ನೆಹೆಮಿಯ 6 : 1 (KNV)
ನಾನು ಕದಗಳನ್ನು ಬಾಗಲುದ್ವಾರಗಳಲ್ಲಿ ನಿಲ್ಲಿಸುವದಕ್ಕಿಂತ ಮುಂಚೆ ಗೋಡೆಯನ್ನು ಕಟ್ಟಿಸಿದೆನೆಂದೂ ಅದರಲ್ಲಿ ಒಂದು ಸಂದೂ ಬಿಡಲ್ಪಡ ಲಿಲ್ಲವೆಂದೂ ಸನ್ಬಲ್ಲಟನೂ ಟೋಬೀಯನೂ ಅರಬ್ಯ ನಾದ ಗೆಷೆಮನೂ ಮಿಕ್ಕಾದ ನಮ್ಮ ಶತ್ರುಗಳೂ ಕೇಳಿದಾಗ
ನೆಹೆಮಿಯ 6 : 2 (KNV)
ಸನ್ಬಲ್ಲಟನೂ ಗೆಷೆಮನೂ ನನಗೆ--ಓನೋನು ಎಂಬ ಬೈಲಿನಲ್ಲಿರುವ ಗ್ರಾಮಗಳಲ್ಲಿ ಸಂಧಿಸಿಕೊಳ್ಳೋಣ ಬಾ ಅಂದರು. ಆದರೆ ಅವರು ನನಗೆ ಕೇಡುಮಾಡಲು ನೆನಸಿಕೊಂಡಿದ್ದರು.
ನೆಹೆಮಿಯ 6 : 3 (KNV)
ಆದ ಕಾರಣ ನಾನು ಅವರ ಬಳಿಗೆ ಸೇವಕರನ್ನೂ ಕಳು ಹಿಸಿ--ನಾನು ದೊಡ್ಡ ಕಾರ್ಯವನ್ನು ಮಾಡುತ್ತಾ ಇದ್ದೇನೆ; ಬರಲಾರೆನು; ನಾನು ಅದನ್ನು ಬಿಟ್ಟು ನಿಮ್ಮ ಬಳಿಗೆ ಬರುವಲ್ಲಿ ಆ ಕೆಲಸ ಯಾಕೆ ನಿಂತು ಹೋಗ ಬೇಕು ಎಂದು ಹೇಳಿದೆನು.
ನೆಹೆಮಿಯ 6 : 4 (KNV)
ಅವರು ಈ ಪ್ರಕಾರ ನಾಲ್ಕು ಸಾರಿ ನನ್ನ ಬಳಿಗೆ ಕಳುಹಿಸಿದರು. ನಾನು ಅದೇ ಪ್ರಕಾರ ಅವರಿಗೆ ಪ್ರತ್ಯುತ್ತರ ಕಳುಹಿಸಿದೆನು.
ನೆಹೆಮಿಯ 6 : 5 (KNV)
ಐದನೇ ಸಾರಿ ಸನ್ಬಲ್ಲಟನು ತನ್ನ ಸೇವಕನ ಕೈ ಯಲ್ಲಿ ತೆರೆದಿರುವ ಪತ್ರವನ್ನು ಕಳುಹಿಸಿದನು.
ನೆಹೆಮಿಯ 6 : 6 (KNV)
ಅದ ರಲ್ಲಿ--ನೀನೂ ಯೆಹೂದ್ಯರೂ ತಿರಿಗಿ ಬೀಳಲು ಯೋಚಿಸುತ್ತೀರಿ. ಆದಕಾರಣ ಈ ಮಾತುಗಳ ಪ್ರಕಾರ ನೀನು ಅವರಿಗೆ ಅರಸನಾಗಿರುವ ಹಾಗೆ ಗೋಡೆಯನ್ನು ಕಟ್ಟಿಸುತ್ತಿದ್ದೀ.
ನೆಹೆಮಿಯ 6 : 7 (KNV)
ಇದಲ್ಲದೆ, ಯೆಹೂದದಲ್ಲಿ ಅರಸನು ಇದ್ದಾನೆಂದು ಯೆರೂಸಲೇಮಿನಲ್ಲಿ ನಿನ್ನನ್ನು ಕುರಿತು ಕೂಗುವದಕ್ಕೆ ನೀನು ಪ್ರವಾದಿಗಳನ್ನು ನೇಮಿಸಿದಿ ಎಂಬದಾಗಿ ಜನಾಂಗಗಳಲ್ಲಿ ಸುದ್ದಿ ಉಂಟು; ಗೆಷೆಮನು ಹಾಗೆಯೇ ಹೇಳುತ್ತಾನೆ. ಈಗ ಈ ವರ್ತಮಾನ ಅರಸನಿಗೆ ತಿಳಿಸಲ್ಪಡುವದು. ಆದಕಾರಣ ನಾವು ಕೂಡಿ ಕೊಂಡು ಯೋಚನೆ ಮಾಡಿಕೊಳ್ಳುವ ಹಾಗೆ ಬಾ ಎಂದು ಬರೆದಿತ್ತು.
ನೆಹೆಮಿಯ 6 : 8 (KNV)
ಆಗ ನಾನು--ನೀನು ಹೇಳಿದ ಕಾರ್ಯಗಳಲ್ಲಿ ಯಾವದೂ ಮಾಡಿದ್ದಿಲ್ಲ. ನೀನು ಅವುಗಳನ್ನು ನಿನ್ನ ಸ್ವಂತ ಹೃದಯದಲ್ಲಿ ಕಲ್ಪಿಸುತ್ತಾ ಇದ್ದೀ ಎಂದು ಹೇಳಿಕಳುಹಿಸಿದೆನು.
ನೆಹೆಮಿಯ 6 : 9 (KNV)
ಯಾಕಂದರೆ--ಅದು ಆಗದ ಹಾಗೆ ಆ ಕೆಲಸ ಬಿಟ್ಟುಬಿಟ್ಟು ಅವರ ಕೈಗಳು ಬಲಹೀನವಾಗುವವು ಅಂದುಕೊಂಡು ಅವರೆಲ್ಲರೂ ನಮ್ಮನ್ನು ಭಯಪಡಿಸಿದರು.
ನೆಹೆಮಿಯ 6 : 10 (KNV)
ಆದದರಿಂದ ಈಗ ಓ ದೇವರೇ, ನನ್ನ ಕೈಗಳನ್ನು ಬಲಪಡಿಸು ಅಂದೆನು. ತರುವಾಯ ನಾನು ಅಡಗಿ ಕೊಂಡಿದ್ದ ಮೆಹೇಟಬೇಲನ ಮಗನಾದ ದೆಲಾಯನ ಮಗನಾದ ಶೆಮಾಯನ ಮನೆಗೆ ಬಂದೆನು. ಅವನುನಿನ್ನನ್ನು ಕೊಂದುಹಾಕಲು ಬರುತ್ತಾರೆ. ಹೌದು, ರಾತ್ರಿಯಲ್ಲಿ ನಿನ್ನನ್ನು ಕೊಂದು ಹಾಕಲು ಬರುತ್ತಾರೆ ಆದದರಿಂದ ನಾವಿಬ್ಬರೂ ದೇವರ ಆಲಯದಲ್ಲಿ ಪ್ರವೇಶಿಸಿ ಮಂದಿರದ ಬಾಗಲುಗಳನ್ನು ಮುಚ್ಚೊಣ ಬಾ ಅಂದನು.
ನೆಹೆಮಿಯ 6 : 11 (KNV)
ಅದಕ್ಕೆ ನಾನು--ನನ್ನಂಥಾ ಮನು ಷ್ಯನು ಓಡಿಹೋಗುವನೋ? ನನ್ನಂಥವನು ಬದುಕ ಬೇಕೆಂದು ಮಂದಿರದೊಳಕ್ಕೆ ಹೋಗುವವನಾರು? ನಾನು ಒಳಗೆ ಹೋಗುವದಿಲ್ಲ ಅಂದೆನು.
ನೆಹೆಮಿಯ 6 : 12 (KNV)
ಆಗ ಇಗೋ, ದೇವರು ಅವನನ್ನು ಕಳುಹಿಸಲಿಲ್ಲ; ಅವನೇ ನನಗೆ ವಿರೋಧವಾಗಿ ಈ ಪ್ರವಾದನೆ ಹೇಳಿದನೆಂದು ನಾನು ಗ್ರಹಿಸಿಕೊಂಡೆನು. ಟೋಬೀಯನೂ ಸನ್ಬಲ್ಲ ಟನೂ ಅವನಿಗೆ ಕೂಲಿ ಕೊಟ್ಟರು.
ನೆಹೆಮಿಯ 6 : 13 (KNV)
ನಾನು ಭಯಪಟ್ಟು ಹೀಗೆ ಮಾಡಿ ಪಾಪಮಾಡುವ ಹಾಗೆಯೂ ಅವರು ನನ್ನನ್ನು ನಿಂದಿಸುವದಕ್ಕೆ ಅಪಕೀರ್ತಿಯಾದ ಕಾರಣವು ಅವರಿಗೆ ಉಂಟಾಗುವ ಹಾಗೆಯೂ ಅವನಿಗೆ ಕೂಲಿ ಕೊಡಲ್ಪಟ್ಟಿತು.
ನೆಹೆಮಿಯ 6 : 14 (KNV)
ನನ್ನ ದೇವರೇ, ನೀನು ಅವರ ಈ ಕಾರ್ಯಗಳ ಪ್ರಕಾರ ಟೋಬೀಯನನ್ನೂ ಸನ್ಬಲ್ಲಟ ನನ್ನೂ ನನ್ನನ್ನು ಭಯಪಡಿಸುವವರಾಗಿದ್ದ ಪ್ರವಾದಿನಿ ಯಾದ ನೋವದ್ಯಳನ್ನೂ ಮಿಕ್ಕಾದ ಪ್ರವಾದಿಗಳನ್ನೂ ಜ್ಞಾಪಕಮಾಡಿಕೋ.
ನೆಹೆಮಿಯ 6 : 15 (KNV)
ಹೀಗೆಯೇ ಗೋಡೆಯು ಐವತ್ತೆರಡು ದಿವಸ ಗಳಲ್ಲಿ ಎಲುಲ್ ತಿಂಗಳ ಇಪ್ಪತ್ತೈದನೇ ದಿವಸದಲ್ಲಿ ತೀರಿತು.
ನೆಹೆಮಿಯ 6 : 16 (KNV)
ನಮ್ಮ ಶತ್ರುಗಳು ಅದನ್ನು ಕೇಳಿದಾಗಲೂ ನಮ್ಮ ಸುತ್ತಲಿದ್ದ ಜನಾಂಗಗಳು ಇದನ್ನು ನೋಡಿ ದಾಗಲೂ ಅವರು ತಮ್ಮ ದೃಷ್ಟಿಯಲ್ಲಿ ಬಹಳ ಕುಂದಿ ಹೋದರು. ಯಾಕಂದರೆ ಈ ಕಾರ್ಯವು ನಮ್ಮ ದೇವರಿಂದ ಉಂಟಾಯಿತೆಂದು ಅವರು ತಿಳಿದು ಕೊಂಡರು.
ನೆಹೆಮಿಯ 6 : 17 (KNV)
ಹೇಗಿದ್ದರೂ ಆ ದಿವಸಗಳಲ್ಲಿ ಯೆಹೂದದಲ್ಲಿದ್ದ ಮುಖ್ಯಸ್ಥರು ಟೋಬೀಯನ ಬಳಿಗೆ ಬಹಳ ಪತ್ರ ಗಳನ್ನು ಕಳುಹಿಸಿದರು. ಟೋಬೀಯನ ಪ್ರತ್ಯುತ್ತರ ಗಳು ಅವರಿಗೆ ಬಂದವು.
ನೆಹೆಮಿಯ 6 : 18 (KNV)
ಯಾಕಂದರೆ ಅವನು ಅರಾಹನ ಮಗನಾದ ಶೆಕೆನ್ಯನ ಅಳಿಯನಾದದ ರಿಂದಲೂ ಅವನ ಮಗನಾದ ಯೆಹೋಹಾನಾನನು ಬೆರೆಕ್ಯನ ಮಗನಾದ ಮೆಷುಲ್ಲಾಮನ ಮಗಳನ್ನು ತಕ್ಕೊಂಡದ್ದರಿಂದಲೂ ಯೆಹೂದದಲ್ಲಿ ಅನೇಕರು ಅವನಿಗೆ ಪ್ರಮಾಣಮಾಡಿದರು.
ನೆಹೆಮಿಯ 6 : 19 (KNV)
ಇದಲ್ಲದೆ ಅವರು ಅವನ ಸತ್ಕಾರ್ಯಗಳನ್ನು ನನ್ನ ಮುಂದೆ ಹೇಳಿ ನನ್ನ ಕಾರ್ಯಗಳನ್ನು ಅವನಿಗೆ ತಿಳಿಸಿದರು. ಆದರೆ ಟೋಬೀ ಯನು ನನ್ನನ್ನು ಭಯಪಡಿಸುವದಕ್ಕೆ ಪತ್ರಗಳನ್ನು ಕಳುಹಿಸಿದನು.

1 2 3 4 5 6 7 8 9 10 11 12 13 14 15 16 17 18 19