ವಿಮೋಚನಕಾಂಡ 19 : 1 (KNV)
ಇಸ್ರಾಯೇಲ್ ಮಕ್ಕಳು ಐಗುಪ್ತವನ್ನು ಬಿಟ್ಟ ಮೂರನೆಯ ತಿಂಗಳಿನ ಅದೇ ದಿನದಲ್ಲಿ ಸೀನಾಯಿ ಅರಣ್ಯಕ್ಕೆ ಬಂದರು.
ವಿಮೋಚನಕಾಂಡ 19 : 2 (KNV)
ಅವರು ರೆಫೀದೀಮಿ ನಿಂದ ಹೊರಟು ಸೀನಾಯಿ ಮರುಭೂಮಿಗೆ ಬಂದು ಅರಣ್ಯದಲ್ಲಿ ಗುಡಾರಹಾಕಿ ಬೆಟ್ಟಕ್ಕೆದುರಾಗಿ ಇಳಿದು ಕೊಂಡರು.
ವಿಮೋಚನಕಾಂಡ 19 : 3 (KNV)
ಮೋಶೆಯು ದೇವರ ಸನ್ನಿಧಿಗೆ ಹೋದನು. ಆಗ ಕರ್ತನು ಪರ್ವತದ ಮೇಲಿನಿಂದ ಅವನನ್ನು ಕರೆದು ಅವನಿಗೆ--ನೀನು ಯಾಕೋಬನ ಮನೆತನದವರಾದ ಇಸ್ರಾಯೇಲ್ ಮಕ್ಕಳಿಗೆ ಹೀಗೆ ಹೇಳು--
ವಿಮೋಚನಕಾಂಡ 19 : 4 (KNV)
ನಾನು ಐಗುಪ್ತ್ಯರಿಗೆ ಮಾಡಿದ್ದನ್ನು ನೀವು ನೋಡಿದ್ದೀರಿ; ನಿಮ್ಮನ್ನು ಹದ್ದುಗಳ ರೆಕ್ಕೆಗಳ ಮೇಲೆ ನಾನು ಹೇಗೆ ಹೊತ್ತುಕೊಂಡು ನನ್ನ ಬಳಿಗೆ ಬರಮಾಡಿದೆನೆಂಬದನ್ನೂ ನೀವು ನೋಡಿದ್ದೀರಿ;
ವಿಮೋಚನಕಾಂಡ 19 : 5 (KNV)
ಆದದರಿಂದ ಈಗ ನೀವು ನನ್ನ ಮಾತನ್ನು ಕೇಳಿ ನನ್ನ ಒಡಂಬಡಿಕೆಯನ್ನು ಕಾಪಾಡಿ ದರೆ, ಸಮಸ್ತ ಜನರಲ್ಲಿ ನೀವು ನನ್ನ ಅಸಮಾನ್ಯವಾದ ಸಂಪತ್ತಾಗಿರುವಿರಿ; ಭೂಮಿಯೆಲ್ಲಾ ನನ್ನದೇ.
ವಿಮೋಚನಕಾಂಡ 19 : 6 (KNV)
ನೀವು ನನಗೆ ಯಾಜಕ ರಾಜ್ಯವೂ ಪರಿಶುದ್ಧ ಜನಾಂಗವೂ ಆಗಿರುವಿರಿ ಎಂದು ಇಸ್ರಾಯೇಲ್ ಮಕ್ಕಳಿಗೆ ಹೇಳ ಬೇಕಾದ ಮಾತುಗಳು ಇವೇ ಅಂದನು.
ವಿಮೋಚನಕಾಂಡ 19 : 7 (KNV)
ಆಗ ಮೋಶೆಯು ಬಂದು ಜನರ ಹಿರಿಯರನ್ನು ಕರೆದು ಕರ್ತನು ತನಗೆ ಆಜ್ಞಾಪಿಸಿದ ಈ ಮಾತುಗ ಳನ್ನೆಲ್ಲಾ ಅವರ ಮುಂದೆ ಇಟ್ಟನು.
ವಿಮೋಚನಕಾಂಡ 19 : 8 (KNV)
ಜನರೆಲ್ಲಾ ಏಕವಾಗಿ ಉತ್ತರ ಕೊಟ್ಟು--ಕರ್ತನು ಹೇಳಿದವುಗಳನ್ನೆಲ್ಲಾ ಮಾಡುತ್ತೇವೆ ಎಂದು ಹೇಳಿದರು. ಆಗ ಮೋಶೆಯು ಜನರ ಮಾತುಗಳನ್ನು ಕರ್ತನಿಗೆ ತಿರಿಗಿ ಹೇಳಿದನು.
ವಿಮೋಚನಕಾಂಡ 19 : 9 (KNV)
ಕರ್ತನು ಮೋಶೆಗೆ--ಇಗೋ, ನಾನು ನಿನ್ನ ಸಂಗಡ ಮಾತನಾಡುವದನ್ನು ಜನರು ಕೇಳುವ ಹಾಗೆಯೂ ಅವರು ಸದಾಕಾಲ ನಿನ್ನನ್ನು ನಂಬುವಂತೆಯೂ ಮಂದ ವಾದ ಮೇಘದಲ್ಲಿ ನಾನು ನಿನ್ನ ಬಳಿಗೆ ಬರುತ್ತೇನೆ ಅಂದನು. ಮೋಶೆಯು ಜನರ ಮಾತುಗಳನ್ನು ಕರ್ತನಿಗೆ ತಿಳಿಸಿದನು.
ವಿಮೋಚನಕಾಂಡ 19 : 10 (KNV)
ಆಗ ಕರ್ತನು ಮೋಶೆಗೆ--ಜನರ ಬಳಿಗೆ ಹೋಗಿ ಈ ಹೊತ್ತೂ ನಾಳೆಯೂ ಅವರನ್ನು ಶುದ್ಧಮಾಡು, ಅವರು ತಮ್ಮ ವಸ್ತ್ರಗಳನ್ನು ತೊಳಕೊಳ್ಳಲಿ.
ವಿಮೋಚನಕಾಂಡ 19 : 11 (KNV)
ಮೂರ ನೆಯ ದಿನದಲ್ಲಿ ಅವರು ಸಿದ್ಧವಾಗಿರಲಿ; ಯಾಕಂದರೆ ಮೂರನೆಯ ದಿನದಲ್ಲಿ ಕರ್ತನು ಸಮಸ್ತ ಜನರ ಕಣ್ಣೆದುರಿನಲ್ಲಿ ಸೀನಾಯಿ ಪರ್ವತಕ್ಕೆ ಇಳಿದು ಬರುವನು.
ವಿಮೋಚನಕಾಂಡ 19 : 12 (KNV)
ಜನರಿಗೋಸ್ಕರ ಸುತ್ತಲೂ ಮೇರೆಗಳನ್ನು ಮಾಡಿಸಿ ಅವರಿಗೆ--ನೀವು ಬೆಟ್ಟವನ್ನು ಏರದಂತೆಯೂ ಅದರ ಮೇರೆಯನ್ನು ಮುಟ್ಟದಂತೆಯೂ ಜಾಗ್ರತೆಯಾಗಿರ್ರಿ; ಬೆಟ್ಟವನ್ನು ಮುಟ್ಟಿದವರೆಲ್ಲಾ ಖಂಡಿತವಾಗಿ ಸಾಯ ಬೇಕು.
ವಿಮೋಚನಕಾಂಡ 19 : 13 (KNV)
ಯಾವನಾದರೂ ಅದನ್ನು ಮುಟ್ಟಬಾರದು; ಮುಟ್ಟಿದ ಪಶುವನ್ನಾಗಲಿ ಮನುಷ್ಯನನ್ನಾಗಲಿ ನಿಶ್ಚಯ ವಾಗಿ ಕಲ್ಲೆಸೆದು ಕೊಲ್ಲಬೇಕು. ಇಲ್ಲವೆ ಈಟಿಯಿಂದ ತಿವಿಯಬೇಕು. ದೀರ್ಘವಾಗಿ ತುತೂರಿಯು ಊದುವ ಸಮಯದಲ್ಲಿ ಅವರು ಬೆಟ್ಟದ ಮೇಲೆ ಬರಬೇಕು ಅಂದನು.
ವಿಮೋಚನಕಾಂಡ 19 : 14 (KNV)
ಆಗ ಮೋಶೆಯು ಬೆಟ್ಟದಿಂದಿಳಿದು ಜನರನ್ನು ಶುದ್ಧಿಮಾಡಿದನು. ಅವರು ತಮ್ಮ ವಸ್ತ್ರಗಳನ್ನು ತೊಳೆದು ಕೊಂಡರು.
ವಿಮೋಚನಕಾಂಡ 19 : 15 (KNV)
ಅವನು ಜನರಿಗೆ--ಮೂರನೆಯ ದಿನ ಕ್ಕಾಗಿ ಸಿದ್ಧರಾಗಿರ್ರಿ, ನೀವು ನಿಮ್ಮ ಹೆಂಡತಿಯರ ಬಳಿಗೆ ಸೇರದೆ ಇರ್ರಿ ಅಂದನು.
ವಿಮೋಚನಕಾಂಡ 19 : 16 (KNV)
ಮೂರನೆಯ ದಿನದಲ್ಲಿ ಉದಯವಾದಾಗ ಬೆಟ್ಟದ ಮೇಲೆ ಗುಡುಗುಗಳೂ ಮಿಂಚುಗಳೂ ಮಂದವಾದ ಮೇಘವೂ ಉಂಟಾಗಿ ಬಹು ಬಲವಾದ ತುತೂರಿಯ ಶಬ್ದವಾಯಿತು. ಪಾಳೆಯದಲ್ಲಿದ್ದ ಜನರೆಲ್ಲರೂ ನಡುಗಿ ದರು.
ವಿಮೋಚನಕಾಂಡ 19 : 17 (KNV)
ಆಗ ಮೋಶೆಯು ಜನರನ್ನು ಪಾಳೆಯ ದೊಳಗಿಂದ ದೇವರನ್ನು ಸಂಧಿಸುವದಕ್ಕೆ ಹೊರಗೆ ಬರಮಾಡಿದನು; ಆಗ ಅವರು ಬೆಟ್ಟದ ಕೆಳಗೆ ನಿಂತು ಕೊಂಡರು.
ವಿಮೋಚನಕಾಂಡ 19 : 18 (KNV)
ಕರ್ತನು ಅಗ್ನಿಯೊಳಗೆ ಸೀನಾಯಿ ಬೆಟ್ಟದ ಮೇಲೆ ಇಳಿದದ್ದರಿಂದ ಆ ಬೆಟ್ಟದಲ್ಲೆಲ್ಲಾ ಹೊಗೆ ಹಾಯುತ್ತಿತ್ತು. ಅದರ ಹೊಗೆಯು ಆವಿಗೆಯ ಹೊಗೆ ಯಂತೆ ಏರಿ ಬರುತ್ತಾ ಇತ್ತು. ಬೆಟ್ಟವೆಲ್ಲಾ ಬಹಳವಾಗಿ ಕಂಪಿಸಿತು.
ವಿಮೋಚನಕಾಂಡ 19 : 19 (KNV)
ತುತೂರಿಯ ಶಬ್ದವು ಬರಬರುತ್ತಾ ಹೆಚ್ಚಾಗುತಿತ್ತು. ಮೋಶೆಯು ಮಾತನಾಡಿದಾಗ ದೇವರು ಅವನಿಗೆ ತನ್ನ ಸ್ವರದಿಂದ ಉತ್ತರಕೊಟ್ಟನು.
ವಿಮೋಚನಕಾಂಡ 19 : 20 (KNV)
ಆಗ ಕರ್ತನು ಸೀನಾಯಿ ಬೆಟ್ಟದ ತುದಿಗೆ ಇಳಿದು ಬಂದು ಮೋಶೆಯನ್ನು ತನ್ನ ಬಳಿಗೆ ಕರೆದನು, ಮೋಶೆಯು ಮೇಲೆ ಹೋದನು.
ವಿಮೋಚನಕಾಂಡ 19 : 21 (KNV)
ಕರ್ತನು ಮೋಶೆಗೆ--ನೀನು ಇಳಿದು ಹೋಗಿ ಜನರನ್ನು ಎಚ್ಚರಿಸಬೇಕು. ಅವರು ಕರ್ತನನ್ನು ನೋಡುವದಕ್ಕಾಗಿ ಮುಂದೆ ಬಂದು ಅವರಲ್ಲಿ ಬಹಳ ಜನರು ಸತ್ತಾರು.
ವಿಮೋಚನಕಾಂಡ 19 : 22 (KNV)
ಕರ್ತನ ಸವಿಾಪಕ್ಕೆ ಬರುವ ಯಾಜಕರು ಸಹ ಕರ್ತನು ಅವರನ್ನು ಸಾಯಿಸದಂತೆ ಅವರು ತಮ್ಮನ್ನು ಶುದ್ಧಮಾಡಿಕೊಳ್ಳಲಿ ಅಂದನು.
ವಿಮೋಚನಕಾಂಡ 19 : 23 (KNV)
ಮೋಶೆಯು ಕರ್ತನಿಗೆ--ಜನರು ಸೀನಾಯಿ ಬೆಟ್ಟವನ್ನು ಏರಲಾರರು. ಬೆಟ್ಟಕ್ಕೆ ಮೇರೆಗಳನ್ನು ಹಾಕಿ ಅದನ್ನು ಶುದ್ಧಮಾಡೆಂದು ನೀನೇ ನಮ್ಮನ್ನು ಎಚ್ಚರಿಸಿದ್ದೀ ಅಂದನು.
ವಿಮೋಚನಕಾಂಡ 19 : 24 (KNV)
ಆಗ ಕರ್ತನು ಅವನಿಗೆ--ನೀನು ಇಳಿದು ಹೋಗಿ ಆರೋನ ನನ್ನು ಕರಕೊಂಡು ಇಲ್ಲಿಗೆ ಬಾ. ಆದರೆ ಕರ್ತನು ಅವರನ್ನು ಸಾಯಿಸದಂತೆ ಯಾಜಕರೂ ಜನರೂ ಮುಂದೆ ಕರ್ತನ ಬಳಿಗೆ ಬಾರದೆ ಇರಲಿ ಅಂದನು.
ವಿಮೋಚನಕಾಂಡ 19 : 25 (KNV)
ಹೀಗೆ ಮೋಶೆಯು ಜನರ ಬಳಿಗೆ ಇಳಿದುಹೋಗಿ ಅವರೊಂದಿಗೆ ಮಾತನಾಡಿದನು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25