ಕೀರ್ತನೆಗಳು 91 : 1 (KNV)
ಮಹೋನ್ನತನ ಮರೆಯಾದ ಸ್ಥಳದಲ್ಲಿ ವಾಸಿಸುವವನು ಸರ್ವಶಕ್ತನ ನೆರಳಿನಲ್ಲಿ ತಂಗುವನು.
ಕೀರ್ತನೆಗಳು 91 : 2 (KNV)
ನನ್ನ ಆಶ್ರಯವೂ ಕೋಟೆಯೂ ನಾನು ಭರವಸವಿಟ್ಟಿರುವ ನನ್ನ ದೇವರೂ ಎಂದು ನಾನು ಕರ್ತನಿಗೆ ಹೇಳುತ್ತೇನೆ.
ಕೀರ್ತನೆಗಳು 91 : 3 (KNV)
ನಿಶ್ಚಯವಾಗಿ ಆತನು ನಿನ್ನನ್ನು ಬೇಡನ ಉರ್ಲಿ ನಿಂದಲೂ ಅಪಾಯದ ಜಾಡ್ಯದಿಂದಲೂ ಬಿಡಿಸು ವನು.
ಕೀರ್ತನೆಗಳು 91 : 4 (KNV)
ತನ್ನ ರೆಕ್ಕೆಗಳಿಂದ ನಿನ್ನನ್ನು ಹೊದಗಿಸುವನು; ಆತನ ರೆಕ್ಕೆಗಳ ಕೆಳಗೆ ಆಶ್ರಯಿಸಿಕೊಳ್ಳುವಿ; ಆತನ ಸತ್ಯವು ನಿನ್ನ ಖೇಡ್ಯವೂ ಡಾಲೂ ಆಗಿದೆ.
ಕೀರ್ತನೆಗಳು 91 : 5 (KNV)
ರಾತ್ರಿಯ ಭಯಂಕರತೆಗೂ ಹಗಲಲ್ಲಿ ಹಾರುವ ಬಾಣಕ್ಕೂ
ಕೀರ್ತನೆಗಳು 91 : 6 (KNV)
ಅಂಧಕಾರದಲ್ಲಿ ನಡೆಯುವ ಜಾಡ್ಯಕ್ಕೂ ಇಲ್ಲವೆ ಮಧ್ಯಾಹ್ನದಲ್ಲಿ ಹಾಳು ಮಾಡುವ ನಾಶನಕ್ಕೂ ನೀನು ಭಯಪಡದೆ ಇರುವಿ.
ಕೀರ್ತನೆಗಳು 91 : 7 (KNV)
ನಿನ್ನ ಕಡೆಯಲ್ಲಿ ಸಾವಿರ ಜನರೂ ನಿನ್ನ ಬಲಗಡೆಯಲ್ಲಿ ಹತ್ತು ಸಾವಿರ ಜನರೂ ಬಿದ್ದಾಗ್ಯೂ ನಿನ್ನ ಸವಿಾಪಕ್ಕೆ ಅದು ಬರುವದಿಲ್ಲ.
ಕೀರ್ತನೆಗಳು 91 : 8 (KNV)
ನಿನ್ನ ಕಣ್ಣುಗಳಿಂದ ಮಾತ್ರ ನೀನು ದೃಷ್ಟಿಸಿ ದುಷ್ಟರಿಗೆ ಮುಯ್ಯಿಗೆ ಮುಯ್ಯಿ ಆಗುವದನ್ನು ನೋಡುವಿ.
ಕೀರ್ತನೆಗಳು 91 : 9 (KNV)
ಮಹೋನ್ನತನಾದ ಕರ್ತನನ್ನು ನಿನ್ನ ಆಶ್ರಯ ವಾಗಿಯೂ ನಿವಾಸಸ್ಥಾನವಾಗಿಯೂ ಮಾಡಿಕೊಂಡ ದ್ದರಿಂದ
ಕೀರ್ತನೆಗಳು 91 : 10 (KNV)
ಕೇಡು ನಿನ್ನನ್ನು ಮುಟ್ಟದು; ಯಾವ ವ್ಯಾಧಿಯೂ ನಿನ್ನ ನಿವಾಸಕ್ಕೆ ಸವಿಾಪಿಸದು.
ಕೀರ್ತನೆಗಳು 91 : 11 (KNV)
ನಿನ್ನ ಎಲ್ಲಾ ಮಾರ್ಗಗಳಲ್ಲಿ ನಿನ್ನನ್ನು ಕಾಪಾಡುವದಕ್ಕೆ ಆತನು ತನ್ನ ದೂತರಿಗೆ ನಿನ್ನ ವಿಷಯವಾಗಿ ಆಜ್ಞಾಪಿಸುವನು.
ಕೀರ್ತನೆಗಳು 91 : 12 (KNV)
ನಿನ್ನ ಪಾದವು ಕಲ್ಲಿಗೆ ತಗಲದ ಹಾಗೆ ಅವರು ನಿನ್ನನ್ನು ತಮ್ಮ ಕೈಗಳಲ್ಲಿ ಎತ್ತಿಕೊಳ್ಳುವರು.
ಕೀರ್ತನೆಗಳು 91 : 13 (KNV)
ಸಿಂಹ ಸರ್ಪ ಮೇಲೆ ನಡೆಯುವಿ; ಯೌವನದ ಸಿಂಹವನ್ನೂ ಘಟಸರ್ಪವನ್ನೂ ತುಳಿದು ಬಿಡುವಿ.
ಕೀರ್ತನೆಗಳು 91 : 14 (KNV)
ಅವನು ತನ್ನ ಪ್ರೀತಿಯನ್ನು ನನ್ನ ಮೇಲೆ ಇಟ್ಟಿದ್ದಾನೆ; ಆದದರಿಂದ ಅವನನ್ನು ತಪ್ಪಿಸುವೆನು; ಅವನು ನನ್ನ ಹೆಸರನ್ನು ತಿಳಿದಿರುವದರಿಂದ ಅವನನ್ನು ಉನ್ನತದಲ್ಲಿಡುವೆನು.
ಕೀರ್ತನೆಗಳು 91 : 15 (KNV)
ಅವನು ನನ್ನನ್ನು ಕರೆಯುವನು; ನಾನು ಅವನಿಗೆ ಉತ್ತರ ಕೊಡುವೆನು; ಇಕ್ಕಟ್ಟಿನಲ್ಲಿ ನಾನು ಅವನ ಸಂಗಡ ಇದ್ದು ಅವನನ್ನು ತಪ್ಪಿಸಿ; ಘನಪಡಿಸುವೆನು.ದೀರ್ಘಾಯುಷ್ಯದಿಂದ ಅವನನ್ನು ತೃಪ್ತಿಪಡಿಸಿ ನನ್ನ ರಕ್ಷಣೆಯನ್ನು ಅವನಿಗೆ ತೋರಿಸುವೆನು.
ಕೀರ್ತನೆಗಳು 91 : 16 (KNV)
ದೀರ್ಘಾಯುಷ್ಯದಿಂದ ಅವನನ್ನು ತೃಪ್ತಿಪಡಿಸಿ ನನ್ನ ರಕ್ಷಣೆಯನ್ನು ಅವನಿಗೆ ತೋರಿಸುವೆನು.

1 2 3 4 5 6 7 8 9 10 11 12 13 14 15 16

BG:

Opacity:

Color:


Size:


Font: