ಕೀರ್ತನೆಗಳು 8 : 1 (KNV)
ನಮ್ಮ ದೇವರಾದ ಓ ಕರ್ತನೇ, ನಿನ್ನ ಹೆಸರು ಭೂಮಿಯಲ್ಲೆಲ್ಲಾ ಎಷ್ಟೋ ಶ್ರೇಷ್ಠವಾಗಿದೆ. ನಿನ್ನ ಮಹಿಮೆಯನ್ನು ಆಕಾಶಗಳ ಮೇಲೆ ಇರಿಸಿದ್ದೀ.
ಕೀರ್ತನೆಗಳು 8 : 2 (KNV)
ಶತ್ರುವನ್ನೂ ಮುಯ್ಯಿಗೆ ಮುಯ್ಯಿ ಕೊಡುವವನನ್ನೂ ನಿಲ್ಲಿಸಿಬಿಡುವದಕ್ಕೆ ನಿನ್ನ ವೈರಿಗಳ ನಿಮಿತ್ತ ಶಿಶುಗಳ ಮತ್ತು ಮೊಲೆ ಕೂಸುಗಳ ಬಾಯಿಂದ ನೀನು ನಿನ್ನ ಬಲವನ್ನು ಸ್ಥಾಪಿಸಿದ್ದೀ.
ಕೀರ್ತನೆಗಳು 8 : 3 (KNV)
ನಿನ್ನ ಕೈಕೆಲಸವಾದ ಆಕಾಶಗಳನ್ನೂ ನೀನು ಸಿದ್ಧ ಮಾಡಿದ ಚಂದ್ರ ನಕ್ಷತ್ರಗಳನ್ನೂ ನಾನು ಆಲೋ ಚಿಸುವಾಗ
ಕೀರ್ತನೆಗಳು 8 : 4 (KNV)
ಮನುಷ್ಯನನ್ನು ನೆನಸುವ ಹಾಗೆ ಅವನು ಎಷ್ಟರವನು? ಅವನನ್ನು ದರ್ಶಿಸುವ ಹಾಗೆ ಮನುಷ್ಯನ ಮಗನು ಎಷ್ಟರವನು?
ಕೀರ್ತನೆಗಳು 8 : 5 (KNV)
ಅವನನ್ನು ದೂತರಿಗಿಂತ ಸ್ವಲ್ಪಕಡಿಮೆ ಮಾಡಿ ಪ್ರಭಾವವನ್ನೂ ಘನವನ್ನೂ ಅವನಿಗೆ ಕಿರೀಟವಾಗಿ ಇಟ್ಟಿದ್ದೀ.
ಕೀರ್ತನೆಗಳು 8 : 6 (KNV)
ನಿನ್ನ ಕೈಕೆಲಸಗಳ ಮೇಲೆ ಅವನನ್ನು ಆಳುವಂತೆ ಮಾಡಿದ್ದೀ;
ಕೀರ್ತನೆಗಳು 8 : 7 (KNV)
ಎಲ್ಲಾ ಕುರಿದನಗಳನ್ನೂ ಹೌದು, ಅಡವಿಯ ಮೃಗಗಳನ್ನೂ
ಕೀರ್ತನೆಗಳು 8 : 8 (KNV)
ಆಕಾಶದ ಪಕ್ಷಿ ಗಳನ್ನೂ ಸಮುದ್ರದ ವಿಾನುಗಳನ್ನೂ ಸಮುದ್ರದಲ್ಲಿ ಸಂಚರಿಸುವಂಥದ್ದನ್ನೆಲ್ಲಾ ಅವನ ಪಾದಗಳ ಕೆಳಗೆ ಹಾಕಿದ್ದೀ.ಓ ಕರ್ತನೇ, ನಮ್ಮ ಕರ್ತನೇ, ನಿನ್ನ ಹೆಸರು ಭೂಮಿಯಲ್ಲೆಲ್ಲಾ ಎಷ್ಟೋ ಶ್ರೇಷ್ಠವಾಗಿದೆ.
ಕೀರ್ತನೆಗಳು 8 : 9 (KNV)
ಓ ಕರ್ತನೇ, ನಮ್ಮ ಕರ್ತನೇ, ನಿನ್ನ ಹೆಸರು ಭೂಮಿಯಲ್ಲೆಲ್ಲಾ ಎಷ್ಟೋ ಶ್ರೇಷ್ಠವಾಗಿದೆ.

1 2 3 4 5 6 7 8 9

BG:

Opacity:

Color:


Size:


Font: