ವಿಮೋಚನಕಾಂಡ 25 : 1 (KNV)
ಆಗ ಕರ್ತನು ಮಾತನಾಡಿ ಮೋಶೆಗೆ--
ವಿಮೋಚನಕಾಂಡ 25 : 2 (KNV)
ನನಗೆ ಕಾಣಿಕೆಗಳನ್ನು ತಕ್ಕೊಂಡು ಬರು ವಂತೆ ಇಸ್ರಾಯೇಲ್‌ ಮಕ್ಕಳ ಸಂಗಡ ಮಾತನಾಡು; ಮನಃಪೂರ್ವಕವಾಗಿಯೂ ಹೃದಯಪೂರ್ವಕವಾ ಗಿಯೂ ಕೊಡುವ ನನ್ನ ಕಾಣಿಕೆಯನ್ನು ನೀವು ತೆಗೆದು ಕೊಳ್ಳಬೇಕು.
ವಿಮೋಚನಕಾಂಡ 25 : 3 (KNV)
ನೀವು ಅವರಿಂದ ತೆಗೆದುಕೊಳ್ಳಬೇಕಾದ ಕಾಣಿಕೆಗಳು: ಚಿನ್ನ ಬೆಳ್ಳಿ ತಾಮ್ರ
ವಿಮೋಚನಕಾಂಡ 25 : 4 (KNV)
ನೀಲಿ ರಕ್ತವರ್ಣ ಲಾಕಿಬಣ್ಣ ನಾರು ಮೇಕೆಯ ಕೂದಲು
ವಿಮೋಚನಕಾಂಡ 25 : 5 (KNV)
ಕೆಂಪು ಬಣ್ಣದಲ್ಲಿ ಅದ್ದಿದ ಟಗರುಗಳ ಚರ್ಮಗಳು ಕಡಲು ಹಂದಿಯ ಚರ್ಮಗಳು ಜಾಲಿ ಮರಗಳು.
ವಿಮೋಚನಕಾಂಡ 25 : 6 (KNV)
ದೀಪಕ್ಕಾಗಿ ಎಣ್ಣೆ ಮತ್ತು ಅಭಿಷೇಕಿಸುವ ಎಣ್ಣೆಗೋಸ್ಕರವೂ ಪರಿಮಳ ಧೂಪಕ್ಕೋಸ್ಕರ ಸುಗಂಧ ದ್ರವ್ಯಗಳೂ
ವಿಮೋಚನಕಾಂಡ 25 : 7 (KNV)
ಎಫೋದಿ ಗಾಗಿ ಮತ್ತು ಪದಕಕ್ಕಾಗಿ ಗೋಮೇಧಿಕಗಳೂ ಕೆತ್ತಿದ ರತ್ನಗಳೂ ಇವೇ.
ವಿಮೋಚನಕಾಂಡ 25 : 8 (KNV)
ನಾನು ಅವರ ಮಧ್ಯದಲ್ಲಿ ವಾಸಿಸುವ ಹಾಗೆ ಅವರು ನನಗೆ ಒಂದು ಪರಿಶುದ್ಧ ಆಲಯವನ್ನು ಕಟ್ಟಬೇಕು.
ವಿಮೋಚನಕಾಂಡ 25 : 9 (KNV)
ಗುಡಾರದ ಮಾದರಿಯನ್ನೂ ಅದರ ಎಲ್ಲಾ ಸಾಮಾನುಗಳ ಮಾದರಿಯನ್ನೂ ನಾನು ನಿನಗೆ ತೋರಿಸುವಂತೆಯೇ ನೀನು ಮಾಡಬೇಕು.
ವಿಮೋಚನಕಾಂಡ 25 : 10 (KNV)
ಎರಡುವರೆ ಮೊಳ ಉದ್ದವೂ ಒಂದುವರೆ ಮೊಳ ಅಗಲವೂ ಒಂದುವರೆ ಮೊಳ ಎತ್ತರವೂ ಇರುವ ಮಂಜೂಷವನ್ನು ಜಾಲೀ ಮರದಿಂದ ಮಾಡಬೇಕು.
ವಿಮೋಚನಕಾಂಡ 25 : 11 (KNV)
ಅದನ್ನು ಶುದ್ಧ ಬಂಗಾರದಿಂದ ಹೊರಗೂ ಒಳಗೂ ಹೊದಿಸಬೇಕು. ಅದರ ಸುತ್ತಲೂ ಬಂಗಾರದ ಗೋಟು ಮಾಡಬೇಕು.
ವಿಮೋಚನಕಾಂಡ 25 : 12 (KNV)
ಅದಕ್ಕೆ ಬಂಗಾರದ ನಾಲ್ಕು ಬಳೆಗಳನ್ನು ಎರಕಹೊಯ್ದು ಅದರ ನಾಲ್ಕು ಮೂಲೆಗಳಲ್ಲಿ ಅಂದರೆ ಒಂದು ಕಡೆಯಲ್ಲಿ ಎರಡು ಬಳೆಗಳನ್ನು ಮತ್ತೊಂದು ಕಡೆಯಲ್ಲಿ ಎರಡು ಬಳೆಗಳನ್ನು ಇಡಬೇಕು.
ವಿಮೋಚನಕಾಂಡ 25 : 13 (KNV)
ಜಾಲೀ ಮರದ ಕೋಲುಗಳನ್ನು ಬಂಗಾರದಿಂದ ಹೊದಿಸ ಬೇಕು,
ವಿಮೋಚನಕಾಂಡ 25 : 14 (KNV)
ಮಂಜೂಷವನ್ನು ಹೊತ್ತುಕೊಂಡು ಹೋಗು ವದಕ್ಕಾಗಿ ಕೋಲುಗಳನ್ನು ಮಂಜೂಷದ ಉಭಯ ಪಾರ್ಶ್ವಗಳಲ್ಲಿರುವ ಬಳೆಗಳಲ್ಲಿ ಸೇರಿಸಬೇಕು.
ವಿಮೋಚನಕಾಂಡ 25 : 15 (KNV)
ಮಂಜೂಷದ ಬಳೆಗಳಲ್ಲಿಯೇ ಕೋಲುಗಳನ್ನು ಇಡ ಬೇಕು. ಅವುಗಳೊಳಗಿಂದ ಕೋಲುಗಳನ್ನು ತೆಗೆಯ ಬಾರದು.
ವಿಮೋಚನಕಾಂಡ 25 : 16 (KNV)
ನಾನು ನಿನಗೆ ಕೊಡುವ ಸಾಕ್ಷಿಯ ಹಲಗೆ ಗಳನ್ನು ಮಂಜೂಷದಲ್ಲಿ ಇಡಬೇಕು.
ವಿಮೋಚನಕಾಂಡ 25 : 17 (KNV)
ಎರಡುವರೆ ಮೊಳ ಉದ್ದವೂ ಒಂದುವರೆ ಮೊಳ ಅಗಲವೂ ಆಗಿರುವ ಕರುಣಾಸನವನ್ನು ಶುದ್ಧ ಬಂಗಾರದಿಂದ ಮಾಡಬೇಕು.
ವಿಮೋಚನಕಾಂಡ 25 : 18 (KNV)
ಬಂಗಾರದಿಂದ ಎರಡು ಕೆರೂಬಿಗಳನ್ನು ನಕ್ಷೆಯ ಕೆಲಸದಿಂದ ಕರುಣಾ ಸನದ ಎರಡು ಬದಿಗಳಲ್ಲಿ ಮಾಡಿಸಬೇಕು.
ವಿಮೋಚನಕಾಂಡ 25 : 19 (KNV)
ಈ ಬದಿಯಲ್ಲಿ ಒಂದು ಕೆರೂಬಿಯನ್ನೂ ಆ ಬದಿಯಲ್ಲಿ ಮತ್ತೊಂದು ಕೆರೂಬಿಯನ್ನೂ ಹೀಗೆ ಕರುಣಾಸನದ ಮೇಲೆಯೇ ಎರಡೂ ಬದಿಗಳಲ್ಲಿ ಮಾಡಬೇಕು.
ವಿಮೋಚನಕಾಂಡ 25 : 20 (KNV)
ಆ ಕೆರೂಬಿಗಳು ತಮ್ಮ ರೆಕ್ಕೆಗಳನ್ನು ಮೇಲಕ್ಕೆ ಚಾಚಿದವುಗ ಳಾಗಿಯೂ ರೆಕ್ಕೆಗಳಿಂದ ಕರುಣಾಸನವನ್ನು ಮುಚ್ಚುವವು ಗಳಾಗಿಯೂ ಒಂದರ ಮುಖವನ್ನು ಒಂದು ನೋಡು ವವುಗಳಾಗಿಯೂ ಇರಬೇಕು. ಕೆರೂಬಿಗಳ ಮುಖಗಳು ಕರುಣಾಸನದ ಕಡೆಗೆ ತಿರುಗಿರಬೇಕು.
ವಿಮೋಚನಕಾಂಡ 25 : 21 (KNV)
ಕರುಣಾಸನ ವನ್ನು ಮಂಜೂಷದ ಮೇಲೆ ಇಡಬೇಕು ಮತ್ತು ನೀನು ಮಂಜೂಷದಲ್ಲಿ ನಾನು ನಿನಗೆ ಕೊಡುವ ಸಾಕ್ಷಿ ಹಲಗೆಗಳನ್ನು ಇಡಬೇಕು.
ವಿಮೋಚನಕಾಂಡ 25 : 22 (KNV)
ನಾನು ಅಲ್ಲಿ ನಿನ್ನನ್ನು ಸಂಧಿಸಿ ಕರುಣಾಸನದ ಮೇಲಿನಿಂದ ಮಂಜೂಷದ ಮೇಲಿರುವ ಎರಡು ಕೆರೂಬಿಗಳ ಮಧ್ಯದಿಂದ ಇಸ್ರಾಯೇಲ್‌ ಮಕ್ಕಳ ವಿಷಯದಲ್ಲಿ ಆಜ್ಞಾಪಿಸುವವು ಗಳನ್ನೆಲ್ಲಾ ನಿನಗೆ ತಿಳಿಸುವೆನು.
ವಿಮೋಚನಕಾಂಡ 25 : 23 (KNV)
ಇದಲ್ಲದೆ ಎರಡು ಮೊಳ ಉದ್ದವೂ ಒಂದು ಮೊಳ ಅಗಲವೂ ಒಂದುವರೆ ಮೊಳ ಎತ್ತರವೂ ಇರುವ ಮೇಜನ್ನು ಜಾಲೀ ಮರದಿಂದ ಮಾಡಬೇಕು.
ವಿಮೋಚನಕಾಂಡ 25 : 24 (KNV)
ಶುದ್ಧ ಬಂಗಾರದಿಂದ ಅದನ್ನು ಹೊದಿಸಿ ಅದರ ಸುತ್ತಲೂ ಬಂಗಾರದ ಗೋಟನ್ನು ಮಾಡಬೇಕು.
ವಿಮೋಚನಕಾಂಡ 25 : 25 (KNV)
ಅದರ ಸುತ್ತಲೂ ಗೇಣುದ್ದ ಅಂಚನ್ನು ಮಾಡಿ ಅಂಚಿನ ಸುತ್ತಲೂ ಬಂಗಾರದ ಗೋಟನ್ನು ಮಾಡ ಬೇಕು.
ವಿಮೋಚನಕಾಂಡ 25 : 26 (KNV)
ಇದಲ್ಲದೆ ಅದಕ್ಕೆ ಬಂಗಾರದ ನಾಲ್ಕು ಬಳೆಗಳನ್ನು ಮಾಡಿ, ಬಳೆಗಳನ್ನು ಅದರ ನಾಲ್ಕು ಕಾಲು ಗಳಲ್ಲಿರುವ ನಾಲ್ಕು ಮೂಲೆಗಳಲ್ಲಿಡಬೇಕು.
ವಿಮೋಚನಕಾಂಡ 25 : 27 (KNV)
ಅಂಚಿಗೆ ಸವಿಾಪವಾಗಿ ಮೇಜನ್ನು ಹೊರುವದಕ್ಕೋಸ್ಕರ ಇರುವ ಕೋಲುಗಳಿಗೆ ಬಳೆಗಳು ಇರಬೇಕು.
ವಿಮೋಚನಕಾಂಡ 25 : 28 (KNV)
ಮೇಜನ್ನು ಹೊರುವದಕ್ಕಾಗಿ ಕೋಲುಗಳನ್ನು ಜಾಲೀ ಮರದಿಂದ ಮಾಡಿ ಬಂಗಾರದಿಂದ ಹೊದಿಸಬೇಕು.
ವಿಮೋಚನಕಾಂಡ 25 : 29 (KNV)
ಇದಲ್ಲದೆ ನೀನು ಪಾತ್ರೆಗಳನ್ನೂ ಸೌಟುಗಳನ್ನೂ ಮುಚ್ಚಳಗಳನ್ನೂ ಬಟ್ಟಲುಗಳನ್ನೂ ಒಯ್ಯುವದಕ್ಕೋಸ್ಕರ ಶುದ್ಧ ಬಂಗಾರ ದಿಂದ ಮಾಡಬೇಕು.
ವಿಮೋಚನಕಾಂಡ 25 : 30 (KNV)
ಮೇಜಿನ ಮೇಲೆ ಸಮ್ಮುಖದ ರೊಟ್ಟಿಯನ್ನು ಯಾವಾಗಲೂ ನನ್ನ ಮುಂದೆ ಇಡಬೇಕು.
ವಿಮೋಚನಕಾಂಡ 25 : 31 (KNV)
ಇದಲ್ಲದೆ ಶುದ್ಧ ಬಂಗಾರದಿಂದ ದೀಪಸ್ತಂಭವನ್ನು ಮಾಡಬೇಕು. ಆ ದೀಪಸ್ತಂಭವನ್ನು ನಕ್ಷೆಯ ಕೆಲಸದಿಂದ ಮಾಡಬೇಕು. ಅದರ ಕಂಬವೂ ಕೊಂಬೆಗಳೂ ಹಣತೆ ಗಳೂ ಗುಂಡುಗಳೂ ಪುಷ್ಪಗಳೂ ಅದರಂತೆಯೇ ಇರ ಬೇಕು.
ವಿಮೋಚನಕಾಂಡ 25 : 32 (KNV)
ದೀಪಸ್ತಂಭದ ಉಭಯ ಪಾರ್ಶ್ವಗಳಿಂದ ಆರು ಕೊಂಬೆಗಳು, ಒಂದು ಭಾಗದಿಂದ ಮೂರು ಕೊಂಬೆಗಳೂ ಮತ್ತೊಂದು ಭಾಗದಿಂದ ಮೂರು ಕೊಂಬೆಗಳೂ ಹೊರಗೆ ಬರಬೇಕು.
ವಿಮೋಚನಕಾಂಡ 25 : 33 (KNV)
ಒಂದು ಕೊಂಬೆ ಯಲ್ಲಿ ಬಾದಾಮಿಯ ಪುಷ್ಪವಿದ್ದ ಮೂರು ಹಣತೆಗಳೂ ಗುಂಡು ಪುಷ್ಪವೂ ಮತ್ತೊಂದು ಕೊಂಬೆಯಲ್ಲಿ ಬಾದಾಮಿ ಪುಷ್ಪವಿದ್ದ ಮೂರು ಹಣತೆಗಳೂ ಗುಂಡು ಪುಷ್ಪವೂ ಬಾದಾಮಿ ಪುಷ್ಪವಿದ್ದ ಮೂರು ಹಣತೆಗಳೂ ಗುಂಡು ಪುಷ್ಪವೂ ಈ ಪ್ರಕಾರ ದೀಪಸ್ತಂಭದಿಂದ ಹೊರಗೆ ಬರುವ ಆರು ಕೊಂಬೆಗಳಲ್ಲಿ ಇರಬೇಕು.
ವಿಮೋಚನಕಾಂಡ 25 : 34 (KNV)
ದೀಪಸ್ತಂಭದಲ್ಲಿಯೇ ಗುಂಡುಗಳೂ ಪುಷ್ಪಗಳೂ ಸೇರಿದಂತೆ ಬಾದಾಮಿ ಪುಷ್ಪವಿರುವ ನಾಲ್ಕು ಹಣತೆಗಳು ಇರಬೇಕು.
ವಿಮೋಚನಕಾಂಡ 25 : 35 (KNV)
ಇದಲ್ಲದೆ ದೀಪಸ್ತಂಭದಿಂದ ಹೊರಗೆ ಬರುವ ಆರು ಕೊಂಬೆಗಳ ಪ್ರಕಾರ ಅದರಿಂದ ಬರುವ ಎರಡೆರಡು ಕೊಂಬೆಗಳ ಕೆಳಗೆ ಒಂದೊಂದು ಗುಂಡು ಇರಬೇಕು.
ವಿಮೋಚನಕಾಂಡ 25 : 36 (KNV)
ಅದರ ಗುಂಡುಗಳೂ ಕೊಂಬೆಗಳೂ ಅದರಿಂದಲೇ ಬಂದಿರಬೇಕು. ಅದೆಲ್ಲಾ ಶುದ್ಧ ಬಂಗಾ ರದ ಒಂದೇ ನಕ್ಷೆಯ ಕೆಲಸವಾಗಿರಬೇಕು.
ವಿಮೋಚನಕಾಂಡ 25 : 37 (KNV)
ಅದರ ಏಳು ದೀಪಗಳನ್ನು ಮಾಡಿ ಅವು ಮುಂದುಗಡೆಯಲ್ಲಿ ಪ್ರಕಾಶ ಕೊಡುವಂತೆ ಅವುಗಳನ್ನು ಹೊತ್ತಿಸಬೇಕು.
ವಿಮೋಚನಕಾಂಡ 25 : 38 (KNV)
ಇದಲ್ಲದೆ ಅದರ ಚಿಮಟಿಗೆಗಳನ್ನೂ ಬೂದಿಯ ಪಾತ್ರೆಗಳನ್ನೂ ಶುದ್ಧ ಬಂಗಾರದಿಂದಲೇ ಮಾಡಬೇಕು.
ವಿಮೋಚನಕಾಂಡ 25 : 39 (KNV)
ಒಂದು ತಲಾಂತು ಶುದ್ಧ ಬಂಗಾರದಿಂದ ದೀಪ ಸ್ತಂಭವನ್ನೂ ಅದರ ಎಲ್ಲಾ ಸಾಮಾನುಗಳನ್ನೂ ಮಾಡ ಬೇಕು.ಬೆಟ್ಟದಲ್ಲಿ ನಿನಗೆ ತೋರಿಸಿದ ಮಾದರಿಯ ಪ್ರಕಾರವೇ ಅವುಗಳನ್ನು ಮಾಡುವಂತೆ ನೋಡಿಕೋ.
ವಿಮೋಚನಕಾಂಡ 25 : 40 (KNV)
ಬೆಟ್ಟದಲ್ಲಿ ನಿನಗೆ ತೋರಿಸಿದ ಮಾದರಿಯ ಪ್ರಕಾರವೇ ಅವುಗಳನ್ನು ಮಾಡುವಂತೆ ನೋಡಿಕೋ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40

BG:

Opacity:

Color:


Size:


Font: