ಙ್ಞಾನೋಕ್ತಿಗಳು 24 : 1 (KNV)
ಕೆಟ್ಟವರಿಗೆ ವಿರೋಧವಾಗಿ ನೀನು ಅಸೂಯೆಪಡದಿರು; ಇಲ್ಲವೆ ಅವರ ಸಂಗಡ ಇರುವದಕ್ಕೆ ಅಪೇಕ್ಷಿಸಬೇಡ;
ಙ್ಞಾನೋಕ್ತಿಗಳು 24 : 2 (KNV)
ಅವರ ಹೃದಯವು ನಾಶನವನ್ನು ಅಭ್ಯಾಸಿಸುತ್ತದೆ; ಅವರ ತುಟಿಗಳು ಹಾನಿ ಯನ್ನು ಪ್ರಸ್ತಾಪಿಸುತ್ತವೆ.
ಙ್ಞಾನೋಕ್ತಿಗಳು 24 : 3 (KNV)
ಜ್ಞಾನದಿಂದ ಮನೆಯು ಕಟ್ಟಲ್ಪಡುತ್ತದೆ; ವಿವೇಕದಿಂದ ಅದು ಸ್ಥಿರಗೊಳ್ಳುತ್ತದೆ;
ಙ್ಞಾನೋಕ್ತಿಗಳು 24 : 4 (KNV)
ತಿಳುವಳಿಕೆಯಿಂದ ಎಲ್ಲಾ ಅಮೂಲ್ಯವಾದ ಮತ್ತು ಇಷ್ಟ ಸಂಪತ್ತಿನಿಂದ ಕೋಣೆಗಳು ತುಂಬಲ್ಪಡುವವು.
ಙ್ಞಾನೋಕ್ತಿಗಳು 24 : 5 (KNV)
ಜ್ಞಾನಿಯು ಬಲವುಳ್ಳವನು; ಹೌದು, ತಿಳುವಳಿಕೆಯು ಳ್ಳವನು ಬಲವನ್ನು ಹೆಚ್ಚಿಸಿಕೊಳ್ಳುತ್ತಾನೆ.
ಙ್ಞಾನೋಕ್ತಿಗಳು 24 : 6 (KNV)
ಜ್ಞಾನಯುಕ್ತ ವಾದ ಆಲೋಚನೆಯಿಂದ ನಿನ್ನ ಯುದ್ಧವನ್ನು ನಡಿ ಸುತ್ತೀ; ಬಹುಮಂದಿ ಸಲಹೆಗಾರರು ಇರುವಲ್ಲಿ ಸುರ ಕ್ಷಣೆ ಇರುತ್ತದೆ.
ಙ್ಞಾನೋಕ್ತಿಗಳು 24 : 7 (KNV)
ಜ್ಞಾನವು ಬುದ್ಧಿಹೀನನಿಗೆ ನಿಲುಕದ್ದಾ ಗಿದೆ. ದ್ವಾರದಲ್ಲಿ ಅವನು ತನ್ನ ಬಾಯಿಯನ್ನು ತೆರೆಯು ವದಿಲ್ಲ.
ಙ್ಞಾನೋಕ್ತಿಗಳು 24 : 8 (KNV)
ಕೇಡನ್ನು ಕಲ್ಪಿಸುವವನು ಕುಚೋದ್ಯಗಾರ ನೆಂದು ಕರೆಯಲ್ಪಡುವನು.
ಙ್ಞಾನೋಕ್ತಿಗಳು 24 : 9 (KNV)
ಬುದ್ಧಿಹೀನನ ಆಲೋ ಚನೆಯು ಪಾಪ; ಪರಿಹಾಸ್ಯಗಾರನು ಮನುಷ್ಯರಿಗೆ ಅಸಹ್ಯ.
ಙ್ಞಾನೋಕ್ತಿಗಳು 24 : 10 (KNV)
ಇಕ್ಕಟ್ಟಿನ ದಿನದಲ್ಲಿ ನೀನು ಬಳಲಿಹೋದರೆ ನಿನ್ನ ಬಲವು ಕೊಂಚವಾಗಿದೆ.
ಙ್ಞಾನೋಕ್ತಿಗಳು 24 : 11 (KNV)
ಮರಣಕ್ಕೆ ಸೆಳೆಯ ಲ್ಪಟ್ಟವನನ್ನು ಬಿಡಿಸುವದಕ್ಕೂ ವಧಿಸಲ್ಪಡುವದಕ್ಕೆ ಸಿದ್ಧವಾದವರನ್ನು ನೀನು ರಕ್ಷಿಸಲೂ ಹಿಂದೆಗೆದರೆ
ಙ್ಞಾನೋಕ್ತಿಗಳು 24 : 12 (KNV)
ನೀನು--ಇಗೋ, ಅದು ನನಗೆ ಗೊತ್ತಿಲ್ಲ ಎಂದು ಹೇಳಿದರೆ ಹೃದಯವನ್ನು ಪರಿಶೋಧಿಸುವಾತನು ಅದನ್ನು ಯೋಚಿಸುವದಿಲ್ಲವೋ? ನಿನ್ನ ಆತ್ಮವನ್ನು ಕಾಯುವಾತನು ಅದನ್ನು ತಿಳಿಯುವದಿಲ್ಲವೋ? ಪ್ರತಿ ಯೊಬ್ಬನಿಗೆ ತನ್ನ ಕಾರ್ಯಗಳಿಗನುಸಾರವಾಗಿ ಆತನು ಪ್ರತಿಫಲವನ್ನು ಕೊಡದೆ ಇರುವನೇ?
ಙ್ಞಾನೋಕ್ತಿಗಳು 24 : 13 (KNV)
ನನ್ನ ಮಗನೇ, ಜೇನು ಚೆನ್ನಾಗಿರುವದರಿಂದಲೂ ನಿನ್ನ ಬಾಯಿಗೆ ಜೇನು ತುಪ್ಪವು ಸಿಹಿಯಾಗಿರುವದರಿಂದಲೂ ಅದನ್ನು ತಿನ್ನು;
ಙ್ಞಾನೋಕ್ತಿಗಳು 24 : 14 (KNV)
ಹೀಗೆ ನಿನ್ನ ಪ್ರಾಣಕ್ಕೆ ಜ್ಞಾನದ ತಿಳುವಳಿಕೆಯು ಇರುವದು; ಅದು ಸಿಕ್ಕಿದಾಗ ಬಹುಮಾನವಿರುವದು; ನಿನ್ನ ನಿರೀಕ್ಷೆಯು ನಿರರ್ಥಕವಾಗುವದಿಲ್ಲ.
ಙ್ಞಾನೋಕ್ತಿಗಳು 24 : 15 (KNV)
ದುಷ್ಟನೇ, ನೀತಿವಂತನ ನಿವಾಸಕ್ಕೆ ಹೊಂಚುಹಾಕಬೇಡ; ಅವನ ವಿಶ್ರಾಂತಿಯ ಸ್ಥಳವನ್ನು ಸೂರೆಮಾಡಬೇಡ;
ಙ್ಞಾನೋಕ್ತಿಗಳು 24 : 16 (KNV)
ನೀತಿ ವಂತನು ಏಳು ಸಾರಿ ಬಿದ್ದರೂ ಮತ್ತೆ ಏಳುತ್ತಾನೆ; ಆದರೆ ದುಷ್ಟನು ಕೇಡಿಗೆ ಬೀಳುವನು.
ಙ್ಞಾನೋಕ್ತಿಗಳು 24 : 17 (KNV)
ನಿನ್ನ ಶತ್ರು ಬಿದ್ದರೆ ಸಂತೋಷಿಸಬೇಡ; ಅವನು ಎಡವಿದರೆ ನಿನ್ನ ಹೃದಯವು ಹರ್ಷಿಸದಿರಲಿ;
ಙ್ಞಾನೋಕ್ತಿಗಳು 24 : 18 (KNV)
ಕರ್ತನು ಅದನ್ನು ನೋಡಿದಾಗ ಅದು ಆತನಿಗೆ ಇಷ್ಟವಿಲ್ಲದ್ದರಿಂದ ಆತನು ಅವನ ಕಡೆಯಿಂದ ತನ್ನ ಕೋಪವನ್ನು ತಿರುಗಿಸಾನು.
ಙ್ಞಾನೋಕ್ತಿಗಳು 24 : 19 (KNV)
ಕೆಟ್ಟವರ ಮೇಲೆ ಉರಿಗೊಳ್ಳಬೇಡ; ಇಲ್ಲವೆ ದುಷ್ಟ ರಿಗಾಗಿ ಅಸೂಯೆಪಡಬೇಡ;
ಙ್ಞಾನೋಕ್ತಿಗಳು 24 : 20 (KNV)
ಕೆಡುಕನಿಗೆ ಪ್ರತಿ ಫಲವು ಇರುವದಿಲ್ಲ; ದುಷ್ಟರ ದೀಪವು ಆರಿಹೋಗು ವದು.
ಙ್ಞಾನೋಕ್ತಿಗಳು 24 : 21 (KNV)
ನನ್ನ ಮಗನೇ, ಕರ್ತನಿಗೂ ಅರಸನಿಗೂ ಭಯಪಡು; ಭಯಪಡದವರ ಗೊಡವೆಗೆ ಹೋಗ ಬೇಡ.
ಙ್ಞಾನೋಕ್ತಿಗಳು 24 : 22 (KNV)
ಅವರ ವಿಪತ್ತು ಫಕ್ಕನೆ ಸಂಭವಿಸುವದು; ಅವರಿಬ್ಬರ ನಾಶನವು ಯಾರಿಗೆ ತಿಳಿದೀತು?
ಙ್ಞಾನೋಕ್ತಿಗಳು 24 : 23 (KNV)
ಇವು ಸಹ ಜ್ಞಾನಿಗಳಿಗೆ ಸಂಬಂಧಪಟ್ಟಿವೆ. ನ್ಯಾಯವಿಚಾರಣೆ ಯಲ್ಲಿ ಪಕ್ಷಪಾತವು ಸರಿಯಲ್ಲ.
ಙ್ಞಾನೋಕ್ತಿಗಳು 24 : 24 (KNV)
ದುಷ್ಟನಿಗೆ--ನೀನು ನೀತಿವಂತನು ಎಂದು ಹೇಳುವವನನ್ನು ಜನರು ಶಪಿಸು ವರು, ಜನಾಂಗಗಳು ಅವನನ್ನು ಹೇಸಿಕೊಳ್ಳುವರು.
ಙ್ಞಾನೋಕ್ತಿಗಳು 24 : 25 (KNV)
ಗದರಿಸುವವರಿಗೆ ಆನಂದವಾಗುವದು; ಅವರ ಮೇಲೆ ಶುಭದಾಯಕ ಆಶೀರ್ವಾದವು ಬರುವದು.
ಙ್ಞಾನೋಕ್ತಿಗಳು 24 : 26 (KNV)
ಸರಿಯಾಗಿ ಉತ್ತರಿಸುವವನ ತುಟಿಗಳನ್ನು ಪ್ರತಿ ಯೊಬ್ಬನು ಮುದ್ದಿಡುವನು.
ಙ್ಞಾನೋಕ್ತಿಗಳು 24 : 27 (KNV)
ಹೊರಗೆ ನಿನ್ನ ಕೆಲಸ ವನ್ನು ಸಿದ್ಧಪಡಿಸಿಕೊ; ಅದು ಹೊಲದಲ್ಲಿ ನಿನಗೋಸ್ಕರ ಸರಿಯಾಗುವಂತೆ ಮಾಡಿಕೊ; ತರುವಾಯ ನಿನ್ನ ಮನೆಯನ್ನು ಕಟ್ಟಿಕೋ.
ಙ್ಞಾನೋಕ್ತಿಗಳು 24 : 28 (KNV)
ಕಾರಣವಿಲ್ಲದೆ ನೆರೆಯವನಿಗೆ ವಿರುದ್ಧವಾಗಿ ಸಾಕ್ಷಿ ಹೇಳಬೇಡ; ನಿನ್ನ ತುಟಿಗಳಿಂದ ಮೋಸಮಾಡಬೇಡ.
ಙ್ಞಾನೋಕ್ತಿಗಳು 24 : 29 (KNV)
ನನಗೆ ಅವನು ಮಾಡಿದಂತೆ ನಾನೂ ಅವನಿಗೆ ಮಾಡುವೆನು; ಅವನು ಮಾಡಿದ್ದಕ್ಕೆ ಸರಿಯಾಗಿ ಮುಯ್ಯಿ ತೀರಿಸುವೆನು ಎಂದು ಹೇಳಬೇಡ.
ಙ್ಞಾನೋಕ್ತಿಗಳು 24 : 30 (KNV)
ಸೋಮಾರಿಯ ಹೊಲದ ಪಕ್ಕದಲ್ಲಿಯೂ ಬುದ್ಧಿ ಹೀನನ ದ್ರಾಕ್ಷೇ ತೋಟದ ಕಡೆಯಲ್ಲಿಯೂ ನಾನು ಹಾದು ಹೋದೆನು;
ಙ್ಞಾನೋಕ್ತಿಗಳು 24 : 31 (KNV)
ಆಗ ಇಗೋ, ಹೊಲವೆಲ್ಲವೂ ಮುಳ್ಳು ಗಿಡಗಳಿಂದ ಬೆಳೆದು ಕಳೆಗಳು ಅವುಗಳನ್ನು ಮುಚ್ಚಿ ಅದರ ಕಲ್ಲಿನ ಗೋಡೆಯು ಬಿದ್ದುಹೋಯಿತು.
ಙ್ಞಾನೋಕ್ತಿಗಳು 24 : 32 (KNV)
ಆಗ ನಾನು ನೋಡಿ ಮನಸ್ಸಿಟ್ಟೆನು; ದೃಷ್ಟಿಸಿ ಶಿಕ್ಷಿತನಾದೆನು.
ಙ್ಞಾನೋಕ್ತಿಗಳು 24 : 33 (KNV)
ಇನ್ನು ಸ್ವಲ್ಪ ನಿದ್ರೆ, ಇನ್ನು ಸ್ವಲ್ಪ ತೂಕಡಿಕೆ, ನಿದ್ರೆಗಾಗಿ ಇನ್ನು ಕೊಂಚ ಕೈ ಮುದುರಿ ಕೊಳ್ಳುವದು;ಹೀಗೆ ನಿನ್ನ ಬಡತನವು ಪ್ರಯಾಣಿಕನ ಹಾಗೆಯೂ ನಿನ್ನ ಕೊರತೆಯು ಆಯುಧದಾರ ನಂತೆಯೂ ಬರುವವು.
ಙ್ಞಾನೋಕ್ತಿಗಳು 24 : 34 (KNV)
ಹೀಗೆ ನಿನ್ನ ಬಡತನವು ಪ್ರಯಾಣಿಕನ ಹಾಗೆಯೂ ನಿನ್ನ ಕೊರತೆಯು ಆಯುಧದಾರ ನಂತೆಯೂ ಬರುವವು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34

BG:

Opacity:

Color:


Size:


Font: