ದೀ, ಪಾತಾಳ ದಷ್ಟು ನೀಚಸ್ಥಿತಿಗೆ ಇಳಿದಿದ್ದೀ.
ಯೆಶಾಯ 57 : 10 (KNV)
ನಿನ್ನ ಮಾರ್ಗದಲ್ಲಿ ಬಹಳವಾಗಿ ದಣಿದಿದ್ದರೂ ನಿರೀಕ್ಷೆಯೇ ಇಲ್ಲ ಎಂದು ಅಂದುಕೊಳ್ಳಲಿಲ್ಲ. ನಿನ್ನ ಕೈಯಲ್ಲಿರುವ ಜೀವವನ್ನು ಕಂಡುಕೊಂಡಿದ್ದೀ, ಆದದರಿಂದ ನೀನು ದುಃಖಿಸಲಿಲ್ಲ.
ಯೆಶಾಯ 57 : 11 (KNV)
ನೀನು ಸುಳ್ಳು ಹೇಳಿ ನನ್ನನ್ನು ಜ್ಞಾಪಕ ಮಾಡದೆ ಇಲ್ಲವೆ ಅದನ್ನು ಮನಸ್ಸಿಗೆ ತಾರದೆ ಇರುವಾಗ ಯಾರಿಗೆ ಅಂಜಿಕೊಂಡು ಭಯಪಟ್ಟಿ?
ಯೆಶಾಯ 57 : 12 (KNV)
ನಾನೇ ನಿನ್ನ ನೀತಿಯನ್ನೂ ನಿನ್ನ ಕ್ರಿಯೆಗಳನ್ನೂ ತಿಳಿಯ ಮಾಡುವೆನು. ಅವು ನಿನಗೆ ಪ್ರಯೋಜನವಾಗು ವದಿಲ್ಲ.
ಯೆಶಾಯ 57 : 13 (KNV)
ನೀನು ಕೂಗುವಾಗ ನಿನ್ನ ವಿಗ್ರಹಗಳು ನಿನ್ನನ್ನು ತಪ್ಪಿಸಲಿ; ಆದರೆ ಇವುಗಳನ್ನೆಲ್ಲಾ ಗಾಳಿಯು ಬಡಿದುಕೊಂಡು ಹೋಗುವದು; ವ್ಯರ್ಥವಾದದ್ದು ಅವುಗಳನ್ನು ತೆಗೆದುಕೊಂಡು ಹೋಗುವದು; ಆದರೆ ನನ್ನಲ್ಲಿ ನಂಬಿಕೆ ಇಡುವವನು ದೇಶವನ್ನು ವಶಮಾಡಿ ಕೊಂಡು ನನ್ನ ಪರಿಶುದ್ಧ ಪರ್ವತವನ್ನು ಬಾಧ್ಯವಾಗಿ ಹೊಂದುವನು.
ಯೆಶಾಯ 57 : 14 (KNV)
ನೀವು ಎತ್ತರ ಮಾಡಿರಿ, ಎತ್ತರ ಮಾಡಿರಿ ಮಾರ್ಗ ವನ್ನು ಸಿದ್ಧಮಾಡಿರಿ, ನನ್ನ ಜನರ ಮಾರ್ಗದಿಂದ ಎಡ ವುದನ್ನು ಎತ್ತಿಹಾಕಿರಿ ಎಂದು ಹೇಳುವನು.
ಯೆಶಾಯ 57 : 15 (KNV)
ಉನ್ನತನೂ ಎತ್ತರವಾದವನೂ ನಿತ್ಯವಾಗಿ ವಾಸಿ ಸುವವನೂ ಪರಿಶುದ್ಧನೆಂದು ಹೆಸರುಳ್ಳಾತನೂ ಹೀಗೆ ಹೇಳುತ್ತಾನೆ--ಉನ್ನತವಾದ ಪರಿಶುದ್ಧ ಸ್ಥಳದಲ್ಲಿ ವಾಸಿ ಸುವ ನಾನು ಪಶ್ಚಾತ್ತಾಪದೊಂದಿಗೆ ಮತ್ತು ದೀನನ ಆತ್ಮದೊಂದಿಗೆ ಇದ್ದುಕೊಂಡು ಅವರನ್ನು ಉಜ್ಜೀ ವಿಸುವವನಾಗಿದ್ದೇನೆ.
ಯೆಶಾಯ 57 : 16 (KNV)
ನಾನು ಎಂದೆಂದಿಗೂ ವ್ಯಾಜ್ಯ ವಾಡುವದಿಲ್ಲ, ಇಲ್ಲವೆ ಯಾವಾಗಲೂ ಕೋಪಿಸಿ ಕೊಳ್ಳೆನು. ಯಾಕಂದರೆ ಆತ್ಮವೂ ನಾನು ಉಂಟು ಮಾಡಿದ ಜೀವವೂ ನನ್ನಿಂದ ಕುಂದಿ ಹೋದಾವು.
ಯೆಶಾಯ 57 : 17 (KNV)
ಅವನ ದುರಾಶೆಯ ಅನ್ಯಾಯಕ್ಕೆ ನಾನು ಕೋಪ ಗೊಂಡು ಅವನನ್ನು ಹೊಡೆದೆನು. ನನ್ನ ಮುಖವನ್ನು ಮುಚ್ಚಿಕೊಂಡು ರೋಷಭರಿತ ನಾದೆನು; ಅವನು ಮೊಂಡತನದಿಂದ ತನ್ನ ಮನಸ್ಸಿಗೆ ಬಂದ ಹಾಗೆಯೇ ನಡೆಯುತ್ತಾ ಬಂದಿದ್ದಾನೆ.
ಯೆಶಾಯ 57 : 18 (KNV)
ನಾನು ಅವನ ಮಾರ್ಗವನ್ನು ನೋಡಿದ್ದೇನೆ. ಅವನನ್ನು ಸ್ವಸ್ಥಮಾಡಿ ಅವನನ್ನು ನಡಿಸುತ್ತೇನೆ ಮತ್ತು ಅವನಿಗೂ ಅವನ ದುಃಖಿತರಿಗೂ ಆದರಣೆಗಳನ್ನು ಪುನಃ ಸ್ಥಾಪಿಸುವೆನು.
ಯೆಶಾಯ 57 : 19 (KNV)
ನಾನು ತುಟಿಗಳಿಗೆ ಫಲವನ್ನುಂಟು ಮಾಡುವ ವನಾಗಿ ಅವನಿಗೆ ದೂರವಾದವನಿಗೂ ಅವನಿಗೆ ಸವಿಾಪವಾದವನಿಗೂ ಸಮಾಧಾನವಿರಲಿ. ನಾನು ಅವನನ್ನು ಸ್ವಸ್ಥಮಾಡುವೆ ನೆಂದು ಕರ್ತನು ಹೇಳು ತ್ತಾನೆ.
ಯೆಶಾಯ 57 : 20 (KNV)
ಆದರೆ ದುಷ್ಟರು ಸುಮ್ಮನಿರಲಾರದಂಥ, ಅದರ ನೀರುಗಳು ಕೆಸರನ್ನೂ ಮೈಲಿಗೆಯನ್ನೂ ಕಾರು ವಂಥ, ಅಲ್ಲಕಲ್ಲೋಲವಾಗಿರುವ ಸಮುದ್ರದ ಹಾಗಿ ದ್ದಾರೆ.ದುಷ್ಟರಿಗೆ ಸಮಾಧಾನವೇ ಇಲ್ಲವೆಂದು ನನ್ನ ದೇವರು ಹೇಳುತ್ತಾನೆ.
ಯೆಶಾಯ 57 : 21 (KNV)
ದುಷ್ಟರಿಗೆ ಸಮಾಧಾನವೇ ಇಲ್ಲವೆಂದು ನನ್ನ ದೇವರು ಹೇಳುತ್ತಾನೆ.

1 2 3 4 5 6 7 8 9 10 11 12 13 14 15 16 17 18 19 20 21

BG:

Opacity:

Color:


Size:


Font: