ಕೀರ್ತನೆಗಳು 14 : 1 (KNV)
ದೇವರಿಲ್ಲವೆಂದು ಮೂರ್ಖನು ತನ್ನ ಹೃದಯದಲ್ಲಿ ಹೇಳಿಕೊಂಡಿದ್ದಾನೆ. ಅವರು ಕೆಟ್ಟುಹೋಗಿ ಅಸಹ್ಯವಾದ ಕೃತ್ಯಗಳನ್ನು ಮಾಡಿದ್ದಾರೆ; ಒಳ್ಳೇದನ್ನು ಮಾಡುವವನು ಯಾವನೂ ಇಲ್ಲ.
ಕೀರ್ತನೆಗಳು 14 : 2 (KNV)
ದೇವರನ್ನು ಹುಡುಕುವ ಬುದ್ಧಿವಂತನು ಇದ್ದಾನೋ ಎಂದು ನೋಡುವದಕ್ಕೆ ಕರ್ತನು ಆಕಾಶದಿಂದ ಮನುಷ್ಯನ ಮಕ್ಕಳ ಮೇಲೆ ಕಣ್ಣಿಟ್ಟನು.
ಕೀರ್ತನೆಗಳು 14 : 3 (KNV)
ಅವರೆಲ್ಲರೂ ತಪ್ಪಿಹೋಗಿದ್ದಾರೆ, ಅವರೆಲ್ಲರೂ ಏಕವಾಗಿ ಹೊಲೆ ಯಾಗಿದ್ದಾರೆ; ಒಳ್ಳೆಯದನ್ನು ಮಾಡುವವನು ಇಲ್ಲ; ಒಬ್ಬನಾದರೂ ಇಲ್ಲ.
ಕೀರ್ತನೆಗಳು 14 : 4 (KNV)
ಕರ್ತನನ್ನು ಪ್ರಾರ್ಥಿಸದೆ ರೊಟ್ಟಿಯನ್ನೋ ಎಂಬಂತೆ ನನ್ನ ಜನರನ್ನು ತಿಂದು ಅಪರಾಧಮಾಡಿದವರಿಗೆ ತಿಳುವಳಿಕೆಯಿಲ್ಲವೋ?
ಕೀರ್ತನೆಗಳು 14 : 5 (KNV)
ಅಲ್ಲಿ ಅವರು ಭಯಭ್ರಾಂತ ರಾದರು; ಯಾಕಂದರೆ ದೇವರು ನೀತಿವಂತರ ಸಂತತಿ ಯಲ್ಲಿ ಇದ್ದಾನೆ.
ಕೀರ್ತನೆಗಳು 14 : 6 (KNV)
ಕರ್ತನು ಬಡವನ ಆಶ್ರಯವಾಗಿರು ವದರಿಂದ ನೀವು ಅವನ ಆಲೋಚನೆಯನ್ನು ನಾಚಿಕೆ ಪಡಿಸಿದ್ದೀರಿ.ಚೀಯೋನಿನಿಂದ ಇಸ್ರಾಯೇಲಿನ ರಕ್ಷಣೆಯು ಬರಲಿ; ಕರ್ತನು ತನ್ನ ಜನರನ್ನು ಸೆರೆಯಿಂದ ತಿರಿಗಿ ಬರಮಾಡುವಾಗ ಯಾಕೋಬನು ಉಲ್ಲಾಸಿ ಸುವನು, ಇಸ್ರಾಯೇಲನು ಸಂತೋಷಿಸುವನು.
ಕೀರ್ತನೆಗಳು 14 : 7 (KNV)
ಚೀಯೋನಿನಿಂದ ಇಸ್ರಾಯೇಲಿನ ರಕ್ಷಣೆಯು ಬರಲಿ; ಕರ್ತನು ತನ್ನ ಜನರನ್ನು ಸೆರೆಯಿಂದ ತಿರಿಗಿ ಬರಮಾಡುವಾಗ ಯಾಕೋಬನು ಉಲ್ಲಾಸಿ ಸುವನು, ಇಸ್ರಾಯೇಲನು ಸಂತೋಷಿಸುವನು.

1 2 3 4 5 6 7

BG:

Opacity:

Color:


Size:


Font: