ಕೀರ್ತನೆಗಳು 71 : 1 (KNV)
ಓ ಕರ್ತನೇ, ನಾನು ನಿನ್ನಲ್ಲಿ ಭರವಸವನ್ನಿಟ್ಟಿದ್ದೇನೆ; ನನಗೆ ಎಂದಿಗೂ ಆಶಾ ಭಂಗವಾಗದಿರಲಿ.
ಕೀರ್ತನೆಗಳು 71 : 2 (KNV)
ನಿನ್ನ ನೀತಿಯಲ್ಲಿ ನನ್ನನ್ನು ಬಿಡಿಸಿ ನನ್ನನ್ನು ತಪ್ಪಿಸು; ನಿನ್ನ ಕಿವಿಯನ್ನು ನನ್ನ ಕಡೆಗೆ ತಿರುಗಿಸಿ ನನ್ನನ್ನು ರಕ್ಷಿಸು.
ಕೀರ್ತನೆಗಳು 71 : 3 (KNV)
ನೀನು ಯಾವಾಗಲೂ ನಾನು ಆಶ್ರಯಿಸಿಕೊಳ್ಳುವ ಬಲಸ್ಥಾನವಾಗಿರು. ನನ್ನನ್ನು ರಕ್ಷಿಸುವದಕ್ಕೆ ಆಜ್ಞಾಪಿಸಿದ್ದೀ, ನನ್ನ ಬಂಡೆಯೂ ಕೋಟೆಯೂ ನೀನೇ.
ಕೀರ್ತನೆಗಳು 71 : 4 (KNV)
ಓ ನನ್ನ ದೇವರೇ, ದುಷ್ಟನ ಕೈಗೂ ಅನ್ಯಾಯ ಮಾಡುವ ಕ್ರೂರನ ಕೈಗೂ ನನ್ನನ್ನು ತಪ್ಪಿಸು.
ಕೀರ್ತನೆಗಳು 71 : 5 (KNV)
ಓ ಕರ್ತನಾದ ದೇವರೇ, ನೀನು ನನ್ನ ನಿರೀಕ್ಷೆಯೂ ನನ್ನ ಯೌವನದಿಂದ ನನ್ನ ಭರವಸವೂ ಆಗಿದ್ದೀ.
ಕೀರ್ತನೆಗಳು 71 : 6 (KNV)
ಗರ್ಭದಿಂದಲೇ ನಿನ್ನ ಮೇಲೆ ಆತುಕೊಂಡಿದ್ದೇನೆ; ತಾಯಿಯ ಗರ್ಭದಿಂದ ನೀನು ನನ್ನನ್ನು ಹೊರಗೆ ತಂದಿದ್ದಿ. ಯಾವಾಗಲೂ ನಿನ್ನಲ್ಲಿ ನನ್ನ ಸ್ತೋತ್ರವು ಇರುವದು.
ಕೀರ್ತನೆಗಳು 71 : 7 (KNV)
ಅನೇಕರಿಗೆ ನಾನು ಆಶ್ಚರ್ಯದಂತಿದ್ದೇನೆ. ಆದರೆ ನೀನು ನನ್ನ ಬಲವಾದ ಆಶ್ರಯವಾಗಿದ್ದೀ.
ಕೀರ್ತನೆಗಳು 71 : 8 (KNV)
ನನ್ನ ಬಾಯಿ ನಿನ್ನ ಸ್ತೋತ್ರದಿಂದಲೂ ದಿನವೆಲ್ಲಾ ನಿನ್ನ ಗೌರವದಿಂದಲೂ ತುಂಬಿರಲಿ.
ಕೀರ್ತನೆಗಳು 71 : 9 (KNV)
ನನ್ನ ಮುಪ್ಪಿನ ಕಾಲದಲ್ಲಿ ನನ್ನನ್ನು ತಳ್ಳಿಬಿಡಬೇಡ. ನನ್ನ ಶಕ್ತಿಯು ಕುಂದಿಹೋಗುವಾಗ ನನ್ನನ್ನು ಕೈಬಿಡ ಬೇಡ.
ಕೀರ್ತನೆಗಳು 71 : 10 (KNV)
ನನ್ನ ಶತ್ರುಗಳು ನನಗೆ ವಿರೋಧವಾಗಿ ಮಾತನಾಡುತ್ತಾರೆ; ನನ್ನ ಪ್ರಾಣಕ್ಕೆ ಹೊಂಚು ಹಾಕುವ ವರು ಕೂಡಿಕೊಂಡು ಆಲೋಚನೆ ಮಾಡುತ್ತಾ--
ಕೀರ್ತನೆಗಳು 71 : 11 (KNV)
ದೇವರು ಅವನನ್ನು ಕೈ ಬಿಟ್ಟಿದ್ದಾನೆ; ಅವನನ್ನು ಹಿಂಸಿಸಿ, ಹಿಡಿದುಕೊಳ್ಳಿರಿ; ಅವನನ್ನು ಬಿಡಿಸುವವನು ಯಾರೂ ಇಲ್ಲ ಎಂದು ಅವರು ಅನ್ನುತ್ತಾರೆ.
ಕೀರ್ತನೆಗಳು 71 : 12 (KNV)
ಓ ದೇವರೇ, ನನ್ನಿಂದ ದೂರವಾಗಿರ ಬೇಡ. ಓ ದೇವರೇ, ನನ್ನ ಸಹಾಯಕ್ಕೆ ತ್ವರೆಪಡು.
ಕೀರ್ತನೆಗಳು 71 : 13 (KNV)
ನನ್ನ ಪ್ರಾಣವನ್ನು ಎದುರಿಸುವವರು ನಾಚಿಕೆಪಟ್ಟು ನಾಶವಾಗಲಿ; ನಿಂದೆಯೂ ಅವಮಾನವೂ ನನ್ನ ಕೇಡಿಗಾಗಿ ಹುಡುಕು ವವರನ್ನು ಸುತ್ತಿಕೊಳ್ಳಲಿ.
ಕೀರ್ತನೆಗಳು 71 : 14 (KNV)
ಆದರೆ ನಾನು ಬಿಟ್ಟುಬಿಡದೆ ನಿನ್ನನ್ನು ನಿರೀಕ್ಷಿ ಸುತ್ತಾ ನಿನ್ನನ್ನು ಇನ್ನೂ ಹೆಚ್ಚೆಚ್ಚಾಗಿ ಸುತ್ತಿಸುವೆನು.
ಕೀರ್ತನೆಗಳು 71 : 15 (KNV)
ನನ್ನ ಬಾಯಿ ದಿನವೆಲ್ಲಾ ನಿನ್ನ ನೀತಿಯನ್ನೂ ರಕ್ಷಣೆ ಯನ್ನೂ ಪ್ರಕಟಿಸುವದು. ಅವುಗಳ ಸಂಖ್ಯೆಗಳು ನನಗೆ ತಿಳಿಯದು.
ಕೀರ್ತನೆಗಳು 71 : 16 (KNV)
ಕರ್ತನಾದ ದೇವರ ಶಕ್ತಿಯಲ್ಲಿ ನಾನು ಹೋಗುವೆನು, ನಿನ್ನ ನೀತಿಯನ್ನು ಹೌದು, ನಿನ್ನದನ್ನೇ ತಿಳಿಸುವೆನು.
ಕೀರ್ತನೆಗಳು 71 : 17 (KNV)
ಓ ದೇವರೇ, ನನ್ನ ಯೌವನದಿಂದ ನನಗೆ ನೀನು ಕಲಿಸಿದ್ದೀ; ಈ ವರೆಗೂ ನಿನ್ನ ಅದ್ಭುತ ಕಾರ್ಯಗಳನ್ನು ತಿಳಿಸುವೆನು.
ಕೀರ್ತನೆಗಳು 71 : 18 (KNV)
ಓ ದೇವರೇ, ನಾನು ಮುಪ್ಪಿನವನೂ ನರೆ ಕೂದಲಿನವನೂ ಆದಾಗ ಈ ಸಂತತಿಯವರಿಗೆ ನಿನ್ನ ಶಕ್ತಿಯನ್ನೂ ಮುಂದೆ ಬರುವ ಪ್ರತಿಯೊಬ್ಬನಿಗೆ ನಿನ್ನ ಅಧಿಕಾರವನ್ನೂ ತಿಳಿಸುವ ವರೆಗೂ ನನ್ನನ್ನು ಕೈಬಿಡಬೇಡ.
ಕೀರ್ತನೆಗಳು 71 : 19 (KNV)
ಓ ದೇವರೇ, ಮಹತ್ಕಾರ್ಯಗಳನ್ನು ಮಾಡಿದ ನಿನ್ನ ನೀತಿಯು ಬಹಳ ಉನ್ನತವಾಗಿದೆ. ಓ ದೇವರೇ, ನಿನ್ನ ಹಾಗೆ ಯಾರಿದ್ದಾರೆ!
ಕೀರ್ತನೆಗಳು 71 : 20 (KNV)
ಕಠಿಣವಾದ ಇಕ್ಕಟ್ಟುಗಳನ್ನು ನೋಡಮಾಡಿದ ನನ್ನನ್ನು ನೀನು ತಿರಿಗಿ ಬದುಕಿಸಿದಿ; ಭೂಮಿಯ ಆಗಾಧ ಗಳೊಳಗಿಂದ ನನ್ನನ್ನು ಮೇಲಕ್ಕೆ ತರುತ್ತೀ.
ಕೀರ್ತನೆಗಳು 71 : 21 (KNV)
ನೀನು ನನ್ನ ಗೌರವವನ್ನು ಹೆಚ್ಚಿಸಿ ಎಲ್ಲಾ ಕಡೆಯಿಂದಲೂ ನನ್ನನ್ನು ಆದರಿಸುವಿ.
ಕೀರ್ತನೆಗಳು 71 : 22 (KNV)
ಓ ನನ್ನ ದೇವರೇ, ನಾನು ಸಹ ನಿನ್ನನ್ನೂ ನಿನ್ನ ಸತ್ಯವನ್ನೂ ವೀಣೆಯಿಂದ ಕೊಂಡಾಡುವೆನು; ಓ ಇಸ್ರಾಯೇಲಿನ ಪರಿಶುದ್ದನೇ, ಕಿನ್ನರಿಯಿಂದ ನಿನ್ನನ್ನು ಕೀರ್ತಿಸುವೆನು.
ಕೀರ್ತನೆಗಳು 71 : 23 (KNV)
ನಾನು ನಿನ್ನನ್ನು ಕೀರ್ತಿಸುವಾಗ ನನ್ನ ತುಟಿಗಳೂ ನೀನು ವಿಮೋಚಿಸಿದ ನನ್ನ ಪ್ರಾಣವೂ ಉತ್ಸಾಹ ಧ್ವನಿಗೈಯುವವು.ನನ್ನ ನಾಲಿಗೆಯು ಸಹ ದಿನವೆಲ್ಲಾ ನಿನ್ನ ನೀತಿಯನ್ನು ಮಾತನಾಡುವದು; ನನಗೆ ಕೇಡನ್ನು ಹುಡುಕುವವರು ನಾಚಿಕೊಂಡು ಲಜ್ಜೆಪಡುತ್ತಾರೆ.
ಕೀರ್ತನೆಗಳು 71 : 24 (KNV)
ನನ್ನ ನಾಲಿಗೆಯು ಸಹ ದಿನವೆಲ್ಲಾ ನಿನ್ನ ನೀತಿಯನ್ನು ಮಾತನಾಡುವದು; ನನಗೆ ಕೇಡನ್ನು ಹುಡುಕುವವರು ನಾಚಿಕೊಂಡು ಲಜ್ಜೆಪಡುತ್ತಾರೆ.

1 2 3 4 5 6 7 8 9 10 11 12 13 14 15 16 17 18 19 20 21 22 23 24

BG:

Opacity:

Color:


Size:


Font: