ಯೆಶಾಯ 55 : 1 (KNV)
ಹಾ, ಬಾಯಾರಿದ ಸಕಲಜನರೇ, ನೀವು ನೀರಿನ ಬಳಿಗೆ ಬನ್ನಿರಿ, ಕೊಂಡುಕೊಳ್ಳಿರಿ, ಉಣ್ಣಿರಿ; ಹೌದು, ಬನ್ನಿರಿ; ಹಣವಿಲ್ಲದೆ ಮತ್ತು ಕ್ರಯವಿಲ್ಲದೆ ದ್ರಾಕ್ಷಾರಸವನ್ನೂ ಹಾಲನ್ನೂ ಕೊಂಡು ಕೊಳ್ಳಿರಿ.
ಯೆಶಾಯ 55 : 2 (KNV)
ಆಹಾರವಲ್ಲದ್ದಕ್ಕೆ ಹಣವನ್ನೂ ತೃಪ್ತಿಪಡಿಸ ದಕ್ಕೆ ನಿಮ್ಮ ದುಡಿತವನ್ನೂ ವ್ಯಯಮಾಡುವದು ಯಾಕೆ? ಶ್ರದ್ಧೆಯಿಂದ ನನ್ನ ಕಡೆಗೆ ಕಿವಿಗೊಡಿರಿ ಮತ್ತು ಒಳ್ಳೆಯ ದನ್ನು ನೀವು ಉಣ್ಣಿರಿ, ನಿಮ್ಮ ಪ್ರಾಣವು ಕೊಬ್ಬಿನಲ್ಲಿ ಆನಂದಿಸಲಿ!
ಯೆಶಾಯ 55 : 3 (KNV)
ನಿಮ್ಮ ಕಿವಿಗಳನ್ನು ಬಾಗಿಸಿಕೊಂಡು ನನ್ನ ಬಳಿಗೆ ಬನ್ನಿರಿ; ಕೇಳಿರಿ, ನಿಮ್ಮ ಪ್ರಾಣವು ಬದುಕು ವದು; ನಿಶ್ಚಯವಾಗಿ ದಾವೀದನಿಗೆ ಖಂಡಿತವಾಗಿ ಮಾಡಿದ ಕರುಣೆಗಳ ಪ್ರಕಾರ ನಿಮ್ಮ ಸಂಗಡ ನಿತ್ಯ ವಾದ ಒಡಂಬಡಿಕೆಯನ್ನು ಮಾಡುವೆನು.
ಯೆಶಾಯ 55 : 4 (KNV)
ಇಗೋ ನಾನು ಅವನನ್ನು ಜನಗಳಿಗೆ ಸಾಕ್ಷಿಯನ್ನಾಗಿಯೂ ಅವರಿಗೆ ನಾಯಕನನ್ನಾಗಿಯೂ ಅಧಿಪತಿಯನ್ನಾ ಗಿಯೂ ಕೊಟ್ಟೆನು.
ಯೆಶಾಯ 55 : 5 (KNV)
ಇಗೋ, ನಿನ್ನ ದೇವರಾದ ಕರ್ತನ ನಿಮಿತ್ತವೂ ಇಸ್ರಾಯೇಲಿನ ಪರಿಶುದ್ಧನ ನಿಮಿತ್ತವೂ ನೀನು ತಿಳಿಯದ ಜನಾಂಗಗಳನ್ನು ಕರೆ ಯುವಿ; ಆತನು ನಿನ್ನನ್ನು ಮಹಿಮೆ ಪಡಿಸಿದ್ದರಿಂದ ನಿನ್ನನ್ನು ತಿಳಿಯದ ಜನಾಂಗಗಳು ನಿನ್ನ ಬಳಿಗೆ ಓಡಿ ಬರುವವು.
ಯೆಶಾಯ 55 : 6 (KNV)
ಕರ್ತನು ಸಿಕ್ಕುವ ಕಾಲದಲ್ಲಿ ಆತನನ್ನು ಹುಡುಕಿರಿ; ಆತನು ಸವಿಾಪವಾಗಿರುವಾಗಲೇ ಆತನನ್ನು ಕರೆಯಿರಿ.
ಯೆಶಾಯ 55 : 7 (KNV)
ದುಷ್ಟನು ತನ್ನ ಮಾರ್ಗವನ್ನೂ ಅನೀತಿವಂತನು ತನ್ನ ಆಲೋಚನೆಗಳನ್ನೂ ತೊರೆದುಬಿಟ್ಟು ಕರ್ತನ ಕಡೆಗೆ ಹಿಂತಿರುಗಲಿ; ಆತನು ಅವನ ಮೇಲೆ ಕರುಣೆಯಿಡು ವನು; ನಮ್ಮ ದೇವರ ಬಳಿಗೂ ಹಿಂತಿರುಗಲಿ, ಆತನು ಹೇರಳವಾಗಿ ಕ್ಷಮಿಸುವನು.
ಯೆಶಾಯ 55 : 8 (KNV)
ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಲ್ಲ; ಇಲ್ಲವೆ ನಿಮ್ಮ ಮಾರ್ಗಗಳು ನನ್ನ ಮಾರ್ಗಗಳಲ್ಲ ಎಂದು ಕರ್ತನು ಹೇಳುತ್ತಾನೆ.
ಯೆಶಾಯ 55 : 9 (KNV)
ಆಕಾಶವು ಭೂಮಿಯ ಮೇಲೆ ಎಷ್ಟು ಉನ್ನತವೋ ನನ್ನ ಮಾರ್ಗಗಳು ನಿಮ್ಮ ಮಾರ್ಗಗಳಿಗಿಂತಲೂ ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಿಗಿಂತಲೂ ಅಷ್ಟು ಉನ್ನತವಾಗಿವೆ.
ಯೆಶಾಯ 55 : 10 (KNV)
ಮಳೆಯೂ ಹಿಮವೂ ಆಕಾಶದಿಂದ ಇಳಿದು ಬಂದು ಅಲ್ಲಿಗೆ ಹಿಂತಿರುಗಿ ಹೋಗದೆ ಭೂಮಿಯನ್ನು ತೋಯಿಸಿ ಬಿತ್ತುವವನಿಗೆ ಬೀಜವನ್ನೂ ಉಣ್ಣುವವನಿಗೆ ರೊಟ್ಟಿಯನ್ನೂ ಕೊಡು ವಂತೆಯೂ ಫಲವನ್ನು ಹುಟ್ಟಿಸಿ ಚಿಗುರುಗೊಳಿಸುವ ಹಾಗೆಯೂ,
ಯೆಶಾಯ 55 : 11 (KNV)
ನನ್ನ ಬಾಯಿಂದ ಹೊರಡುವ ನನ್ನ ವಾಕ್ಯವು ಹಾಗೆಯೂ ಇರುವದು; ಅದು ಸುಮ್ಮನೆ ನನ್ನ ಬಳಿಗೆ ಹಿಂತಿರುಗದೆ ನಾನು ಯಾವದನ್ನು ಮೆಚ್ಚು ತ್ತೇನೋ ಅದನ್ನು ಅದು ಮಾಡುವದು; ನಾನು ಅದನ್ನು ಯಾವದರ ನಿಮಿತ್ತ ಕಳುಹಿಸಿದೆನೋ ಅದರಲ್ಲಿ ಅದು ಸಫಲವಾಗುವದು.
ಯೆಶಾಯ 55 : 12 (KNV)
ನೀವು ಆನಂದದೊಡನೆ ಹೋಗುವಿರಿ ಸಮಾಧಾನದಿಂದ ನಡಿಸಲ್ಪಡುವಿರಿ; ಪರ್ವತಗಳು ಮತ್ತು ಗುಡ್ಡಗಳು ನಿಮ್ಮ ಮುಂದೆ ಹರ್ಷಧ್ವನಿಗೈಯುವವು. ಹೊಲದ ಮರಗಳೆಲ್ಲಾ ಚಪ್ಪಾಳೆ ಹೊಡೆಯುವವು.
ಯೆಶಾಯ 55 : 13 (KNV)
ಮುಳ್ಳಿಗೆ ಬದಲಾಗಿ ಫರ್ (ತುರಾಯಿ) ಮರವು ಮತ್ತು ದತ್ತೂರಿಗೆ ಬದಲಾಗಿ ಸುವಾಸನೆ ಬೀರುವ ಮರವು ಹುಟ್ಟುವವು; ಅದು ಕರ್ತನ ಹೆಸರಿಗಾಗಿ ಮತ್ತು ಶಾಶ್ವತವಾದ ಗುರುತಾಗಿ ಎಂದಿಗೂ ಅಳಿಯದಿರುವದು.
❮
❯