ಙ್ಞಾನೋಕ್ತಿಗಳು 20 : 1 (KNV)
ದ್ರಾಕ್ಷಾರಸವು ಪರಿಹಾಸ್ಯಕರವಾಗಿದೆ; ಮಾದಕ ಮದ್ಯವು ಉದ್ರೇಕಿಸುತ್ತದೆ. ಇದ ರಿಂದ ಮೋಸಹೋದವನು ಜ್ಞಾನಿಯಲ್ಲ.
ಙ್ಞಾನೋಕ್ತಿಗಳು 20 : 2 (KNV)
ಅರಸನ ಭಯವು ಸಿಂಹದ ಗರ್ಜನೆಯಂತಿದೆ; ಅವನಿಗೆ ಕೋಪ ವನ್ನೆಬ್ಬಿಸುವವನು ತನ್ನ ಪ್ರಾಣಕ್ಕೆ ವಿರೋಧವಾಗಿ ಪಾಪ ಮಾಡುತ್ತಾನೆ.
ಙ್ಞಾನೋಕ್ತಿಗಳು 20 : 3 (KNV)
ಕಲಹವನ್ನು ತಡೆಯುವವನು ಮಾನಕ್ಕೆ ಯೋಗ್ಯನು; ಪ್ರತಿಯೊಬ್ಬ ಬುದ್ಧಿಹೀನನು ತಲೆಹಾಕು ತ್ತಾನೆ.
ಙ್ಞಾನೋಕ್ತಿಗಳು 20 : 4 (KNV)
ಮೈಗಳ್ಳನು ಚಳಿಯ ನಿಮಿತ್ತವಾಗಿ ಉಳುವದಿಲ್ಲ; ಆದಕಾರಣ ಸುಗ್ಗಿಯಲ್ಲಿ ಅವನು ಬೇಡಿಕೊಂಡರೂ ಏನೂ ಸಿಕ್ಕುವದಿಲ್ಲ.
ಙ್ಞಾನೋಕ್ತಿಗಳು 20 : 5 (KNV)
ಮನುಷ್ಯನ ಹೃದಯದ ಆಲೋ ಚನೆಯು ಆಳವಾದ (ಬಾವಿಯ) ನೀರಿನಂತಿದೆ; ವಿವೇ ಕಿಯು ಅದನ್ನು ಸೇದುವನು.
ಙ್ಞಾನೋಕ್ತಿಗಳು 20 : 6 (KNV)
ಅನೇಕರಲ್ಲಿ ಪ್ರತಿಯೊ ಬ್ಬನು ತಮ್ಮ ಸ್ವಂತ ಸೌಜನ್ಯವನ್ನು ಸಾರುವನು; ನಂಬಿ ಗಸ್ತನಾದ ಮನುಷ್ಯನನ್ನು ಯಾರು ಕಂಡುಕೊಳ್ಳಬಲ್ಲರು?
ಙ್ಞಾನೋಕ್ತಿಗಳು 20 : 7 (KNV)
ನೀತಿವಂತನು ತನ್ನ ಯಥಾರ್ಥತೆಯಲ್ಲಿ ನಡೆಯುತ್ತಾನೆ; ಅವನು ಗತಿಸಿದ ಮೇಲೆ ಅವನ ಮಕ್ಕಳು ಆಶೀರ್ವದಿ ಸಲ್ಪಡುವರು.
ಙ್ಞಾನೋಕ್ತಿಗಳು 20 : 8 (KNV)
ನ್ಯಾಯತೀರ್ಪಿನ ಸಿಂಹಾಸನದ ಮೇಲೆ ಕೂತಿರುವ ಅರಸನು ತನ್ನ ಕಣ್ಣು ದೃಷ್ಟಿಯಿಂದ ಸಕಲ ಕೆಟ್ಟತನವನ್ನು ಚದರಿಸುವನು.
ಙ್ಞಾನೋಕ್ತಿಗಳು 20 : 9 (KNV)
ನನ್ನ ಹೃದಯವನ್ನು ಶುದ್ಧಿಮಾಡಿಕೊಂಡಿದ್ದೇನೆ, ನನ್ನ ಪಾಪದಿಂದ ನಾನು ಶುದ್ಧನು ಎಂದು ಯಾರು ಹೇಳಬಲ್ಲರು?
ಙ್ಞಾನೋಕ್ತಿಗಳು 20 : 10 (KNV)
ವಿಧ ವಿಧವಾದ ತೂಕಗಳೂ ತರತರವಾದ ಅಳತೆಗಳೂ ಇವೆರಡೂ ಸಮವಾಗಿಯೇ ಕರ್ತನಿಗೆ ಅಸಹ್ಯ.
ಙ್ಞಾನೋಕ್ತಿಗಳು 20 : 11 (KNV)
ತನ್ನ ಕೆಲಸವು ಶುದ್ಧವೋ ಇಲ್ಲವೆ ನ್ಯಾಯವೋ ಎಂಬದು ತನ್ನ ಕ್ರಿಯೆಗಳಿಂದಲೇ ಹುಡುಗನು ತೋರ್ಪಡಿಸಿ ಕೊಳ್ಳುತ್ತಾನೆ.
ಙ್ಞಾನೋಕ್ತಿಗಳು 20 : 12 (KNV)
ಕೇಳುವ ಕಿವಿ ನೋಡುವ ಕಣ್ಣು, ಇವೆರಡನ್ನು ಕರ್ತನು ಮಾಡಿದ್ದಾನೆ.
ಙ್ಞಾನೋಕ್ತಿಗಳು 20 : 13 (KNV)
ನೀನು ಬಡ ತನಕ್ಕೆ ಬಾರದಂತೆ ನಿದ್ರೆಯಲ್ಲಿ ಆಸಕ್ತಿಯುಳ್ಳವನಾಗಿರ ಬೇಡ; ನಿನ್ನ ಕಣ್ಣುಗಳನ್ನು ತೆರೆದರೆ ನೀನು ರೊಟ್ಟಿ ಯಿಂದ ತೃಪ್ತನಾಗುವಿ.
ಙ್ಞಾನೋಕ್ತಿಗಳು 20 : 14 (KNV)
ಇದು ನಿಷ್ಪ್ರಯೋಜಕವಾದದ್ದು, ಇದು ನಿಷ್ಪ್ರಯೋಜಕವಾದದ್ದು ಎಂದು ಕೊಳ್ಳು ವವನು ಹೇಳುತ್ತಾನೆ. ಅವನು ಹೋದ ಮೇಲೆ ಹೊಗ ಳುತ್ತಾನೆ.
ಙ್ಞಾನೋಕ್ತಿಗಳು 20 : 15 (KNV)
ಬಂಗಾರವೂ ಮಾಣಿಕ್ಯಗಳ ರಾಶಿಯೂ ಇವೆ. ತಿಳುವಳಿಕೆಯ ತುಟಿಗಳು ಅಮೂಲ್ಯವಾದ ರತ್ನ ವಾಗಿವೆ.
ಙ್ಞಾನೋಕ್ತಿಗಳು 20 : 16 (KNV)
ಪರರ ಹೊಣೆಯಾಗಿರುವ ಬಟ್ಟೆಯನ್ನು ತೆಗೆದುಕೋ; ಪರಸ್ತ್ರೀಗೋಸ್ಕರ ಅವನಿಂದ ಒತ್ತೆ ತೆಗೆ ದುಕೋ.
ಙ್ಞಾನೋಕ್ತಿಗಳು 20 : 17 (KNV)
ಮೋಸದಿಂದ ಸಿಕ್ಕಿದ ರೊಟ್ಟಿಯು ಮನು ಷ್ಯನಿಗೆ ರುಚಿ; ಆಮೇಲೆ ಅವನ ಬಾಯಿಯು ಮರಳಿ ನಿಂದ ತುಂಬುವದು.
ಙ್ಞಾನೋಕ್ತಿಗಳು 20 : 18 (KNV)
ಪ್ರತಿಯೊಂದು ಉದ್ದೇಶವು ಆಲೋಚನೆಯಿಂದ ಸಫಲವಾಗುವದು; ಹಿತವಾದ ಸಲಹೆಯಿಂದ ಯುದ್ಧಮಾಡು.
ಙ್ಞಾನೋಕ್ತಿಗಳು 20 : 19 (KNV)
ತಿರುಗುವ ಚಾಡಿ ಕೋರನು ಗುಟ್ಟುಗಳನ್ನು ರಟ್ಟುಮಾಡುತ್ತಾನೆ. ಆದ ಕಾರಣ ತನ್ನ ತುಟಿಗಳಿಂದ ಮುಖಸ್ತುತಿ ಮಾಡುವವನ ಗೊಡವೆಗೆ ಹೋಗಬೇಡ.
ಙ್ಞಾನೋಕ್ತಿಗಳು 20 : 20 (KNV)
ತನ್ನ ತಂದೆ ತಾಯಿಯನ್ನಾ ಗಲಿ ಶಪಿಸುವವನ ದೀಪವು ಮಂಕಾದ ಕತ್ತಲೆಯಲ್ಲಿ ಆರಿಹೋಗುವದು.
ಙ್ಞಾನೋಕ್ತಿಗಳು 20 : 21 (KNV)
ಮೊದಲು ಸ್ವಾಸ್ತ್ಯವನ್ನೂ ತ್ವರೆ ಯಾಗಿ ಹೊಂದಬಹುದು; ಅದರ ಕೊನೆಯು ಆಶೀ ರ್ವದಿಸಲ್ಪಡುವದಿಲ್ಲ.
ಙ್ಞಾನೋಕ್ತಿಗಳು 20 : 22 (KNV)
ನೀನು--ಕೇಡಿಗೆ ಮುಯ್ಯಿ ತೀರಿಸುವೆನು ಅನ್ನಬೇಡ; ಕರ್ತನನ್ನು ನಿರೀಕ್ಷಿಸು; ಆಗ ಆತನು ನಿನ್ನನ್ನು ರಕ್ಷಿಸುವನು.
ಙ್ಞಾನೋಕ್ತಿಗಳು 20 : 23 (KNV)
ವಿಧವಿಧವಾದ ತೂಕ ಗಳು ಕರ್ತನಿಗೆ ಅಸಹ್ಯವಾಗಿವೆ; ಮೋಸದ ತಕ್ಕಡಿಯು ಒಳ್ಳೇದಲ್ಲ.
ಙ್ಞಾನೋಕ್ತಿಗಳು 20 : 24 (KNV)
ಮನುಷ್ಯನ ನಡೆಗಳು ಕರ್ತನಿಂದಲೇ; ಹಾಗಾದರೆ ಒಬ್ಬ ಮನುಷ್ಯನು ತನ್ನ ಮಾರ್ಗವನ್ನು ಹೇಗೆ ತಿಳುಕೊಳ್ಳಬಲ್ಲನು?
ಙ್ಞಾನೋಕ್ತಿಗಳು 20 : 25 (KNV)
ಪರಿಶುದ್ಧವಾದದ್ದನ್ನು ನುಂಗಿದವನಾಗಿ ತರುವಾಯ ವಿಚಾರಿಸುವದಕ್ಕಾಗಿ ಆಣೆಯಿಟ್ಟು ಕೊಳ್ಳುವದು ಒಬ್ಬ ಮನುಷ್ಯನಿಗೆ ಉರ್ಲಾ ಗಿದೆ.
ಙ್ಞಾನೋಕ್ತಿಗಳು 20 : 26 (KNV)
ಜ್ಞಾನಿಯಾದ ಅರಸನು ದುಷ್ಟರನ್ನು ಚದರಿಸಿ ಅವರ ಮೇಲೆ ಚಕ್ರವನ್ನು ಎಳೆಯುತ್ತಾನೆ.
ಙ್ಞಾನೋಕ್ತಿಗಳು 20 : 27 (KNV)
ಮನುಷ್ಯನ ಆತ್ಮವು ಹೊಟ್ಟೆಯ ಒಳಭಾಗಗಳನ್ನು ಶೋಧಿಸುವಂಥ ಕರ್ತನ ದೀಪವಾಗಿವೆ.
ಙ್ಞಾನೋಕ್ತಿಗಳು 20 : 28 (KNV)
ಕರುಣೆಯೂ ಸತ್ಯವೂ ಅರಸನನ್ನು ಕಾಯುತ್ತದೆ; ಕರುಣೆಯಿಂದಲೇ ಅವನ ಸಿಂಹಾಸನವು ಸ್ಥಿರಗೊಳ್ಳುತ್ತದೆ.
ಙ್ಞಾನೋಕ್ತಿಗಳು 20 : 29 (KNV)
ಯೌವನಸ್ಥರ ಘನತೆಯು ಅವರ ಬಲವೇ; ಮುದುಕರ ಅಲಂಕಾರವು ನರೆತ ತಲೆಯೇ.
ಙ್ಞಾನೋಕ್ತಿಗಳು 20 : 30 (KNV)
ನೀಲಿಯಾದ ಗಾಯವು ದುಷ್ಟ ತ್ವವನ್ನು ತೊಳೆಯುತ್ತದೆ; ಹಾಗೆಯೇ ಏಟುಗಳು ಹೊಟ್ಟೆಯ ಒಳಭಾಗಗಳನ್ನು ಶುದ್ಧಮಾಡುತ್ತವೆ.
❮
❯