ವಿಮೋಚನಕಾಂಡ 4 : 1 (KNV)
ಮೋಶೆಯು ಪ್ರತ್ಯುತ್ತರವಾಗಿ--ಆದರೆ ಇಗೋ, ಅವರು ನನ್ನನ್ನು ನಂಬುವದಿಲ್ಲ, ನನ್ನ ಮಾತನ್ನು ಕೇಳುವದೂ ಇಲ್ಲ. ಅವರು--ಕರ್ತನು ನಿನಗೆ ಕಾಣಿಸಿಕೊಳ್ಳಲಿಲ್ಲ ಎಂದು ಹೇಳುವರು ಅಂದನು.
ವಿಮೋಚನಕಾಂಡ 4 : 2 (KNV)
ಕರ್ತನು ಅವನಿಗೆ--ನಿನ್ನ ಕೈಯಲ್ಲಿರುವದೇನು ಅಂದದ್ದಕ್ಕೆ ಅವನು--ಕೋಲು ಅಂದನು.
ವಿಮೋಚನಕಾಂಡ 4 : 3 (KNV)
ಕರ್ತನು ಅವನಿಗೆ--ಅದನ್ನು ನೆಲದ ಮೇಲೆ ಬಿಸಾಡು ಅಂದಾಗ ಅವನು ಅದನ್ನು ಬಿಸಾಡಿದನು; ಆಗ ಅದು ಸರ್ಪ ವಾಯಿತು. ಮೋಶೆಯು ಅಲ್ಲಿಂದ ಓಡಿಹೋದನು.
ವಿಮೋಚನಕಾಂಡ 4 : 4 (KNV)
ಕರ್ತನು ಮೋಶೆಗೆ--ನಿನ್ನ ಕೈಚಾಚಿ ಅದರ ಬಾಲ ವನ್ನು ಹಿಡಿ ಅಂದಾಗ ಅವನು ಕೈಚಾಚಿ ಅದನ್ನು ಹಿಡಿದ ಕೂಡಲೆ ಅದು ಅವನ ಕೈಯಲ್ಲಿ ಕೋಲಾಯಿತು.
ವಿಮೋಚನಕಾಂಡ 4 : 5 (KNV)
ಇದರಿಂದ ಅವರು ತಮ್ಮ ಪಿತೃಗಳಾದ ಅಬ್ರಹಾಮ್ ಇಸಾಕ್ ಯಾಕೋಬ್ ಇವರ ಕರ್ತನಾದ ದೇವರು ನಿನಗೆ ಕಾಣಿಸಿದ್ದನ್ನು ಅವರು ನಂಬುವರು ಅಂದನು.
ವಿಮೋಚನಕಾಂಡ 4 : 6 (KNV)
ಇದಲ್ಲದೆ ಕರ್ತನು ಅವನ ಸಂಗಡ ಇನ್ನೂ ಮಾತನಾಡಿ--ನಿನ್ನ ಕೈಯನ್ನು ಉಡಿಯಲ್ಲಿ ಹಾಕು ಅಂದಾಗ ಅವನು ತನ್ನ ಕೈಯನ್ನು ಉಡಿಯಲ್ಲಿ ಹಾಕಿ ಹೊರಗೆ ತೆಗೆಯಲು ಇಗೋ, ಅವನ ಕೈ ಕುಷ್ಠದಿಂದ ಹಿಮದಂತೆ ಆಗಿತ್ತು.
ವಿಮೋಚನಕಾಂಡ 4 : 7 (KNV)
ಆತನು ಅವನಿಗೆ--ನಿನ್ನ ಕೈಯನ್ನು ಉಡಿಯಲ್ಲಿ ಹಾಕು ಅಂದಾಗ ಅವನು ತನ್ನ ಕೈಯನ್ನು ಉಡಿಯಲ್ಲಿ ಹಾಕಿ ಉಡಿಯಿಂದ ಹೊರಗೆ ತೆಗೆಯಲು ಇಗೋ, ಅದು ಅವನ ಬೇರೆ ದೇಹದಂತಾಗಿತ್ತು.
ವಿಮೋಚನಕಾಂಡ 4 : 8 (KNV)
ಅವರು ನಿನ್ನನ್ನು ನಂಬದೆ ಮೊದಲನೆಯ ಮಹ ತ್ಕಾರ್ಯವನ್ನು ತಿರಸ್ಕರಿಸಿದರೂ ಎರಡನೆಯದನ್ನು ಲಕ್ಷ್ಯವಿಟ್ಟು ನಂಬುವರು.
ವಿಮೋಚನಕಾಂಡ 4 : 9 (KNV)
ಆ ಎರಡೂ ಮಹತ್ಕಾರ್ಯ ಗಳನ್ನು ಅವರು ನಂಬದೆಯೂ ನಿನ್ನ ಮಾತನ್ನು ಕೇಳ ದೆಯೂ ಹೋದರೆ ನದಿಯ ನೀರನ್ನು ತೆಗೆದು ಒಣಗಿದ ನೆಲದಮೇಲೆ ಸುರಿಯಬೇಕು. ಆಗ ನೀನು ನದಿಯಿಂದ ತೆಗೆದ ನೀರು ಒಣಗಿದ ನೆಲದ ಮೇಲೆ ರಕ್ತವಾಗುವದು ಅಂದನು.
ವಿಮೋಚನಕಾಂಡ 4 : 10 (KNV)
ಮೋಶೆಯು ಕರ್ತನಿಗೆ--ಓ ನನ್ನ ಕರ್ತನೇ, ನಾನು ಮೊದಲಿನಿಂದಲೂ ನೀನು ನಿನ್ನ ದಾಸನ ಸಂಗಡ ಮಾತನಾಡಿದಂದಿನಿಂದಲೂ ವಾಕ್ಚಾತುರ್ಯವಿ ಲ್ಲದವನು. ನನ್ನ ಮಾತೂ ನಾಲಿಗೆಯೂ ಮಂದವಾಗಿವೆ ಅಂದನು.
ವಿಮೋಚನಕಾಂಡ 4 : 11 (KNV)
ಅದಕ್ಕೆ ಕರ್ತನು ಅವನಿಗೆ--ಮನುಷ್ಯನಿಗೆ ಬಾಯಿ ಕೊಟ್ಟಾತನೂ ಮೂಕರನ್ನೂ ಕಿವುಡರನ್ನೂ ದೃಷ್ಟಿಯುಳ್ಳವರನ್ನೂ ಕುರುಡರನ್ನೂ ಉಂಟುಮಾಡಿ ದಾತನೂ ಯಾರು? ಕರ್ತನಾದ ನಾನೇ ಅಲ್ಲವೋ?
ವಿಮೋಚನಕಾಂಡ 4 : 12 (KNV)
ಹಾಗಾದರೆ ಈಗ ಹೋಗು, ನಾನೇ ನಿನ್ನ ಬಾಯಿ ಯಾಗಿದ್ದು ನೀನು ಮಾತನಾಡತಕ್ಕದ್ದನ್ನು ನಿನಗೆ ಬೋಧಿಸುವೆನು ಅಂದನು.
ವಿಮೋಚನಕಾಂಡ 4 : 13 (KNV)
ಅದಕ್ಕೆ ಮೋಶೆಯು--ಓ ನನ್ನ ಕರ್ತನೇ, ನೀನು ಕಳುಹಿಸಬೇಕೆಂದಿರುವವನನ್ನು ಕಳುಹಿಸು ಎಂದು ಬೇಡುತ್ತೇನೆ ಅಂದನು.
ವಿಮೋಚನಕಾಂಡ 4 : 14 (KNV)
ಕರ್ತನು ಮೋಶೆಯ ಮೇಲೆ ಕೋಪಗೊಂಡು--ಲೇವಿಯನಾದ ಆರೋನನು ನಿನ್ನ ಸಹೋದರನಲ್ಲವೇ? ಅವನು ಚೆನ್ನಾಗಿ ಮಾತನಾಡ ಬಲ್ಲನೆಂದು ನಾನು ಬಲ್ಲೆನು. ಇಗೋ, ಅವನು ನಿನ್ನನ್ನು ಎದುರು ಗೊಳ್ಳುವದಕ್ಕೆ ಬರುತ್ತಾನೆ. ಅವನು ನಿನ್ನನ್ನು ನೋಡಿ ತನ್ನ ಹೃದಯದಲ್ಲಿ ಆನಂದಿಸುವನು.
ವಿಮೋಚನಕಾಂಡ 4 : 15 (KNV)
ಅವನ ಸಂಗಡ ನೀನು ಮಾತನಾಡಿ ಹೇಳಬೇಕಾದ ಮಾತು ಗಳನ್ನು ಅವನಿಗೆ ತಿಳಿಸಬೇಕು. ನಿನ್ನ ಬಾಯಿಗೂ ಅವನ ಬಾಯಿಗೂ ಸಹಾಯವಾಗಿದ್ದು ನೀನು ಮಾಡತಕ್ಕದ್ದನ್ನು ಕಲಿಸುವೆನು.
ವಿಮೋಚನಕಾಂಡ 4 : 16 (KNV)
ಅವನು ನಿನಗಾಗಿ ಜನರ ಸಂಗಡ ಮಾತನಾಡುವನು. ಅವನು ನಿನಗೆ ಬಾಯಿಯಾಗಿ ರುವನು; ನೀನು ಅವನಿಗೆ ದೇವರಂತಿರುವಿ.
ವಿಮೋಚನಕಾಂಡ 4 : 17 (KNV)
ಈ ಕೋಲನ್ನು ನಿನ್ನ ಕೈಯಲ್ಲಿ ತಕ್ಕೊಳ್ಳಬೇಕು. ನೀನು ಇದರಿಂದಲೇ ಆ ಸೂಚಕಕಾರ್ಯಗಳನ್ನು ಮಾಡುವಿ ಅಂದನು.
ವಿಮೋಚನಕಾಂಡ 4 : 18 (KNV)
ಆಗ ಮೋಶೆಯು ಹೋಗಿ ತನ್ನ ಮಾವನಾದ ಇತ್ರೋನನ ಬಳಿಗೆ ಬಂದು ಅವನಿಗೆ--ಐಗುಪ್ತ ದಲ್ಲಿರುವ ನನ್ನ ಸಹೋದರರ ಬಳಿಗೆ ಹಿಂತಿರುಗಿ ಹೋಗಿ ಅವರು ಇನ್ನೂ ಜೀವದಿಂದಿರುವರೋ ಎಂದು ನೋಡುವೆನು ಅಂದನು. ಇತ್ರೋನನು ಮೋಶೆಗೆ--ಸಮಾಧಾನದಿಂದ ಹೋಗು ಅಂದನು.
ವಿಮೋಚನಕಾಂಡ 4 : 19 (KNV)
ಇದಲ್ಲದೆ ಕರ್ತನು ಮಿದ್ಯಾನಿನಲ್ಲಿ ಮೋಶೆಗೆ--ಐಗುಪ್ತಕ್ಕೆ ಹಿಂತಿರುಗಿ ಹೋಗು; ನಿನ್ನ ಪ್ರಾಣವನ್ನು ಹುಡುಕಿದ ಜನರೆಲ್ಲಾ ಸತ್ತಿದ್ದಾರೆ ಅಂದನು.
ವಿಮೋಚನಕಾಂಡ 4 : 20 (KNV)
ಆಗ ಮೋಶೆಯು ತನ್ನ ಹೆಂಡತಿಯನ್ನೂ ಮಕ್ಕಳನ್ನೂ ಕರ ಕೊಂಡು ಕತ್ತೆಯಮೇಲೆ ಹತ್ತಿಸಿ ಐಗುಪ್ತ ದೇಶಕ್ಕೆ ಹಿಂತಿರುಗಿ ಬಂದನು. ಇದಲ್ಲದೆ ಮೋಶೆಯು ದೇವರ ಕೋಲನ್ನು ಕೈಯಲ್ಲಿ ತಕ್ಕೊಂಡನು.
ವಿಮೋಚನಕಾಂಡ 4 : 21 (KNV)
ಆಗ ಕರ್ತನು ಮೋಶೆಗೆ--ನೀನು ಐಗುಪ್ತದೇಶಕ್ಕೆ ಹಿಂತಿರುಗಿ ಹೋಗು ವಾಗ ನಾನು ನಿನ್ನ ಕೈಯಿಂದ ಮಾಡಿಸಿದ ಎಲ್ಲಾ ಸೂಚಕ ಕಾರ್ಯಗಳನ್ನು ಫರೋಹನ ಮುಂದೆ ಮಾಡು. ಆದರೆ ನಾನು ಅವನ ಹೃದಯವನ್ನು ಕಠಿಣಪಡಿಸುವೆನು. ಅವನು ಜನರನ್ನು ಹೋಗಗೊಡಿಸುವದಿಲ್ಲ.
ವಿಮೋಚನಕಾಂಡ 4 : 22 (KNV)
ಆಗ ನೀನು ಫರೋಹನಿಗೆ--ಕರ್ತನು ಹೀಗೆ ಹೇಳುತ್ತಾನೆ; ಇಸ್ರಾಯೇಲು ನನ್ನ ಮಗನು. ಅವನು ನನ್ನ ಚೊಚ್ಚಲ ಮಗನೇ ಎಂದು ಹೇಳಬೇಕು.
ವಿಮೋಚನಕಾಂಡ 4 : 23 (KNV)
(ಫರೋಹನೇ) ನಾನು ನಿನಗೆ ಹೇಳುವದೇನಂದರೆ--ನನ್ನ ಸೇವೆಮಾಡು ವಂತೆ ನನ್ನ ಮಗನನ್ನು ಕಳುಹಿಸು. ನೀನು ಅವನನ್ನು ಕಳುಹಿಸುವದನ್ನು ನಿರಾಕರಿಸಿದರೆ ಇಗೋ, ನಾನು ನಿನ್ನ ಮಗನನ್ನು ಅಂದರೆ ನಿನ್ನ ಚೊಚ್ಚಲಮಗನನ್ನು ಕೊಲ್ಲುವೆನು ಅಂದನು.
ವಿಮೋಚನಕಾಂಡ 4 : 24 (KNV)
ಇದಲ್ಲದೆ ಅವನು ದಾರಿಯ ವಸತಿ ಗೃಹದಲ್ಲಿ ದ್ದಾಗ ಕರ್ತನು ಅವನೆದುರಿಗೆ ಬಂದು ಅವನ ಪ್ರಾಣ ತೆಗೆಯಬೇಕೆಂದಿದ್ದನು.
ವಿಮೋಚನಕಾಂಡ 4 : 25 (KNV)
ಆಗ ಚಿಪ್ಪೋರಳು ಹದವಾದ ಕಲ್ಲನ್ನು ತೆಗೆದುಕೊಂಡು ತನ್ನ ಮಗನಿಗೆ ಸುನ್ನತಿ ಮಾಡಿ ಅದನ್ನು ಅವನ ಕಾಲುಗಳ ಮುಂದೆ ಹಾಕಿ ಮೋಶೆಗೆ--ನಿಜವಾಗಿ ನೀನು ನನಗೆ ರಕ್ತದ ಗಂಡನು ಅಂದಳು.
ವಿಮೋಚನಕಾಂಡ 4 : 26 (KNV)
ಆಗ ಆತನು ಅವನನ್ನು ಬಿಟ್ಟನು. ಅವಳು--ಸುನ್ನತಿಯ ನಿಮಿತ್ತ ನೀನು ರಕ್ತದ ಗಂಡ ನಾಗಿದ್ದೀ ಅಂದಳು.
ವಿಮೋಚನಕಾಂಡ 4 : 27 (KNV)
ಇದಲ್ಲದೆ ಕರ್ತನು ಆರೋನನಿಗೆ--ಮೋಶೆ ಯನ್ನು ಎದುರುಗೊಳ್ಳುವದಕ್ಕೆ ಅರಣ್ಯಕ್ಕೆ ಹೋಗು ಅಂದನು. ಅವನು ಹೋಗಿ ದೇವರ ಬೆಟ್ಟದಲ್ಲಿ ಅವನನ್ನು ಎದುರುಗೊಂಡು ಮುದ್ದಿಟ್ಟನು.
ವಿಮೋಚನಕಾಂಡ 4 : 28 (KNV)
ಆಗ ಮೋಶೆಯು ಆರೋನನಿಗೆ ತನ್ನನ್ನು ಕಳುಹಿಸಿದ ಕರ್ತನ ಎಲ್ಲಾ ಮಾತುಗಳನ್ನೂ ತನಗೆ ಆಜ್ಞಾಪಿಸಿದ ಎಲ್ಲಾ ಸೂಚಕಕಾರ್ಯಗಳನ್ನೂ ತಿಳಿಸಿದನು.
ವಿಮೋಚನಕಾಂಡ 4 : 29 (KNV)
ತರುವಾಯ ಮೋಶೆಯೂ ಆರೋನನೂ ಹೋಗಿ ಇಸ್ರಾಯೇಲ್ ಮಕ್ಕಳ ಹಿರಿಯರನ್ನೆಲ್ಲಾ ಒಟ್ಟುಗೂಡಿಸಿದರು.
ವಿಮೋಚನಕಾಂಡ 4 : 30 (KNV)
ಕರ್ತನು ಮೋಶೆಗೆ ಹೇಳಿದ ಮಾತುಗಳನ್ನೆಲ್ಲಾ ಆರೋನನು ಹೇಳಿ ಜನರ ಕಣ್ಣುಗಳ ಮುಂದೆ ಸೂಚಕ ಕಾರ್ಯಗಳನ್ನು ಮಾಡಲು. ಜನರು ನಂಬಿದರು.
ವಿಮೋಚನಕಾಂಡ 4 : 31 (KNV)
ಕರ್ತನು ಇಸ್ರಾಯೇಲ್ ಮಕ್ಕಳನ್ನು ದರ್ಶಿಸಿ ಅವರ ಸಂಕಟವನ್ನು ನೋಡಿದ್ದಾನೆಂದು ಅವರು ಕೇಳಿದಾಗ ತಲೆಬಾಗಿಸಿ ಆರಾಧಿಸಿದರು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31