ಪ್ರಸಂಗಿ 3 : 1 (KNV)
ಆಕಾಶದ ಕೆಳಗೆ ಪ್ರತಿಯೊಂದು ಕಾರ್ಯಕ್ಕೂ ಒಂದು ಕಾಲವಿದೆ; ಪ್ರತಿಯೊಂದು ಉದ್ದೇಶಕ್ಕೂ ಒಂದು ಸಮಯವಿದೆ.
ಪ್ರಸಂಗಿ 3 : 2 (KNV)
ಹುಟ್ಟುವದಕ್ಕೆ ಒಂದು ಸಮಯ, ಸಾಯುವದಕ್ಕೆ ಒಂದು ಸಮಯ; ನೆಡುವದಕ್ಕೆ ಒಂದು ಸಮಯ, ನೆಟ್ಟದ್ದನ್ನು ಕಿತ್ತು ಹಾಕು ವದಕ್ಕೆ ಒಂದು ಸಮಯ;
ಪ್ರಸಂಗಿ 3 : 3 (KNV)
ಕೊಲ್ಲುವದಕ್ಕೆ ಒಂದು ಸಮಯ, ಸ್ವಸ್ಥಮಾಡುವದಕ್ಕೆ ಒಂದು ಸಮಯ ಕೆಡವಿ ಬಿಡುವದಕ್ಕೆ ಒಂದು ಸಮಯ, ಕಟ್ಟುವದಕ್ಕೆ ಒಂದು ಸಮಯ;
ಪ್ರಸಂಗಿ 3 : 4 (KNV)
ಅಳುವದಕ್ಕೆ ಒಂದು ಸಮಯ, ನಗುವದಕ್ಕೆ ಒಂದು ಸಮಯ; ಗೋಳಾಡುವದಕ್ಕೆ ಒಂದು ಸಮಯ, ಕುಣಿದಾಡುವದಕ್ಕೆ ಒಂದು ಸಮಯ;
ಪ್ರಸಂಗಿ 3 : 5 (KNV)
ಕಲ್ಲುಗಳನ್ನು ಎಸೆಯುವದಕ್ಕೆ ಒಂದು ಸಮಯ, ಕಲ್ಲುಗಳನ್ನು ಕೂಡಿಸು ವದಕ್ಕೆ ಒಂದು ಸಮಯ; ಅಪ್ಪಿಕೊಳ್ಳುವದಕ್ಕೆ ಒಂದು ಸಮಯ, ಅಪ್ಪಿಕೊಳ್ಳುವದರಿಂದ ನಿಗ್ರಹಿಸುವ ಸಮ ಯ;
ಪ್ರಸಂಗಿ 3 : 6 (KNV)
ಗಳಿಸುವದಕ್ಕೆ ಒಂದು ಸಮಯ, ಕಳೆಯುವದಕ್ಕೆ ಒಂದು ಸಮಯ ಕಾಪಾಡುವದಕ್ಕೆ ಒಂದು ಸಮಯ, ಬಿಸಾಡುವದಕ್ಕೆ ಒಂದು ಸಮಯ;
ಪ್ರಸಂಗಿ 3 : 7 (KNV)
ಹರಿಯುವದಕ್ಕೆ ಒಂದು ಸಮಯ, ಹೊಲಿಯುವದಕ್ಕೆ ಒಂದು ಸಮಯ ಸುಮ್ಮನೆ ಇರುವದಕ್ಕೆ ಒಂದು ಸಮಯ, ಮಾತಾಡು ವದಕ್ಕೆ ಒಂದು ಸಮಯ;
ಪ್ರಸಂಗಿ 3 : 8 (KNV)
ಪ್ರೀತಿಸುವದಕ್ಕೆ ಒಂದು ಸಮಯ, ದ್ವೇಷಿಸುವದಕ್ಕೆ ಒಂದು ಸಮಯ; ಯುದ್ಧದ ಸಮಯ, ಸಮಾಧಾನದ ಸಮಯ.
ಪ್ರಸಂಗಿ 3 : 9 (KNV)
ತಾನು ಪ್ರಯಾಸಪಡುವದರಲ್ಲಿ ದುಡಿಯುವವನಿಗೆ ಲಾಭವೇನಿದೆ?
ಪ್ರಸಂಗಿ 3 : 10 (KNV)
ಅದರಲ್ಲಿ ಅಭ್ಯಾಸಿಸುವಂತೆ ಮನು ಷ್ಯರ ಪುತ್ರರಿಗೆ ದೇವರು ಕೊಟ್ಟ ಪ್ರಯಾಸವನ್ನು ನಾನು ಕಂಡಿದ್ದೇನೆ.
ಪ್ರಸಂಗಿ 3 : 11 (KNV)
ತನ್ನ ಸಮಯದಲ್ಲಿ ಪ್ರತಿಯೊಂದನ್ನು ಆತನು ಸುಂದರವಾಗಿ ಮಾಡಿದ್ದಾನೆ. ಆದಿಯಿಂದ ಅಂತ್ಯದ ವರೆಗೂ ದೇವರು ನಡಿಸುವ ಕೆಲಸವನ್ನು ಯಾವ ಮನುಷ್ಯನೂ ಗ್ರಹಿಸಲಾರದಂತೆ ಅವರ ಹೃದಯದಲ್ಲಿ ಆತನು ಲೋಕವನ್ನು ಇಟ್ಟಿದ್ದಾನೆ.
ಪ್ರಸಂಗಿ 3 : 12 (KNV)
ಒಬ್ಬನು ಸಂತೋಷಿಸಿ ತನ್ನ ಜೀವಮಾನದಲ್ಲಿ ಒಳ್ಳೇ ದನ್ನು ಮಾಡುವದೇ ಹೊರತು ಅವುಗಳಲ್ಲಿ ಯಾವ ಮೇಲೂ ಇಲ್ಲವೆಂದು ನಾನು ಬಲ್ಲೆನು.
ಪ್ರಸಂಗಿ 3 : 13 (KNV)
ಪ್ರತಿ ಯೊಬ್ಬನು ತಿಂದು, ಕುಡಿದು, ತನ್ನ ಎಲ್ಲಾ ಪ್ರಯಾಸದ ಮೇಲನ್ನು ಅನುಭವಿಸುವದು ದೇವರ ದಾನದಿಂದಲೇ.
ಪ್ರಸಂಗಿ 3 : 14 (KNV)
ದೇವರು ಮಾಡುವದೆಲ್ಲವು ಶಾಶ್ವತವಾಗಿರುವದೆಂದು ನಾನು ಬಲ್ಲೆನು; ಅದಕ್ಕೆ ಯಾವದನ್ನೂ ಸೇರಿಸಬಾರದು, ಇಲ್ಲವೆ ಅದರಿಂದ ಯಾವದನ್ನೂ ತೆಗೆಯಬಾರದು; ಮನುಷ್ಯರು ಆತನ ಎದುರಿನಲ್ಲಿ ಭಯಪಡುವಂತೆ ದೇವರು ಅದನ್ನು ಮಾಡುತ್ತಾನೆ.
ಪ್ರಸಂಗಿ 3 : 15 (KNV)
ಇದ್ದದ್ದು ಈಗ ಇದೆ, ಇರುವದು ಆಗಲೇ ಇತ್ತು; ಗತಿಸಿಹೋದದ್ದನ್ನು ದೇವರು ಕೇಳುತ್ತಾನೆ.
ಪ್ರಸಂಗಿ 3 : 16 (KNV)
ಕೆಟ್ಟದ್ದು ಇತ್ತೆಂದು ಸೂರ್ಯನ ಕೆಳಗೆ ನ್ಯಾಯ ತೀರ್ಪಿನ ಸ್ಥಳವನ್ನು ಮತ್ತು ದುಷ್ಕೃತ್ಯ ಇದೆಯೆಂದು ನೀತಿಯ ಸ್ಥಾನವನ್ನು ನಾನು ಕಂಡೆನು.
ಪ್ರಸಂಗಿ 3 : 17 (KNV)
ನಾನು ನನ್ನ ಹೃದಯದಲ್ಲಿ -- ನೀತಿವಂತರನ್ನೂ ದುಷ್ಟರನ್ನೂ ದೇವರು ತೀರ್ಪುಮಾಡುವನು; ಪ್ರತಿಯೊಂದು ಉದ್ದೇ ಶಕ್ಕೂ ಪ್ರತಿಯೊಂದು ಕೆಲಸಕ್ಕೂ ಸಮಯವಿದೆ ಎಂದು ಅಂದುಕೊಂಡೆನು.
ಪ್ರಸಂಗಿ 3 : 18 (KNV)
ಮನುಷ್ಯ ಪುತ್ರರ ಸ್ಥಿತಿಯ ವಿಷ ಯವಾಗಿ ದೇವರು ಅವರನ್ನು ಪ್ರತ್ಯಕ್ಷಪಡಿಸುವನೆಂದೂ ಅವರು ತಾವೇ ಮೃಗಗಳೆಂದು ತಾವು ಕಂಡುಕೊಳ್ಳ ಬೇಕೆಂದು ನನ್ನ ಹೃದಯದಲ್ಲಿ ಅಂದುಕೊಂಡೆನು.
ಪ್ರಸಂಗಿ 3 : 19 (KNV)
ಮೃಗಗಳಿಗೆ ಸಂಭವಿಸುವದು ಮನುಷ್ಯರ ಪುತ್ರರಿಗೂ ಸಂಭವಿಸುತ್ತದೆ; ಅವರಿಗೆ ಒಂದೇ ಸಂಗತಿ ಸಂಭವಿಸು ತ್ತದೆ; ಒಂದು ಸಾಯುವ ಹಾಗೆ ಮತ್ತೊಂದು ಸಾಯು ತ್ತದೆ; ಹೌದು, ಅವರೆಲ್ಲರಿಗೂ ಒಂದೇ ಒಂದು ಉಸಿ ರಾಟ ಇದೆ; ಆದಕಾರಣ ಮೃಗಕ್ಕಿಂತ ಮನುಷ್ಯನಿಗೆ ಯಾವ ಶ್ರೇಷ್ಠತೆಯೂ ಇಲ್ಲ; ಎಲ್ಲವೂ ವ್ಯರ್ಥ.
ಪ್ರಸಂಗಿ 3 : 20 (KNV)
ಎಲ್ಲವೂ ಒಂದೇ ಸ್ಥಳಕ್ಕೆ ಹೋಗುತ್ತವೆ; ಎಲ್ಲವು ಗಳೂ ಮಣ್ಣಿನವುಗಳೇ ಮತ್ತು ಎಲ್ಲವೂ ಮಣ್ಣಿಗೆ ಸೇರುತ್ತವೆ.
ಪ್ರಸಂಗಿ 3 : 21 (KNV)
ಮನುಷ್ಯನ ಪ್ರಾಣವು ಮೇಲಕ್ಕೆ ಹೋಗುತ್ತದೆ ಎಂದೂ ಮೃಗದ ಪ್ರಾಣವು ಭೂಮಿಯ ಕೆಳಕ್ಕೆ ಹೋಗುತ್ತದೆ ಎಂದೂ ಯಾವನು ತಿಳಿದಾನು?ಆದಕಾರಣ ಮನುಷ್ಯನು ತನ್ನ ಸ್ವಂತ ಕೆಲಸಗಳಲ್ಲಿ ಆನಂದಿಸುವದಕ್ಕಿಂತ ಒಳ್ಳೆಯದು ಯಾವದೂ ಇಲ್ಲ ವೆಂದು ನಾನು ಗ್ರಹಿಸುತ್ತೇನೆ; ಅದೇ ಅವನ ಪಾಲು; ಅದರಿಂದ ತನ್ನ ಜೀವಮಾನದ ನಂತರ ಸಂಭವಿಸುವದನ್ನು ನೋಡುವಂತೆ ಯಾವನು ಅವನನ್ನು ಪುನಃ ಬರಮಾಡುತ್ತಾನೆ.?
ಪ್ರಸಂಗಿ 3 : 22 (KNV)
ಆದಕಾರಣ ಮನುಷ್ಯನು ತನ್ನ ಸ್ವಂತ ಕೆಲಸಗಳಲ್ಲಿ ಆನಂದಿಸುವದಕ್ಕಿಂತ ಒಳ್ಳೆಯದು ಯಾವದೂ ಇಲ್ಲ ವೆಂದು ನಾನು ಗ್ರಹಿಸುತ್ತೇನೆ; ಅದೇ ಅವನ ಪಾಲು; ಅದರಿಂದ ತನ್ನ ಜೀವಮಾನದ ನಂತರ ಸಂಭವಿಸುವದನ್ನು ನೋಡುವಂತೆ ಯಾವನು ಅವನನ್ನು ಪುನಃ ಬರಮಾಡುತ್ತಾನೆ.?

1 2 3 4 5 6 7 8 9 10 11 12 13 14 15 16 17 18 19 20 21 22

BG:

Opacity:

Color:


Size:


Font: