ವಿಮೋಚನಕಾಂಡ 26 : 1 (KNV)
ಗುಡಾರವನ್ನು ಹತ್ತು ತೆರೆಗಳಿಂದ ಮಾಡ ಬೇಕು. ಅವು ನಯವಾಗಿ ಹೊಸೆದ ನಾರಿನಿಂದಲೂ ನೀಲಿ, ಧೂಮ್ರ, ರಕ್ತವರ್ಣಗ ಳಿಂದಲೂ ಕೌಶಲ್ಯದಿಂದ ಮಾಡಿದ ಕೆರೂಬಿಗಳುಳ್ಳವು ಗಳಾಗಿಯೂ ಇರಬೇಕು.
ವಿಮೋಚನಕಾಂಡ 26 : 2 (KNV)
ಒಂದು ತೆರೆಯ ಉದ್ದವು ಇಪ್ಪತ್ತೆಂಟು ಮೊಳ, ಅದರ ಅಗಲವು ನಾಲ್ಕು ಮೊಳ ವಾಗಿರಬೇಕು ಪ್ರತಿಯೊಂದು ತೆರೆಯು ಒಂದೇ ಅಳತೆ ಯುಳ್ಳದ್ದಾಗಿರಬೇಕು.
ವಿಮೋಚನಕಾಂಡ 26 : 3 (KNV)
ಐದು ತೆರೆಗಳು ಒಂದಕ್ಕೊಂದು ಜೋಡಿಸಲ್ಪಟ್ಟಿರಬೇಕು, ಬೇರೆ ಐದು ತೆರೆಗಳು ಒಂದ ಕ್ಕೊಂದು ಜೋಡಿಸಲ್ಪಟ್ಟಿರಬೇಕು.
ವಿಮೋಚನಕಾಂಡ 26 : 4 (KNV)
ಒಂದು ತೆರೆಯ ಅಂಚಿನ ಕೊನೆಗೆ ಜೋಡಿಸುವ ಸ್ಥಳದಲ್ಲಿ ನೀಲಿ ನೂಲಿನ ಕುಣಿಕೆಗಳನ್ನು ಮಾಡಿ ಎರಡನೇ ಜೋಡನೆಯ ಕಡೇ ತೆರೆಯ ಕೊನೆಯಲ್ಲಿಯೂ ಹಾಗೆಯೇ ಮಾಡಬೇಕು.
ವಿಮೋಚನಕಾಂಡ 26 : 5 (KNV)
ಒಂದು ತೆರೆಯನ್ನು ಜೋಡಿಸುವ ಸ್ಥಳದಲ್ಲಿ ಇರುವ ಇನ್ನೊಂದು ತೆರೆಯ ಕೊನೆಯಲ್ಲಿ ಐವತ್ತು ಕುಣಿಕೆಗಳನ್ನು ಮಾಡಬೇಕು. ಆ ಕುಣಿಕೆಗಳು ಒಂದಕ್ಕೊಂದು ಸರಿ ಯಾಗಿ ಹಿಡುಕೊಳ್ಳುವವುಗಳಾಗಿರಬೇಕು.
ವಿಮೋಚನಕಾಂಡ 26 : 6 (KNV)
ಬಂಗಾರದ ಐವತ್ತು ಕೊಂಡಿಗಳನ್ನು ಮಾಡಿ ಅವುಗಳಿಂದ ತೆರೆಗಳನ್ನು ಒಂದಕ್ಕೊಂದು ಜೋಡಿಸಬೇಕು. ಹೀಗೆ ಅದು ಒಂದೇ ಗುಡಾರವಾಗುವದು.
ವಿಮೋಚನಕಾಂಡ 26 : 7 (KNV)
ಇದಲ್ಲದೆ ನೀನು ಗುಡಾರದ ಮೇಲೆ ಹೊದಿಸು ವದಕ್ಕಾಗಿ ಮೇಕೆ ಕೂದಲಿನಿಂದ ಹನ್ನೊಂದು ತೆರೆಗಳನ್ನು ಮಾಡಬೇಕು.
ವಿಮೋಚನಕಾಂಡ 26 : 8 (KNV)
ಒಂದು ತೆರೆಯ ಉದ್ದವು ಮೂವತ್ತು ಮೊಳ, ಅದರ ಅಗಲವು ನಾಲ್ಕು ಮೊಳ, ಹನ್ನೊಂದು ತೆರೆಗಳಿಗೂ ಅದೇ ಅಳತೆ ಇರಬೇಕು.
ವಿಮೋಚನಕಾಂಡ 26 : 9 (KNV)
ಐದು ತೆರೆಗಳನ್ನು ಬೇರೆಯಾಗಿಯೂ ಆರು ತೆರೆಗಳನ್ನು ಬೇರೆಯಾಗಿಯೂ ಜೋಡಿಸಿ ಆರನೆಯ ತೆರೆಯನ್ನು ಗುಡಾರದ ಮುಂಭಾಗ ದಲ್ಲಿ ಇಮ್ಮಡಿ ಮಾಡಬೇಕು.
ವಿಮೋಚನಕಾಂಡ 26 : 10 (KNV)
ಜೋಡಿಸುವಾಗ ಕಡೇ ಒಂದು ತೆರೆಯ ಅಂಚಿನಲ್ಲಿ ಐವತ್ತು ಕುಣಿಕೆಗಳನ್ನೂ ಜೋಡಣೆಯಲ್ಲಿರುವ ಎರಡನೇ ತೆರೆಯ ಅಂಚಿನಲ್ಲಿ ಐವತ್ತು ಕುಣಿಕೆಗಳನ್ನೂ ಮಾಡಬೇಕು.
ವಿಮೋಚನಕಾಂಡ 26 : 11 (KNV)
ಇದಲ್ಲದೆ ಹಿತ್ತಾಳೆಯ ಐವತ್ತು ಕೊಂಡಿಗಳನ್ನು ಮಾಡಿ ಕೊಂಡಿಗಳನ್ನು ಕುಣಿಕೆಗಳಲ್ಲಿ ಸಿಕ್ಕಿಸಿ ಗುಡಾರವು ಒಂದಾಗುವ ಹಾಗೆ ಜೋಡಿಸಬೇಕು.
ವಿಮೋಚನಕಾಂಡ 26 : 12 (KNV)
ಗುಡಾರದ ತೆರೆಗಳಲ್ಲಿ ಮಿಕ್ಕಿ ಉಳಿದ ಅರ್ಧ ತೆರೆಯು ಗುಡಾರದ ಹಿಂಭಾಗದಲ್ಲಿ ತೂಗಾಡಲಿ.
ವಿಮೋಚನಕಾಂಡ 26 : 13 (KNV)
ಗುಡಾರದ ತೆರೆಗಳ ಉದ್ದದಲ್ಲಿ ಆಚೆ ಈಚೆ ಮಿಕ್ಕಿದ ಒಂದು ಮೊಳವು ಗುಡಾರದ ಈಚೆ ಆಚೆಯಲ್ಲಿ ಅದನ್ನು ಮುಚ್ಚುವದಕ್ಕಾಗಿ ತೂಗಾಡಲಿ.
ವಿಮೋಚನಕಾಂಡ 26 : 14 (KNV)
ಕೆಂಪು ಬಣ್ಣದ ಟಗರಿನ ಚರ್ಮಗಳಿಂದ ಗುಡಾರಕ್ಕೆ ಹೊದಿಕೆಯನ್ನೂ ಕಡಲು ಹಂದಿಯ ಚರ್ಮ ಗಳಿಂದ ಮೇಲು ಹೊದಿಕೆಯನ್ನೂ ಮಾಡಬೇಕು.
ವಿಮೋಚನಕಾಂಡ 26 : 15 (KNV)
ಗುಡಾರಕ್ಕೆ ಜಾಲೀ ಮರದಿಂದ ನಿಲ್ಲುವ ಹಲಿಗೆ ಗಳನ್ನು ಮಾಡಬೇಕು.
ವಿಮೋಚನಕಾಂಡ 26 : 16 (KNV)
ಹಲಿಗೆಯ ಉದ್ದವು ಹತ್ತು ಮೊಳ, ಅದರ ಅಗಲ ಒಂದುವರೆ ಮೊಳ ಇರಬೇಕು.
ವಿಮೋಚನಕಾಂಡ 26 : 17 (KNV)
ಒಂದು ಹಲಗೆಗೆ ಎರಡು ಕೂರುಗಳು ಇರಬೇಕು. ಅವುಗಳನ್ನು ಕ್ರಮವಾಗಿ ಇರಿಸುವಂತೆ ಅವು ಎದುರು ಬದುರಾಗಿ ಇರಬೇಕು. ಹೀಗೆ ಗುಡಾರದ ಎಲ್ಲಾ ಹಲಗೆ ಗಳಿಗೂ ನೀನು ಮಾಡಬೇಕು.
ವಿಮೋಚನಕಾಂಡ 26 : 18 (KNV)
ಗುಡಾರದ ದಕ್ಷಿಣ ದಿಕ್ಕಿನಲ್ಲಿ ಇಪ್ಪತ್ತು ಹಲಗೆಗಳನ್ನು ನೀನು ಮಾಡಬೇಕು.
ವಿಮೋಚನಕಾಂಡ 26 : 19 (KNV)
ಇಪ್ಪತ್ತು ಹಲಗೆಗಳ ಕೆಳಗೆ ನಾಲ್ವತ್ತು ಬೆಳ್ಳಿಯ ಕುಳಿಗಳನ್ನು ಮಾಡಬೇಕು; ಒಂದೊಂದು ಹಲಗೆಯ ಕೆಳಗೆ ಅದರ ಎರಡು ಕೂರುಗಳಿಗಾಗಿ ಎರಡೆರಡು ಕುಳಿಗಳನ್ನು ಮಾಡಬೇಕು.
ವಿಮೋಚನಕಾಂಡ 26 : 20 (KNV)
ಉತ್ತರ ದಿಕ್ಕಿನಲ್ಲಿರುವ ಅದರ ಮತ್ತೊಂದು ಪಾರ್ಶ್ವಕ್ಕೋಸ್ಕರ ಇಪ್ಪತ್ತು ಹಲಗೆ ಗಳನ್ನೂ
ವಿಮೋಚನಕಾಂಡ 26 : 21 (KNV)
ಒಂದೊಂದು ಹಲಗೆಯ ಕೆಳಗೆ ಎರಡೆರಡು ಕೂರುಗಳಂತೆ ನಾಲ್ವತ್ತು ಬೆಳ್ಳಿಯ ಕೂರುಗಳನ್ನೂ
ವಿಮೋಚನಕಾಂಡ 26 : 22 (KNV)
ಗುಡಾರದ ಪಶ್ಚಿಮದ ಕಡೆಗೆ ಆರು ಹಲಗೆಗಳನ್ನೂ ಮಾಡಬೇಕು.
ವಿಮೋಚನಕಾಂಡ 26 : 23 (KNV)
ಗುಡಾರದ ಉಭಯ ಪಾರ್ಶ್ವಗಳ ಲ್ಲಿರುವ ಮೂಲೆಗಳಿಗೆ ಎರಡು ಹಲಗೆಗಳನ್ನು ಮಾಡ ಬೇಕು.
ವಿಮೋಚನಕಾಂಡ 26 : 24 (KNV)
ಇವುಗಳನ್ನು ಅಡಿಯಲ್ಲಿ ಜೋಡಿಸಿರಬೇಕು; ಮೇಲ್ಭಾಗದಲ್ಲಿಯೂ ಒಂದೇ ಬಳೆಗೆ ಜೋಡಿಸಿರ ಬೇಕು. ಹೀಗೆ ಅವು ಎರಡಾಗಿದ್ದು ಆ ಎರಡು ಮೂಲೆಗಳಲ್ಲಿ ಇರಬೇಕು.
ವಿಮೋಚನಕಾಂಡ 26 : 25 (KNV)
ಹೀಗೆ ಅವು ಎಂಟು ಹಲಗೆಗಳು; ಒಂದೊಂದು ಹಲಗೆಯ ಕೆಳಗೆ ಎರಡೆ ರಡು ಕುಳಿಗಳು ಇರುವದರಿಂದ ಅವುಗಳಿಗೆ ಹದಿನಾರು ಬೆಳ್ಳಿಯ ಕುಳಿಗಳು ಇರಬೇಕು.
ವಿಮೋಚನಕಾಂಡ 26 : 26 (KNV)
ಜಾಲೀ ಮರದಿಂದ ಅಗುಳಿಗಳನ್ನೂ ಮಾಡಬೇಕು. ಗುಡಾರದ ಒಂದು ಪಾರ್ಶ್ವದ ಹಲಗೆಗಳಿಗೆ ಐದು
ವಿಮೋಚನಕಾಂಡ 26 : 27 (KNV)
ಗುಡಾರದ ಇನ್ನೊಂದು ಪಾರ್ಶ್ವದ ಹಲಗೆಗಳಿಗೆ ಐದು ಅಗುಳಿ ಗಳನ್ನೂ ಗುಡಾರ ಹಿಂಭಾಗದ ಪಶ್ಚಿಮದ ಎರಡು ಕಡೆಗಳಲ್ಲಿ ಇರುವ ಹಲಗೆಗಳಿಗೆ ಐದು ಅಗುಳಿಗಳನ್ನೂ ಮಾಡಬೇಕು.
ವಿಮೋಚನಕಾಂಡ 26 : 28 (KNV)
ಮಧ್ಯದ ಅಗುಳಿಯು ಹಲಗೆಗಳ ನಡುವೆ ಒಂದು ಕಡೆಯಿಂದ ಮತ್ತೊಂದು ಕಡೆಯ ವರೆಗೆ ಮುಟ್ಟಿರಬೇಕು.
ವಿಮೋಚನಕಾಂಡ 26 : 29 (KNV)
ಆ ಹಲಗೆಗಳನ್ನು ಬಂಗಾರ ದಿಂದ ಹೊದಿಸಬೇಕು. ಅವುಗಳಿಗೆ ಬಂಗಾರದಿಂದ ಬಳೆಗಳನ್ನು ಮಾಡಬೇಕು, ಅಗುಳಿಗಳನ್ನೂ ಬಂಗಾರ ದಿಂದ ಹೊದಿಸಬೇಕು.
ವಿಮೋಚನಕಾಂಡ 26 : 30 (KNV)
ಹೀಗೆ ಬೆಟ್ಟದ ಮೇಲೆ ನಾನು ನಿನಗೆ ತೋರಿಸಿದ ಕ್ರಮದ ಪ್ರಕಾರ ಗುಡಾರ ವನ್ನು ನಿಲ್ಲಿಸಬೇಕು.
ವಿಮೋಚನಕಾಂಡ 26 : 31 (KNV)
ನೀಲಿ ಧೂಮ್ರ ರಕ್ತವರ್ಣಗಳಿರುವ ನಯವಾದ ನಾರುಗಳಿಂದ ಹೊಸೆದ ತೆರೆಯನ್ನು ಮಾಡಬೇಕು. ಕೌಶಲ್ಯದಿಂದ ಮಾಡಿದ ಕೆರೂಬಿಗಳುಳ್ಳದ್ದನ್ನಾಗಿ ಅದನ್ನು ಮಾಡಬೇಕು.
ವಿಮೋಚನಕಾಂಡ 26 : 32 (KNV)
ಅದನ್ನು ಬಂಗಾರದಿಂದ ಹೊದಿಸಿದ ಬಂಗಾರದ ಕೊಂಡಿಗಳಿದ್ದ ಬೆಳ್ಳಿಯ ನಾಲ್ಕು ಕುಳಿಗಳಲ್ಲಿ ಊರಿಕೊಂಡಿರುವ ನಾಲ್ಕು ಜಾಲೀ ಮರದ ಸ್ತಂಭಗಳಲ್ಲಿ ಅದನ್ನು ತೂಗುಹಾಕಬೇಕು.
ವಿಮೋಚನಕಾಂಡ 26 : 33 (KNV)
ಆ ತೆರೆಯನ್ನು ಕೊಂಡಿಗಳ ಕೆಳಗೆ ತೂಗುಹಾಕಿ ತೆರೆಯೊಳಗೆ ಸಾಕ್ಷಿ ಹಲಗೆಗಳ ಮಂಜೂಷವನ್ನು ತರ ಬೇಕು. ಪರಿಶುದ್ಧ ಸ್ಥಳವನ್ನೂ ಅತಿಪರಿಶುದ್ಧ ಸ್ಥಳವನ್ನೂ ಆ ತೆರೆಯು ವಿಂಗಡಿಸುವದು.
ವಿಮೋಚನಕಾಂಡ 26 : 34 (KNV)
ಅತಿಪರಿಶುದ್ಧ ಸ್ಥಳದಲ್ಲಿ ಸಾಕ್ಷಿ ಹಲಗೆಗಳ ಮಂಜೂಷದ ಮೇಲೆ ಕರುಣಾಸನ ವನ್ನು ಇಡಬೇಕು.
ವಿಮೋಚನಕಾಂಡ 26 : 35 (KNV)
ತೆರೆಯ ಹೊರಗೆ ಮೇಜನ್ನು ಮೇಜಿಗೆ ಎದುರಾಗಿ ಗುಡಾರದ ದಕ್ಷಿಣ ಭಾಗದಲ್ಲಿ ದೀಪಸ್ತಂಭವನ್ನು ಇಡಬೇಕು. ಉತ್ತರ ಭಾಗದಲ್ಲಿ ಮೇಜನ್ನು ಇಡಬೇಕು.
ವಿಮೋಚನಕಾಂಡ 26 : 36 (KNV)
ಗುಡಾರದ ಬಾಗಲಿಗೆ ನೀಲಿ ಧೂಮ್ರ ರಕ್ತವರ್ಣ ಗಳಿರುವ ನಯವಾಗಿ ಹೊಸೆದ ನಾರುಗಳಿಂದ ಕಸೂತಿ ಕೆಲಸದ ತೆರೆಯನ್ನು ತೂಗುಹಾಕಬೇಕು.
ವಿಮೋಚನಕಾಂಡ 26 : 37 (KNV)
ಆ ತೆರೆಗೆ ಜಾಲೀ ಮರದ ಐದು ಸ್ತಂಭಗಳನ್ನು ಮಾಡಿ ಅವುಗಳನ್ನು ಬಂಗಾರದಿಂದ ಹೊದಿಸಬೇಕು. ಅವುಗಳ ಕೊಂಡಿಗಳು ಬಂಗಾರದವುಗಳಾಗಿರಬೇಕು. ಅವುಗಳಿಗೆ ಹಿತ್ತಾಳೆಯ ಐದು ಕುಳಿಗಳನ್ನು ಎರಕ ಹೊಯ್ಯಬೇಕು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37