ವಿಮೋಚನಕಾಂಡ 20 : 1 (KNV)
ದೇವರು ಈ ಎಲ್ಲಾ ವಾಕ್ಯಗಳನ್ನು ಹೇಳಿದನು. ಅವು ಯಾವವಂದರೆ--
ವಿಮೋಚನಕಾಂಡ 20 : 2 (KNV)
ನಿನ್ನನ್ನು ಐಗುಪ್ತದೇಶದಿಂದಲೂ ದಾಸತ್ವದ ಮನೆಯೊಳ ಗಿಂದಲೂ ಹೊರಗೆ ತಂದ ನಿನ್ನ ದೇವರಾದ ಕರ್ತನು ನಾನೇ.
ವಿಮೋಚನಕಾಂಡ 20 : 3 (KNV)
ನನ್ನ ಮುಂದೆ ನಿನಗೆ ಬೇರೆ ದೇವರುಗಳು ಇರಬಾರದು.
ವಿಮೋಚನಕಾಂಡ 20 : 4 (KNV)
ನಿನಗೆ ಆಕಾಶದಲ್ಲಾಗಲಿ ಭೂಮಿಯಲ್ಲಾಗಲಿ ಭೂಮಿಯ ಕೆಳಗಿರುವ ನೀರುಗಳಲ್ಲಾಗಲಿ ಯಾವದರ ವಿಗ್ರಹವನ್ನಾಗಲಿ ರೂಪವನ್ನಾಗಲಿ ನೀನು ಮಾಡಿಕೊಳ್ಳ ಬಾರದು.
ವಿಮೋಚನಕಾಂಡ 20 : 5 (KNV)
ನೀನು ಅವುಗಳಿಗೆ ಅಡ್ಡಬೀಳಬಾರದು, ಸೇವಿಸಲೂ ಬಾರದು. ನಿನ್ನ ದೇವರಾದ ಕರ್ತನಾಗಿರುವ ನಾನು ರೋಷವುಳ್ಳ ದೇವರಾಗಿದ್ದೇನೆ. ನನ್ನನ್ನು ಹಗೆ ಮಾಡುವ ತಂದೆಗಳ ಅಪರಾಧವನ್ನು ಮಕ್ಕಳ ಮೇಲೆ ಯೂ ಮೂರನೆಯ ನಾಲ್ಕನೆಯ ತಲೆಗಳ ವರೆಗೂ ಬರಮಾಡುವೆನು.
ವಿಮೋಚನಕಾಂಡ 20 : 6 (KNV)
ನನ್ನನ್ನು ಪ್ರೀತಿಮಾಡಿ ನನ್ನ ಆಜ್ಞೆ ಗಳನ್ನು ಕೈಕೊಳ್ಳುವವರಿಗೆ ಸಾವಿರ ತಲೆಗಳ ವರೆಗೆ ದಯೆತೋರಿಸುವೆನು.
ವಿಮೋಚನಕಾಂಡ 20 : 7 (KNV)
ನಿನ್ನ ದೇವರಾದ ಕರ್ತನ ಹೆಸರನ್ನು ವ್ಯರ್ಥವಾಗಿ ಎತ್ತಬಾರದು. ಕರ್ತನು ತನ್ನ ಹೆಸರನ್ನು ವ್ಯರ್ಥವಾಗಿ ಎತ್ತುವವನನ್ನು ನಿರ್ದೋಷಿ ಯೆಂದು ಎಣಿಸುವದಿಲ್ಲ.
ವಿಮೋಚನಕಾಂಡ 20 : 8 (KNV)
ಸಬ್ಬತ್ ದಿನವನ್ನು ಪರಿಶುದ್ಧವಾಗಿ ಇರುವಂತೆ ಜ್ಞಾಪಕದಲ್ಲಿಟ್ಟುಕೋ.
ವಿಮೋಚನಕಾಂಡ 20 : 9 (KNV)
ನೀನು ಆರು ದಿನಗಳು ದುಡಿದು ನಿನ್ನ ಕೆಲಸಗಳನ್ನೆಲ್ಲಾ ಮಾಡಿಕೋ.
ವಿಮೋಚನಕಾಂಡ 20 : 10 (KNV)
ಆದರೆ ಏಳನೆಯ ದಿನವು ನಿನ್ನ ದೇವರಾದ ಕರ್ತನ ಸಬ್ಬತ್ ಆಗಿದೆ. ಅದರಲ್ಲಿ ನೀನಾಗಲಿ ನಿನ್ನ ಮಗನಾಗಲಿ ಮಗಳಾ ಗಲಿ ದಾಸನಾಗಲಿ ದಾಸಿಯಾಗಲಿ ಪಶುಗಳಾಗಲಿ ಬಾಗಿಲ ಬಳಿಯಲ್ಲಿರುವ ಪ್ರವಾಸಿಯಾಗಲಿ ಯಾವ ಕೆಲಸವನ್ನೂ ಮಾಡಬಾರದು.
ವಿಮೋಚನಕಾಂಡ 20 : 11 (KNV)
ಆರು ದಿನಗಳಲ್ಲಿ ಕರ್ತನು ಆಕಾಶವನ್ನೂ ಭೂಮಿಯನ್ನೂ ಸಮುದ್ರ ವನ್ನೂ ಅವುಗಳಲ್ಲಿ ಇರುವವುಗಳೆಲ್ಲವನ್ನೂ ಉಂಟು ಮಾಡಿ ಏಳೆನೆಯ ದಿನದಲ್ಲಿ ವಿಶ್ರಮಿಸಿಕೊಂಡನು. ಆದದರಿಂದ ಕರ್ತನು ಸಬ್ಬತ್ ದಿನವನ್ನು ಆಶೀರ್ವದಿಸಿ ಅದನ್ನು ಪರಿಶುದ್ಧಮಾಡಿದನು.
ವಿಮೋಚನಕಾಂಡ 20 : 12 (KNV)
ನಿನ್ನ ಕರ್ತನಾದ ದೇವರು ನಿನಗೆ ಕೊಡುವ ದೇಶದಲ್ಲಿ ನಿನ್ನ ದಿವಸಗಳು ಹೆಚ್ಚಾಗುವಂತೆ ನಿನ್ನ ತಂದೆ ತಾಯಿಗಳನ್ನು ಸನ್ಮಾನಿಸು.
ವಿಮೋಚನಕಾಂಡ 20 : 13 (KNV)
ಕೊಲೆ ಮಾಡಬಾರದು.
ವಿಮೋಚನಕಾಂಡ 20 : 14 (KNV)
ವ್ಯಭಿಚಾರ ಮಾಡಬಾರದು.
ವಿಮೋಚನಕಾಂಡ 20 : 15 (KNV)
ಕದಿಯಬಾರದು.
ವಿಮೋಚನಕಾಂಡ 20 : 16 (KNV)
ನಿನ್ನ ನೆರೆಯವನಿಗೆ ವಿರೋಧವಾಗಿ ಸುಳ್ಳು ಸಾಕ್ಷಿ ಹೇಳಬಾರದು.
ವಿಮೋಚನಕಾಂಡ 20 : 17 (KNV)
ನೀನು ನಿನ್ನ ನೆರೆಯವನ ಮನೆಯನ್ನು ಆಶಿಸ ಬಾರದು, ನಿನ್ನ ನೆರೆಯವನ ಹೆಂಡತಿಯನ್ನೂ ಆಶಿಸ ಬಾರದು; ಅವನ ದಾಸನನ್ನಾಗಲಿ ದಾಸಿಯನ್ನಾಗಲಿ ಎತ್ತನ್ನಾಗಲಿ ಕತ್ತೆಯನ್ನಾಗಲಿ ನಿನ್ನ ನೆರೆಯವನಿಗೆ ಇರುವ ಯಾವದನ್ನೂ ಆಶಿಸಬಾರದು ಎಂದು ಹೇಳಿದನು.
ವಿಮೋಚನಕಾಂಡ 20 : 18 (KNV)
ಜನರೆಲ್ಲಾ ಗುಡುಗುಗಳನ್ನೂ ಮಿಂಚುಗಳನ್ನೂ ತುತೂರಿಯ ಶಬ್ದವನ್ನೂ ಬೆಟ್ಟವು ಹೊಗೆ ಹಾಯು ವದನ್ನೂ ನೋಡಿದರು; ಜನರು ಅದನ್ನು ನೋಡಿ ದೂರ ಹೋಗಿ ನಿಂತುಕೊಂಡರು.
ವಿಮೋಚನಕಾಂಡ 20 : 19 (KNV)
ಅವರು ಮೋಶೆಗೆ--ನೀನೇ ನಮ್ಮ ಸಂಗಡ ಮಾತನಾಡು, ಆಗ ನಾವು ಕೇಳುವೆವು. ನಾವು ಸಾಯದ ಹಾಗೆ ದೇವರು ನಮ್ಮ ಸಂಗಡ ಮಾತನಾಡದಿರಲಿ ಅಂದರು.
ವಿಮೋಚನಕಾಂಡ 20 : 20 (KNV)
ಆಗ ಮೋಶೆಯು ಜನರಿಗೆ--ನೀವು ಭಯಪಡ ಬೇಡಿರಿ, ನಿಮ್ಮನ್ನು ಪರೀಕ್ಷಿಸುವದಕ್ಕೂ ನೀವು ಪಾಪ ಮಾಡದಂತೆ ಆತನ ಭಯವು ನಿಮಗಿರುವದಕ್ಕೂ ದೇವರು ಬಂದಿದ್ದಾನೆ ಅಂದನು.
ವಿಮೋಚನಕಾಂಡ 20 : 21 (KNV)
ಆಗ ಜನರು ದೂರದಲ್ಲಿ ನಿಂತರು. ಮೋಶೆಯು ದೇವರಿದ್ದ ಕಾರ್ಗತ್ತಲೆಯ ಹತ್ತಿರ ಬಂದನು.
ವಿಮೋಚನಕಾಂಡ 20 : 22 (KNV)
ಕರ್ತನು ಮೋಶೆಗೆ--ನೀನು ಇಸ್ರಾಯೇಲ್ ಮಕ್ಕಳಿಗೆ ಹೀಗೆ ಹೇಳಬೇಕು--ನಾನು ಆಕಾಶದಿಂದ ನಿಮ್ಮ ಸಂಗಡ ಮಾತನಾಡಿದ್ದನ್ನು ನೀವು ನೋಡಿದ್ದೀರಿ.
ವಿಮೋಚನಕಾಂಡ 20 : 23 (KNV)
ನನ್ನ ಹೊರತಾಗಿ ಬೆಳ್ಳಿ ಬಂಗಾರದ ದೇವರುಗಳನ್ನೂ ನೀವು ಮಾಡಿಕೊಳ್ಳಬಾರದು.
ವಿಮೋಚನಕಾಂಡ 20 : 24 (KNV)
ನನ್ನ ಯಜ್ಞವೇದಿಯನ್ನು ಮಣ್ಣಿನಿಂದ ಮಾಡ ಬೇಕು. ಅದರ ಮೇಲೆ ನಿನ್ನ ದಹನಬಲಿಗಳನ್ನೂ ಸಮಾಧಾನದ ಬಲಿಗಳನ್ನೂ ಕುರಿಗಳನ್ನೂ ಎತ್ತುಗಳನ್ನೂ ಅರ್ಪಿಸಬೇಕು; ನನ್ನ ಹೆಸರನ್ನು ಜ್ಞಾಪಕಮಾಡುವ ಎಲ್ಲಾ ಸ್ಥಳಗಳಲ್ಲಿ ನಾನು ನಿಮ್ಮ ಬಳಿಗೆ ಬಂದು ನಿಮ್ಮನ್ನು ಆಶೀರ್ವದಿಸುವೆನು.
ವಿಮೋಚನಕಾಂಡ 20 : 25 (KNV)
ನೀನು ನನಗೆ ಯಜ್ಞವೇದಿ ಯನ್ನು ಕಲ್ಲಿನಿಂದ ಮಾಡಿದರೆ ಅದನ್ನು ಕೆತ್ತಿದ ಕಲ್ಲಿನಿಂದ ಕಟ್ಟಬಾರದು. ಉಳಿಯನ್ನು ಅದರ ಮೇಲೆ ಎತ್ತಿದರೆ ನೀನು ಅದನ್ನು ಅಪವಿತ್ರ ಮಾಡಿದವನಾಗಿದ್ದೀ.
ವಿಮೋಚನಕಾಂಡ 20 : 26 (KNV)
ಇಲ್ಲವೆ ನೀನು ನನ್ನ ಯಜ್ಞವೇದಿಯ ಮೇಲೆ ನಿನ್ನ ಬೆತ್ತಲೆಯು ಕಾಣುವಂತೆ ಅದರ ಮೆಟ್ಟಲುಗಳನ್ನು ಹತ್ತಬಾರದು ಎಂದು ಹೇಳಿದನು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26