ಙ್ಞಾನೋಕ್ತಿಗಳು 18 : 1 (KNV)
ಅಭಿಲಾಷೆಯಿಂದ ಮನುಷ್ಯನು ತನ್ನನ್ನು ಪ್ರತ್ಯೇಕಿಸಿಕೊಂಡವನಾಗಿ ಎಲ್ಲಾ ಜ್ಞಾನ ಕ್ಕಾಗಿ ಹುಡುಕುತ್ತಾ ಕೈಹಾಕುತ್ತಾನೆ.
ಙ್ಞಾನೋಕ್ತಿಗಳು 18 : 2 (KNV)
ವಿವೇಕದಲ್ಲಿ ಬುದ್ಧಿಹೀನನಿಗೆ ಸಂತೋಷವಿಲ್ಲ; ತನ್ನ ಹೃದಯವನ್ನು ಹೊರಪಡಿಸಿಕೊಳ್ಳುವದೇ ಅವನಿಗೆ ಸಂತೋಷ.
ಙ್ಞಾನೋಕ್ತಿಗಳು 18 : 3 (KNV)
ದುಷ್ಟನು ಬಂದಾಗ ತಾತ್ಸಾರವೂ ಅವಮಾನದೊಂದಿಗೆ ನಿಂದೆಯೂ ಬರುತ್ತವೆ.
ಙ್ಞಾನೋಕ್ತಿಗಳು 18 : 4 (KNV)
ಮನುಷ್ಯನ ಬಾಯಿಯ ಮಾತುಗಳು ಆಳವಾದ ನೀರಿನಂತೆಯೂ ಜ್ಞಾನದ ಬುಗ್ಗೆಯು ಹರಿಯುವ ತೊರೆಯಂತೆಯೂ ಇವೆ.
ಙ್ಞಾನೋಕ್ತಿಗಳು 18 : 5 (KNV)
ನನ್ನ ನ್ಯಾಯತೀರ್ಪಿನಲ್ಲಿ ನೀತಿವಂತರನ್ನು ಕೆಡವುವಂತೆ ದುಷ್ಟ ರನ್ನು ಸ್ವೀಕರಿಸುವದು ಯುಕ್ತವಲ್ಲ.
ಙ್ಞಾನೋಕ್ತಿಗಳು 18 : 6 (KNV)
ಅವಿವೇಕಿಯ ತುಟಿಗಳು ಕಲಹದಲ್ಲಿ ಸೇರುವದರಿಂದ ಏಟುಗಳನ್ನು ತಿನ್ನುವದಕ್ಕೆ ಅವನ ಬಾಯಿಯು ಕೂಗಿಕೊಳ್ಳುತ್ತದೆ.
ಙ್ಞಾನೋಕ್ತಿಗಳು 18 : 7 (KNV)
ಬುದ್ಧಿಹೀನನ ಬಾಯಿಯು ಅವನ ನಾಶನ ಮತ್ತು ಅವನ ತುಟಿಗಳು ಪ್ರಾಣಕ್ಕೆ ಪಾಶ.
ಙ್ಞಾನೋಕ್ತಿಗಳು 18 : 8 (KNV)
ಚಾಡಿಕೋರನ ಮಾತುಗಳು ಗಾಯಗಳಂತೆ ಇದ್ದು ಹೊಟ್ಟೆಯೊಳಗೆ ಇಳಿದುಹೋಗುವವು.
ಙ್ಞಾನೋಕ್ತಿಗಳು 18 : 9 (KNV)
ಸೋಮಾರಿಯು ತನ್ನ ಕೆಲಸ ದಲ್ಲಿ ಬಹಳವಾಗಿ ಹಾಳುಮಾಡುವವನಿಗೆ ಸಹೋದ ರನು ಆಗಿದ್ದಾನೆ.
ಙ್ಞಾನೋಕ್ತಿಗಳು 18 : 10 (KNV)
ಕರ್ತನ ನಾಮವು ಬಲವಾದ ಬುರುಜು; ನೀತಿವಂತನು ಅದರೊಳಕ್ಕೆ ಓಡಿಹೋಗಿ ಭದ್ರವಾಗಿರುತ್ತಾನೆ.
ಙ್ಞಾನೋಕ್ತಿಗಳು 18 : 11 (KNV)
ಧನವಂತನ ಐಶ್ವರ್ಯವು ಅವನಿಗೆ ಬಲವಾದ ಪಟ್ಟಣವೂ ತನ್ನ ಅಭಿಪ್ರಾಯ ದಲ್ಲಿ ಎತ್ತರವಾದ ಗೋಡೆಯೂ ಆಗಿದೆ.
ಙ್ಞಾನೋಕ್ತಿಗಳು 18 : 12 (KNV)
ನಾಶನಕ್ಕೆ ಮುಂದೆ ಮನುಷ್ಯನ ಹೃದಯವು ಗರ್ವವಾಗಿದೆ; ಸನ್ಮಾನಕ್ಕೆ ಮುಂಚೆ ವಿನಯವಾಗಿದೆ.
ಙ್ಞಾನೋಕ್ತಿಗಳು 18 : 13 (KNV)
ಸಂಗತಿಯನ್ನು ಕೇಳುವದಕ್ಕೆ ಮುಂಚೆ ಉತ್ತರ ಕೊಡುವವರಿಗೆ ಅದು ಅವನಿಗೆ ಮೂರ್ಖತನವೂ ಅವಮಾನವೂ ಆಗಿದೆ.
ಙ್ಞಾನೋಕ್ತಿಗಳು 18 : 14 (KNV)
ತನ್ನ ಬಲಹೀನತೆಯನ್ನು ಮನುಷ್ಯನ ಆತ್ಮವು ಸಹಿಸುವದು; ಗಾಯಪಟ್ಟ ಆತ್ಮವನ್ನು ಸಹಿಸುವವರು ಯಾರು?
ಙ್ಞಾನೋಕ್ತಿಗಳು 18 : 15 (KNV)
ವಿವೇಕಿಯ ಹೃದಯವು ತಿಳುವಳಿಕೆಯನ್ನು ಸಂಪಾದಿಸುತ್ತದೆ; ಮತ್ತು ಜ್ಞಾನಿಯ ಕಿವಿಯು ತಿಳುವಳಿಕೆ ಯನ್ನು ಹುಡುಕುತ್ತದೆ.
ಙ್ಞಾನೋಕ್ತಿಗಳು 18 : 16 (KNV)
ಮನುಷ್ಯನ ದಾನವು ತನಗೆ ಅನುಕೂಲವಾಗಿದ್ದು ದೊಡ್ಡವರ ಸನ್ನಿಧಾನಕ್ಕೆ ಅವನನ್ನು ಕರಕೊಂಡು ಹೋಗುತ್ತದೆ.
ಙ್ಞಾನೋಕ್ತಿಗಳು 18 : 17 (KNV)
ತನ್ನ ಸಮರ್ಥನೆಯಲ್ಲಿ ಮೊದಲನೆಯವನು ನ್ಯಾಯವಾಗಿದ್ದಾನೆಂದು ತೋರು ತ್ತಾನೆ; ತನ್ನ ನೆರೆಯವನು ಬಂದು ಅವನನ್ನು ಶೋಧಿಸು ತ್ತಾನೆ.
ಙ್ಞಾನೋಕ್ತಿಗಳು 18 : 18 (KNV)
ಚೀಟು ಕಲಹಗಳನ್ನು ನಿಲ್ಲಿಸಿ ಬಲಿಷ್ಠರನ್ನು ಅಗಲಿಸುತ್ತದೆ;
ಙ್ಞಾನೋಕ್ತಿಗಳು 18 : 19 (KNV)
ಬಲವಾದ ಪಟ್ಟಣಕ್ಕಿಂತ ಅನ್ಯಾಯ ಹೊಂದಿದ ಸಹೋದರನನ್ನು ಸಂಪಾದಿಸುವದು ಕಷ್ಟ ಕರ. ಅವರ ಕಲಹಗಳು ಅರಮನೆಯ ಸಲಾಕಿಗಳಂತೆ ಇವೆ.
ಙ್ಞಾನೋಕ್ತಿಗಳು 18 : 20 (KNV)
ತನ್ನ ಬಾಯಿಯ ಫಲದಿಂದ ಮನುಷ್ಯನ ಹೊಟ್ಟೆಯು ತೃಪ್ತಿಹೊಂದುವದು; ತನ್ನ ತುಟಿಗಳ ಆದಾ ಯದಿಂದ ಅವನು ತೃಪ್ತಿಹೊಂದುವನು.
ಙ್ಞಾನೋಕ್ತಿಗಳು 18 : 21 (KNV)
ನಾಲಿಗೆಯ ವಶದಲ್ಲಿ ಮರಣವೂ ಜೀವವೂ ಇವೆ; ಅದನ್ನು ಪ್ರೀತಿಸುವವರು ಅದರ ಫಲವನ್ನು ತಿನ್ನುವರು.
ಙ್ಞಾನೋಕ್ತಿಗಳು 18 : 22 (KNV)
ಪತ್ನಿ ಯನ್ನು ದೊರಕಿಸಿಕೊಂಡವನು ಒಳ್ಳೇದನ್ನು ಸಂಪಾದಿಸಿ ದವನಾಗಿ ಕರ್ತನ ದಯೆಯನ್ನು ಹೊಂದುತ್ತಾನೆ.
ಙ್ಞಾನೋಕ್ತಿಗಳು 18 : 23 (KNV)
ಬಡವನು ವಿಜ್ಞಾಪನೆಗಳನ್ನು ಮಾಡುತ್ತಾನೆ; ಧನಿಕರು ಕಠಿಣವಾಗಿ ಉತ್ತರಕೊಡು ತ್ತಾರೆ.ಸ್ನೇಹಿತರಿದ್ದವನು ಸ್ನೇಹವಾಗಿ ನಡೆದುಕೊಳ್ಳಬೇಕು. ಸಹೋದರನಿಗಿಂತ ಹತ್ತಿರ ಹೊಂದಿಕೊಳ್ಳುವ ಸ್ನೇಹಿತನಿದ್ದಾನೆ.
ಙ್ಞಾನೋಕ್ತಿಗಳು 18 : 24 (KNV)
ಸ್ನೇಹಿತರಿದ್ದವನು ಸ್ನೇಹವಾಗಿ ನಡೆದುಕೊಳ್ಳಬೇಕು. ಸಹೋದರನಿಗಿಂತ ಹತ್ತಿರ ಹೊಂದಿಕೊಳ್ಳುವ ಸ್ನೇಹಿತನಿದ್ದಾನೆ.

1 2 3 4 5 6 7 8 9 10 11 12 13 14 15 16 17 18 19 20 21 22 23 24

BG:

Opacity:

Color:


Size:


Font: