ವಿಮೋಚನಕಾಂಡ 5 : 1 (KNV)
ತರುವಾಯ ಮೋಶೆಯೂ ಆರೋನನೂ ಹೋಗಿ ಫರೋಹನಿಗೆ--ಇಸ್ರಾಯೇಲಿನ ದೇವರಾದ ಕರ್ತನು--ಅರಣ್ಯದಲ್ಲಿ ನನ್ನ ಜನರು ನನಗೆ ಹಬ್ಬವನ್ನಾಚರಿಸುವದಕ್ಕೆ ಅವರನ್ನು ಹೋಗಗೊಡಿಸು ಎಂದು ಹೇಳುತ್ತಾನೆ ಅಂದರು.
ವಿಮೋಚನಕಾಂಡ 5 : 2 (KNV)
ಫರೋಹನು--ನಾನು ಆತನ ಸ್ವರಕ್ಕೆ ವಿಧೇಯನಾಗಿ ಇಸ್ರಾಯೇಲ್ಯರನ್ನು ಕಳುಹಿಸಿ ಬಿಡುವಂತೆ ಆ ಕರ್ತನು ಯಾರು? ಆ ಕರ್ತನನ್ನು ನಾನರಿಯೆನು ಮತ್ತು ಇಸ್ರಾಯೇಲ್ಯರನ್ನು ಕಳುಹಿಸುವದಿಲ್ಲ ಅಂದನು.
ವಿಮೋಚನಕಾಂಡ 5 : 3 (KNV)
ಆಗ ಅವರು ಫರೋಹ ನಿಗೆ--ಇಬ್ರಿಯರ ದೇವರು ನಮ್ಮನ್ನು ಎದುರುಗೊಂಡಿ ದ್ದಾನೆ; ಆದದರಿಂದ ನಾವು ಅರಣ್ಯದಲ್ಲಿ ಮೂರು ದಿನ ಪ್ರಯಾಣಮಾಡಿ ನಮ್ಮ ದೇವರಾದ ಕರ್ತನಿಗೆ ಬಲಿ ಅರ್ಪಿಸುವದಕ್ಕಾಗಿ ನಾವು ಹೋಗಬೇಕು; ಇಲ್ಲ ವಾದರೆ ಆತನು ವ್ಯಾಧಿಯಿಂದಲಾದರೂ ಕತ್ತಿಯಿಂದ ಲಾದರೂ ನಮ್ಮನ್ನು ಸಂಹಾರ ಮಾಡಾನು ಎಂದು ಅಂದರು.
ವಿಮೋಚನಕಾಂಡ 5 : 4 (KNV)
ಐಗುಪ್ತದ ಅರಸನು ಅವರಿಗೆ--ಮೋಶೆಯೇ, ಆರೋನನೇ, ಜನರು ತಮ್ಮ ಕೆಲಸ ಗಳನ್ನು ಮಾಡದಂತೆ ಯಾಕೆ ಮಾಡುತ್ತೀರಿ? ನಿಮ್ಮ ಬಿಟ್ಟೀಕೆಲಸಗಳಿಗೆ ಹೋಗಿರಿ ಅಂದನು.
ವಿಮೋಚನಕಾಂಡ 5 : 5 (KNV)
ಫರೋ ಹನು--ಇಗೋ, ಈಗ ದೇಶದ ಜನರು ಹೆಚ್ಚಿದ್ದಾರೆ; ನೀವು ಅವರನ್ನು ಅವರ ಬಿಟ್ಟೀಕೆಲಸಗಳಿಂದ ನಿಲ್ಲಿಸಿ ಬಿಡುತ್ತೀರಿ ಅಂದನು.
ವಿಮೋಚನಕಾಂಡ 5 : 6 (KNV)
ಅದೇ ದಿನದಲ್ಲಿ ಫರೋಹನು ಬಿಟ್ಟೀಕೆಲಸ ಮಾಡಿಸುವವರಿಗೂ ಅವರ ಅಧಿಕಾರಿ ಗಳಿಗೂ--
ವಿಮೋಚನಕಾಂಡ 5 : 7 (KNV)
ನೀವು ಇನ್ನು ಇಟ್ಟಿಗೆಗಳನ್ನು ಮಾಡುವದಕ್ಕೆ ಮೊದಲಿನ ಹಾಗೆ ಜನರಿಗೆ ಹುಲ್ಲನ್ನು ಕೊಡಬೇಡಿರಿ. ಅವರೇ ಹೋಗಿ ಹುಲ್ಲನ್ನು ಕೂಡಿಸಿಕೊಳ್ಳಲಿ.
ವಿಮೋಚನಕಾಂಡ 5 : 8 (KNV)
ಅವರು ಈ ವರೆಗೆ ಮಾಡಿದ ಇಟ್ಟಿಗೆಗಳ ಲೆಕ್ಕದಲ್ಲಿ ಏನೂ ಕಡಿಮೆ ಮಾಡಬಾರದೆಂದು ಅವರಿಗೆ ಹೇಳಬೇಕು. ಅವರು ಮೈಗಳ್ಳರೇ; ಆದದರಿಂದ ಅವರು--ನಾವು ಹೋಗಿ ನಮ್ಮ ದೇವರಿಗೆ ಬಲಿ ಅರ್ಪಿಸೋಣ ಎಂದು ಕೂಗುತ್ತಾರೆ.
ವಿಮೋಚನಕಾಂಡ 5 : 9 (KNV)
ಈ ಜನರು ವ್ಯರ್ಥವಾದ ಮಾತುಗಳಿಗೆ ಲಕ್ಷ್ಯಕೊಡದಂತೆ ಅವರ ಮೇಲೆ ಹೆಚ್ಚು ಕೆಲಸಗಳನ್ನು ಹೊರಿಸಿರಿ, ಅವರು ದುಡಿಯಲಿ ಎಂದು ಆಜ್ಞಾಪಿಸಿದನು.
ವಿಮೋಚನಕಾಂಡ 5 : 10 (KNV)
ಆಗ ಬಿಟ್ಟೀಕೆಲಸವನ್ನು ಮಾಡಿಸುವವರೂ ಅಧಿ ಕಾರಿಗಳೂ ಹೊರಗೆಹೋಗಿ ಜನರಿಗೆ--ಫರೋಹನು ಹೀಗೆ ಹೇಳುತ್ತಾನೆ--ನಾನು ನಿಮಗೆ ಹುಲ್ಲು ಕೊಡು ವದಿಲ್ಲ.
ವಿಮೋಚನಕಾಂಡ 5 : 11 (KNV)
ನಿಮಗೆ ಹುಲ್ಲು ಎಲ್ಲಿ ದೊರಕುವದೋ ಅಲ್ಲಿಗೆ ನೀವೇ ಹೋಗಿ ತಕ್ಕೊಳ್ಳಿರಿ; ಆದಾಗ್ಯೂ ನಿಮ್ಮ ಕೆಲಸವು ಏನೂ ಕಡಿಮೆಯಾಗಬಾರದು ಎಂದು ಹೇಳಿ ದ್ದಾನೆ ಅಂದನು.
ವಿಮೋಚನಕಾಂಡ 5 : 12 (KNV)
ಆಗ ಜನರು ಹುಲ್ಲಿಗೆ ಬದಲಾಗಿ ಕೂಳೆ ಕೂಡಿಸಿಕೊಳ್ಳುವದಕ್ಕೆ ಐಗುಪ್ತದೇಶದಲ್ಲೆಲ್ಲಾ ಚದರಿಹೋದರು.
ವಿಮೋಚನಕಾಂಡ 5 : 13 (KNV)
ಇದಲ್ಲದೆ ಬಿಟ್ಟೀಕೆಲಸ ಮಾಡಿಸು ವವರು--ಹುಲ್ಲು ಇದ್ದಾಗ ನಿಮ್ಮ ಕೆಲಸಗಳನ್ನು ಮಾಡಿ ದಂತೆಯೇ ಪ್ರತಿಯೊಂದು ದಿನದಲ್ಲಿ ಆ ದಿನದ ಕೆಲಸ ವನ್ನು ತೀರಿಸಿಬಿಡಬೇಕು ಎಂದು ಹೇಳಿ ಅವರನ್ನು ತ್ವರೆಪಡಿಸಿದರು.
ವಿಮೋಚನಕಾಂಡ 5 : 14 (KNV)
ಇಸ್ರಾಯೇಲ್ಯರು ಬಿಟ್ಟೀಕೆಲಸ ಮಾಡಿಸುವಂತೆ ಫರೋಹನ ಅಧಿಕಾರಿಗಳು ನೇಮಿಸಿ ದವರಿಗೆ--ನೀವು ಮೊದಲು ಇಟ್ಟಿಗೆಗಳ ಲೆಕ್ಕವನ್ನು ಒಪ್ಪಿಸಿದಂತೆ ನಿನ್ನೆ ಈ ಹೊತ್ತು ಯಾಕೆ ಒಪ್ಪಿಸಲಿಲ್ಲ ಎಂದು ಹೇಳಿ ಅವರನ್ನು ಹೊಡಿಸಿದರು.
ವಿಮೋಚನಕಾಂಡ 5 : 15 (KNV)
ಇಸ್ರಾಯೇಲ್‌ ಮಕ್ಕಳ ಅಧಿಕಾರಿಗಳು ಫರೋ ಹನ ಬಳಿಗೆ ಹೋಗಿ--ಯಾಕೆ ನಿನ್ನ ದಾಸರಿಗೆ ಹೀಗೆ ಮಾಡುತ್ತೀ?
ವಿಮೋಚನಕಾಂಡ 5 : 16 (KNV)
ನಿನ್ನ ದಾಸರಿಗೆ ಅವರು ಹುಲ್ಲು ಕೊಡದೆ--ಇಟ್ಟಿಗೆಗಳನ್ನು ಮಾಡಿರಿ ಎಂದು ನಮಗೆ ಹೇಳುತ್ತಾರೆ. ಇಗೋ, ನಿನ್ನ ದಾಸರನ್ನು ಹೊಡೆಯುತ್ತಾರೆ. ಆದರೆ ನಿನ್ನ ಸ್ವಂತ ಜನರಲ್ಲಿಯೇ ತಪ್ಪು ಇದೆ ಅಂದರು.
ವಿಮೋಚನಕಾಂಡ 5 : 17 (KNV)
ಅದಕ್ಕೆ ಅವನು--ನೀವು ಮೈಗಳ್ಳರು, ನೀವು ಮೈಗಳ್ಳರಾದ ಕಾರಣ--ನಾವು ಹೋಗಿ ಕರ್ತನಿಗೆ ಬಲಿಯರ್ಪಿಸುತ್ತೇವೆ ಎಂದು ಅನ್ನುತ್ತೀರಿ.
ವಿಮೋಚನಕಾಂಡ 5 : 18 (KNV)
ಆದದ ರಿಂದ ಈಗ ಹೋಗಿ ಕೆಲಸಮಾಡಿರಿ, ಹುಲ್ಲನ್ನು ನಿಮಗೆ ಕೊಡುವದಕ್ಕಾಗುವದಿಲ್ಲ. ಆದಾಗ್ಯೂ ನೇಮಿಸಿದ್ದ ಇಟ್ಟಿಗೆಗಳನ್ನು ನೀವು ಕೊಡಬೇಕು ಅಂದನು.
ವಿಮೋಚನಕಾಂಡ 5 : 19 (KNV)
ದಿನದಿನವೂ ಒಪ್ಪಿಸಬೇಕಾದ ಇಟ್ಟಿಗೆಗಳ ಲೆಕ್ಕ ಕಡಿಮೆಯಾಗಬಾರದೆಂದು ಅಪ್ಪಣೆಯಾದದ್ದರಿಂದ ಇಸ್ರಾಯೇಲ್‌ ಅಧಿಕಾರಿಗಳು ತಾವು ದುರವಸ್ಥೆಯಲ್ಲಿ ದ್ದೇವೆಂದು ತಿಳುಕೊಂಡರು.
ವಿಮೋಚನಕಾಂಡ 5 : 20 (KNV)
ಅವರು ಫರೋಹ ನಿಂದ ಹೊರಗೆ ಬಂದಾಗ ದಾರಿಯಲ್ಲಿ ನಿಂತಿದ್ದ ಮೋಶೆಯನ್ನೂ ಆರೋನನನ್ನೂ ಸಂಧಿಸಿ
ವಿಮೋಚನಕಾಂಡ 5 : 21 (KNV)
ಅವ ರಿಗೆ--ಕರ್ತನು ನಿಮ್ಮನ್ನು ನೋಡಿ ನ್ಯಾಯತೀರಿಸಲಿ; ನೀವೇ ಫರೋಹನ ಮುಂದೆಯೂ ಅವನ ದಾಸರ ಮುಂದೆಯೂ ನಮ್ಮನ್ನು ಅವರು ಹೇಸಿಕೊಳ್ಳುವಂತೆ ಮಾಡಿದಿರಿ, ನಮ್ಮನ್ನು ಸಂಹರಿಸುವದಕ್ಕೆ ನೀವು ಅವರ ಕೈಗೆ ಕತ್ತಿಯನ್ನು ಕೊಟ್ಟಿರಿ ಅಂದರು.
ವಿಮೋಚನಕಾಂಡ 5 : 22 (KNV)
ಆಗ ಮೋಶೆಯು ಕರ್ತನ ಬಳಿಗೆ ಬಂದು--ಕರ್ತನೇ, ಈ ಜನರಿಗೆ ಯಾಕೆ ಕೇಡನ್ನು ಮಾಡಿದಿ? ಯಾಕೆ ನನ್ನನ್ನು ಕಳುಹಿಸಿದಿ?ನಾನು ಫರೋಹನ ಬಳಿಗೆ ಬಂದು ನಿನ್ನ ಹೆಸರಿನಲ್ಲಿ ಮಾತನಾಡಿದಂದಿನಿಂದ ಈ ಜನರಿಗೆ ಅವನು ಕೇಡನ್ನೇ ಮಾಡುತ್ತಾನೆ. ನೀನು ನಿನ್ನ ಜನರನ್ನು ತಪ್ಪಿಸಲಿಲ್ಲವಲ್ಲಾ ಅಂದನು.
ವಿಮೋಚನಕಾಂಡ 5 : 23 (KNV)
ನಾನು ಫರೋಹನ ಬಳಿಗೆ ಬಂದು ನಿನ್ನ ಹೆಸರಿನಲ್ಲಿ ಮಾತನಾಡಿದಂದಿನಿಂದ ಈ ಜನರಿಗೆ ಅವನು ಕೇಡನ್ನೇ ಮಾಡುತ್ತಾನೆ. ನೀನು ನಿನ್ನ ಜನರನ್ನು ತಪ್ಪಿಸಲಿಲ್ಲವಲ್ಲಾ ಅಂದನು.

1 2 3 4 5 6 7 8 9 10 11 12 13 14 15 16 17 18 19 20 21 22 23

BG:

Opacity:

Color:


Size:


Font: