ಯೆಶಾಯ 1 : 1 (KNV)
ಯೆಹೂದ ದೇಶದ ಅರಸರುಗಳಾದ ಉಜ್ಜೀಯ, ಯೋಥಾಮ, ಆಹಾಜ, ಹಿಜ್ಕೀಯ ಇವರ ಕಾಲದಲ್ಲಿ ಯೆಹೂದದ ಮತ್ತು ಯೆರೂಸಲೇಮಿನ ವಿಷಯವಾಗಿ ಆಮೋಚನ ಮಗ ನಾದ ಯೆಶಾಯನಿಗಾದ ದರ್ಶನವು.
ಯೆಶಾಯ 1 : 2 (KNV)
ಓ ಆಕಾಶ ಗಳೇ, ಕೇಳಿರಿ; ಓ ಭೂಮಿಯೇ, ಕಿವಿಗೊಡು; ಕರ್ತನು ಮಾತನಾಡುತ್ತಿದ್ದಾನೆ: ನಾನು ಸಾಕಿ ಸಲಹಿದ ಮಕ್ಕಳೇ, ನನಗೆ ವಿರೋಧವಾಗಿ ಎದುರುಬಿದ್ದಿದ್ದಾರೆ.
ಯೆಶಾಯ 1 : 3 (KNV)
ಎತ್ತು ತನ್ನ ಯಜಮಾನನನ್ನು ಮತ್ತು ಕತ್ತೆಯು ತನ್ನ ಒಡೆ ಯನ ಕೊಟ್ಟಿಗೆಯನ್ನು ತಿಳಿದಿರುವವು; ಆದರೆ ಇಸ್ರಾ ಯೇಲಿಗೆ ತಿಳಿದಿಲ್ಲ; ನನ್ನ ಜನರು ಆಲೋಚಿಸುವ ದಿಲ್ಲ.
ಯೆಶಾಯ 1 : 4 (KNV)
ಹಾ, ಪಾಪಿಷ್ಠ ಜನಾಂಗವೇ, ದುಷ್ಟತನದ ಭಾರವನ್ನು ಹೊತ್ತಿರುವ ಪ್ರಜೆಯೇ, ದುಷ್ಟಸಂತ ತಿಯೇ, ಭ್ರಷ್ಟರಾದ ಮಕ್ಕಳೇ, ಕರ್ತನನ್ನು ಅವರು ತೊರೆದುಬಿಟ್ಟಿದ್ದಾರೆ. ಇಸ್ರಾಯೇಲಿನ ಪರಿಶುದ್ಧನಾ ದಾತನಿಗೆ ಕೋಪವನ್ನೆಬ್ಬಿಸುವಂತೆ ಅವರು ಹಿಂದಕ್ಕೆ ಹೋಗಿದ್ದಾರೆ.
ಯೆಶಾಯ 1 : 5 (KNV)
ನೀವು ಹೆಚ್ಚೆಚ್ಚಾಗಿ ತಿರುಗಿಬಿದ್ದು ಯಾಕೆ ನೀವು ಇನ್ನು ಹೊಡೆಯಿಸಿಕೊಳ್ಳುತ್ತೀರಿ. ತಲೆ ಯೆಲ್ಲಾ ರೋಗ, ಹೃದಯವೆಲ್ಲಾ ದುರ್ಬಲ.
ಯೆಶಾಯ 1 : 6 (KNV)
ಅಂಗಾ ಲಿನಿಂದ ನಡುನೆತ್ತಿಯ ವರೆಗೂ ಬಾಸುಂಡೆ ಪೆಟ್ಟು, ಮಾಗದ ಗಾಯಗಳೇ ಹೊರತು ಏನೂ ಸೌಖ್ಯವಿಲ್ಲ; ಅವುಗಳನ್ನು ಮುಚ್ಚಿಲ್ಲ, ಕಟ್ಟಿಲ್ಲ, ಇಲ್ಲವೆ ಎಣ್ಣೆ ಸವರಿ ಮೃದುಮಾಡಿಲ್ಲ.
ಯೆಶಾಯ 1 : 7 (KNV)
ನಿಮ್ಮ ದೇಶವು ಹಾಳಾಗಿದೆ; ನಿಮ್ಮ ಪಟ್ಟಣಗಳು ಬೆಂಕಿಯಿಂದ ಸುಟ್ಟುಹೋಗಿವೆ; ನಿಮ್ಮ ಭೂಮಿಯನ್ನು ಅನ್ಯರು ನಿಮ್ಮೆದುರಿಗೆ ನುಂಗಿ ಬಿಡು ತ್ತಿದ್ದಾರೆ. ಅದು ಅನ್ಯರಿಂದ ಕೆಡವಲ್ಪಟ್ಟಂತೆ ಹಾಳಾ ಗಿದೆ.
ಯೆಶಾಯ 1 : 8 (KNV)
ಚೀಯೋನ್ ಕುಮಾರಿಯು ದ್ರಾಕ್ಷೇತೋಟ ದಲ್ಲಿರುವ ಗುಡಿಸಲಿನ ಹಾಗೆಯೂ ಸೌತೆಯ ತೋಟ ದಲ್ಲಿರುವ ಮನೆಯ ಹಾಗೆಯೂ ಮುತ್ತಿಗೆ ಹಾಕಲಟ್ಟಿರುವ ಪಟ್ಟಣದ ಹಾಗೆಯೂ ಬಿಡಲ್ಪಟ್ಟಿದ್ದಾಳೆ.
ಯೆಶಾಯ 1 : 9 (KNV)
​ಸೈನ್ಯ ಗಳ ಕರ್ತನು ನಮಗೆ ಮಿಕ್ಕಿದ್ದರಲ್ಲಿ ಸ್ವಲ್ಪವನ್ನಾದರೂ ಉಳಿಸದೆ ಹೋಗಿದ್ದರೆ, ಸೊದೋಮಿನ ಹಾಗೆಯೂ ಗೊಮೋರಕ್ಕೆ ಸಮಾನವಾಗಿಯೂ ಇರುತ್ತಿದ್ದೆವು.
ಯೆಶಾಯ 1 : 10 (KNV)
ಸೊದೋಮಿನ ಅಧಿಪತಿಗಳೇ, ನೀವು ಕರ್ತನ ಮಾತನ್ನು ಕೇಳಿರಿ; ಗೊಮೋರದ ಪ್ರಜೆಗಳೇ, ನಮ್ಮ ದೇವರ ನ್ಯಾಯಪ್ರಮಾಣಕ್ಕೆ ಕಿವಿಗೊಡಿರಿ.
ಯೆಶಾಯ 1 : 11 (KNV)
ನೀವು ಲೆಕ್ಕವಿಲ್ಲದಷ್ಟು ಯಜ್ಞಗಳನ್ನು ನನಗೆ ಅರ್ಪಿಸುವ ಉದ್ದೇಶವೇನು? ಎಂದು ಕರ್ತನು ನುಡಿಯುತ್ತಾನೆ. ಟಗರುಗಳ ದಹನಬಲಿಗಳು, ಪುಷ್ಟಿ ಪ್ರಾಣಿಗಳ ಕೊಬ್ಬು, ಇದೆಲ್ಲಾ ನನಗೆ ಸಾಕಾಯಿತು; ಹೋರಿ, ಕುರಿ, ಹೋತಗಳ ರಕ್ತಕ್ಕೆ ನಾನು ಸಂತೋಷಪಡುವ ದಿಲ್ಲ.
ಯೆಶಾಯ 1 : 12 (KNV)
ನೀವು ನನ್ನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳ ಬೇಕೆಂದು ಬರುತ್ತೀರಲ್ಲಾ; ನನ್ನ ಪ್ರಾಕಾರಗಳನ್ನು ತುಳಿ ಯಲು ಯಾರು ನಿಮ್ಮನ್ನು ಕೇಳಿಕೊಂಡರು?
ಯೆಶಾಯ 1 : 13 (KNV)
ಇನ್ನು ವ್ಯರ್ಥವಾದ ಕಾಣಿಕೆಗಳನ್ನು ತಾರದಿರಿ, ಧೂಪವು ನನಗೆ ಅಸಹ್ಯ, ಹುಣ್ಣಿಮೆಗಳೂ ಸಬ್ಬತ್ತುಗಳೂ ಸಭೆಗಳು ಕೂಡುವದೂ ಇವು ಬೇಡ; ದುಷ್ಟತನದಿಂದ ಕೂಡಿದ ವಿಶೇಷ ಕೂಟವನ್ನು ಸಹ ನಾನು ಸಹಿಸಲಾರೆನು.
ಯೆಶಾಯ 1 : 14 (KNV)
ನಿಮ್ಮ ಹುಣ್ಣಿಮೆಗಳನ್ನೂ ನೇಮಕವಾದ ಹಬ್ಬಗಳನ್ನೂ ನನ್ನ ಆತ್ಮವು ಹಗೆಮಾಡುತ್ತದೆ. ಅವು ನನಗೆ ಭಾರ, ಸಹಿಸಲು ಬೇಸರ.
ಯೆಶಾಯ 1 : 15 (KNV)
ನೀವು ನಿಮ್ಮ ಕೈಗಳನ್ನು ಚಾಚಲು ನಾನು ನನ್ನ ಕಣ್ಣುಗಳನ್ನು ನಿಮಗೆ ಮರೆಮಾಡುವೆನು; ಹೌದು, ನೀವು ಬಹು ಪ್ರಾರ್ಥನೆಗಳನ್ನು ಮಾಡಿ ದರೂ ನಾನು ಕೇಳೆನು, ನಿಮ್ಮ ಕೈಗಳು ರಕ್ತದಿಂದ ತುಂಬಿಯವೆ.
ಯೆಶಾಯ 1 : 16 (KNV)
ನಿಮ್ಮನ್ನು ತೊಳೆದುಕೊಂಡು ಶುದ್ಧ ಮಾಡಿಕೊಳ್ಳಿರಿ; ನನ್ನ ಕಣ್ಣೆದುರಿನಿಂದ ನಿಮ್ಮ ದುಷ್ಟ ಕೃತ್ಯಗಳನ್ನು ತೆಗೆದುಹಾಕಿರಿ, ಕೆಟ್ಟದ್ದನ್ನು ನಿಲ್ಲಿಸಿಬಿಡಿರಿ;
ಯೆಶಾಯ 1 : 17 (KNV)
ಒಳ್ಳೆಯದನ್ನು ಮಾಡಲು ಕಲಿತುಕೊಳ್ಳಿರಿ; ನ್ಯಾಯ ವನ್ನು ಹುಡುಕಿರಿ, ಹಿಂಸೆಪಡುವವರನ್ನು ಉಪಚರಿಸಿರಿ, ಅನಾಥರಿಗೆ ನ್ಯಾಯತೀರಿಸಿರಿ, ವಿಧವೆಯರ ಪರವಾಗಿವಾದಿಸಿರಿ.
ಯೆಶಾಯ 1 : 18 (KNV)
ಈಗ ಬನ್ನಿರಿ, ನಾವು ಒಟ್ಟಾಗಿ ವಾದಿಸೋಣ ಎಂದು ಕರ್ತನು ಹೇಳುತ್ತಾನೆ; ನಿಮ್ಮ ಪಾಪಗಳು ಕಡು ಕೆಂಪಾಗಿದ್ದರೂ ಹಿಮದಂತೆ ಬಿಳುಪಾಗುವವು; ಕಡು ಕೆಂಪಿನಂತೆ ಕೆಂಪಾಗಿದ್ದರೂ ಉಣ್ಣೆಯಂತೆ ಆಗುವವು.
ಯೆಶಾಯ 1 : 19 (KNV)
ನೀವು ಒಪ್ಪಿ ವಿಧೇಯರಾದರೆ ದೇಶದ ಮೇಲನ್ನು ಅನುಭವಿಸುವಿರಿ;
ಯೆಶಾಯ 1 : 20 (KNV)
ನೀವು ತಿರಸ್ಕರಿಸಿ ತಿರುಗಿಬಿದ್ದರೆ ಕತ್ತಿಯ ಬಾಯಿಗೆ ತುತ್ತಾಗುವಿರಿ; ಕರ್ತನ ಬಾಯಿಯೇ ಇದನ್ನು ನುಡಿದಿದೆ.
ಯೆಶಾಯ 1 : 21 (KNV)
ನಂಬಿಗಸ್ತಿಕೆಯ ಪಟ್ಟಣವು ಸೂಳೆಯಂತಾದ ಳಲ್ಲಾ! ಅದು ನ್ಯಾಯದಿಂದ ತುಂಬಿ ನೀತಿಯಲ್ಲಿ ನೆಲೆ ಯಾಗಿತ್ತು; ಆದರೆ ಈಗ ಕೊಲೆಗಾರರಿಂದ ತುಂಬಿದೆ.
ಯೆಶಾಯ 1 : 22 (KNV)
ನಿನ್ನ ಬೆಳ್ಳಿಯು ಕಂದಾಯಿತು, ನಿನ್ನ ದ್ರಾಕ್ಷಾರಸವು ನೀರಿನೊಂದಿಗೆ ಬೆರಿಕೆಯಾಯಿತು.
ಯೆಶಾಯ 1 : 23 (KNV)
ನಿನ್ನ ಪ್ರಭುಗಳು ಎದುರು ಬೀಳುವವರೂ ಕಳ್ಳರ ಜೊತೆಗಾರರೂ ಆಗಿ ದ್ದಾರೆ; ಪ್ರತಿಯೊಬ್ಬನು ಲಂಚ ಪ್ರಿಯನೂ ಬಹು ಮಾನಗಳನ್ನು ಅಪೇಕ್ಷಿಸುವವನೂ ಆಗಿದ್ದಾನೆ; ಅವರು ಅನಾಥರಿಗೆ ನ್ಯಾಯತೀರಿಸರು, ಇಲ್ಲವೆ ವಿಧವೆಯರ ವ್ಯಾಜ್ಯವು ಅವರ ಬಳಿಗೆ ಬರುವದಿಲ್ಲ.
ಯೆಶಾಯ 1 : 24 (KNV)
ಆದದರಿಂದ ಸೈನ್ಯಗಳ ಕರ್ತನೂ ಇಸ್ರಾಯೇಲಿನ ಪರಾಕ್ರಮಿಯೂ ಆದ ಕರ್ತನು ಹೇಳುವದೇನಂದರೆ ಹಾ, ನನ್ನ ವಿರೋಧಿಗಳಿಂದ ನಾನು ಶಾಂತನಾಗಿರು ವೆನು, ನನ್ನ ಶತ್ರುಗಳಿಗೆ ಮುಯ್ಯಿತೀರಿಸುವೆನು.
ಯೆಶಾಯ 1 : 25 (KNV)
ನನ್ನ ಕೈಯನ್ನು ನಿನ್ನ ಕಡೆಗೆ ತಿರುಗಿಸಿ ಮಲಿನವನ್ನು ಸ್ವಚ್ಚವಾಗಿ ಶುದ್ಧಮಾಡಿ ನಿನ್ನ ಎಲ್ಲಾ ಕಲ್ಮಷವನ್ನು ತೆಗೆದು ಬಿಡುವೆನು.
ಯೆಶಾಯ 1 : 26 (KNV)
ನಿನ್ನ ನ್ಯಾಯಾಧಿಪತಿಗಳನ್ನು ಮುಂಚಿನ ಹಾಗೆಯೂ ನಿನ್ನ ಆಲೋಚನಾ ಪರರನ್ನು ಪ್ರಾರಂಭ ದಲ್ಲಿದ್ದ ಹಾಗೆಯೂ ತಿರಿಗಿ ಒದಗಿಸಿಕೊಡುವೆನು: ತರುವಾಯ ನೀನು ನೀತಿಯುಳ್ಳ ಪಟ್ಟಣವೆಂದೂ ನಂಬಿಗಸ್ತಿಕೆಯ ಪಟ್ಟಣವೆಂದೂ ಕರೆಯಲ್ಪಡುವಿ.
ಯೆಶಾಯ 1 : 27 (KNV)
ಚೀಯೋನು ನ್ಯಾಯತೀರ್ಪಿನಿಂದಲೂ ಅವಳ ಪರಿವರ್ತನೆಯನ್ನು ಹೊಂದಿದವರು ನೀತಿಯಿಂದಲೂ ಬಿಡುಗಡೆಯಾಗುವರು
ಯೆಶಾಯ 1 : 28 (KNV)
ಆದರೆ ದ್ರೋಹಿಗಳೂ ಪಾಪಿಗಳೂ ಒಟ್ಟಾಗಿ ನಾಶವಾಗುವರು ಮತ್ತು ಕರ್ತ ನನ್ನು ತೊರೆದವರು ದಹಿಸಲ್ಪಡುವರು.
ಯೆಶಾಯ 1 : 29 (KNV)
ನೀವು ಇಷ್ಟ ಪಟ್ಟ ಏಲಾಮರಗಳ ನಿಮಿತ್ತ ನಾಚಿಕೊಳ್ಳುವರು, ಆರಿಸಿಕೊಂಡ ವನಗಳ ವಿಷಯವಾಗಿ ಲಜ್ಜೆಪಡುವಿರಿ.
ಯೆಶಾಯ 1 : 30 (KNV)
ನೀವು ಎಲೆ ಬಾಡಿದ ಏಲಾಮರದಂತೆಯೂ ನೀರಿಲ್ಲದ ತೋಟದಂತೆಯೂ ಇರುವಿರಿ.
ಯೆಶಾಯ 1 : 31 (KNV)
ನಿಮ್ಮಲ್ಲಿನ ಬಲಿಷ್ಠನೇ ಸಣಬಿನ ನಾರು, ಅದನ್ನು ಮಾಡುವವನು ಕಿಡಿ, ಅವೆರಡೂ ಸೇರಿ ಯಾರೂ ಆರಿಸಲಾಗದಂತೆ ಅವು ಸುಟ್ಟುಹೋಗುವವು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31