ವಿಮೋಚನಕಾಂಡ 9 : 1 (KNV)
ಕರ್ತನು ಮೋಶೆಗೆ--ಫರೋಹನ ಬಳಿಗೆ ಹೋಗಿ ಅವನಿಗೆ--ಇಬ್ರಿಯರ ದೇವ ರಾದ ಕರ್ತನು ಹೀಗೆ ಹೇಳುತ್ತಾನೆ--ನನ್ನನ್ನು ಸೇವಿ ಸುವಂತೆ ನನ್ನ ಜನರನ್ನು ಕಳುಹಿಸು.
ವಿಮೋಚನಕಾಂಡ 9 : 2 (KNV)
ಅವರನ್ನು ಕಳುಹಿಸುವದಕ್ಕೆ ನಿರಾಕರಿಸಿ ಇನ್ನೂ ತಡೆದರೆ
ವಿಮೋಚನಕಾಂಡ 9 : 3 (KNV)
ಇಗೋ, ಕರ್ತನ ಕೈ ಹೊಲದಲ್ಲಿರುವ ನಿನ್ನ ಪಶುಗಳ ಮೇಲೆ ಇರುವದು. ಕುದುರೆ ಕತ್ತೆ ಒಂಟೆ ಎತ್ತು ಕುರಿ ಇವುಗಳ ಮೇಲೆ ಮಹಾ ಕಠಿಣವಾದ ರೋಗವು ಬರುವದು.
ವಿಮೋಚನಕಾಂಡ 9 : 4 (KNV)
ಇದಲ್ಲದೆ ಕರ್ತನು ಇಸ್ರಾಯೇಲ್ಯರ ಪಶುಗಳನ್ನು ವಿಂಗಡಿಸುವನು; ಇಸ್ರಾಯೇಲ್ ಮಕ್ಕಳಿಗಿರುವವು ಗಳಲ್ಲಿ ಒಂದೂ ಸಾಯುವದಿಲ್ಲ.
ವಿಮೋಚನಕಾಂಡ 9 : 5 (KNV)
ಇದಲ್ಲದೆ ಕರ್ತನು ಒಂದು ನಿರ್ದಿಷ್ಟವಾದ ಸಮಯವನ್ನು ನೇಮಿಸಿ--ಕರ್ತನು ಈ ಕಾರ್ಯವನ್ನು ನಾಳೆ ದೇಶದಲ್ಲಿ ಮಾಡು ವನು ಎಂದು ಹೇಳು ಅಂದನು.
ವಿಮೋಚನಕಾಂಡ 9 : 6 (KNV)
ಮರುದಿನ ಕರ್ತನು ಆ ಕಾರ್ಯವನ್ನು ಮಾಡಿ ದನು; ಐಗುಪ್ತ್ಯರ ಪಶುಗಳೆಲ್ಲಾ ಸತ್ತುಹೋದವು. ಇಸ್ರಾಯೇಲ್ ಮಕ್ಕಳ ಪಶುಗಳಲ್ಲಿ ಒಂದೂ ಸಾಯ ಲಿಲ್ಲ.
ವಿಮೋಚನಕಾಂಡ 9 : 7 (KNV)
ಫರೋಹನು ಕಳುಹಿಸಿ ನೋಡಿದಾಗ ಇಗೋ, ಇಸ್ರಾಯೇಲ್ಯರ ಪಶುಗಳಲ್ಲಿ ಒಂದೂ ಸತ್ತಿರಲಿಲ್ಲ. ಆದರೆ ಫರೋಹನ ಹೃದಯವು ಕಠಿಣವಾಗಿದ್ದದರಿಂದ ಅವನು ಜನರನ್ನು ಕಳುಹಿಸಲಿಲ್ಲ.
ವಿಮೋಚನಕಾಂಡ 9 : 8 (KNV)
ಆಗ ಕರ್ತನು ಮೋಶೆ ಆರೋನರಿಗೆ--ಕೈ ತುಂಬಾ ಒಲೆಯ ಬೂದಿಯನ್ನು ತೆಗೆದುಕೊಳ್ಳಿರಿ; ಅದನ್ನು ಮೋಶೆಯು ಫರೋಹನ ಕಣ್ಣುಗಳ ಮುಂದೆ ಆಕಾಶದ ಕಡೆಗೆ ತೂರಲಿ.
ವಿಮೋಚನಕಾಂಡ 9 : 9 (KNV)
ಆಗ ಅದು ಐಗುಪ್ತದೇಶದಲ್ಲೆಲ್ಲಾ ಸಣ್ಣ ಧೂಳಾಗಿ ಅದು ಐಗುಪ್ತದೇಶದಲ್ಲೆಲ್ಲಾ ಮನುಷ್ಯರ ಮೇಲೆಯೂ ಮೃಗಗಳ ಮೇಲೆಯೂ ಹುಣ್ಣುಗಳಾಗುವ ಬೊಕ್ಕೆಗಳು ಏಳುವಂತೆ ಮಾಡುವದು ಎಂದು ಹೇಳಿ ದನು.
ವಿಮೋಚನಕಾಂಡ 9 : 10 (KNV)
ಆಗ ಅವರು ಒಲೆಯ ಬೂದಿಯನ್ನು ತೆಗೆದು ಕೊಂಡು ಫರೋಹನ ಮುಂದೆ ನಿಂತರು. ಮೋಶೆಯು ಅದನ್ನು ಆಕಾಶದ ಕಡೆಗೆ ತೂರಿದನು. ಅದು ಮನುಷ್ಯ ರಲ್ಲಿಯೂ ಪಶುಗಳಲ್ಲಿಯೂ ಹರಡಿ ಹುಣ್ಣುಗಳಾಗು ವಂಥ ಬೊಕ್ಕೆಗಳಾದವು.
ವಿಮೋಚನಕಾಂಡ 9 : 11 (KNV)
ಇದಲ್ಲದೆ ಮಂತ್ರಗಾರರು ಹುಣ್ಣಿನ ನಿಮಿತ್ತ ಮೋಶೆಯ ಮುಂದೆ ನಿಂತುಕೊಳ್ಳ ಲಾರದೆ ಹೋದರು. ಹುಣ್ಣುಗಳು ಮಂತ್ರಗಾರರ ಲ್ಲಿಯೂ ಐಗುಪ್ತ್ಯರ ಮೇಲೆಲ್ಲಾ ಇದ್ದವು.
ವಿಮೋಚನಕಾಂಡ 9 : 12 (KNV)
ಆದರೆ ಕರ್ತನು ಫರೋಹನ ಹೃದಯವನ್ನು ಕಠಿಣ ಮಾಡಿ ದನು. ಕರ್ತನು ಮೋಶೆಗೆ ಹೇಳಿದಂತೆಯೇ ಅವನು ಅವರ ಮಾತನ್ನು ಕೇಳಲಿಲ್ಲ.
ವಿಮೋಚನಕಾಂಡ 9 : 13 (KNV)
ಕರ್ತನು ಮೋಶೆಗೆ--ಬೆಳಿಗ್ಗೆ ಎದ್ದು ಫರೋಹನ ಮುಂದೆ ನಿಂತುಕೊಂಡು ಅವನಿಗೆ--ಇಬ್ರಿಯರ ದೇವ ರಾದ ಕರ್ತನು ಹೀಗೆ ಹೇಳುತ್ತಾನೆ--ನನ್ನನ್ನು ಸೇವಿಸುವ ಹಾಗೆ ನನ್ನ ಜನರನ್ನು ಕಳುಹಿಸು.
ವಿಮೋಚನಕಾಂಡ 9 : 14 (KNV)
ಭೂಲೋಕ ದಲ್ಲೆಲ್ಲಾ ನನ್ನ ಹಾಗೆ ಯಾರೂ ಇಲ್ಲವೆಂದು ನೀನು ತಿಳಿದುಕೊಳ್ಳುವ ಹಾಗೆ ಈ ಸಾರಿ ನಾನು ಎಲ್ಲಾ ಬಾಧೆಗಳನ್ನು ನಿನ್ನ ಮೇಲೆಯೂ ನಿನ್ನ ಸೇವಕರ ಮೇಲೆಯೂ ನಿನ್ನ ಜನರ ಮೇಲೆಯೂ ಬರಮಾಡು ವೆನು.
ವಿಮೋಚನಕಾಂಡ 9 : 15 (KNV)
ಈಗ ನನ್ನ ಕೈಚಾಚಿ ನಿನ್ನನ್ನೂ ನಿನ್ನ ಜನರನ್ನೂ ವ್ಯಾಧಿಯಿಂದ ಹೊಡೆಯುವೆನು; ನಿನ್ನನ್ನೂ ಭೂಮಿ ಯೊಳಗಿಂದ ನಿರ್ಮೂಲ ಮಾಡುವೆನು.
ವಿಮೋಚನಕಾಂಡ 9 : 16 (KNV)
ಆದರೆ ನಿಶ್ಚಯವಾಗಿ ನನ್ನ ಬಲವನ್ನು ನಿನಗೆ ತೋರಿಸುವ ಹಾಗೆಯೂ ನನ್ನ ಹೆಸರು ಭೂಲೋಕದಲ್ಲೆಲ್ಲಾ ತಿಳಿಸಲ್ಪಡುವಂತೆಯೂ ನಿನ್ನನ್ನು ಎಬ್ಬಿಸಿದ್ದೇನೆ.
ವಿಮೋಚನಕಾಂಡ 9 : 17 (KNV)
ನೀನು ಇನ್ನೂ ಅವರನ್ನು ಕಳುಹಿಸದೆ ನನ್ನ ಜನರಿಗೆ ವಿರೋಧ ವಾಗಿ ನಿನ್ನನ್ನು ನೀನೇ ಹೆಚ್ಚಿಸಿಕೊಳ್ಳುತ್ತೀಯೋ?
ವಿಮೋಚನಕಾಂಡ 9 : 18 (KNV)
ಇಗೋ, ನಾಳೆ ಇಷ್ಟು ಹೊತ್ತಿಗೆ ಮಹಾಕಠಿಣವಾದ ಆನೆಕಲ್ಲಿನ ಮಳೆಯನ್ನು ಬೀಳಮಾಡುತ್ತೇನೆ. ಇಂಥದ್ದು ಐಗುಪ್ತದಲ್ಲಿ ಅದಕ್ಕೆ ಅಸ್ತಿವಾರ ಹಾಕಿದಂದಿನಿಂದ ಇಲ್ಲಿಯವರೆಗೂ ಆಗಿರಲಿಲ್ಲ.
ವಿಮೋಚನಕಾಂಡ 9 : 19 (KNV)
ಹೀಗಿರುವದರಿಂದ (ಯಾವನನ್ನಾದರೂ) ಕಳುಹಿಸಿ ನಿನ್ನ ಪಶುಗಳನ್ನೂ ಹೊಲದಲ್ಲಿ ನಿನಗಿರುವವುಗಳನ್ನೂ ಕೂಡಿಸು. ಯಾಕಂ ದರೆ ಮನೆಗಳಿಗೆ ತಾರದೆ ಹೊಲದಲ್ಲಿ ಸಿಕ್ಕುವ ಮನುಷ್ಯರ ಮೇಲೂ ಪಶುಗಳಮೇಲೂ ಆನೆಕಲ್ಲಿನ ಮಳೆಯು ಸುರಿದು ಕೊಲ್ಲುವದು ಎಂದು ಹೇಳು ಅಂದನು.
ವಿಮೋಚನಕಾಂಡ 9 : 20 (KNV)
ಆಗ ಫರೋಹನ ಸೇವಕರಲ್ಲಿ ಕರ್ತನ ವಾಕ್ಯಕ್ಕೆ ಭಯಪಟ್ಟವರೆಲ್ಲರೂ ತಮ್ಮ ದಾಸರನ್ನೂ ಪಶುಗಳನ್ನೂ ಮನೆಗಳಿಗೆ ಓಡಿಬರುವಂತೆ ಮಾಡಿದರು.
ವಿಮೋಚನಕಾಂಡ 9 : 21 (KNV)
ಆದರೆ ಕರ್ತನ ವಾಕ್ಯಕ್ಕೆ ಮನಸ್ಸು ಕೊಡದವರು ತಮ್ಮ ದಾಸ ರನ್ನೂ ಪಶುಗಳನ್ನೂ ಹೊಲದಲ್ಲಿ ಬಿಟ್ಟರು.
ವಿಮೋಚನಕಾಂಡ 9 : 22 (KNV)
ಆಗ ಕರ್ತನು ಮೋಶೆಗೆ--ಆಕಾಶದ ಕಡೆಗೆ ನಿನ್ನ ಕೈ ಚಾಚು. ಆಗ ಐಗುಪ್ತದೇಶದಲ್ಲೆಲ್ಲಾ ಮನುಷ್ಯರ ಮೇಲೆಯೂ ಪಶುಗಳ ಮೇಲೆಯೂ ಮತ್ತು ಐಗುಪ್ತ ದೇಶದಲ್ಲಿ ಇರುವ ಎಲ್ಲಾ ಹೊಲ ಗಿಡಗಳ ಮೇಲೆಯೂ ಆನೆಕಲ್ಲಿನ ಮಳೆಯು ಸುರಿಯುವದು ಅಂದನು.
ವಿಮೋಚನಕಾಂಡ 9 : 23 (KNV)
ಮೋಶೆಯು ಆಕಾಶದ ಕಡೆಗೆ ಕೋಲನ್ನು ಚಾಚಿ ದನು. ಆಗ ಕರ್ತನು ಗುಡುಗುಗಳನ್ನು ಆನೆಕಲ್ಲಿನ ಮಳೆಯನ್ನು ಸುರಿಸಿದನು. ಅಗ್ನಿಯು ಭೂಮಿಗೆ ಇಳಿದು ಬಂತು. ಹೀಗೆ ಕರ್ತನು ಐಗುಪ್ತದೇಶದ ಮೇಲೆ ಆನೆಕಲ್ಲಿನ ಮಳೆಯನ್ನು ಸುರಿಸಿದನು.
ವಿಮೋಚನಕಾಂಡ 9 : 24 (KNV)
ಹೀಗೆ ಮಹಾ ಕಠಿಣವಾದ ಆನೆಕಲ್ಲಿನ ಮಳೆಯೂ ಅಗ್ನಿಯಿಂದೊಡ ಗೂಡಿದ ಆನೆಕಲ್ಲಿನ ಮಳೆಯೂ ಸುರಿಯಿತು. ಐಗುಪ್ತವು ಜನಾಂಗವಾದಂದಿನಿಂದ ಇಂಥದ್ದು ಆ ದೇಶದಲ್ಲಿ ಆಗಿರಲಿಲ್ಲ.
ವಿಮೋಚನಕಾಂಡ 9 : 25 (KNV)
ಆ ಆನೆಕಲ್ಲಿನ ಮಳೆಯು ಐಗುಪ್ತದೇಶದಲ್ಲೆಲ್ಲಾ ಮನುಷ್ಯರನ್ನೂ ಪಶುಗಳನ್ನೂ ಹೊಲದಲ್ಲಿದ್ದದ್ದನ್ನೆಲ್ಲಾ ಹಾಳುಮಾಡಿತು. ಹೊಲದ ಎಲ್ಲಾ ಸೊಪ್ಪನ್ನೂ ಹಾಳುಮಾಡಿ ಎಲ್ಲಾ ಮರಗಳನ್ನೂ ಮುರಿದು ಹಾಕಿತು.
ವಿಮೋಚನಕಾಂಡ 9 : 26 (KNV)
ಇಸ್ರಾಯೇಲ್ ಮಕ್ಕಳು ಇದ್ದ ಗೋಷೆನ್ ಸೀಮೆಯಲ್ಲಿ ಆನೆಕಲ್ಲಿನ ಮಳೆಯು ಬೀಳಲಿಲ್ಲ.
ವಿಮೋಚನಕಾಂಡ 9 : 27 (KNV)
ಆಗ ಫರೋಹನು ಮೋಶೆ ಆರೋನರನ್ನು ಕರೇ ಕಳುಹಿಸಿ ಅವರಿಗೆ--ಈ ಸಾರಿ ನಾನು ಪಾಪಮಾಡಿ ದ್ದೇನೆ. ಕರ್ತನು ನೀತಿವಂತನು, ನಾನೂ ನನ್ನ ಜನರೂ ದುಷ್ಟರಾಗಿದ್ದೇವೆ.
ವಿಮೋಚನಕಾಂಡ 9 : 28 (KNV)
ಆದದರಿಂದ (ಈಗ ಇದು ಸಾಕು.) ಇನ್ನು ಬಲವಾದ ಗುಡುಗುಗಳೂ ಆನೆಕಲ್ಲಿನ ಮಳೆಯೂ ನಿಂತುಹೋಗುವಂತೆ ಕರ್ತನನ್ನು ಬೇಡಿ ಕೊಳ್ಳಿರಿ, ನೀವು ಇಲ್ಲಿ ಇನ್ನು ಇರದಂತೆ ನಾನು ನಿಮ್ಮನ್ನು ಕಳುಹಿಸಿಬಿಡುವೆನು ಅಂದನು.
ವಿಮೋಚನಕಾಂಡ 9 : 29 (KNV)
ಆಗ ಮೋಶೆಯು ಅವನಿಗೆ--ನಾನು ಪಟ್ಟಣವನ್ನು ಬಿಟ್ಟುಹೋದ ಕೂಡಲೆ ಕರ್ತನ ಕಡೆಗೆ ನನ್ನ ಕೈಗಳನ್ನು ಚಾಚುವೆನು; ಭೂಮಿಯು ಕರ್ತನದೇ ಎಂದು ನೀನು ತಿಳುಕೊಳ್ಳು ವಂತೆ ಗುಡುಗುಗಳು ನಿಂತುಹೋಗುವವು. ಆನೆಕಲ್ಲಿನ ಮಳೆಯು ಇನ್ನು ಬಾರದು.
ವಿಮೋಚನಕಾಂಡ 9 : 30 (KNV)
ಆದಾಗ್ಯೂ ನೀನೂ ನಿನ್ನ ಸೇವಕರೂ ದೇವರಾದ ಕರ್ತನಿಗೆ ಭಯಪಡು ವದಿಲ್ಲವೆಂದು ನಾನು ಬಲ್ಲೆನು.
ವಿಮೋಚನಕಾಂಡ 9 : 31 (KNV)
ಈ ಮೇರೆಗೆ ಜವೆಗೋದಿಗೆ ತೆನೆಗಳೂ ಸೆಣಬಿಗೆ ಮೊಗ್ಗೆಗಳೂ ಇದ್ದದರಿಂದ ಸೆಣಬೂ ಜವೆಗೋದಿಯೂ ಹಾಳಾದವು.
ವಿಮೋಚನಕಾಂಡ 9 : 32 (KNV)
ಆದರೆ ಗೋದಿಯೂ ಸಾಮೆಯೂ ಬೆಳೆದಿರಲಿಲ್ಲವಾದದ್ದರಿಂದ ಹಾಳಾಗಲಿಲ್ಲ.
ವಿಮೋಚನಕಾಂಡ 9 : 33 (KNV)
ಮೋಶೆಯು ಫರೋಹನನ್ನು ಬಿಟ್ಟು ಪಟ್ಟಣದ ಹೊರಗೆ ಬಂದು ತನ್ನ ಕೈಗಳನ್ನು ಕರ್ತನ ಕಡೆಗೆ ಚಾಚಿದನು. ಆಗ ಗುಡುಗುಗಳೂ ಆನೆಕಲ್ಲಿನ ಮಳೆಯೂ ನಿಂತುಹೋದವು. ಇನ್ನು ಮಳೆಯು ಭೂಮಿಯ ಮೇಲೆ ಬೀಳಲಿಲ್ಲ.
ವಿಮೋಚನಕಾಂಡ 9 : 34 (KNV)
ಆನೆಕಲ್ಲಿನ ಮಳೆಯೂ ಗುಡುಗುಗಳೂ ನಿಂತುಹೋದದ್ದನ್ನು ಫರೋಹನು ನೋಡಿ ಅವನು ಇನ್ನೂ ಪಾಪಮಾಡಿ ತನ್ನ ಸೇವಕರ ಸಹಿತವಾಗಿ ತನ್ನ ಹೃದಯವನ್ನು ಕಠಿಣ ಮಾಡಿಕೊಂಡನು.
ವಿಮೋಚನಕಾಂಡ 9 : 35 (KNV)
ಫರೋಹನ ಹೃದಯವು ಕಠಿಣ ವಾಯಿತು; ಕರ್ತನು ಮೋಶೆಗೆ ಹೇಳಿದಂತೆ ಅವನು ಇಸ್ರಾಯೇಲ್ ಮಕ್ಕಳನ್ನು ಕಳುಹಿಸಲೇ ಇಲ್ಲ.
❮
❯