ಕೀರ್ತನೆಗಳು 83 : 1 (KNV)
ಓ ದೇವರೇ, ಮೌನವಾಗಿರಬೇಡ; ಓ ದೇವರೇ, ಮೌನವಾಗಿರಬೇಡ; ಸುಮ್ಮ ನಿರಬೇಡ.
ಕೀರ್ತನೆಗಳು 83 : 2 (KNV)
ಇಗೋ, ನಿನ್ನ ಶತ್ರುಗಳು ಗದ್ದಲ ಮಾಡು ತ್ತಾರೆ; ನಿನ್ನ ಹಗೆಯವರು ತಲೆ ಎತ್ತುತ್ತಾರೆ.
ಕೀರ್ತನೆಗಳು 83 : 3 (KNV)
ನಿನ್ನ ಜನರಿಗೆ ವಿರೋಧವಾಗಿ ಉಪಾಯದ ಯುಕ್ತಿಯನ್ನು ಕಲ್ಪಿಸುತ್ತಾರೆ. ನೀನು ಅಡಗಿಸಿಟ್ಟವರಿಗೆ ವಿರೋಧಿಗಳು ಆಲೋಚಿಸಿಕೊಳ್ಳುತ್ತಾರೆ.
ಕೀರ್ತನೆಗಳು 83 : 4 (KNV)
ಅವರು--ಬನ್ನಿರಿ, ಅವ ರನ್ನು ಜನಾಂಗವಾಗಿರದ ಹಾಗೆ ನಾವು ಅವರನ್ನು ನಿರ್ಮೂಲ ಮಾಡೋಣ; ಇಸ್ರಾಯೇಲಿನ ಹೆಸರು ಇನ್ನು ಜ್ಞಾಪಕಕ್ಕೆ ಬಾರದಿರಲಿ ಅನ್ನುತ್ತಾರೆ.
ಕೀರ್ತನೆಗಳು 83 : 5 (KNV)
ಅವರು ಕೂಡ ಏಕಮನಸ್ಸಾಗಿ ಆಲೋಚನೆ ಮಾಡಿಕೊಂಡಿ ದ್ದಾರೆ; ನಿನಗೆ ವಿರೋಧವಾಗಿ ಒಡಂಬಟ್ಟಿದ್ದಾರೆ.
ಕೀರ್ತನೆಗಳು 83 : 6 (KNV)
ಎದೋಮ್ಯರ ಮತ್ತು ಇಷ್ಮಾಯೇಲ್ಯರ ಗುಡಾರಗಳೂ ಮೋವಾಬೂ ಹಗ್ರೀಯರೂ
ಕೀರ್ತನೆಗಳು 83 : 7 (KNV)
ಗೆಬಾಲ್ಯರೂ ಅಮ್ಮೋನಿ ಯರೂ ಮಾಲೇಕ್ಯರೂ ತೂರಿನ ನಿವಾಸಿಗಳು ಸಹಿತವಾಗಿ ಫಿಲಿಷ್ಟಿಯರದೇ;
ಕೀರ್ತನೆಗಳು 83 : 8 (KNV)
ಅಶ್ಶೂರ್ಯರೂ ಸಹ ಅವ ರಲ್ಲಿ ಕೂಡಿಕೊಂಡು; ಅವರು ಲೋಟನ ಮಕ್ಕಳಿಗೆ ಸಹಾಯ ಮಾಡಿದ್ದಾರೆ ಸೆಲಾ.
ಕೀರ್ತನೆಗಳು 83 : 9 (KNV)
ಮಿದ್ಯಾನಿಗೂ ಸೀಸೆರನಿಗೂ ಯಾಬೀನನಿಗೂ ಕೀಷೋನ್‌ ಹಳ್ಳದಲ್ಲಿ ಮಾಡಿದ ಹಾಗೆ ಅವರಿಗೆ ಮಾಡು.
ಕೀರ್ತನೆಗಳು 83 : 10 (KNV)
ಇವರು ಎಂದೋರಿನಲ್ಲಿ ನಾಶವಾಗಿ ಭೂಮಿಗೆ ಗೊಬ್ಬರವಾದರು.
ಕೀರ್ತನೆಗಳು 83 : 11 (KNV)
ಅವರನ್ನೂ ಅವರ ಅಧಿಪತಿಗಳನ್ನೂ ಓರೇಬ್‌ ಜೇಬ್‌ ಹಾಗೆಯೂ ಅವರ ಪ್ರಮುಖರೆಲ್ಲರನ್ನು ಜೇಬಹ ಚಲ್ಮುನ್ನರ ಹಾಗೆಯೂ ಮಾಡು.
ಕೀರ್ತನೆಗಳು 83 : 12 (KNV)
ಅವರು--ನಾವು ದೇವರ ನಿವಾಸಗಳನ್ನು ಸ್ವತಂತ್ರಿಸಿಕೊಳ್ಳೋಣ ಅನ್ನುತ್ತಾರೆ.
ಕೀರ್ತನೆಗಳು 83 : 13 (KNV)
ಓ ನನ್ನ ದೇವರೇ, ಅವರನ್ನು ಚಕ್ರದ ಹಾಗೆಯೂ ಗಾಳಿಯ ಮುಂದಿರುವ ಕಸದ ಹಾಗೆಯೂ ಮಾಡು.
ಕೀರ್ತನೆಗಳು 83 : 14 (KNV)
ಕಾಡನ್ನು ಸುಡುವ ಬೆಂಕಿಯ ಹಾಗೆಯೂ ಬೆಟ್ಟಗಳನ್ನು ದಹಿಸುವ ಜ್ವಾಲೆಯ ಹಾಗೆಯೂ
ಕೀರ್ತನೆಗಳು 83 : 15 (KNV)
ನಿನ್ನ ಬಿರುಗಾಳಿಯಿಂದ ಅವರನ್ನು ಹಿಂಸಿಸಿ ನಿನ್ನ ಸುಳಿ ಗಾಳಿಯಿಂದ ಅವರನ್ನು ತಲ್ಲಣ ಪಡಿಸು.
ಕೀರ್ತನೆಗಳು 83 : 16 (KNV)
ಓ ಕರ್ತನೇ, ನಿನ್ನ ನಾಮವನ್ನು ಅವರು ಹುಡುಕುವ ಹಾಗೆ ಅವರ ಮುಖಗಳನ್ನು ನಾಚಿಕೆ ಯಿಂದ ತುಂಬಿಸು.
ಕೀರ್ತನೆಗಳು 83 : 17 (KNV)
ಅವರು ನಾಚಿಕೆಪಟ್ಟು ಎಂದೆಂ ದಿಗೂ ಕಳವಳಗೊಳ್ಳಲಿ; ಹೌದು, ಅವರು ಲಜ್ಜೆ ಯಿಂದ ನಾಶವಾಗಲಿ.ನೀನು ಮಾತ್ರ ಯೆಹೋವ ನೆಂಬ ಹೆಸರುಳ್ಳ ನೀನು ಸಮಸ್ತ ಭೂಮಿಯ ಮೇಲೆ ಮಹೋನ್ನತನಾಗಿದ್ದೀ ಎಂದು ತಿಳುಕೊಳ್ಳಲಿ.
ಕೀರ್ತನೆಗಳು 83 : 18 (KNV)
ನೀನು ಮಾತ್ರ ಯೆಹೋವ ನೆಂಬ ಹೆಸರುಳ್ಳ ನೀನು ಸಮಸ್ತ ಭೂಮಿಯ ಮೇಲೆ ಮಹೋನ್ನತನಾಗಿದ್ದೀ ಎಂದು ತಿಳುಕೊಳ್ಳಲಿ.

1 2 3 4 5 6 7 8 9 10 11 12 13 14 15 16 17 18

BG:

Opacity:

Color:


Size:


Font: