ಙ್ಞಾನೋಕ್ತಿಗಳು 4 : 1 (KNV)
ಮಕ್ಕಳಿರಾ, ತಂದೆಯ ಶಿಕ್ಷಣವನ್ನು ನೀವು ಕೇಳಿರಿ. ವಿವೇಕವನ್ನು ಗ್ರಹಿಸುವಂತೆ ನೋಡಿರಿ.
ಙ್ಞಾನೋಕ್ತಿಗಳು 4 : 2 (KNV)
ನಾನು ನಿಮಗೆ ಸುಬೋಧನೆಯನ್ನು ಮಾಡುವೆನು; ನೀವು ನನ್ನ ಕಟ್ಟಳೆಯನ್ನು ಬಿಡಬೇಡಿರಿ.
ಙ್ಞಾನೋಕ್ತಿಗಳು 4 : 3 (KNV)
ನಾನು ಕೋಮಲನೂ ನನ್ನ ತಾಯಿಯ ದೃಷ್ಟಿಯಲ್ಲಿ ಪ್ರಿಯನಾಗಿ ಒಬ್ಬನೇ ಆಗಿದ್ದು ನನ್ನ ತಂದೆಯ ಮಗ ನಾಗಿದ್ದೇನೆ.
ಙ್ಞಾನೋಕ್ತಿಗಳು 4 : 4 (KNV)
ಅವನು ಬೋಧಿಸಿ ನನಗೆ ಹೇಳಿದ್ದೇ ನಂದರೆ--ನನ್ನ ಮಾತುಗಳನ್ನು ನಿನ್ನ ಹೃದಯವು ಹಿಡಿದುಕೊಳ್ಳಲಿ; ನನ್ನ ಆಜ್ಞೆಗಳನ್ನು ಕೈಕೊಂಡು ಜೀವಿಸು.
ಙ್ಞಾನೋಕ್ತಿಗಳು 4 : 5 (KNV)
ಜ್ಞಾನವನ್ನೂ ವಿವೇಕವನ್ನೂ ಸಂಪಾದಿಸು; ಅವುಗಳನ್ನು ಮರೆಯದಿರು, ಅಲ್ಲದೆ ನನ್ನ ಬಾಯಿಯ ಮಾತುಗಳನ್ನು ನಿರಾಕರಿಸಬೇಡ.
ಙ್ಞಾನೋಕ್ತಿಗಳು 4 : 6 (KNV)
ಅವುಗಳನ್ನು ತ್ಯಜಿಸ ದಿದ್ದರೆ ಅವು ನಿನ್ನನ್ನು ಕಾಯುವವು, ಅವುಗಳನ್ನು ಪ್ರೀತಿಸಿದರೆ ಅವು ನಿನ್ನನ್ನು ಕಾಪಾಡುವವು.
ಙ್ಞಾನೋಕ್ತಿಗಳು 4 : 7 (KNV)
ಜ್ಞಾನವೇ ಮುಖ್ಯವಾದದ್ದು; ಆದದರಿಂದ ಜ್ಞಾನವನ್ನು ಸಂಪಾ ದಿಸು, ನಿನ್ನ ಎಲ್ಲಾ ಸಂಪತ್ತಿನಿಂದ ವಿವೇಕವನ್ನು ಪಡೆ ದುಕೋ.
ಙ್ಞಾನೋಕ್ತಿಗಳು 4 : 8 (KNV)
ಆಕೆಯನ್ನು ನೀನು ಮೇಲೆತ್ತಿದರೆ ಆಕೆಯು ನಿನ್ನನ್ನು ಮೇಲೆತ್ತುವಳು; ಆಕೆಯನ್ನು ನೀನು ಅಪ್ಪಿ ಕೊಂಡರೆ ಆಕೆಯು ನಿನ್ನನ್ನು ಘನತೆಗೆ ತರುವಳು.
ಙ್ಞಾನೋಕ್ತಿಗಳು 4 : 9 (KNV)
ಆಕೆಯು ನಿನ್ನ ತಲೆಗೆ ಕೃಪೆಯ ಆಭರಣವಾಗಿರುವಳು; ಆಕೆಯು ನಿನಗೆ ಘನತೆಯ ಕಿರೀಟವನ್ನು ಒಪ್ಪಿಸುವಳು.
ಙ್ಞಾನೋಕ್ತಿಗಳು 4 : 10 (KNV)
ಓ ನನ್ನ ಮಗನೇ, ಆಲಿಸಿ ನನ್ನ ಮಾತುಗಳನ್ನು ಅಂಗೀಕರಿಸು; ಆಗ ನಿನ್ನ ಜೀವಿತದ ವರುಷಗಳು ಹೆಚ್ಚಾಗುವವು.
ಙ್ಞಾನೋಕ್ತಿಗಳು 4 : 11 (KNV)
ಜ್ಞಾನದ ಮಾರ್ಗದಲ್ಲಿ ನಾನು ನಿನಗೆ ಬೋಧಿಸಿದೆನು; ಸರಿಯಾದ ದಾರಿಗಳಲ್ಲಿ ನಾನು ನಿನ್ನನ್ನು ನಡಿಸಿದೆನು.
ಙ್ಞಾನೋಕ್ತಿಗಳು 4 : 12 (KNV)
ನೀನು ನಡೆಯುವಾಗ ನಿನ್ನ ಹೆಜ್ಜೆಗೆ ಇಕ್ಕಟ್ಟಾಗದು; ನೀನು ಓಡುವಾಗ ಮುಗ್ಗರಿಸುವದಿಲ್ಲ.
ಙ್ಞಾನೋಕ್ತಿಗಳು 4 : 13 (KNV)
ಶಿಕ್ಷಣವನ್ನು ಗಟ್ಟಿಯಾಗಿ ಹಿಡಿದುಕೋ, ಅದು ನಿನ್ನಿಂದ ತೊಲಗದೆ ಇರಲಿ. ಅದನ್ನು ಕಾಪಾಡು. ಅದು ನಿನ್ನ ಜೀವವಾಗಿದೆ.
ಙ್ಞಾನೋಕ್ತಿಗಳು 4 : 14 (KNV)
ದುಷ್ಟರ ದಾರಿಯೊಳಗೆ ಪ್ರವೇಶಿಸದಿರು, ಕೆಟ್ಟವರ ಮಾರ್ಗದಲ್ಲಿ ಹೋಗಬೇಡ.
ಙ್ಞಾನೋಕ್ತಿಗಳು 4 : 15 (KNV)
ಅದನ್ನು ತಪ್ಪಿಸು, ಅದರ ಪಕ್ಕದಲ್ಲಿ ಹಾದು ಹೋಗ ಬೇಡ, ಅದರಿಂದ ಹಿಂತಿರುಗಿ ಮುಂದೆ ನಡೆ.
ಙ್ಞಾನೋಕ್ತಿಗಳು 4 : 16 (KNV)
ಕೇಡು ಮಾಡದಿದ್ದರೆ ಅವರು ನಿದ್ರೆಹೋಗುವದಿಲ್ಲ; ಯಾರ ನ್ನಾದರೂ ಬೀಳಿಸದೆ ಇದ್ದರೆ ಅವರ ನಿದ್ರೆಗೆ ಭಂಗ ವಾಗುವದು.
ಙ್ಞಾನೋಕ್ತಿಗಳು 4 : 17 (KNV)
ಅವರು ದುಷ್ಟತನದ ರೊಟ್ಟಿಯನ್ನು ತಿಂದು ಬಲಾತ್ಕಾರದ ದ್ರಾಕ್ಷಾರಸವನ್ನು ಕುಡಿಯು ತ್ತಾರೆ.
ಙ್ಞಾನೋಕ್ತಿಗಳು 4 : 18 (KNV)
ಆದರೆ ಸಂಪೂರ್ಣವಾದ ದಿನಕ್ಕೆ ಹೆಚ್ಚೆಚ್ಚಾಗಿ ಹೊಳೆಯುವ ದೀಪದಂತೆ ನ್ಯಾಯವಂತರ ದಾರಿಯು ಹೊಳೆಯುವದು.
ಙ್ಞಾನೋಕ್ತಿಗಳು 4 : 19 (KNV)
ದುಷ್ಟರ ಮಾರ್ಗವು ಕತ್ತಲೆ ಯಂತಿದೆ. ಅವರು ಯಾವದಕ್ಕೆ ಎಡವಿ ಬೀಳುತ್ತಾರೋ ಅದು ಅವರಿಗೆ ಗೊತ್ತಾಗದು.
ಙ್ಞಾನೋಕ್ತಿಗಳು 4 : 20 (KNV)
ನನ್ನ ಮಗನೇ, ನನ್ನ ಮಾತುಗಳನ್ನು ಆಲಿಸು; ನನ್ನ ನುಡಿಗಳಿಗೆ ಕಿವಿಗೊಡು.
ಙ್ಞಾನೋಕ್ತಿಗಳು 4 : 21 (KNV)
ಅವುಗಳು ನಿನ್ನ ಕಣ್ಣುಗಳಿಗೆ ತಪ್ಪಿಹೋಗದೆ ಇರಲಿ; ಅವುಗಳನ್ನು ನಿನ್ನ ಹೃದಯದ ಮಧ್ಯದಲ್ಲಿ ಇಟ್ಟುಕೋ.
ಙ್ಞಾನೋಕ್ತಿಗಳು 4 : 22 (KNV)
ಅವುಗಳನ್ನು ಕಂಡುಕೊಳ್ಳುವವರಿಗೆ ಅವು ಜೀವವೂ ಅವರ ದೇಹ ಕ್ಕೆಲ್ಲಾ ಆರೋಗ್ಯವೂ ಆಗಿವೆ.
ಙ್ಞಾನೋಕ್ತಿಗಳು 4 : 23 (KNV)
ಬಹು ಜಾಗ್ರತೆಯಿಂದ ನಿನ್ನ ಹೃದಯವನ್ನು ಕಾಪಾಡಿಕೋ; ಜೀವಧಾರೆಗಳು ಅದರೊಳಗಿಂದ ಹೊರಡುವವು.
ಙ್ಞಾನೋಕ್ತಿಗಳು 4 : 24 (KNV)
ವಕ್ರಬಾಯಿ ಯನ್ನು ನಿನ್ನಿಂದ ತೆಗೆದುಬಿಡು; ಕೆಟ್ಟ ತುಟಿಗಳನ್ನು ನಿನ್ನಿಂದ ದೂರ ಇಡು.
ಙ್ಞಾನೋಕ್ತಿಗಳು 4 : 25 (KNV)
ನಿನ್ನ ಕಣ್ಣುಗಳು ಮುಂದೆಯೇ ನೋಡಲಿ. ನಿನ್ನ ಕಣ್ಣು ರೆಪ್ಪೆಗಳು ನೆಟ್ಟಗೆ ನಿನ್ನ ಮುಂದೆಯೇ ನೋಡಲಿ.
ಙ್ಞಾನೋಕ್ತಿಗಳು 4 : 26 (KNV)
ನೀನು ನಡೆಯುವ ದಾರಿ ಯನ್ನು ವಿಮರ್ಶಿಸಿ ನೋಡು; ನಿನ್ನ ಎಲ್ಲಾ ಮಾರ್ಗ ಗಳು ಸ್ಥಿರವಾಗಿರಲಿ.ನಿನ್ನ ಬಲಕ್ಕಾಗಲಿ ಎಡಕ್ಕಾಗಲಿ ತಿರುಗಬೇಡ; ಕೇಡಿನಿಂದ ನಿನ್ನ ಪಾದವನ್ನು ತಪ್ಪಿಸು.
ಙ್ಞಾನೋಕ್ತಿಗಳು 4 : 27 (KNV)
ನಿನ್ನ ಬಲಕ್ಕಾಗಲಿ ಎಡಕ್ಕಾಗಲಿ ತಿರುಗಬೇಡ; ಕೇಡಿನಿಂದ ನಿನ್ನ ಪಾದವನ್ನು ತಪ್ಪಿಸು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27

BG:

Opacity:

Color:


Size:


Font: